Police Bhavan Kalaburagi

Police Bhavan Kalaburagi

Saturday, December 23, 2017

BIDAR DISTRICT DAILY CRIME UPDATE 22-12-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-12-2017

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 136/2017, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 21-12-2017 ರಂದು ಫಿರ್ಯಾದಿ ರಾಜಕುಮಾರ ತಂದೆ ನರಸಿಂಗರಾವ ಸೋನಾರೆ, ವಯು: 52 ವರ್ಷ, ಜಾತಿ: ಅಕ್ಕಸಾಲಿಗ, ಸಾ: ಗಾದಗಿ, ತಾ: ಜಿ: ಬೀದರ ರವರು ತನ್ನ ಹೆಂಡತಿಯಾದ ರಮಾದೇವಿ ವಯ: 45 ವರ್ಷ ಇಬ್ಬರೂ ತನ್ನ ಮೋಟಾರ ಸೈಕಲ ನಂ. ಕೆಎ-38/ಜೆ-1384 ನೇದ್ದರ ಮೇಲೆ ತಮ್ಮ ಗ್ರಾಮದಿಂದ ಬೀದರ ನಗರಕ್ಕೆ ಬರುತ್ತಿರುವಾಗ ಬೀದರ ನಗರದ ಗಾದಗಿ – ಮುಲ್ತಾನಭಾಷಾ ದರ್ಗಾ ರಸ್ತೆಯಲ್ಲಿ ಡಿ.ಸಿ ಮನೆಯ ಹತ್ತಿರ ಇರುವ ಮೆಹಫೀಲ್ ಹೋಟೇಲ್ ಎದುರಿಗೆ ಇರುವಾಗ ಎದುರಿನಿಂದ ಅಂದರೆ ಸಿದ್ದಾರ್ಥ ಕಾಲೇಜ ರೋಡ ಕಡೆಯಿಂದ ಡಿ.ಸಿ ಮನೆಯ ಕಡೆಗೆ ಒಂದು ಗೂಡ್ಸ ಆಟೋ ರಿಕ್ಷಾ ನಂ. ಕೆಎ-38-5851 ನೇದ್ದರ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಗೂಡ್ಸ ಆಟೋವನ್ನು ಸ್ವಲ್ಪ ನಿಲ್ಲಿಸಿದಂತೆ ಮಾಡಿ ಜನರು ಸೇರುವದನ್ನು ಕಂಡು ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ,ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಎಡಮೊಳಕೈಗೆ, ಬಲಮೊಳಕಾಲಿಗೆ, ತರಚಿದ ರಕ್ತಗಾಯ ಹಾಗೂ ಬಲಭುಜಕ್ಕೆ ತರಚಿದ ರಕ್ತ ಗುಪ್ತಗಾಯ ಹಾಗೂ ಕೆಳಹೊಟ್ಟೆಗೆ ಗುಪ್ತಗಾಯವಾಗಿರುತ್ತದೆ ಹಾಗೂ ಫಿರ್ಯಾದಿಯವರ ಹೆಂಡತಿಗೆ ಹಣೆಯ ಎಡಭಾಗ ಭಾರಿ ರಕ್ತ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬಂದು ಮಾತನಾಡುವ ಸ್ಥೀತಿಯಲ್ಲಿರಲಿಲ್ಲ, ಆಗ ಅಲ್ಲಿಂದಲೇ ಹೋಗುತ್ತಿದ್ದ ಸುರೇಶ ತಂದೆ ಗಣಪತರಾವ ಮೂಲಗೆ ಸಾ: ಗಾದಗಿ ಇವರು ಗಾಯಗೊಂಡ ಇಬ್ಬರಿಗೂ ಒಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 178/2017, PÀ®A. 78 (3) PÉ.¦ PÁAiÉÄÝ ªÀÄvÀÄÛ 420 L¦¹ :-
ದಿನಾಂಕ 21-12-2017 ರಂದು ಮುಗನೂರ ಗ್ರಾಮದ ಹನುಮಾನ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆಯಿಸಿಕೊಡುತ್ತಿದ್ದಾನೆ ಅಂತ ಶೌಕತ ಅಲಿ ಎ.ಎಸ್.ಐ ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮುಗನೂರ ಗ್ರಾಮದ ಹನುಮಾನ ಮಂದಿರದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಹನುಮನಾನ ಮಂದಿರದ ಹತ್ತಿರ ಆರೋಪಿ ಸಿದಲಿಂಗಪ್ಪಾ ತಂದೆ ಹುಲ್ಲೆಪ್ಪಾ ನಾಗಶೆಟ್ಟಿ ವಯ: 78 ವರ್ಷ, ಜಾತಿ: ಲಿಂಗಾಯತ, ಸಾ: ಮುಗನೂರ ಇತನು ಒಂದು ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಮಟಕಾ ಆಡಿರಿ ಅಂತ ಚೀರಾಡುತ್ತಾ ಸಾರ್ವಜನಿಕರ ಗಮನ ತನ್ನ ಕಡೆಗೆ ಸೆಳೆದುಕೊಳ್ಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಮಟಕಾ ಚೀಟಿ ಬರೆದುಕೊಟ್ಟು ಮೋಸ ಮಾಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ಎ.ಎಸ್.ಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಆರೋಪಿಗೆ ಹಿಡಿದುಕೊಂಡು ಆತನ ಅಂಗ ಜಡ್ತಿ ಮಾಡಲು ಅವನ ಹತ್ತಿರ 610/- ರೂ ನಗದು ಹಣ, 1 ಮಟಕಾ ಚೀಟಿ ಮತ್ತು 1 ಪೆನ್ ಸಿಕ್ಕಿದ್ದು, ಸದರಿಯವುಗಳನ್ನು  ಜಪ್ತಿ ಮಾಡಿಕೊಂಡು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾನೆ ಅಪರಾಧ ಸಂ. 278/2017, ಕಲಂ. 67 (ಎ) ಐಟಿ ಕಾಯ್ದೆ 2008 :-
ದಿನಾಂಕ 28-04-2017 ರಂದು ರಾತ್ರಿ ವೇಳೆಯಲ್ಲಿ ಆರೋಪಿತರಾದ 1) ಅಂಕುಶ ತಂದೆ ಅರ್ಜುನರಾವ, 2) ತಾನಾಜಿ ಕಾಂಬಳೆ ಹಾಗೂ ಅವರಿಗೆ ಸಹಚರರಾದ 3) ಮಲ್ಲಿಕಾರ್ಜುನ 4) ಆಕಾಶ ರವರೇಲ್ಲರೂ ಕೂಡಿಕೊಂಡು ಧಾಬಾದಲ್ಲಿ ಫಿರ್ಯಾದಿಯ ಸಹೋದರಿಗೆ ಊಟದಲ್ಲಿ ಡ್ರಗ್ಸ ಬೇರಸಿ ಉಣಿಸಿದ್ದರಿಂದ್ದ ಅವಳು ಅರೇ ಪ್ರಜ್ಞಾವಸ್ಥೆಗೆ ಬಂದಾಗ ಅನಧಿಕೃತವಾಗಿ ಅವಳ ವಿಡಿಯೋ ಚಿತ್ರಿಕರಣಗೊಳಿಸಿ ಜಾಲತಾಣದಲ್ಲಿ ಆಪಲೋಡ ಮಾಡಿರುತ್ತಾರೆ, ಇದರಿಂದ ಫಿರ್ಯಾದಿಯ ಸಹೋದರಿಯು ಅವಮಾನಗೊಂಡಿದ್ದು, ಅವಳ ಬಾಳು ಹಾಳಾಗಿದೆ ವೈಗೆರೆ ಅಂತಾ ಅಪಾದಿಸಿ ನೀಡಿದ ಅರ್ಜಿಯ ದೂರಿನ ಸಾರಾಂಶದ ಮೇರೆಗೆ ದಿನಾಂಕ 21-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: