ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ದಿನಾಂಕ
07/09/2017 ರಂದು ರಾಜಶೇಖರ ತಂದೆ ರೇವಣಸಿದ್ದಪ್ಪ ಹುಲಿ ರವರು ತನ್ನ ಮೋಟಾರ ಸೈಕಲ ನಂ: ಕೆಎ 32
ಇಹೆಚ 4633 ನೇದ್ದರಲ್ಲಿ ತಾಜಸುಲ್ತಾನಪೂರ ರಿಂಗ
ರೋಡ ಕಡೆಯಿಂದ ಫೀಲ್ಟರ್ ಬೇಡ್ ರೋಡ ಕಡೆಗೆ ಹೋಗುವಾಗ ವಾಹನವನ್ನು ಅತಿವೇಗ & ಅಲಕ್ಷತನದಿಂದ
ಚಲಾಯಿಸುತ್ತಾ ಅಂಬಾಭವಾನಿ ಗುಡಿ ಹತ್ತಿರ ರೋಡಿನ
ಜಂಪನಲ್ಲಿ ಒಮ್ಮೇಲೆ ಮೋ ಸೈಕಲ ಬ್ರೇಕ ಹಿಡಿದು ತನ್ನಿಂದ ತಾನೆ ಮೋ/ಸೈಕಲ ಸಮೇತ ಕೆಳಗೆ ಬಿದ್ದು
ತಲೆಗೆ ಭಾರಿ ಪೆಟ್ಟಾಗಿ ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು
ಚಿಕಿತ್ಸೆ ಫಲಕಾರಿಯಾಗದೆ ರಾಜಶೇಖರ ಮೃತ
ಪಟ್ಟಿದ್ದು ಈ ಬಗ್ಗೆ ಮೃತನ ಪತ್ನಿ ಸಾವಿತ್ರಿ ಗಂ ರಾಜಶೇಃರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ15-09-2017 ರಂದು ಸಂಧೀಪ
ತಂದೆ ಧರೇಪ್ಪ ಸಾ: ಉಡಚಾಣ ಇವರು ಕಮಾಂಡರ ಜೀಪ ಚಾಲಕನಾಗಿ ಕೆಲಸ ಮಾಡುತ್ತಿದ್ದು ದಿನಾಂಕ 14-09-2017 ರಂದು ಅಕ್ಕಲಕೋಟ ದಿಂದ ಮರಳಿ ಕಮಾಂಡರ ಜೀಪ ನಂಬರ
ಎಮ್.ಹೆಚ್.13ಎನ್1608 ನೇದ್ದನ್ನು ತೆಗೆದುಕೊಂಡು ಜೋಗುರ ಮಾರ್ಗದ ಮೂಲಕ ಕರಜಗಿಗೆ ಬರುತ್ತಿರುವಾಗ ಹಿಂದಿನಿಂದ
ಯಾವುದೋ ಒಂದು ಜೀಪ ಹಿಂಬಾಲಿಸುತ್ತಾ ಬಂದು ನಂತರ ಅಳ್ಳಗಿ ತಾಂಡಾದ ಹತ್ತಿರ ನನಗೆ ಸೈಡು ಹೋಡೆದಾಗ
ಸದರಿ ಜೀಪಿನ ನಂಬರ ನೋಡಲಾಗಿ ಎಮ್.ಹೆಚ್ 25 - 4337 ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸದರ ಕ್ರೂಜರದಲ್ಲಿದ್ದ 5-6 ಜನರು ಕೇಳಗೆ
ಇಳಿದು ನನಗೆ ಏನು ಹೇಳದೆ ಕೇಳದೆ ಏಕಾ ಏಕಿ ಎಲ್ಲರೂ ಕೂಡಿಕೊಂಡು ಬಂದು ಕೈಯಿಂದ ಮತ್ತು ಕಾಲಿನಿಂದ
ಹೋಡೆಯಲು ಪ್ರಾರಂಭಿಸಿದ್ದು ಅವರರಲ್ಲಿ 3 ಜನರನ್ನು ನಾನು ಗುರುತಿಸಿದ್ದು 1) ಪಂಕಜ ಚವ್ಹಾಣ 2) ಆಂಬಾದಾಸ
ರಾಠೋಡ ಸಾ|| ಎಲ್ಲರೂ ಶಿವಾಝಿ ನಗರ ತಾಂಡಾ ಅಕ್ಕಲಕೋಟ ಇದ್ದು ಉಳಿದ ಮೂರುಜನರ ಹೆಸರು ವಿಳಾಸ
ಗೊತ್ತಿರುವುದಿಲ್ಲಾ ನನ್ನನ್ನು ಏಕೆ ಹೊಡೆಯುತ್ತಿದ್ದಿರಿ ಬಿಡಿ ಎಂದರು ಕೇಳದೆ ನನಗೆ ವಿನಾಃ ಕಾರಣ
ಹೋಡೆ ಬಡೆ ಮಾಡಿದ್ದು. ನನಗೆ ಹೋಡೆಬಡೆಮಾಡಿದ ಸದರಿ 6ಜನರ ಮೇಲೆ
ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾಶರಾಂಶದ ಮೇಲಿಂಧ ಅಫಜಲಪೂರ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ವಾಹನ
ಕಳವು ಪ್ರಕರಣ:
ಸ್ಟೇಷನ್
ಬಜಾರ ಪೊಲೀಸ್ ಠಾಣೆ: ದಿನಾಂಕ 15/09/2017 ರಂದು ಶ್ರೀ
ಸಿದ್ದಲಿಂಗಯ್ಯಾ ತಂದೆ ಗುರುಲಿಂಗಯ್ಯಾ ಮಾಡ್ಯಾಳ ಸಾ: ಅಂಬಾಭವಾನಿ ಗುಡಿಯ ಹತ್ತಿರ ಹಿರಾಪೂರ
ಕಲಬುರಗಿ ರವರು ಠಾಣೆಗೆ ಹಾಜರಾಗಿ ದಿನಾಂಕ. 24/08/2017 ರಂದು ರೇಲ್ವೆ ಸ್ಟೇಷನ ಹತ್ತಿರ ಓರಿಯನಟಲ್ ಲಾಡ್ಜ ಎದುರುಗಡೆ ರೋಡಿನ
ಬದಿಯಲ್ಲಿ ನಿಲ್ಲಿಸಿದ್ದ ತನ್ನ ಹಿರೋ ಹೊಂಡಾ ಸ್ಲೆಂಡರ ಪ್ಲಸ್ ಮೋಟಾರ ಸೈಕಲ್ ನಂ. KA-32
EF- 9355 ಚೆಸ್ಸಿನಂ. MBLHA10AMEHO29598,
ಇ.ನಂ. HA10EJEHD16940 ಅ,ಕಿ|| 30,000/- ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಎಲ್ಲಾ
ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹಿರೋ ಹೊಂಡಾ ಸ್ಲೆಂಡರ ಪ್ಲಸ್ ಮೋಟಾರ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
No comments:
Post a Comment