Police Bhavan Kalaburagi

Police Bhavan Kalaburagi

Tuesday, September 12, 2017

Yadgir District Reported Crimes Updated on 12-09-2017


                                             Yadgir District Reported Crimes

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 45/2017 ಕಲಂ 279,  338 ಐಪಿಸಿ  ಸಂಗಡ 187 ಐಎಂವಿ ಆ್ಯಕ್ಟ್ ;- ದಿನಾಂಕ 11/09/2017 ರಂದು  ಸಾಯಂಕಾಲ 5-10 ಪಿ.ಎಂ. ದ ಸುಮಾರಿಗೆ ಫಿಯರ್ಾದಿಯ  ತಂದೆಯಾದ ಗಾಯಾಳು ವೀರಭದ್ರಪ್ಪ ಇವರು ಯಾದಗಿರಿ ನಗರದ ಶಾಸ್ತ್ರಿ ನಗರದ ಕ್ರಾಸ್ ಹತ್ತಿರ ಶಶಿ ಸುಪರ್ ಬಜಾರ್ ಹತ್ತಿರ ಬರುವ ಮುಖ್ಯ ರಸ್ತೆಯೆ ಮೇಲೆ ನಡೆದುಕೊಂಡು ಹೊರಟಿದ್ದಾಗ  ಲಾರಿ ನಂಬರ ಎಮ್.ಎಚ್.-25, ಬಿ-9615 ನೆದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನೆ ಫಿಯರ್ಾದಿಯ ತಂದೆಗೆ ಡಿಕ್ಕಿ ಪಡಿಸಿದಾಗ ಗಾಯಾಳು ವಿರಭದ್ರಪ್ಪ ಇವರಿಗೆ ತಲೆಯ ಹಿಂಬಾಗಕ್ಕೆ ಭಾರೀ ರಕ್ತಗಾಯ, ಗದ್ದಕ್ಕೆ ರಕ್ತಗಾಯವಾಗಿ ಮೂಗಿನಿಂದ ರಕ್ತ ಬರುತ್ತಿದ್ದು  ಮತ್ತು ಎಡಗೈಗೆ ಹಾಗೂ ಎದೆಗೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಆದ ಗಾಯಗಳಿಂದ ಗಾಯಾಳು ಈತನು ಬೆವುಶ್ ಆಗಿರುತ್ತಾನೆ. ಲಾರಿ  ಚಾಲಕನು ಅಪಘಾತಪಡಿಸಿ ಸ್ಥಳದಲ್ಲಿಂದ ಸ್ವಲ್ಪ ಮುಂದೆ ಹೋಗಿ ತನ್ನ ಲಾರಿಯನ್ನು ನಿಲ್ಲಿಸಿ ಓಡಿ ಹೋಗಿರುತ್ತಾನೆ. ಲಾರಿ ಚಾಲಕನ ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ   ಲಾರಿ ಚಾಲಕನ  ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 45/2017 ಕಲಂ 279, 338 ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.                                    
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 171/2017 ಕಲಂ  498(ಎ) 323.324.504.506  ಐ ಪಿ ಸಿ ;- ದಿನಾಂಕ 11-09-2017 ರಂದು 8-15 ಪಿ ಎಂ ಕ್ಕೆ ಅಜರ್ಿದಾರಳಾದ ಶ್ರೀಮತಿ ಪ್ರೀಯಾಂಕ ಗಂಡ ನವೀನಕುಮಾರ ಅವುಂಟಿ ವಯಾ|| 28 ವರ್ಷ ಜಾ|| ಲಿಂಗಾಯತ ಉ|| ಹೊಲ ಮನಿ ಕೆಲಸ ಸಾ|| ಇಡ್ಲೂರ ತಾ|| ಜಿಲ್ಲಾ|| ಯಾದಗಿರಿ ಇವರು ಆಣೆಗೆ ಬಂದು ಒಂದು ಗಣಕೀಕರಣ ಮಾಡಿಸಿದ ಅಜರ್ಿಯನ್ನು ಹಾಜರ ಮಾಡಿದ್ದು ಅದರ ಸಾರಾಂಶವೇನಂದರೆ .ನನ್ನ ತವರು ಊರು ಶಹಪೂರ ಅನೆಗುಂದಿಓಣಿ ಇದ್ದು.ನನಗೆ ನನ್ನ ತಂದೆ ತಾಯಿಯವರು ನವೀನಕುಮಾರ ಎಂಬುವರಿಗೆ ದಿನಾಂಕ 17-12-2012 ರಂದು ಕೊಟ್ಟು ಮದುವೆಯನ್ನು ಮಾಡಿದ್ದು.ಮದುವೆಯ ಕಾಲಕ್ಕೆ ಆರುವರಿ ಲಕ್ಷರುಪಾಯಿಗಳು ಮಾತಾಡಿದ್ದು ಅದರಲ್ಲಿ ಮದುವೆಯಕ್ಕಿಂತ ಮುಂಚೆ  ಎರಡು ಲಕ್ಷ ಕೊಟ್ಟಿದ್ದು ಮದುವೆಯಾದ ನಂತರ ಅಂಗಡಿಯನ್ನು ಮಾಡಿಕೊಳ್ಳು ಕೆಂಬಾವಿಯಲ್ಲಿ ಶಂಕರಲಿಂಗೇಶ್ವರ ಇಂಜಿನಿಯರಿಂಗ್ (ಇಂಜನ ಸಾಮಾನುಗಳನ್ನು ಮತ್ತು ಪೈಪ್ಗಳ) ಮಾರಾಟ ಅಂಗಡಿ ಇಟ್ಟುಕೊಳ್ಳು ನಾಲ್ಕುವರಿ ಲಕ್ಷರುಪಾಯಿಗಳನ್ನು ನನ್ನ ತಂದೆ ತಾಯಿಯವರು ಕೊಟ್ಟಿರುತ್ತಾರೆ. ನಾನು ಗಂಡನ ಮನೆಯಲ್ಲಿ ಗಂಡ ಹಾಗೂ ಸಂಬಂದಿಕರ ಜೊತೆಯಲ್ಲಿ ಎರಡು ತಿಂಗಳು ಚೆನ್ನಾಗಿ ಇದ್ದೆ. ಆನಂತರ ನನ್ನ ಗಂಡ ನನಗೆ ಒಂದು ಬೈಕ ಬೇಕು ಅಂತಾ ಮಾನಸಿಕ ದೈಹಿಕ ಕಿರಕೂಳ ನೀಡಿದಾಗ ಈ ವಿಷಯ ನಾನು ನನ್ನ ತಂದೆ ತಾಯಿಗೆ ಹಾಗೂ ಅಣ್ಣ ತಮ್ಮಂದಿರರಿಗೆ ತಿಳಿಸಿದಾಗ ಅವರು ತಮ್ಮ ಹತ್ತಿರ ಇದ್ದ ಒಂದು ಸೈಕಲ ಮೊಟಾರನ್ನು ಕೊಡಿಸಿದರು.ನಂತರ ಸ್ವಲ್ಪ ದಿನಗಳ ನಂತರ ನಮ್ಮ ತಂದೆ ತಾಯಿಯವರು ಕೊಡಿಸಿದ ಸೈಕಲ ಮೊಟಾರನ್ನು ಮರಳಿ ಕೊಟ್ಟಿದ್ದು. ನಂತರ ನನ್ನ ಕೊರಳಲ್ಲಿ ಇದ್ದ ಒಂದು ತೊಲಿ ಲಾಕೆಟನ್ನು ಮಾರಿ ಅದಕ್ಕೆ ಇನ್ನು ಸ್ವಲ್ಪ ಹಣ ಹಾಕಿ ಒಂದು ಸೈಕಲ ಮೊಟಾರನ್ನು ತೆಗೆದುಕೊಂಡ ಅದನ್ನು ಈಗ ಯಾರಿಗೋ ಕೊಟ್ಟಿದ್ದು. ಈಗ ಮತ್ತೆ ನನಗೆ ನನ್ನ ಗಂಡ ನನಗೆ ಕ್ರೋಷರ ಜೀಪ ಬೇಕು ನಾನು ಊರಲ್ಲಿ ಇದ್ದು ಜೀವನ ಮಾಡುತ್ತೇನೆ ನಿನ್ನ ತಂದೆ ತಾಯಿಯವರಿಂದ ಹಣ ಕೊಡಿಸು ಅಂತಾ ಮಾನಸಿಕ ದೈಹಿಕ ಕಿರಕೂಳ ನೀಡುತ್ತಿದ್ದಾಗ ನಾನು ನನ್ನ ತಂದೆ ತಾಯಿಗೆ ಈ ವಿಷಯವನ್ನು ತಿಳಿಸಿದಾಗ ನನ್ನ ಮೈಮೇಲೆ ಇದ್ದ ಆರುವರಿ ತೊಳಿ ಬಂಗಾರವನ್ನು ಮಾರಿ ನಾನು ಕೊಟ್ಟಿದ್ದು ಆ ಹಣದಿಂದ 2016 ನೇಯ ಸಾಲಿನಲ್ಲಿ ನವೆಂಬರದಲ್ಲಿ ಒಂದು ಕ್ರೋಷರ ಜೀಪನ್ನು ತೆಗೆದುಕೊಂಡನು. ಈಗ್ಗೆ ಮೂರು ತಿಂಗಳ ಹಿಂದೆ ಬ್ಯಾಂಕ ಸಾಲ ಮಾಡಿದ್ದರಿಂದ ಹಣ ಕಟ್ಟದ ಕಾರಣ ಕ್ರೋಷರ ಜೀಪನ್ನು ಬ್ಯಾಂಕಿನವರು ತೆಗೆದುಕೊಂಡು ಹೋಗಿದ್ದು.ನಂತರ ಈಗ ಎರಡು ತಿಂಗಳಿಂದ ನನಗೆ ನನ್ನ ಗಂಡ ಇನ್ನೊಂದು ಜೀಪನ್ನು ತರುತ್ತೇನೆ ಎರಡು ಲಕ್ಷ ರುಪಾಯಿಗಳನ್ನು ತವರು ಮನೆಯಿಂದ ತೆಗೆದುಕೊಂಡು ಬಾ ಇಲ್ಲ ಅಂದರೆ ಮನೆಯಲ್ಲಿ ಇರಬೇಡ ನಾನು ಇನ್ನೊಂದು ಮದುವೆಯನ್ನು ಮಾಡಿಕೊಳ್ಳುತ್ತೇನೆ ನೀನು ಇಲ್ಲೆ ಇದ್ದರೆ ನಿನ್ನ ಜೀವ ಸಹಿತ ಹೊಡೆಯುತ್ತೇನೆ ನಿನಗೆ ಮಕ್ಕಳಾಗಿಲ್ಲಾ ರಂಡಿ ಬೋಸಡಿ ಅಂತಾ ನನಗೆ ಮಾನಸಿಕ ದೈಹಿಕ ಕಿರಕೂಳ ನೀಡುತ್ತಾ ಬಂದಿದ್ದು. ನಾನು ನನ್ನ ತಂದೆ ತಾಯಿಯವರಿಗೆ ಈ ವಿಷಯ ಹೇಳಿದರು ಎಷ್ಟು ಸಲ ಹಣ ಕೊಡಬೇಕು ನಿನ್ನ ಗಂಡನಿಗೆ ಅಂತಾ ಅವರು ನನಗೆ ಹೇಳಿದರು ನಾನು ತರದೇ ಇದ್ದಾಗ ನಿನ್ನೆ ದಿನಾಂಕ 10-09-2017 ರಂದು ರಾತ್ರಿ 10-30 ಪಿ ಎಂ ದ ಸುಮಾರಿಗೆ ಮನೆಯಲ್ಲಿ ಇಡ್ಲೂರದಲ್ಲಿ ಇರುವಾಗ ನನ್ನ ಗಂಡ ನನಗೆ ಬೆಲ್ಟದಿಂದ ಹಾಗೂ ಕೈಯಿಂದ ಎಡಗಣ್ಣಿನ ಕೆಳಬಾಗಕ್ಕೆ. ಹಾಗೂ ಎಡಗೈಗೆ. ತುಟಿಗೆ. ಹಾಗೂ ಬೆನ್ನಿಗೆ ಹೊಡೆ ಬಡೆ ಮಾಡಿದ್ದು ಆಗ ನಾನು ಚಿರಾಡಿದಾಗ ನಮ್ಮ ಅತ್ತೆ ಮಾವ ಬಂದು ಬಿಡಿಸಲು ಬಂದಾಗ ಬಾಗಿಲ ತೆರೆಯಲಿಲ್ಲಾ. ನಂತರ ಪಕ್ಕದ ಮನೆಯವರು ಕಿಷ್ಟಪ್ಪ ಕುರಬುರ ಇವರು ಬಂದು ಕೇಳಿಕೊಂಡರು ಬಿಡಲಿಲ್ಲಾ. ನಂತರ ಆತನು ಮಲಗಿಕೊಂಡ ನಂತರ ನಾನು ನನ್ನ ತಂದೆ ತಾಯಿಗೆ ಈ ವಿಷಯವನ್ನು ತಿಳಿಸಿದಾಗ ಅವರು ಇಂದು ಬೆಳೆಗ್ಗೆ ಬಂದು ನನಗೆ ವಿಚಾರಿಸಿಕೊಂಡು ಠಾಣೆಗೆ ಬರಲು ತಡವಾಗಿದ್ದು.ಕಾರಣ ನನ್ನ ಗಂಡ ನನಗೆ ಮಾನಸಿಕ ದೈಹಿಕ ಕಿರಕೂಳ ನೀಡಿ ಜೀವದ ಬೆದರಿಕೆಯನ್ನು ಹಾಕಿದ ನನ್ನ ಗಂಡನ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು ನನಗೆ ಉಪಚಾರಕ್ಕಾಗಿ ಕಳುಹಿಸಿಕೊಡಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 171/2017 ಕಲಂ 498(ಎ) 323.324.504.506.ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಶಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.   
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 93/2017 ಕಲಂ 87 ಕೆಪಿ ಯ್ಯಾಕ್ಟ;- ದಿನಾಂಕ 11/09/2017 ರಂದು 4.15 ಪಿಎಮ್ ಕ್ಕೆ ಆರೋಪಿತರೆಲ್ಲರೂ  ಶಿರವಾಳ ಗ್ರಾಮದ ಹಣಮಂತ ದೇವರ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿಎಸ್ಐ ಸಾಹೇಬರು ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ನಗದು ಹಣ 15280/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಜಪ್ತಿಪಡಿಸಿಕೊಂಡು 4.15 ಪಿಎಮ್ ದಿಂದ 5.15 ಪಿಎಮ್ ವರೆಗೆ ಜಪ್ತಿಪಡಿಸಿಕೊಂಡು 06.00 ಪಿಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಹಾಗೂ ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 7.30 ಪಿಎಮ್.ಕ್ಕೆ ಠಾಣೆ ಗುನ್ನೆ ನಂ:93/2017 ಕಲಂ 87 ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 145/2017 ಕಲಂ 323 324 354 504 506 498(ಎ) ಸಂಗಡ 34 ಐಪಿಸಿ;- ಪಿಯರ್ಾಧಿ ಮಗಳಾದ ಶಿವನಮ್ಮ ಇವಳು ಕಾಮನಟಗಿ ಗ್ರಾಮದ ಪರಮಣ್ಣ ತೋಳದಿನ್ನಿ ಈತನಿಗೆ ಸುಮಾರು 5 ವರ್ಷಗಳ ಹಿಂದೆ ಪ್ರೀತಿ ಮಾಡಿದ್ದರಿಂದ ಫಿರ್ಯಾಧಿಯು ಅದನ್ನು ಒಪ್ಪಿಕೊಂಡು ಪ್ರಮುಖರ ಸಮಕ್ಷಮದಲ್ಲಿ ಪರಮಣ್ಣನೊಂದಿಗೆ ಮದುವೆ ಮಾಡಿದ್ದು ಪರಮಣ್ಣನು ಮದುವೆಯಾಗಿ 4 ವರ್ಷಗಳವರೆಗೆ ಹೆಂಡತಿಯೊಂದಿಗೆ ಚೆನ್ನಾಗಿದ್ದು ಎರಡು ಮಕ್ಕಳು ಆಗಿದ್ದು, ಈ ಒಂದು ವರ್ಷದಿಂದ ಪರಮಣ್ಣ ಈತನು ತನ್ನ ತಂದೆ ತಾಯಿ ತಮ್ಮನ ಮಾತು ಕೇಳಿ ಫಿರ್ಯಾದಿದಾರರ ಮನೆಗೆ ಹೋಗಿ ತನ್ನ ಅತ್ತೆ ಮತ್ತು ಹೆಂಡತಿಗೆ ತೊಂದರೆ ನೀಡಿದ್ದು ಅಲ್ಲದೆ ದಿ:25/08/2017 ರಂದು ರಾತ್ರಿ 8 ಗಂಟೆ ಸುಮಾರಿಗೆ ಪರಮಣ್ಣನು ತನ್ನ ತಂದೆ ತಾಯಿ ತಮ್ಮನೊಂದಿಗೆ ಫಿರ್ಯಾದಿ ಮನೆಗೆ ಹೋಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ, ಬೆಲ್ಟದಿಂದ ತನ್ನ ಹೆಂಡತಿಗೆ ಹಾಗೂ ಬಿಡಿಸಲು ಬಂದ ಅತ್ತೆಗೆ ಹೊಡೆ ಬಡೆ ಮಾಡಿದ್ದು ಅಲ್ಲದೆ ಇತರರು ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿ ದೈಹಿಕ ಮತ್ತು ಮಾನಸಿಕ ತೊಂದರೆ ನೀಡಿರುತ್ತಾರೆ ಅಂತಾ ಇತ್ಯಾದಿ ಫಿರ್ಯಾಧಿ ಸಾರಾಂಶದ ಮೇಲಿಂದ ಮೇಲ್ಕಂಡ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ: 229 (ಎ) ಐಪಿಸಿ;- ಕಾಳಪ್ಪ ಎಮ್. ಬಡಿಗೇರ್ ಪಿ.ಎಸ್.ಐ ಕೊಡೇಕಲ್ ಪೊಲೀಸ್ ಠಾಣೆ ಸರಕಾರಿ ತಫರ್ೆಯಿಂದ ಫಿರ್ಯಾಧಿ ಸಲ್ಲಿಸುವುದೇನಂದರೆ ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ. 27/2010 ಸಿಸಿ ನಂ:139/2011 ನೇದ್ದರಲ್ಲಿ ಆರೋಪಿತರಾದ ಎ-1 ಶಂಕ್ರ್ಯಾ @ ಶಂಕ್ರೆಪ್ಪ ತಂದೆ ಮುರಳಿ ಬೋಸ್ಲೇ ವಯ:50, ಎ-2 ಚಂದ್ರಪ್ಪ ತಂದೆ ರಾಮಪ್ಪ ಪವಾರ ವಯಃ48, ಎ-3 ಚಿನ್ನಾರೆಡ್ಡಿ ತಂದೆ ತುರಿಯ ಭೋಸ್ಲೆ, ವಯ:21, ಎ-4 ಶಿವಪ್ಪ ತಂದೆ ತುರಿಯ ಭೋಸ್ಲೆ ವಯ:19 ವರ್ಷ, ಎಲ್ಲರೂ ಸಾ:ನೆಲ್ಲೂರೂ ತಾ:ಚನ್ನಗಿರಿ, ಜಿಲ್ಲಾ:ದಾವಣಗೇರೆ ಇವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರದಿಂದ ಷರತ್ತು ಬದ್ದ ಜಾಮೀನು ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರಾಗದೆ ಇರುವುದರಿಂದ ನ್ಯಾಯಾಲಯವು ಆರೋಪಿತರ ವಿರುದ್ಧ ಮೇಲಿಂದ ಮೇಲೆ ದಸ್ತಗಿರಿ ವಾರೆಂಟ್ ಹೊರಡಿಸಿದ್ದು, ವಾರೆಂಟ್ ಸಿಬ್ಬಂದಿಯವರಾದ ಶಿವಶರಣಪ್ಪ ಸಿಹೆಚ್ಸಿ-125 ಮತ್ತು ಬಾಬು ರಾಠೋಡ ಸಿಹೆಚ್ಸಿ-121 ರವರು ವಾರೆಂಟ್ ಜಾರಿಗಾಗಿ ಅನೇಕ ಬಾರಿ ಆರೋಪಿತರ ಗ್ರಾಮಕ್ಕೆ ಹೋದಾಗ ಆರೋಪಿತರು ಗ್ರಾಮದಲ್ಲಿ ಹಾಜರ ಇರುವುದಿಲ್ಲ. ನ್ಯಾಯಾಲಯವು ದಿನಾಂಕ:21/04/2017 ರಿಂದ ದಿನಾಂಕ:04/08/2017 ವರೆಗೆ ವಿಚಾರಣೆಗೆ ಹಾಜರಾಗುಂತೆ ವಾರಂಟ ಹೊರಡಿಸಿದ್ದು, ಆರೋಪಿತರು ನ್ಯಾಯಾಲಯಕ್ಕೆ ಹಾಜರಾಗದೆ ನ್ಯಾಯಾಲಯದ ಷರತ್ತುಗಳನ್ನು ಮುರಿದು ನಾಪತ್ತೆಯಾಗಿದ್ದಾರೆ. ಸದರಿಯವರು ಐಪಿಸಿ ಕಾಯ್ದೆ 229(ಎ) ತಿದ್ದುಪಡಿಯಂತೆ ನ್ಯಾಯಾಲಯಕ್ಕೆ ಜಾಮೀನು ನೀಡಿ ಷರತ್ತು ಬದ್ಧ ಜಾಮೀನು ಪಡೆದು ಷರತ್ತನ್ನು ಉಲ್ಲಂಘಿಸಿ ಗೈರು ಹಾಜರಾಗಿದ್ದು, ಇದು ಸಂಜ್ಞೇಯ ಅಪರಾಧ ಆಗಿರುವುದರಿಂದ ಸದರಿ ಆರೋಪಿತರ ವಿರುದ್ಧ ಇಂದು ದಿನಾಂಕ: 11/09/2017 ರಂದು 14:30 ಪಿಎಮ್ ಕ್ಕೆ ಸರಕಾರಿ ತಫರ್ೆಯಿಂದ ಗುನ್ನೆ ನಂ. 98/2017 ಕಲಂ: 229(ಎ) ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡಿರುತ್ತೇನೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 361/2017.ಕಲಂ. 366 504 ಸಂ 149  ಐ.ಪಿ.ಸಿ. ;- ದಿನಾಂಕ 11/09/2017 ರಂದು ಸಾಯಂಕಾಲ 16-00 ಗಂಟೆಗೆ ಶ್ರೀ ಬಾಬು ತಂದೆ ಮಲ್ಲಪ್ಪ ಬಂದಳ್ಳಿ ವ|| 41 ಜಾ|| ಹೊಲೆಯ ಉ|| ಒಕ್ಕಲುತನ ಸಾ|| ಸನ್ನತಿ ತಾ|| ಚಿತಾಪೂರ ಜಿ|| ಕಲಬುರಗಿ ಹಾ|| ವ|| ಲಕ್ಷ್ಮೀ ನಗರ ಶಹಾಪೂರ ಇವರು ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ದೂರನ್ನು ಹಾಜರ ಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 08/09/2017 ರಂದು ಸಾಯಂಕಾಲ 4-20 ಗಂಟೆಯ ಸುಮಾರಿಗೆ ನನ್ನ ಮಗಳು ಮೇಘಾ ಗಂಡ ಹಣಮಂತ ವ|| 21 ಮತ್ತು ನನ್ನ ಅಣ್ಣನ ಮಗನಾದ ಸೋಮಲಿಂಗಪ್ಪ ತಂದೆ ನಾಗಪ್ಪ ಇಬ್ಬರು ಕೂಡಿ ಕಿರಾಣಿ ಸಾಮಾನು ತರಲು ಬಜಾರ ಕಡೆಗೆ ಹೊದರು ತದನಂತರ 6-30 ರ ಸುಮಾರಿಗೆ ನಮ್ಮ ಅಣ್ಣನ ಮಗ ಸೋಮಲಿಂಗಪ್ಪನು ಮನೆಗೆ ಬಂದು ನಮಗೆ ತಿಳಿಸಿದ್ದೆನೆಂದರೆ. ನಾನು ಮತ್ತು ನನ್ನ ಅಕ್ಕ ಮೇಘಾ ಇಬ್ಬರು ಕೂಡಿ ಬಜಾರ ದಿಂದ ಮನೆಯ ಕಡೆಗೆ ಬರುತ್ತಿದ್ದಾಗ ದೇವಿನಗರದಲ್ಲಿರುವ ಮರೆಮ್ಮ ದೇವಸ್ಥಾನದ ಹತ್ತಿರ ಸಾಯಂಕಾಲ 6-00 ಗಂಟೆಯ ಸುಮಾರಿಗೆ ನಮ್ಮ ಗ್ರಾಮದವರಾದ 1] ವಿಶ್ವರಾಧ್ಯ ತಂದೆ ಮರೇಪ್ಪ 2] ಹಣಮಂತ ತಂದೆ ಮಲ್ಲಯ್ಯ 3] ಶರಬಣ್ಣ ತಂದೆ ಸೋಮಪ್ಪ 4] ತಿಪ್ಪಣ್ಣ ತಂದೆ ಸಿದ್ದಪ್ಪ 5] ಮಲ್ಲಪ್ಪ ತಂದೆ ಶರಣಪ್ಪ 6] ಪ್ರೇಮಲತಾ ಗಂಡ ಹಣಮಂತ ಇವರೆಲ್ಲರು ಕೂಡಿ ಮರೆಮ್ಮ ದೇವಿಯ ಗುಡಿ ಹತ್ತಿರ ನಿಂತ್ತಿದ್ದು. ನಾವು ಗುಡಿಯ ಹತ್ತಿರ ಬರುತ್ತಿದ್ದಂತೆ ನಮ್ಮನ್ನು ನೋಡಿ ಅಲ್ಲಿಯೆ ನಿಂತಿದ್ದ ವಿಶ್ವಾರಾಧ್ಯ ಹಾಗು ಹಣಮಂತ, ತಿಪ್ಪಣ್ಣ, ಇವರು ನಮ್ಮ ಅಕ್ಕ ಮೇಘಾಳನ್ನು ಬಲವಂತವಾಗಿ ಹಿಡಿದುಕೊಂಡು ಅಲ್ಲಿಯೆ ನಿಂತಿದ್ದ ಅವರ ಕಾರಿನಲ್ಲಿ ಹಾಕುತ್ತಿರುವಾಗ ನನ್ನ ಅಕ್ಕ ಚಿರ್ಯಾಡುವಸ್ಟರಲ್ಲಿ ಪ್ರೇಮಲತಾ ಗಂಡ ಹಣಮಂತ ಈಕೆಯು ಮೇಗಾಳ ಬಾಯಿ ಒತ್ತಿಹಿಡಿದು ಕಾರಿನಲ್ಲಿ ಕೂಡಿಸಿದರು. ಶರಬಣ್ಣ ತಂದೆ ಸೋಮಪ್ಪ, ಮಲ್ಲಪ್ಪ ತಂದೆ ಶರಣಪ್ಪ ಇವರು ನನಗೆ ಅವಾಚ್ಚ ಶಬ್ದಗಳೀಂದ ಬೈದು ದಬ್ಬಿಕೊಟ್ಟು ನಾನು ಚಿರ್ಯಾಡುವ ಸಪ್ಪಳ ಕೇಳಿ ಅಲ್ಲಿಯೆ ಹೊರಟ್ಟಿದ್ದ ನಮ್ಮ ಸಂಬದಿಕರಾದ, ದೇವಿಂದ್ರಪ್ಪ ತಂದೆ ತಿಮ್ಮಪ್ಪ, ಸಾಯಿಬಾಬಾ ತಂದೆ ನಾಗಪ್ಪ ಇವರು ಬರುಷ್ಟರಲ್ಲಿ ಅವರೆಲ್ಲರು ಕೂಡಿ ಕಾರ ಮತ್ತು ಮೋಟರ್ ಸೈಕಲ್ ಮೇಲೆ ಹೋದರು ಅವಸರದಲ್ಲಿ ಕಾರ ಮತ್ತು ಮೋಟರ್ ಸೈಕಲ್ ನಂಬರ ನೋಡಿರುವದಿಲ್ಲಾ ಅಂತ ಮನೆಗೆ ಬಂದು ತಿಳೀಸಿದ ನಂತರ. ನಾನು ಮತ್ತು ನಮ್ಮ ಅಣ್ಣ ನಾಗಪ್ಪ ತಂದೆ ಮಲ್ಲಪ್ಪ ಶಹಾಪೂರ ನಗರದಲ್ಲಿ ಅಲ್ಲಲ್ಲಿ ವಿಚಾರ ಮಾಡಲಾಗಿ ಎಲ್ಲಿಯು ಮಾಹಿತಿ ಸಿಕ್ಕಿರುವದಿಲ್ಲಾ ಈ ಬಗ್ಗೆ ನಮ್ಮ ಮನೆಯಲ್ಲಿ ಹಿರಿಯರೋಂದಿಗೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು. ನನ್ನ ಮಗಳನ್ನು ಯಾವದೊ ಉದ್ದೆಶದಿಂದ ಅಪಹರಣ ಮಾಡಿಕೋಂಡು ಹೋದವರ ಮೇಲೆ ನಮುದು ಮಾಡಿದ 6 ಜನರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 361/2017 ಕಲಂ. 366. 504. ಸಂ.149 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 267/2017 ಕಲಂಃ  279.337.338 ಐಪಿಸಿ;- ದಿನಾಂಕ 11/09/2017 ರಂದು 3-45 ಪಿ,ಎಂ ಕ್ಕೆ ಜಿ,ಜಿ,ಹೆಚ್ ಸುರಪೂರದಿಂದ ರಸ್ತೆ ಅಪಘಾತವಾದ ಬಗ್ಗೆ ಎಂ ಎಲ್.ಸಿ ಇದೆ ಅಂತ ಪೋನ ಮುಖಾಂತರ ಮಾಹಿತಿ ಬಂದ ಮೇಲೆ 4.00 ಪಿ,ಎಂ ಕ್ಕೆ ನಾನು ಮಂಜುನಾಥ ಹೆಚ್ ಸಿ-176 ಸುರಪೂರ ಠಾಣೆ ಸರ್ಕಾರಿ ಆಸ್ಪತ್ರೆ ಸೂರಪೂರಕ್ಕೆ ಬೇಟಿ ಮಾಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಪಿರ್ಯಾದಿ ಶ್ರೀ ದುರ್ಗಪ್ಪ ತಂದೆ ಮರೆಪ್ಪ ಚಿಂದುಳ್ಳಿ ವಯ|| 26 ವರ್ಷ ||ವ್ಯಾಪಾರ ಜಾ|| ಚಿಂದುಳ್ಳಿ ಸಾ|| ಸತ್ಯಂಪೇಟ ವಣಕ್ಯಾಳ ಸುರಪೂರ ಇವರ ಹೇಳಿಕೆಯನ್ನು ಪಡೆಯಲಾಗಿ ಅದರ ಸಾರಾಂಶವೆನೆಂದರೆ ಇಂದು ದಿನಾಂಕ:11/09/2017 ರಂದು ಮದ್ಯಾಹ್ನ 3.10 ಪಿಎಂ ಕ್ಕೆ ಪಿರ್ಯಾದಿ ಮತ್ತು ಅವರ ಏರಿಯಾದ ಮರೆಪ್ಪ ತಂದೆ ಸಣ್ಣ ಇರಪ್ಪ ಪೂಜಾರಿ ಇಬ್ಬರೂ ತಮ್ಮ ಎರಿಯಾಕ್ಕೆ ಹೋಗಲು ಸುರಪೂರದ ವೆಂಕಟಪ್ಪ ನಾಯಕ ಸರ್ಕಲದಲ್ಲಿ ನಿಂತಾಗ ಪಿರ್ಯಾದಿಯ ಗೆಳೆಯ ಮರೆಪ್ಪ ತಂದೆ ಪಿಡ್ಡಪ್ಪ ಕೋಳ್ಳಿ ಈತನು ತನ್ನ ಮೋಟಾರ ಸೈಕಲ ನಂ ಕೆಎ- 33 ಎಲ್-6759 ನೇದ್ದರ ಮೇಲೆ ಅಲ್ಲಿಗೆ ಬಂದಾಗ ಪಿರ್ಯಾದಿಯು ನನಗೆ ಮತ್ತು ಮರೆಪ್ಪ ತಂದೆ ಸಣ್ಣ ಈರಪ್ಪ ಪೂಜಾರಿ ಇಬ್ಬರಿಗೆ ನಮ್ಮ ಕಾಲೋನಿಗೆ ಬಿಡುವಂತೆ ಹೇಳಿದಾಗ ನಮ್ಮ ಗೇಳೆಯನ ಮೋಟಾರ ಸೈಕಲ ಮೇಲೆ  ನಾವು ಮೂರು ಜನರು ಹೋಗುವಾಗ 3-20 ಗಂಟೆಗೆ ಸೂರಪೂರ- ಹತ್ತಿ ಗೂಡುರ ಮುಖ್ಯ ರಸ್ತೆಯ ರೂರಲ್ ಗೋಡವಾನ ಹತ್ತಿರ ನಮ್ಮ ಮನೆಯ ತಿರುವಿನ ಹತ್ತಿರ ಕೆ,ಎಸ್,ಆರ್,ಟಿ,ಸಿ ಬಸ್ಸ ನಂ ಕೆಎ-38 ಎಫ್- 799 ನೆದ್ದರ ಚಾಲಕ zÉÆAr¨Á FvÀ£ÀÄ ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಹಿಂದಿನಿಂದ ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ  ಗಂಬೀರ ಮತ್ತ ಸಾದಾ ಸ್ವರೂಪದ  ಗಾಯ ಪಡಿಸಿದ ಬಸ್ಸ ಚಾಲಕ ದೋಂಡಿಬಾ ಈತನ ಮೇಲೆ ಕಾನುನು ಕ್ರಮ ಜರುಗಿಸಲು ವಿನಂತಿ ಅಂತ ಹೇಳಿಕೆ ಪಿರ್ಯಾದಿ ಕೊಟ್ಟಿದ್ದು ಪಡೆದುಕೊಂಡು 5-15 ಪಿ, ಕ್ಕೆ ಠಾಣೆಗೆ ಬಂದು ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 267/2017 ಕಲಂ 279.337.338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೇ ಕೈ ಕೊಂಡೆನು,

No comments: