ಸಾಕ್ಷಿ
ಹೇಳಿದ್ದಕ್ಕೆ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ
ಠಾಣೆ : ಶ್ರೀ ಸಿದ್ದಪ್ಪ ತಂದೆ ಶಿವಪ್ಪ ಪೂಜಾರಿ ಸಾ||ಹಾವಳಗಾ ತಾ||ಅಫಜಲಪೂರ ರವರು ಸುಮಾರು 10 ವರ್ಷದ ಹಿಂದೆ ನಮ್ಮ ಗ್ರಾಮದ ಗುರಪ್ಪ
ತಂದೆ ಶಿವರಾಯ ನಾಟೀಕರ ಹಾಗು ಘತ್ತರಗಾ ಗ್ರಾಮದ ಭಗವಂತ ತಂದೆ ಮಲ್ಲಪ್ಪ ಹಂಚನಾಳ ಇವರ ಮೇಲೆ ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ
ದಾಖಲಾಗಿದ್ದು, ನಾನು ಸದರಿ ಕೇಸದಲ್ಲಿ
ಸಾಕ್ಷಿ ನುಡಿದಿರುತ್ತೇನೆ ಸದರಿಯವರು ಕೇಸಗೆ ಸಂಬಂಧಿಸಿದಂತೆ ಶಿಕ್ಷೆ ಅನುಭವಿಸಿ ಈಗ ಜೈಲಿನಿಂದ
ಬಿಡುಗಡೆಯಾಗಿ ಬಂದಿರುತ್ತಾರೆ. ದಿನಾಂಕ 01/09/2017 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ
ಸಕ್ಕರೆ ಕಾರ್ಖಾನೆ ಹತ್ತಿರ ಹವಳಾಗಾ ಕ್ರಾಸಿನಿಂದ
ನಾನು ಹಾಗು ನಮ್ಮ ಗ್ರಾಮದ ನಿಂಗಪ್ಪ ತಂದೆ ಬುದ್ದಪ್ಪ ಪೂಜಾರಿ ಮಾತನಾಡುತ್ತಾ ನಡೆದುಕಕೊಂಡು ನಮ್ಮ
ಊರಿಗೆ ಹೋಗುತಿದ್ದಾಗ ಅದೇ ಸಮಯಕ್ಕೆ ಸಾತಪ್ಪ
ತಂದೆ ಮಾಹದೇವಪ್ಪ ಕುಂಬಾರ ಇತನ ಮೋಟಾರ್ ಸೈಕಲ್ ಮೇಲೆ ಸಾತಪ್ಪನೊಂದಿಗೆ ಭಗವಂತ ತಂದೆ ಮಲ್ಲಪ್ಪ
ಹಂಚನಾಳ ಹಾಗು ಗುರಪ್ಪ ತಂದೆ ಶಿವರಾಯ ನಾಟೀಕರ ಇಬ್ಬರು ಬಂದು ಮೋಟಾರ ಸೈಕಲ್ ಮೇಲಿಂದ ಕೆಳಗೆ
ಇಳಿದು ನನ್ನ ಹತ್ತಿರ ಬಂದು ಭಗವಂತ ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ
ರಂಡಿ ಮಗನೇ ನೀನು ನಮ್ಮ ವಿರುದ್ದವಾಗಿ ಕೊರ್ಟದಾಗ ಸಾಕ್ಷಿ ಹೇಳಿದಕ್ಕೆ ನಾವು ಇಷ್ಟುದಿನ
ಜೈಲಿನಲ್ಲಿ ಇದ್ದಿವಿ ಅಂತ ಅನ್ನುತಿದ್ದಾಗ ಗುರಪ್ಪ ಇತನು ತನ್ನ ಕೈ ಮುಷ್ಠಿ ಮಾಡಿ ಈ ಬೋಸಗಿ
ಮಗನಿಗೆ ಇಲ್ಲೆ ಖಲಾಸ ಮಾಡೋಣ ಅಂತ ಅಂದು ನನ್ನ ಹೊಟ್ಟೆಗೆ ಬೇನ್ನಿಗೆ ಹೊಡೆದು ನೆಲಕ್ಕೆ ಕೆಡವಿದಾಗ
ಭಗವಂತ ಹಾಗು ಗುರಪ್ಪ ಇಬ್ಬರು ಕೂಡಿ ತಮ್ಮ ಕಾಲಿನಿಂದ ಒದ್ದಿರುತ್ತಾರೆ ಆಗ ಅಲ್ಲೆ ಇದ್ದ ನಿಂಗಪ್ಪ
ಪೂಜಾರಿ, ಸಾತಪ್ಪ ಕುಂಬಾರ ಇಬ್ಬರು
ಕೂಡಿ ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಘತ್ತರಗಾ ಗ್ರಾಮದ ಭಗವಂತ ತಂದೆ ಮಲ್ಲಪ್ಪ ಹಂಚನಾಳ
ಹಾಗು ನಮ್ಮ ಗ್ರಾಮದ ಗುರಪ್ಪ ತಂದೆ ಶಿವರಾಯ ನಾಟೀಕರ ಇಬ್ಬರ ವಿರುದ್ದ ನಾನು ಕೊರ್ಟದಲ್ಲಿ ಸಾಕ್ಷಿ
ನುಡಿದಿದಕ್ಕೆ ಇಬ್ಬರು ಕೂಡಿ ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು
ಕಾಲಿನಿಂದ ಒದ್ದು ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನಿನ ಕ್ರಮ ಜರೂಗಿಸಬೇಕು ಅಂತ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment