Police Bhavan Kalaburagi

Police Bhavan Kalaburagi

Wednesday, January 24, 2018

KALABURAGI DISTRICT REPORTED CRIMES

ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ  : ದಿನಾಂಕ 23-01-2018 ರಂದು ಸಾಯಂಕಾಲ  ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾನಗರ ಬಡಾವಣೆಯ ಹನುಮಾನ ದೇವರ ಗುಡಿಯ ಹಿಂದೆ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರದ ಹನುಮಾನ ದೇವರ ಗುಡಿಯ ಹಿಂದುಗಡೆ ಹೋಗಿ ಜೀಪ ನಿಲ್ಲಿಸಿ ನಂತರ ನಾವು ಜೀಪಿನಿಂದ ಇಳಿದು ನಡೆದುಕೊಂಡು ಸ್ವಲ್ಪ ಮುಂದೆ ಹೋಗಿ ಮರೆಯಿಲ್ಲಿ ನಿಂತು ನೋಡಲು ಹನುಮಾನ ದೇವರ ಗುಡಿಯ ಹಿಂದುಗಡೆ ಇರುವ ಮನೆಯ ಮುಂದೆ ಒಬ್ಬ ಗಂಡು ಮನುಷ್ಯ ಮತ್ತು ಒಬ್ಬ ಹೆಣ್ಣು ಮಗಳು ಕೂಡಿಕೊಂಡು ಒಂದು ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಲು ಹೆಣ್ಣು ಮಗಳು ಓಡಿ ಹೋಗಿದ್ದು, ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ವಶಕ್ಕೆ ಪಡೆದುಕೊಂಡು ಸದರಿಯವನು ತನ್ನ ಹೆಸರು ಸುರೇಶ ತಂದೆ ಪ್ರಕಾಶ ಬಮ್ಮನಳ್ಳಿ ಸಾ: ಹನುಮಾನ ದೇವರ ಗುಡಿ ಹತ್ತಿರ ಗಂಗಾ ನಗರ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಓಡಿ ಹೊದವಳ ಹೆಸರು ವಿಚಾರಸಲು ಓಡಿ ಹೊದವಳ ಹೆಸರು ಲಲಿತಾಬಾಯಿ ಗಂಡ ಪ್ರಭು ಕೂಡಿ ಅಂತ ತಿಳಿಸಿದ್ದು ಇರುತ್ತದೆ. ನಂತರ ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 260/- ರೂ ದೊರೆತಿದ್ದು ಮತ್ತು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಸ್ಥಳದಲ್ಲಿ ಓರಿಜಿನಲ್ ಚ್ವಾಯಿಸ್ ವಿಸ್ಕಿ 90 ಎಮ್.ಎಲ್.ದ್ದು 80 ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 28.ರೂ 13 ಪೈಸೆ. ಒಟ್ಟು ಕಿಮ್ಮತ್ತು 2250. ರೂ 40 ಪೈಸೆ. ಇವಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಾಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಭವಾನಿಸಿಂಗ್ ತಂದೆ ರಾಮಚಂದ್ರ ರಾಠೋಡ ಸಾ||ಬಳೂರ್ಗಿ ತಾಂಡಾ ತಾ||ಅಫಜಲಪೂರ ರವರು  ದೇವಲ ಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆ ಅಂತ ಕರ್ತವ್ಯ ನಿರ್ವಯಿಸುತ್ತಿದ್ದು  ದಿನಾಂಕ 22-01-2018 ರಂದು ಮದ್ಯಾಹ್ನ ದೇವಲ ಗಾಣಗಾಪೂರ ಪೊಲೀಸ್ ಠಾಣೆ ಗುನ್ನೆ ನಂ 04/2018 ನೇದ್ದರ ಪ್ರರಕಣದ ಕಾಣೆಯಾದ ವ್ಯಕ್ತಿಯ ಪತ್ತೆ ಕಾರ್ಯ ಕುರಿತು ನನಗೆ ನೇಮಕ ಮಾಡಿದ್ದು ನಾನು ನಮ್ಮ ಮೋಟಾರ ಸೈಕಲ್ ನಂ ಕೆಎ-32 ಇಪಿ-7120 ನೇದ್ದರ ಮೇಲೆ ಠಾಣೆಯಿಂದ ಹೊರಟು ಚವಡಾಪೂರ, ಸ್ವೇಷನ ಗಾಣಗಾಪೂರ, ದುದನಿ ಗ್ರಾಮಗಳಿಗೆ ಬೇಟಿಕೊಟ್ಟು ಸದರಿ ಪ್ರರಕಣದ ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಮರಳಿ ಅಫಜಲಪೂರ ಮಾರ್ಗವಾಗಿ ದೇವಲ ಗಾಣಗಾಪೂರಕ್ಕೆ ಹೋಗುತಿದ್ದಾಗ ಅಂದಾಜು ಸಮಯ 7.30 ಪಿಎಮ್ ಸುಮಾರಿಗೆ ಅಫಜಲಪೂರ ಬಸ ಡಿಪೋ ಹತ್ತಿರ ಮುಖ್ಯ ರಸ್ತೆಯ ಮೇಲೆ ಹೋಗುತಿದ್ದಾಗ ನನ್ನ ಹಿಂದಿನಿಂದ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿದ್ದು ನಾನು ಜೋರಾಗಿ ಕೆಳಗೆ ಬಿದ್ದೆನು ನನ್ನ ಹಣೆಗೆ ಭಾರಿ ರಕ್ತಗಾಯ ಹಾಗು ಎಡ ಎದೆಗೆ ಭಾರಿ ಗುಪ್ತಗಾಯ ವಾಗಿದ್ದು ಸದರಿ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು ಟ್ರ್ಯಾಕ್ಟರ ನಂಬರ ನೋಡಲಾಗಿ ಮಹೇಂದ್ರ ಅರ್ಜುನ ಕಂಪನಿಯ ಇದ್ದು ಅದರ ನಂಬರ ಕೆಎ-32 ಟಿಬಿ-0397 ಅಂತ ಇರುತ್ತದೆ. ನಾನು ಚಾಲಕನಿಗೆ ನೋಡಿದ್ದಲ್ಲಿ ಗುರುತಿಸುತ್ತೇನೆ ಅವನ ಹೇಸರು ವಿಳಾಸ ನನಗೆ ಗೊತ್ತಾಗಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಪರಶುರಾಮ ತಂದೆ ತುಕಾರಾಮ ಉಗಾಡೆ ಸಾ||ಬಂಕಲಗಾ ಹಾ||ಶಿವಬಾಳ ನಗರ ತಾ||ಅಫಜಲಪೂರ ರವರು  ದಿನಾಂಕ 22-01-2018 ರಂದು ಬೆಳಿಗ್ಗೆ ನನ್ನ ಗೆಳೆಯನಾದ ಶರಣಪ್ಪ ಹೊಸ್ಮನಿ ಈತನ ಮೋಟಾರ್ ಸೈಕಲ್ ಕೆಎ-53 ಇಇ-0453 ನೇದ್ದರ ಮೇಲೆ ನಾನು ಹಾಗು ನನ್ನ ಇನ್ನೊಬ್ಬ ಗೆಳೆಯನಾದ ಪ್ರದೀಪ ತಂದೆ ಶರಣಪ್ಪ ಹೊಸ್ಮನಿ ಇಬ್ಬರು ಕೂಡಿಕೊಂಡು ಯಂಕಂಚಿ ಗ್ರಾಮದ ದವಲಮಲ್ಲಿಕ ಜಾತ್ರೆಗೆ ಹೋಗಿ ಮರಳಿ ನಮ್ಮ ಗ್ರಾಮಕ್ಕೆ ಹೋಗುತಿದ್ದಾಗ ಶಿವೂರ ಕ್ರಾಸ ಹತ್ತಿರ ಇದ್ದಾಗ ನಮ್ಮ ಎದುರಿನಿಂದ ಬುಲೇರೊ ವಾಹನದ ಚಾಲಕ ಸದರಿ ಬುಲೇರೊ ಅತಿವೇಗ ಹಾಗು ನಿನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಾನು ನಡೆಸುತಿದ್ದ ಮೋಟಾರ ಸೈಕಲಿಗೆ ಜೋರಾಗಿ ಡಿಕ್ಕಿ ಪಡಿಸಿದಾಗ ನಾವಿಬ್ಬರು ಕೆಳಗೆ ಬಿದ್ದೇವು ಸದರಿ ಬುಲೇರೊ ಚಾಲಕನು ತನ್ನ ವಾಹನ ನಿಲ್ಲಿಸದೆ ಹಾಗೇಯೆ ವಾಹನ ಸಮೇತ ಹೋದನು ನಾವು ಸದರಿ ವಾಹನದ ಹಿಂದಿನಿಂದ ನಂಬರ ನೋಡಲಾಗಿ ಕೆಎ-32 ಎನ್-1638 ಅಂತ ಇರುತ್ತದೆ. ಸದರಿ ಘಟನೆಯಿಂದ ನನಗೆ ಬಲಗಾಲಿನ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿದ್ದು, ತಲೆಗೆ, ಮುಖಕ್ಕೆ ಭಾರಿ ರಕ್ತ ಗಾಯವಾಗಿರುತ್ತವೆ ಪ್ರದೀಪನಿಗೆ ಕೈಕಾಲಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: