Police Bhavan Kalaburagi

Police Bhavan Kalaburagi

Thursday, November 2, 2017

Yadgir District Reported Crimes Updated on 02-11-2017


                                                  Yadgir District Reported Crimes

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 213/2017 ಕಲಂ 417, 420  ಐಪಿಸಿ;- ದಿನಾಂಕ 01/11/2017 ರಂದು 12 ಪಿಎಂಕ್ಕೆ ಶ್ರೀ ಪರ್ವತರೆಡ್ಡಿ ತಂ. ಮಹಾದೇವಪ್ಪ ಸಗರ ವಃ52 ಜಾಃ ಲಿಂಗಾಯತ ರೆಡ್ಡಿ ಉಃ ಶಿಕ್ಷಕರು ಸಾಃ ಚಟ್ನಳ್ಳಿ ತಾಃ ಶಹಾಪುರ ಇವರು ಠಾಣೆಗೆ ಹಾಜರಾಗಿ ಒಂದು ಅಜಿಯನ್ನು ಕೊಟ್ಟಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ ಬಿ.ಪಿ.ಡೆವಲಪರ್ಸದ ಶಹಾಜೀವನ ಶಹಾ ನಗರದ ಮಾಲಿಕರಾದ ಬಾಪುಗೌಡ ತಂ. ಬೀಮಣ್ಣಗೌಡ ಮಾಡಗಿ ಉಃ ಶಿಕ್ಷಕರು ಸಾಃ ಒಂದಗನೂರ ತಾಃಸುರಪೂರ ಹಾಃವಃ ಲಕ್ಷ್ಮೀ ನಗರ ಯಾದಗಿರಿ ರವರು ಹಾಗೂ ವೆಂಕಟರಡ್ಡಿ ಅಬ್ಬೆತುಮಕೂರ ಇವರು ನಮಗೆ ಪ್ರತಿ ತಿಂಗಳು 1500-00 ರೂ ರಂತೆ 65 ಕಂತುಗಳು ಒಟ್ಟು 97,500=00 ತುಂಬಿರಿ ಕಂತು ಪೂತರ್ಿ ತುಂಬಿದ ನಂತರ ಪ್ಲಾಟ ನೊಂದಣಿ ಕಾಲಕ್ಕೆ 17,500=00 ರೂ. ಕೊಟ್ಟರೆ ನಿಮಗೆ 30*40 ಪ್ಲಾಟ ಕೊಡುತ್ತೇವೆ ಅಂತಾ ಹೇಳಿದ ಪ್ರಯುಕ್ತ ನಾವು  ಅವರು ಹೇಳಿದಂತೆ ನಾನು ನಮ್ಮ ಮಗಳಾದ ಕು.ಶೀವಲಿಲಾ ಹಾಗೂ ಮಗನಾದ ಅಂಬ್ರೇಶಗೌಡ ತಂ.ಪರ್ವತರೆಡ್ಡಿ ಸಗರ ಸಾಃ ಚಟ್ನಳ್ಳಿ ಇವರ ಹೆಸರಿನಲ್ಲಿ ಯಾದಗಿರಿಯ ಬಿ.ಪಿ.ಡೆವಲಪರ್ಸದ ಶಹಾಜೀವನ ಶಹಾ ನಗರದ ಇವರಲ್ಲಿ 30*40 ಪ್ಲಾಟ ಸಲುವಾಗಿ ಪ್ರತಿ ತಿಂಗಳು ಕಂತಿನ ಹಣ 1500-00 ರೂ ರಂತೆ ಒಟ್ಟು 65 ಕಂತುಗಳು ತುಂಬಿರುತ್ತೇನೆ. ಪ್ಲಾಟ ಕೇಳಲು ಹೋದಾಗ ಸದರಿಯವರು ಇವತ್ತಿಲ್ಲಾ ನಾಳೆ ಕೊಡುತ್ತೇವೆ ಅಂತಾ ಹೇಳಿಕೊಂಡು ಬರುತ್ತಿದ್ದು, ನಮಗೆ ಇಲ್ಲಿಯವರೆಗೆ ಪ್ಲಾಟ ಕೊಟ್ಟಿರುವುದಿಲ್ಲಾ. ಈಗ ಸದರಿ ಬಾಪುಗೌಡ ಇವರು ಊರಲ್ಲಿರದೆ ತಲೆ ಮರೆಸಿಕೊಂಡು ತೀರುಗಾಡುತ್ತಿದ್ದಾನೆ. ಹಾಗೂ ನಮ್ಮಂತೆಯೇ ನಾನಾಗೌಡ ತಂ. ಶಾಂತಗೌಡ ಚನ್ನೂರ, ಚೈತ್ರಾ ಎಂಬುವವರ ಹೆಸರಿನಲ್ಲಿ ಅವರ ತಂದೆಯವರಾದ ಶರಣಗೌಡ ತಂ. ಬಸವಂತ್ರಾಯ ಸಗರ ಸಾಃ ಚಟ್ನಳ್ಳಿ, ಸೂಗುರೇಶ್ವರ ತಂ. ಮುಕುಂದರೆಡ್ಡಿ, ರಮೇಶ ತಂ. ಮಾರುತಿರಾವ, ಚಂದಮ್ಮ ಗಂ. ದೇವಿಂದ್ರಪ್ಪ ನಾಯ್ಕಲ್ ಸಾಃ ಚಟ್ನಳ್ಳಿ ಇವರುಗಳು ಕೂಡಾ ಕಂತುಗಳನ್ನು ತುಂಬಿರುತ್ತಾರೆ ಹಾಗೂ ನಮ್ಮಂತೆಯೇ ಇನ್ನೀತರರು ಅನೇಕ ಜನರು ಕೂಡಾ ಕಂತುಗಳನ್ನು ತುಂಬಿರುತ್ತಾರೆ. ಎಲ್ಲಾ ಜನರು ಕಂತುಗಳನ್ನು ತುಂಬಿ 4-5 ವರ್ಷಗಳಾದರೂ ಕೂಡಾ ನಮಗೆ ಇಲ್ಲಿಯವರೆಗೆ ಪ್ಲಾಟಗಳನ್ನು ಕೊಡದೆ ತಲೆ ಮರೆಸಿಕೊಂಡು ತೀರುಗಾಡುತ್ತಿದ್ದು ಯಾರಿಗೂ ಪ್ಲಾಟಗಳನ್ನು ಕೊಟ್ಟಿರುವುದಿಲ್ಲಾ. ನಮಗೆ ತಿಂಗಳಿಗೆ 1500-00 ರೂ ರಂತೆ ಒಟ್ಟು 65 ಕಂತುಗಳನ್ನು ತುಂಬಿಸಿಕೊಂಡು ಇಲ್ಲಿಯವರೆಗೆ ಪ್ಲಾಟ ಕೊಡದೆ ನಮೆಲ್ಲರಿಗೂ ಪ್ಲಾಟ ಕೊಡುತ್ತೇನೆ ಅಂತಾ  ನಂಬಿಸಿ ಮೋಸ ಮಾಡಿರುತ್ತಾರೆ.ಕಾರಣ ಶಹಾಜೀವನ ಶಹಾ ನಗರದ ಬಿ.ಪಿ.ಡೆವಲಪರ್ಸರಾದ ಬಾಪುಗೌಡ ತಂ. ಬೀಮಣ್ಣಗೌಡ ಮಾಡಗಿ ಹಾಗೂ ವೆಂಕಟರೆಡ್ಡಿ ತಂ. ದೊಡ್ಡ ಬಸ್ಸಣ್ಣ ಅಲ್ಲೂರ ಸಾಃ ಅಬ್ಬೆತುಮಕೂರ ತಾಃ ಯಾದಗಿರಿ ಇವರು ನಮಗೆ ಪ್ಲಾಟ ಕೊಡುತ್ತೇವೆ ಅಂತಾ ನಂಬಿಸಿ ನಮಗೆ 4-5 ವರ್ಷಗಳಿಂದ ಪ್ಲಾಟಗಳನ್ನು ಕೊಡದೆ ಎಲ್ಲಾ ಕಂತಿನ ಹಣವನ್ನು ತುಂಬಿಕೊಂಡು ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ್ದು ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.213/2017 ಕಲಂ.417,420 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 149/2017 ಕಲಂ: 279,337,338,304(ಎ) ಐಪಿಸಿ;-ದಿನಾಂಕ: 01/11/2017 ರಂದು 11 ಎಎಮ್ ಕ್ಕೆ ವಡಗೇರಾ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ 11-10 ಎಎಮ್ ಕ್ಕೆ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳಿಂದ ಎಮ್.ಎಲ್.ಸಿ ಸ್ವಿಕೃತ ಮಾಡಿಕೊಂಡು ಆಸ್ಪತ್ರೆಯಲ್ಲಿದ್ದ ಗಾಯಾಳು ಬಸಪ್ಪ ತಂದೆ ಯಂಕಪ್ಪ ನಾಟೆಕಾರ, ವ:18, ಜಾ:ಹೊಲೆಯ (ಎಸ್.ಸಿ), ಉ:ಒಕ್ಕಲುತನ ಸಾ:ಟೇಕರಾಳ ತಾ:ಶಹಾಪೂರ ಈತನಿಗೆ ವಿಚಾರಿಸಿದಾಗ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದನೇನಂದರೆ ಇಂದು ದಿನಾಂಕ: 01/11/2017 ರಂದು ನಾನು ಮತ್ತು ನಮ್ಮ ಅಣ್ಣತಮ್ಮಕೀಯ ಅಣ್ಣನಾದ ಮರಿಲಿಂಗಪ್ಪ ತಂದೆ ಸಣ್ಣ ದ್ಯಾವಪ್ಪ ನಾಟೇಕಾರ ಇಬ್ಬರೂ ಸೇರಿ ಮೋಟರ್ ಸೈಕಲ್ ಮೇಲೆ ಕುರುಕುಂದಾ ಗ್ರಾಮಕ್ಕೆ ಬಂದು ಕಟಿಂಗ, ದಾಡಿ ಮಾಡಿಸಿಕೊಂಡು ಇಬ್ಬರೂ ಸದರಿ ಹಿರೋ ಸ್ಪೇಲಂಡರ್ ಪ್ಲಸ್ ಮೋಟರ್ ಸೈಕಲ್ ನಂ. ಕೆಎ 33 ಎಸ್ 5819 ನೇದ್ದರ ಮೇಲೆ ಮರಳಿ ನಮ್ಮೂರಿಗೆ ಹೋಗುತ್ತಿದ್ದೇವು. ಮರಿಲಿಂಗಪ್ಪನು ಮೋಟರ್ ಸೈಕಲ್ ಚಲಾಯಿಸುತ್ತಿದ್ದು, ನಾನು ಹಿಂದುಗಡೆ ಕುಳಿತುಕೊಂಡಿದ್ದೇನು. ಬೆಳಗ್ಗೆ 10-30 ಗಂಟೆ ಸುಮಾರಿಗೆ ಟೇಕರಾಳ-ಕುರುಕುಂದಾ ರೋಡ ಅಗಸನ ಬಂಡಿ ಹತ್ತಿರ ಹೊರಟಾಗ ಮರಿಲಿಂಗಪ್ಪನು ಮೋಟರ್ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದು, ನಾನು ನಿಧಾನವಾಗಿ ಹೋಗು ಎಂದು ಹೇಳಿದರು ಕೇಳದೆ ಅವನು ಅದೇ ವೇಗದಲ್ಲಿ ಹೋಗುತ್ತಿದ್ದು, ಎದುರುಗಡೆ ಟೇಕರಾಳ ಕಡೆಯಿಂದ ಒಬ್ಬ ಮೋಟರ್ ಸೈಕಲ್ ಸವಾರನು ಕೂಡಾ ತನ್ನ ಹಿಂದೆ ಮತ್ತೊಬ್ಬನಿಗೆ ಕೂಡಿಸಿಕೊಂಡು ಮೋಟರ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು ಬರುತ್ತಿದ್ದು, ಇಬ್ಬರೂ ಮೋಟರ್ ಸೈಕಲ್ ಸವಾರರು ತಮ್ಮ ಮೋಟರ್ ಸೈಕಲಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ವೇಗವಾಗಿ ಚಲಾಯಿಸಿಕೊಂಡು ಬಂದು ರೋಡಿನ ಮಧ್ಯದಲ್ಲಿ ಒಬ್ಬರಿಗೊಬ್ಬರು ಮುಖಾಮುಖಿಯಾಗಿ ಡಿಕ್ಕಿಪಡಿಸಿದ್ದರಿಂದ ನಾವು ಮೋಟರ್ ಸೈಕಲಗಳ ಸಮೇತ ಕೆಳಗೆ ಬಿದ್ದೆವು. ಈ ಅಪಘಾತದಲ್ಲಿ ನನಗೆ ಬಲಭುಜಕ್ಕೆ ಭಾರಿ ಒಳಪೆಟ್ಟಾಗಿದ್ದು, ಎಡಗೈ ಮುಂಗೈ, ಎಡಗಾಲ ಮೊಳಕಾಲ ಮೇಲೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದವು. ಮೋಟರ್ ಸೈಕಲ ಚಲಾಯಿಸುತ್ತಿದ್ದ ಮರಿಲಿಂಗಪ್ಪನಿಗೆ ತೆಲೆಗೆ ಭಾರಿ ಗುಪ್ತ ಪೆಟ್ಟಾಗಿ ಬಾಯಿ ಮತ್ತು ಮೂಗಿನಿಂದ ರಕ್ತ ಬಂದಿದ್ದು, ಎರಡು ಕಣ್ಣಿನ ಹುಬ್ಬುಗಳ ಮಧ್ಯ ಮತ್ತು ಹಣೆಗೆ, ಎಡ ಕಣ್ಣಿನ ಕೆಳೆಗೆ ಅಲ್ಲಲ್ಲಿ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಎದುರುಗಡೆಯಿಂದ ಗುದ್ದಿದ್ದ ಮೋಟರ್ ಸೈಕಲ್ ನೋಡಲಾಗಿ ಪ್ಯಾಸನ ಪ್ರೋ ವಾಹನ ಇದ್ದು, ಅದರ ನಂಬರ್ ಕೆಎ 32 ಕ್ಯೂ 9490 ಇರುತ್ತದೆ. ಅದರ ಸವಾರ ಮಲ್ಲಿಕಾಜರ್ುನ @ ಮಲ್ಲಣ್ಣಗೌಡ ತಂದೆ ಶಿವಪುತ್ರಪ್ಪಗೌಡ ಪದ್ದಿ, ವ:23 ಸಾ:ಕುರುಕುಂದಾ ಈತನಿಗೆ ಬಲಗೈ ಮುಂಗೈಗೆ ಭಾರಿ ಪೆಟ್ಟಾಗಿ ಎಲುಬು ಮುರಿದು ಅಲ್ಲಲ್ಲಿ ತರಚಿದ ಗಾಯಗಳಾಗಿದ್ದವು. ಆತನ ಹಿಂದೆ ಕುಳಿತ್ತಿದ್ದ ಗೊಲ್ಲಾಳಪ್ಪಗೌಡ ತಂದೆ ಲಿಂಗಣ್ಣಗೌಡ ವ:55 ಬೆಂಡೆಬೆಂಬಳ್ಳಿ ಪಿಡಿಓ ಈತನ ತೆಲೆ ಮತ್ತು ಎರಡು ದವಡೆಗಳಿಗೆ ಭಾರಿ ಪೆಟ್ಟಾಗಿ ಕಿವಿಯಿಂದ ರಕ್ತ ಸ್ರಾವವಾಗುತ್ತಿತ್ತು. ಅಲ್ಲಿಯೇ ದಾರಿ ಮೇಲೆ ಹೋಗುತ್ತಿದ್ದ ನಮ್ಮೂರ ಮಾಳಪ್ಪ ತಂದೆ ಹಣಮಂತ್ರಾಯ ಪೊಲೀಸ್ ಪಾಟಿಲ್ ಈತನು ಅಪಘಾತವನ್ನು ನೋಡಿ ಕೂಡಲೇ 108 ಅಂಬುಲೇನ್ಸಗೆ ಮತ್ತು ಮರಿಲಿಂಗಪ್ಪನ ತಂದೆಗೆ ಫೋನ ಮಾಡಿ ಅಪಘಾತದ ವಿಷಯ ಹೇಳಿದನು. 108 ಅಂಬುಲೇನ್ಸ ವಾಹನ ಬಂದು ಹೆಚ್ಚಿನ ಗಾಯಗಳಾಗಿದ್ದ ಮಲ್ಲಣ್ಣಗೌಡ ಮತ್ತು ಗೊಲ್ಲಾಳಪ್ಪ ಪಿಡಿಓ ಇವರಿಬ್ಬರಿಗೆ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ನನಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ವಡಗೇರಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ಮೇಲ್ಕಂಡ ಇಬ್ಬರೂ ಮೋಟರ್ ಸೈಕಲ್ ಸವಾರರು ತಮ್ಮ ತಮ್ಮ ಮೋಟರ್ ಸೈಕಲಗಳನ್ನು ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು ಹೊರಟು ಒಬ್ಬರಿಗೊಬ್ಬರು ಮುಖಾಮುಖಿಯಾಗಿ ಡಿಕ್ಕಿಪಡಿಸಿದ್ದರಿಂದ ಈ ಅಪಘಾತ ಸಂಭವಿಸಿ, ಮರಿಲಿಂಗಪ್ಪನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಮಗೆಲ್ಲ ಭಾರಿ ಮತ್ತು ಸಾದಾ ಗಾಯಗಳಾಗಿರುತ್ತವೆ. ಸದರಿ ಅಪಘಾತವು ಇಂದು ದಿನಾಂಕ: 01/11/2017 ರಂದು 10-30 ಎಎಮ್ ಸುಮಾರಿಗೆ ಟೇಕರಾಳ-ಕುರುಕುಂದಾ ರೋಡ ಅಗಸನ ಬಂಡೆ ಹತ್ತಿರ ಸಂಭವಿಸಿರುತ್ತದೆ. ಆದ್ದರಿಂದ ಇಬ್ಬರೂ ಮೋಟರ್ ಸೈಕಲ್ ಸವಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿಯನ್ನು 11-15 ಎಎಮ್ ದಿಂದ 12 ಪಿಎಮ್ ದ ವರೆಗೆ ಪಡೆದುಕೊಂಡು 12-15 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 149/2017 ಕಲಂ: 279,337,338,304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 300/2017 ಕಲಂ: 143.147.323.324.354.355.504.506.ಸಂಗಡ 149 ಐಪಿಸಿ;- ದಿನಾಂಕ 01/11/2017 ರಂದು 1-30 ಪಿ,ಎಂ ಕ್ಕೆ ಠಾಣೆಗೆ ಪಿಯರ್ಾದಿ  ಸಿದ್ದಪ್ಪ ತಂದೆ ಭೀಮಣ್ಣ ಚನ್ನೂರ ವಯ: 27 ವರ್ಷ ಜಾ: ಕಬ್ಬಲಿಗ ಉ: ಒಕ್ಕಲತನ ಸಾ: ಮಾಚಗುಂಡಾಳ ತಾ|| ಸುರಪೂರ  ರವರು ಹಜರಾಗಿ ಒಂದು ಲಿಖಿತ ಅಜರ್ಿ ಸಲ್ಲಿಸಿದ್ದೆನೆಂದರೆ ದಿನಾಂಕ: 30/10/2017 ರಂದು 6-00 ಗಂಟೆಗೆ ನನ್ನ ಅಣ್ಣನಾದ ದೇವಿಂದ್ರಪ್ಪ ತಂದೆ ಭೀಮಣ್ಣ ಚನ್ನೂರ ವಯ|| 35 ವರ್ಷ ಈತನು ಹೋಟೆಲಕ್ಕೆ ಹೋಗಿ ಚಹಾ ಕುಡಿದು ಮರಳಿ ಬರುವಾಗ ಅಂಗಡಿಯವರ ಹಿಟ್ಟಿನ ಗಿರಣಿ ಮುಂದೆ ಬರುತ್ತಿರುವಾಗ ನಮ್ಮೂರಿನವರಾದ 1) ಆನಂದಪ್ಪ ತಂದೆ ಬಾಲದಂಡಪ್ಪ ಪೂಜಾರಿ 2) ದೇವಪ್ಪ ತಂದೆ ಭೀಮಣ್ಣ ಗುಂಜಿ(ರುಕ್ಮಾಪೂರ) 3) ಬಾಲದಂಡಪ್ಪ ತಂದೆ ಭೀಮಣ್ಣ ರುಕ್ಮಾಪೂರ 4) ಮಾನಪ್ಪ ತಂದೆ ಭೀಮಣ್ಣ ರುಕ್ಮಾಪೂರ 5) ಗೂಳಪ್ಪ ತಂದೆ ಭಿಮಣ್ಣ ರುಕ್ಮಾಪೂರ 6) ದೇವಪ್ಪ ತಂದೆ ಭೀಮಣ್ಣ ರುಕ್ಮಾಪೂರ 7) ಶಾಂತಪ್ಪ ತಂದೆ ಬಸಪ್ಪ ಪೂಜಾರಿ 8) ಬಾಲದಂಡಪ್ಪ ತಂದೆ ಬಸಪ್ಪ ಪೂಜಾರಿ 9) ನಂದಪ್ಪ ಸಾ|| ಕಕ್ಕೆರಿ 10) ಭೀಮಣ್ಣ ತಂದೆ ಪಿಡ್ಡಪ್ಪ ರುಕ್ಮಾಪೂರ ಇವರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ನಿಂತಿದ್ದು  ಇವರು ಒಮ್ಮೇಲೆ ನನ್ನ ಅಣ್ಣನಾದ ದೇವಿಂದ್ರಪ್ಪ ಇವನನ್ನು ನೋಡಿದ ತಕ್ಷಣ ಎಲೇ ಸೂಳಿ ಮಗನೆ ಬ್ಯಾಟಿ ಸಿಕ್ಕಿತು ನಿನಗೆ ಇಂದು ಒಂದು ಗತಿ ಕಾಣಸತಿವಿ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತ ಆನಂದಪ್ಪ , ದೇವಪ್ಪ , ಬಾಲದಂಡಪ್ಪ , ಇವರು ನನ್ನ ಅಣ್ಣನ ತೆಕ್ಕಿಗೆ ಬಿದ್ದು ಗಟ್ಟಿಯಾಗಿ ಹಿಡಿದುಕೊಂಡರು ಮಾನಪ್ಪ ಮತ್ತು ಗೂಲಪ್ಪ ಇವರು ಚಪ್ಪಲಿಯಿಂದ ನನ್ನ ಅಣ್ಣನಿಗೆ ಹೋಡೆದರು. ಶಾಂತಪ್ಪ ಮತ್ತು ಬಾಲದಂಡಪ್ಪ ಇವರು ನನ್ನ ಅಣ್ಣನಿಗೆ ಕಾಲಿನಿಂದ ಒದ್ದರು ನಂದಪ್ಪ ಮತ್ತು ಭೀಮಣ್ಣ ಇವರು ಕೈಯಿಂದ ನನ್ನ ಅಣ್ಣನಿಗೆ ಮೈ ತುಂಬ ಅಲ್ಲಲ್ಲಿ ಹೋಡೆದರು. ಆಗ ನನ್ನ ಅಣ್ಣನಿಗೆ ಹೋಡೆಯುವದನ್ನು ನಾನು ಮತ್ತು ನನ್ನ ತಾಯಿಯಾದ ಕಾಂತಮ್ಮ ಇಬ್ಬರೂ ನೋಡಿ ಚಿರಾಡಲಿಕ್ಕೆ ಹತ್ತಿದಾಗ ನಾನು ಮತ್ತು ನನ್ನ ತಾಯಿ ವಿನಾಃಕಾರಣ ದೇವಿಂದ್ರಪ್ಪನಿಗೆ ಯಾಕೇ ಹೊಡಿ ಬಡಿ ಮಾಡುತ್ತಿರಿ ಎಂದು ಕೇಳಲಾಗಿ ಆನಂದಪ್ಪ ಇವನು ನನ್ನ ತಾಯಿಯ ಸೀರೆಯ ಸೆರಗು ಹಿಡಿದು ಜಗ್ಗಾಡಿ ಕೈಯಿಂದ ತೆಲೆಗೆ ಬೆನ್ನಿಗೆ ಕಪಾಳಕ್ಕೆ ಹೋಡೆದನು. ಉಳಿದವರೆಲ್ಲರೂ ನನ್ನ ತಾಯಿಯ ಕೈ ಹಿಡಿದು ಏಳೆದಾಡಿದರು. ಆಗ ದೇವಿಂದ್ರಪ್ಪ ಗುಂಜಿ ಇವನು ಕಾಲಿನಿಂದ ನನ್ನ ತಾಯಿಗೆ  ಒದ್ದನು, ಊಳಿದವರೆಲ್ಲರೂ ಕೈಯಿಂದ ಹೋಡೆಯುತ್ತ ಕಾಲಿನಿಂದ ಒದೆಯುತ್ತ ನಡು ರಸ್ತೆಯಲ್ಲಿ ನನ್ನ ಅಣ್ಣನಿಗೆ ಹೋಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ತುಂಬಾ ಅವಮಾನ ಮಾಡಿದ್ದು ಇರುತ್ತದೆ. ದೇವಿಂದ್ರಪ್ಪ ಗುಂಜಿ ಇವನು ಕಲ್ಲಿನಿಂದ ನನ್ನ ಅಣ್ಣನ ತೆಲೆಗೆ ಹೋಡೆದು ಗುಪ್ತಗಾಯ ಪಡಿಸಿರುತ್ತಾನೆ.  ಅವರೆಲ್ಲರೂ ನನ್ನ ತಾಯಿಗೆ ಮತ್ತು ನನ್ನ ಅಣ್ಣನಿಗೆ ಹೋಡೆಯುವದನ್ನು ನಾನು ಮತ್ತು ನಮ್ಮೂರವರಾದ ಮಹಾದೇವಪ್ಪ ತಂದೆ ದೇವಿಂದ್ರಪ್ಪ ಪೂಜಾರಿ , ಹೋನ್ನಯ್ಯ ತಂದೆ ದೇವಿಂದ್ರಪ್ಪ ಪೂಜಾರಿ ಇವರು ನೋಡಿ ಜಗಳ ನೋಡಿ ಬಿಡಿಸಿಕೊಂಡೆವು. ಇಲ್ಲದಿದ್ದರೆ ನನ್ನ ಅಣ್ಣನಿಗೆ ಮತ್ತು ತಾಯಿಗೆ ಇನ್ನೂ ಹೋಡೆಯುತ್ತಿದ್ದರು. ಅವರೆಲ್ಲರೂ ಹೋಡದು ಹೋಗುವಾಗ ಮಕ್ಕಳೆ ನಿಮ್ಮ ತಾಯಿ ಹೊಟ್ಟಿ ತಣ್ಣಗಿದೆ ಇವತ್ತೆ ನಿಮಗ ಮುಗಿಸಿಯೇ ಬಿಡುತ್ತುದ್ದೆವು ಅಂತ ಜೀವದ ಬೆದರಿಕೆ ಹಾಕಿ ಹೋದರು. ಈ ಬಗ್ಗೆ ನಾನು ನನ್ನ ತಾಯಿಯನ್ನು ಆಸ್ಪತ್ರೆಗೆ ಸೇರಿಸಿ ಉಪಚಾರ ಕೊಡಿಸಿ ನಂತರ ಇಂದು ದಿನಾಂಕ 01/11/2017 ರಂದು ತಡವಾಗಿ ಠಾಣೆಗೆ ಬಂದು ಈ ಅಜರ್ಿ ಸಲ್ಲಿಸುತ್ತಿದ್ದು ಕಾರಣ ನನ್ನ ತಾಯಿಗೆ ಮತ್ತು ನನ್ನ ಅಣ್ಣನಿಗೆ ಹೋಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಃ 300/2017 ಕಲಂಃ 143.147.323.324.354.355.504.506.ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 301/2017 ಕಲಂ: 323.324.354.504.506 ಐಪಿಸಿ ;- ದಿನಾಂಕ:01-11-2017 ರಂದು ಫಿಯರ್ಾದಿ ಶ್ರೀಮತಿ ಮರೆಮ್ಮ ಗಂಡ ಯಂಕಪ್ಪ ಹೇಮನೂರ ವಯ:54 ವರ್ಷ ಜಾ: ಬೇಡರ ಉ: ಮನೆಗೆಲಸ ಸಾ: ಲಕ್ಷ್ಮೀಪೂರ ತಾ:ಸುರಪೂರ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೇನಂದರೆ   ನಮ್ಮ ಮನೆಯ ಮುಂದಿನ ರಸ್ತೆಯ ಆಚೆ  ನಮ್ಮೂರ ತಿಮ್ಮಣ್ಣ ತಂದೆ ಮಾನಪ್ಪ ಗೋನಾಲ ಇವರ ಮನೆಯಿದೆ. ದಿನಾಂಕ:30-10-2017 ರಂದು ಮುಂಜಾನೆ ನಾನು  ಮನೆಯಲ್ಲಿನ ಮುಸರಿ ನೀರು ಚೆಲ್ಲಿದ್ದು ಅದಕ್ಕಾಗಿ ತಿಮ್ಮಣ್ಣನೊಂದಿಗೆ  ನೀರು ಚೆಲ್ಲಿದ ವಿಷಯದಲ್ಲಿ ಬಾಯಿ ಮಾತಿನ ತಕರಾರು ಆಗಿತ್ತು. ನಂತರ ನಾನು ಕೂಲಿ ಕೆಲಸಕ್ಕೆಂದು ಹೋಗಿ ನಂತರ ಸಾಯಂಕಾಲ ಮನೆಗೆ ಬಂದಾಗ 7:30 ಪಿ.ಎಮ್.ಕ್ಕೆ ನಮ್ಮ ಮನೆಯಮುಂದೆ ನಾನು ನನ್ನ ಮಗನಾದ ಶಿವು ತಂದೆ ಯಂಕಪ್ಪ ಹೇಮನೂರ ಮತ್ತು ನನ್ನ ಗಂಡನಾದ ಯಂಕಪ್ಪ ತಂದೆ ಈಶಪ್ಪ ಹೇಮನುರ ಮೂರು ಜನರು   ಕುಳಿತುಕೊಂಡಿದ್ದೆವು ಅದೇ ಸಮಯಕ್ಕೆ ನಮ್ಮ ಎದುರಿನ ಮನೆಯ ತಿಮ್ಮಣ್ಣ ತಂದೆ ಮಾನಪ್ಪ ಗೋನಾಲ ಈತನು ನಮ್ಮನ್ನು ನೋಡಿ ಅವಾಚ್ಯವಾಗಿ ಬೈಯುತ್ತಾ ಮಕ್ಕಳೆ ರೋಡಿಗೆ ನೀರಿ ಚೆಲ್ಲಿದರೆ ನಿಮಗೆ ಒದೆಯತ್ತೇನೆ ಅಂತಾ ಬೈಯುತ್ತಿದ್ದನು. ಆಗ ನನ್ನ ಗಂಡನಾದ ಯಂಕಪ್ಪನು ಯಾಕೆ ಬೈಯುತ್ತಿಯಾ  ಅಂತಾ ಕೇಳಿದ್ದಕ್ಕೆ ತಿಮ್ಮಣ್ಣನು ಲೆ ಸೂಳೆಮಗನೆ ಬಾ ಇವತ್ತು ನಿನಗೆ ತೋರಿಸುತೇನೆ. ಅಂತಾ ಅಂದವನೆ ಅಲ್ಲೇ ಬಿದ್ದಿದ್ದ ಒಂದು ಕಟ್ಟಿಗೆ ತೆಗೆದುಕೊಂಡು ಬಂದು ನನ್ನ ಗಂಡನ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಆಗ ಅಲ್ಲೇ ಇದ್ದ ನಾನು ನನ್ನ ಮಗ ಇಬ್ಬರೂ ಕೂಡಿ ಬಿಡಿಸಲು ಹೋದಾಗ ಅವನು ನನಗೆ ಲೇ ಬೋಸಡಿ ನೀನೆ ನೀರು ದಿನಾಲು ಚೆಲ್ಲುತ್ತಿಯಾ ಅಂತಾ ಅಂದು ನನಕೆ ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದು ಅವಮಾನ ಮಾಡಿದನು. ಅಲ್ಲೇ ಇದ್ದ ನನ್ನ ಮಗನಾದ ಶಿವು ಮತ್ತು ರಸ್ತೆಯ ಮೇಲೆ ಹೊರಟಿದ್ದ ಮಲ್ಕಪ್ಪ ತಂದೆ ಮಲ್ಲಪ್ಪ ಅಮ್ಮಾಪೂರ ಇಬ್ಬರೂ ಕೂಡಿ ಬಿಡಿಸಿಕೊಂಡಿರುತ್ತಾರೆ. ಆಗ ತಿಮ್ಮಣ್ಣನು ಮಕ್ಕಳೆ ಇವತ್ತು ಉಳಿದಿದ್ದೀರಿ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ತೆಗೆಯುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ನನ್ನ ಗಂಡನಿಗೆ ಗಾಯವಾಗಿದ್ದರಿಂದ ನಾನು ಮತ್ತು ನನ್ನ ಮಗ ಇಬ್ಬರೂ ಕೂಡಿ ಆತನಿಗೆ ಅಂದೇ ಸುರಪೂರ ಸರಕಾರಿ ಆಸ್ಪತ್ರೆಗೆ ಸೇರಿಸಿ ನಂತರ ಅಲ್ಲಿಂದ ಕಲಬುಗರ್ಿಗೆ ಕರೆದುಕೊಂಡು ಹೋಗಿ ಅಲ್ಲಿನ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು ದಿನಾಂಕ:01-11-2017 ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ.  ಆದ್ದರಿಂದ ದಿನಾಂಕ:30-10-2017 ರಂದು ಸಾಯಂಕಾಲ 7:30 ಗಂಟೆಗೆ ಜಗಳ ತೆಗೆದು ನನ್ನ ಗಂಡನಿಗೆ ಕಟ್ಟಿಗೆಯಿಂದ ಹೊಡೆದು ಗಾಯ ಪಡಿಸಿ ನನಗೆ ಕೂದಲು ಹಿಡಿದು ಎಳೆದಾಡಿ ಹೊಡೆದು ಜೀವದ ಬೆದರಿಕೆ ಹಾಕಿದವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿಅಂತಾ ಇದ್ದ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.301/2017 ಕಲಂ.323, 324, 504, 354, 506, ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 412/2017.ಕಲಂ 279.338.ಐ.ಪಿ.ಸಿ.;- ದಿನಾಂಕ 01/11/2017 ರಂದು 8-30 ಗಂಟೆಗೆ ಪಿಯರ್ಾದಿದಾರರಾದ ಶ್ರೀಮತಿ ಸಾವಿತ್ರಮ್ಮ ಗಂಡ ಯಂಕಣ್ಣ ಗುತ್ತೇದಾರ ಸಾ| ರಸ್ತಾಪೂರ ಇವರು ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ದೂರು ಸಲ್ಲಿಸಿದ್ದು ಅದರ ಸಾರಾಶವೆನೆಂದರೆ ದಿನಾಂಕ 31/10/2017 ರಂದು ರಾತ್ರಿ 9-00 ಗಂಟೆಗೆ ಶಹಾಪೂರದಲ್ಲಿ ಇರುವ ನನ್ನ ಗಂಡನ ಅಕ್ಕನ ಮಗನಾದ ವೆಂಕಟೇಶ ಇತನಿಗೆ ಅರಾಮ ಇಲ್ಲದ ಕಾರಣ ಮಾತನಾಡಿಸಲು ರಸ್ತಾಪೂರದಿಂದ ನಾನು ಮತ್ತು ನನ್ನ ಗಂಡ ಯಂಕಣ್ಣ ತಂದೆ ಈರಣ್ಣ ಗುತ್ತೆದಾರ ಇಬ್ಬರು ಕೂಡಿಕೊಂಡು ನಮ್ಮ ಮೋಟರ್ ಸೈಕಲ್ ನಂ ಕೆಎ-33ಕ್ಯೂ-1028 ನ್ನೆದ್ದರ ಮೇಲೆ ಶಹಾಪೂರಕ್ಕೆ ಹೋರಟೆವು ನಮ್ಮ ಮೋಟರ್ ಸೈಕಲ್ನ್ನು ನನ್ನ ಗಂಡನು ಚಲಾಯಿಸುತ್ತಿದ್ದನು ನಾನು ನಮ್ಮ ಮೋಟರ್ ಸೈಕಲ್ ಮೇಲೆ ನನ್ನ ಗಂಡನ ಹಿಂದೆ ಕುಳಿತ್ತತಿದ್ದೆನು ನನ್ನ ಗಂಡನು ಮೋಟರ್ ಸೈಕಲ್ನ್ನು  ಸುರಪೂರ - ಶಹಾಪೂರ ಮುಖ್ಯ ರಸ್ತೆಯ ಮೇಲೆ ರೋಡಿನ ಎಡಗಡೆ ಸೈಡಿಗೆ ಚಲಾಯಿಸಿಕೊಂಡು ಶಹಾಪೂರ ಕಡೆಗೆ ಗೋಲಗೆರಿ ಕ್ರಾಸ್ ಹತ್ತಿರ ಬರುತ್ತಿರವಾಗ ನಮ್ಮ ಎದರುಗಡೆಯಿಂದ ಅಂದರೆ ಶಹಾಪೂರ ಕಡೆಯಿಂದ ಒಂದು ಟಂಟಂ ಆಟೋಚಾಲಕನು ತನ್ನ ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟರ್ ಸೈಕಲ್ಗೆ ಡಿಕ್ಕಿ ಹೋಡೆದು ಅಪಘಾತ ಪಡಿಸಿದ್ದರಿಂದ ನಾನು ಮತ್ತು ನಮ್ಮ ಮೋಟರ್ ಸೈಕಲ್ ಚಲಾಯಿಸುತ್ತಿದ್ದ ನನ್ನ ಗಂಡ ಇಬ್ಬರು ನಮ್ಮ ಮೋಟರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದೆವು ಮತ್ತು ನಮಗೆ ಅಪಘಾತ ಪಡಿಸಿದ ಟಂಟಂ ಆಟೋ ಚಾಲಕನು ಒಮ್ಮಲೆ ಬಲಗಡೆ ಕಟ್ಟ ಮಾಡಿದ್ದರಿಂದ ರೋಡಿನ ಮೇಲೆ ಪಲ್ಟಿಯಾಗಿ ಬಿದ್ದಿರುತ್ತದೆ ಅದರಿಂದ ನನ್ನ ಗಂಡನಿಗೆ ತಲೆಗೆ ರಕ್ತಗಾಯ, ಎಡಗೈ ಬುಜಕ್ಕೆ ತಿವ್ರವಾದ ಗುಪ್ತಗಾಯ, ಬಲಮೋಳಕಾಲಿಗೆ ರಕ್ತಗಾಯವಾಗಿದ್ದು ನನಗೆ ಯಾವದೆ ಗಾಯವಾಗಿರುವದಿಲ್ಲ ಟಂಟಂ ಆಟೋದಲ್ಲಿ ಕುಳಿತಿದ್ದ ಮಲ್ಲಮ್ಮ ಗಂಡ ಹಣಮಂತ ಗುಡ್ಡಳ್ಳಿ ಈಕೆಗೆ ಮುಗಿಗೆ ರಕ್ತಗಾಯ, ಎಡಗೈಗೆ ಗುಪ್ತಗಾಯ ಹಾಗೂ ತರಚಿದ ಗಾಯ ರಕ್ತಗಾಯ, ಬಸಮ್ಮ ಗಂಡ ಚಂದ್ರಾಮ ಗುಡ್ಡಳ್ಳಿ ಈಕೆಗೆ ತಲೆಗೆ ಗುಪ್ತಗಾಯ, ಐಶ್ವರ್ಯ ತಂದೆ ಭೀಮಣ್ಣ ಗುಡ್ಡಳ್ಳಿ ಇವಳಿಗೆ ತಲೆಗೆ ರಕ್ತಗಾಯ ಅಲ್ಲ್ಲ್ಲಿ ತರಚಿದ ರಕ್ತಗಾಯ, ಚೈತ್ರಾ ತಂದೆ ದೇವಪ್ಪ ಗುಡ್ಡಳ್ಳಿ ಇವಳಿಗೆ ತಲೆಗೆ ಗುಪ್ತಗಾಯ, ಹಾಗು ಅಲ್ಲ್ಲ್ಲಿ ತರಚಿದ ರಕ್ತಗಾಯ, ಸೋಪಮ್ಮ ತಂದೆ ಬೀಮಣ್ಣ ಗುಡ್ಡಳ್ಳಿ ಈಕೆಗೆ ತಲೆಗೆ ಗುಪ್ತಗಾಯ ಹಾಗೂ ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತದೆ, ಮತ್ತು ಮಹಾದೇವಿ ಗಂಡ ಅಯ್ಯಾಳಪ್ಪ, ಗಂಗಮ್ಮ ತಂದೆ ಅಯ್ಯಾಳಪ್ಪ, ಇವರಿಗೆ ಯಾವದೆ ಗಾಯವಾಗಿರುವದಿಲ್ಲಾ ಹಾಗು ಟಂಟಂ ಆಟೋ ಚಾಲಕನಾದ ಬಾಗಣ್ಣ ತಂದೆ ತಿಪ್ಪಣ್ಣ ಊರಕಾಯಿ ಸಾ|| ಸಗರ ಇತನಿಗೆ ಎಡಅಂಗೈಗೆ ರಕ್ತಗಾಯ ವಾಗಿದ್ದು ಹಾಗೂ ಅಲ್ಲಲ್ಲಿ ತರಚಿದ ಗಾಯವಾಗಿದ್ದು ಇರುತ್ತದೆ. ಅಲ್ಲೆ ಬಿದ್ದಿದ್ದ ಟಂಟಂ ಆಟೋ ನಂಬರ ನೋಡಲಾಗಿ ಕೆಎ-33/9865 ಅಂತ ಇದ್ದು ಸದರಿ ಅಪಘಾತವು ರಾತ್ರಿ 9-30 ಗಂಟೆಗೆ ಜರುಗಿರುತದೆ. ನಾನು 108 ಅಂಬುಲೆನ್ಸಗೆ ಪೋನಮಾಡಿ ಅಂಬುಲೆನ್ಸ ಬಂದ ನಂತರ ಅದರಲ್ಲಿ ನಾನು ಮತ್ತು ಮಹಾದೇವಿ, ಗಂಗಮ್ಮ, ಹಾಗು ಅಪಘಾತದ ವಿಷಯ ಕೇಳಿ ಅಲ್ಲಿಗೆ ಬಂದ್ದಿದ್ದ ಹಣಮಂತ ತಂದೆ ಮಹಾದೇವಪ್ಪ ಎಲ್ಲರು ಕೂಡಿ ಗಾಯಾಳುವಾದ ನನ್ನ ಗಂಡ ಯಂಕಣನಿಗೆ ಹಾಗು ಇತರೆ ಗಾಯಾಳುದಾರರಿಗೆ ಉಪಚಾರ ಕುರಿತು ಶಹಾಪೂರದ ಸರಕಾರಿ ಆಸ್ಪತ್ರೆಗೆ ಸೇರಿಕೆಮಾಡಿದೆವು ಅಲ್ಲಿಯ ವೈದ್ಯಾದಿಕಾರಿಗಳು ಹೇಚ್ಚಿನ ಉಪಚಾರ ಕುರಿತು ಕಲಬುರಗಿಯ ಆಸ್ಪತ್ರೆಗೆ ಹೋಗಲು ತಿಳಿಸಿದ ಪ್ರಕಾರ ನಾನು ನನ್ನ ಗಂಡನಿಗೆ ಕಲಬುರಗಿಯ ಸರಕಾರಿ ಆಸ್ಪತ್ರಗೆ ಸೆರಿಕೆ ಮಾಡಿದ್ದು. ಉಳಿದ ಎಲ್ಲಾಗಾಯಾಳು ದಾರರು ಬಸವೇಶ್ವರ ಆಸ್ಪತ್ರೆಗೆ ಉಪಚಾರಕುರಿತು ಹೋಗಿದ್ದು ಇರುತ್ತದೆ. ನನ್ನ ಗಂಡನಿಗೆ ಉಪಚಾರ ಕುರಿತು ಕಲಬುರಗಿಯ ಸರಕಾರಿ ಆಸ್ಪತ್ರೆಗೆ ಸೆರಿಕೆ ಮಾಡಿ ಇಂದು ಸಾಯಂಕಾಲ ಠಾಣೆಗೆ ಬಂದು ನಮ್ಮ ಮೋಟರ್ ಸೈಕಲ್ಕ್ಕೆ ಅಪಘಾತ ಮಾಡಿ ಟಂಟಂ ಪಲ್ಟಿಮಾಡಿ  ಅಪಘಾತ ಪಡಿಸಿದ ಟಂಟಂ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 412/2017 ಕಲಂ 279.337.338 ಐ.ಪಿ.ಸಿ. ನ್ನೇದ್ದರ ಪ್ರಕಾರ ಪ್ರಕರಣ ದಾಕಲಿಸಿ ಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 166/2017 ಕಲಂ, 87 ಕೆ.ಪಿ.ಆ್ಯಕ್ಟ್ ;- ದಿನಾಂಕ: 01/11/2017 ರಂದು 6-30 ಪಿಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು 06 ಜನ ಆರೋಪಿತರ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಒಂದು ಜಪ್ತಿ ಪಂಚನಾಮೆ, ವರದಿ ನೀಡಿ ಮುಂದಿನ ಕ್ರಮ ಕುರಿತು ಸೂಚಿಸಿದ್ದು ವರದಿ ಸಾರಾಂಶವೆನೆಂದರೆ, ಇಂದು ದಿನಾಂಕ: 01/11/2017 ರಂದು ಗೋಗಿ ಪೊಲೀಸ್ ಠಾಣೆಯಲ್ಲಿ ಇದ್ದಾಗ 04-00 ಪಿಎಮ್ ಕ್ಕೆ ಖಚಿತ ಭಾತ್ಮೀ ಬಂದ ಮೇರೆಗೆ ಇಬ್ಬರೂ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಗೋಗಿ-ಹಾರಣಗೇರಾ ಮುಖ್ಯ ರಸ್ತೆಯ ಗೋಗಿ  ತಾಂಡಾದ ಕ್ರಾಸ್ನ ಹತ್ತಿರ ಕೆನಾಲ ದಂಡೆಯ ಮೇಲೆ ಸಾರ್ವಜನಿಕ ಸ್ಥಳದಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ್ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ 04-45 ಪಿಎಮ್ ಕ್ಕೆ  ದಾಳಿ ಮಾಡಿ ದಾಳಿಯಲ್ಲಿ 06 ಜನ ಆರೋಪಿತರು ಮತ್ತು ಒಟ್ಟು 1500=00 ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ 04-45 ಪಿಎಮ್ ದಿಂದ 05-45 ಪಿಎಮ್ ದವರೆಗೆ ಜಪ್ತಿ ಕೈಕೊಂಡಿದ್ದು ಮುಂದಿನ ಕ್ರಮ ಕುರಿತು 6-30 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ಕೊಟ್ಟು  ಸೂಚಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿ ಜೆ ಎಮ್ ಎಪ್ ಸಿ ನ್ಯಾಯಾಲಯದ ಅನುಮತಿ ಪಡೆದುಕೊಂಡು 7-30 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 166/2017 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 

No comments: