Police Bhavan Kalaburagi

Police Bhavan Kalaburagi

Friday, September 22, 2017

KALABURAGI DISTRICT REPORTED CRIMES

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ದಾಶಿಮಯ್ಯ ತಂದೆ ಶಂಕ್ರೇಪ್ಪ ವಡ್ಡನಕೇರಿ ಸಾ:ಕಮಲಾಪೂರ ತಾ:ಜಿ:ಕಲಬುರಗಿ ಇವರು ಕಮಲಾಪೂರ ಗ್ರಾಂ. ಪಂಚಾಯತಿಯ ವಾರ್ಡನಂ. 3 ರ  ಸದಸ್ಯನಿದ್ದು. ಈಗ್ಗೆ 3-4 ದಿವಸಗಳ ಹಿಂದೆ ನಮ್ಮೂರಿನ ರಾಚಮ್ಮ ಗಂಡ ವಿಜಯರಾಜ ರಾಜೇಶ್ವರ ಇವಳು ವಾರ್ಡ ನಂ.4 ರ ನಿವಾಸಿಯಿದ್ದು. ತನ್ನ ಮನೆಯ ಮುಂದೆ ಸರಕಾರದ ವತಿಯಿಂದ ನಿರ್ಮಿಸಿದ ಸಿ.ಸಿ ರಸ್ತೆಯನ್ನು ತನ್ನ ಮನೆಗೆ ನಿರಿನ ಸಂಪರ್ಕ ಪಡೆಯುವ ಸಲುವಾಗಿ ವಿನಾಕಾರಣ ರಸ್ತೆಯನ್ನು ಒಡೆದು ಹಾಕಿದ್ದು. ಈ ವಿಷಯದ ಬಗ್ಗೆ ನಮ್ಮ ಗ್ರಾಮ ಪಂಚಾಯತ ಅಭೀವೃದ್ದಿ ಅಧಿಕಾರಿಗಳು ವಿಚಾರಣೆ ಕುರಿತು ಗ್ರಾಮ ಪಂಚಾಯತಗೆ ರಾಚಮ್ಮ ಇವಳಿಗೆ ಕರೆಯಿಸಿ ಅಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಕೂಡಿ ಈ ರಿತಿಯಾಗಿ ಸಿ.ಸಿ ರಸ್ತೆಯನ್ನು ಒಡೆದು ಹಾಳು ಮಾಡಿದ್ದು ತಪ್ಪು ನಿಮಗೆ ನಿರಿನ ಸಂಪರ್ಕ ಬೇಕಾದರೆ ನಾವು ಪಂಚಾಯತ ವತಿಯಿಂದ ಮಾಡಿಸಿ ಕೋಡುತ್ತೆವೆ ಒಡೆದು ಹಾಕಿದ ಸಿ.ಸಿ ರಸ್ತೆಯನ್ನು ನಿಮ್ಮ ಖರ್ಚಿನಲ್ಲಿ ರಿಪೇರಿ ಮಾಡಬೇಕು ಅಂತಾ ಹೇಳಿದ್ದಕ್ಕೆ ಅವಳು ಒಪ್ಪಿಕೊಂಡು ಹೋದಳು. ಆದರು ಸಹ ದಿನಾಂಕ:19.09.2017 ರಂದು ರಾಚಮ್ಮ ಹಾಗೂ ಆಕೆಯ ಗಂಡನಾದ ವಿಜಯರಾಜ ಮಕ್ಕಳಾದ ಶಿವಕುಮಾರ ಮತ್ತು ಶರಣು @ ಸುನೀಲ ಇವರೆಲ್ಲರೂ ಕೂಡಿ ಮತ್ತೆ ಸಿ.ಸಿ ರಸ್ತೆಯನ್ನು ಒಡೆದುಹಾಕಿ ನಿರು ಸರಬರಾಜು ಆಗುವ ಮೇನ ಪೈಪಗೆ ಹೋಲಹಾಕಿ ಒಂದು ಇಂಚು ಪೈಪನ್ನು ಜೋಡಣೆ ಮಾಡಿ ತನ್ನ ಮನೆಗೆ ನಿರಿನ ಸಂಪರ್ಕ ತೆಗೆದುಕೊಂಡಿರುತ್ತಾರೆ ಈ ವಿಷಯ ಗ್ರಾಮ ಪಂಚಾಯತ ಅಧ್ಯಕ್ಷಕರು ಹಾಗೂ ಪಿ.ಡಿ.ಓ ಹಾಗೂ ಸದಸ್ಯರಿಗೆ ಗೋತ್ತಾಗಿ ಅವರು ಪಡೆದುಕೊಂಡಿದ್ದ ನಿರಿನ ಕನಕ್ಷನ್ ಅನ್ನು ನಿನ್ನೆ ದಿನಾಂಕ:20.09.2017 ರಂದು ಎಲ್ಲರೂ ಕೂಡಿ ಕಟ್ಟ ಮಾಡಿರುತ್ತೇವೆ. ಹೀಗಿದ್ದು ಇಂಧು ದಿನಾಂಕ:21.09.2017 ರಂದು ಬೆಳಿಗ್ಗೆ 07.30 ಗಂಟೆಗೆ ನಾನು ಬಜಾರ ಕಡೆಗೆ ಬರುವ ಕುರಿತು ಮನೆಯಿಂದ ಹೋರಟು ಸುಧಾಕರ ಲೊಂಡೆ ಈತನ ಮನೆಯ ಎದುರಿನ ರಸ್ತೆಯ ಮೇಲಿಂದ ಹೋಗುತ್ತಿದ್ದಂತೆ 1. ವಿಜಯರಾಜ ತಂದೆ ಶಿವಪ್ಪ ರಾಜೇಶ್ವರ 2.ರಾಚಮ್ಮ ಗಂಡ ವಿಜಯರಾಜ ರಾಜೇಶ್ವರ 3. ಶಿವಕುಮಾರ ತಂದೆ ವಿಜಯರಾಜ ರಾಜೇಶ್ವರ ಮತ್ತು 4 ಶರಣು @ ಸುನೀಲ ತಂಧೆ ವಿಜಯರಾಜ ರಾಜೇಶ್ವರ ಹೀಗೆಲ್ಲರೂ ನನ್ನ ಎದುರಿನಿಂದ ಬರುತ್ತಿದ್ದಂತೆ ಅಲ್ಲಿಗೆ ಹಣಮಂತ ತಂದೆ ರುಕ್ಕಪ್ಪ ವಾಲಿಕರ ಈತನು ಸಹ ಅಲ್ಲಿಗೆ ಬಂದನು ಆಗ ಅವರೆಲ್ಲರೂ ನನಗೆ ಏ ಭೋಸಡಿ ಮಗನೆ ರಂಡಿ ಮಗನೆ ನಿನೆ ನಮ್ಮ ಮನೆಗೆ ತೆಗೆದುಕೊಂಡ ನಿರಿನ ಸಂಪರ್ಕ ಪಂಚಾಯತದವರಿಗೆ ಹೇಳಿ ಕಟ್ ಮಾಡಿಸಿದ್ದಿ ಅಂತಾ ಬೈದು ಅವರಲ್ಲಿ ಶಿವಕುಮಾರ ಈತನು ನನಗೆ ತಡೆದು ನನ್ನ ಬಲಗೈ ಹೆಬ್ಬರಳು ಹಿಡಿದು ತಿರುವಿದನು ಆಗ ವಿಜಯರಾಜ ಮತ್ತು ಶರಣು @ ಸುನೀಲ ಇಬ್ಬರೂ ನನಗೆ ಕೈಯಿಂದ ಮೈಕೈಗೆ ಬೆನ್ನಿಗೆ ಹೋಟ್ಟೆಗೆ ಹೋಡೆದು ಗುಪ್ತಪೆಟ್ಟು ಮಾಡಿರುತ್ತಾರೆ. ರಾಚಮ್ಮ ಇವಳು ನನಗೆ ಈ ಹಾಟ್ಯಾಂದು ಬಹಾಳ ಆಗ್ಯಾದ ಅಂತಾ ಬೈಯ ತೋಡಗಿದಳು ಆಗ ನನಗೆ ಹೋಡೆಯುವುದನ್ನು ಹಣಮಂತ ತಂದೆ ರುಕ್ಕಪ್ಪ ವಾಲಿಕಾರ ಈತನು ಬಿಡಿಸಿಕೋಳ್ಳು ಬಂದಾಗ ಅವರೆಲ್ಲರೂ ಆತನಿಗೆ ನಮ್ಮ ಜಗಳದಲ್ಲಿ ಈ ಹೋಲೆಯ ಮಾದಿಗರ ಕೆಲಸ ಏನಿದೆ ಅಂತಾ ಬೈದು ರಾಚಮ್ಮ ಇವಳು ಅಲ್ಲೆಬಿದ್ದ ಕಲ್ಲನ್ನು ತೆಗೆದುಕೊಂಡು ಅವನ ಎಡಗಡೆ ತಲೆಗೆ ಹೋಡೆಯಲು ಅವನ ತಲೆ ಒಡೆದು ರಕ್ತ ಸೋರ ಹತ್ತಿತು ಅಲ್ಲದೆ ಶಿವಕುಮಾರ ಈತನು ಹಣಮಂತ ಈತನಿಗೆ ಕಾಲಿನಿಂದ ಟೊಂಕಕ್ಕೆ ಒದ್ದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಸುನಂದಾ ಗಂಡ ಬಸವರಾಜ್ ಸಗರಕರ್ ಸಾಃ ಫಿಲ್ಟರ್ ಬೇಡ್ ಆಶ್ರಯ ಕಾಲೋನಿ ಕಲಬುರಗಿ ರವರ ಗಂಡನು ಕಳೆದ 15-16 ವರ್ಷದ ಹಿಂದೆ ತಿರಿಕೊಂಡಿದ್ದು ದಿನಾಂಕ 21-09-2017 ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ನನ್ನ ಕೆಲಸದ ಶಿಫ್ಟ್ ಇದ್ದುದ್ದರಿಂದ ನಾನು ಮನೆಯಿಂದ ಬೇಳಿಗ್ಗೆ 11-30 ಗಂಟೆಗೆ ಕೆಲಸಕ್ಕೆ ಬಂದು ರಾತ್ರಿ 8 ಪಿ.ಎಂದ ವರೆಗೆ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಹೋಗುವ ಕುರಿತು ಯುನೆಟಡ್ ಆಸ್ಪತ್ರೆಯಿಂದ ಶಹಾಬಜಾರಾದ ಮೂಖಾಂತರ ಲಾಲ ಹನುಮಾನ ಗುಡಿ ಶಹಾಬಜಾರವೆರೆಗ ಆಟೋದಲ್ಲಿ ಕುಳಿತುಕೊಂಡು ಲಾಲ ಹನುಮಾನ ಗುಡಿ ಹತ್ತೀರ ಆಟೋ ಇಳಿದು ನಂತರ ಬಸವಲಿಂಗ ನಗರ ಮಾರ್ಗವಾಗಿ ಶಹಾಬಜಾರ ಸುವರ್ಣ ನಗರ ಕ್ರಾಸದಿಂದ ಫಿಲ್ಟರ್ ಬೇಡ್ ಆಶ್ರಯ ಕಾಲೋನಿಗೆ ಹೋಗುವ ಕುರಿತು ಜ್ಞಾನಜ್ಯೋತಿ ಕನ್ನಡ ಕಾನ್ಮೆಂಟ್ ಶಾಲೆಯ ಹತ್ತೀರ ರೋಡಿನ ಮೇಲೆ ನೆಡೆದುಕೊಂಡು ಬರುತ್ತಿದ್ದಾಗ ನನ್ನ ಹಿಂದುಗಡೆಯಿಂದ ಒಂದು ಮೋಟಾರ ಸೈಕಲ ಮೇಲೆ ಇಬ್ಬರು ಅಪರಿಚಿತ ಹುಡುಗರು ಅಂದಾಜು 28-30 ವಯಸ್ಸಿನವರು ಮೋಟಾರ ಸೈಕಲ್ ಮೇಲೆ ಬಂದವರೆ ನನಗೆ ತಡೆದಯ ನಿಲ್ಲಿಸಲು ನಾನು ' ಯ್ಯಾಕೆ  ನಿವ್ಯಾರು ನನಗೆ ನಿಲ್ಲಿಸುತ್ತಿದ್ದಿರಿ' ಅಂತಾ ಕೇಳಲು ಒಬ್ಬನು ಗಾಡಿಯ ಮೇಲಿಂದ ಕಳೆಗೆ ಇಳಿದವನೆ '' ಎನೆ ರಂಡಿ ನಾನು ನಿನಗೆ ನಿಲ್ಲು ಅಂತಾ ಹೇಳಿದರೆ, ನಿಲ್ಲೋದಿಲ್ಲಾ ಬೋಸಡಿ' ಅವಾಚ್ಯವಾಗಿ ಬೈಯ್ಯಲು ಶರು ಮಾಡಿದ್ದು, ನನಗ್ಯಾಕೆ ಬೈಯ್ಯುತ್ತಿದ್ದಿ ಅಂತಾ ಕೇಳಿದ್ದಕ್ಕೆ, ಇನ್ನೊಬ್ಬನು ಸಹಃ ನನಗೆ ಕೈಯಿಂದ ಮುಖದ ಮೇಲೆ ಹೊಡೆದನು, ಈ ರಂಡಿಗೆ ಬಾಳ ಸೋಕ್ಕು ಬಂದಿದೆ ಮುಗಿಸಿಬಿಡಿ ಅಂತಾ ಅನ್ನಲು ಅವನ ಹಿಂದೆ ಇದ್ದ ಹುಡುಗ ತನ್ನ ಹತ್ತೀರ ಇದ್ದ ಚಾಕುವಿನಿಂದ ನನ್ನ ಹೊಟ್ಟೆಯಲ್ಲಿ ಬಲಭಾಗದ ಪಕ್ಕೆಯ ಹತ್ತೀರ ಚಿಚ್ಚಿ (ಹೊಡೆದನು) ಭಾರಿ ರಕ್ತಗಾಯ ಪಡಿಸಿದನು. ಇದರಿಂದ ನಾನು ಕೆಳಗಡೆ ಬಿದ್ದು ಚಿರಾಡಲು ಅದೆ ರೋಡಿಗೆ ನನಗೆ ಪರಿಚಯದ ಆಟೋ ಬರುತ್ತಿದ್ದು ನಾನು ಚಿರಾಡುವ ಸಪ್ಪಳ ಕೇಳಿ ಆಟೋದಲ್ಲಿದ್ದಂತಹ ಮಲ್ಲಿಕಾರ್ಜುನ & ಕಾಶಿಬಾಯಿ ಇವರು ಓಡಿ ಬಂದು ನೋಡುವಷ್ಠರಲ್ಲಿಯೆ ನನಗೆ ಹೊಡೆಯುತ್ತಿದ್ದ ಆ ಇಬ್ಬರು ಮೋಟಾರ ಸೈಕಲ ಮೇಲೆ ಬಂದ ಹುಡುಗರು ತಮ್ಮ ಗಾಡಿ ಸಮೇತ ಅಲ್ಲಿಂದ ಓಡಿ ಹೋದರು, ಅವರ ಹೆಸರು ವಿಳಾಸ ನನಗೆ ಗೋತ್ತಿಲ್ಲಾ ಅವರಿಗೆ ನೋಡಿದರೆ ಗುರುತಿಸುತ್ತೇನೆ. ಅವರಿಬ್ಬರು ಕನ್ನಡ ಮಾತಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 19-09-2017 ರಂದು ಸಾಯಂಕಾಲ 6 ಗಂಟೆಯಿಂದ ದಿನಾಂಕ 20-09-2017 ರಂದು 7-30 ಎಎಮ ಮದ್ಯದ ಅವಧಿಯಲ್ಲಿ ಪಿರೋಜಾ ಬಾದ ಗ್ರಾಮದ ಸೀಮಾಂತರದಲ್ಲಿ ಬರುವ ಶಹಾಬಾದ ಕ್ರಾಸ ಹತ್ತಿರ ಇರುವ ಹೊಲದಲ್ಲಿರುವ ಎರ ಟೇಲ ಟವರಿಗೆ ವಿದ್ಯುತ್ತ ಸರಬರಾಜಿಗಾಗಿ ಅಳವಡಿಸಿರುವ 48 ಓಲ್ಟೇಜಿನ ವರ್ಲಾ  ಪ್ಲಸ್ 600 ಎಹೆಚ್ನ 24ಬ್ಯಾಟರಿ ಶೆಲ್ಗಳು ಅ,ಕಿ 21,000/-  ರೂಪಾಯಿಗಳು ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿರುತ್ತಾರೆ ಅಂತಾ  ಶ್ರೀ ಬಾಬು ತಂದೆ ಶಿವರಾಯ ನಿಂಬರ್ಗಾ  ಸಾ : ಜಿ.ಆರ್ ನಗರ ಖಾದ್ರಿ ಚೌಕ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: