Police Bhavan Kalaburagi

Police Bhavan Kalaburagi

Thursday, January 18, 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ :  ದಿನಾಂಕ 17.01.2018 ರಂದು ಸಾಯಂಕಾಲ ರಾಘವೇಂದ್ರ ಪೊಲೀಸ ಠಾಣೆ ವ್ಯಾಪ್ತಿಯ ಮದಿನಾ ಕಾಲೋನಿ ಬಸ್ಸ ನಿಲ್ದಾಣ ಹತ್ತಿರ ಸರಕಾರಿ ಶಾಲೆಯ ಪಕ್ಕದಲ್ಲಿ ಕುಳಿತುಕೊಂಡು ಸಾರ್ವಜನಿಕರಿಗೆ ಕರೆದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿಯವರು ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಬ್ಬರನ್ನು ಹಿಡಿದು ವಿಚಾರಿಸಲು  1) ಮಹ್ಮದ ಜಾಫರ ತಂದೆ ಮಹ್ಮದ ಮೈನೊದಿನ್ ಚೌದರಿ ಸಾ: ಇಕಬಾಲ ಕಾಲೋನಿ ಎಮ್.ಎಸ್.ಕೆ.ಮೀಲ್ ಕಲಬುರಗಿ 2) ಅಯುಬ @ ಮಹ್ಮದ ಅಯುಬ ತಂದೆ ಮಹ್ಮದ ಯುಸುಫ ಸಾ: ಇಕಬಾಲ ಕಾಲೋನಿ ಎಮ್.ಎಸ್.ಕೆ.ಮೀಲ್ ಕಲಬುರಗಿ. ಅಂತ ತಿಳಿಸಿದ್ದು ಮಹ್ಮದ ಜಾಫರ ಇತನು ತನ್ನ ಹತ್ತಿರ ಇದ್ದ ನಗದು ಹಣ 1560 ರೂಪಾಯಿ 3 ಮಟಕಾ ಚೀಟಿಗಳು ಮತ್ತು ಒಂದು ಬಾಲ ಪೇನ್ ಮತ್ತು ಅಯುಬ ಇತನು ತನ್ನ ಹತ್ತಿರ ಇದ್ದ ನಗದು ಹಣ 650 ರೂಪಾಯಿ ಮತ್ತು ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ 16-01-2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಪೀರ ಜಂಜನಿ ದರ್ಗಾದ ಹತ್ತಿರ ರಸ್ತೆಯ ಪಕ್ಕದಲ್ಲಿ ಮೂರು ಜನರು ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಇದು ಬಾಂಬೆ ಮಟಕಾ ಇದೆ 1 ರುಪಾಯಿಗೆ 80 ರುಪಾಯಿ ಬರುತ್ತೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಶ್ರೀ ಎ.ಪೌಲ .ಎಸ್‌‌.ಐ. ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಪೀರ ಜಂಜನಿ ದರ್ಗಾ ಹತ್ತಿರ ಹೋಗಿ ದರ್ಗಾದ ಮರೆಯಲ್ಲಿ ನಿಂತು ನೋಡಲು ದರ್ಗಾದ ಪಕ್ಕದಲ್ಲಿ ರಸ್ತೆಗೆ ಹೊಂದಿಕೊಂಡು ಮೂರು ಜನರು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಇದು ಬಾಂಬೆ ಮಟಕಾ ಇದೆ 1 ರುಪಾಯಿಗೆ 80 ರುಪಾಯಿ ಬರುತ್ತೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕುಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ಮೂರು ಜನರು ಸೇರಿ ಸಿಕ್ಕಿದ್ದು ಸದರಿಯವರಿಗೆ ವಿಚಾರಿಸಲು ಸದರಿಯವರು ತಮ್ಮ ಹೆಸರು 1) ಮಹ್ಮದ ಮೋದಿನ್ @ ಮೊದಿನ್ ತಂದೆ ಮೈಹಿಬೂಬಸಾಬ ಲದಾಫ ಸಾ: ಮಿಜಬಾ ನಗರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ನಗದು ಹಣ 1325 ರೂ ಒಂದು ಬಾಲ ಪೇನ ಮತ್ತು 2 ಮಟಕಾ ಚೀಟಿಗಳು ದೊರೆತಿದ್ದು 2) ಖಾಸಿಮ ಅಲಿ ತಂದೆ ಮಹ್ಮದ ರಸೂಲ ಶೇಖ ಸಾ: ಹಾಗರಗುಂಡಗಿ ಹಾ:ವ: ಮಿಜಬಾ ನಗರ ಕಲಬುರಗಿ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 975 ರೂ ಒಂದು ಬಾಲ ಪೇನ ಮತ್ತು 2 ಮಟಕಾ ಚೀಟಿಗಳು ದೊರೆತಿದ್ದು ಮತ್ತು 3) ಮೈಹೀಬೂಬಸಾಬ ತಂದೆ ಲಾಲ ಅಹ್ಮದ ಸಾಬ ಶಹಾಬಾದ ಸಾ: ಫಿರೊಜಾಬಾದ ತಾ:ಜಿ: ಕಲಬುರಗಿ ಹಾ:ವ: ಮಿಜಬಾ ನಗರ ಕಲಬುರಗಿ ಇತನ ಅಂಗ ಶೋದನೆ ಮಾಡಲು ಸದರಿಯವನ ಹತ್ತಿರ ನಗದು ಹಣ 1170 ರೂ ಒಂದು ಬಾಲ ಪೇನ ಮತ್ತು 2 ಮಟಕಾ ಚೀಟಿಗಳು ದೊರೆತಿದ್ದು ಹೀಗೆ ಒಟ್ಟು ನಗದು ಹಣ 3470 ರೂ ದೋರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 16/01/2018 ರಂದು  ಸುಧಾರಿತ ಗಸ್ತು ಸಂ 31 ಮಣೂರ ಗ್ರಾಮದ ಬೀಟ್ ಸಿಬ್ಬಂದಿಯಾದ ಯಲ್ಲಪ್ಪ ಸಿಹೆಚ್ ಸಿ-412 ರವರು ಮಾಹಿತಿ ತಿಳಿಸಿದ್ದೆನೆಂದರೆ ಮಣುರ ಗ್ರಾಮದ ಬಸ್ಟ್ಯಾಂಡ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣುರ ಗ್ರಾಮದ ಬಸ್ಟ್ಯಾಂಡ ಹತ್ತಿರ ಸ್ವಲ್ಪ ದೂರ ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ್ಟ್ಯಾಂಡ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಗಡ್ಡೇಪ್ಪ ತಂದೆ ಶ್ರೀಮಂತ ಬೂಂಯ್ಯಾರ ಸಾ||ಮಣುರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1580/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಇಂದ್ರಾಬಾಯಿ ಗಂಡ ಮಲ್ಲೇಶಪ್ಪಾ ತಳವಾರ ಸಾ:ಬಿದನೂರ ಹಾ::ಗಂಗಾನಗರ ಕಲಬುರಗಿ ಇವರು ದಿನಾಂಕ:17/01/2018 ರಂದು 1.00 ಪಿ.ಎಂ ಸುಮಾರಿಗೆ ನಮ್ಮ ಮನೆಗೆ ರಾಜು, ಹಣಮಂತ,ಶೀತಮ್ಮಾ, ಬಸಮ್ಮಾ, ಕಾವೇರಿ, ಶ್ರಿದೇವಿ ಇವರೆಲ್ಲರೂ ಬಂದು ನಮಗೆ ಮನೆ ಬಿಟ್ಟು ಹೋಗುವಂತೆ ಅವಾಚ್ಯವಾಗಿ ಬೈಯಹತ್ತಿದರು ಆಗ ನಾನು ನಮ್ಮ ತಂದೆ ನಿಮಗೆಲ್ಲಾ ಕೇಳಿ ಮನೆ ನನಗೆ ಕೊಟ್ಟಿದ್ದಾನೆ ಅಂದಾಗ ರಂಡಿ ನಿನಗೆ ಮನೆ ಕೊಟ್ಟಿಲ್ಲಾ ಅಂತಾ ರಾಜು ಇತನು ನನ್ನ ಹೊಟ್ಟೆಯ ಮೇಲೆ ಗುದ್ದಿದನು. ಗುರುಬಾಯಿ, ಸೀತಾ, ಬಸಮ್ಮಾ, ಕಾವೇರಿ, ಶ್ರೀದೇವಿ, ಇವರು ನನ್ನ ಕೂದಲು ಹಿಡಿದು ಹೊಡೆಯಹತ್ತಿದ್ದರು ಆಗ ಬಿಡಿಸಲು ಬಂದ ನನ್ನ ಮಗ ಸುರೇಶನಿಗೆ ಹಣಮಂತ ಇತನು ಬಡಿಗೆಯಿಂದ ಮೈ ಕೈಗೆ ಹೊಡೆಯ ಹತ್ತಿದ್ದನು. ಆಗ ಅಲ್ಲೇ ಇದ್ದ ಅಂಬರೀಶ ಕಾರಿ, ಸಾಗರ ಪೊಲೀಸ ಪಾಟೀಲ ಇವರುಗಳು ಬಂದು ಜಗಳ ಬಿಡಿಸಿಕೊಂಡರು ಇಲ್ಲದಿದ್ದರೆ ನಮಗೆ ಇನ್ನೂ ಹೊಡೆಬಡೆ ಮಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಗುರುಬಾಯಿ ಗಂಡ ದಿ: ಸಿದ್ದಣ್ಣ ನಾಲವಾರ ಸಾ|| ಹನುಮಾನ ಗುಡಿಯ ಹಿಂದುಗಡೆ ಗಂಗಾನಗರ ಕಲಬುರಗಿ ಇವರು ದಿನಾಂಕ 17/01/18 ರಂದು ಮದ್ಯಾನ ನಾನು ನನ್ನ ಮಕ್ಕಳಿಗೆ ಮನೆಗೆ ಬಂದು ಇಂದಿರಾಬಾಯಿಗೆ ಮನೆ ಬಿಟ್ಟು ಹೋಗಲು ಹೇಳಿ ಗಂಡಸ್ಸು ಮಕ್ಕಳು ಯಾರಾದರು ಒಬ್ಬರು ಮನೆಯಲ್ಲಿದ್ದು ನೋಡಿಕೊಳ್ಳಿರಿ ಅಂತಾ ಹೇಳಿದ ಮೇರೆಗೆ ನನ್ನ ಮಗನಾದ ಹಣಮಂತ ಹಾಗು ಆತನ ಹೆಂಡತಿ ಬಸಮ್ಮ ಸಣ್ಣ ಮಗ ರಾಜ ಹಾಗೂ ಆತನ ಹೆಂಡತಿ ಸೀತಾ ಇವರು ಮದ್ಯಾನ 1.00 ಗಂಟೆಯ ಸೂಮಾರಿಗೆ ನಮ್ಮ ಮನೆಗೆ ಬಂದರು ಆಗ ಮನೆಯಲ್ಲಿದ್ದ ನನ್ನ ಮಗಳು ಇಂದಿರಾಬಾಯಿ, ಸುರೇಶ, ರಾಜು, ಶೈಲಾ, ಹಾಗೂ ಸಂಗೀತಾ, ಸಿದ್ದರಾಮ, ಇವರುಗಳು ನಮ್ಮ ಗಂಡಸ್ಸು ಮಕ್ಕಳೊಂದಿಗೆ ಜಗಳ ತೆಗೆದು ನಮ್ಮದು ಮನೆ ನೀವು ನಮ್ಮ ಮನೆಗೆ ಬರಬೇಡಿರಿ ಅಂತಾ ಅವಾಚ್ಯವಾಗಿ ಬೈಯ್ಯ ಹತ್ತಿದರು ಆಗ ನಾನು ನಿಮ್ಮದೇಕೆ ಅಗುತ್ತದೆ ಮನೆ ನನ್ನದು ಇದೆ ಅಂತಾ ಅಂದಾಗ ಇಂದಿರಾಬಾಯಿ ಇವಳು ಭೊಸಡಿ ಮುದಕಿ ನಮ್ಮ ಅಪ್ಪ ಮನೆ ನನ್ನ ಹೆಸರಲ್ಲಿ ಮಾಡ್ಯಾನಾ ಅಂತಾ ಬಡಿಗೆ ತೆಗೆದುಕೊಂಡು ಕೊಂಡು ನನ್ನ ಬಲಗೈ ಮೇಲೆ ಜೋರಾಗಿ ಹೊಡೆದಳು ಆಗ ನನ್ನ ಮಗ ರಾಜು ಬೀಡಿಸಿಕೊಳ್ಳಲು ಬಂದರೆ ಸುರೇಶ, ರಾಜು ಬಿದ್ದನೂರ, ಹಾಗೂ ಸಿದ್ದರಾಮ  ಇವರು ಕೈಯಿಂದ ಹೊಡೆಬಡೆ ಮಾಡ ಹತ್ತಿದರು ನನ್ನ ಸೋಸೆ ಬಸಮ್ಮ ಇವಳು ರಾಜು ಹೊಡೆಯುವುದು ಬಿಡಿಸಿಕೊಳ್ಳಲು ಹೋದಾಗ ಸಂಗೀತಾ ಇವಳು ಕಲ್ಲಿನಿಂದ ಹಣೆಗೆ ಹೊಡೆದಿದ್ದು ಶೈಲಾ  ಇವಳು  ಕೈಯಿಂದ ಮೈಕೈಗೆ ಗುದ್ದ ಹತ್ತಿದಳು ಆಗ ಅಲ್ಲೆ ಇದ್ದ ನನ್ನ ಮಗ ಹಣಮಂತ ಹಾಗು ಪಕ್ಕದ ಮನೆಯ ಅನಸುಬಾಯಿ ತಳವಾರ ಮಹಾಂತಮ್ಮ ಆಲೂರ ಇವರು ಜಗಳ ಬಿಡಿಸಿಕೊಂಡರು ಇಲ್ಲದಿದ್ದರೆ ಇನ್ನೂ ಹೊಡೆಬಡೆ ಮಾಡುತ್ತಿದ್ದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: