ಅಪಘಾತ ಪ್ರಕರಣ :
ಫರತಾಬಾದ
ಠಾಣೆ : ಶ್ರೀ ಅಕ್ಷಯ ತಂದೆ ಮಹಾದೇವ ಅಂಬರಖಾನಿ ಸಾ; ಗಾಜೀಪೂರ ಕಲಬುರಗಿ ರವರು ಕಲಬುರಗಿಯ
ಏಷ್ಯನ ಮಹಲ್‌ದಲ್ಲಿರುವ ಓಪ್ಪೊ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ತಂದೆ ತಾಯಿಯೊಂದಿಗೆ
ವಾಸವಾಗಿರುತ್ತೇನೆ. ನನ್ನದೊಂದು ಹಿರೋ ಹೊಂಡಾ ಸ್ಪ್ಲೇಂಡರ್ ನಂಬರ ಕೆಎ 32 ಇಹೆಚ್ 6487
ಇದ್ದು ನನ್ನ ಕೆಲಸಕ್ಕೆ ಉಪಯೋಗಿಸುತ್ತಾ ಬಂದಿರುತ್ತೇನೆ. ಹೀಗಿದ್ದು ದಿನಾಂಕ 01/09/2017 ರಂದು
ಬೆಳ್ಳಿಗ್ಗೆ 10:30 ಗಂಟೆಯ ಸುಮಾರಿಗೆ ಜೇವರ್ಗಿ ತಾಲ್ಲೂಕಿನಲ್ಲಿ ಎಕ್ಟೀವಿಟಿಜ್ ಕಾರ್ಯಕ್ಕಾಗಿ
ನಾನು ನನ್ನ ಮೋಟಾರ ಸೈಕಲ ಮೇಲೆ ನನ್ನ ಹಿಂದೆ ನನ್ನ ಗೆಳೆಯ ಅಂಬರೀಶ ಮಠಗೆ ಕೂಡಿಸಿಕೊಂಡು ರೋಡಿನ
ಎಡಬದಿಯಿಂದ ಕಲಬುರಗಿಯಿಂದ ಜೇವರ್ಗಿ ಕಡೆಗೆ ಹೋಗುವಾಗ ಎನ್‌ಹೆಚ್ 218 ರೋಡಿನ ಶಾಹಾಬಾದ
ಕ್ರಾಸದಲ್ಲಿ ಹೋಗುತ್ತಿದ್ದಂತೆ ಎದುರಿನಿಂದ ಅಂದರೆ ಜೇವರ್ಗಿ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ
ವಾಹನವನ್ನು ಅತೀವೇಗದಿಂದ ಅಲಕ್ಷತನದಿಂದ ಓಡಿಸುತ್ತಾ ಬಂದು ಶಹಾಬಾದ ಕ್ರಾಸದಲ್ಲಿ ನಮ್ಮ ಮೋಟಾರ
ಸೈಕಲಿಗೆ ಜೋರಾಗಿ ಡಿಕ್ಕಿ ಪಡೆಯಿಸಿ ಅಫಘಾತ ಮಾಡಿದಾಗ ನಾವಿಬ್ಬರೂ ರೋಡಿನ ಮೇಲೆ ಬಿದ್ದೇವು ನಾವು
ಬಿದ್ದಿರುವುದು ನೋಡಿ ಕ್ರಾಸದಲ್ಲಿದ್ದವರು ನಮಗೆ ಎಬ್ಬಿಸಿದ್ದು ನನಗೆ ಏಳಲು ಬರಲಿಲ್ಲಾ
ಅಫಘಾತದಿಂದ ನನ್ನ ಎಡಗಾಲ ಕಫಗಂಡ ಭಾಗದಲ್ಲಿ ಮುರಿದಿದ್ದು. ನನ್ನ ಎದೆಗೆ, ಎಡಕಿವಿಗೆ ಎಡಗೈ
ಮೊಣಕೈಗೆ ಹಣೆಗೆ ರಕ್ತಗಾಯವಾಗಿದ್ದು ಅಂಬರೀಶನಿಗೆ, ತಲೆಗೆ ಎಡ ತೊಡೆಯ ಸಂಧಿಗೆ ಬಲಗಾಲ ಕಫಗಂಡಕ್ಕೆ
ಎಡಗಾಲಿಗೆ ಗುಪ್ತಗಾಯವಾಗಿದ್ದು ಅಫಘಾತ ಪಡಿಸಿದ ಲಾರಿ ಚಾಲಕನು ಲಾರಿ ಸ್ವಲ್ಪ ನಿಲ್ಲಿಸಿದಂತೆ
ಮಾಡಿ ವಾಹನ ಸಮೇತ ಓಡಿ ಹೋಗಿದ್ದು. ಲಾರಿ ನಂಬರ ಕೆಎ-22 ಬಿ-9114 ಇದ್ದು ಮುಂದೆ ನೋಡಿದರೆ
ಗುರುತಿಸುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ
ಠಾಣೆ : ದಿನಾಂಕ 27/08/2017 ರಂದು ಸಾಯಂಕಾಲ 04:00 ಗಂಟೆಯ ಸುಮಾರಿಗೆ ಇಟಗಾ (ಕೆ)
ಗ್ರಾಮದ ಬಸ್ ನಿಲ್ದಾಣದ ಹತ್ತಿರ ಪಿರ್ಯಾದಿ ಮತ್ತು ಮೃತ ಕಾಳಯ್ಯ ಇಬ್ಬರು ತಮ್ಮ ಸಂಬಂಧಿಕ ರಿಗೆ
ಬಸ್ಸಿಗೆ ಬಿಡುವ ಸಂಭಂಧ ಬಂದು ನಿಂತಾಗ ಅದೇ ಸಮಯಕ್ಕೆ ತಿಪ್ಪಣ್ಣಾ ಪೂಜಾರಿ ಇವರ ಆಕಳು ಹಗ್ಗದಿಂದ
ಸೈಕಲಿಗೆ ಕಟ್ಟಿದ್ದು. ಒಮ್ಮೇಲೆ ಸೈಕಲ ಬಿದಿದ್ದರಿಂದ ಆಕಳು ಗಾಬರಿಯಿಂದ ಒಮ್ಮೇಲೆ ಸೈಕಲ ಸಮೇತ
ದಿಕ್ಕು ಪಾಲಾಗಿ ಓಡುತ್ತಾ ಬಂದು ಕಾಳಯ್ಯ ಈತನ ಮೇಲೆ ಹಾಯ್ದಿದ್ದರಿಂದ ಕಾಳಯ್ಯ ಈತನು ರೋಡಿನ ಮೇಲೆ
ಬಿದಿದ್ದು ಇದರಿಂದ ಆತನ ತಲೆಗೆ ಮತ್ತು ಎಡಗಾಲಿಗೆ ಬಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು
ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆಯಾ ದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ
01/09/17 ರಂದು 6:30 ಎಎಮಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ರಾಜಕುಮಾರ ತಂದೆ ಕಾಳಯ್ಯ ವಡ್ಡರ ಸಾ : ಇಟಗಾ (ಕೆ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಅಫಜಲಪೂರ
ಠಾಣೆ : ಶ್ರೀಮತಿ ಸುವಿತ್ರಾ ಗಂಡ ಶಾಂತಪ್ಪ ತೋಟನೇಕರ ಸಾ||ಬಡದಾಳ ತಾ||ಅಫಜಲಪೂರ ರವರ ಹಿರಿಯ ಮಗಳಾದ ರೂಪಾ ಇವಳು ಮನೆ ಕೆಲಸ
ಮಾಡಿಕೊಂಡು ಮನೆಯಲ್ಲಿ ಇರುತ್ತಾಳೆ ನಾನು ನನ್ನ ಗಂಡ ಇಬ್ಬರು ಕೂಲಿಕೆಲಸಕ್ಕೆ ಹೋಗುತ್ತೇವೆ ಉಳಿದ ನನ್ನ
3 ಜನ ಮಕ್ಕಳು ಶಾಲೆ ಹೋಗುತ್ತಾರೆ ನಮ್ಮ ಮನೆಯ ಹತ್ತಿರ ಮನೆಯವರಾದ ಪ್ರಕಾಶ ತಂದೆ
ಚಂದಪ್ಪ ಸಾಲೋಟಗಿ ಇವರು ನಮ್ಮ ಮನೆಗೆ ಆಗಾಗ ಬಂದು ಹೋಗುವದು ಮಾಡುತಿದ್ದನು. ದಿನಾಂಕ 26/07/2017 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನಾನು ನನ್ನ ಗಂಡ ಇಬ್ಬರು ಎಂದಿನಂತೆ ನಮ್ಮ ಮನೆಯಲ್ಲಿ ನಮ್ಮ ಮಗಳಾದ ರೂಪಾ
ಒಬ್ಬಳಿಗೆ ಬಿಟ್ಟು ಕೂಲಿಕೆಲಸಕ್ಕೆ ಹೋಗಿರುತ್ತೇವೆ. ಮರಳಿ ಸಾಯಂಕಾಲ
6.00 ಗಂಟೆ ಸುಮಾರಿಗೆ ನಾನು ನನ್ನ ಗಂಡ ಮನೆಗೆ ಬಂದಾಗ ನನ್ನ ಮಗಳಾದ ರೂಪಾ ಮನೆಯಲ್ಲಿ
ಇರಲಿಲ್ಲ ನಾನು ನನ್ನ ಗಂಡ ಹಾಗು ನಮ್ಮ ಗ್ರಾಮದ ದವಲಪ್ಪ ತಂದೆ ಮಾಯಪ್ಪ ತೋಟನೆಕರ, ಶಿವು ಗೊಬ್ಬುರ ನಾಲ್ಕು ಜನರು ಕೂಡಿಕೊಂಡು ಅಂದಿನಿಂದ ಇಲ್ಲಿಯವರೆಗೆ ನನ್ನ ಮಗಳಿಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ
ನಮ್ಮ ಮನೆಗೆ ಬಂದು ಹೋಗಿ ಮಾಡುತಿದ್ದ ಪ್ರಕಾಶ ತಂದೆ ಚಂದಪ್ಪ ಸಾಲೋಟಗಿ ಇತನು ಅವರ ತಂದೆ ಚಂದಪ್ಪ, ತಾಯಿ ಚನ್ನಮ್ಮಾ ಹಾಗು ಪ್ರಕಾಶನ ತಮ್ಮನಾದ ಕುಮಾರ ಇವರ ಕುಮ್ಮಕ್ಕಿನಿಂದ ಅಪ್ರಾಪ್ತ ವಯಸ್ಸಿನ
ನನ್ನ ಮಗಳಾದ ರೂಪಾ ಇವಳಿಗೆ ಪ್ರಕಾಶ ಇತನು ಅಫಹರಿಸಿಕೊಂಡು ಹೋಗಿರಬಹುದು ಅಂತ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಫರತಾಬಾಸ
ಠಾಣೆ : ಶ್ರೀಮತಿ ತಾರಾಬಾಯಿ ಗಂಡ ಹೀರಾಸಿಂಗ ಸಾಃ ಮಿಣಜಗಿ ತಾಂಡಾ ಇವರು ವಾಸವಾಗಿರುವ
ಮನೆಯ ಮುಖಾಂತರ ದೇವಾಸ್ಥಾನಕ್ಕೆ ದಾರಿ ಹೊಗುತ್ತದೆ ನೀವು ಮನೆಯನ್ನು ಖಾಲಿ ಮಾಡುವಂತೆ ಸದರಿ
ತಾಂಡಾದ ರಾಮಜಿ @ ಡಬು, ಜಯರಾಮ, ಹಿರೆಮಾನ್, ರಾಜಕುಮಾರ, ಅಶೋಕ ಚಿನ್ನು ಇತರರು ತಂಟೆ ತಕರಾರು
ಮಾಡುತ್ತಿದ್ದು, ದಿನಾಂಕ 31/08/2017 ರಂದು ಮುಂಜಾನೆ ಫಿರ್ಯಾದಿದಾರರು ತಮ್ಮ ಮನೆಯ ಮುಂದೆ
ಸ್ನಾನದ ಸಲುವಾಗಿ ಚಪ್ಪರ ಹಾಕಿದ್ದು, ರಾತ್ರಿ 10.30 ಪಿ.ಎಮ್ ಸುಮಾರಿಗೆ ಆರೋಪಿತರಾದ 1) ರಾಮು @
ಡಬು ತಂದೆ ಶೆಹೂ, 2) ಜಯರಾಮ ಮೇಘು ರಾಠೋಡ 3) ಚಿನ್ನು ತಂದೆ ರಾಮು ರಾಠೋಡ 4) ಹಿರೇಮಾನ್
ತಂದೆ ಮೇಘು ರಾಠೋಡ 5) ರಾಜಕುಮಾರ ತಂದೆ ಜಯರಾಮ 6) ಅಶೋಕ ತಂದೆ ಜಯರಾಮ 7) ಶ್ರೀಮಂತ @
ಶೀರೂ ತಂದೆ ಸುಭಾಷ 8)ಶೇಹೂ ತಂದೆ ತೇಜು 9) ಲಿಂಬು ತಂದೆ ದೇಸು ಚವ್ಹಾಣ 10) ರಾಮು ತಂದೆ ಚಂದು
ಕಾರಭಾರಿ 11) ಶಿವಾಜಿ ತಂದೆ ಬಾಬು ಚವ್ಹಾಣ 12) ರಾಮು ತಂದೆ ರೂಪೂಲು ರಾಠೋಡ 13) ಹರಿಶ್ವಂದ್ರ
ತಂದೆ ತೇಜು 14) ಶಂಕರ ತಂದೆ ಮಾನು ರಾಠೋಡ 15) ಪ್ರಕಾಸ ತಂದೆ ಲಾಲು ಚವ್ಹಾಣ 16) ಸಂತೋಷ ತಂದೆ
ರಾಮು ಚವ್ಹಾಣ 17) ಸುಧಾಕರ ತಂದೆ ರಾಮು ರಾಠೋಡ 18) ವಿಠಲ ತಂದೆ ಲಚಮು ರಾಠೋಡ,19) ಅನೀಲ ತಂದೆ
ಸುಭಾಷ ರಾಠೋಡ 20) ರಾಜಕುಮಾರ ತಂದೆ ತುಕರಾಮ ರಾಠೋಡ 21) ರಾಜು ತಂದೆ ದೇಗೂಲು ರಾಠೋಡ 22) ಗೋಪಾಲ
ತಂದೆ ಶೇಹೂ ರಾಠೋಡ 23) ಆನಂದ ತಂದೆ ಶೇಹೂ ರಾಠೋಡ 24) ಅಣ್ಣರಾವ ತಂದೆ ರಾಮು ಚವ್ಹಾಣ ಇವರೆಲ್ಲರೂ
ಕೂಡಿಕೊಂಡು ಬಂದು ಫಿರ್ಯಾಧಿದಾರರಿಗೆ ನಿನಗೆ ಎಷ್ಟು ಸಲಾ ಹೇಳೊದು ರಂಡಿ ಮನೆ ಖಾಲಿ ಮಾಡು ದಾರಿ
ಮಾಡಿಕೊಡು ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಬಡಿಗೆಯಿಂದ ಹೊಡೆ ಮಾಡಿ, ಕೈ ಹಿಡಿದು
ಎಳೆದಾಡಿ ಅವಮಾನ ಮಾಡಿದಲ್ಲದೆ ಫಿರ್ಯಾದಿದಾರರ ಮನೆ ಒಡೆದು ಹಾನಿ ಪಡಿಸಿರುತ್ತಾರೆ, ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ
ಠಾಣೆ : ಶ್ರೀಶೈಲ ತಂದೆ ಸಿದ್ದಪ್ಪ ಸಣ್ಣದಾನಿ ಸಾ||ಮಾಶಾಳ ತಾ||ಅಫಜಲಪೂರ ಇವರು
ಯುಗಾದಿಯ ಸಮಯದಲ್ಲಿ ಮಾಶಾಳ ಗ್ರಾಮದ ಸೋಸೈಟಿಯ ಗೋದಾಮಿನಲ್ಲಿ ನಾನು ಹಾಗು ನಮ್ಮ ಗ್ರಾಮದ ರಮೇಶ
ತಂದೆ ಮಲ್ಲಪ್ಪ ಪ್ರಧಾನಿ, ದವಲಪ್ಪ ತಂದೆ ಶಿವಲಪ್ಪಗೌಡ ಹಾಗು ಇತರರು ಕೂಡಿ ಕೂಲಿ(ಹಮಾಲಿ)ಕೆಲಸ
ಮಾಡಿದ್ದು ಇರುತ್ತದೆ. ಕೂಲಿ ಮೇಸ್ತ್ರಿಯಾದ ಮಲ್ಕಪ್ಪ ತಂದೆ ಈಶ್ವರಪ್ಪ ರಾಜಾ ಇವರು ಎಲ್ಲಾ
ಕೂಲಿಗಾರರಿಗೆ ಪಗಾರರ(ಹಣ) ಕೊಡುತ್ತಾರೆ ನನಗೆ ಬರುವ 6000/-ರೂಪಾಯಿನಲ್ಲಿ 5000/-ರೂಪಾಯಿ
ಕೊಟ್ಟಿದ್ದು ಇನ್ನೂಳಿದ 1,000/-ರೂಪಾಯಿ ಕೊಡುವದು ಬಾಕಿ ಇರುತ್ತದೆ. ದಿನಾಂಕ 31/08/2017 ರಂದು ರಾತ್ರಿ
8.30 ಗಂಟೆ ಸುಮಾರಿಗೆ ಮಲ್ಕಪ್ಪ ರಾಜಾ ಇತನು ನಮ್ಮ ಗ್ರಾಮದ ಚೌಡಪ್ಪ ತಂದೆ ಚಂದ್ರಕಾಂತ ರಾಜಾ, ಮಡೇಪ್ಪ ತಂದೆ
ಅರ್ಜುನ ಭೋಸಲಗಿ ಹಾಗು ಗೌಡಪ್ಪ ರಾಜಾ ರವರೊಂದಿಗೆ ಮಾತನಾಡುತ್ತಾ ನಮ್ಮ ಗ್ರಾಮದ ಬಜಾರದ ಕಟ್ಟಿ
ಹತ್ತಿರ ಮಾತನಾಡುತ್ತಾ ನಿಂತಾಗ ನಾನು ಮಲ್ಕಪ್ಪ ರವರಿಗೆ ನನಗೆ ಕೊಡಬೇಕಾದ 1000/-ರೂಪಾಯಿ ಕೊಡು
ಅಂತ ಕೇಳಿದಕ್ಕೆ ಮಲ್ಕಪ್ಪ ಇತನು ನನಗೆ ರಂಡಿಮಗನೆ ಎಲ್ಲಿಬೇಕಂದಲ್ಲಿ ರೊಕ್ಕಾ ಕೇಳ್ತಿ ಭೋಸಡಿಕೆ
ಅಂತ ಅಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದು
ನನ್ನ ಕಪಾಳದ ಮೇಲೆ ಕೈಯಿಂದ ಹೊಡೆದು ನನಗೆ ಕೆಳಗೆ ಕೆಡವಿ ನನ್ನ ಎಡಗೈ ಹಿಡಿದು ತಿರುವಿ ಭಾರಿ
ಭಾರಿ ಗುಪ್ತಗಾಯ ಪಡಿಸಿರುತ್ತಾನೆ ಆಗ ಅಲ್ಲೆ ಇದ್ದ ಚೌಡಪ್ಪ ರಾಜಾ, ಮಡೇಪ್ಪ
ಭೋಸಲಗಿ ಹಾಗು ಗೌಡಪ್ಪ ರಾಜಾ ಇವರು ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಸದರಿಯವನು ಅಲ್ಲಿಂದ
ಹೋಗುವಾಗ ರಂಡಿಮಗನೆ ಇನ್ನೊಮ್ಮೆ ರೊಕ್ಕಾ ಅಂದಿ, ನಿನಗ ಖಲಾಸ ಮಾಡ್ತಿನಿ ಅಂತ ಅಂದು ಅಲ್ಲಿಂದ
ಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment