Yadgir District Reported Crimes
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 420 ಐಪಿಸಿ & 78(3) ಕೆ.ಪಿ ಯಾಕ್ಟ ;- ದಿನಾಂಕ:14/11/2017 ರಂದು 13.30 ಗಂಟೆಗೆ ಆರೋಪಿತನು ಹುಣಸಗಿ ಪಟ್ಟಣದ ಅಂಬೇಡ್ಕರ ಕಟ್ಟಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕಾಗಿ ಜನರಿಗೆ ಮೋಸ ಮಾಡಿ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅಂತಾ ಜನರಿಂದಾ ಹಣ ಪಡೆದು ಕಲ್ಯಾಣ ಮಟಕಾ ಜೂಜಾಟ ಚೀಟಿ ಬರೆದು ಕೊಡುವಾಗ ಪಂಚರ ಸಮಕ್ಷಮ ಪಿಯರ್ಾದಿ ಮತ್ತು ಸಂಗಡ ಚಂದ್ರನಾಥ ಎ.ಎಸ್.ಐ ಹೆಚ್.ಸಿ-130, 10 ರವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ 950=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ನೇದ್ದವುಗಳನ್ನು ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 197/2017 ಕಲಂ: 32, 34 ಕೆ. ಇ ಯಾಕ್ಟ ;- ದಿನಾಂಕ 14-11-2017 ರಂದು 02-10 ಪಿ.ಎಂಕ್ಕೆ ಆರೋಪಿತನು ಯಾವುದೇ ಲೈಸನ್ಸ ವೈಗರೆ ಇಲ್ಲದೇ ಅಕ್ರಮವಾಗಿ ಸಾರಾಯಿ ಪೌಚಗಳನ್ನು ಗೌಡಗೇರಾ ಗ್ರಾಮದ ನಗನೂರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದಾಗ ಸದರಿ ಆರೋಪಿತನನ್ನು ಹಿಡಿದು ವಿಚಾರಿಸಿದ್ದು ಮತ್ತು ಸದರಿ ಸ್ಥಳದಲ್ಲಿದ್ದ 90 ಎಮ್ಎಲ್ನ 48 ಓರಿಜಿನಲ್ ಚಾಯಿಸ್ ವಿಸ್ಕಿ ಪೌಚ್ಗಳು ಅಕಿ 1350.24/- ರೂಪಾಯಿ ಕಿಮ್ಮತ್ತಿನ ಸರಾಯಿ ಪೌಚ್ ಹಾಗೂ 100/- ರೂ ನಗದು ಹಣ ನೆದ್ದವುಗಳನ್ನು ಜಪ್ತ ಮಾಡಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 124/2017 ಕಲಂ: 457, 380 ಐ ಪಿ ಸಿ;- ದಿನಾಂಕ 14.11.2017 ರಂದು ಸಾಯಂಕಾಲ 6:00 ಗಂಟೆಗೆ ಪಿಯರ್ಾದಿ ಅನಿಫ್ ತಂದೆ ಹಸನ್ಸಾಬ್ ಒಂಟಿ ವ:30 ವರ್ಷ, ಜಾ:ಮುಸ್ಲಿಂ, ಉ:ಎಸ್.ಬಿ.ಐ ಗ್ರಾಹಕರ ಸೇವೆ. (ಎಸ್.ಬಿ.ಐ ಟೈನಿ) ಸಾ:ಕಕ್ಕೇರಾ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕಂಪೂಟರ್ದಲ್ಲಿ ಟೈಪ್ ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೆನೆಂದರೆ, ನಾನು ಕಕ್ಕೇರಾ ಪಟ್ಟಣದ ವಿರಶೈವ ಸಮಾಜದವರ ಸ್ಮಶಾನದ ಎದುಗಡೆ ಶಾಂತಪೂರ ಮುಖ್ಯ ರಸ್ತೆಗೆ ಹೊಂದಿಕೊಂಡು ಒಂದು ಸನಾ ಝರಾಕ್ಸ್ ಅಂಗಡಿ ಇಟ್ಟುಕೊಂಡಿದ್ದು, ನಾನು ಎಸ್.ಬಿ.ಐ ಬ್ಯಾಂಕ್ನ ಎಸ್.ಬಿ.ಐ ಗ್ರಾಹಕ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು, ಅದರ ವ್ಯವಹಾರವು ಕೂಡಾ ನನ್ನ ಅಂಗಡಿಯಲ್ಲಿ ನಡೆಸುತ್ತಿದ್ದು, ಈ ಸಂಬಂಧ ನಾನು 1-ಲಾಪ್ಟಾಪ್, 1-ಎಪ್ಸೋನ್ 1-ಕಲರ್ ಪ್ರಿಂಟಿಂಗ್, 1-ಕೆನಾನ್ ಝರಾಕ್ಸ್ ಮಸಿನ್, 1-ಹೆಚ್.ಪಿ ಮಲ್ಟಿಫಂಕ್ಸನ್ ಪ್ರಿಂಟರ್ 1-ಕಂಪ್ಯೂಟರ್ ಸಿಸ್ಟಂ ಇಟ್ಟುಕೊಂಡು ಕೆಲಸ ಮಾಡುತ್ತಿದ್ದು, ದಿನಾಲು ಬೆಳಿಗ್ಗೆ 08:00 ಗಂಟೆಯಿಂದ ರಾತ್ರಿ 8:00 ವರೆಗೆ ಬ್ಯಾಂಕಿನ ಕೆಲಸ ಮಾಡುತ್ತಿದ್ದು, ದಿನಾಂಕ:12.11.2017 ರಂದು ಕೆಲಸ ಜಾಸ್ತಿ ಇದ್ದ ಕಾರಣ ರಾತ್ರಿ 10:00 ಗಂಟೆ ವರೆಗೆ ಕೆಲಸ ಮಾಡಿ ನನ್ನ ಅಂಗಡಿಯನ್ನು ಬೀಗ ಹಾಕಿಕೊಂಡು ಹೋಗಿದ್ದು, ಎಂದಿನಂತೆ ಮರುದಿವಸ ದಿನಾಂಕ:13.11.2017 ರಂದು ಬೆಳಿಗ್ಗೆ ಅಂಗಡಿ ಮುಂದಿನ ಕಸ ಹೊಡೆಯಲು ಬಂದು ನೋಡಲಾಗಿ ನಾನು ರಾತ್ರಿ ಹಾಕಿಕೊಂಡ ಹೋಗಿದ್ದ ಬೀಗವನ್ನು ಮುರಿದಿದ್ದು, ನಾನು ಗಾಭರಿಯಾಗಿ ನನ್ನ ಅಂಗಡಿಯ ಬಾಗಿಲನ್ನು ತೆರೆದು ಒಳಗೆ ಹೋಗಿ ನೋಡಲಾಗಿ ನನ್ನ ಅಂಗಡಿಯಲ್ಲಿ ಇದ್ದ 1 ಲೆನೋವಾ ಕಂಪನಿಯ ಲಾಪ್ಟಾಪ್ ಅ:ಕಿ:15000/- ಮೂರು ವರ್ಷದ ಹಿಂದೆ ಖರೀದಿ ಮಾಡಿದ ಡೆಲ್ ಕಂಪನಿಯ ಎಲ್.ಇ.ಡಿ ಮಾನಿಟರ್ ಅ:ಕಿ:3000/- ಕಳುವಾಗಿದ್ದು, ಕಾರಣ ನಾನು ಎಸ್.ಬಿ.ಐ ಬ್ಯಾಂಕ್ನ ಎಸ್.ಬಿ.ಐ ಗ್ರಾಹಕ ಪ್ರತಿನಿಧಿಯಾಗಿ ಕೆಲಸಕ್ಕೆ ಉಪಯೋಗಿಸುತ್ತಿದ್ದ 1 ಲೆನೋವಾ ಕಂಪನಿಯ ಲಾಪ್ಟಾಪ್ ಅ:ಕಿ:15000/- ಮತ್ತು ಡೆಲ್ ಕಂಪನಿಯ ಎಲ್.ಇ.ಡಿ ಮಾನಿಟರ್ ಅ:ಕಿ:3000/- ಹೀಗೆ ಒಟ್ಟು 18000/- ರೂ ಕಿಮ್ಮತ್ತಿನ ವಸ್ತುಗಳನ್ನು ಯಾರೋ ಕಳ್ಳರು ದಿನಾಂಕ:12.11.2017 ರಾತ್ರಿ 10:00 ಗಂಟೆಯಿಂದ ದಿನಾಂಕ:13.11.2017 ಬೆಳಗಿನ 06:00 ಗಂಟೆಯ ಮದ್ಯದ ಅವಧಿಯಲ್ಲಿ ಅಂಗಡಿಯ ಕೀಲಿಯನ್ನು ಮುರಿದು ಕಳ್ಳತನ ಮಾಡಿದ್ದು, ನಾನು ವಿಚಾರ ಮಾಡಿ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು, ಕಳುವಾದ ನನ್ನ 1 ಲೆನೋವಾ ಕಂಪನಿಯ ಲಾಪ್ಟಾಪ್ ಮತ್ತು 1 ಡೆಲ್ ಕಂಪನಿಯ ಎಲ್.ಇ.ಡಿ ಮಾನಿಟರ್ಗಳನ್ನು ಕಳವು ಮಾಡಿದ ಕಳ್ಳರನ್ನು ಹಾಗೂ ಕಳವು ಆದ ಸಾಮಾನುಗಳನ್ನು ಪತ್ತೆಮಾಡಿ ಕಳ್ಳರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿಲು ವಿನಂತಿ ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 124/2017 ಕಲಂ:457, 380 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 321/2017 ಕಲಂಃ 78(3) ಕೆ.ಪಿ ಆಕ್ಟ್;- ದಿನಾಂಕ: 14/11/2017 ರಂದು 1-00 ಪಿ.ಎಮ್ ಕ್ಕೆ ಸ,ತ,ಪಿಯರ್ಾದಿದಾರರಾದ ಶ್ರೀ ಫತ್ರುಮೀಯಾ ಎ,,ಎಸ್,ಐ ರವರು ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು 11-00 ಎ.ಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ತಿಮ್ಮಾಪೂರ ಬಸ್ ನಿಲ್ದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಹೇಳಿ ದೈವಿ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದಿದ್ದರಿಂದ ಪಿ,ಸಿ-235 ಹಾಗು ಇಬ್ಬರೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಹಿಡಿದು, ಅವನಿಂದ ಮಟಕಾ ನಂಬರ ಬರೆದುಕೊಂಡ ನಗದು ಹಣ 1045/-ರೂಪಾಯಿಗಳು ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರ ಪಡಿಸಿದ್ದರಿಂದ ಠಾಣೆ ಗುನ್ನಾ ನಂಬರ 321/2017 ಕಲಂ. 78(3) ಕೆ.ಪಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
No comments:
Post a Comment