ದ್ವೀಚಕ್ರ ವಾಹನ ಕಳವು ಪ್ರಕರಣ :
ರೇವೂರ ಠಾಣೆ : ಶ್ರೀ ಜಾಕೀರ ತಂದೆ
ರಾಜಾಸಾಬ ಚೌಧರಿ ಸಾಃಸ್ಟೇ.ಗಾಣಗಾಪೂರ ರವರು ಒಂದು ಹೀರೊ ಸ್ಲೇಂಡರ ಪ್ಲಸ್ ಕಂಪನಿಯ ಸಿಲ್ವರ ಬಣ್ಣದ ಮೋಟರ ಸೈಕಲ್-ನಂ-ಕೆಎ-32-ಇಡಿ9709 ನೇದ್ದನು
ಖರೀದಿ ಮಾಡಿದ್ದು ದಿನಾಂಕ 11-08-2017 ರಂದು 2-00 ಪಿ.ಎಮ್.
ಸುಮಾರಿಗೆ ನನ್ನ ಬೈಕನ್ನು ಸ್ಟೇಶನ ಗಾಣಗಾಪೂರ ಗ್ರಾಮದ ಬಸ್ ನಿಲ್ದಾಣ ಎದರುಗಡೆ ಇರುವ ನಮ್ಮ
ಖಾನಾವಳಿ ಮುಂದೆ ಪ್ರತಿ ದಿನದಂತೆ ನಿಲ್ಲಿಸಿ ನಾನು ಮತ್ತು ನನ್ನ ತಂದೆಯಾದ ರಾಜಾಸಾಬ ಹಾಗು ನಮ್ಮ
ತಾಯಿಯಾದ ರಜಿಯಾ ಬೆಗಂ ಮತ್ತು ನನ್ನ ಹೆಂಡತಿಯಾದ ಅಲಿಮಾ ಬೆಗಂ ರವರೆಲ್ಲರೂ ಕೂಡಿ ನಮ್ಮ ಖಾನಾವಳಿ
ಒಳಗಡೆ ಊಟ ಮಾಡಿದೆವು ಊಟ ಮಾಡಿದ ನಂತರ ನಾನು 3-30 ಪಿ,ಎಮ್.ಸುಮಾರಿಗೆ ಎದ್ದು ಖಾನಾವಳಿಗೆ
ನೀರು ತರಬೇಕೆಂದು ಸರ್ಕಾರಿ ಶಾಲೆ ಹತ್ತೀರ ವಿರುವ ನಳಕ್ಕೆ ಹೋಗ ಬೆಕೆಂದು ನನ್ನ ಮೋಟಾರ ಸೈಕಲ
ಪಕ್ಕಕ್ಕೆ ನಿಲ್ಲಿಸಿದ ನೀರಿನ ಗಾಡಿ
(ಕಬ್ಬೀಣದ್ದು ಸೈಕಲ ಚಕ್ರವುಳ್ಳದ್ದು) ತೆಗೆದುಕೊಂಡು ಹೋಗುತ್ತೀರುವಾಗ ನನ್ನ ಮೋಟಾರ ಸೈಕಲ
ನೋಡಲಾಗಿ ನಾನು ನಿಲ್ಲಿಸಿದ ಸ್ಥಳದಲ್ಲಿಯೆ ಇತ್ತು ಮರಳಿ ನಾನು 4-30 ಪಿ,ಎಮ್.ಸುಮಾರಿಗೆ ನೀರು ತುಂಬಿಕೊಂಡು ಮರಳಿ ನಮ್ಮ ಖಾನಾವಳಿಗೆ ಬಂದಿದ್ದು ಬಂದು ನಾನು
ನೋಡಲಾಗಿ ನನ್ನ ಮೋಟಾರ ಸೈಕಲ ನಾನು ನಿಲ್ಲಿಸಿದ ಸ್ಥಳದಲ್ಲಿ ಇದ್ದಿದ್ದಿಲ್ಲ ಆಗ ನಾನು ನನ್ನ
ತಂದೆಗೆ ಮತ್ತು ನನ್ನ ಹೆಂಡತಿಗೆ ಮೋಟಾರ ಸೈಕಲ ಯಾರಿಗಾದರು ಕೊಟ್ಟಿರೆನು ಅಂತಾ ವಿಚಾರಿಸಿದಾಗ
ಇಲ್ಲ ಅಂತಾ ಹೆಳಿದ್ದು ಯಾರೋ ಕಳ್ಳರು ನಮ್ಮ ಖಾನಾವಳಿ ಮುಂದೆ ನಿಲ್ಲಿಸಿದ ಮೋಟರ ಸೈಕಲ್ ನಂ- ಕೆಎ-32-ಇಡಿ9709 ಅಂದಾಜು
ಕಿಮ್ಮತ್ತು 28.000/- ನೇದ್ದನು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀಮತಿ ಪೂಜಾ ಗಂಡ ತಾರಾಸಿಂಗ ಚವ್ಹಾಣ ಸಾ: ದೇವಲಾ ನಾಯಕ ತಾಂಡಾ ತಾ:ಜಿ:ಕಲಬುರಗಿ ಇವರು ಈಗ್ಗೆ
ಸೂಮಾರು 8 ತಿಂಗಳ ಹಿಂದೆ ದೇವಲಾನಾಯಕ ತಾಂಡಾದ ತಾರಾಸಿಂಗ ಚವ್ಹಾಣ ಇವರೊಂದಿಗೆ
ಮದುವೆಯಾಗಿದ್ದು. ನಾನು ಗರ್ಬಿಣಿಯಾಗಿರುತ್ತೇನೆ ಮತ್ತು ನಮ್ಮ ಮನೆಯಲ್ಲಿ ನಾನು ನನ್ನ ಗಂಡ ನನ್ನ ಅತ್ತೆಯಾದ
ಗೋಮಲಾಬಾಯಿ ಇವರು ಇರುತ್ತೇವೆ. ನನ್ನ ಗಂಡ ತಾರಾಸಿಂಗ ಈತನು ವಿಪರಿತ ಕುಡಿತದ ಚಟಗಾರನಾಗಿದ್ದು.
ಆಗಾಗ ನನ್ನೊಂದಿಗೆ ವಿನಾಕಾರಣ ಜಗಳ ಮಾಡುತ್ತ ಬಂದಿರುತ್ತಾನೆ. ನಿನ್ನೆ ದಿನಾಂಕ:06.09.2017
ರಂದು ಮುಂಜಾನೆಯ ವೇಳೆಯಲ್ಲಿ ನನ್ನ ಗಂಡ ತಾರಾಸಿಂಗ ಈತನು ಹೋರಗಡೆ ಕೂಲಿಕೆಲಸಕ್ಕೆ ಹೋಗಿದ್ದು.
ನಾನು ಮತ್ತು ನನ್ನ ಅತ್ತೆ ಗೋಮಲಾಬಾಯಿ ಇಬ್ಬರೂ ಮನೆಯಲ್ಲಿದ್ದಾಗ ಸಾಯಂಕಾಲ ನನ್ನ ಅತ್ತೆ ಇವರು
ನನ್ನ ಹತ್ತೀರ ಬಂದು ನಾನು ಮನೆಯಲ್ಲಿ ಕೂಡಿಟ್ಟ 2 ಸಾವಿರ ರುಪಾಯಿಗಳು
ಕಾಣುತ್ತಿಲ್ಲ ನೀನು ತಗೊಂಡ್ಡಿದ್ದಿಯಾ ಅಂತಾ ನನಗೆ ಕೇಳಿದ್ದು. ಆಗ ನಾನು ಇಲ್ಲಾ ಅಂತಾ ನನ್ನ
ಅತ್ತೆಗೆ ಹೇಳಿದ್ದು. ನಂತರ ಸಾಯಂಕಾಲ 05.30 ಗಂಟೆಯ ಸೂಮಾರಿಗೆ ನನ್ನ ಗಂಡ ತಾರಾಸಿಂಗ ಈತನು ವಿಪರಿತ ಕುಡಿದುಕೊಂಡು ಮನೆಗೆ
ಬಂದಿದ್ದು. ಆಗ ನಾನು ನನ್ನ ಗಂಡನಿಗೆ ನಿಮಗೆ ಕುಡಿಯಲಿಕ್ಕೆ ರೋಕ್ಕ ಎಲ್ಲಿಂದ ಬಂದಿದೆ ಮನೆಯಲ್ಲಿ
ಅತ್ತೆ 2 ಸಾವಿರ ರೂಪಾಯಿಗಳು ಕಾಣುತ್ತಿಲ್ಲ ಅಂತಾ ಹೇಳುತ್ತಿದ್ದು ನಿವೇನಾದರು
ತೆಗೆದುಕೊಂಡಿದ್ದಿರಾ ಅಂತಾ ಕೇಳಿದಾಗ ನನ್ನ ಗಂಡ ನನಗೆ ಏನೆ ರಂಡಿ ನನ್ನ ಮೇಲೆ ಅಪವಾದ
ಮಾಡುತ್ತಿಯಾ ಅಂತಾ ಕಲ್ಲಿನಿಂದ ಬೆನ್ನಿಗೆ ಹೋಡೆದು ಕೈಯಿಂದ ನನಗೆ ಎಲ್ಲೆಂದರಲ್ಲಿ ಹೋಡೆಬಡೆ
ಮಾಡಿದ್ದು. ನಂತರ ನಾನು ರಾತ್ರಿ ಮನೆಯಲ್ಲಿ ಊಟ ಮಾಡಿ ಮನೆಯಲ್ಲಿ ಮಲಗಿಕೊಂಡಿದ್ದಾಗ ರಾತ್ರಿ ನನ್ನ
ಅತ್ತೆ ಗೋಮಲಾಬಾಯಿ ಇವಳು ನನ್ನ ಹತ್ತೀರ ಬಂದು ಏನೇ ರಂಡೀ ನನ್ನ 2 ಸಾವಿರ ರೂಪಾಯಿಗಳು
ನೀನೆ ತೆಗೆದುಕೊಂಡಿದ್ದು. ನನ್ನ ಮಗನಿಗೆ ಅಪವಾದ ಕೋಟ್ಟು ಬಾಯಿಗೆ ಬಂದಹಾಗೆ ಮಾತಾಡಿದ್ದಿ ಅಂತಾ
ಬೈಯುತ್ತಿದ್ದಾಗ ಅಷ್ಟರಲ್ಲಿ ನನ್ನ ಗಂಡ ಅಲ್ಲಿಗೆ ಬಂದಾಗ ನನ್ನ ಅತ್ತೆ ನನ್ನ ಗಂಡನಿಗೆ ಏ ಮಗಾ ಈ
ರಂಡೀದು ಬಹಾಳ ಆಗ್ಯಾದ ಇಕೆಗೆ ಬಿಡಾದು ಬ್ಯಾಡ ಇಕೆಗೆ ಹೋಡೆದು ಖಲಾಸ ಮಾಡೋಣ ಅಂತಾ ಪ್ರಚೋದನೆ
ನಿಡಿದಾಗ ನನ್ನ ಗಂಡ ಅಲ್ಲೆ ಪಕ್ಕದಲ್ಲಿದ್ದ ಗ್ಯಾಸಲೇಟ ತುಂಬಿದ ಡಬ್ಬಿಯನ್ನು ತಂದು ಅದರಲ್ಲಿದ್ದ
ಎಣ್ಣಿಯನ್ನು ಪೂರ್ತಿಯಾಗಿ ನನ್ನ ಮೈಮೇಲೆ ಚೆಲ್ಲಿ ಕಡ್ಡಿ ಗಿಚಿ ನನ್ನ ಮೈಗೆ ಬೆಂಕಿ ಹಚ್ಚಿದಾಗ
ನಾನು ತ್ರಾಸ ತಾಳಲಾರದೆ ಚಿರಾಡುತ್ತಿದ್ದಾಗ ನನ್ನ ಮನೆಯ ಪಕ್ಕದ ಮನೆಯ ಹತ್ತೀರ ಇದ್ದ ನನ್ನ
ನೇಗೆಣಿಯರಾದ ಶುಶಿಲಾಬಾಯಿ ಹಾಗೂ ಶೇಶಿಬಾಯಿ ಚವ್ಹಾಣ ಹಾಗೂ ಬಳಿರಾಮ ಚವ್ಹಾಣ ಇವರು ಬಂದು ನನ್ನ
ಮೈಮೇಲೆ ನಿರು ಹಾಕಿ ಬೆಂಕಿ ಆರಿಸಿ ನಂತರ ನನ್ನ ಮೈಯಲ್ಲಾ ಸುಟ್ಟ ಗಾಯಗಳಾಗಿದ್ದರಿಂದ 108
ಅಂಬುಲೆನ್ಸಗೆ ಫೊನ ಮಾಡಿ ಕರೆಯಿಸಿ ನಿನ್ನ ಉಪಚಾರ ಕುರಿತು ಕಲಬುರಗಿ ಸರಕಾರಿ ದವಾಖಾನೆಗೆ ತಂದು
ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಚೌಕ ಠಾಣೆ : ಶ್ರೀ ಪ್ರಕಾಶ ತಂದೆ ಅಮೃತಪ್ಪಾ ಪಟ್ನಾಯಿಕ ವಯಃ 35 ವರ್ಷ ಉಃ ಕೂಲಿಕೆಲಸ ಜಾಃ ಪ.ಜಾತಿ (ಹೊಲೆಯ) ಸಾಃ ದಾದಾಫೀರ ದರ್ಗಾ ಹತ್ತೀರ
ರಾಜೀವಗಾಂಧಿ ಕಲಬುರಗಿ ಇವರು ಕಳೆದ 8-10 ವರ್ಷದ
ಹಿಂದೆ ನಮ್ಮ ಓಣಿಯವಲ್ಲಿಯೆ ವಾಸವಾಗಿದ್ದ ವಿಶ್ವನಾಥ ಮುಡ್ಡೆನವರ ಇವರ ಮಗಳಾದ ಅನೀತಾ ಇವಳೊಂದಿಗೆ
ಪ್ರೀತಿಸಿ ರಿಜಿಸ್ಟರ್ ಮದುವೆ ಮಾಡಿಕೊಂಡಿರುತ್ತೇನೆ. ನನ್ನ ಹೆಂಡತಿ ಅನೀತಾ ಇವಳಿಗೆ ನಾನು ಮದುವೆ
ಆಗುವುದಕ್ಕಿಂತ ಮುಂಚೆಯೆ ಸಾವಳಗಿ ಗ್ರಾಮದ ಶಿವಶರಣಪ್ಪಾ ಜಮದಾರ ಇವರ ಮಗನಾದ ಅಶೋಕ ಜಮಾದಾರ ಈತನೊಂದಿಗೆ ಮದುವೆ ಆಗಿದು, ನನ್ನ ಹೆಂಡತಿಯಾಗಿರುವ ಅನೀತಾ ಇವಳು ತನ್ನ
ಮೋದಲನೆ ಗಂಡನಿಗೆ ಬಿಟ್ಟು ಬಂದಿದ್ದು, ಅವಳು
ತನ್ನ ತವರುಮನೆಯಲ್ಲಿದ್ದಾಗ ಆ ವೇಳೆಯಲ್ಲಿ ನನ್ನೊಂದಿಗೆ ಪ್ರೇಮಿಸಿ,
ನಾನು ಅನಿತಾಳಿಗೆ ರಿಜಿಸ್ಟರ್ ಮದುವೆ ಮಾಡಿಕೊಂಡಿರುತ್ತೇನೆ, ಸಧ್ಯ 03 ಮಕ್ಕಳು
ಸಹಃ ಇರುತ್ತಾರೆ. ನನ್ನ ಹೆಂಡತಿ ನನ್ನೊಂದಿಗೆ ಸರಿಯಾಗಿ ಇರದೆ ಅನಾವಶ್ಯಕವಾಗಿ ಜಗಳಮಾಡುವುದು, ಆಗಾಗ್ಗೆ ತನ್ನ ತವರು ಮನೆಗೆ ಹೋಗಿ ಕುಳಿತುಕೋಳ್ಳುವುದು, ನನಗೆ ಅನಾವಶ್ಯಕವಾಗಿ ತ್ರಾಸು ಮಾಡುವುದು ಮಾಡುತ್ತೀದ್ದರು ಸಹಃ ನಾನು ಸಹಿಸಿಕೊಂಡು
ಅವಳೊಂದಿಗೆ ಸಂಸಾರ ಮಾಡಿಕೊಂಡು ಬಂದಿದ್ದು ದಿನಾಂಕ 07-09-2017 ರಂದು ಬೇಳಿಗ್ಗೆ ಮನೆಯಲ್ಲಿದ್ದಾಗ
ಕೆಲಸದ ಬಗ್ಗೆ ಹಣ ಕೇಳಿದ ವಿಷಯದಲ್ಲಿ ನನ್ನ ಹೆಂಡತಿ ಅನೀತಾಳು ನನ್ನೊಂದಿಗೆ ಜಗಳ
ಮಾಡುತ್ತಿದ್ದರಿಂದ ನಾನು ಸಿಟ್ಟು ಮಾಡಿ ನನ್ನ ಹೆಂಡತಿಗೆ ಕೈಯಿಂದ ಹೊಡೆದಿದ್ದರಿಂದ ನನ್ನ ಹೆಂಡತಿ
ಅನೀತಾಳು ಸಿಟ್ಟು ಮಾಡಿಕೊಂಡು ನನ್ನ ಮೂರು ಮಕ್ಕಳನ್ನು ತನ್ನ ಜೋತೆಯಲ್ಲಿ ಕರೆದುಕೊಂಡು ನನ್ನ
ಮನೆಯಿಂದ ತನ್ನ ಮನೆಗೆ ಹೋದಳು. ನಿನಗೆ ಇಂದು ಜೀವ ಸಹಿತ ಬಿಡುವುದಿಲ್ಲಾ ಭಾಡಕಾವು ಅಂತಾ ಬೈದು
ತವರು ಮನೆಗೆ ಹೋದಳು. ದಿನಾಂಕ 07-09-2017 ರಂದು ಬೇಳಿಗ್ಗೆ ನಾನು ರಾಜೀವಗಾಂಧಿ ನಗರದ
ಮನೆಯಲ್ಲಿದ್ದಾಗ ನನ್ನ ಹೆಂಡತಿ ಅನೀತಾ ಇವಳು ತನ್ನ ತಮ್ಮನಾದ ಸಂತೋಷ ತಂದೆ ವಿಶ್ವನಾಥ ಮುಡ್ಡೆನವರ
ಈತನಿಗೆ ತನ್ನ ಜೋತೆಯಲ್ಲಿಯೆ ಕರೆದುಕೊಂಡು ಬಂದವಳೆ ನನ್ನ ಹೆಂಡತಿ ಅನೀತಾ ಇವಳು ನನ್ನೊಂದಿಗೆ
ಜಗಳಕ್ಕೆ ಬಿದ್ದು ಭಾಡಕಾವು, ನೀನು ಹೊಲೆಯ ಇದ್ದರೂ ಸಹಃ ನಾನು ನಿನಗೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದು, ನಿನಗೆ ಭಾಳ ಸೋಕ್ಕ್ ಬಂದಿದೆ ಬಾಡು, ನಿನಗೆ
ಸರಿಯಾಗಿ ಮಾಡಿಸಿ ಬಿಡುತ್ತೇನೆ ಅಂತಾ ಹೇಳುತ್ತಾ ನನಗೆ ಒತ್ತಿಯಾಗಿ ಹಿಡುಹೊಂಡಿದ್ದು, ಅಲ್ಲದೆ ತನ್ನ ತಮ್ಮ ಸಂತೋಷನಿಗೆ 'ಈ
ಭಾಡಕಾವಗೆ ಬಿಡಬೇಡಾ, ಸರಿಯಾಗಿ
ಬುದ್ದಿ ಕಲಿಸು' ಅಂತಾ ಹೇಳಿದ್ದಕ್ಕೆ, ಸಂತೋಷನು ರಂಡಿ ಮಗನೆ, ನಿನು ಹೊಲೆ ಸೂಳೇ ಮಗಾ ಅಂತಾ ಗೋತ್ತಿದ್ದರೂ ಸಹಃ ನನ್ನ ಅಕ್ಕ ನಿನಗೆ ಮದುವೆ
ಮಾಡಿಕೊಂಡು ಸಂಸಾರ ಮಾಡುತ್ತಿದ್ದಾಳೆ, ಅವಳಿಗ್ಯಾಕೆ
ಹೊಡೆಬಡೆ ಮಾಡುತ್ತಿ ರಂಡಿ ಮಗನೆ, ನಿನಗೆ
ಇಂದು ಜೀವ ಸಹಿತ ಬೀಡೋದಿಲ್ಲಾ ಸೂಳಿ ಮಗನೆ ಅಂತಾ ಬೈಯ್ಯತ್ತಾ, ತನ್ನ
ಕೈಯಲ್ಲಿದ್ದ ಚಾಕುವಿನಿಂದ ನನ್ನ ತಲೆಯಲ್ಲಿ 2-3 ಕಡೆ
ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment