Yadgir District Reported Crimes
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 188/2017 ಕಲಂ: 147,148,149,323,324,504,506 ಐಪಿಸಿ;- ದಿನಾಂಕ 30-10-2017 ರಂದು ಬೆಳಿಗೆ ನಮ್ಮ ಠಾಣೆಯ ಶ್ರೀ ಗೋಪಾಲರೆಡ್ಡಿ ಹೆಚ್.ಸಿ-101 ರವರು ಸರಕಾರಿ ಆಸ್ಪತ್ರೆ ಯಾದಗಿರಿ ಯಲ್ಲಿ ಉಪಚಾರ ಪಡೆಯಿತ್ತಿದ್ದ ಗಾಯಾಳು ಶಂಕ್ರಮ್ಮ ಗಂಡ ಕಿಶನ ರಾಠೋಡ ವಯಾ|| 30 ವರ್ಷ ಜಾ|| ಲಂಬಾಣಿ ಉ|| ಕೂಲಿ ಸಾ|| ಬಳಿಚಕ್ರ ದೊಡ್ಡ ತಾಂಡ ಇವರ ಅಜರ್ಿಯನ್ನು ಸ್ವೀಕರಿಸಿಕೊಂಡು ಬಂದು ಇಂದು 1 ಪಿ ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಹಾಜರ ಮಾಡಿದ್ದು ಸದರಿ ಅಜರ್ಿಯ ಸಾರಾಂಶವೇನಂದರೆ.ನಾನು ನಿನ್ನೆ ರಾತ್ರಿ ನನ್ನ ಭಾವ ರೆಡ್ಡಿ ಹಾಗೂ ಆತನ ಹೆಂಡತಿ ಸೋಮ್ಲ ಇಬ್ಬರು ಜಗಳ ಬಾಯಿ ಮಾಡುವ ಕಾಲಕ್ಕೆ ನಾನು ರಾತ್ರಿ 10 ಗಂಟೆಯ ಸುಮಾರಿಗೆ ಯಾಕ ಜಗಳ ಮಾಡುತ್ತೀರಿ ಅಂತಾ ಬಿಡಿಸಿಲು ಹೋದಾಗ 1) ಸೋಮ್ಲಾ ತಂದೆ ಬೀಕ್ಯಾ ಚೌವಾಣ 2) ದೇವ್ಯಾ ತಂದೆ ಭೀಕ್ಯಾ ಚೌವಾಣ 3) ಚಾಂದಿಬಾಯಿ ಗಂಡ ಭೀಕ್ಯಾ ಚೌವಾಣ 4) ರೆಡ್ಡಿ ತಂದೆ ದೇವಪ್ಪ ರಾಠೋಡ 5) ಸೋಮ್ಲಿಬಾಯಿ ಗಂಡ ರೆಡ್ಡಿ ರಾಠೋಡ ಇವರೆಲ್ಲಾರು ಕೂಡಿಕೊಂಡು ಬಂದು ನನ್ನನ್ನು ಉದ್ದೇಶಿಸಿ ಏ ಬೋಸ್ಡಿ ನಿಂದೇನು ಸುದ್ದಿ ರಾಂಡ ಚಿನಾಲ್ ಅಂತಾ ಅವಾಚ್ಚವಾಗಿ ಬೈಯ್ದು ಅವರಲ್ಲಿ ಸೋಮ್ಲಿಬಾಯಿ ಮತ್ತು ಚಾಂದಿಬಾಯಿ ಇವರು ಇಬ್ಬರು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡರು ಸೋಮ್ಲಾ ಇವನು ಒಂದು ಕಲ್ಲನ್ನು ತೆಗೆದುಕೊಂಡು ಹೊಟ್ಟೆಗೆ ಹೊಡೆದನು.ದೇವ್ಯಾ ಇವನು ಕಲ್ಲಿನಿಂದ ನನಗೆ ಬೆನ್ನಿಗೆ ಹೊಡೆದನು ಇದರಿಂದ ಒಳಪೆಟ್ಟು ಆಗಿದೆ. ನನ್ನ ಭಾವ ರೆಡ್ಡಿ. ಇವನು ಏ ಬೋಸಡಿ ನಾವು ಗಂಡ ಹೆಂಡತಿ ಜಗಳಾಡಿದರೆ ನಿಂದೇನು ಗಂಟು ಹೋಗಿದೆ. ರಂಡಿ ಅಂತಾ ಬೈಯ್ದು ನನಗೆ ಕೈಯಿಂದ ಬೆನ್ನಿಗೆ ಹೊಡೆದನು ಆಗ ಜಗಳದ ಶಬ್ದ ಕೇಳಿ ನಮ್ಮ ತಾಂಡಾದ ಸಕ್ರೆಪ್ಪ . ಠಾಕ್ರೆ. ಇವರು ಬಂದು ಜಗಳವನ್ನು ನೋಡಿ ಬಿಡಿಸಿಕೊಂಡರು.ಜಗಳ ಬಿಡಿಸಿದ ನಂತರ ಮತ್ತೆ 5 ಜನರು ಕೂಡಿ ಇನ್ನೊಂದು ಬಾರಿ ನಮ್ಮ ಜಗಳದಲ್ಲಿ ಬಂದರೆ ನಿನ್ನನ್ನು ಜೀವ ಸಹಿತ ಉಳಿಸಲ್ಲಾ ಅಂತಾ ಜೀವದ ಬೆದರಿಕೆಯನ್ನು ಹಾಕಿ ಹೋದರು. ಅಂತಾ ವಗೈರೆ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ 188/2017 ಕಲಂ 147.148.323.324.504.506. ಸಂ 149 ಐ ಪಿ ಸಿ ನೇದ್ದರಲ್ಲಿ ಪ್ರಕರಣದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 408/2017.ಕಲಂ 78(3);- ದಿನಾಂಕ 30/10/2017 ರಂದು ಸಾಯಂಕಾಲ 16-30 ಗಂಟೆಗೆ ಸ||ತ|| ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು ಒಂದು ಆರೋಪಿ, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ ಇಂದು ದಿನಾಂಕ 30/10/2017 ರಂದು ಮದ್ಯಾಹ್ನ 14-30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಮೋದಿನ್ ಬಾಷಾ ದಗರ್ಾದ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದಿದ್ದರಿಂದ ನಾನು ಠಾಣೆಯ ಸಿಬ್ಬಂದಿಯವರಾದ ಹೋನ್ನಪ್ಪ ಹೆಚ್.ಸಿ.101, ಗಜೇಂದ್ರ ಪಿ.ಸಿ.313, ಗಣೇಶ ಪಿ.ಸಿ.262, ದೇವರಾಜ ಸಿ.ಪಿ.ಸಿ. 282, ಶಿವಣ್ಣ ಗೌಡ ಪಿ.ಸಿ.141, ಅಮಗೊಂಡ ಎ.ಪಿ.ಸಿ.169 ರವರಿಗೆ ವಿಷಯ ತಿಳಿಸಿ ಅವರಲ್ಲಿ ಶಿವಣ್ಣಗೌಡ ಪಿ.ಸಿ.141. ರವರಿಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲುತಿಳಿಸಿದ್ದರಿಂದ ಅವರು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ 2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ ಹಾಜರಪಡಿಸಿದ್ದು ಸದರಿಯವರಿಗೆ ವಿಷಯ ತಿಳಿಸಿ ಪಂಚರಾಗಲು ಒಪ್ಪಿಕೊಂಡಿದ್ದು. ಸದರಿಯವನ ಮೇಲೆ ದಾಳಿ ಮಾಡಲು ನಾನು ಪಂಚರು ಸಿಬ್ಬಂದಿಯವರು ಠಾಣೆಯ ಸರಕಾರಿ ಜೀಪ ನಂ ಕೆಎ-33ಜಿ-0138 ನ್ನೇದ್ದರಲ್ಲ್ಲಿ ಕುಳಿತು ಕೊಂಡು, ಠಾಣೆಯಿಂದ ಮದ್ಯಾಹ್ನ 14-45 ಗಂಟೆಗೆ ಹೊರಟು ಶಹಾಪೂರ ನಗರ ಮೋದಿನ್ ಬಾಷಾ ದಗರ್ಾದ ಹತ್ತಿರ ಮದ್ಯಾಹ್ನ 14-55 ಗಂಟೆಗೆ ಹೋಗಿ ಮನೆಗಳ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಮೋದಿನ್ ಬಾಷಾ ದಗರ್ಾದ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿಯು ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳುತ್ತ ಸಾರ್ವಜನಿಕರಿಂದ ಹಣಪಡೆದುಕೊಂಡು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವದನ್ನು ಖಚಿತ ಪಡಿಸಿ ಕೊಂಡು ಮದ್ಯಾಹ್ನ 15-00 ಗಂಟೆಗೆ ಸಿಬ್ಬಂದಿಯವರೊಂದಿಗೆ ಸುತ್ತುವರೆದು ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು ಮತ್ತು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದು ಆಗ ನಾನು ಪಂಚರ ಸಮಕ್ಷಮದಲ್ಲಿ ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಾನಪ್ಪ ತಂದೆ ನಿಂಗಪ್ಪ ತಳವಾರ ವ|| 50 ಜಾ|| ಹೋಲೆಯ ಉ|| ಕೂಲಿಕೆಲಸ ಸಾ|| ತಳವಾರ ಓಣಿ ದಿಗ್ಗಿ ಬೇಸ್ ಶಹಾಪೂರ ಅಂತ ಹೇಳಿದನು ಈತನ ಅಂಗ ಶೋಧನೆ ಮಾಡಿದಾಗ ನಗದು 1030=00 ರೂಪಾಯಿ, ಮತ್ತು ಒಂದು ಬಾಲ್ ಪೆನ್, ಎರಡು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿಗಳು ಸಿಕ್ಕವು ಸದರಿ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 15-00 ಗಂಟೆಯಿಂದ 16-00 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ನಂತರ ದಾಳಿಯಲ್ಲಿ ಸಿಕ್ಕ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಂಡ ವ್ಯಕ್ತಿಯೊಂದಿಗೆ ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 16-10 ಗಂಟೆಗೆ ಬಂದು ವರದಿ ತಯ್ಯಾರಿಸಿ 16-30 ಗಂಟೆಗೆ ಮುಂದಿನ ಕ್ರಮಕೈಕೊಳ್ಳಲು ಸೂಚಿಸಿದ್ದು. ಸದರಿ ಸಾರಾಂಶವು ಅಸಂಜ್ಞಯ ಅಪರಾದ ವಾಗಿದ್ದರಿಂದ ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಪಿ.ಸಿ.256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 17-00 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 408/2017 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಸೈದಾಪುರ ಪೊಲೀಸ್ ಠಾಣೆ ಗುನ್ನೆ ನಂ. 189/2017 ಕಲಂ 143.147.148.323.324.354.355.ಸಂ 149 ಐ ಪಿ ಸಿ;- ದಿನಾಂಕ 30-10-2017 ರಂದು 8-15 ಪಿ ಎಂ ಕ್ಕೆ ಅಜರ್ಿದಾರನಾದ ಶ್ರೀ ಸಿದ್ದಲಿಂಗಪ್ಪ ತಂದೆ ದೇಸಾಯಿ ಕಬ್ಬಲಿಗೇರ ಸಾ|| ಕರಣಗಿ ಇವರ ಒಂದು ಲಿಖಿತ ಅಜರ್ಿಯನ್ನು ತಂದು ಹಾಝರ ಮಾಡಿದ್ದು ಅದರ ಸಂಕ್ಷಿಪ್ತ ಸಾರಾಂಶವೇನಂದರೆ. ಅಜರ್ಿದಾರನ ಹೊಲದಲ್ಲಿ ಆರೋಪಿ ಆನಂದ ಇವರು ಟ್ರ್ಯಾಕ್ಟರ ತೆಗೆದುಕೊಂಡು ಹೋದ ವಿಷಯದಲ್ಲಿ ಪಿಯರ್ಾದಿಗೆ ಹಾಗು ಆತನ ಹೆಂಡತಿ ಮಕ್ಕಳಿಗೆ ಆರೋಪಿತರು ನ್ಯಾಯ ಪಂಚಾಯತಿ ಮಾಡೋಣ ಅಂತಾ ಕರೆದು ಅವಾಚ್ಚವಾಗಿ ಬೈದು.ಕೈಯಿಂದ ಹಾಗೂ ಬಡಿಗೆಯಿಂದ. ಚಪ್ಪಲಿಯಿಂದ ಹೊಡೆದು ಮಾನ ಭಂಗ ಮಾಡಿದ್ದು ಅಂತಾ ಪಿಯರ್ಾದಿ ಸಾರಾಂಶದ ಮೇಲಿಂದ ಗುನ್ನೆ ನಂ 189/2017 ಕಲಂ 143.147.148.323.324.354.355.ಸಂ 149 ಐ ಪಿ ಸಿ ರಲ್ಲಿ ಪ್ರಕರಣ ವರದಿಯಾಗಿದೆ.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 190/2017 ಕಲಂ 143.147.148.323.324.341.504.ಸಂ 149 ಐ ಪಿ ಸಿ ;- ದಿನಾಂಕ 30-10-2017 ರಂದು 8-15 ಪಿ ಎಂ ಕ್ಕೆ ಅಜರ್ಿದಾರನಾದ ಆಂಜಪ್ಪ ತಂದೆ ಸಾಬಣ್ಣ ನಾಯಿಕಿನ ಜಾ|| ಕಬ್ಬಲಿಗೇರ ಉ|| ಒಕ್ಕಲುತನ ಸಾ|| ಕರಣಗಿ ಇವರ ಒಂದು ಲಿಖಿತ ಅಜರ್ಿಯನ್ನು ತಂದು ಹಾಜರ ಮಾಡಿದ್ದು ಅದರ ಸಂಕ್ಷಿಪ್ತ ಸಾರಾಂಶವೇನಂದರೆ. ಆರೋಫಿತರ ಹೊಲದಲ್ಲಿ ಅಜರ್ಿದಾರನ ಮಗ ಆನಂದ ಇವರು ಟ್ರ್ಯಾಕ್ಟರ ತೆಗೆದುಕೊಂಡು ಹೋದ ವಿಷಯದಲ್ಲಿ ಪಿಯರ್ಾದಿದಾರನ ಹೆಂಡತಿ ಮಗನಿಗೆ ಆರೋಪಿತರು ಹೊಲದ ಹತ್ತಿರ ಟ್ರ್ಯಾಕ್ಟರ ತಡೆದು ಅವಾಚ್ಚವಾಗಿ ಬೈದು. ಕೈಯಿಂದ ಬಾರಕೋಲದಿಂದ ಹಾಗೂ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದು ಅಂತಾ ಪಿಯರ್ಾದಿ ಸಾರಾಂಶದ ಮೇಲಿಂದ ಗುನ್ನೆ ನಂ 189/2017 ಕಲಂ 143.147.148.323.324.341.504.ಸಂ 149 ಐ ಪಿ ಸಿ ರಲ್ಲಿ ಪ್ರಕರಣ ವರದಿಯಾಗಿದೆ.
No comments:
Post a Comment