ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ:
11-10-2017
ಧನ್ನೂರಾ
ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ251/17 ಕಲಂ 279, 304 ಐಪಿಸಿ ಜೊತೆ 187 ಐಎಂವಿ ಅಕ್ಟ :-
ದಿ: 10-10-2017 ರಂದು ಫಿರ್ಯಾದಿ ಶ್ರೀನಿವಾಸ ತಂದೆ ಝರೆಪ್ಪಾ ಸಿಂದೆ
ವಯ; 30 ವರ್ಷ ಜಾತಿ; ಎಸ್.ಸಿ ದಲಿತ ಉ; ಕೂಲಿ ಕೆಲಸ ಸಾ; ಮುರಾಳ ತಾ: ಭಾಲ್ಕಿ ರವರು
ನೀಡಿದ ದೂರಿನ ಸಾರಾಂಶವೆನೆಂದರೆ ಫಿರ್ಯಾದಿಗೆ 3 ಜನ ಮಕ್ಕಳಿದ್ದು ಒಂದು ಗಂಡು ಇಬ್ಬರು ಹೆಣ್ಣು
ಮಕ್ಕಳು ಇರುತ್ತಾರೆ. ಉಷಾರಾಣಿ ವಯ; 8 ವರ್ಷ
ಇವಳು ನಮ್ಮೂರ ಹಿರಿಯ ಪ್ರಾಧಮಿಕ ಶಾಲೆಯಲ್ಲಿ ಎರಡನೆ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ದಿನಾಂಕ; 10/10/2017
ರಂದು ಬೆಳಗ್ಗೆ 10 ಗಂಟೆಗೆ ಪ್ರತಿನಿತ್ಯದಂತೆ ಉಷಾರಾಣಿ ಇವಳು ಶಾಲೆಗೆ ಹೊಗಿರುತ್ತಾಳೆ ಹೀಗಿರುವಲ್ಲಿ
ದಿನಾಂಕ: 10/10/2017 ರಂದು 1600 ಗಂಟೆಗೆ
ಫಿರ್ಯಾದಿ ಮಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್.ನಂ. ಕೆ.ಎ.38-ಎಫ್-941 ನೇದರ ಚಾಲಕ ವೀರಭದ್ರಪ್ಪಾ ಮಾಕಾ ಸಾ; ದಾಡಗಿ ಇತನು ತನ್ನ ಬಸ್ಸನ್ನು ಭಾಲ್ಕಿ ಕಡೆಯಿಂದ ಬೀದರ ಕಡೆಗೆ
ಅತಿ ಜೋರಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶಾಲೆಯಿಂದ ತನ್ನ ಮನೆಯ ಕಡೆಗೆ ಹೋಗುತ್ತಿದ್ದ
ಉಷಾರಾಣಿ ಇವಳಿಗೆ ಡಿಕ್ಕಿ ಹೊಡೆದಿರುತ್ತಾನೆ. ಸದರಿ ಅಪಘಾತದಿಂದ
ಉಷಾರಾಣಿ ಇವಳ ಬಲಗಾಲ ರೊಂಡಿ ಮತ್ತು ಬಲಗೈ ಮಲೆ ಬಸ್ಸಿನ ಮುಂದಿನ ಗಾಲಿ ಹಾಯ್ದ ಹೊಗಿದ್ದು ಭಾರಿ ಸ್ವರುಪದ
ರಕ್ತಗಾಯ ಆಗಿದ್ದರಿಂದ ಚಿಕಿತ್ಸೆ ಕುರಿತು ಅಂಬ್ಯುಲೆನ್ಸ್ನಲ್ಲಿ ಬೀದರ
ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿರುತ್ತಾಳೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment