ಫರಹತಾಬಾದ
ಅಪಘಾತ ಪ್ರಕರಣ:- ದಿನಾಂಕ
23/09/2017 ರಂದು 8.30 ಪಿ.ಎಮಕ್ಕೆ
ಹುಣಸಿ ಹಡಗಿಲ- ಕಲಬುರಗಿ ರೋಡಿನ ಮಾರ್ಗ ಮದ್ಯದಲ್ಲಿರುವ ಪ್ರಭು ದುದ್ದಗಿ ಇವರ ಹೊಲದ ಪಕ್ಕದ
ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ-32 ಇಪಿ-8300 ನೇದ್ದರ ಚಾಲಕ ಮಲ್ಲಿಕಾಜರ್ುನ ಧನ್ನೂರ ಸಾಃ ಹುಣಸಿ ಹಡಗಿಲ ತನ್ನ ಮೋಟಾರ ಸೈಕಲ ನಂ ಕೆಎ-32
ಇಪಿ-8300 ನೇದ್ದನ್ನು ಅತೀ ವೇಗ ಮತ್ತು
ಅಲಕ್ಷ್ಯತನದಿಂದ ಚಲಾಯಿಸಿ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಸ್ಕೀಡಾಗಿ ಬಿದಿದ್ದು, ಶ್ರೀ ಶ್ಯಾಮಸುಂದರ ತಂದೆ ಪ್ರಭುಲಿಂಗ ಮಾಲಿ ಪಾಟೀಲ ವಃ 24 ವರ್ಷ
ಜಾಃ ಲಿಂಗಾಯತ ಉಃ ಖಾಸಗಿ ಚಾಲಕ ಸಾಃ ಹುಣಸಿ ಹಡಗಿಲ ತಾ.ಜಿಃ ಕಲಬುರಗಿ ಭಾರಿ ರಕ್ತಗಾಯ ಮತ್ತು
ಗುಪ್ತಗಾಯಗಳಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಪರಹತಾಬಾದ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಮುಧೋಳ ಪೊಲೀಸ ಠಾಣೆ:
ಅಪಘಾತ ಪ್ರಕರಣ: ದಿನಾಂಕ: 28-09-2017 ರಂದು ಮಹ್ಮದ
ಮೌಲಾನಾ ತಂದೆ ಶೇಖ ಅಹೇಮದ ಸಾಬ ಹಾಜಿವಲೆ ಸಾ: ಕೊಂತನಪಲ್ಲಿ ಗ್ರಾಮ ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದು
ಅದರಲ್ಲಿ ದಿ: 28-09-17 ರಂದು ನಾನು ಹಾಗು ನಮ್ಮ ತಮ್ಮನಾದ ಚಾಂದಪಾಶಾ ತಂದೆ ಶೇಖ ಅಹೇಮದ ಸಾಬ
ಹಾಜಿವಾಲೆ ಮತ್ತು ಲೇಬರ ಜನರಾದ ಚುಕ್ಕುಬೆಗಂ, ವೆಂಕಟಮ್ಮ & ನಾಗಪ್ಪ ಇಂಟನಕಿ ಸಾ: ಎಲ್ಲರೂ
ಕೊಂತನಪಲ್ಲಿ ಗ್ರಾಮ ಹೀಗೆ ಎಲ್ಲರೂ ಕೂಡಿ ನಮ್ಮ ಟ್ಯಾಕ್ಟರ ನಂ ಕೆಎ32ಟಿಎ1351-52 ನೇದ್ದರಲ್ಲಿ ಖಣಿಯಿಂದ
ನಮ್ಮ ಹೊಲದಲ್ಲಿ ಏತ್ತಿನ ಕೊಟ್ಟಿಗೆ ಕಟ್ಟುವ ಸಲುವಾಗಿ ಕಲ್ಲುಗಳು ತುಂಬಿಕೊಂಡು ಬರಲು ಹೋಗಿದ್ದು,
ಅಲ್ಲಿ ಖಣಿಯಲ್ಲಿ ಟ್ಯಾಕ್ಟರಲ್ಲಿ ಟ್ರಾಲಿಯಲ್ಲಿ ಫರ್ಸಿ ಕಲ್ಲುಗಳು ತುಂಬಿಕೊಂಡು ವಾಸಪ ಖಣಿಯಿಂದ
ನಮ್ಮ ಹೊಲಕ್ಕೆ ಬರುತ್ತಿದ್ದಾಗ ಸದರಿ ಟ್ಯಾಕ್ಟರದಲ್ಲಿ ಮುಂದುಗಡೆ ಡ್ರೈವರ್ ಹತ್ತಿರ ನಮ್ಮ ತಮ್ಮ
ಚಾಂದಪಾಶಾ ಕುಳಿತುಕೊಂಡಿದ್ದು, ನಾನು ಹಾಗು ಲೇಬರ ಜನರು ಕೆಳಗಡೆ ಇದ್ದು, ಸದರಿ ಟ್ಯಾಕ್ಟರ
ಚಾಲಕನಾದ ಮಹ್ಮದ ಏಕ್ಬಲ್ ತಂದೆ ಅಬ್ದುಲ ಮಜೀದ ಇನಾಮ್ದಾರ ಇತನು ಟ್ಯಾಕ್ಟರನ್ನು ಅತಿವೇಗ ಹಾಗು
ನಿಷ್ಳಾಜಿತನಿಂದ ನಡೆಯಿಸುತ್ತಾ ರಸ್ತೆಯ ಎಡ ಬದಿಯ ತೆಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಮಾಡಿದ್ದು
ಇದರಿಂದ ಟ್ಯಾಕ್ಟರದಲ್ಲಿ ಕುಳಿತಿದ್ದ ನಮ್ಮ ತಮ್ಮ ಚಾಂದಪಾಶ ಇತನು ಕೆಳಗೆ ಬಿದ್ದು, ಆತನ ಮೇಲೆ
ಟ್ಯಾಕ್ಟರದಲ್ಲಿದ್ದ ಫರ್ಸಿಕಲ್ಲುಗಳು ಬಿದಿದ್ದರಿಂದ ಇತನು ತಲೆಗೆ ಭಾರಿ ಗಾಯಹೊಂದಿ ಸ್ಥಳದಲ್ಲೇ
ಮೃತ ಪಟ್ಟಿದ್ದು ಟ್ಯಾಕ್ಟರ ಚಾಲಕನು ಅಪಘಾತ ಪಡಿಸಿ ಓಡಿ ಹೋಗಿದ್ದು, ಈ ಬಗ್ಗೆ ಟ್ಯಾಕ್ಟರ ಚಾಲಕನ
ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ಹೇಳಿಕೆ ಸಾರಂಶದ ಮೇಲಿಂದ ಮುಧೋಳ
ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment