ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 05-10-2017 ರಂದು ರಾಘವೇಂದ್ರ ನಗರ ರಾಣಾ ವ್ಯಾಪ್ತಿಯ ಡಬರಬಾದ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀಮತಿ ಅಕ್ಕಮಹಾದೇವಿ ಪಿಎಸ್ಐ ರಾಘವೆಂದ್ರ ನಗರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ದೇವರದಾಸಿಮಯ್ಯ ಬಡಾವಣೆಯ ಒಳಗಡೆಯಿಂದ ಹೋಗಿ ಒಂದು ಸಿಮೆಂಟ ಅಂಗಡಿಯ ಮರೆಯಲ್ಲಿ ನಿಂತು ನೋಡಲು ಡಬರಬಾದ ಕ್ರಾಸ್ನಿಂದ ರಿಂಗ್ ರೋಡಿನ ಪಕ್ಕದಲ್ಲಿ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಮಟಕಾ ನಂಬರಕ್ಕೆ ಒಂದು ರೂ ಗೆ 80 ರೂ ಕೊಡುತ್ತೇವೆ ಅಂತಾ ಹೇಳುತ್ತಾ ಜನರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು, ಒಂದು ಚೀಟಿ ಸಾರ್ವಜನಿಕರಿಗೆ ಕೋಡುತ್ತಾ ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು. ಇದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದಿದ್ದು ಜನರು ಓಡಿ ಹೋಗಿದ್ದು ಅವರ ಹೆಸರು ವಿಳಾಸ ವಿಚಾರಿಸಲು 1)ಮಹ್ಮದ ಅಜೀಮ ತಂದೆ ಮಹ್ಮದ ಇಬ್ರಾಹಿಂ ಸಾ:ಜಾಮೀಯಾ ಮಜೀದ ಹತ್ತಿರ ಮೌಲಾಲಿ ಕಟ್ಟಾ ಎಂ.ಎಸ್.ಕೆ ಮೀಲ್ ಕಲಬುರಗಿ ಅಂತಾ ತಿಳಿಸಿದ್ದು ಇತನಿಗೆ ಅಂಗಶೋಧನೆ ಮಾಡಲು ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1840=00 ರೂ ಮತ್ತು ಮಟಕಾ ನಂಬರ ಬರೆದ ಒಂದು ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತಿದ್ದು.2)ಸೈಯದ ದಾವುದ ತಂದೆ ಸೈಯದ ನೂರ ಮಹ್ಮದ ಸಾ:ಸಿ.ಐ.ಬಿ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಇತನಿಗೆ ಅಂಗಶೋಧನೆ ಮಾಡಲು ಮಟಕಾ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ 1500/-ರೂ ಒಂದು ಮಟಕಾ ಚೀಟಿ ಒಂದು ಬಾಲಪೆನ್ನು ಸಿಕ್ಕಿದ್ದು, ಒಟ್ಟು ಹೀಗೆ ನಗದು ಹಣ 3340/-ರೂಗಳು,
ಎರಡು ಮಟಕಾ ಚೀಟಿಗಳು ಎರಡು ಬಾಲಪೆನ್ಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ
ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಉಮೇಶ ತಂದೆ ಖೀರು ರಾಠೋಡ ಸಾ|| ಯಡ್ರಾಮಿ ತಾಂಡಾ ರವರು ಗೌರಮ್ಮ ಮುಳ್ಳೊಳ್ಳಿ ರವರ ಹೊಲ ಪಾಲಿಗೆ ಮಾಡಿದ್ದು ದಿನಾಂಕ 05-10-2017 ರಂದು ನಮ್ಮ ಅಕ್ಕ ಲೀಲಾಬಾಯಿ ಗಂಡ ಉಮೇಶ ಪವಾರ ಇವರು ಮನೆಗೆ ಬಂದು ನನ್ನ ಮುಂದೆ ಹೇಳಿದ್ದೇನೆಂದರೆ, ಮದ್ಯಾಹ್ನ ನಾನು ಹೊಲದಲ್ಲಿ ಇದ್ದಾಗ ನಮ್ಮೂರ ಸುನೀಲ ತಂದೆ ಮಲ್ಲಿನಾಥ ಯಲಗೋಡ, ಅನೀಲ ತಂದೆ ಮಲ್ಲಿನಾಥ ಯಲಗೋಡ ರವರು ತಮ್ಮು ಎಮ್ಮೆಗಳನ್ನು ನಾವು ಪಾಲಿಗೆ ಮಾಡಿದ ಹೊಲದಲ್ಲಿ ಬಿಟ್ಟಿದ್ದರು, ನಂತರ ನಾನು ನೋಡಿ ಅವರಿಗೆ ನಿಮ್ಮು ಎಮ್ಮೆಗಳನ್ನು ಹೊಡೆದುಕೊಂಡು ಹೋಗರಿ ಅಂತಾ ಅಂದಾಗ ನನ್ನೊಂದಿಗೆ ತಕರಾರು ಮಾಡಿಕೊಂಡಿರುತ್ತಾರೆ
ಅಂತಾ ಹೇಳಿದ್ದು ಸಾಯಂಕಾಲ ನಾನು ಮತ್ತು ನಮ್ಮ ಮಾವ ಬಾಬು ತಂದೆ ದಿಲೀಪ ಜಾಧವ ಹಾಗು ನಮ್ಮ ಅಕ್ಕ ಲೀಲಾಬಾಯಿ ರವರು ಕೂಡಿ ಹೋಗುತ್ತಿದ್ದಾಗ ಸಿಂಡಿಕೇಟ ಬ್ಯಾಂಕ ಹತ್ತಿರ ನಮ್ಮೂರ 1] ಆನಂದ ತಂದೆ ಬಸಣ್ಣ ಕುಸ್ತಿ,
2] ರಗು ತಂದೆ ಬಸಣ್ಣ ಕುಸ್ತಿ,
3] ರಮೇಶ ತಂದೆ ಯಂಕಪ್ಪ, 4] ಸುನೀಲ ತಂದೆ ಮಲ್ಲಿನಾಥ ಯಲಗೋಡ,
5] ಅನೀಲ ತಂದೆ ಮಲ್ಲಿನಾಥ ಯಲಗೋಡ,
6] ಈಸು ತಂದೆ ಸೂರ್ಯಕಾಂತ, 7] ದಿನೇಶ ತಂದೆ ಶಿವಕಾಂತ, 8] ಗಣೇಶ ತಂದೆ ಶಿವಕಾಂತ, 9] ಅಂಬರೀಶ ತಂದೆ ಬಸಣ್ಣ, 10] ಶಿವಕಾಂತ ತಂದೆ ಯಂಕಪ್ಪ, 11] ಅವಿನಾಶ ತಂದೆ ಶಿವಕಾಂತ, 12] ಜಗು ತಂದೆ ಸಿದ್ದು, 13] ಸಂತೋಷ ತಂದೆ ಚಂದ್ರಕಾಂತ ಕುಸ್ತಿ ಹಿಗೆಲ್ಲರು ಗುಂಪು ಕಟ್ಟಿಕೊಂಡು ನಮ್ಮ ಹತ್ತಿರ ಬಂದು ನಮಗೆ ತಡೆದು ನಿಲ್ಲಿಸಿದರು, ನಂತರ ಆನಂದ ಕುಸ್ತಿ ಈತನು ನಮಗೆ ಏ ಸೂಳಿ ಮಕ್ಕಳ್ಯಾ ಹೊಲದಲ್ಲಿ ನಮ್ಮೊಂದಿಗೆ ತಕರಾರು ಮಾಡಿಕೊಂಡು ನಮ್ಮ ಮೇಲೆ ಕೇಸ ಮಾಡಲಾಕ ಹೊಂಟೀರಿ ಅಂತಾ ಅಂದು ಅಲ್ಲೆ ಬಿದ್ದಿದ ಕಲ್ಲನ್ನು ತೆಗೆದುಕೊಂಡು ನನ್ನ ಹೊಟ್ಟೆಯ ಮೇಲೆ ಹೊಡೆದನು, ನಂತರ ರಗು ಈತನು ನನ್ನ ಮುಖಕ್ಕೆ ಮುಷ್ಠಿ ಮಾಡಿ ಹೊಡೆದನು,
ರಮೇಶ,
ಸುನೀಲ,
ಅನೀಲ ರವರು ಕೈಯಿಂದ ನನ್ನ ತಲೆಗೆ ಮುಖಕ್ಕೆ ಎದೆಗೆ ಹೊಡೆ ಬಡೆ ಮಾಡಿರುತ್ತಾರೆ,
ಆಗ ನಮ್ಮ ಮಾವ ಬಾಬು ಜಾಧವ ರವರು ಬಿಡಿಸಲು ಬಂದಾಗ ಅವರಿಗೆ ಈಸು,
ದಿನೇಶ ಇವರು ಕೈಯಿಂದ ಮೈ ಕೈಗೆ ಹೊಡೆ ಬಡೆ ಮಾಡಿರುತ್ತಾರೆ, ನಂತರ ಗಣೇಶ ಮತ್ತು ಅಂಬರೀಶ ರವರು ನಮ್ಮ ಅಕ್ಕಳಿಗೆ ಕೈ ಹಿಡಿದು ಎಳೆದಾಡಿ ಈ ರಂಡಿಗಿ ಹಾಕಿ ಹೊಡಿರೋ ಅಂತಾ ಅಂದರು, ನಂತರ ಶಿವಕಾಂತ, ಅವಿನಾಶ, ಜಗು,
ಸಂತೋಷ ರವರು ಇವತ್ತ ಈ ಸೂಳಿ ಮಕ್ಕಳಗಿ ಬಿಡಬ್ಯಾಡರಿ ಹೊಡೆದು ಖಲಾಸೆ ಮಾಡರಿ ಅಂತಾ ಅಂದು ಕೈಯಿಂದ ಕಾಲಿನಿಂದ ನನ್ನ ಮೈ ಕೈಗೆ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment