Police Bhavan Kalaburagi

Police Bhavan Kalaburagi

Saturday, January 13, 2018

KALABURAGI DISTRICT REPORTED CRIMES

ಕಳವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ಮಹೇಂದ್ರ ತಂದೆ ಶರಣಪ್ಪ ಗುಡೆದ ಸಾ|| ಯಾತನೂರ ತಾ: ಜೇವರಗಿ ಇವರು ದಿನಾಂಕ 11-01-2018 ರಂದು ರಾತ್ರಿ  ನಾನು ನನ್ನ ಹೆಂಡತಿ ಸಾವಿತ್ರಿ ಮತ್ತು ನಮ್ಮ ಅಣ್ಣನ ಹೆಂಡತಿ ರೇಣುಕಾ ಎಲ್ಲರೂ ಊಟ ಮಾಡಿ ನಾನು ನನ್ನ ಹೆಂಡತಿ ಬಂದು ರೂಮಿನಲ್ಲಿ ಮಲಗಿಕೊಂಡೆವು ನಮ್ಮ ಅಣ್ಣನ ಹೆಂಡತಿ ರೇಣುಕಾ ಇವಳು ಮತ್ತೊಂದು ಕೋಣೆಯಲ್ಲಿ ಮಲಗಿ ಕೊಂಡಳು ರಾತ್ರಿ ಅಂದಾಜು 3-30 ಎ.ಎಂಕ್ಕೆ ನನ್ನ ಹೆಂಡತಿ ಏಕಿಗೆ ಎಂದು ಎಂದ್ದು ಬಾಗಿಲು ತಗೆದಾಗ ಹೊರಗಿನ ಕೊಂಡಿ ಹಾಕಿದನ್ನು ನೋಡಿ ನನಗೆ ಎಬ್ಬಿಸಿದಳು ನಾನು ಕಿಡಿಕಿಯಿಂದ ಹೊರೆಗೆ ಬಂದು ಮಗ್ಗಲ ಕೊಣೆ ನೋಡಲಾಗಿ ಬಾಗಿಲು ತೆರೆದಿತ್ತು ಆಗ ನನ್ನ ಹೆಂಡತಿಗೆ ಹೇಳಿ ನನ್ನ ಅಣ್ಣನ ಹೆಂಡತಿಗೆ ಎಬ್ಬಿಸಿ ನೋಡಲಾಗಿ ಒಳಗೆ ಇದ್ದ ತಿಜೋರಿ ಕೀಲಿ ಮುರಿದು ಡ್ರಾ ತೇರೆದು ಒಳಗೆ ಇದ್ದ ಬಂಗಾರದ ಆಭರಣ ಮತ್ತು 3,ಲಕ್ಷ 40,ಸಾವಿರ ನಗದು ಹಣ ಒಟ್ಟು 459000/- ರೂ ಬೆಲೆಬಾಳುವ ಸಾಮಾನು ದಿನಾಂಕ: 11-01-2018 ರ 12-01-2018 ರ ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಹೊರಗಿನ ಕೀಲಿ ಮುರಿದು ಒಳಗೆ ಹೋಗಿ ತಿಜೋರಿ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಮತ್ತು ನಮ್ಮ ಮನೆಯ ಹತ್ತಿರದಲ್ಲಿ ಇದ್ದ ಸಿದ್ದಗಂಗಮ್ಮಾ ಗಂಡ ಮಲ್ಕಣ್ಣ ಸೋಮಜಾಳ ಇವರ ಮನೆಯ ಬಾಗಿಲು ತೆರೆದು ಒಳಗಿದ್ದ ತಿಜೋರಿಯಲ್ಲಿಯ 1 ತೋಲಿ ಬೋರಮಳ 24000/- ರೂ ಕಿಮ್ಮತಿನದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಅಶೋಕ ತಂದೆ ಕೆರಬಾ ಬಿರೆಜದಾರ ಸಾ|| ತಡೋಳಾ ಇವರು ತಮ್ಮ ಗ್ರಾಮದ ಸುರೇಶ ತಂದೆ ಅಪ್ಪಾರಾವ ಸುತಾರ ರವರ HF DELUXE ಮೋಟರ್ ಸೈಕಲ್ ನಂ KA 32 EQ 4182 ಇದ್ದು ಅದನ್ನು ಖಾಸಗಿ ಕೆಲಸಕ್ಕಾಗಿ ಉಪಯೋಗಿಸುತ್ತಾ ಬಂದಿದ್ದು  ದಿನಾಂಕ 11/01/2018 ರಂದು ಸಾಯಂಕಾಲ ನಮ್ಮ ಗ್ರಾಮದ ಸುರೇಶ ಸುತಾರ ಇತನು ತನ್ನ ಮೋಟರ ಸೈಕಲಿಗೆ ಪೆಟ್ರೋಲ್ ಹಾಕಿಕೊಳ್ಳಲು ಖಜೂರಿ ಬಾರ್ಡರ್ ಹತ್ತಿರ ಇರುವ ಪಂಪದಲ್ಲಿ ಎಣ್ಣೆ ಹಾಕಿಕೊಂಡು ಬಾರ್ಡರ ಹತ್ತಿರ ಬಂದು ಎಣ್ಣೆ ಹಾಕಿಕೊಂಡು ಮರಳಿ ಬಾರ್ಡರ ಹತ್ತಿರದಿಂದ ಹೋಗುವಾಗ ಸುರೇಶ ಇತನು ಮೋಟರ ಸೈಕಲ ಚಲಾಯಿಸುತ್ತಿದ್ದು ನಾನು ಹಿಂದುಗಡೆ ಕುಳಿತಿದ್ದು ಆಗ ನಮ್ಮ ಹಿಂದಿನಿಂದ ಯಾವುದೋ ಒಂದು ವಾಹನ ವೇಗವಾಗಿ & ನಿರ್ಲಕ್ಷತನದಿಂದ ಬಂದು ಒಮ್ಮೆಲೆ ಡಿಕ್ಕಿ ಪಡಿಸಿದ್ದರಿಂದ ನಾವು ಕೆಳಗಡೆ ಬಿದ್ದಾಗ ನನಗೆ ಎಡಗಾಲಿಗೆ,ತಲೆಗೆ,ಹಣೆಗೆ ಗಾಯವಾಗಿದ್ದು ಸುರೇಶ ಇತನಿಗೆ ತಲೆಗೆ ಮುಖಕ್ಕೆ ಬಡೆದು ಭಾರಿ ಗಾಯ ಹೊಂದಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ, ಆಗ ಡಿಕ್ಕಿ ಪಡಿಸಿದ ಚಾಲಕ ವಾಹನ ಸಮೇತ ಓಡಿಹೋಗಿರುತ್ತಾನೆ, ಆಗ ಸಮಯ ಅಂದಾಜು ರಾತ್ರಿ 9.30 ಗಂಟೆಯಾಗಿತ್ತು, ಆಗ ನಮ್ಮ ಗ್ರಾಮದ ವಿಜಯಕುಮಾರ ತಂದೆ ತುಳಸಿರಾಮ ಕಾರಬಾರಿ ಇತನು 108 ಅಂಬ್ಯೂಲೆನ್ಸ ಗೆ ಫೋನ್ ಮಾಡಿದಾಗ ಅಂಬ್ಯೂಲೆನ್ಸದಲ್ಲಿ ನನಗೆ ಈ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: