Police Bhavan Kalaburagi

Police Bhavan Kalaburagi

Monday, December 4, 2017

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿರುವ ಪ್ರಕರಣ  :
ಕಮಲಾಪೂರ ಠಾಣೆ : ಶ್ರೀಮತಿ ನಾಗಮ್ಮ ಗಂಡ ನಾಗೇಶ ಮೋತಕಪಳ್ಳಿ ಸಾ:ತೆಗಲತಿಪ್ಪಿ ತಾ:ಚಿಂಚೋಳಿ ಜಿ:ಕಲಬುರಗಿ ಇವರು  3 ವರ್ಷಗಳ ಹಿಂದೆ ನನ್ನ ಮಗಳಾದ ಶ್ರೀಮತಿ ಶರಣಮ್ಮ @ ಸಂಗೀತಾ ಇವಳನ್ನು ಶ್ರೀ ಶಿವಕುಮಾರ ತಂದೆ ಬಸವರಾಜ ಮಳಸಾನೋರ ಸಾ:ಸೊಂತ ತಾ:ಜಿ:ಕಲಬುರಗಿ ಯವರಿಗೆ ಮದುವೆ ಮಾಢಿ ಕೋಟ್ಟಿರುತ್ತೇನೆ. ಆದರೆ ಗಂಡನ ಮನೆಯಲ್ಲಿ ನನ್ನ ಮಗಳಿಗೆ ನಿನ್ನ ತವರು ಮನೆಯಿಂದ 5 ಲಕ್ಷ ರೂಪಾಯಿಗಳು ತಗೊಂಡು ಬಾ ಎಂದು ಕಿರುಕುಳ ಕೋಡುತ್ತಿದ್ದರು. ಆಗ ನಮ್ಮೂರಿನ ಹಿರಿಯರ ಸಮಕ್ಷಮದಲ್ಲಿ ನನ್ನ ಅಳೀಯನಿಗೆ ಈ ಹಿಂದೆ 2 ಲಕ್ಷ ರೂಪಾಯಿಗಳು ನನ್ನ ಮಗಳು ಸುಖವಾಗಿಟ್ಟುಕೋಳ್ಳುತ್ತಾರೆ ಎಂಬ ಭರವಸೆಯ ಮೇಲೆ ಕೋಟ್ಟಿರುತ್ತೇನೆ. ಆದರೆ ಅತ್ತೆ ಸರಸ್ವತಿ ಮಾವ ಬಸವರಾಜ ಗಂಡ ಶಿವಕುಮಾರ ಮೈದುನ ಸಂಜಪ್ಪ ಇಷ್ಟು ಹಣ ಪಡೆದು ತೃಪ್ತರಾಗದೆ ಮತ್ತೆ ಕಿರುಕುಳ ನಿಡಿರುತ್ತಾರೆ. ದಿನಾಂಕ:03.12.2017 ರಂದು ಬೆಳಿಗ್ಗೆ 06 ಗಂಟೆಗೆ ನನಗೆ ನಮ್ಮ ಅಳಿಯನಾದ ಶ್ರೀ ಶಿವಕುಮಾರ ದೂರವಾಣಿ ಮೂಲಕ ಕರೆಮಾಡಿ ನಿಮ್ಮ ಮಗಳು ಕಾಣುತ್ತಿಲ್ಲ ಎಲ್ಲಿಗೆ ಹೋಗಿರುತ್ತಾಳೊ ಗೋತ್ತಿಲ್ಲ ಎಂದು ಕರೆ ಮಾಡಿರುತ್ತಾನೆ. ಆಗ ನಾನು ಮತ್ತು ನಮ್ಮ ಮನೆಯವರೆಲ್ಲರೂ ಸೇರಿ ಸೊಂತ ಗ್ರಾಮಕ್ಕೆ ಬೆಳಿಗ್ಗೆ 08 ಗಂಟೆಗೆ ಹೋಗಿರುತ್ತೇವೆ. ಆಗ ಅಳಿಯನಾದ ಶ್ರೀ ಶಿವಕುಮಾರ ಕಮಲಾಪೂರ ಪೋಲಿಸ ಠಾಣೆಯಲ್ಲಿ ಹೋಗಿ ಕುಳಿತಿರುತ್ತಾನೆ. ಮತ್ತು ಅತ್ತೆ ಮಾವ ಮೈದುನರು ಮನೆಗೆ ಕಿಲಿ ಹಾಕಿ ಬೇರೋಬ್ಬರ ಮನೆಯಲ್ಲಿ ಹೋಗಿ ಕುಳಿತಿರುತ್ತಾರೆ. ಆಗ ನಾವು ಮಗಳನ್ನು ಹುಡುಕಾಡಿದಾಗ ಸ್ವಲ್ಪ ದೂರದಲ್ಲಿ ಇರುವ ಬಾವಿ ಬಳಿ ನನ್ನ ಮಗಳು ಚಪ್ಪಲಿಗಳು ಬಿದ್ದಿರುವುದು ಕಂಡುಬಂದಿರುತ್ತದೆ. ಆದ ಕಾರಣ ಇದು ಪೂರ್ವ ನಿಯೋಜಿತ ಕೋಲೆ ಆಗಿರುತ್ತದೆ. ಎಂದು ಸ್ಟಷ್ಟವಾಗಿ ಕಂಡು ಬಂದಿರುತ್ತದೆ. ಈ ಕೋಲೆಯು ನನ್ನ ಮಗಳ ಅತ್ತೆಯಾದ ಶ್ರೀಮತಿ ಸರಸ್ವತಿ ಗಂಡ ಬಸವರಾಜ ಮಳಸಾನೋರ ಮಾವನಾದ ಶ್ರೀ ಬಸವರಾಜ ತಂದೆ ಗುಂಡಪ್ಪ ಮಳಸಾನೋರ ಗಂಡನಾದ ಶ್ರೀ ಶಿವಕುಮಾರ ತಂದೆ ಬಸವರಾಜ ಮಳಸಾನೋರ ಹಾಗೂ ಮೈದುನಾದ ಸಂಜಪ್ಪ ತಂದೆ ಬಸವರಾಜ ಮಳಸಾನೋರ ಇವರೆಲ್ಲರೂ ಈ ಕೋಲೆಯಲ್ಲಿ ಭಾಗಿಯಾಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಇವರ ಮಗಳಾದ ಕುಮಾರಿ ಇವಳಿಗೆ ನನ್ನ ಅಳಿಯ ಮಿಥನ್ ತಂದೆ ದಾಮಲು ಜಾದವ ಸಾಃ ಮಿಣಜಗಿ ತಾಂಡಾ ಈತನು ದಿನಾಂಕ 30/11/2017 ರಂದು ಸಮಯ ಮದ್ಯಾಹ್ನ 1.30ಕ್ಕೆ ನನ್ನ ಮಗಳು ಓದುತ್ತಿರುವ ಸರ್ಕಾರಿ ಪ್ರೌಡ ಶಾಲೆ ಖಣದಾಳ (10ನೇ ತರಗತಿ) ಇಲ್ಲಿಂದ ಪುಸಲಾಯಿಸಿ ಜಬರಿಯಿಂದ ಮನೆಯಲ್ಲಿ ಜಗಳವಾಗಿದೆ ಎಂದು ಸುಳ್ಳು ಹೇಳಿ ಅಪಹರಿಸಿಕೊಂಡು ಹೊಗಿರುತ್ತಾನೆ. ಅಪಹರಿಸಿಕೊಂಡು ಹೋದ ವ್ಯಕ್ತಿಯು ನನ್ನ ಮೊದಲನೆ ಮಗಳ ಗಂಡನಾಗಿದ್ದು, ಅದರ ಲಾಭ ಪಡೆದು ಸುಳ್ಳು ಹೇಳಿ ನನ್ನ ಮಗಳನ್ನು ಅಪಹರಿಸಿಕೊಂಡು ಹೊಗಿದ್ದು, ನನ್ನ ಮಗಳು ಅಪ್ರಾಪ್ತಳಾಗಿದ್ದು ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಂಶಯ ಇದ್ದು, ನಮ್ಮ ಮಗಳನ್ನು ವೈದ್ಯಕೀಯ ಚಿಕಿತ್ಸೆ ಕೊಡಿಸಿ ಆರೋಪಿತನ ವಿರುದ್ದ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: