ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 15-12-2017
ಧನ್ನೂರಾ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 290/17 ಕಲಂ 457, 380 ಐಪಿಸಿ
ದಿನಾಂಕ 14/12/2017 ರಂದು 1000 ಗಂಟೆಗೆ
ಫಿರ್ಯಾದಿ ಶ್ರೀ ಗುರುನಾಥ ತಂದೆ ಮಲ್ಲಿಕಾರ್ಜುನ ವಯ 30 ವಷ್ ಉ. ಒಕ್ಕಲುತನ ಸಾ. ಹಲಬರ್ಗಾ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದು ದೂರು ಸಲ್ಲಿಸಿದರ ಸಾರಾಂಶವೆನೆಂದರೆ ದಿನಾಂಕ 13/12/2017 ರಂದು ರಾತ್ರಿ 2300 ಗಂಟೆಗೆ ಊಟ ಮಾಡಿಕೊಂಡು ಮಲಗಿಕೊಂಡಿರುತ್ತಾರೆ ದಿನಾಂಕ 14/12/2017 ರಂದು ರಾತ್ರಿ 0300
ಗಂಟೆಗೆ ಎಚ್ಚರವಾಗಿ ನೊಡಲು ಮನೆಯಲ್ಲಿಯ ಪಕ್ಕದ ಕೊಣೆಯ ಬೀಗ ಮುರಿದಿದ್ದು
ಕಾಣಿಸಿತ್ತು ಒಳಗೆ ಹೊಗಿ ನೊಡಲಾಗಿ ಮನೆಯಲ್ಲಿದ್ದ ಎರಡು ಕಬ್ಬಿಣದ ಸಂದುಕಗಳು ಇರಲಿಲ್ಲ ಯಾರೊ
ಕಳ್ಳರು ದಿನಾಂಕ 13/12/2017 ರಂದು 2300 ಗಂಟೆಯಿಂದ ದಿನಾಂಕ 14/12/2017 ರಂದು 0300 ಗಂಟೆಯ
ಮಧ್ಯದ ಅವಧಿಯಲ್ಲಿ ಯಾರೊ ಕಳ್ಳರು ನಮ್ಮ ಮನೆಯ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಎರಡು ಕಬ್ಬಿಣದ
ಸಂದೂಕುಗಳು ಕಳವು ಮಾಡಿಕೊಂಡು ಹೊಗಿರುತ್ತಾರೆ. ಸದರಿ ಸಂದುಕನಲ್ಲಿದ್ದ 22,300/- ರೂಪಾಯಿ ನಗದು ಹಣ ಮತ್ತು ಬಂಗಾರದ
ಆಭರಣಗಳು ಇದ್ದವು ಸದರಿ ಸಂದುಕಗಳು ನಂತರ ಮನೆಯ ಹಿಂಭಾಗದಲ್ಲಿದ್ದ ತೊಗರಿ
ಹೊಲದಲ್ಲಿ ನೊಡಲಾಗಿ ಕಂಡು ಬಂದವು ಅದರಲ್ಲಿ ಮೇಲ್ಕಂಡ ಹಣ ಮತ್ತು ಬಂಗಾರದ ಆಭರಣ ಇರಲಿಲ್ಲ ಅಂತಾ
ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment