Police Bhavan Kalaburagi

Police Bhavan Kalaburagi

Friday, January 26, 2018

BIDAR DISTRICT DAILY CRIME UPDATE 26-01-2018

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-01-2018

ಧನ್ನೂರಾ ಪೊಲೀಸ್ ಠಾಣೆ  ಅಪರಾಧ ಸಂ. 18/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 25-01-2018 ರಂದು ಫಿರ್ಯಾದಿ ಪುಂಡಲಿಕ ತಂದೆ ಮಾಧವರಾವ ಸಾ: ತೆಗಂಪೂರ ರವರ ಮಗನಾದ ಪವನ ವಯ: 08 ವರ್ಷ ಈತನಿಗೆ ಶಾಲೆಯಲ್ಲಿಂದ ತೆಗಂಪೂರಕ್ಕೆ ಕರೆದುಕೊಂಡು ಹೋಗುವಾಗ ಹಲಬರ್ಗಾ ಗ್ರಾಮದ ಬಸವೇಶ್ವರ ಸರ್ಕಲ ಹತ್ತಿರ ಹೋಗುವಾಗ ಎದುರಿನಿಂದ ಅಂದರೆ ಅಮದಾಬಾದ ಕಡೆಯಿಂದ ಮೋಟಾರ್ ಸೈಕಲ ನಂ. ಕೆಎ-38/4029 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿಜೋರಾಗಿ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪವನ ಇತನಿಗೆ ಡಿಕ್ಕಿ ಮಾಡಿದನು, ಸದರಿ ಅಪಘಾತದಿಂದ ಪವನ ಇತನಿಗೆ ಬಲಗಾಲು ಮೊಳಕಾಲಿನ ಹತ್ತಿರ ಮೂಳೆ ಮುರಿದಿದ್ದು, ಬಲಗೈ ಮೊಳಕೈ ಹತ್ತಿರ ತರಚಿದ ಗಾಯ ಹಾಗೂ ಹಣೆಯ ಮೇಲೆ ಗುಪ್ತಗಾಯವಾಗಿರುತ್ತದೆ, ಸದರಿ ಘಟನೆಯನ್ನು ಅಲ್ಲಿಯೇ ಇದ್ದ ಹಲಬರ್ಗಾ ಗ್ರಾಮದ ರಾಜು ಕಾಳೆಕರ್ ಹಾಗೂ ದಯಾನಂದ ಎಡುರೆರವರು ನೋಡಿ ಚಿಕಿತ್ಸೆ ಕುರಿತು ಪವನ ಇತನಿಗೆ ಹಲಬರ್ಗಾ ಸರಕಾರಿ ಆಸ್ಪತ್ರೆಗೆ ತಂದಿದ್ದು ಇರುತ್ತದೆ, ಅಪಘಾತ ಪಡಿಸಿದ ನಂತರ ಆರೋಪಿಯು ತನ್ನ ವಾಹನವನ್ನು ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆಂದು ನೀಡಿದ ಫಿರ್ಯಾದು ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀıÀ£ÀÆgÀ ¥Éưøï oÁuÉ AiÀÄÄ.r.Dgï £ÀA. 02/2018, PÀ®A. 174 ¹.Dgï.¦.¹ :-
ಫಿರ್ಯಾದಿ ದಶರಥ ತಂದೆ ಶೆಕಪ್ಪಾ ಮಾಳಗೆ ವಯ: 70 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಚಿಂತಾಕಿ ರವರು ಸುಮಾರು 18 ವರ್ಷಗಳ ಹಿಂದೆ ಮುದೋಳ(ಕೆ) ಗ್ರಾಮದ ನಾಗಪ್ಪಾ ಸೂರ್ಯವಂಶಿ ಇವರ ಮಗನಾದ ಅಶೋಕ ವಯ: 40 ವರ್ಷ ಇವರಿಗೆ ನ್ನ ಮಗಳಾದ ಯಶೋಧಾ ಇವಳಿಗೆ ಕೊಟ್ಟು ಮದುವೆ ಮಾಡಿರುತ್ತಾರೆ, ಅವರಿಗೆ ಅನೀಲ, ಉಷಾ ಹಾಗು ಅಶ್ವಿನಿ ಅಂತ ಮೂರು ಜನ ಮಕ್ಕಳಿರುತ್ತಾರೆ, ಅಳಿಯ ಮಗಳು ಕೂಲಿಕೆಲಸ ಮಾಡಿಕೊಂಡಿರುತ್ತಾರೆ, ಅಳಿಯ ಅಶೋಕ ಸುಮಾರು 5-6 ತಿಂಗಳುಗಳಿಂದ ಮಾನಸಿಕವಾಗಿ ಅಸ್ವಸ್ಥಗೊಂಡು ಅವರಿಗೆ ಖಾಸಗಿ ಆಸ್ಪತ್ರೆ ಹಾಗು ಉಪಚಾರ ಮಾಡಿದರು ಸಹ ಗುಣಮುಖವಾಗಿರುವುದಿಲ್ಲ, ಅಳಿಯ ಎಲ್ಲಾ ಕಡೆಗೆ ಆಸ್ಪತ್ರೆ ಎಲ್ಲಾ ತೋರಿಸಿದರು ಸಹ ಗುಣಮುಖದ ಆಗದ ಕಾರಣ ಅವರು ತನ್ನ ಕಾಯಿಲೆ ಗುಣಮುಖ ವಾಗುವುದಿಲ್ಲ ಅಂತ ಮನನೊಂದಿದ್ದು, ಹೀಗಿರುವಲ್ಲಿ ದಿನಾಂಕ 25-01-2018 ರಂದು ರಂದು ಅಶೋಕ ಇವರು 5-6 ತಿಂಗಳಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಎಲ್ಲಾ ಕಡೆ ಉಪಚಾರ ಮಾಡಿದರು ಗುಮುಖನಾಗದ ಕಾರಣ ತನ್ನ ಕಾಯಿಲೆ ಗುಣಮುಖವಾಗುವುದಿಲ್ಲ ಅಂತ ಮನನೊಂದು ಅದೇ ಕಾರಣದಿಂದ ಅಶೋಕ ಇವರು ಕೋಣೆಯಲ್ಲಿ ತಗಡದ ದಂಡ್ಯಾಕೆ ಹಗ್ಗದಿಂದ ಕುತ್ತಿಗೆಗೆ ಫಾಸಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಅವರ ಮರಣದಲ್ಲಿ ಯಾವುದೇ ರೀತಿಯಿಂದ ಸಂಶಯ ಇರುವುದಿಲ್ಲ ಅಂತ ಕೊಟ್ಟ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: