Police Bhavan Kalaburagi

Police Bhavan Kalaburagi

Friday, October 13, 2017

KALABURAGI DISTRICT REPORTED CRIMES

ಅ ಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಭೌರಮ್ಮ ಗಂಡ ಈರಪ್ಪ ಹಸಗಿ ಸಾ: ಮಾಶಾಳ ಇವರ ಮಗಳಾದ ನಿಂಗಮ್ಮ ಇವಳಿಗೆ ಸುಮಾರು 02 ವರ್ಷಗಳ ಹಿಂದೆ ಬಗಲೂರ ಗ್ರಾಮದ ಪ್ರಕಾಶ ತಂದೆ ಶಂಕ್ರೆಪ್ಪ ಮಾದರ ಇತನೊಂದಿಗೆ ಮದುವೆ ಮಾಡಿಕೊಟಿದ್ದು. ಈಗ ಒಂದುವರೆ ವರ್ಷದಿಂದ ನನ್ನಮಗಳು ವಿಚಿತ್ರವಾಗಿ ವರ್ತನೆ ಮಾಡುವುದರಿಂದ ನನ್ನ ಮಗಳನ್ನು ನನ್ನ ಮನೆಯಲ್ಲಿ ಇಟ್ಟಿಕೊಂಡಿದ್ದು ನನ್ನ ಮಗಳು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 11-10-2017 ರಂದು ಮಧ್ಯಾಹ್ನ 01:30 ಗಂಟೆಗೆ ಮನೆಯಲ್ಲಿದ್ದ ಹೇನಿನ ಪುಡಿ ಸೇವನೆ ಮಾಡಿದ್ದು ಅವಳಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು ಉಪಚಾರ ಫಲಕಾರಿ ಯಾಗದೆ ದಿ: 11-10-2017 ರಂದು ರಾತ್ರಿ 09:30 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 11-10-2017 ರಂದು ಬೆಳಗ್ಗೆ 10.30 ಗಂಟೆಯ ಸುಮಾರಿಗೆ ನಾನು ಭೋಗೆಶ್ವರ ಶಾಲೆಗೆ ಬಂದು ನನ್ನ ಮಗನಿಗೆ ಊಟದ ಡಬ್ಬಿ ಕೊಟ್ಟು ಮರಳಿ ಮನೆಗೆ ಹೋಗುವ ಕುರಿತು ಬೆಳಗ್ಗೆ ಸಂತೋಷ ಕಾಲೋನಿ ಕ್ರಾಸ ಹತ್ತಿರ ಬರುತ್ತಿದ್ದಾಗ ನನ್ನ ಎದರುಗಡೆಯಿಂದ ನನ್ನ ದೊಡ್ಡಪ್ಪನ ಮಗಳಾದ ಗೌರಿ ಇವಳ ಗಂಡ ಅಣ್ಣಪ್ಪ ಮತ್ತು ಅಣ್ಣಪ್ಪನ ಅಣ್ಣನಾದ ಅಶೋಕ ಇಬ್ಬರು ಕೂಡಿಕೊಂಡು ಬಂದು ನನಗೆ ತಡೆದು ನಿಲ್ಲಿಸಿ ಅವರಲ್ಲಿ ಅಣ್ಣಪ್ಪ ಇತನು ಭೋಸಡಿ ಮಗನೆ ನಿಮ್ಮ ವಯಸ್ಸಾದ ತಂಗಿಗೆ ನನಗೆ ಕೊಟ್ಟು ಮದುವೆ ಮಾಡಿದ್ದಿರಿ ಈಗ ಅವಳಿಗೆ ಕರೆದುಕೊಂಡು ಹೋಗು ಅಂತಾ ನನಗೆ ದಬಾಯಿಸುತ್ತಿರಿ ರಂಡಿ ಮಕ್ಕಳೆ ನಿನಗೆ ಇವತ್ತು ಜೀವಂತ ಬಿಡುವದಿಲ್ಲಾ ಸೂಳಿ ಮಗನೆ ಅಂತಾ ಬೈಯುತ್ತಾ ತನ್ನ ಕೈ ಮುಷ್ಠಿಮಾಡಿ ನನ್ನ ಎಡಗಣ್ಣಿನ ಮೇಲೆ ಎದೆಗೆ ಮತ್ತು ಮುಖದ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ಆಗ ಅಶೋಕ ಇತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡುತ್ತಿದ್ದು ಸದರಿ ಜಗಳವನ್ನು ನೋಡಿ ರಸ್ತೆಯ ಮೇಲೆ ನಡೆದುಕೊಂಡು ಬರುತ್ತಿದ್ದ ನಮ್ಮ ಅತ್ತೆ ಭಾಗಿರಥಿ ಅಳಿಯ ಸಂತೋಷ ಇಬ್ಬರೂ ಬಂದು ಯಾಕೆ ರಸ್ತೆಯ ಮೇಲೆ ಜಗಳ ಮಾಡಿಕೊಳ್ಳುತ್ತಿರಿ ಮನೆಗೆ ಹೋಗಿ ಮಾತಾಡಿ ಅಂತಾ ಹೇಳಿದ್ದು ಆಗ ಅಣ್ಣಪ್ಪಾ ಇತನು ರಂಡಿ ಮಗನಿಗೆ ಬಿಡುವದಿಲ್ಲಾ ಇವನ ಸಂಗಡ ಏನು ಮಾತನಾಡುವದು ಇದೆ ಅಂತಾ ಬೈಯುತ್ತಾ ತನ್ನ ತಲೆಯಿಂದ ನನ್ನ ತಲೆಗೆ ಜೋರಾಗಿ ಗುದ್ದಿದ್ದು ಆಗ ನನಗೆ ಕಣ್ಣಿಗೆ ಕತ್ತಲೆ ಬಂದ ಹಾಗೆ ಆಗಿ ಅಲ್ಲಿಯೇ ಕುಸಿದು ಬಿದ್ದಿದ್ದು ನಾನು ಬಿದ್ದಿರುವದನ್ನು ನೋಡಿ ಅಣ್ಣಪ್ಪಾ & ಅಶೋಕ ಇಬ್ಬರೂ ನನಗೆ ಹೊಡೆಯುವದನ್ನು ಬಿಟ್ಟು ಅಲ್ಲಿಂದ ಹೋಗಿದ್ದು ಇರುತ್ತದೆ. ನಂತರ ನಮ್ಮ ಅತ್ತೆ ಭಾಗಿರಥಿ ಅಳಿಯ ಸಂತೋಷ ಇಬ್ಬರೂ ಕೂಡಿಕೊಂಡು ನನಗೆ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ ಅಂತಾ ಶ್ರೀ ವೈಜನಾಥ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ನರೋಣಾ ಠಾಣೆ : ಶ್ರೀಮತಿ.ವಿಜಯಲಕ್ಷ್ಮೀ ಗಂಡ ಪ್ರಲ್ಹಾದರಾವ ಕುಲಕರ್ಣಿ  ಇವರ ಹೆಸರನಿಂದ ನಮ್ಮ ಗ್ರಾಮದಲ್ಲಿ ರಾಜಶೇಖರ ತಂದೆ ಶಿವಪುತ್ರಪ್ಪ ಬುಜುರ್ಕೆ ಇವರ ಕೃಷಿ ಜಮೀನು  ಸರ್ವೆೇ ನಂ-58/6, 4 ಎಕರೆ 7 ಗುಂಟೆ ನೇದ್ದನ್ನು ಖರಿದಿಸಿ ಅವರಿಗೆ ಕೊಡಬೇಕಾದ ಸಂಪೂರ್ಣ ಹಣವನ್ನು ಕೊಟ್ಟು ಆಳಂದ ಉಪ-ನೊಂದಣಿ ಅಧಿಕಾರಿಗಳ ಕಛೇರಿಯಲ್ಲಿ ಖರದಿ ಪತ್ರದ ಮೂಲಕ ನೊಂದಣಿ ಮಾಡಿದ್ದು ಇರುತ್ತದೆ. ನಂತರ ರಾಜಶೇಖರ ಈತನ  ತಾಯಿ ಚಂದಮ್ಮ ಗಂಡ ಶಿವಪುತ್ರಪ್ಪ, ಅಕ್ಕ ಪಾರ್ವತಿ ಮತ್ತು ಅಣ್ಣ ಸಿದ್ದಾರೂಢ ಇವರುಗಳು ಆಳಂದ ಸಿವಿಲ್ ನ್ಯಾಯಲಯದಲ್ಲಿ ಸದರಿ ಆಸ್ತಿಯಲ್ಲಿ ತಮ್ಮ ಪಾಲು ಬರುತ್ತದೆ ಅಂತಾ ದಾವೆಯನ್ನು ಹಾಕಿದ್ದು ಅದರ ಓ.ಎಸ್.ನಂ-37/2017 ಇದ್ದು ಸದ್ಯ ನ್ಯಾಯಾಲಯದ ವಿಚಾರಣೆಯಲ್ಲಿರುತ್ತದೆ. ಸದರಿ ಹೊಲವನ್ನು ನಾವು ಊರಿನಲ್ಲಿನ ಪ್ರಮುಖರ ಮತ್ತು ರಾಜಶೇಖರನ ಸಂಬಂಧಿಕರ ಸಮಕ್ಷಮದಲ್ಲಿ ಎಲ್ಲರ ಒಪ್ಪಿಗೆಯಂತೆ ಖರಿದಿಸಿದ್ದು ಹೊಲವನ್ನು ನಮ್ಮ ಕಬ್ಜಗೆ ನೀಡಿರುತ್ತಾರೆ. ಸದರಿ ಹೊಲವನ್ನು ಸೊಸೆ ಹೆಸರಿಗೆ ನೊಂದಣಿಯಾಗಿದ್ದು ಮುಟ್ಯೇಷನ ಬಾಕಿ ಇರುತ್ತದೆ. ಹೊಲದ ಸಂಪೂರ್ಣ ಹಣವನ್ನು ನೀಡಿ ನಮ್ಮ ಕಬ್ಜಗೆ ತಗೆದುಕೊಂಡ ನಂತರ ಇಲ್ಲಿಯವರೆಗೆ ನಮ್ಮ ಹೊಲದಲ್ಲಿ ಎಲ್ಲಾ ರೀತಿಯ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ಬಂದು ಜೂನ2017 ರಲ್ಲಿ ನಮ್ಮ ಹೊಲದಲ್ಲಿ ಎಳ್ಳನ್ನು ಬಿತ್ತನೆ ಮಾಡಿ ಕಾಲಕಾಲಕ್ಕೆ ಕಸ ತಗೆದು ಮತ್ತು ಇತರೆ ಚಟುವಟಿಗಳನ್ನು ಮಾಡಿಕೊಂಡು ಬಂದಿರುತ್ತೇನೆ. ದಿನಾಂಕ 09-10-2017 ರಂದು ನಾನು ನನ್ನ ಮಗ ಪ್ರಲ್ಹಾದ ಈತನ ಯೋಗಕ್ಷೇಮ ವಿಚಾರಿಸಿಕೊಂಡು ಬರುವುದಕ್ಕಾಗಿ ಬೆಳಿಗ್ಗೆ ಕಲಬುರಗಿಗೆ ಹೋಗಿರುತ್ತೇನೆ, ನಂತರ ದಿನಾಂಕ:10-10-2017 ರಂದು ಸಾಯಂಕಾಲ 7-00 ಗಂಟೆಗೆ ಊರಿಗೆ ಬಂದಿರುತ್ತೇನೆ. ನಾನು ಊರಿಗೆ ಬಂದು ದಿನಾಂಕ: 11-10-2017  ರಂದು ಬೆಳಿಗ್ಗೆ 10-00 ಗಂಟೆಗೆ ನಮ್ಮ ಹೊಲಕ್ಕೆ ಹೋಗಿ ನೋಡಲಾಗಿ ಕಟಾವಿಗೆ ಸಿದ್ದವಿದ್ದ ಎಳ್ಳಿನ ಬೆಳೆಯನ್ನು ಯಾರೋ ಕಟಾವು ಮಾಡಿಕೊಂಡು ಹೋಗಿರುತ್ತಾರೆ. ಈ ವಿಷಯ ಬಗ್ಗೆ ನಾನು ನಮ್ಮ ಹೊಲದಲ್ಲಿ ಕೆಲಸ ಮಾಡುವ ಲಾಲಸಾಬ್ ಲದಾಫ್ ಇವರಿಗೆ ವಿಚಾರಿಸಲಾಗಿ ದಿನಾಂಕ:09-10-2017 ರಂದು ಬೆಳಿಗ್ಗೆ 10-30 ಗಂಟೆಯಿಂದ ಸಾಯಂಕಾಲ 5-00 ಗಂಟೆ ಅವಧಿಯಲ್ಲಿ ರಾಜಶೇಖರ, ಚಂದಮ್ಮ, ಸಿದ್ದಾರೂಢ ಇವರುಗಳು ಬಂದು ಬೆಳೆಯನ್ನು ಕಟಾವುಮಾಡಿಕೊಂಡು ಅವರ ಸಂಬಂಧಿಕರಾದ ಸಿದ್ದಾರೂಢ ಬುಜುರ್ಕೆ ಇವರ ಟ್ರ್ಯಾಕ್ಟರನಲ್ಲಿ ತಗೆದುಕೊಂಡು ಹೋಗಿ ತಮ್ಮ ಮನೆಯ ಅಂಗಳದಲ್ಲಿ ಇಟ್ಟಿಕೊಂಡಿರುತ್ತಾರೆ. ನಾನು ತಡೆಯಲು ಹೋದರೆ ನನಗೆ ಹೊಡೆಬಡಿ ಮಾಡಬಹುದು ಅಂತಾ ನಾನು ಸುಮ್ಮನಿದ್ದು ನೀವು ಬಂದ ನಂತರ ನಿಮಗೆ ವಿಷಯ ತಿಳಿಸಿರುತ್ತೇನೆ ಅಂತಾ ಹೇಳಿದನು. ನಾನು ರಾಜಶೇಖರ ಇವನ ಮನೆಯ ಹತ್ತಿರ ಹೋಗಿ ನೋಡಿ ಖಚಿತ ಪಡಿಸಿಕೊಂಡು ಅವನಿಗೆ ವಿಚಾರಿಸಲಾಗಿ ನಾವೆ ನಿಮ್ಮ ಎಳ್ಳನ್ನು ಕಟಾವ ಮಾಡಿಕೊಂಡು ಬಂದಿರುತ್ತೇವೆ ಅಂತಾ ತಿಳಿಸಿರುತ್ತಾನೆ. ದಿನಾಂಕ:09-10-2017 ರಂದು ಬೆಳಿಗ್ಗೆ 10-30 ಗಂಟೆಯಿಂದ ಸಾಯಂಕಾಲ 5-00 ಗಂಟೆ ಅವಧಿಯಲ್ಲಿ ರಾಜಶೇಖರ, ಚಂದಮ್ಮ, ಸಿದ್ದಾರೂಢ ಇವರುಗಳು ಅಕ್ರಮವಾಗಿ ನಮ್ಮ ಹೊಲಕ್ಕೆ ಪ್ರವೇಶಮಾಡಿ ನಮ್ಮ ಎಳ್ಳಿನ ಬೆಳೆಯನ್ನು ಕಟಾವು ಮಾಡಿ ಕಳ್ಳತನಮಾಡಿ ಸುಮಾರು 5 ಚೀಲ್ ಅಂದಾಜು ಬೆಲೆ 24000/- ರೂಗಳನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 07-10-2017  ರಂದು 8 ಪಿಎಮ ದಿಂದ ದಿನಾಂಕ 08-10-2017 ರಂದು 6 ಎಎಮ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಹುಣಸಿಹಡಗಿಲ ಗ್ರಾಮದ ಶ್ರೀ ಅಲ್ಲಮ್ಮ ಪ್ರಭು ದೇವಸ್ಥಾನದ ಗುಡಿಯ ಹುಂಡಿ ಯನ್ನು ಕಳವು ಮಾಡಿಕೊಂಡು ಹೋಗಿದ್ದು ಪ್ರತಿ ವರ್ಷ ಯುಗಾದಿ ಸಮಯದಲ್ಲಿ ಗಲ್ಲಾ ಪೆಟ್ಟಿಗೆ ತೆರೆದಾಗ ಅದರಲ್ಲಿ 20 ರಿಂದ 22 ಸಾವಿರ ರೂಪಾಗಳು ಇರುತ್ತಿದ್ದು ಸದರಿ ಗಲ್ಲಾ ಪೆಟ್ಟಿಗೆಯಲ್ಲಿ ಅಂದಾ ಜು 15000/- ಸಾವಿರ ರೂಪಾ ಯಿಗಳು ಇರಬಹುದು. ಅಂತಾ ಶ್ರೀ ರೊಮಕೋಟಿ ತಂದೆ ಶಿವಶರಣಪ್ಪ ಒಡೆಯರ ಸಾ; ಹುಣಸಿಡಗಿಲ ತಾ: ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 7-10-2017 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಸುಲ್ತಾನಪೂರ ರೋಡಿನ ನಾಗಲಿಂಗೇಶ್ವರ ಕಾಲೂನಿಯ ಮನೆಯಲ್ಲಿ ಊಟ ಮಾಡಿಕೊಂಡು ತಮ್ಮ ಗೆಳೆಯರದು ಯಾರದೋ ಪೋನ ಬಂದಿದ್ದು ಆಗ ಆಫೀಸಗೆ ಹೋಗುತ್ತೇನೆ ಅಂತಾ ಬ್ಯಾಗ ತೆಗೆದುಕೊಂಡು ತಮ್ಮ ಮೋಟಾರ ಸೈಕಲ್ ನಂ.ಕೆ.ಎ.32 ಇಸಿ. 6472 ನೆದ್ದರ ಮೇಲೆ ಒಬ್ಬರೆ ಹೋದರು . ಸಾಯಂಕಾಲ  4-30 ಗಂಟೆಯ ಸುಮಾರಿಗೆ ನಮ್ಮ ಮೈದುನ ಗುರುನಾಥ ಇವರು ಮನೆಗೆ ಬಂದಿದ್ದು ಆಗ ನನ್ನ ಗಂಡನಿಗೆ ಫೋನ ಮಾಡಲಾಗಿ ಅವರು ಹೇಳಿದ್ದೇನೆಂದರೆ ಮನೆಯ ಲಾಕರದಲ್ಲಿದ್ದ 6 ಲಕ್ಷ ರೂಪಾಯಿಯನ್ನು ಗುರುನಾಥನ ಕೈಯಲ್ಲಿ ಕೋಡು ಕಾಂಟ್ರ್ಯಾಕ್ಟ ಕೆಲಸ ಹಣ ಕೋಡುವದಿದೆ ಅಂತಾ ಹೇಳಿದರು ಆಗ ನಮ್ಮ ಲಾಕರದಲ್ಲಿದ್ದ 6 ಲಕ್ಷ್ಮ ರೂಪಾಯಿಗಳನ್ನು ನಮ್ಮ ಮೈದುನ ಗುರುನಾಥನ ಕೈಯಲ್ಲಿ ಕೊಟ್ಟೇನು ಆಗ ನನ್ನ ಮೈದುನ ಗುರುನಾಥ ಇವರು ಹಣ ತೆಗೆದುಕೊಂಡು ನಮ್ಮ ಮನೆಯಿಂದ ಮೋಟಾರ ಸೈಕಲ್ ಮೇಲೆ ಹೋದನು .ನಂತರ ಸಂಜೆ 7-00 ಗಂಟೆಯ ಸುಮಾರಿಗೆ ನನ್ನ ಮೈದುನ  ಗುರುನಾಥ ಇವರು ನಮ್ಮ ಮನೆಗೆ ಬಂದಿದ್ದು  ಅಣ್ಣ ಮೊನಪ್ಪಾ ಬಂದಿರುತ್ತಾನೆ  ಹೇಗೆ ಅಂತಾ ಕೇಳದರು ಆಗ ನಾನು ಇನ್ನೂ ಮನೆಗೆ ಬಂದಿರುವದಿಲ್ಲಾ ಅಂತಾ ಹೇಳಿದೆನು. ನಂತರ ಆತನು ತಿಳಿಸಿದ್ದು ಏನೆಂದರೆ ಸಂಜೆ 6-00 ಗಂಟೆಯ ಸುಮಾರಿಗೆ ಬಿದ್ದಾಪುರ ಕಾಲೂನಿಯ ಹನುಮಾನ ಗುಡಿಯ ಹತ್ತಿರ ನನ್ನ ಗಂಡ ಮೋನಪ್ಪಾ ಇವರ ಸಾಹೇಬರ ಕಾರ ಚಾಲಕನ ಕೈಯಲ್ಲಿ 6 ಲಕ್ಷ ರೂಪಾಯಿ ಕೊಡು ಅಂತಾ ಹೇಳಿದಕ್ಕೆ ಅವರ ಕೈಯಲ್ಲಿ ಕೊಟ್ಟಿರುತ್ತೇನೆ ಅಂತಾ ತಿಳಿಸಿದನು. ತದನಂತರ  ರಾತ್ರಿ 10-45 ಗಂಟೆಯ ಸುಮಾರಿಗೆ ನನ್ನ ಗಂಡ ಮೋನಪ್ಪಾ ಇವರು ತಮ್ಮ ಮೋಬಾಯಿಲ್ ನಂ. 9900755619 ನೆದ್ದರಿಂದ ನಮ್ಮ ಮೊಬಾಯಿಲ್ ನಂ. 8105455165 ನೆದ್ದಕ್ಕೆ ಫೋನ ಮಾಡಿ ನಾನು ಬಸವಕಲ್ಯಾಣದಲ್ಲಿ ಇದ್ದು ಸಾಹೇಬರ ಸಂಗಡ ಇರುತ್ತೇನೆ , ಕಲಬುರಗಿಗೆ ಬರುತಿದ್ದೇನೆ ಅಂತಾ ಹೇಳಿದರು ಬರಬಹುದು ಅಂತಾ ಕಾಯಿದರು ಮನೆಗೆ ಬಂದಿರುವದಿಲ್ಲಾ  ದಿನಾಂಕ.    7-10-2017 ರಂದು 11-00 ಎ.ಎಂ.ದಿಂದ  ದಿನಾಂಕ. 9-10-2017 ರಂದು ಇಲ್ಲಿಯವರೆಗೂ ಮನೆಗೆ ಬಂದಿರುವದಿಲ್ಲಾ ಕಾಣೆಯಾಗಿರುತ್ತಾರೆ ಪತ್ತೆಮಾಡಿಕೊಡಬೇಕೆಂದು ದಿನಾಂಕ. 9-10-2017 ರಂದು ತಮ್ಮಲ್ಲಿ ಫಿರ್ಯಾದಿ ನೀಡಿರುತ್ತೇನೆ. ಅದರ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಂ. 345/2017 ಕಲಂ. ಮನುಷ್ಯ ಕಾಣೆಯಾದ  ಬಗ್ಗೆ ಪ್ರಕರಣದಾಖಲಾಗಿದ್ದು ಅಂದಿನಿಂದ  ನನ್ನ ಗಂಡ ಮೋನಪ್ಪಾ ಇವರ ಪತ್ತೆ ಕುರಿತು ನಾನು ಮತ್ತು ನನ್ನ ಮೈದುನ ಗುರುನಾಥ , ಬಸವರಾಜ , ಮತ್ತು ನಮ್ಮ ಗ್ರಾಮದ ಈರಣ್ಣಾ ಮಗಿ , ಶಿವಾನಂದಕಲ್ಲಕೋರೆ , ಶಾಂತಕುಮಾರ ಚಿಡಗುಂಪಿ ಹಾಗೂ ಗುರುಹಾವ ಎಲ್ಲರೂ ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾತ್ತಾ ಮತ್ತು ನಮ್ಮ ಸಮ್ಮಂದಿಕರಿಗೂ ಕೂಡಾ ಫೋನ ಮೂಲಕ ಸಂಪಕರ್ಿಸಿಕೋಂಡು ನನ್ನ ಗಂಡನ ಇರುವಿಕೆಯ ಬಗ್ಗೆ ವಿಚಾರಿಸಿದರೂ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲಾ. ದಿನಾಂಕ. 11-10-2017 ರಂದು ಮತ್ತೆ ನಾವೆಲ್ಲರೂ ನನ್ನ ಗಂಡನ ಪತ್ತೆ ಕುರಿತು ಅವರ ಮಾಹಿತಿಯನ್ನು ಸಂಗ್ರಹಿಸುತ್ತಾ ತಿರುಗಾಡುತ್ತಿರುವಾಗ  ಸಾಯಂಕಾಲ 4-30 ಗಂಟೆಯ ಸುಮಾರಿಗೆ  ಸೈಯದ ಚಿಂಚೋಳೆ ಮತ್ತು ರಿಕ್ಕನ ಆಲೂರ ಕಡೆಯಿಂದ ರೋಡಿಗೆ ಹೋಗಿಬರುವ ಜನರು ಸೈಯದ ಚಿಂಚೋಳಿ ಸೀಮಾಂತರ ಆಲೂರ ರೋಡಿನ ಭೀಮಳ್ಳಿ ಡಿಪೂಗೋಳ ರವರ ಹೊಲದ , ರೋಡಿನ ಸಣ್ಣ ಬ್ರಿಚನ ಸಮೀಪದ ರೋಡನ ಪಕ್ಕದ ತಗ್ಗಿನ ಒಬ್ಬ ಗಂಡು ಮನುಷ್ಯ ಶವ ಬಿದ್ದಿರುತ್ತದೆ  ಅಂತಾ ಜನರು ಮಾತಾಡುವದನ್ನು ಕೇಳಿಕೊಂಡು ಗಾಬರಿಗೊಂಡು ನಾನು ಮತ್ತು ನನ್ನ ಮೈದುನಾಧ ಗುರುನಾಥ , ಬಸವರಾಜ ಹಾಗೂ ನಮ್ಮ ಗ್ರಾಮದ ಗುರುಹಾವ, ಈರಣ್ಣಾ ಮಗಿ ಶಾಂತಕುಮಾರ ಚಿಟಗುಂಪಿ , ಶಿವಾನಂದ ಕಲ್ಲಕೋರೆ ಎಲ್ಲರೂ ಕೂಡಿಕೊಂಡು 5-00 ಗಂಟೆ ಈ ಮೇಲಿನ ಸ್ಥಳಕ್ಕೆ  ಹೋಗಿ ನೋಡಲಾಗಿ ಸದರಿ ಶವವು ಅಂಗಾತವಾಗಿ ಬಿದ್ದಿದ್ದು, ಶವವು ಉಬ್ಬಿದ್ದು ನೋಡಲಾಗಿ ನನ್ನ ಗಂಡ ಮೊನಪ್ಪಾ ಸುತಾರ ಇವರೆದೆ ಶವವಾಗಿದ್ದು , ಅಂದು ದಿನಾಂಕ. 7-10-2017 ರಂದು ನನ್ನ ಗಂಡ ಮನೆಯಿಂದ ಹೋಗುವಾಗ ಧರಿಸಿಕೊಂಡು ಹೋದ  ಬಿಳಶರ್ಟ , ಕಪ್ಪು ಪ್ಯಾಂಟ ಗಳೆ ಇದ್ದವು  ಅವರ ಮುಖ ಮತ್ತು ತಲೆಯ ಭಾಗಕ್ಕೆ ಭಾರವಾದ ಕಲ್ಲಿನಿಂದ ಎತ್ತಿಹಾಕಿದಂತೆ  ಮತ್ತು ಕುತ್ತಿಗೆಯ ಭಾಗಕ್ಕೆ ಗಾಯವಾಗಿ ಯಾರೋ ದುಷ್ಕರಮಿಗಳು ಬಲವಾದ ಕಾರಣದಿಂದ ಕೊಲೆ ಮಾಡಿ ಬಿಸಾಕಿದು ಕಂಡು ಬಂದಿದ್ದು ದೇಹದ ಭಾಗದಿಂದ ರಸ್ಕೀ ಸೋರಿದಂತೆ ಆಗಿದ್ದು ಎರಡು ಕೈಗಳ ತೋಳಿನಿಂದ ಕೆಳ ಭಾಗವು ಮತ್ತು ಬಲಗಾಲೂ ಪಾದ ಅರ್ಧಭಾಗ ಯಾವುದೊ ಪ್ರಾಣಿಗಳು ತಿಂದಂತೆ ಕಂಡು ಬಂದಂತೆ ಇರುತ್ತದೆ. ದಿನಾಂಕ. 7-10-2017 ರಂದು 10-45 ಎ.ಎಂ.ಗಂಟೆಯ ನಂತರ  8-10-2017   ಅವಧಿಯಲ್ಲಿ  ಯಾರೋ ದುಷ್ಕರಮಿಗಳು ಯಾವುದೋ ಬಲವಾದ ಕಾರಣಕ್ಕೆ ಸದರಿ ಸ್ಥಳದಲ್ಲಿ ನನ್ನ ಗಂಡನಿಗೆ ಒಂದು ಭಾರವಾದ ಕಲ್ಲನ್ನು ಆತನ ಮುಖ ಮತ್ತು ತಲೆಯ ಮೇಲೆ ಎತ್ತಿಹಾಕಿ ಮುಖ ವಿರೂಪಗೊಳಿಸಿ ಹಾಗೂ ಇತರೆ ಯಾವುದೋ ರೀತಿಯಿಂದಲೂ ಕೂಡಾ ಕೊಲೆಮಾಡಿ ಶವವನ್ನು ಯಾರಿಗೂ ಕಾಣದಂತೆ ರೋಡಿನ ಪಕ್ಕದ ತಗ್ಗಿನಲ್ಲಿ ಬಿಸಾಗಕಿ ಸಾಕ್ಷಿನಾಶಮಾಡಿದ್ದು  ನನ್ನ ಗಂಡನಿಗೆ ಕೊಲೆ ಮಾಡಿದ್ದ ದುಷ್ರ್ಕಮಿಗಳನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಶ್ರೀಮತಿ ನಂದಾ ಗಂಡ ಮೋನಪ್ಪಾ ಸುತಾರ ವಿಳಾಸ; ತಾಜಸುಲ್ತಾನಪೂರ ಗ್ರಾಮ ತಾ;ಜಿ;ಕಲಬುರಗಿ ಹಾವ; ನಾಗಲಿಂಗೇಶ್ವರ ಕಾಲೂನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: