ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಪ್ರಕಾಶ ತಂದೆ ದಗಡು ಮೇನಕುದುಳೆ ಸಾ; ವೈರಾಗ ತಾ;ಬಾರ್ಸಿ ಜಿ;ಸೋಲಾಪೂರ ಮಹಾರಾಷ್ಟ್ರ ತಮ್ಮ ಗ್ರಾಮದ ನಮ್ಮ ಸಂಭಂದಿಕರಾದ ಈಶ್ವರ ತಂದೆ ಶಾಂತಪ್ಪಾ ಶೀಲವಂತ ಇವರ ಮದುವೆ ಕಾರ್ಯಕ್ರಮವು ಕಲಬುರಗಿ ಜಿಲ್ಲೆ ರಟಕಲ್ ಗುಡ್ಡಾದಲ್ಲಿ ಇರುವದರಿಂದ ಮದುವೆಗಾಗಿ ಇಂದು ದಿನಾಂಕ. 21-11-2017 ರಂದು ಬೆಳಗಿನ ಜಾವಾದಲ್ಲಿ ನಮ್ಮ ಗ್ರಾಮದಿಂದ ಒಂದು ಕ್ರೋಜರ ನಂ.ಎಂ.ಹೆಚ. 45 ಎನ್-7878 ನೆದ್ದರಲ್ಲಿ ನಾನು ಮತ್ತು ನಮ್ಮ ಗ್ರಾಮದ 2) ಗಂಗಾಧರ ತಂದೆ ಮಹಾದೇವಪ್ಪಾ ಶೀಲವಂತ 3)ಭೀಮಾಶಂಕರ ತಂದೆ ಮಲ್ಲಿಕಾರ್ಜುನ ಶೀಲವಂತ 4) ಉಜ್ವಲ ತಂದೆ ಭೀಮಾಶಂಕರ ಶೀಲವಂತ 5) ಆನಂದ ತಂದೆ ಬಾಬುರಾವ ಶೀಲವಂತ 6) ಪ್ರಜ್ವಾಲ್ ತಂದೆ ವಿಜಯ ತೂಗಾಂವಕರ 7) ರೋಹಿತ ತಂದೆ ನೀಲಕಂಠ ಶೀಲವಂತ 8) ನಾಗರಾಜ ತಂದೆ ಮನಗೋಳಪ್ಪಾ ಶೀಲವಂತ 9) ಮಹಾಂತೇಶ ತಂದೆ ಗಂಗಾದರ ಶೀಲವಂತ 10) ಸಿದ್ದೇಶ್ವರ ತಂದೆ ಶರಣಪ್ಪಾ ಣಳಗೆ 11) ಗಣೇಶ ತಂದೆ ಶಿವರಾಜ ಶೀಲವಂತ ಸಾ;ಎಲ್ಲರೂ ವೈರಾಗ ತಾ;ಬಾರ್ಸಿ ಜಿ;ಸೋಲಾಪೂರ ಎಲ್ಲರೂ ಕ್ರೋಜರದಲ್ಲಿ ಕುಳಿತಿದ್ದು ಸದರಿ ನಾವು ಕುಳಿತು ಕ್ರೋಜರನ್ನು ಬಾಲಾಜಿ ತಂದೆ ರಾಮ ಕಾಗೆಇತನು ನಡೆಯಿಸುತಿದ್ದನು, ನಾನು ಮತ್ತು ಸಿದ್ದೇಶ್ವರ ಡ್ರೈವರ ಪಕ್ಕದ ಶೀಟನಲ್ಲಿ ಕುಳಿತಿದ್ದು ಉಳಿದವರು ಹಿಂದಿನ ಶೀಟಗಳ ಮೇಲೆ ಕುಳಿತಿದ್ದರು ಹಾಗೂ ನಮ್ಮಂತೆ ಇನ್ನೋಂದು ಕ್ರೋಜರದಲ್ಲಿ ಕೇವಲ ಹೆಣ್ಣು ಮಕ್ಕಳು ಇಬ್ಬರು ಗಂಡಸು ಮಕ್ಕಳಿದ್ದರು ರಟಕಲ್ ಹೋಗುವಾಗ ಮುಂಜಾನೆ 8-30 ಗಂಟೆಯ ಸುಮಾರಿಗೆ ಕಲಬುರಗಿ ನಂತರ ಅವರಾಧ (ಬಿ) ಗ್ರಾಮದ ದಾಟಿ ಮುಂದೆ 2 ಕೀ ಮೀ ಅಂತರದಲ್ಲಿ ನಮ್ಮ ಕ್ರೋಜರ ರೋಡಿನ ಎಡಬದಿಗೆ ಹೋಗುತ್ತಿದ್ದಾಗ ಅದೇ ವೇಳೆ ಗೆ ಹುಮನಾಬಾದ ಕಡೆಯಿಂದ ಒಂದು ಟ್ಯಾಂಕರ ಲಾರಿ ನೆದ್ದರ ಚಾಲಕನು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬರುತ್ತಾ ಒಂದು ವಾಹನ್ನಕ್ಕೆ ಓವರ ಟೇಕ ಮಾಡಿ ಬಂದು ನಮ್ಮ ಕ್ರೋಜರಕ್ಕೆ ಜೋರಾಗಿ ಡಿಕ್ಕಿ ಹೊಡೆದನು ಇದರಿಂದ ನಮ್ಮ ಕ್ರೋಜರ ಟಾಪ ಕಿತ್ತು ಹೋಗಿದ್ದು ಸದರಿ ನಮ್ಮ ಕ್ರೋಜರದಲ್ಲಿ ಕುಳಿತಿದ್ದ ನನಗೆ ಹಣೆಯ ಮೇಲ್ಭಾಗದಲ್ಲಿ ರಕ್ತಗಾಯ , ಬಲಗಾಲು ಮೊಳಕಾಲಿಗೆ ರಕ್ತಗಾಯವಾಗಿರುತ್ತದೆ. 2) ಗಂಗಾಧರ ತಂದೆ ಮಹಾದೇವಪ್ಪಾ ಶೀಲವಂತ ಇತನಿಗೆ ಮುಖ ಪೂತಿ ಜಜ್ಜದಿದ್ದು ತಲೆಯ ಬಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದನು 3)ಭೀಮಾಶಂಕರ ತಂದೆ ಮಲ್ಲಿಕಾರ್ಜುನ ಶೀಲವಂತ ಇತನಿಗೆ ಮುಖ ಪೂರ್ಜಿ ಜಜ್ಜಿದ್ದು ತಲೆಭಾರಿ ಪೆಟ್ಟಾಗಿದ್ದು ಸ್ಥಳದಲ್ಲಿ ಮೃತಪಟ್ಟಿದ್ದನು 4) ಉಜ್ವಲ ತಂದೆ ಭೀಮಾಶಂಕರ ಶೀಲವಂತ ಇತನಿಗೆ ತಲೆಗೆ ಭಾರಿ ಪೆಟ್ಟಾಗಿ ಮುಖಕ್ಕೆ ಭಾರಿಗಾಯವಾಗಿರುತ್ತದೆ ಇತನು ಕೂಡಾ ಸ್ಥಳದಲ್ಲಿಯೇ ಮೃತ ಪಟ್ಟಿದ್ದನು 5) ಆನಂದ ತಂದೆ ಬಾಬುರಾವ ಶೀಲವಂತ ಇತನಿಗೆ ತಲೆಗೆ ಮುಖಕ್ಕೆ ಭಾರಿ ಪೆಟ್ಟಾಗಿ ರಕ್ತಾಯವಾಗಿರುತ್ತದೆ , 6) ಪ್ರಜ್ವಾಲ್ ತಂದೆ ವಿಜಯ ತೂಗಾಂವಕರ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿ , ಮುಖಕ್ಕೆ ಭಾರಿ ಪೆಟ್ಟಾಗಿ 7) ರೋಹಿತ ತಂದೆ ನೀಲಕಂಠ ಶೀಲವಂತ ಇತನಿಗೆ ಹಣೆ ಬಲಭಾಗದಲ್ಲಿ ರಕ್ತಗಾಯ,8) ನಾಗರಾಜ ತಂದೆ ಮನಗೋಳಪ್ಪಾ ಶೀಲವಂತ ಇತನಿಗೆ ತಲೆಯ ಮುಂಬಾಗದಲ್ಲಿ ತಲೆಯ ಪಕ್ಕದಲ್ಲಿ ಭಾರಿ ರಕ್ತಗಾಯ 9) ಮಹಾಂತೇಶ ತಂದೆ ಗಂಗಾದರ ಶೀಲವಂತ ಇತನಿಗೆ ಹಣೆಯ ಮೇಲ್ಭಾಗದಲ್ಲಿ ತಲೆಗೆ ಭಾರಿ ರಕ್ತಗಾಯ , ಎಡಮೆಲಕಿಗೆ ,ಎಡಗಣ್ಣಿ ಪಕ್ಕದಲ್ಲಿ ರಕ್ತಗಾಯವಾಗಿರುತ್ತದೆ ಬಾಯಿಗೆ ಭಾರಿ ಪೆಟ್ಟಾಗಿ ರಕ್ತಸ್ರಾವವಾಗಿರುತ್ತದೆ. 10) ಸಿದ್ದೇಶ್ವರ ತಂದೆ ಶರಣಪ್ಪಾ ನೇಳಗೆ ಇತನಿಗೆ ಹೆಣೆ ಮೇಲ್ಬಾಗದಲ್ಲಿ , ತಲೆಯ ಎಡಭಾಗದಲ್ಲಿ ಭಾರಿ ರಕ್ತಗಾಯವ , ತಲೆಯ ಮೇಲೆ ರಕ್ತಗಾಯ ಹಿಂದುಗಡೆ , ಮುಖಕ್ಕೆ ರಕ್ತಗಾಯ ವಾಗಿರುತ್ತದೆ 11) ಗಣೇಶ ತಂದೆ ಶಿವರಾಜ ಶೀಲವಂತ ಇತನಿಗೆ ಬಲಕಿವಿಯ ಕೆಳಗೆ ಭಾರಿ ರಕ್ತಗಾಯವಾ ಬಾಯಿ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ. 12) ಕ್ರೋಜರ ಚಾಲಕ ಬಾಲಾಜಿಗೆ ಬಲಭುಜಕ್ಕೆ ರಕ್ತಗಾಯ ಮತ್ತು ತಲೆಗೆ ಗುಪ್ತ ಪೆಟ್ಟಾಗಿರುತ್ತದೆ. ನಮ್ಮಗೆ ಡಿಕ್ಕಿ ಹೊಡೆದು ಟ್ಯಾಂಕರ ನಂಬರ ನೋಡಲಾಗಿ ಕೆ.ಎ.32 ಸಿ.4546 ನೆದ್ದು ಇತ್ತು ಅದರ ಚಾಲಕನು ಜನರು ಸೇರುವಷ್ಟರಲ್ಲಿ ತನ್ನ ಟ್ಯಾಂಕರ ಅಲ್ಲಿಯೇ ಬಿಟ್ಟು ಓಡಿ ಹೋದನು ಸದರಿ ಚಾಲಕನಿಗೆ ನೋಡಿದಲ್ಲಿ ಗುರ್ತಿಸುತ್ತೇವೆ ,ಅಷ್ಟರಲ್ಲಿ ನಮ್ಮ ಹಿಂದೆ ಬರುತಿದ್ದ ನಮ್ಮ ಇನ್ನೊಂದು ಕ್ರೋಜರದಲ್ಲಿ ಇದ್ದ ಘಟನೆಯನ್ನು ನೋಡಿ ಬಂದ ಅಶೋಕ ಶೀಲವಂತ , ಜಗದೀಶ ಶೀಲವಂತ , ಅನುರಾಧ ತಳವಾಡಿ ಇತರರು ಬಂದು ನಮಗೆ ಎಬ್ಬಿಸಿದರು ನಂತರ ಒಂದು ಖಾಸಗಿ ವಾಹನದಲ್ಲಿ ಮತ್ತು ಅಂಬಲೆನದಲ್ಲಿ ಕೂಡಿಸಿಕೊಂಡು ಕಲಬುರಗಿ ಯುನೈಟೆಡ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅದರಲ್ಲಿ ಅಂಬುಲೆನ್ಸದಲ್ಲಿ ತರುವಾಗ ಮಾರ್ಗಮದ್ಯದಲ್ಲಿ ಆನಂದ ತಂದೆ ಬಾಬುರಾವ ಶೀಲವಂತ ಮತ್ತು ಪ್ರಜ್ವಾಲ್ ತಂದೆ ವಿಜಯ ತೂಗಾಂವಕರ ಇವರು ಮೃತ ಪಟ್ಟಿರುತ್ತಾರೆ ಮತ್ತು ಸ್ಥಳದಲ್ಲಿಯೇಮೃತಪಟ್ಟ1) ಗಂಗಾಧರ ತಂದೆ ಮಹಾದೇವಪ್ಪಾ ಶೀಲವಂತ 2)ಭೀಮಾಶಂಕರ ತಂದೆ ಮಲ್ಲಿಕಾರ್ಜುನ ಶೀಲವಂತ 3) ಉಜ್ವಲ ತಂದೆ ಭೀಮಾಶಂಕರ ಶೀಲವಂತ ಇವರ ಶವವು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ. ಸದರಿ ನಮ್ಮ ಕ್ರೋಜರಕ್ಕೆ ಅಪಘಾತ ಪಡಿಸಿದ್ದ ಟ್ಯಾಂಕರ ಲಾರಿ ನಂ.ಕೆ.ಎ.32. ಸಿ 4546 ನೆದ್ದರ ಚಾಲಕನು ತನ್ನ ಟ್ಯಾಂಕರನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಓಡಿಸಿಕೊಂಡು ಬಂದು ಒಂದು ವಾಹನಕ್ಕೆ ಓವರ ಟೇಕ ಮಾಡಿ ಬಂದು ಎದರುಗಡೆ ರೋಡಿನ ಎಡಬದಿಗೆ ಹೋಗುತಿದ್ದ ನಮ್ಮ ಕ್ರೋಜರಕ್ಕೆ ಡಿಕ್ಕಿ ಹೊಡೆದರೆ ಅದರಲ್ಲಿದ್ದ ಪ್ರಯಾಣಿಕರ ಸಾವು ಸಂಭವಿಸಬಹುದು ಅಂತಾ ಗೊತ್ತಿದ್ದು ಕೂಡಾ ತನ್ನ ಟ್ಯಾಂಕರ ಲಾರಿ ಅತೀವೇಗವಾಗಿ ನಡೆಯಿಸಿಕೊಂಡು ಬಂದು ನಿಸ್ಕಾಳಜಿಂದ ನಮ್ಮ ಕ್ರೋಜರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಸಂಭವಿಸಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಬಾಳಾಸಾಹೇಬ ತಂದೆ ಶಿವಾಜಿ ಪವಾರ ಸಾ|| ರಾಜೇವಾಡಿ ಕೋರಿ ತಾಂಡಾ ತಾ|| ಮಾಜಲಗಾಂವ ಜಿ|| ಬೀಡ್ (ಮಹಾರಾಷ್ಟ್ರ) ಇವರು ತಮ್ಮ ತಾಂಡಾದ ಸಂತೋಷ ತಂದೆ ವಿಠ್ಠಲ ಪವಾರ ಇವರ ಟ್ಯಾಕ್ಟರ ನಂ ಎಮ್.ಹೆಚ್-44 ಡಿ-2005 ನೇದ್ದರ ಮೇಲೆ ಚಾಲಕ ಅಂತ ಕೆಲಸ ಮಾಡಿಕೊಂಡು ಜಿವನ ಸಾಗಿಸುತ್ತಿರುತ್ತೇನೆ. ನಾವು ಪ್ರತಿ ವರ್ಷ ವಿಜಯಪೂರ ಜಿಲ್ಲೆಯ ಕೆ,.ಪಿ.ಆರ್ ಸಕ್ಕರೆ ಕಾರ್ಖಾನೆಗೆ, ಕಬ್ಬು ಕಟಾವು ಮಾಡಿ ಟ್ಯಾಕ್ಟರದಲ್ಲಿ ಸಾಗಾಣಿಕೆ ಮಾಡುತ್ತೇವೆ. ನಾವು ಕಬ್ಬನ್ನು ಕಾರ್ಖಾನೆಯ ಸುತ್ತ ಮುತ್ತ ಅಂದರೆ, ಅಫಜಲಪೂರ ತಾಲೂಕಿನಲ್ಲಿ, ಸಿಂದಗಿ ತಾಲೂಕಿನಲ್ಲಿ, ಇಂಡಿ ತಾಲೂಕಿನಲ್ಲಿ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಾಟ ಮಾಡುತ್ತೇವೆ. ಅದರಂತೆ ದಿನಾಂಕ 16-11-2017 ರಂದು ಅಫಜಲಪೂರ ತಾಲೂಕಿನ ಬಂದರವಾಡ ಗ್ರಾಮದ ಭೀರಪ್ಪ ತಂದೆ ನಾಗಪ್ಪ ಪೂಜಾರಿ ರವರ ಹೊಲದಲ್ಲಿ ಕಬ್ಬು ಕಟಾವು ಮಾಡಿದ್ದು, ಸಂಜೆ 7:45 ಗಂಟೆಗೆ ಸದರಿ ಮೇಲೆ ತಿಳಿಸಿದ ಟ್ಯಾಕ್ಟರ ನಂ ಎಮ್.ಹೆಚ್-44 ಡಿ-2005 ನೇದ್ದರಲ್ಲಿ ಕಬ್ಬು ತುಂಬಿಕೊಂಡು ಅಫಜಲಪೂರ ಮಾರ್ಗವಾಗಿ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಗೆ ತಗೆದುಕೊಂಡು ಹೊರಟಿರುತ್ತೇನೆ. ಟ್ಯಾಕ್ಟರನಲ್ಲಿ ನನ್ನ ಜೋತೆಗೆ ಕಬ್ಬು ಕಟಾವು ಮಾಡುವ ನಮ್ಮ ತಾಂಡಾದ ಬಾಳಾಸಾಹೇಬ ತಂದೆ ಮಹಾದೇವ ಪವಾರ ಈತನು ಸಹ ಹೊರಟಿದ್ದನು, ರಾತ್ರಿ ಅಂದಾಜು 9:30 ಗಂಟೆ ಸುಮಾರಿಗೆ ಅಫಜಲಪೂರ ಇನ್ನು ಅಂದಾಜು 3-4 ಕೀ ಮಿ ದೂರ ಇರುವಾಗ ನಮ್ಮ ಟ್ಯಾಕ್ಟರ ಹಿಂದೆ ಒಬ್ಬ ಬೋಲ್ಲೆರೊ ವಾಹನದ ಚಾಲಕನು ತನ್ನ ಬೋಲ್ಲೆರೊ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ಚಾಲಾಯಿಸಿಕೊಂಡು ಬಂದು ನಮ್ಮ ಟ್ಯಾಕ್ಟರ ಹಿಂದೆ ಡಿಕ್ಕಿ ಹೊಡೆದನು. ಆಗ ನಾವು ಟ್ಯಾಕ್ಟರ ನಿಲ್ಲಿಸಿ ಇಳಿದು ನೋಡಲಾಗಿ ಬೋಲ್ಲೆರೋ ವಾಹನ ಜಕಂ ಆಗಿದ್ದು, ಅದರ ಚಾಲಕನಿಗೆ ಭಾರಿ ರಕ್ತಗಾಯಗಳು ಹಾಗೂ ಗುಪ್ತಗಾಯಗಳು ಆಗಿದ್ದವು. ಸದರಿ ಬೋಲ್ಲೆರೊ ವಾಹನದ ಚಾಲಕನ ಹೆಸರು ವಿಳಾಸ ವಿಚಾರಿಸಿದ್ದು, ವಿಶ್ವನಾಥ ತಂದೆ ಸುಬಾಷ ಕುರನಳ್ಳಿ ಸಾ|| ಬಗಲೂರ ತಾ|| ಸಿಂದಗಿ ನಂತರ ನಾವು ರಸ್ತೆಗೆ ಹೋಗಿ ಬರುವು ವಾಹನಗಳನ್ನು ನಿಲ್ಲಿಸಿದ್ದು, ನಾವು ಮತ್ತು ರೋಡಿಗೆ ಹೋಗಿ ಬರುವ ವಾಹನಗಳಲ್ಲಿನ ಜನರು ಸದರಿ ಬೋಲ್ಲೆರೊ ಚಾಲಕನನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿ ಅಫಜಲಪೂರಕ್ಕೆ ಕಳುಹಿಸಿಕೊಟ್ಟಿರುತ್ತೇವೆ. ಸದರಿ ಡಿಕ್ಕಿಯಾದ ನಂಬರ ನೋಡಲಾಗಿ ಅದರ ಮೇಲೆ ಯಾವುದೆ ನಂಬರ ಇರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 21-11-2017 ರಂದು ದೇಸಾಯಿ ಕಲ್ಲೂರ ತಾಂಡಾದ ಸೇವಾಲಾಲ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದೇಸಾಯಿ ಕಲ್ಲೂರ ತಾಂಡಾದ ಸೇವಾಲಾಲ ಗುಡಿ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಸೇವಾಲಾಲ ಗುಡಿ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 07 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜಾಜಾಡುತಿದ್ದ 07 ಜನರಲ್ಲಿ 04 ಜನರು ಸಿಕ್ಕಿದ್ದು 03 ಜನರು ಓಡಿ ಹೋಗಿರುತ್ತಾರೆ ಸಿಕ್ಕ 04 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಬಾಬು ತಂದೆ ಮಾದು ರಾಠೋಡ 2) ಪರಶುರಾಮ ತಂದೆ ಢಾಕು ರಾಠೋಡ 3) ಮೋಹನ@ಮಹಾದೇವ ತಂದೆ ಢಾಕು ರಾಠೋಡ 4) ಪವನ ತಂದೆ ಅಶೋಕ ರಾಠೋಡ ಸಾ||ಎಲ್ಲರು ದೇಸಾಯಿ ಕಲ್ಲೂರ ಅಂತಾ ತಿಳಿಸಿದ್ದು ನಂತರ ಸದರಿಯವರಿಗೆ ಓಡಿ ಹೋದವರ ಬಗ್ಗೆ ವಿಚಾರಿಸಲಾಗಿ ಅವರ ಹೆಸರು ವಿಳಾಸ 5) ಅಶೋಕ ತಂದೆ ನಾಮು ರಾಠೋಡ 6) ಹಣಮಂತ ತಂದೆ ಸ್ವಾಮು ರಾಠೋಡ 7) ಸುನಿಲ ತಂದೆ ದಾಮ್ಲು ಚವ್ಹಾಣ ಸಾ||ಎಲ್ಲರು ದೇಸಾಯಿ ಕಲ್ಲೂರ ತಾಂಡಾ ಅಂತ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 3060/- ರೂ ನಗದು ಹಣ ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿನಿಯರಿಗೆ ಕಿಟಲೆ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 21-11-2017 ರಂದು ಅಫಜಲಪೂರ ಠಾಣೆಯ ಶ್ರೀ ಸುರೇಶ ಹೆಚ್.ಸಿ-394 ರವರು ಒಬ್ಬ ಆರೋಪಿತನನ್ನು ಹಾಜರು ಪಡಿಸಿ ವರದಿ ನೀಡಿದ್ದು, ದಿನಾಂಕ 21-11-2017 ರಂದು ಬೆಳಿಗ್ಗೆ 10:00 ಗಂಟೆಗೆ ನಾನು ಮಾನ್ಯ ರವರು ಆದೇಶದಂತೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೋಲಿಂಗ ಮಾಡುತ್ತಾ ಅಫಜಲಪೂರ ಪಟ್ಟಣದ ಮಹಾಂತೇಶ್ವರ ಕಾಲೇಜ ಹತ್ತಿರ ಬಂದಾಗ, ಕಾಲೇಜ ಮುಂದೆ ಒಬ್ಬ ವ್ಯೆಕ್ತಿ ನಿಂತುಕೊಂಡು ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿನಿಯರಿಗೆ ಚುಡಾಯಿಸುವುದು ಮಾಡುತ್ತಿದ್ದನು, ಆಗ ನಾನು ಸದರಿ ವ್ಯೆಕ್ತಿಯನ್ನು ಹಿಡಿಯುವ ಸಂಭಂದ ಬಸವೇಶ್ವರ ಸರ್ಕಲ ಕರ್ತವ್ಯದಲ್ಲಿ ಗಿರೇಪ್ಪ ಪಿಸಿ-207 ರವರನ್ನು ಬರಮಾಡಿಕೊಂಡು ವಿಷಯ ತಿಳಿಸಿದೆನು, ಸದರಿ ಕಾಲೇಜ ಮುಂದೆ ನಿಂತಿದ್ದ ವ್ಯೆಕ್ತಿ ಪುನ ಹೋಗಿ ಬರುವ ವಿದ್ಯಾರ್ಥಿನಿಯರಿಗೆ ಚುಡಾಯಿಸಿ ಅವರಿಗೆ ಅವಮಾನ ಮಾಡುತ್ತಿದ್ದರಿಂದ ಸದರಿಯವನನ್ನು ನಾನು ಮತ್ತು ಗಿರೆಪ್ಪ ಪಿಸಿ-207 ಇಬ್ಬರು ಕೂಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಕಾಡಸಿದ್ದ @ ಸಿದ್ದು ತಂದೆ ಶಿವರಾಯ ಬಿರಾದಾರ ಸಾ|| ಕಾರ ಭೋಸಗಾ ಹಾ|| ವ|| ಡಿಗ್ರಿ ಕಾಲೇಜ ಹತ್ತಿರ ಅಫಜಲಪೂರ ಅಂತ ಏರು ದ್ವನಿಯಲ್ಲಿ ತಿಳಿಸಿದನು. ಸದರಿಯವನು ಕಾಲೇಜ ವಿದ್ಯಾರ್ಥಿನಿಯರಿಗೆ ಚುಡಾಯಿಸಿ ಅವರಿಗೆ ಅವಮಾನ ಮಾಡುತ್ತಿದ್ದರಿಂದ ಸದರಿಯವನನ್ನು ಹಿಡಿದುಕೊಂಡು ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 21-11-2017 ರಂದು ಸುಧಾರಿತ ಬೀಟ್ ನಂ 21 ಮಾಶಾಳ ಗ್ರಾಮದ ಬೀಟ್ ಕರ್ತವ್ಯದ ಪಿಸಿ-881 ಶರಣಪ್ಪ ರವರು ಬಾತ್ಮಿದಾರರಿಂದ ಮಾಹಿತಿ ಸಂಗ್ರಯಿಸಿ ತಿಳಿಸಿದ್ದೆನೆಂದರೆ, ಮಾಶಾಳ ಗ್ರಾಮದ ಚವಡೇಶ್ವರಿ ದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ ಮೇರೆಗೆ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮದ ಚವಡೇಶ್ವರಿ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಚವಢೇಶ್ವರಿ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಡೇಪ್ಪ ತಂದೆ ಯಲ್ಲಪ್ಪ ಕುಂಬಾರ ಸಾ||ಚವಡೇಶ್ವರಿ ಗುಡಿ ಹತ್ತಿರ ಮಾಶಾಳ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1260/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮುಂಜಾಗ್ರತ ಕ್ರಮ :
ಅಫಜಲಪೂರ ಠಾಣೆ : ಶ್ರೀ ದರೇಶ ಪಿಸಿ-1111 ಅಫಜಲಪೂರ ಠಾಣೆ ರವರು ದಿನಾಂಕ 21-11-2017 ರಂದು ಬೆಳಿಗ್ಗೆ ಠಾಣಾಧಿಕಾರಿಯವರ ಆದೇಶದಂತೆ ಸುದಾರಿತ ಗ್ರಾಮ ಗಸ್ತು ಕರ್ತವ್ಯ ಕುರಿತು ಗೌರ (ಕೆ) ಗ್ರಾಮಕ್ಕೆ ಹೋದಾಗ ಗ್ರಾಮದ ಬಾತ್ಮಿದಾರರಿಂದ ತಿಳಿದು ಬಂದಿದ್ದೇನೆಂದರೆ, ಗ್ರಾಮದ ಮಲ್ಲಪ್ಪ ತಂದೆ ಮಾಳಪ್ಪ ಹೊಸಮನಿ ಹಾಗೂ ರಮೇಶ ತಂದೆ ಕಾಂತಪ್ಪ ಹೊಸಮನಿ ಇವರುಗಳ ಮದ್ಯ ಹೊಲದ ಹೊಲದ ಪಾಲಿನ ವಿಚಾರವಾಗಿ ಒಬ್ಬರಿಗೊಬ್ಬರು ಬಾರಿ ದ್ವೇಷ ಮಾಡಿಕೊಂಡು ವೈಮನಸ್ಸು ಮಾಡಿಕೊಂಡು ಗ್ರಾಮದಲ್ಲಿ ಇಬ್ಬರು ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದಾರೆ, ಸದರಿಯವರು ಅವರ ಮನೆಯ ಮುಂದೆ ಇವರು ಹೋಗಿ ಕೂಗಾಡುವುದು ಹಾಗೂ ಇವರ ಮನೆಯ ಮುಂದೆ ಅವರು ಬಂದು ಕೂಗಾಡುವುದು ಮಾಡುತ್ತಿದ್ದಾರೆ, ಸದರಿಯವರು ಗ್ರಾಮಕ್ಕೆ ಪೊಲೀಸರು ಬಂದಾಗ ಸುಮ್ಮನಿದ್ದು ನಂತರ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದಾರೆ, ಸದರಿಯವರಿಂದ ಗ್ರಾಮದ ಜನರು ಭಯಭಿತರಾಗಿದ್ದಾರೆ, ಹಾಗೂ ಸದರಿಯವರಿಂದ ಗ್ರಾಮದಲ್ಲಿ ಶಾಂತತಾ ಭಂಗ ಉಂಟಾಗುತ್ತಿದೆ ಎಂದು ಗ್ರಾಮದ ಬಾತ್ಮಿದಾರರು ತಿಳಿಸಿದ ಮೇರೆಗೆ, 1) ಮಲ್ಲಪ್ಪ ತಂದೆ ಮಾಳಪ್ಪ ಹೊಸಮನಿ 2) ಹೋನ್ನಪ್ಪ ತಂದೆ ಮಾಳ್ಪಪ ಹೊಸಮನಿ 3) ಲಕ್ಕಪ್ಪ ತಂದೆ ಮಾಳಪ್ಪ ಹೊಸಮನಿ 4) ನಾಗು @ ನಾಗಪ್ಪ ತಂದೆ ಮಾಳಪ್ಪ ಹೊಸಮನಿ ಸಾ|| ಎಲ್ಲರು ಗೌರ (ಕೆ) ಮತ್ತು 1) ರಮೇಶ ತಂದೆ ಕಾಂತಪ್ಪ ಹೊಸಮನಿ ಸಾ|| ಗೌರ (ಕೆ) 2). ಕಾಂತಪ್ಪ ತಂದೆ ಭೂತಾಳಿ ಹೊಸಮನಿ ಸಾ ಗೌರ (ಕೆ) ಇವರೆಲ್ಲರು ಒಬ್ಬರಿಗೋಬ್ಬರು ಬಾರಿ ದ್ವೇಷ ಮಾಡಿಕೊಂಡು ಗ್ರಾಮದಲ್ಲಿ ತಿರುಗಾಡುತ್ತಿದ್ದು, ಸದರಿಯವರು ಇದೆ ರೀತಿ ದ್ವೇಷ ಸಾದಿಸುತ್ತಾ ತಿರುಗಾಡುತ್ತಿದ್ದರಿಂದ ಪ್ರಾಣ ಹಾನಿಯಾಗುವ ಸಂಭವ ಇರುವ ಕಾರಣ ಸದರಿಯವರನ್ನು ಠಾಣೆಗೆ ಕರೆದುಕೊಂಡು ಬಂದಿರುತ್ತೇನೆ. ಸದರಿಯವರಿಂದ ಗ್ರಾಮದಲ್ಲಿ ಶಾಂತಿ ಸುವ್ಯೆವಸ್ಥೆ ಕದಡುವ ಸಂಭವ ಇರುತ್ತದೆ ಎಂದು ತಿಳಿದು ಬಂದ ಮೇರೆಗೆ ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
ನ್ಯಾಯಾಲಕ್ಕೆ ಹಾಜರಾಗದೆ ತಲೆ ಮರಿಸಿಕೊಂಡ ಆರೋಪಿತರ ವಿರುದ್ಧ ಕ್ರಮ :
ಅಫಜಲಪೂರ ಠಾಣೆ : ದಿನಾಂಕ 21-11-2017 ರಂದು ಅಫಜಲಪೂರ ಠಾಣೆಯ ರುದ್ರಪ್ಪ ಹೆಚ್.ಸಿ-545 ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದು, ಸದರ ವರದಿಯ ಸಾರಾಂಶವೇನೆಂದರೆ ನಾನು ಈಗ 03 ತಿಂಗಳಿಂದ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಅಫಜಲಪೂರ ರವರು ನಮ್ಮ ಠಾಣೆಯ ಪ್ರಕರಣಗಳಲ್ಲಿ ಹೊರಡಿಸುವ ವಾರೆಂಟಗಳನ್ನು ಜಾರಿ ಮಾಡಿ, ಆರೋಪಿತರನ್ನು/ಸಾಕ್ಷೀದಾರರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸುವ ಕರ್ತವ್ಯ ನಿರ್ವಹಿಸುತ್ತಿದ್ದು ನಮ್ಮ ಠಾಣೆಯ ಗುನ್ನೆ ನಂ 02/2014 ಕಲಂ 341. 323. 504. 506 ಸಂ 34 ಐಪಿಸಿ ಸಿಸಿ ನಂ 351/14 ನೇದ್ದರಲ್ಲಿ ಆರೋಪಿತರಾದ 1) ಹೋನ್ನಪ್ಪ ತಂದೆ ಹಣಮಂತ ಕಾಳೆ 2) ಶಿವು ನತಂದೆ ಭೀಮು @ ಭೀಮಾಶಂಕರ ಸಲಗರ 3) ಸುರೇಶ ತಂದೆ ಆನಂದ @ ಅಂದು ಕಾಳೆ 4) ಖಂಡು ತಂದೆ ನಾಮದೇವ ಸಿಂದೆ ಸಾ|| ಎಲ್ಲರೂ ಉಡಚಾಣ ಹಟ್ಟಿ ಇವರು ಮಾನ್ಯ ನ್ಯಾಯಾಲಯದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಜಾಮೀನು ಪಡೆದುಕೊಂಡಿರುತ್ತಾರೆ. ಸದರಿ ಆರೋಪಿತರು ಜಾಮೀನು ಪಡೆದುಕೊಂಡು ವಿಚಾರಣೆಗಾಗಿ ಮಾನ್ಯ ಜೆ,.ಎಮ್.ಎಫ್.ಸಿ ನ್ಯಾಯಾಲಯ ಅಫಜಲಪೂರದಲ್ಲಿ ಹಾಜರಾಗದ ಕಾರಣ ಸದರಿ ಆರೋಪಿತರನ್ನು ಹಾಜರುಪಡಿಸುವಂತೆ ಆದೇಶಿಸಿ ದಿನಾಂಕ 25-08-2016, 05-10-2016, 21-11-2016, 15-02-2017, 19-04-2017, 15-05-2017, 16-06-2017, 15-07-2017, 26-08-2017, 22-09-2017, 11-10-2017, 26-10-2017,14-11-2017 ರಂದು ದಸ್ತಗಿರಿ ವಾರೆಂಟ ಹೊರಡಿಸಿರುತ್ತಾರೆ. ಅದರಂತೆ ನಾನು ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಸದರಿ ಪ್ರಕರಣದಲ್ಲಿ ಆರೋಪಿತರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಕುರಿತು ನಾನು ಆರೋಪಿತರ ಸ್ವ ಗ್ರಾಮಕ್ಕೆ ಹಾಗೂ ಆರೋಪಿತರ ಸಂಭಂದಿಕರ ಗ್ರಾಮಗಳಿಗೆ ಹೋಗಿ ಆರೋಪಿತರ ಮನೆಗೆ ಹೋಗಿ ಆರೋಪಿತರ ಬಗ್ಗೆ ವಿಚಾರಿಸಿದ್ದು, ಆರೋಪಿತರು ತಲೆ ಮರೆಸಿಕೊಂಡಿದ್ದು ತಿಳಿದು ಬಂದಿರುತ್ತದೆ. ನಂತರ ಗ್ರಾಮದ ಬಾತ್ಮಿದಾರರಿಗೂ ವಿಚಾರಿಸಿದ್ದು, ಆರೋಪಿತರು ಎಲ್ಲಿ ಇರುತ್ತಾರೊ ಎನೊ ಗೊತ್ತಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಈಗ ಸದರಿ ಆರೋಪಿತರನ್ನು ದಿನಾಂಕ 16-12-2017 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಮಾನ್ಯ ನ್ಯಾಯಾದೀಶರು ದಸ್ತಗಿರಿ ವಾರೆಂಟನ್ನು ಹೊರಡಿರುತ್ತಾರೆ. ಸದರಿ ಆರೋಪಿತರು ಜಾಮೀನು ಆದಾರದ ಮೇಲೆ ಬಿಡುಗಡೆಯಾಗಿ ವಿಚಾರಣೆ ಕಾಲಕ್ಕೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ವಿಚಾರಣೆ ಕಾಲಕ್ಕೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗುವುದನ್ನು ತಪ್ಪಿಸಿರುತ್ತಾರೆ. ಕಾರಣ ಸದರಿ ಮೇಲೆ ತಿಳಿಸಿದ ಆರೋಪಿತರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment