Police Bhavan Kalaburagi

Police Bhavan Kalaburagi

Tuesday, December 5, 2017

Yadgir District Reported Crimes Updated on 05-12-2017


                                            Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 468/2017 ಕಲಂ 87  ಕೆ.ಪಿ ಆಕ್ಟ ;- ದಿನಾಂಕ 04/12/2017  ರಂದು ಸಾಯಂಕಾಲ 18-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ .ಜಿ. ಆರಕ್ಷಕ ನಿರೀಕ್ಷಕರು,  ಶಹಾಪೂರ ಪೊಲೀಸ್ ಠಾಣೆ ಇವರು 12 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ದಿನಾಂಕ 04/12/2017  ರಂದು ಮದ್ಯಾಹ್ನ 15-15 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಕನ್ಯಾಕೊಳ್ಳುರ ಅಗಸಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರೂ ಇಸ್ಪೇಟ್ ಎಲೆಗಳ ಸಹಾಯದಿಂದ ಅದರ-ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಸುಧಾರಿತ ಗ್ರಾಮ ಗಸ್ತು ಬೀಟ್ ನಂ 42 ನೇದ್ದರ ಬೀಟ್ ಸಿಬ್ಬಂದಿ ಹೆಚ್.ಸಿ 101 ರವರು ತನಗೆ ಬಂದ ಮಾಹಿತಿಯನ್ನು ಫಿರ್ಯಾದಿಯವರಿಗೆ ಹೇಳಿದ್ದು, ಫಿರ್ಯಾದಿಯವರು ಠಾಣೆಯ ಸಿಬ್ಬಂಧಿಯವರು ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ 12 ಜನ ಆರೋಪಿತರನ್ನು ಹಿಡಿದು ಆರೋಪಿತರಿಂದ  ಜೂಜಾಟಕ್ಕೆ ಬಳಸಿದ ನಗದು ಹಣ 9530 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು 18-30 ಪಿ.ಎಮ್.ಕ್ಕೆ  ಫಿರ್ಯಾದಿಯವರ ವರದಿ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 468/2017 ಕಲಂ 87 ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 119/2017 ಕಲಂ 32, 34 ಕೆ.ಇ ಎಕ್ಟ್;- ದಿನಾಂಕ: 04/12/2017 ರಂದು 04:00 ಪಿ.ಎಮ್ ಕ್ಕೆ ಆರೋಪಿತರು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಒಟ್ಟು 7452/- ರೂ ಕಿಮ್ಮತ್ತಿನ ಕಿಂಗ್ ಫಿಶರ್ ಬೀರ್ ಬಾಟಲಿಗಳು, ಓ.ಸಿ ವಿಸ್ಕಿ, ಓ.ಟಿ ವಿಸ್ಕಿ ಪೌಚಗಳನ್ನು ಆರೋಪಿತರಿಂದ ಜಪ್ತಿಪಡಿಸಿಕೊಂಡು ಕ್ರಮ ಜರುಗಿಸಿದ ಬಗ್ಗೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 209/2017 ಕಲಂ: 143,498(ಎ),323,504, 506, ಸಂಗಡ 149ಐ.ಪಿ.ಸಿ;- ದಿನಾಂಕ 04/12/2017 ರಂದು 12-15 ಪಿ ಎಮ್ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ಲಲಿತಾ ಗಂಡ ಸೇವು ಜಾದವ ವಯಾ|| 26 ವರ್ಷ ಜಾ|| ಲಮಾಣಿ ಉ|| ಕೂಲಿಕೆಲಸ ಸಾ|| ಏವೂರ ದೊಡ್ಡ ತಾಂಡಾ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನನ್ನ ತವರು ಮನೆಯು ಸಹ ಇದ್ದೂರಾದ ಏವೂರ ದೊಡ್ಡ ತಾಂಡಾವಾಗಿದ್ದು ನನಗೆ ಸುಮಾರು 6 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರು ಇದ್ದೂರಿನ ಸೇವು ತಂದೆ ವಾಲು ಜಾದವ ಈತನಿಗೆ ಕೊಟ್ಟು ಮಾದುವೆ ಮಾಡಿದ್ದು ಇರುತ್ತದೆ. ಮದುವೆಯಲ್ಲಿ ಎರಡುವರೆ ತೊಲಿ ಬಂಗಾರವನ್ನು ಉಡುಗೊರೆಯಾಗಿ ಕೊಟ್ಟಿದ್ದು ಇರುತ್ತದೆ. ಮದುವೆಯಾದ ಬಳಿಕ 2/3  ವರ್ಷದವರೆಗೆ ನಾನು ಮತ್ತು ನನ್ನ ಗಂಡ ಅನ್ಯೋನ್ಯವಾಗಿ ಇದ್ದೇವು. ನಂತರದ ದಿನಗಳಲ್ಲಿ ನನ್ನ ಗಂಡನಾದ 1] ಸೇವು ತಂದೆ ವಾಲು ಜಾದವ ನನ್ನ ಅತ್ತೆಯಾದ 2] ಕಾಶಿಬಾಯಿ ಗಂಡ ವಾಲು ಜಾದವ, ಮಾವನಾದ 3] ರಾಮು ತಂದೆ ಭೀಮು ರಾಠೋಡ, ಹಾಗು ಮೈದುನರಾದ 4] ರೇವು ತಂದೆ ವಾಲು ಜಾದವ 5] ಶಿವು ತಂದೆ ವಾಲು ಜಾದವ ಹಾಗು ನನ್ನ ಅತ್ತಿಗೆಯಾದ 6] ಸವಿತಾ ಗಂಡ ರೇವು ಜಾದವ ಸಾ|| ಎಲ್ಲರೂ ಏವೂರ ದೊಡ್ಡ ತಾಂಡಾ ಇವರೆಲ್ಲರೂ ದಿನಾಲೂ ನನಗೆ, ಚನ್ನಾಗಿ ಅಡುಗೆ ಮಾಡಲು ಬರುವುದಿಲ್ಲ, ನಾನು ಸರಿಯಾಗಿ ಇಲ್ಲ ಮತ್ತು ನನಗೆ ಮಕ್ಕಳಾಗುವದಿಲ್ಲ ಅಂತಾ ಅನ್ನುತ್ತಾ ಮಾನಸಿಕವಾಗಿ ಕಿರುಕುಳ ನೀಡಲಿಕ್ಕೆ ಹತ್ತಿದರು. ಸದರಿ ವಿಷಯವನ್ನು ನಾನು ಆಗಾಗ ನನ್ನ ತಂದೆ ತಾಯಿಯವರಲ್ಲಿ ತಿಳಿಸಿದ್ದು  ಸದರಿಯವರು ಆಯಿತು ನಾವು ಬಂದು ವಿಚಾರಿಸಿ ನಿನ್ನ ಗಂಡ, ಅತ್ತೆ, ಹಾಗು ಮೈದುನರಿಗೆ  ಎಲ್ಲರಿಗೂ ನಿನ್ನೊಂದಿಗೆ ಚನ್ನಾಗಿ ಇರುವಂತೆ ತಿಳಿಸಿ ಹೇಳುತ್ತೇವೆ ಅಂತಾ ಸಮಾದಾನ ಮಾಡಿದ್ದರು. ಆದ್ದರಿಂದ ನಾನು ಆದರಾಯಿತು ಅಂತಾ ಸುಮ್ಮನೆ ನನ್ನ ಗಂಡನ ಮನೆಯಲ್ಲಿಯೇ ವಾಸವಾಗಿದ್ದೆನು. ಸದರಿಯವರು ನನಗೆ ಮತ್ತೆ ಬಹಾಳ ಕಿರುಕುಳ ನೀಡಿದ್ದರಿಂದ ಈ ವಿಷಯವಾಗಿ ನಮ್ಮ ತಾಂಡಾದ ಕಾರಬಾರಿಯಾದ ಸುಬ್ಬಣ್ಣ ಚವ್ಹಾಣ ಇವರು ನ್ಯಾಯ ಮಾಡಿದ್ದು ಆದರೆ ಸದರಯವರು ಯಾರ ಮಾತು ಕೇಳದೇ ನನಗೆ ಹಾಗಯೇ ಬಹಳಷ್ಟು ಕಿರುಕುಳ ನೀಡಿದ್ದರಿಂದ  ನಾನು ಸುಮಾರು ಒಂದು ತಿಂಗಳ ಹಿಂದೆ ನಮ್ಮ ತವರು ಮನೆಗೆ ಬಂದಿದ್ದೆನು.
ಹೀಗಿದ್ದು ಮೊನ್ನೆ ದಿನಾಂಕ 02/12/2017 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಾನು ಹಾಗು ನಮ್ಮ ತಂದೆ ಕಿಶನ್ ತಂದೆ ಸೀತು ರಾಠೋಡ ಹಾಗು ತಾಯಿಯಾದ ಮೋತಿಬಾಯಿ ಗಂಡ ಕಿಶನ್ ರಾಠೋಡ ಎಲ್ಲರೂ ಕೂಡಿ ಮಾತನಾಡುತ್ತಾ ನಮ್ಮ ಮನೆಯ ಮುಂದೆ ಕುಳಿತಾಗ ಅದೇ ಸಮಯಕ್ಕೆ ನನ್ನ ಗಂಡನಾದ 1] ಸೇವು ತಂದೆ ವಾಲು ಜಾದವ ನನ್ನ ಅತ್ತೆಯಾದ 2] ಕಾಶಿಬಾಯಿ ಗಂಡ ವಾಲು ಜಾದವ, ಮಾವನಾದ 3] ರಾಮು ತಂದೆ ಭೀಮು ರಾಠೋಡ, ಹಾಗು ಮೈದುನರಾದ 4] ರೇವು ತಂದೆ ವಾಲು ಜಾದವ 5] ಶಿವು ತಂದೆ ವಾಲು ಜಾದವ ಅತ್ತಿಗೆಯಾದ 6] ಸವಿತಾ ಗಂಡ ರೇವು ಜಾದವ ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಮನೆಗೆ ಬಂದವರೇ ಎಲೇ ಸೂಳಿ ಲಲ್ಲಿ ನೀನು ನಮ್ಮ ಮನೆಯೆಂದ ಏಕೇ ಬಂದಿರುವಿ ಅಂತ ಕೇಳಿದಾಗ ನಾನು ನೀವು ನೀಡುವ ಕಿರುಕುಳ ತಾಳದೇ ಬಂದಿರುತ್ತೇನೆ ಅಂತ ಅಂದಾಗ ಆಯಿತು ಸೂಳಿ ನಿನ್ನ ಸೊಕ್ಕು ಬಹಾಳ ಆಗಿದೆ ನೀನು ಇಲ್ಲಿಯೇ ಇರು ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ನನಗೆ ಕೈಯಿಂದ ಮುಖಕ್ಕೆ ಹಾಗು ಬೆನ್ನಿಗೆ ಹೊಡೆಯಲಿಕ್ಕೆ ಹತ್ತಿದರು. ಆಗ ನಾನು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ತಂದೆ ಕಿಶನ ಹಾಗು ತಾಯಿ ಮೋತಿಬಾಯಿ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರೂ ನಮಗೆ ಹೊಡೆಯುವದನ್ನು ಬಿಟ್ಟು ಸೂಳೇ ನೀನು ಇನ್ನೊಮ್ಮೆ ನಮ್ಮ ಮನೆಯ ಕಡೆಗೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭೆದರಿಕೆ ಹಾಕಿಹೋಗಿದ್ದು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 209/17 ಕಲಂ 143,323,498[ಎ],504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಮಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 344/2017 ಕಲಂ.448, 295 ಐಪಿಸಿ ;- ದಿನಾಂಕ:04-12-2017 ರಂದು 3 ಪಿ.ಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರರಾದ ಶ್ರೀಮತಿ ಗೌರಮ್ಮ ಗಂಡ ಶಾಂತಗೌಡ ಪೊಲೀಸ್ ಪಾಟೀಲ ವಯಾ:28 ವರ್ಷ ಜಾತಿ:ಲಿಂಗಾಯತ ಉ:ಮುಖ್ಯಗುರುಗಳು ಸಾ:ಬೊಮ್ಮನಹಳ್ಳಿ.ಟಿ ಸಾ:ಮುದನುರ ಇವರು ಠಾಣೆಗೆ ಬಂದು ಒಂದು ಲಿಖಿತ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ಸರಕಾರಿ ಹಿರಿಯ ಪ್ರಾಥಮೀಕ ಶಾಲೆ ಬೊಮ್ಮನಹಳ್ಳಿ ಟಿ ಗ್ರಾಮದ ಮುಖ್ಯ ಗುರುಗಾಳಿದ್ದು ತಮ್ಮ ಗಮನಕ್ಕೆ ತರುವುದೆನೆಂದರೆ ಶನಿವಾರ ಮತ್ತು ಬಾನುವಾರ ಶಾಲೆ ರಜೆ ಇದ್ದು ಇರುತ್ತದೆ. ಇಂದು ದಿನಾಂಕ:04-12-2017 ರಂದು ಎಂದಿನಂತೆ ನಾನು ಸಹ ಶಿಕ್ಷಕರಾದ ಮೌನೇಶ ದೇವರಗೊನಾಲ ಇಬ್ಬರು ಬೆಳಿಗ್ಗೆ 9-30 ಗಂಟೆಗೆ ಶಾಲೆಗೆ ಬಂದಿದ್ದು ಶಾಲೆಯ ತರಗತಿ ಕೊಣೆಗಳ ಮುಂಬಾಗದ ಗೊಡೆಯ ಮೇಲೆ ಪೆಂಟಿನಿಂದ ಬರೆದ ಮಹಾತ್ಮರ ಬಾವ ಚಿತ್ರಗಳಾದ ಡಾ|| ಬಿ.ಆರ್.ಅಂಬೇಡ್ಕರ ಹಾಗೂ ವಾಲ್ಮೀಕಿ ಭಾವ ಚಿತ್ರಗಳಿಗೆ ನಿನ್ನೆ ದಿನಾಂಕ:03-12-2-107 ರಂದು ಯಾರೊ ದುಷ್ಕಮರ್ಿಗಳು ಶಾಲೆಯ ಮುಂದಿನ ಕಂಪೌಂಡ ಗೊಡೆಯನ್ನು ಜಿಗಿದು ಶಾಲೆ ಒಳಗೆ ಅತೀಕ್ರಮ ಪ್ರವೇಶ ಮಾಡಿ ರಾತ್ರಿ ಸಮಯದಲ್ಲಿ ಕೆಸರು ಎರಚಿ ಅವಮಾನ ಮಾಡಿರುತ್ತಾರೆ. ನಮ್ಮದು ಆನ್ಲೈನ ಕೆಲಸ ಮುಗಿಸಿಕೊಂಡು ಠಾಣೆಗೆ ತಡವಾಗಿ ಬಂದಿದ್ದು ಇರುತ್ತದೆ.  ಕಾರಣ ತಾವು ಈ ಕುರಿತಂತೆ ತನಿಖೆ ಕೈಕೊಂಡು ತಪ್ಪಿಸ್ಥರ ವಿರುದ್ದ ಕಾನುನು ಕ್ರಮ ಕೈಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೆನೆ.ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೇ ಕೈಕೊಂಡಿದ್ದು ಇರುತ್ತದೆ

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 345/2017 ಕಲಂ. 87 ಕೆ ಪಿ ಕಾಯ್ದೆ;- :-ದಿನಾಂಕ:04-12-2017 ರಂದು 4-30 ಪಿ.ಎಂ. ಸುಮಾರಿಗೆ ಮಾಚಗುಂಡಾಳ ಗ್ರಾಮದ ದೊಡ್ಡಿಯ ಹತ್ತಿರ ಇರುವ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಕೊಳಿ ಪಂಧ್ಯ ಮೂಲಕ ಹಣವನ್ನು ಪಣಕಿಟ್ಟು ಜೂಜಾಟ ಆಡುತ್ತಿದ್ದಾಗ ಪಂಚರ ಸಮಕ್ಷಮ ಸಿಬ್ಬಂಧಿಯರೊಂದಿಗೆ ದಾಳಿ ಮಾಡಿ ಕ್ರಮ ಜರುಗಿಸಿದ ಬಗ್ಗೆ
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 185/2017 ಕಲಂ: 143, 147, 148, 323, 324, 504, 506 ಸಂ: 149 ಐಪಿಸಿ;- ದಿನಾಂಕ: 04/12/2017 ರಂದು 08.35 ಪಿಎಮ್ ಕ್ಕೆ ಪಿರ್ಯಾದಿದಾರರು ಒಂದು ಲಿಖಿತ ಅಜರ್ಿ ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ, ನಾನು ಚಿದಾನಂದ ತಂದೆ ಭೀಮಣ್ಣ ದೋರನಳ್ಳಿ ವ;26 ಉ; ಕಾಸಗಿ ಕೆಲಸ ಜಾ: ಮಾದರ ಸಾ; ಚಂದಾಪೂರ ತಾ; ಶಹಾಪೂರ ಇದ್ದು ನಮ್ಮ ಅಣ್ಣನ ಹೆಂಡತಿಯ ತಂಗಿಯಾದದ ಶಾಂತ ತಂದೆ ಹುಲಗಪ್ಪ ಸುರಪೂರ ಇವಳಿಗೆ ಬಹಳ ದಿನಗಳಿಂದ ಪ್ರಿತಿಸುತ್ತಿದ್ದೇನೆ. ಅದೆ ಕಾರಣಕ್ಕೆ ಅವಳ ಕಡೆಯವರಾದ 1) ಹಯ್ಯಾಳಪ್ಪ ಕದರಾಪೂರ 2) ನಿಂಗಮ್ಮ ಗಂಡ ಹಯ್ಯಾಳಪ್ಪ 3) ಮಲ್ಲಪ್ಪ ತಂದೆ ಹುಲಿಗೆಪ್ಪ ಸುರಪುರ 4) ಭೀಮಣ್ಣ ತಂದೆ ಹುಲಿಗೆಪ್ಪ ಸುರಪುರ 5) ಸಣ್ಣ ಭಿಮಣ್ಣ ತಂದೆ ಮರೆಪ್ಪ ಸುರಪೂರ 6) ಸಣ್ಣ ವಸಂತ ತಂದೆ ಮರೆಪ್ಪ ಸುರಪೂರ 7) ಲಕ್ಷ್ಮಣ ಸಾ: ಎಲ್ಲರೂ ಹಳೆ ಪೇಠ ಶಹಾಪೂರ. ಇವರೆಲ್ಲರೂ ಕೂಡಿ ಬಂದು ಪಿಯರ್ಾದಿ ಚಿದಾನಂದ ಇವರಿಗೆ ಅವಾಶ್ಚವಾಗಿ ಬೈಯ್ದು ಬಡಿಗೆಯಿಂದ, ಕೈಯಿಂದ ಹೊಡೆದು ರಕ್ತಗಾಯ, ಗುಪ್ತಗಾಯ ಮಾಡಿ ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಅಕಿ ಹೋಗಿದ್ದಾರೆ ಅಂತಾ ಇತ್ಯಾದಿ ದೂರಿನ ಸಾರಂಶದ ಲಿಖಿತ ಅಜರ್ಿ ಆದಾರದ ಮೇಲೆ ಠಾಣೆ ಗುನ್ನೆ ನಂ. 185/2017 ಕಲಂ 143, 147, 148, 323, 324, 504, 506 ಸಂ: 149 ಐಪಿಸಿ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡೇನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 219/2017 ಕಲಂ 279,337,338, ಐಪಿಸಿ  ;- ದಿನಾಂಕ-03-12-2017 ರಂದು ಬಸ್ಸಾಪೂರ ಗ್ರಾಮದಲ್ಲಿ ನಮ್ಮ ಮನೆ ದೇವರ ಜಾತ್ರೆ ಇರುವದರಿಂದ ಆ ಜಾತ್ರೆಗೆ ಹೋಗುವ ಸಲುವಾಗಿ ನಮ್ಮೂರಿನಿಂದ ನನ್ನ ಹೆಂಡತಿಯಾದ ಶರಣಮ್ಮ, ಸಾದೇವ ತಂದೆ ಯಂಕಪ್ಪ, ಅಶೋಕ ತಂದೆ ನರಸೇಗೌಡ ಕಲಾಲ ಇವರೆಲ್ಲರು ಕೂಡಿ ನಮ್ಮೂರಿನ ಶಂಕ್ರಪ್ಪ ತಂದೆ ಬೀಮಪ್ಪ ಕಾವಲಿ ಇತನ ಆಟೋ ನಂ.ಕೆಎ-33 ಎ-6499 ನೆದ್ದರಲ್ಲಿ ಕುಳಿತು ಬಸ್ಸಾಪೂರ ಗ್ರಾಮಕ್ಕೆ ಮದ್ಯಾಹ್ನ 02-00 ಗಂಟೆಗೆ ಹೋಗಿದ್ದು ಇರುತ್ತದೆ.
      ನಾನು ದಿನಾಂಕ-03-12-2017 ರಂದು ಮನೆಯಲ್ಲಿ ಇರುವಾಗ ಶಂಕ್ರಪ್ಪ ತಂದೆ ಭಿಮಪ್ಪ ಕಾವಲಿ ಇತನು ಪೋನ್ ಮಾಡಿ ತಿಳಿಸಿದ್ದೆನೆಂದರೆ ಬಸ್ಸಾಪೂರ ಗ್ರಾಮದ ಜಾತ್ರೆ ಮುಗಿಸಿಕೊಂಡು ನಾನು ಮತ್ತು ನಿನ್ನ ಹೆಂಡತಿ ಶರಣಮ್ಮ, ಸಾದೇವ ತಂದೆ ಯಂಕಪ್ಪ, ಅಶೋಕ ತಂದೆ ನರಸೇಗೌಡ ಕಲಾಲ ಇವರೆಲ್ಲರು ಸೇರಿ ನನ್ನ ಆಟೋದಲ್ಲಿ ನಮ್ಮೀರಿನ ಕಡೆಗೆ ಬರುವಾಗ ಬದ್ದೆಪಲ್ಲಿ ಗ್ರಾಮದ ನೀರಿನ ಟ್ಯಾಂಕ ಹತ್ತಿರ ರಸ್ತೆಯ ಮೇಲೆ ಸಾಯಂಕಾಲ 06-30 ಗಂಟೆಗೆ ಬರುವಾಗ ಎದರುಗಡೆಯಿಂದ ಅತಿವೇಗವಾಗಿ ಟ್ರ್ಯಾಕ್ಟರನ್ನು ನಡೆಸಿಕೊಂಡು ಬಂದು ನಾನು ನಡೆಸುತಿದ್ದ ಆಟೋಕ್ಕೆ ಬಂದು ಡಿಕ್ಕಿ ಪಡಿಸಿದ್ದಾನೆ ಡಿಕ್ಕಿ ಪಡಿಸಿದ್ದರಿಂದ ನಿನ್ನ ಹೆಂಡತಿ ಶರಣಮ್ಮಳಿಗೆ ಗಾಯವಾಗಿದೆ ಅಂತಾ ತಿಳಿಸಿದ್ದರಿಂದ ನಾನು ವೆಂಕಟ ತಂದೆ ಭೀಮಣ್ಣ ಇತನನ್ನು ಕರೆದುಕೊಂಡು ಒಂದು ಸೈಕಲ್ ಮೋಟರ ಮೇಲೆ ನಮ್ಮೂರಿನಿಂದ ಬದ್ದೆಪಲ್ಲಿ ಗ್ರಾಮದ ನನ್ನ ಹೆಂಡತಿ ಬಿದ್ದ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಹೆಂಡತಿ ಬಿದ್ದಿದ್ದಳು ಆಕೆಗೆ ಮಾತನಾಡಿಸಿದೆ ಮಾತನಾಡಲಿಲ್ಲ ಆಕೆಗೆ ನೋಡಲಾಗಿ ತಲೆಗೆ ಬಾರಿ ರಕ್ತಗಾಯ ಮತ್ತು ಬಲಗೈ ಮುರಿದಿದ್ದು ಇತ್ತು ಆಟೋದಲ್ಲಿ ಕುಳಿತ ಇತರರಿಗೆ ಯಾರಿಗೂ ಕೂಡ ಗಾಯಗಳು ಆಗಿರಲಿಲ್ಲ ಪಕ್ಕದಲಿದ್ದ ಆಟೊವನ್ನು ನೊಡಲಾಗಿ ನಮ್ಮೂರಿನ ಶಂಕ್ರಪ್ಪನ ಆಟೋ ಇತ್ತು ಮತ್ತು ಅದಕ್ಕೆ ಡಿಕ್ಕಿ ಪಡಿಸಿದ ಟ್ರ್ಯಾಕ್ಟರ ಪರೀಶಿಲಿಸಿ ನೋಡಲಾಗಿ ಮಹೇಂದ್ರ ಕಂಪನಿಯದ್ದು ಇದ್ದು ಕೆಎ-33 ಟಿಎ-6961 ಇದ್ದು ಅದಕ್ಕೆ ಕೆಎ-51 ಟಿ.744 ಅಂತಾ ಟ್ರ್ಯಾಲಿ ಇತ್ತು ಅದರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಪಕೀರಸಾಬ ತಂದೆ ಪೀರಸಾಬ ಗಾಡಿ ವ|| 28 ವರ್ಷ ಸಾ|| ಕಾಡ್ಲೂರ ತಾ|| ಜಿ|| ರಾಯಚೂರ ಅಂತಾ ಗೊತ್ತಾಗಿದ್ದು ಇರುತ್ತದೆ. ಆಗ ನಾನು ಮತ್ತು ವೆಂಕಟ ಸೇರಿ ನನ್ನ ಹೆಂಡತಿಯನ್ನು ಯಾವುದೋ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ರೀಮ್ಸ ಆಸ್ಪತ್ರೆ ರಾಯಚೂರಿಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ
 

No comments: