Police Bhavan Kalaburagi

Police Bhavan Kalaburagi

Sunday, January 14, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಿವಾನಂದ ತಂದೆ ನಿಂಬೆಣ್ಣಾ ಕಾಮಶೆಟ್ಟಿ ಇತನು ಮೋಟಾರ ಸೈಕಲ ನಂ KA 32 EA 0096 ನೇದ್ದರ ಹಿಂದೆ ಮೃತ ಗುರುಬಾಯಿ ಗಂಡ ಶಾಂತವೀರಪ್ಪ ಕಾಮಶೆಟ್ಟಿ ಇವರಿಗೆ ಕೂಡಿಸಿಕೊಂಡು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ನಿಮ್ಮ ಹೊಲಕ್ಕೆ ಹೊರಟಿದ್ದು, ಮಧ್ಯಾಹ್ನ 03-00 ಗಂಟೆ ಸುಮಾರಿಗೆ ಬಸವರಾಜ ಚೌಡಶೆಟ್ಟಿ ಇವರ ಹೊಲದ ಹತ್ತಿರ ಇರುವ ಕಗ್ಗನಮಡಿಯಳವಂತಗಿ ಕ್ರಾಸ ರೋಡಿನ ಟರ್ನಿಂಗ ಕಚ್ಚಾ ರಸ್ತೆಯ ಮೇಲೆ ಶಿವಾನಂದ ಇತನು ಅತಿವೇಗದಿಂದ ತನ್ನ ವಶದಲ್ಲಿದ್ದ ಮೋಟಾರ ಸೈಕಲ ಟರ್ನಿಂಗನಲ್ಲಿ ಟರ್ನ ಮಾಡಿದ ವೇಗದ ನಿಯಂತ್ರಣ ತಪ್ಪಿ ಶಿವಾನಂದ ಮತ್ತು ಮೃತ ಗುರುಬಾಯಿ ಇಬ್ಬರು ರೋಡಿನ ಮೇಲೆ ಮೋಟಾರ ಸೈಕಲ ಬಿದಿದ್ದರಿಂದ್ದ ಮೃತ ಗುರುಬಾಯಿ ತಲೆಗೆ ಭಾರಿ ಗುಪ್ತಗಾಯವಾಗಿ ಮಾತಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ಅವಳಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಸೇರಿಕೆ ಮಾಡಿದ್ದು  ನಂತರ ಮೃತ ಗುರುಬಾಯಿ ಇವರಿಗೆ ಬಸವೇಶ್ವರ ಆಸ್ಪತ್ರೆ ವೈದ್ಯರು ತಲೆಗೆ ಶಸ್ತ್ರ ಚಿಕಿತ್ಸೆ ಮಾಡಿ ತಲೆಯಲ್ಲಿಯ ಮೆದುಳು ಹೊರಗೆ ತೆಗೆದು ಎಡ ಹೊಟ್ಟೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಇಟ್ಟರು ನಂತರ ಮೃತಳಿಗೆ ಗುಣಮುಖವಾಗಿದ್ದರಿಂದ್ದ ಡಿಜಾರ್ಚ ಮಾಡಿ ಮನೆಗೆ ಕಳುಹಿಸಿ ಕೊಟ್ಟರು ಮೃತಳ  ಆರೋಗ್ಯ ಮತ್ತೆ ಹದಗೆಟ್ಟಿದ್ದರಿಂದ್ದ ಮತ್ತೆ ಮನೆಯಿಂದ ಬಸವೇಶ್ವರ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದೇನು. ಮತ್ತೆ ಹೊಟ್ಟೆಯಲ್ಲಿದ್ದ ಮೆದುಳು ತೆಗೆದು ತಲೆಯಲ್ಲಿ ಹಾಕಿ ಶಸ್ತ್ರ ಚಿಕಿತ್ಸೆ ಮಾಡಿದ್ದು  ಮೃತಳು ಗುಣಮುಖ ಹೊಂದಿದ್ದಾರೆ ಅಂತಾ ಹೇಳಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ಮೃತ ಗುರುಬಾಯಿ ಇವರು ದಿನಾಂಕ09-12-2017  ರಿಂದ ಇಂದಿನವರೆಗೆ ಹಾಸಿಗೆಯಲ್ಲಿ ಇದ್ದ ಕೇವಲ ಕಣ್ಣು ತೆಗೆದು ನೋಡುತ್ತಿದ್ದು ಆದರೇ ಮಾತಾಡುತ್ತಿರಲಿಲ್ಲಾ ದಿನಾಂಕ 13-01-2018 ರಂದು ಬೆಳಿಗ್ಗೆ ಗಂಜಿ ಸೇವನೆ ನಮ್ಮ ತಾಯಿಗೆ ಮಾಡಿಸಿದಾಗ ಅವರು ವಾಂತಿ ಮಾಡಿಕೊಂಡಿದ್ದು ಕೈ ಕಾಲು ತಣ್ಣಗಾಗಲು ಅವರು ಬಹಳಷ್ಟು ಎದೆ ಏರಿಳಿದ ಮಾಡುತ್ತಿದ್ದರಿಂದ ಅವರಿಗೆ ಉಪಚಾರ ಕುರಿತು ನಮ್ಮ ಅಣ್ಣ ತಮ್ಮಕೀಯ ಓಮಿನಿ ಗಾಡಿಯಲ್ಲಿ ನಮ್ಮ ತಾಯಿಗೆ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಮದ್ಯಾಹ್ನ ಸುಮಾರಿಗೆ ಆಸ್ಪತ್ರೆಗೆ ತಂದಾಗ ವೈದ್ಯರು ನಮ್ಮ ತಾಯಿಗೆ ನೋಡಿ ಮನೆಯಿಂದ ತರುವಾಗಲೇ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದರು. ನಮ್ಮ ತಾಯಿ ಗುರುಬಾಯಿ ಇವರು ದಿನಾಂಕ:- 12/09/2017 ರಂದು ಮದ್ಯಾಹ್ನ 03:00 ಗಂಟೆ ಸುಮಾರಿಗೆ ಆದ ರಸ್ತೆ ಅಪಘಾತ ಗಾಯಗಳಿಂದ ಗುಣಮುಖ ಹೊಂದದೇ ಆದ ಗಾಯಗಳಿಂದ ಮೃತಪಟ್ಟಿರುತ್ತಾರೆ ಅಂತಾ ಮೃತಳ ಮಗ  ಸಿದ್ರಾಮಪ್ಪ ತಂದೆ ಶಾಂತವೀರಪ್ಪ ಕಾಮಶೆಟ್ಟಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಧರ್ಮಣ್ಣ ತಂದೆ ಮೌಲಪ್ಪ ಕಟ್ಟಿ ಸಾಃ ನದಿ ಸಿನ್ನೂರ ಗ್ರಾಮ ಇವರು ದಿನಾಂಕ 08/01/2018 ರಂದು ಬೆಳಿಗ್ಗೆ ನಾನು ಮತ್ತು ನಮ್ಮೂರಿನ ಮಶಾಕ ತಂದೆ ಲಾಲ ಅಹ್ಮದ, ಹುಸೇನ ತಂದೆ ಮಹಿಬೂಬಷಾ, ಮೌಲಾ ತಂದೆ ಮಹಿಬೂಬ ಎಲ್ಲರೂ ಕೂಡಿಕೊಂಡು ನಮ್ಮೂರಿನ ರಜಾಕಸಾಬ ಹೊಟೇಲ ಹತ್ತಿರ ನಿಂತುಕೊಂಡಾಗ ನಮ್ಮೂರಿನ ಸಾಹುಕಾರನಾದ ಧರ್ಮರಾಜ ತಂದೆ ರಾಚಪ್ಪ ಶೆಟ್ಟಿ ಹಾಗೂ ಇನ್ನಿತರರು ಕೂಡಿಕೊಂಡು ತಮ್ಮ ಕಾರ ನಂ ಕೆಎ-32 ಎನ್-1724 ಅನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ನನ್ನ ಮೇಲೆ ಹಾಯಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಆಗ ನಾನು ತಕ್ಷಣವೇ ಪಕಕ್ಕೆ ಸರಿದು ತಪ್ಪಿಸಿಕೊಂಡು ಓಡಿ ಹೊಗಿರುತ್ತೇನೆ, ನನ್ನ ಪಕ್ಕದಲ್ಲಿದ್ದ ಮೌಲಾ ತಂದೆ ಮಹಿಬೂಬ ಈತನಿಗೆ ಪರಚಿಕೊಂಡು ಹೊಯಿತ್ತು. ನಾವಿಬ್ಬರೂ ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾಗಿರುತ್ತೇವೆ. ನಾನು ತಪ್ಪಿಸಿಕೊಂಡು ಹೊಗದಿದ್ದರೆ ಕಾರು ನನ್ನ ಮೇಲೆ ಹಾಯಿಸಿ ಕೊಲೆ ಮಾಡುತ್ತಿದ್ದರು. ದಿನಾಂಕ 07/01/2017 ರಂದು ಧರ್ಮರಾಜ ಇವರ ತಮ್ಮನ ಮಗನಾದ ರಾಚಪ್ಪ ತಂದೆ ಬಸವಂತರಾಯಶೆಟ್ಟಿ ಇತನಿಗೂ ನನಗೂ ಜಗಳವಾಗಿದ್ದು, ಇದ್ದನ್ನೆ ಮನಸ್ಸಿನಲ್ಲಿಟ್ಟಿಕೊಂಡು ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ಹೀಗೆ ವೇಗವಾಗಿ ಹೊಗುವಾಗ ಸಿಟ್ಟಿನಿಂದ ಏ ಹೊಲೆಯಾ ಈ ಸಾರಿ ಬದುಕಿದ್ದಿಯಾ ಇನ್ನೊಂದು ಸಲಾ ನಿನ್ನನ್ನು ಬಿಡುವುದಿಲ್ಲ ಎಂದು ಗದರಿಸುತ್ತಾ ಹೊಗಿರುತ್ತಾನೆ.ಈತನು ಆರ.ಎಸ್.ಎಸ್ ಸಂಘಟನೆಯ ಕಾರ್ಯಕರ್ತನಾಗಿದ್ದು, ಇದ್ದರಿಂದ ಗ್ರಾಮದಲ್ಲಿ ಅನೇಕ ಭಾರಿ ಕೊಮು ಗಲಾಟೆ ಅಟ್ರಾಸಿಟಿ ಪ್ರಕರಣಗಳು ದಾಖಲಾಗಿದ್ದು, ಹಾಗೂ ಹಿಂದು ಮುಸ್ಲಿಂ ಗಲಭೆ ಉಂಟಾಗಿತ್ತು, ಇವರಿಂದ ಇಡೀ ಗ್ರಾಮದಲ್ಲಿ ಪ್ರಕ್ಷಬ್ದ ವಾತಾವರಣ ಉಂಟಾಗಿದ್ದು, ಇಂತಹ ಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು. ಈ ಪ್ರಕರಣಕ್ಕೆ ಕಾರಣರಾದ ಧರ್ಮರಾಜ ತಂದೆ ರಾಚಪ್ಪ ಶೆಟ್ಟಿ, ರಾಚಪ್ಪ ತಂದೆ ಬಸವಂತರಾಯ ಶೆಟ್ಟಿ, ಯಶ್ವಂತರಾಯ ತಂದೆ ರಾಚಪ್ಪ ಶೆಟ್ಟಿ, ಸಂಜುಕುಮಾರ ತಂದೆ ಬಸವಂತರಾಯ ಶೆಟ್ಟಿ ಹಾಗೂ ಇನ್ನಿತರರ ಮೇಲೆ ಜಾತಿ ನಿಂದನೆ, ಕೊಲೆ ಪ್ರಯತ್ನ, ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: