Police Bhavan Kalaburagi

Police Bhavan Kalaburagi

Monday, September 4, 2017

Yadgir District Reported Crimes Updated on 04-09-2017

                                 Yadgir District Reported Crimes

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 217/2017 ಕಲಂ: 143, 147, 498(ಎ), 323, 324, 504, 506 ಸಂ 149 ಐಪಿಸಿ;- ಫಿರ್ಯಾದಿದಾರಳಿಗೆ ಸುಮಾರು 2 ವರ್ಷ 6 ತಿಂಗಳುಗಳ ಹಿಂದೆ ಆರೋಪಿ ಹುಸೇನಪ್ಪ ತಂದೆ ಮಾರೆಪ್ಪ ಗೋಸಿ ಜೋತೆಗೆ ಮದುವೆಯಾಗಿದ್ದು, ಸುಮಾರು ಒಂದು ವರ್ಷದಿಂದ ಅವಳ ಗಂಡ ಹುಸೇನಪ್ಪ ಇತನು ಮತ್ತು ಅವನ ಮನೆಯವರು ಎಲ್ಲರೂ ಕೂಡಿಕೊಂಡು ನೀನು ನಮ್ಮ ಮನೆಗೆ ತಕ್ಕ ಸೊಸೆಯಲ್ಲಾ, ನೀನು ನಮ್ಮ ಮನೆಯಲ್ಲಿ ಮತ್ತು ಹೊಲದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲಾ, ನೀನು ನೋಡುವದಕ್ಕೆ ಸರಿಯಾಗಿ ಇಲ್ಲಾ, ಅಂತಾ ಬೈದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೊಳ ಕೊಡುತ್ತಿದ್ದರು, ದಿನಾಂಕ 31/08/2017 ರಂದು ರಾತ್ರಿ 1-30 ಗಂಟೆಗೆ ಫೀರ್ಯಾಧಿ ಜೋತೆಗೆ ಆರೋಪಿ ಜಗಳ ತೆಗೆದು ಅವಾಚ್ಯವಾಗಿ ಬೈದು, ಕೈಯಿಂದ ಹೊಬಡೆ ಮಾಡಿ ಮತ್ತು ಕಟ್ಟಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದ ಬಗ್ಗೆ. ಅಂತಾ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಆಗಿರುತ್ತದೆ.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 41/2017 ಕಲಂ 279, 427, ಐಪಿಸಿ  ಸಂ.187 ಐಎಂವಿ ಆ್ಯಕ್ಟ್ ;- ದಿನಾಂಕ 02/09/2017 ರಂದು 9 ಪಿ.ಎಂ.ಕ್ಕೆ ಸಕರ್ಾರಿ ತಪರ್ೆ ಫಿಯರ್ಾದಿ ಶ್ರೀ ಮಹಾಂತೇಶ ಸಜ್ಜನ್ ಪಿ.ಎಸ್.ಐ ಯಾದಗಿರಿ ನಗರ ಠಾಣೆರವರು ಆಟೋ ನಂ.ಕೆಎ-33, 7849 ನೆದ್ದನ್ನು ಠಾಣೆಗೆ ತಂದು ಒಪ್ಪಿಸಿ ಹಾಗೂ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ಫಿಯರ್ಾದು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಮಹಾಂತೇಶ ಸಜ್ಜನ್ ಪಿ.ಎಸ್.ಐ ಯಾದಗಿರಿ ನಗರ ಠಾಣೆ ಆಗಿದ್ದು, ನಾನು ಕೊಡುವ ಸಕರ್ಾರಿ ತಪರ್ೆ ಪಿಯರ್ಾದಿ ಏನೆಂದರೆ ಇಂದು ದಿನಾಂಕ 02/09/2017 ರಂದು ಸಾಯಂಕಾಲ 5 ಗಂಟೆಯಿಂದ ನಾನು ಮತ್ತು ನನ್ನ ಸಂಗಡ ನಮ್ಮ ನಗರ ಪೊಲೀಸ್ ಠಾಣೆಯ ಶ್ರೀ ಸಂಜೀವಕುಮಾರ ಎಚ್.ಸಿ-173, ಜೀಪ್ ಚಾಲಕ ಶ್ರೀ ಬಸಣ್ಣ ಪಿಸಿ-109 ರವರೊಂದಿಗೆ ನಮ್ಮ ಪೊಲೀಸ್ ಠಾಣೆಯ ಸಕರ್ಾರಿ ಜೀಪಿನಲ್ಲಿ ಹೊರಟು ನಗರದಲ್ಲಿ ಪ್ರತಿಷ್ಠಾಪನೆ ಮಾಡಿದ 9 ನೆ ದಿವಸದ ಗಣೇಶ ವಿಸರ್ಜನೆ ಕುರಿತು ಯಾದಗಿರಿ ನಗರದಲ್ಲಿ ಪೆಟ್ರೊಲಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದಾಗ  ಸಮಯ ಸಾಯಂಕಾಲ 7-30 ಪಿ.ಎಂ.ಕ್ಕೆ ನನಗೆ ಪೋನ್ ಮೂಲಕ ಮಾಹಿತಿ ಬಂದಿದ್ದೇನೆಂದರೆ ಯಾದಗಿರಿ ನಗರದ  ಹೊಸಳ್ಳಿ ಕ್ರಾಸ್ ದಿಂದ ಗಂಜ್ ಕ್ರಾಸ್ ಮಧ್ಯದಲ್ಲಿ ಬರುವ ಶುಭಂ ಪೆಟ್ರೋಲ್ ಬಂಕ್ ಹತ್ತಿರ ಮುಖ್ಯ ರಸ್ತೆಯ ಮೇಲೆ ಒಬ್ಬ ಆಟೋ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ತನ್ನ ಆಟೋವನ್ನು ಚಲಾಯಿಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಹೊರಟಿದ್ದ ಆಕಳಿಗೆ ಡಿಕ್ಕಿ ಪಡಿಸಿದ್ದರಿಂದ ಸದರಿ ಅಪಘಾತದಲ್ಲಿ ಆಕಳಿಗೆ ಗಾಯಗಳಾಗಿದ್ದು ಜನರು ಸ್ಥಳದಲ್ಲಿ ಜಮಾ ಗೊಂಡಿದ್ದು ಕೂಡಲೇ ಸ್ಥಳಕ್ಕೆ ಬರುವಂತೆ ತಿಳಿಸಿದ್ದರಿಂದ ನಾನು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ನನಗೆ ಬಂದ ಮಾಹಿತಿಯಂತೆ ಅಪಘಾತ ಜರುಗಿದ್ದು, ಸದರಿ ಅಪಘಾತದಲ್ಲಿ  ರಸ್ತೆಯ ಮೇಲೆ ಬಿದ್ದಿದ್ದ ಆಕಳಿಗೆ ಅಲ್ಲಲ್ಲಿ ಗಾಯಗಳಾಗಿದ್ದು ಇರುತ್ತವೆ  ಘಟನಾ ಸ್ಥಳದಲ್ಲಿದ್ದ ಅಪಘಾತಪಡಿಸಿದ ಆಟೋವನ್ನು ಪರಿಶೀಲಿಸಲಾಗಿ ಆಟೋ ಟಂ,ಟಂ, ನಂಬರ ಕೆಎ-33, 7849 ನೇದ್ದು ಇದ್ದು  ಈ ಆಟೋದ ಮುಂದಿನ ಗ್ಲಾಸು ಸಂಪೂರ್ಣ ಒಡೆದು ಹೋಗಿದ್ದು ಇರುತ್ತದೆ. ಆಟೋ ಚಾಲಕನು ಅಪಘಾತಪಡಿಸಿದ ನಂತರ ಆಟೋವನ್ನು ಬಿಟ್ಟು ಸ್ಥಳದಿಂದ ಓಡಿ ಹೋಗಿದ್ದರ ಬಗ್ಗೆ ಸ್ಥಳಿಯರಿಂದ ಮಾಹಿತಿ ತಿಳಿದು ಬಂದಿರುತ್ತದೆ.  ಆಕಳಿಗೆ ಉಪಚಾರ ಕುರಿತು ಮಾನ್ಯ ವೈಧ್ಯಾಧಿಕಾರಿಗಳು ಪಶು ಆಸ್ಪತ್ರೆ ಯಾದಗಿರಿ ರವರಲ್ಲಿ ಒಂದು ಖಾಸಗಿ ಆಟೋದಲ್ಲಿ ನಮ್ಮ ಸಿಬ್ಬಂದಿಯವರ ಸಂಗಡ ಕಳಿಸಿರುತ್ತೇನೆ. ಆಟೋ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿದ್ದರಿಂದ ಸದರಿ ಅಪಘಾತ ಜರುಗಿದ್ದು ಆಟೋ ನಂಬರ್ ಕೆಎ-33, 7849 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 41/2017 ಕಲಂ 279, 427 ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 139/2017 ಕಲಂ, 366(ಎ) ಐಪಿಸಿ ಮತ್ತು ಕಲಂ: 8 ಪೋಕ್ಸೋ ಕಾಯ್ದೆ;- ದಿನಾಂಕ: 02/09/2017 ರಂದು 06.00 ಪಿಎಮ್ ಕ್ಕೆ ಪಿರ್ಯಾದಿದಾರರು ಒಂದು ಲಿಖಿತ ಅಜರ್ಿ ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ, ನನಗೆ 3 ಜನ ಮಕ್ಕಳಿದ್ದು ನನ್ನ ಹಿರಿಯ ಮಗಳಾದ ಕುಮಾರಿ. ಪ್ರತಿಭಾ ವಯಾ: 17 ವರ್ಷ ಇವಳು ದಿನಾಂಕ: 31/08/2017 ರಂದು ರಾತ್ರಿ ವೇಳೆಯಲ್ಲಿ ಕಾಲಮಡಿಯಲು ಮನೆಯಿಂದ ಹೊರಗೆ ಹೊದಾಗ ಅಂದರೆ, ದಿನಾಂಕ: 01/09/2017 ರಂದು 12.45 ಎಎಂ ಸುಮಾರಿಗೆ ನಮ್ಮೂರಿನ ರಾಜು ತಂದೆ ಬಸವರಾಜ ಗುತ್ತೇದಾರ ವಯಾ: 24 ವರ್ಷ ಈತನು ಜೋರಾವರಿಯಿಂದ ಕೈಹಿಡಿದು ಎಳೆದು ತನ್ನ ಮೋಟಾರ ಸೈಕಲ್ ಮೇಲೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ನಮಗೆ ನಮ್ಮ ಮಗಳು ಅಪ್ಪ ಅಮ್ಮ ಅಂತಾ ಜೀರುವದು ಕೇಳೆ ಹೋಗಿ ನೋಡಲಾಗಿ ನಮ್ಮ ಮನೆಯ ಬಾಗಿಲನ್ನು ಹೊರಗಿನಿಂದ ಕೊಂಡಿ ಹಾಕಿದ್ದು ನಾನು ಬಾಗಿಲು ಜಗ್ಗಿ ತಗೆದು ಹೋಗುವಷ್ಟರಲ್ಲಿ ರಾಜು ಈತನು ನಮ್ಮ 17 ವರ್ಷದ ಮಗಳನ್ನು ಅಪಹರಿಸಿಕೊಂಡು ಹೋಗಿದ್ದನು. ಇದಕ್ಕೆ ಅವರ ತಾಯಿ ಬಸ್ಸಮ್ಮ ಮತ್ತು ಅವರ ತಮ್ಮ ಶಿವರಾಜ ಇವರ ಕುಮ್ಮಕ್ಕು ಇರುತ್ತದೆ. ಅವರ ಮನೆಗೆ ಹೋಗಿ ನೋಡಲಾಗಿ ಅವರು ಕೀಲೀ ಹಾಕಿ ಹೋಗಿದ್ದರು. ಆಗ ನಾನು ನಮ್ಮ ಪರಿಚಯದ ಅಂಬ್ಲಪ್ಪ ಇಬ್ಬರು ಮೋಟಾರ ಸೈಕಲ್ ಮೇಲೆ ರಾಜು ಅಪಹರಿಸಿಕೊಂಡು ಹೋದ ಸಿಂದಗಿ ರೋಡಿನ ಕಡೆಗೆ ಬೆನ್ನತ್ತಿ ಹೋಗಿ ಹುಡುಕಾಡಲಾಗಿ ಇಲ್ಲಿಯ ವರೆಗೆ ಸಿಕ್ಕಿರುವದಿಲ್ಲ. ಅದಕ್ಕೆ ತಡವಾಗಿ ಇಂದು ದಿನಾಂಕ: 02/09/2017 ರಂದು ತಡವಾಗಿ ಠಾಣೆಗೆ ಬಂದು ಅಜರ್ಿಕೊಟ್ಟಿದ್ದು, ನಮ್ಮ ಮಗಳನ್ನು ಮೋಟಾರ ಸೈಕಲ ಮೇಲೆ ಅಪಹರಣ ಮಾಡಿದ ರಾಜು ಮತ್ತು ಅದಕ್ಕೆ ಕುಮ್ಮಕ್ಕು ನೀಡಿದ ಬಸ್ಸಮ್ಮ ಮತ್ತು ಶಿವರಾಜ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 139/2017 ಕಲಂ, ಕಲಂ, 366(ಎ) ಐಪಿಸಿ ಮತ್ತು ಕಲಂ: 8 ಪೋಕ್ಸೋ ಕಾಯ್ದೆ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 140/2017 ಕಲಂ: 354(ಎ), 504, 506 ಐಪಿಸಿ ಮತ್ತು ಕಲಂ: 66(ಎ) ಐಟಿ ಯಾಕ್ಟ;- ದಿನಾಂಕ: 02/09/2017 ರಂದು 09.00 ಪಿಎಮ್ ಕ್ಕೆ ಪಿರ್ಯಾದಿದಾರರು ಒಂದು ಲಿಖಿತ ಅಜರ್ಿ ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ,
   ವಿಷಯ: ಮಾನಭಂಗಕ್ಕೆ ಯತ್ನಿಸಿ ಮತ್ತು ನನನ್ನು ಮೂರು ವರ್ಷದಿಂದ ಚುಡಾಯಿಸುತ್ತ ಪೋನದಲ್ಲಿ ನಿಂದಿಸುತ್ತಿರುವವವನ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ.
    ನಾನು ಮಲ್ಲಮ್ಮ ಗಂಡ ವಿರಭದ್ರಯ್ಯ ಸ್ವಾಮಿ ಹಿರೇಮಠ ವಯಾ: 31 ವರ್ಷ ಜಾ: ಜಂಗಮ ಸಾ: ಹಾರಣಗೇರಾ ಇದ್ದು ದಿನಾಂಕ: 30/08/2017 ರಂದು ಸಮಯ ಬೆಳಿಗ್ಗೆ 10.30 ಕ್ಕೆ ಗೌಡರ ಸೇದಿ ಬಾವಿ ಹತ್ತಿರ ನನಗೆ ರಾಮನಗೌಡ ತಂದೆ ಗುರನಗೌಡ ಬಿದ್ನಾಳ ಸಾ: ಹಾರಣಗೇರಾ ಇವನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಬಾ ಅಂತಾ ಕರೆದಿರುತ್ತಾನೆ. ಮೂರು ವರ್ಷದಿಂದ ನಿರಂತರ ನನಗೆ ಚುಡಾಯಿಸುತ್ತಾ ಬಂದಿರುತ್ತಾನೆ. ಆದರೂ ನಾನು ಸಹಿಸಿಕೊಂಡಿರುತ್ತೇನೆ. ಆದರೆ ಅವನ ವರ್ತನೆಯಲ್ಲಿ ಇಲ್ಲಯ ವರೆಗೂ ಯಾವುದೆ ಬದಲಾವಣೆಯಾಗಿರುವದಿಲ್ಲ ಮತ್ತು ನನಗೆ ಒಂದು ದಿನ ದಿನಾಂಕ:29/08/2017 ರಂದು ನನಗೆ ಪೋನ 8497831863 ಮುಖಾಂತರ ಸಮಯ 02.30 ರ ಸುಮಾರಿಗೆ ನನಗೆ ಕರೆ ಮಾಡಿ ಏ ಸೂಳಿ ರಂಡಿ ನಿನಗೆ ಏನುಬೇಕು ಕೇಳು ಕೊಡುತ್ತಿನಿ, ಬಾ ಎಂದು ಕರೆದಿರುತ್ತಾನೆ, ಒಂದು ವೇಳೆ ನೀನು ನನ್ನ ಮಾತು ಕೇಳದೆ ಹೊದರೆ ನಿನಗೆ ಜೀವಂತವಾಗಿ ಹೊಡೆದು ಬಿಡುತ್ತೇನೆ ಎಂದು ನನಗೆ ಜೀವ ಭಯ ಹಾಕಿರುತ್ತಾನೆ. ನಾನು ಅಂಜಿ ಸುಮ್ಮನಿದ್ದು ಇಂದು ಸ್ವಲ್ಪ ದೈರ್ಯ ಮಾಡಿ ಠಾಣಗೆ ಬಂದು ಅಜರ್ಿ ಕೊಟ್ಟಿರುತ್ತೇನೆ. ಅದಕ್ಕಾಗಿ ತಾವುಗಳು ನನಗೆ ಮತ್ತು ನನ್ನ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಅಂತಾ ಪಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:140/2017 ಕಲಂ, 354(ಎ), 504, 506 ಐಪಿಸಿ ಮತ್ತು ಕಲಂ: 66(ಎ) ಐಟಿ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 90/2017 ಕಲಂ 279,337,338 ಐ.ಪಿ.ಸಿ;- ದಿನಾಂಕ: 01/09/2017 ರಂದು ಪಿಯರ್ಾಧಿ ಹಾಗೂ ಇತರರು ಕೂಡಿ ಭೀ.ಗುಡಿಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಬಂದು ಮರಳಿ ಮನೆಗೆ ಹೋಗುವ ಕುರಿತು ಭೀ.ಗುಡಿಯ ಕೋರಿಕೆ ಬಸ್ ನಿಲ್ದಾಣದ ಹತ್ತಿರ 2:25 ಪಿ.ಎಮ್.ಕ್ಕೆ ನಿಂತುಕೊಂಡಿದ್ದಾಗ ಹುಲಕಲ್ ಗ್ರಾಮದ ದೇವಿಂದ್ರಪ್ಪ ತಂದೆ ಭೀಮಣ್ಣ ಟಣಕೇದಾರ ಈತನು ತನ್ನ ಟಂ.ಟಂ. ನಂ; ಕೆ.ಎ-33 ಎ-1282 ನೇದ್ದನ್ನು ತೆಗೆದುಕೊಂಡು ಬಂದು ನಿಂತಾಗ ಪಿಯರ್ಾಧಿ ಹಾಗೂ ನಾಗರತ್ನ ಮತ್ತು ವಿಜಯಲಕ್ಷ್ಮಿ ಮೂವರು ಕೂಡಿ ಟಂ.ಟಂ.ದಲ್ಲಿ ಕುಳಿತಾಗ ದೇವಿಂದ್ರಪ್ಪನು ತನ್ನ ಆಟೋವನ್ನು ವೇಗವಾಗಿ ಚಲಾಯಿಸಿದನು. ಮೆಲ್ಲಗೆ ಚಲಾಯಿಸು ಅಂತಾ ಹೇಳಿದರು ಕೂಡ ಭೀ.ಗುಡಿಯ ಕೃಷಿ ಮಹಾವಿಧ್ಯಾಲಯ ಹತ್ತಿರ ರೋಡಿನ ಮೇಲೆ 2:30 ಪಿ.ಎಮ್.ಕ್ಕೆ ಟಂ.ಟಂ.ನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ಕಟ್ ಹೊಡೆದು ಒಮ್ಮೆಲೆ ಬ್ರೇಕ್ ಹಾಕಿದಾಗ ಟಂ.ಟಂ. ಪಲ್ಟಿಯಾಗಿದ್ದು ಆಟೋದಲ್ಲಿದ್ದ ನಾಗರತ್ನ ಮತ್ತು ವಿಜಯಲಕ್ಷ್ಮಿ ಇವರಿಗೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿದ್ದು, ಪಿಯರ್ಾಧಿಗೆ ಸಾದಾ ರಕ್ತಗಾಯವಾಗಿದ್ದು, ಆರೋಪಿತನಿಗೆ ಯಾವುದೇ ರಕ್ತಗಾಯವಾಗಿರುವುದಿಲ್ಲ. ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಸೇರಿಯಾದಾಗ ವೈಧ್ಯಾಧಿಕಾರಿ ರವರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ನಾಗರತ್ನ ಮತ್ತು ವಿಜಯಲಕ್ಷ್ಮಿಗೆ ಕಲಬುರಗಿಗೆ ತೆಗೆದುಕೊಂಡು ಹೋಗಿದ್ದು, ಪಿಯರ್ಾಧಿಯು ಉಪಚರಿಸಿಕೊಂಡು ಮನೆಗೆ ಹೋಗಿ ಇಂದು ದಿನಾಂಕ: 02/09/2017 ರಂದು ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ..
 


No comments: