Police Bhavan Kalaburagi

Police Bhavan Kalaburagi

Friday, October 20, 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಹಣಮಂತಪ್ಪ ರಾಗಿ ಸಾ:ಡೊಂಗರಗಾಂವ ತಾ:ಜಿ:ಕಲಬುರಗಿ ಇವರು ದಿನಾಂಕ :18.10.2017 ರಂದು ಮುಂಜಾನೆಯ ವೇಳೆಯಲ್ಲಿ ನಾನು ಮತ್ತು ನಮ್ಮೂರ ನನ್ನ ಗೆಳೆಯರಾದ ಮಹಾಂತೇಶ ಮಹೇಶನವರ್ ಹಾಗೂ ಸಚಿನ ಕಾಂಬಳೆ ಹಿಗೇಲ್ಲರೂ ಕೂಡಿಕೊಂಡು ಡೊಂಗರಗಾಂವ ಸೀಮಾಂತರದ ಹೈವೆ ರಸ್ತೆಗೆ ಹೊಂದಿಕೊಂಡಿರುವ ನನ್ನ ಹೋಲಕ್ಕೆ ಹೋಗಿದ್ದು ಇರುತ್ತದೆ. ನಂತರ ನಿನ್ನೆ ಸಾಯಂಕಾಲದ ವೇಳೆಯಲ್ಲಿ ನಾವೇಲ್ಲರೂ ಕೂಡಿಕೊಂಡು ನಮ್ಮ ಹೋಲದಿಂದ ಡೊಂಗರಗಾಂವಗೆ ಹೋಗುವ ಕುರಿತು ಹುಮನಾಬಾದ ಕಲಬುರಗಿ ಹೆದ್ದಾರಿಯ ಮೇಲಿಂದ ನಡೆದುಕೊಂಡು ಬರುತ್ತಿದ್ದು. ಸಾಯಂಕಾಲ 07 ಗಂಟೆಯ ಸೂಮಾರಿಗೆ ನಾವು ಮುರು ಜನ ಡೊಂಗರಗಾಂವ ಕ್ರಾಸ ಹತ್ತೀರ ರೋಡ ದಾಟುತ್ತಿದ್ದಾಗ ನಮ್ಮ ಹಿಂದಿನಿಂದ ಅಂದರೆ ಹುಮಾನಾಬಾದ ಕಡೆಯಿಂದ ಒಬ್ಬ ಮೋಟರಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತಿದ್ದ ನನಗೆ ಹಾಗೂ ನನ್ನ ಗೆಳೆಯರಾದ ಸಚಿನ ಕಾಂಬಳೆ ಹಾಗೂ ಮಹಾಂತೇಶನಿಗೆ ಡಿಕ್ಕಿಪಡಿಸಿ ಮೋಟರ ಸೈಕಲ ಸಮೇತ ನಮ್ಮ ಮೇಲೆ ಬಿದ್ದನು. ನಂತರ ನಮಗೆ ಅಪಘಾತವಾದನ್ನು ಅಲ್ಲೆ ನಿಂತು ನೋಡುತ್ತಿದ್ದ ನಮ್ಮೂರ ಸತಿಶ ಹಿಪ್ಪರಗಿ ಇವರು ಬಂದು ನನಗೆ ಎಬ್ಬಿಸಿ ನೋಡಲು ನನ್ನ ಬಲಕಾಲ ತೋಡೆಗೆ ಹಾಗೂ ಮೋಣಕಾಲಿನ ಕೆಳಭಾಗದಲ್ಲಿ ಭಾರಿ ರಕ್ತಗಾಯವಾಗಿದ್ದು. ಮತ್ತು ಬಲಕಾಲ ಹಿಮ್ಮಡಿಗೆ ಮತ್ತು ಬಲ ಕಿಪ್ಪಡಿ ಹತ್ತೀರ ಸಣ್ಣಪುಟ್ಟ ರಕ್ತಗಾಯಗಳಾಗಿದ್ದು. ನನ್ನಂತೆ ಸಚಿನ ಈತನಿಗೆ ನೋಡಲು ಅವನ ಬಲಕಾಲ ಮೋಣಕಾಲಿಗೆ ತರಚಿದ ಗಾಯ ಬಲಗೈ ಮೋಣಕೈಗೆ ರಕ್ತಗಾಯ ಬಲಭುಜದ ಹಿಂಭಾಕ್ಕೆ ತರಚಿದ ಮತ್ತು ಬಲಕೈ ಬೆರಳುಗಳಿಗೆ ತರಚಿದ ಗಾಯಗಳಾಗಿ ಟೊಂಕಕ್ಕೆ ಗುಪ್ತಪೆಟ್ಟಾಗಿದ್ದು. ಅದೇ ರೀತಿ ಮಹಾಂತೇಶನಿಗೆ ಬಲಕಾಲಿನ ಕಿರುಬೆರಳಿಗೆ ಬಲಕೈ ಉಂಗುರ ಮತ್ತು ಕಿರುಬೆರಳಿಗೆ ರಕ್ತಗಾಯ ಬಲ ಮುಂಗೈಗೆ ಮತ್ತು ಬಲಭುಜಕ್ಕೆ ತರಚಿದ ಗಾಯಗಳಾಗಿದ್ದು. ಅಪಘಾತ ನಂತರ ಆರೋಪಿತನು ಮೋ.ಸೈಕಲ ಅಲ್ಲೆ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ. ಆತನಿಗೆ ನೋಡಿದರೆ ಗುರುತಿಸುತ್ತೇನೆ. ನಂತರ ನಮಗೆ ಅಪಘಾತ ಪಡಿಸಿದ ಮೋ.ಸೈಕಲ ನೋಡಲು ಅದು ಹಿರೋ ಸ್ಪ್ಲೆಂಡರ ಮೋ.ಸೈಕಲ ನಂ.ಕೆಎ.32 ಇಪಿ.7833 ನೇದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯಾಯಾಲಕ್ಕೆ ಹಾಜರಾಗದೆ ತಲೆಮರಿಕೊಂಡವರ ವಿರುದ್ಧ ಕಾನೂನಿನ ಕ್ರಮ :
ನರೋಣಾ ಠಾಣೆ : ಶ್ರೀ.ವಿಠಲ್ ಸಿ.ಹೆಚ್.ಸಿ-317 ನರೋಣಾ ಪೊಲೀಸ್ ಠಾಣೆ ರವರು  ನರೋಣಾ ಪೊಲೀಸ್ ಠಾಣೆಯ ಗುನ್ನೆ ನಂ-89/2013 ಕಲಂ 143 147 341 504 506 114 149 ಐಪಿಸಿ ಪ್ರಕರಣದಲ್ಲಿಯ ಎ1-ನಾರಾಯಣ ತಂದೆ ವೆಂಕಟ್ ಚವ್ಹಾಣ್ ವಯಾ:38 ವರ್ಷ, ಜಾತಿ:ಲಂಬಾಣಿ, ಸಾ||ಧರಿತಾಂಡಾ, 3-ಪೇಮು ತಂದೆ ವೆಂಕಟ್ ಚವ್ಹಾಣ್ ವಯಾ:26 ವರ್ಷ, ಜಾತಿ:ಲಂಬಾಣಿ, ಸಾ||ಧರಿತಾಂಡಾ, ಹಾಗೂ ಎ5-ರವಿ ತಂದೆ ಕಿಶನ್ ಪವಾರ್, ವಯಾ:22 ವರ್ಷ, ಜಾತಿ:ಲಂಬಾಣಿ, ಸಾ||ಧರಿತಾಂಡಾ, ಇವರುಗಳು ಮಾನ್ಯ ನ್ಯಾಯಾಲಯದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಜಾಮೀನು ಪಡೆದುಕೊಂಡಿರುತ್ತರೆ. ಈ ಆಪಾದೀತರು ಜಾಮೀನು ಪಡೆದುಕೊಂಡು ವಿಚಾರಣೆಗಾಗಿ ಮಾನ್ಯ ಜೆ.ಎಂ.ಎಪ್.ಸಿ ನ್ಯಾಯಾಲಯ ಆಳಂದಕ್ಕೆ ಹಾಜರಾಗದೆ ಇರುವುದರಿಂದ ಮಾನ್ಯ ನ್ಯಾಯಾಲಯವು ಈ ಆಪಾದೀತರನ್ನು ಹಾಜರು ಪಡಿಸುವಂತೆ ಆದೇಶಿಸಿ ದಿನಾಂಕ:10/10/2017 ರಂದು ದಸ್ತಗಿರಿ ವಾರೆಂಟ್ ಹೊರಡಿಸಿರುತ್ತಾರೆ. ಅದರಂತೆ ನಾನು ಮಾನ್ಯ ನ್ಯಾಯಾಲಯದ ಆದೇಶದ ಮೆರೇಗೆ ಸದರಿ ಪ್ರಕರಣದಲ್ಲಿಯ ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಕುರಿತು ದಿನಾಂಕ:16/10/2017 ಹಾಗೂ ದಿನಾಂಕ:17/10/2017 ರಂದು ಧರಿತಾಂಡಾಕ್ಕೆ ಭೇಟಿನೀಡಿ ಆಪಾದೀರತ ಮನೆಗೆ ಹೋಗಿ ವಿಚಾರಿಸಲಾಗಿ  ತಲೆಮರೆಸಿಕೊಂಡಿರುವ ಬಗ್ಗೆ ತಿಳಿದು ಬಂದಿರುತ್ತದೆ ನಂತರ ಬಾತ್ಮೀದಾರರನ್ನು ವಿಚಾರಿಸಲಾಗಿ ಆಪಾದೀತರ ಇರುವಿಕೆ ಖಚಿತ ವಿಳಾಸ ತಿಳಿದು ಬಂದಿರುವುದಿಲ್ಲ.  ಈ ಆಪಾದೀತರು ಜಾಮೀನು ಆಧಾರದ ಮೇಲೆ ಬಿಡುಗಡೆಯಾಗಿ ವಿಚಾರಣೆಕಾಲಕ್ಕೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮೆರೆಸಿಕೊಂಡು ವಿಚಾರಣೆ ದಿನಾಂಕ:23/09/2017, ದಿನಾಂಕ:10/10/2017 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರು ಆಗುವದನ್ನು ತಪ್ಪಿಸಿರುತ್ತಾರೆ. ಕಾರಣ ಈ ಮೇಲೆ ನಮೂದಿಸಿದ ಆಪಾದೀತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತಪಡಿಸಿ ಹಲ್ಲೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಸೈಫನಸಾಬ ಇತನು ಆಳಂದ ರೋಡ ಕಡೆಯಿಂದ ಲಾರಿ  MH 12 FZ 7247  ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ  ಚಾಲನೆ ಮಾಡುತ್ತಾ  ಇಂದು ದಿನಾಂಕ 18/10/2017 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಸುಂಟನೂರ ಕ್ರಾಸ ಇನ್ನೂ ಸ್ವಲ್ಪ ಮುಂದೆ ಇರುವಂತೆ ಅತಿವೇಗದಿಂದ ನಡೆಸುತ್ತಾ ಹೊರಟಾಗ ಸೈಫನಸಾಬ ನಡೆಸುತ್ತಿದ್ದ ಲಾರಿಯ ಮುಂದಿನ ಟಾಯರ ಹೇಗೋ ಅಕಸ್ಮಿಕವಾಗಿ ಭಸ್ಟ ಆಗಲು ಆಯತಪ್ಪಿ ಕಲಬುರಗಿ ಕಡೆಯಿಂದ ಬರುತ್ತಿದ್ದ ಸಿಮೆಂಟ ಬಲಕರ ಟ್ಯಾಂಕರ  ವಾಹನಕ್ಕೆ ತಗುಲಿ ಅಪಘಾತಪಡಿಸಿದ್ದು. ಆಗ ಎರಡು ವಾಹನ ಚಾಲಕರು ತಮ್ಮ ತಮ್ಮ  ವಾಹನಗಳು ನಿಲ್ಲಿಸಿ ಕೆಳೆಗೆ ಇಳಿದಿದ್ದು,  ಆಗ ಸಿಮೆಂಟ ಬಲಕರ ಟ್ಯಾಂಕರ MH 25 F 0047 ಚಾಲಕ ಹೆಸರು ಕೇಳಿ ಗೊತ್ತಾದ  ಅಲೀಮ ತಂದೆ ರಫೀಕ ಶೇಖ ಸಾ: ಇಂದ್ರಾ ನಗರ ನಳದುರ್ಗ ತಾ:ತುಳಜಾಪೂರ ಜಿಲ್ಲಾ ಉಸ್ಮಾನಾಬಾದ  ಇತನು ಸೈಫಸಾಬ ಹತ್ತಿರ ಹೋಗಿ ಅವನಿಗೆ ಭೋಸಡಿಕೇ ಆಂಗ ಪೇ ಗಾಡಿ ಲೇಕೆ ಆ ಕೋ ಮೇರೆಕೋ ಜಾನ ಸೇ ಕತಮ ಕರನೇಕಾ ಇರಾದಾ ಹೈ ಕ್ಯಾ ಸಾಲೇ  ಅಂತಾ ಬೈಯ್ಯುತ್ತಾ ತನ್ನ ಸಿಮೆಂಟ ಕ್ಯಾಂಟರನಲ್ಲಿದ್ದ ಒಂದು ಕಬ್ಬಿಣದ ರಾಡು ತೆಗೆದುಕೊಂಡು ಸೈಫನನ ಎಡ ತಲೆಯ ಮೇಲೆ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ.  

No comments: