Police Bhavan Kalaburagi

Police Bhavan Kalaburagi

Tuesday, October 17, 2017

KALABURAGI DISTRICT REPORTED CRIMES

ಅಫಜಲಪೂರ ಪೊಲೀಸ್ ಠಾಣೆ:
ವಾಹನ ಕಳವು ಪ್ರಕರಣ: ದಿನಾಂಕ 15/10/2017 ರಂದು ಶ್ರೀ ಸಿದ್ದಾರಾಮ ತಂದೆ ಶಿವಾನಂದ ಠಕ್ಕಾ ಸಾ|| ಬಳೂರ್ಗಿ ಇವರು ಠಾಣೆಗೆ ಹಾಜರಾಗಿ ನ್ನ ಹಿರೋ ಸ್ಪೇಂಡರ್ ಪ್ಲಸ್ ಮೋಟಾರ ಸೈಕಲ ನಂಬರ ಕೆಎ-32 ಇಎಫ್-8692, ಅಂದಾಜು 25,000/- ರೂ  ನೇದ್ದನ್ನು   ದಿನಾಂಕ 30-09-2017 ರಂದು ಮ್ಮ ಹೊಲಕ್ಕೆ ಹೋಗಿದ್ದು, ಮಳೆ ಬಂದಿದ್ದರಿಂದ ನಮ್ಮ ಹೊಲದ ಬಳಿ  ಮೋಟರ ಸೈಕಲ ಹೋಗದ ಕಾರಣ, ಮೋಟರ ಸೈಕಲನ್ನು ಅಫಜಲಪೂರ – ಬಳೂರ್ಗಿ ರೋಡಿಗೆ ಇರುವ ಪ್ರಗತಿ ಡಾಬಾದ ಹತ್ತಿರ ನಿಲ್ಲಿಸಿದ್ದು, ತಾನು ಮತ್ತು ನ್ನ ತಂದೆ ಇಬ್ಬರು ಹೊಲಕ್ಕೆ ಹೋಗಿ ಸಾಯಂಕಾಲ ಮರಳಿ ಮನೆಗೆ ಹೋಗಲು ಬಂದು ನೋಡಲಾಗಿ  ಪ್ರಗತಿ ಡಾಬಾದ ಹತ್ತಿರ ನಿಲ್ಲಿಸಿದ ಮೋಟರ ಸೈಕಲ ಇರಲಿಲ್ಲ, ಸದರಿ ನನ್ನ ಮೋಟರ ಸೈಕಲನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು  ದುದನಿ, ಘತ್ತರಗಾ, ಚವಡಾಪೂರ ಮತ್ತು ಅಫಜಲಪೂರ ಪಟ್ಟಣದಲ್ಲಿ ಎಲ್ಲಾ ಕಡೆ ಹುಡಕಾಡಿದರು ಮೋಟರ ಸೈಕಲ್ ಸಿಗದಿದ್ದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಕಳ್ಳತನವಾದ ನನ್ನ ಮೋಟರ ಸೈಕಲನ್ನು ಪತ್ತೆಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಜರೂಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ:
ಶಹಾಬಾದ ನಗರ ಪೊಲೀಸ್ ಠಾಣೆ: ದಿನಾಂಕಃ 16/10/2017 ರಂದು ಶಹಾಬಾದ ನಗರದ ಮರಾಠ ಸಮಾಜದ ಸ್ಮಶಾನ ಭೂಮಿಯ ಖುಲ್ಲಾ ಜಾಗೆಯಲ್ಲಿ  ಇಸ್ಪೆಟ ಜೂಜಾಟ ಆಡುತ್ತಿರುವ ಖಚಿತ ಬಾತ್ಮಿ ಮೇರೆಗೆ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ  ಶಹಾಬಾದ ರವರು ಠಾಣೆ ರವರು ಠಾಣೆಯ ಸಿಬ್ಬಂದಿ  ಮತ್ತು ಪಂಚರೊಂದಿಗೆ  ದಾಳಿ ಮಾಡಿ 1) ವಾಸು ತಂದೆ ಅಶೋಕ ರಾಠೋಡ ಸಾ: ಎಸಿಸಿ ಕಾಲೋನಿ ವಾಡಿ 2) ಅಜಯ ತಂದೆ ಜಗನ್ನ ಸಾ: ಮಡ್ಡಿ ನಂಬರ 02 ಶಹಾಬಾದ 3) ಹಾಜಪ್ಪ ತಂದೆ ಮಲ್ಕಪ್ಪಾ ಪೂಜಾರಿ ಸಾ: ಹಳೆ ಶಹಾಬಾದ 4) ಮಹ್ಮದ ಖಾಸಿಂ ತಂದೆ ಖಾಜಾಮಿಯಾ ಮುಲ್ಲಾ ಸಾ: ಮಡ್ಡಿ ನಂಬರ 02 ಶಹಾಬಾದ 5) ವಿಶಾಲ ತಂದೆ ಅಶೋಕ ನಾಯಕ ಸಾ: ಮಡ್ಡಿ ನಂಬರ 02 ಶಹಾಬಾದ ರವರಿಗೆ ಹಿಡಿದು  ಅವರಿಂದ ಇಸ್ಪೆಟು ಜೂಜಾಟಕ್ಕೆ ಸಂಬಂಧ ಪಟ್ಟ ನಗದು ಹಣ 5020/- ರೂ ಹಾಗೂ  52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಆರೋಪಿತರು ಹಾಗೂ ಮುದ್ದೆಮಾಲು ಠಾಣೆಗೆ ಸದರಿಯವರ ವಿರುದ್ದ ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆತ್ಮ ಹತ್ಯೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ : ದಿನಾಂಕಃ 15/10/2017 ರಂದು ಶ್ರೀಮತಿ ನಿಂಗಮ್ಮ ಗಂಡ ಶಿವರಾಯ ಚಿನ್ನಮಳ್ಳಿ ರವರು ಫಿರ್ಯಾದಿ ಸಲ್ಲಿಸಿದ್ದೇನೆಂದರೆ ತನ್ನ ಎರಡನೆ ಮಗನಾದ ರೇವಣಸಿದ್ದಪ್ಪ ಈತನು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು. ಮನೆಯ ಎಲ್ಲಾ ಜವಾಬ್ದಾರಿಯು ರೇವಣಸಿದ್ದಪ್ಪನೇ ನೋಡಿಕೊಂಡಿರುತ್ತಾನೆ. ತಮಗೆ ಪಾಣೆಗಾಂವ ಸಿಮಾಂತರ ಸರ್ವೇ ನಂ 131 ರಲ್ಲಿ 06 ಎಕರೆ ಜಮೀನು ಹಾಗೂ ಸರ್ವೇ ನಂ 38/4 ರಲ್ಲಿ 03 ಎಕರೆ ಜಮೀನು ಇದ್ದು, ಸದರಿ ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡಿದ್ದು, ಸದರಿ ಜಮೀನುಗಳ ಮೇಲೆ ವಿಜಯಾ ಬ್ಯಾಂಕ ಕಲಬುರಗಿಯಲ್ಲಿ ಹಾಗೂ ಕೇನರಾ ಬ್ಯಾಂಕ ಖಣದಾಳದಲ್ಲಿ ಸಾಲ ಪಡೆದುಕೊಂಡಿದ್ದು,  ಸದರಿ ಸಾಲವನ್ನು ಕಂತಿನ ರೂಪದಲ್ಲಿ ಕಟ್ಟುತ್ತಿದ್ದು, ಇತ್ತಿತ್ತಲಾಗಿ ಜಮೀನುಗಳಲ್ಲಿ ಸರಿಯಾದ ಬೆಳೆ ಬಾರದೆ ಸಾಲ ಪಾವತಿಸಿರುವುದಿಲ್ಲ. ಅಲ್ಲದೆ ಕೃಷಿ ಚಟುವಟಿಕೆಗಾಗಿ ಸಾಲ ಮಾಡಿಕೊಂಡಿದ್ದು ಇರುತ್ತದೆ. ಬ್ಯಾಂಕುಗಳಲ್ಲಿ ಪಡೆದ ಸಾಲವನ್ನು ಪಾವತಿಸುವಂತೆ ನೋಟಿಸಗಳು ಬಂದಿದ್ದು, ತನ್ನ ಮಗನಾದ ರೇವಣಸಿದ್ದಪ್ಪ ಈತನು ಸಾಲ ಹೇಗೆ ತಿರಿಸಬೇಕೆಂದು ಚಿಂತಿಸುತ್ತಾ ದಿನಾಂಕ 14/10/2017 ರಂದು ರಾತ್ರಿ ಕಾಶಿನಾಥ ಮೊತಕಪಳ್ಳಿ ಇವರ ಹೋಲದಲ್ಲಿರುವ ಮನೆಯಲ್ಲಿ ಯಾವುದೋ ಕ್ರಿಮಿನಾಷಕ ಔಷದ ಸೇವೆ ಮಾಡಿದ್ದು ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ನಂತರ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 15/10/22017 ರಂದು ಮೃತಪಟ್ಟಿರುತ್ತಾನೆ. ತನ್ನ ಮಗ ರೇವಣಸಿದ್ದಪ್ಪನು ಸಾಲ ಹೇಗೆ ತಿರಿಸಬೇಕೆಂದು ಚಿಂತಿಸುತ್ತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಕ್ರಿಮಿನಾಷಕ ಔಷದ ಸೇವನೆ ಮಾಡಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಎಂದು ಸಲ್ಲಿಸಿದ ಫಿರ್ಯಾದಿ ಸಾರಾಂಶದ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ನರೋಣಾ ಪೊಲೀಸ್ ಠಾಣೆದಿನಾಂಕ:24/09/2017 ರಂದು ನಾನು ನನ್ನ ಹೆಂಡತಿ ನಾಗಮ್ಮ ನನ್ನ ಚಿಕ್ಕಪ್ಪ ಮಲ್ಲಿಕಾರ್ಜುನ ಹಾಗೂ ಚಿಕ್ಕಮ್ಮಳಾದ ಅಂಬಿಕಾ @ ಅಂಬುಬಾಯಿ ಹಾಗೂ ಅವರ ಮಗನಾದ ಶರಣಬಸಪ್ಪ ಮದಲಿ ರವರೆಲ್ಲರೂ ನರೋಣಾ ಗ್ರಾಮದಲ್ಲಿ ನಮ್ಮ ಚಿಕ್ಕಪ್ಪನ ಮನೆಯಲ್ಲಿದ್ದಾಗ ನಮ್ಮ ಚಿಕ್ಕಪ್ಪನವರು ಅವರ ಪಕ್ಕದ ಮನೆಯಲ್ಲಿ ವಾಸವಿರುವ ಧಶರಥ ತಂದೆ ಶರಣಪ್ಪ ಮದಲಿ ಇವರ ಮನೆಯ ಮುಂದೆ ಹೋಗಿ ಅವರಿಗೆ ಹೊರಗೆ ಕರೆದು ನಿಮ್ಮ ಬಚ್ಚಲು ನೀರು ನಮ್ಮ ಮನೆಯ ಸಂದಿಯಲ್ಲಿ ಬಿಡಬೇಡರಿ ಹಾಗೂ ನಮ್ಮ ಮನೆಯ ಪಕ್ಕದಲ್ಲಿರುವ ರಸ್ತೆಯ ಮೇಲೆ ಕುರಿಗಳನ್ನು ಕಟ್ಟಬೇಡಿ ಎಂದು ಹೇಳುತ್ತಿರುವಾಗ ವಿಜಯಕುಮಾರ ಮದಲಿ, ರಾಜಕುಮಾರ ಮದಲಿ, ಲಲಿತಾಬಾಯಿ ಮದಲಿ, ಪೀರಪ್ಪ ಮದಲಿ, ಪರೇಮ್ಮ ಮದಲಿ, ಮಲ್ಲಿಕಾರ್ಜುನ  ತಂದೆ ಪೀರಪ್ಪ ಮದಲಿಹಾಗೂ ನಾಗೀಂದ್ರ ತಂದೆ ಪೀರಪ್ಪ ಮದಲಿ ಇವರೆಲ್ಲರೂ ಕೂಡಿಕೊಂಡು ಬಂದು ನಮ್ಮ ಚಿಕ್ಕಪ್ಪನ್ನೊಂದಿಗೆ ವಾದವಿವಾದ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಜಗಳ ತಗೆದು ನನ್ನ ಚಿಕ್ಕಮ್ಮಳಿಗೆ ಕೈಯಿಂದ ಹೊಡೆಯುತ್ತಾ ನೆಲಕ್ಕೆ ಕೆಡವಿ ಅವರ ಹೊಟ್ಟೆಯ ಮೇಲೆ ಒದೆಯುತ್ತಿರುವಾಗ ನಮ್ಮ ಚಿಕ್ಕಪ್ಪ  ಬಿಡಿಸುತ್ತಿರುವಾಗ ಅವರಿಗು ಸಹ ಕಾಲಿನಿಂದ ಜೋರಾಗಿ ಒದಿದ್ದು ಅಲ್ಲದೇ ಕೈಯಲ್ಲಿ ಕಲ್ಲು ಹಿಡಿದುಕೊಂಡು ಗುದ್ದಿ ಒಳಪೆಟ್ಟು ಮಾಡಿರುತ್ತಾರೆ. ಅಸ್ಟರಲ್ಲಿಯೇ ನಾನು ಮತ್ತು ನಮ್ಮ ಚಿಕ್ಕಪನ ಮಗನಾದ  ಶರಣಬಸಪ್ಪ ಹಾಗೂ ನಮ್ಮ ಓಣಿಯ ವಿಠಲ ತಂದೆ ಶಾಂತಪ್ಪ ಇಟಿಕಾರ, ರಮೇಶ ತಂದೆ ಕ್ಷೇಮಲಿಂಗ ರಾಗಿ, ರವರುಗಳು ಜಗಳ ಬಿಡಿಸಿದ್ದು ನಂತರ ಧಶರಥ, ವಿಜಯಕುಮಾರ, ರಾಜಕುಮಾರ ಮಲ್ಲಿಕಾರ್ಜುನ  ಹಾಗೂ ನಾಗೀಂದ್ರ ರವರು ಕೂಡಿ ನಮ್ಮ ಚಿಕ್ಕಪ್ಪನಿಗೆ ಮಗನೆ ನಿನಗೆ ಹಾಗೂ ನಿನ್ನ ಕುಟುಂಬದವರಿಗೆ ಒಂದಾಲ್ಲ ಒಂದು ದಿವಸ ಜೀವ ಸಹಿತ ಬಿಡುವುದಿಲ್ಲ ಖಲಾಸ ಮಾಡುತ್ತೇವೆ ಎಂದು ಜೀವದ ಭಯ ಹಾಕಿರುತ್ತಾರೆ.  ವಿನಾಕಾರಣ ನಮ್ಮೊಂದಿಗೆ ಜಗಳ ತೆಗೆದು ನನ್ನ ಚಿಕ್ಕಪ್ಪ ಚಿಕ್ಕಮ್ಮನವರಿಗೆ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: