ಆಕ್ರಮವಾಗಿ
ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ
ಠಾಣೆ : ಶ್ರೀ ಸಂಗಪ್ಪ ಬಗಲಿ
ಕಂದಾಯ ನಿರೀಕ್ಷಕ ಅಫಜಲಪೂರ ರವರು ಮಾನ್ಯ ತಹಸಿಲ್ದಾರರು ಅಫಜಲಪೂರ ರವರ ಆದೇಶದಂತೆ ದಿನಾಂಕ 02/09/2017
ರಂದು ಅಫಜಲಪೂರ ದಿಂದ ಬಳೂರ್ಗಿಗೆ ಹೋಗುವ ರೋಡಿಗೆ
ಅಫಜಲಪೂರ ದಿಂದ ಅಂದಾಜ 2.ಕೀ ಮಿ ಅಂತರದಲ್ಲಿ ಅಕ್ರಮವಾಗಿ ಕಳ್ಳತದಿಂದ ಮರಳು
ಸಾಗಾಣಿಕೆ ಮಾಡುತಿದ್ದ ಟ್ರ್ಯಾಕ್ಟರ SL NO NNHY03784 K E ನೇದ್ದರ ಮೇಲೆ ದಾಳಿ ಮಾಡಿದಾಗ ಟ್ರ್ಯಾಕ್ಟರ ಚಾಲಕ
ಓಡಿಹೋಗಿದ್ದು ಸದರಿ ಟ್ರ್ಯಾಕ್ಟರ ಚಕ ಮಾಡಿದಾಗ ಅದರ ಟ್ರೈಲಿಯಲ್ಲಿ ಅಂದಾಜ 3000/-ರೂ ಕಿಮ್ಮತ್ತಿನ
ಮರಳು ತುಂಬಿದ್ದು ಇದ್ದು ನಂತರ ಸದರಿ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು
ಅಫಜಲಪೂರ ಪೊಲೀಸ್ ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ
ಠಾಣೆ : ಶ್ರೀ ಅಪ್ಪಸಾಬ ತಂದೆ
ಮಲ್ಲಿಕಾರ್ಜುನ ಬಿರಾದಾರ ಇವರು ದಿನಾಂಕ 02/09/2017 ರಂದು ಮುಂಜಾನೆ ತನ್ನ ಮೋಟಾರ ಸೈಕಲ ನಂ ಕೆಎ-32 ಆರ್- 8128 ನೆದ್ದರ ಮೇಲೆ
ತಮ್ಮೂರಾದ ಕೌವಲಗಾ(ಕೆ) ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಅದೇ ಮೋಟಾರ ಸೈಕಲ ಮೇಲೆ
ಕಲಬುರಗಿಗೆ ಬರುತ್ತಿರುವಾಗ ರಾಷ್ಟ್ರಿಯ ಹೇದ್ದಾರಿ 218 ರ ನಂದಿಕೂರ ಬಸ್ ನಿಲ್ದಾಣ ದಾಟಿ ಸ್ವಲ್ಪ
ಮುಂದೆ ರೋಡಿನ ಮೇಲೆ ಬರುತ್ತಿರುವಾಗ ಎದುರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಒಬ್ಬ ಆಟೋ
ರೀಕ್ಷಾ ಚಾಲಕನು ತನ್ನ ಆಟೋ ರೀಕ್ಷಾವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು
ಬಂದು ತಾನು ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ ಕೆಎ-32 ಆರ್-8128 ನೇದ್ದಕ್ಕೆ ಡಿಕ್ಕಿಪಡಿಸಿದ
ಪರಿಣಾಮ ತಾನು ರೋಡಿನ ಮೇಲೆ ಬಿದಿದ್ದು, ಇದ್ದರಿಂದ ಬಲಭಾಗದ ತಲೆಗೆ ಭಾರಿ ರಕ್ತಗಾಯ, ಬಲ ಹುಬ್ಬಿನ
ಹತ್ತಿರ ರಕ್ತಗಾಯ, ಮೇಲ್ತುಟಿಗೆ ರಕ್ತಗಾಯ, ಗದ್ದಕ್ಕೆ ರಕ್ತಗಾಯಗಳಾಗಿರುತ್ತವೆ. ಅಪಘಾತ ಪಡಿಸಿದ ಆಟೋ ರೀಕ್ಷಾ ಚಾಲಕನು ತನ್ನ
ಆಟೋರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುತ್ತಾನೆ. ಅಪಘಾತಪಡಿಸಿದ ಆಟೋ ರೀಕ್ಷಾ ನಂ
ಕೆಎ-32 ಬಿ-4105 ನೇದ್ದರ ಚಾಲಕನು ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೇಕು ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಯಲ್ಲಿ ಕ್ರಿಮಿನಾಶಕ ಬೆರೆಸಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ
ಠಾಣೆ : ಶ್ರೀಮತಿ ಮರೆಮ್ಮ ಗಂಡ
ದೇವಪ್ಪ ಹಾಲಗಡ್ಲಾ ಸಾಃ ಚನ್ನೂರ ತಾಃ ಜೇವರಗಿ ಇವರು ಆಂದೊಲಾ ಗ್ರಾಮಕ್ಕೆ ಹೋಗುವ ರೋಡಿನ ಪಕ್ಕದ
ನಮ್ಮೂರ ಅಮಲಪ್ಪ ಇವರ ಹೊಲದಲ್ಲಿ ರೋಡಿನ ಪಕ್ಕದಲ್ಲಿಯೇ ಒಂದು ಸಾರ್ವಜನಿಕ ಸರಕಾರಿ ಬಾವಿ
ಇರುತ್ತದೆ ಹಿಂದಿನಿಂದಲೂ ಆ ಬಾವಿಯ ನೀರು ನಾವು ಓಣಿಯವರೆಲ್ಲರೂ ಕುಡಿಯಲು ಬಳಸುತ್ತಾ
ಬಂದಿರುತ್ತವೆ. 2014 ನೇ ವರ್ಷದಲ್ಲಿ ಈ ಬಾವಿಯಲ್ಲಿ ಯಾರೊ ಕಿಡಿಗೇಡಿಗಳು ಸತ್ತ ನಾಯಿ, ಸತ್ತ ಹಾವು ಹಾಕಿದ್ದರು, ಮತ್ತು ಚಪ್ಪಲಿ,ಸಹ
ಹಾಕಿ ನೀರು ಕಲೂಷಿತ ಮಾಡಿದ್ದರು. ಬಾವಿ ಇದ್ದ ಹೊಲ ನಮ್ಮೂರಿನ ಗೊಲ್ಲಾಳಪ್ಪಗೌಡ ಇತನು ಪಾಲಿಗೆ
ಮಾಡಿದ್ದಾಗಿನಿಂದ ಈತನು ನಮ್ಮ ಜಾತಿಯವರಿಗೆ ಈ ಬಾವಿಯ ನೀರು ಕುಡಿಯಲು & ತೆಗೆದುಕೊಂಡು ಹೋಗಬಾರದೆಂದು ನಮ್ಮ ಸಂಗಡ ತಕರಾರು
ಮಾಡಿದ್ದನು. ಒಂದು ದಿವಸ ನಮ್ಮ ಜಾತಿಯವರೆ ಆದ ಮಹಾಂತಮ್ಮ ಗಂಡ ಭೀಮಾಶಂಕರ
ಮತ್ತು ಬಸ್ಸಮ್ಮ ಗಂಡ ಮರೆಪ್ಪ ಹೊಸಮನಿ ಇವರು ಬಾವಿಗೆ ನೀರು ತರಲು ಹೋದಾಗ ಅವರ ಕೊಡ ಮತ್ತು ಹಗ್ಗ
ಬಾವಿ ನೀರಿನಲ್ಲಿ ಹಾಕಿರುತ್ತಾನೆ, ಏ ಹೊಲೆಯ ಸೂಳೆ ಮಕ್ಕಳೆ
ನೀರಿಗೆ ಬರಬೇಡವೆಂದು ಎಷ್ಟು ಸಲ ಹೇಳಬೇಕು ಎಂದು ಹೊಲಸು ರೀತಿಯಲ್ಲಿ ಬೈದಿರುತ್ತಾನೆ ಅಲ್ಲದೆ
ಬಾವಿಯ ಸುತ್ತಲು ಹಾಕಿದ ಬೇಡ್ ಕೂಡಾ ಕಿತ್ತಿರುತ್ತಾನೆ. ನಮ್ಮ ಜಾತಿಯವರಿಗೆ ನೀರು ಒಂದೆ
ಮೂಲ ಇರುವುದರಿಂದ ತೊಂದರೆಯಾಗಿರುತ್ತದೆ. ದಿ. 30.08.2017 ರಂದು ಮುಂಜಾನೆ 6.30
ಗಂಟೆಯ ಸುಮಾರಿಗೆ ನಾನು ಮತ್ತು ಮಹಾಂತಮ್ಮ ಗಂಡ ಭೀಮಾಶಂಕರ ಇಬ್ಬರೂ ಕೂಡಿಕೊಂಡು ಬಾವಿಗೆ ನೀರು
ತರಲು ಹೋಗಿದ್ದೆವು,
ಬಾವಿಯಿಂದ ಕೊಡದಲ್ಲಿ ನೀರು ತುಂಬಿಕೊಂಡಾಗ
ನೀರಿನಲ್ಲಿ ಕೆಟ್ಟ ಎಣ್ಣೆ ವಾಸನೆ ಬರುತ್ತಿತು. ಅದನ್ನು ನೊಡಲಾಗಿ ನೀರಿನಲ್ಲಿ
ಎಂಡೊಸಲ್ಫಾನ ಅಥವಾ ಯಾವುದೊ ಕ್ರೀಮಿನಶಕ ವಿಷದ ಎಣ್ಣೆ ಹಾಕಿರುವುದು ಕಂಡು ಬಂದಿರುತ್ತದೆ, ಅಷ್ಟರಲ್ಲಿಯೇ ನಮ್ಮೂರ ಮರೆಪ್ಪ ಹೊಸಮನಿ ಇವರು ಸಹ ಬಂದು
ನೋಡಿ ಊರಲ್ಲಿ ತಿಳಿಸಿದರು. ಊರಿನವರಾದ ಮರೆಪ್ಪ ಕೊಟಗಿ, ನಾಗಪ್ಪ
ಗುಬಚಿ,ಮಾನಪ್ಪ ಕಟ್ಟಿಮನಿ, ಭೀಮರಾಯ
ಕಟ್ಟಿಮನಿ ತಿಪ್ಪಣ್ಣ ಜಾನಕರ,
ಶಂಕರೇಪ್ಪ ಜಾನಕರ, ರವರು ಬಂದು ನೋಡಿರುತ್ತಾರೆ, ಈ ಬಾವಿ ನೀರು ಕೂಡಿದವರು ಸಾಯಿತ್ತಾರೆ ಎಂದು ನಮ್ಮನ್ನು
ಕೊಲೆ ಮಾಡುವ ಉದ್ದೇಶದಿಂದ ದಿ 29.08.2017 ರ & 30.09.2017
ರ ರಾತ್ರಿ ವೇಳೆಯಲ್ಲಿ ಎಂಡೊಸಲ್ಫಾನ ಅಥವಾ ಯಾವುದೋ ಕ್ರೀಮಿನಶಕ ಎಣ್ಣ ಔಷದ
ಹಾಕಿದ್ದು ಇರುತ್ತದೆ. ನಮ್ಮೂರಿನಲ್ಲಿ ನಾವು ಕುಡಿಯಲು ನೀರು ಬಳಸುವ ಬಾವಿ ಇದ ಹೊಲ
ಲೀಜಿಗೆ ಹಾಕಿಕೊಂಡ ಗೊಲ್ಲಾಳಪ್ಪಗೌಡ ತಂದೆ ಕಲ್ಲಪ್ಪಗೌಡ ಕೂಕನೂರ ಈ ಹಿಂದೆಯೂ ನಮಗೆ ತೊಂದರೆ
ಕೊಟ್ಟಿದ್ದು, ಅವನೇ ಈಗ ಕೂಡಾ ಈ ಕೃತ್ಯ ಮಾಡಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ
ಪ್ರಕರಣಗಳು :
ಶಾಹಾಬಾದ
ನಗರ ಠಾಣೆ : ಶ್ರೀ ರಾಜು ತಂದೆ ಲಕ್ಷ್ಮಣ ಗೋಟೆಕರ ಸಾ:
ಮೇಸ್ತ್ರಿ ನಗರ ಶಹಾಬಾದ ಇವರು ದಿನಾಂಕ: 02/09/2017 ರಂದು ಮುಂಜಾನೆ ತನ್ನ ಮನೆಯಿಂದ ಹೊರಗೆ
ನಡೆದಾಗ ಅದೇ ವೇಳೆಗೆ ಅರೋಪಿತರಾದ ಗೊವಿಂದ ತಂದೆ ಹಣಮಂತ , ರಾಜು ತಂದೆ ಹಣಮಂತ , ಹಣಮಂತ ತಂದೆ ತಿಮ್ಮಣ್ಣ
ಮತ್ತು ಅಸಾಓಕ ತಂದೆ ಯಲ್ಲಪ್ಪ ಇವರೆಲ್ಲಾರೂ ನಮ್ಮ ಮನೆಯ ಮುಂದೆ ಬಂದು ನನಗೆ ಎಲೇ ರಾಜ ಎಲ್ಲಗೆ
ನಡೆದಿದ್ದಿ ನಿಂದ್ರಲೇ ಅಂತಾ ಆಕ್ರಮ ತಡೆದು ನಿಲ್ಲಿಸಿ ಅಂಗಿ ಹಿಡಿದು ಕಳೆದಾಡಿ ಅವಾಚ್ಯವಾಗಿ
ಬೈದು ಕೈಯಿಂದ ಮತ್ತು ನಳದ ಪೈಪಿನಿಂದ ತಲೆಗೆ ಹೊಡೆದು ರಕ್ತಗಾಯಾ ಪಡಿಸಿ ಇನ್ನೋಂದು ಸಲ ಗೋಡೆಯ
ವಿಷಯದಲ್ಲಿ ಮಾತೆತ್ತಿದ್ದರೆ ಸುಮ್ಮನೆಗೆ ಬಿಡುವುದಿಲ್ಲಾ ಅಂತಾ ಕಬ್ಬಿಣದ ರಾಡು ತೋರಿಸಿ ಜೀವದ ಭಯ
ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
No comments:
Post a Comment