Police Bhavan Kalaburagi

Police Bhavan Kalaburagi

Monday, January 1, 2018

Yadgir District Reported Crimes Updated on 01-01-2018


                                          Yadgir District Reported Crimes
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 370/2017 ಕಲಂ: 143,147,148, 323, 324,354,504 ಸಂ.149 ಐಪಿಸಿ;-ದಿನಾಂಕ:31-12-2017 ರಂದು 01:30 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ  ಶ್ರೀಮತಿ ಸುವರ್ಣ ಗಂಡ ಜಾನ್ ದೊಡ್ಡಮನಿ ವಯಾ:30 ವರ್ಷ ಉ:ಸಹ ಶಿಕ್ಷಕರು ಜಾತಿ:ಮಾದಿಗ ಸಾ:ಕಬಾಡಗೇರಾ ಸುರಪುರ ಇವರು ಒಂದು ಗಣಕ ಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ಸಲ್ಲಿಸಿದ್ದು ಸಾರಾಂಶವೆನೆಂದರೆ ನಿನ್ನೆ ದಿನಾಂಕ: 30-12-2017 ರಂದು ರಾತ್ರಿ 9-30 ಗಂಟೆ ಸುಮಾರಿಗೆ ನಮ್ಮ ಕಬಾಡಗೇರಾದಲ್ಲಿರುವ ನಮ್ಮ ಮನೆಯ ಮುಂದೆ ಊಟ ಮಾಡಿದ ನಂತರ ನಾನು ನನ್ನ ಗಂಡನಾದ ಜಾನ್ ಸೊಸೆಯಾದ ಗುರಮ್ಮ ತಂದೆ ಸಾಯಬಣ್ಣ ಮೂವರು ಮಾತನಾಡುತ್ತಾ ಕುಳತಿರುವಾಗ ಶಹಾಪೂರದಲ್ಲಿರುವ ನಮ್ಮ ಮಾವನಾದ ಥಾಮಸ್ ತಂದೆ ಪಾಮಪ್ಪ ದೊಡ್ಡಮನಿ(ಫ್ರಭಾರ ಸಿಡಿಪಿಓ ಶಹಾಪೂರ) ಆತನ ಹೆಂಡತಿಯಾದ ಸುನೀತಾ ದೊಡ್ಡಮನಿ ಹಾಗೂ ಅವರ ಮಕ್ಕಳಾದ ಪ್ರಧಿಪ ತಂದೆ ಥಾಮಸ್, ಪ್ರಶಾಂತ ತಂದೆ ಥಾಮಸ್, ಸೊಸೆಯಾದ ಶಾಂತಮ್ಮ ತಂದೆ ಹಣಮಂತ ಗುತ್ತೆದಾರ ಇವರೆಲ್ಲರೂ ಶಹಾಪೂರದಿಂದ ಹುನಗುಂದಾ ತಾಲೂಕಿನ ಕೃಷ್ಣಾಪೂರದಲ್ಲಿ ಮೃತ ಪಟ್ಟ ನಮ್ಮ ಭಾವನ ಮಗನಾದ ಯಶವಂತ ಇವನ ಅಂತ್ಯಕ್ರಿಯಕ್ಕೆ ಹೋಗುವ ಸಲುವಾಗಿ ಎಲ್ಲರೂ ಕೂಡಿ ನಮ್ಮ ಮನೆಗೆ ಬಂದಿದ್ದು, ಆ ಸಮಯದಲ್ಲಿ ಹಳೆಯ ವೈಷ್ಯಮ್ಯ ಕಾರಣದಿಂದ ಸುಮ್ಮನೆ ಮಾತನಾಡುತ್ತಾ ಸುಮ್ಮನೆ ಕುಳಿತ ನನಗೆ ನನ್ನ ಗಂಡ ಜಾನ್ ಇಬ್ಬರಿಗೂ ಮಾವನಾದ ಥಾಮಸ್ ಈತನು ಎಲೇ ಬೋಸಡಿ ನಿಮ್ಮದು ಸೊಕ್ಕು ಬಹಳ ಆಗಿದೆ ಇವತ್ತು ನಿಮಗೆ ಒಂದು ಕೈ ನೊಡೆ ಬಿಡುತ್ತೆವೆ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ನನ್ನ ಗಂಡ ಜಾನ್ ಅವರಿಗೆ ಯಾಕೇ ಸುಮ್ಮನೆ ನಮಗೆ ಬೈಯುತ್ತಿರಿ ಅಂತಾ ಕೇಳಿದ್ದಕ್ಕೆ ಅವರೆಲ್ಲರೂ ಇವತ್ತು ನಿಮಗೆ ಒಂದು ಕೈ ನೊಡೆ ಬಿಡುತ್ತೆವೆ ನಾವು ಅದರ ಸಲುವಾಗಿ ಬಂದಿದ್ದೆವೆ ಅಂತಾ ಅಂದವರೆ ಅವರಲ್ಲಿಯ ತಾಮಸ್ ಈತನು ನನ್ನ ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ ಕೈಯಿಂದ ನನ್ನ ಬೆನ್ನಿಗೆ ಹೊಡೆ ಬಡೆ ಮಾಡುತ್ತಿರುವಾಗ ಬಿಡಿಸಲು ಬಂದ ಗಂಡ ಜಾನ್ ಇವನಿಗೆ ಅವರೆಲ್ಲರೂ ಕೂಡಿ ನೆಲಕ್ಕೆ ಕೆಡವಿ ಕೈಯಿಂದ ಹೊಡೆ ಬಡೆ ಮಾಡಿ ಕಾಲಿನಿಂದ ಒದೆಯುತ್ತಿರುವಾಗ ಪ್ರಶಾಂತ ಈತನು ಅಲ್ಲೆ ಬಿದ್ದ ಒಂದು ಬಿಡಿಗೆಯಿಂದ ಗಂಡ ಜಾನ್ ಈತನ ಬೆನ್ನಿಗೆ ಎದೆಗೆ ಕೈಗೆ ಹೊಡೆ ಬಡೆ ಮಾಡುತ್ತಿರುವಾಗ ನಾವು ಚಿರಾಡುವದನ್ನು ಕೇಳಿ ಪಕ್ಕದ ಮನೆಯ ಖದೀರ ತಂದೆ ಅಬ್ದುಲ್ ರಹೇಮಾನ ಸುನಾರ, ಇಬ್ರಾಹಿಂ ತಂದೆ ಅಬ್ದುಲ್ ರಹೇಮಾನ ಸುನಾರ ಇವರು ಬಂದು ಜಗಳ ಬಿಡಿಸಿದ್ದು ಇರುತ್ತದೆ. ನನಗೂ ನನ್ನ ಗಂಡ ಜಾನ್ ಇಬ್ಬರಿಗೂ ಕೈಯಿಂದ, ಬಡಿಗೆಯಿಂದ, ಹೊಡೆಬಡೆ ಮಾಡಿ ಗುಪ್ತಗಾಯಪಡಿಸಿ ಅವಮಾನ ಮಾಡಿದ ಮೇಲೆ ಹೇಳಿದ ಐದು ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
  
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 371/2017 ಕಲಂ: 143,147,148,323,324,354, 307, 504, 506 ಸಂ.149 ಐಪಿಸಿ;- ದಿನಾಂಕ:31-12-2017 11 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸಾಬಣ್ಣ ತಂದೆ ಹಯ್ಯಾಳಪ್ಪ ಹೆಬ್ಬಾಳ ಸಾ:ಕುರುಬರಗಲ್ಲಿ ಸುರಪುರ ಇವರು ಠಾಣೆಗೆ ಬಂದು ಒಂದು ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ಕುರಬುರಗಲ್ಲಿಯಲ್ಲ್ಲಿರುವ ನಮ್ಮ ಮನೆಯ ಎಡಗಡೆ ಬಾಗದಲ್ಲಿ ನಮ್ಮದು ಖುಲ್ಲಾ ಜಾಗವಿದ್ದು, ಅದೇ ಜಾಗದ ವಿಷಯವಾಗಿ ನಮ್ಮ ಅಣ್ಣತಮಕಿಯವರಾದ ನಿಂಗಪ್ಪ ತಂದೆ ಬೀಮಣ್ಣ ಹೆಬ್ಬಾಳ ಈತನು  ಜಾಗದ ವಿಷಯದಲ್ಲಿ ನಮ್ಮೊಂದಿಗೆ ಸುಮಾರು ಒಂದು ವರ್ಷಗಳಿಂದ ತಕರಾರು ಮಾಡುತ್ತಾ ಬಂದಿದ್ದನು. ಹೀಗಿದ್ದು ನಿನ್ನೆ ದಿನಾಂಕ: 31-12-2017 ರಂದು ನಾವು ನಮ್ಮ ಖುಲ್ಲಾ ಜಾಗದ ಸುತ್ತ ಮತ್ತು ಕಂಪೌಂಡ ಗೊಡೆ ಕಟ್ಟುವ ಕೇಲಸ  ಪ್ರಾರಂಬಿಸಿದ್ದೆವು. ಸಾಯಂಕಾಲ ಅಂದಾಜು 5-30 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿಯಾದ ನಾಗಮ್ಮ ನಮ್ಮ ತಮ್ಮಂದಿರರಾದ ಹೊನ್ನಪ್ಪ ತಂದೆ ಹಯ್ಯಾಳಪ್ಪ ಹೆಬ್ಬಾಳ, ಮಲ್ಲಪ್ಪ ತಂದೆ ಹಯ್ಯಾಳಪ್ಪ ಹೆಬ್ಬಾಳ, ನಿಂಗಪ್ಪ ತಂದೆ ಹಯ್ಯಾಳಪ್ಪ ಹೆಬ್ಬಾಳ, ನಿಂಗಪ್ಪ ತಂದೆ ಹಯ್ಯಾಳಪ್ಪ ಹೆಬ್ಬಾಳ, ತಾಯಿಯಾದ ಗಂಗಮ್ಮ ಗಂಡ ಹಯ್ಯಾಳಪ್ಪ ಹೆಬ್ಬಾಳ ಮನೆಯಲ್ಲಿರುವಾಗ ನಮ್ಮ ಅಣ್ಣತಮ್ಮಕಿಯವರಾದ 1) ನಿಂಗಪ್ಪ ತಂದೆ ಭಿಮಣ್ಣ ಹೇಬ್ಬಾಳ (50)   2) ಮಲ್ಲಪ್ಪ ತಂದೆ ನಿಂಗಪ್ಪ ಗುರಿಕಾರ (43) 3) ಬೀಮಪ್ಪ ತಂದೆ ನಿಂಗಪ್ಪ ಹೆಬ್ಬಾಳ (22) 4) ಹಯ್ಯಾಳಪ್ಪ ತಂದೆ ನಿಂಗಪ್ಪ ಹೆಬ್ಬಾಳ(27) 5) ಬೀಮಣ್ಣ ತಂದೆ ಮಲ್ಲಪ್ಪ ಗುರಿಕಾರ (24) 6) ಹಯ್ಯಾಳಪ್ಪ ತಂದೆ ಮಲ್ಲಪ್ಪ ಹೆಬ್ಬಾಳ (45)  7) ರಾಘಪ್ಪ ತಂದೆ ಹಯ್ಯಾಳಪ್ಪ (25) 8) ಶ್ರೀಕಾಂತ ತಂದೆ ನಿಂಗಪ್ಪ ಗುರಿಕಾರ (24)   9) ಬಸಪ್ಪ ತಂದೆ ಮಲ್ಲಪ್ಪ ಹೆಬ್ಬಾಳ(25) 10) ಮರೆಪ್ಪ ತಂದೆ ಮಲ್ಲಪ್ಪ ಹೆಬ್ಬಾಳ (24) 11) ಬೀಮಪ್ಪ ತಂದೆ ಮಲ್ಲಪ್ಪ ಹೆಬ್ಬಾಳ (30) 12) ಹಣಮಂತ ತಂದೆ ಮಲ್ಲಪ್ಪ ಹೆಬ್ಬಾಳ (55) 13) ನಿಂಗಪ್ಪ ತಂದೆ ಹಣಮಂತ ಹೆಬ್ಬಾಳ (22) 14) ಮಾನಪ್ಪ ತಂದೆ ನಿಂಗಪ್ಪ ಗುರಿಕಾರ (35) 15) ಹಣಮಂತ ತಂದೆ ನಿಂಗಪ್ಪ ಹೆಬ್ಬಾಳ (20) 16)  ಅಯ್ಯಮ್ಮ ಗಂಡ ನಿಂಗಪ್ಪ 17) ದೇವಪ್ಪ ಗಂಡ ಹನುಮಂತ 18) ಮರೆಮ್ಮ ತಂದೆ ನಿಂಗಪ್ಪ ಹೆಬ್ಬಾಳ (20) 19) ನಾಗಮ್ಮ ಗಂಡ ಮಲ್ಲಪ್ಪ ಹೆಬ್ಬಾಳ (50) ಎಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಮನೆಯ ಹತ್ತಿರ ಬಂದವರೆ ಎಲೇ ಬೋಸಡಿ ಮಕ್ಕಳೆ ಜಾಗದಲ್ಲಿ ಕಂಪೌಂಡ ಗೊಡೆೇ ಏಕೆ ಕಟ್ಟುತ್ತಿರಿ ಅಂತಾ ಕಟ್ಟಿದ ಕಂಪೌಂಡ ಗೊಡೆಯನ್ನು ನಾಶಪಡಿಸುತ್ತಿರುವಾಗ ನಮ್ಮ ಜಾಗದಲ್ಲಿ ನಾವು ಕಂಪೌಂಡ ಗೊಡೆ ಕಟ್ಟಿದರೆ ಏನಾಯಿತು ಅಂತಾ ಕೇಳಿದಾಗ ನಿಮ್ಮ ಸೊಕ್ಕು ಬಹಳ ಆಗಿದೆ ಇವತ್ತು ನಿಮಗೆ ಖಲಾಸ ಮಾಡದೆ ಬಿಡುವದಿಲ್ಲ ಅಂತಾ ಕೊಲೆ ಮಾಡುವ ಉದ್ದೇಶದಿಂದ ಅವರಲ್ಲಿಯ ನಿಂಗಪ್ಪ, ಮಲ್ಲಪ್ಪ, ಬೀಮಪ್ಪ, ಹಯ್ಯಾಳಪ್ಪ ತಂದೆ ನಿಂಗಪ್ಪ ಹೆಬ್ಬಾಳ, ಬೀಮಣ್ಣ, ಹಯ್ಯಾಳಪ್ಪ ತಂದೆ ಮಲ್ಲಪ್ಪ ಹೆಬ್ಬಾಳ, ರಾಘಪ್ಪ, ಶ್ರೀಕಾಂತ, ಬಸಪ್ಪ, ಮರೆಪ್ಪ, ಇವರೆಲ್ಲರೂ ನನ್ನನು ತೆಕ್ಕೆಯಲ್ಲಿ ಹಿಡಿದುಕೊಂಡು ಬೆನ್ನು ಬಗ್ಗಿಸಿ ಕೈಯಿಂದ ಹೊಡೆ ಬಡೆ ಕಾಲಿನಿಂದ ಒದೆಯುತ್ತಿರುವಾಗ ಜಗಳ ಬಿಡಿಸಲು ಬಂದ ಮಲ್ಲಪ್ಪ ತಂದೆ ಹಯ್ಯಾಳಪ್ಪ ಹೆಬ್ಬಾಳ, ನಿಂಗಪ್ಪ ತಂದೆ ಹಯ್ಯಾಳಪ್ಪ ಹೆಬ್ಬಾಳ, ಇವರು  ಬಿಡಿಸಲು ಬಂದಾಗ ತಮ್ಮ ಹೊನ್ನಪ್ಪ ಈತನಿಗೆ ನಿಂಗಪ್ಪ ತಂದೆ ಬೀಮಣ್ಣ ಈತನು ಒಂದು ಕೊಡಲಿ ತಗೆದುಕೊಂಡು ಬಂದವನೆ ಕೊಲೆ ಮಾಡುವ ಉದ್ದೇಶದಿಂದ ಅವನ ತಲೆಯ ಮೇಲೆ ಕೊಡಲಿ ತುಂಬಿನಿಂದ ಹೊಡೆದು ರಕ್ತಗಾಯ ಮಾಡಿದನು. ಮಲ್ಲಪ್ಪ ತಂದ ಹಯ್ಯಾಳಪ್ಪ ಹೆಬ್ಬಾಳ ನಿಂಗಪ್ಪ ತಂದೆ ಹಯ್ಯಾಳಪ್ಪ  ಹೆಬ್ಬಾಳ, ಸಾಬಣ್ಣ ತಂದೆ ಹಯ್ಯಾಳಪ್ಪ ಹೆಬ್ಬಾಳ ಇವರಿಗೆ ಹಣಮಂತ ತಂದೆ ನಿಂಗಪ್ಪ ಹೆಬ್ಬಾಳ, ನಿಂಗಪ್ಪ ತಂದೆ ಹಣಮಂತ, ಮಾನಪ್ಪ ತಂದೆ ನಿಂಗಪ್ಪ ಗುರಿಕಾರ, ಹಣಮಂತ ತಂದೆ ನಿಂಗಪ್ಪ ಹೆಬ್ಬಾಳ ಇವರೆಲ್ಲರೂ ಅವರನ್ನು ತೆಕ್ಕೆಯಲ್ಲಿ ಹಿಡಿದು ಹೊಡೆಬಡೆ ಮಾಡಿ ಮಲ್ಲಪ್ಪ ಮುಖಕ್ಕೆ ಕಲ್ಲಿನಿಂದ ಹೊಡೆದು ಬಾಯಿಗೆ ಮೂಗಿಗೆ ರಕ್ತಗಾಯ ಮಾಡಿದರು, ಸಾಬಣ್ಣ ತಂದೆ ಹಯ್ಯಾಳಪ್ಪ ಹೆಬ್ಬಾಳ ಈತನಿಗೆ ಶ್ರೀಕಾಂತ ತಂದೆ ನಿಂಗಪ್ಪ ಗುರಿಕಾರ, ಈತನ ತಲೆಗೆ ಬಡಿಗೆಯಿಂದ ರಕ್ತಗಾಯ ಮಾಡಿದರು, ಗಂಗಮ್ಮ ಗಂಡ ಹಯ್ಯಾಳಪ್ಪ ಹೆಬ್ಬಾಳ ಇವಳಿಗೆ ನಿಂಗಪ್ಪ ತಂದೆ ಭಿಮಣ್ಣ ಹೇಬ್ಬಾಳ ಈತನು ಅವಳ ತಲೆಯ ಮೇಲಿನ ಕೂದಲು ಹಿಡಿದು ಸಿರೇ ಸೆರಗು ಜಗ್ಗಿ ಎಳೆದಾಡಿ ಹೊಡೆ ಬಡೆ ಮಾಡುತ್ತಿರುವಾಗ ಪಕ್ಕದ ಮನೆಯವರಾದ ಲಕ್ಷ್ಮಣ ತಂದೆ ಯಂಕಪ್ಪ ಪ್ರಧಾನಿ, ಕಳಸಮ್ಮ ಗಂಡ ಮಲ್ಲಪ್ಪ ಗೌಡ ಇವರು ಬಂದು ಜಗಳ ಬಿಡಿಸಿದ್ದು ಇರುತ್ತದೆ. ತಮ್ಮನಾದ ಹೊನ್ನಪ್ಪ, ಮಲ್ಲಪ್ಪ, ನಿಂಗಪ್ಪ, ಗಂಗಮ್ಮ ಇವರಿಗೆ ಸರಕಾರಿ ಆಸ್ಪತ್ರೆ ಸುರಪುರದಲ್ಲಿ ಉಪಚಾರ ಮಾಡಿಸಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು ಠಾಣೆಗೆ ಬಂದಿದ್ದು ಇರುತ್ತದೆ. ನಮಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆ ಬಡೆ ಮಾಡಿ ರಕ್ತಗಾಯ ಗೊಳಿಸಿದ ಮೇಲೆ ಹೇಳಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಸಾರಾಂಶದ ಮೇಲಿಂಧ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 372/2017 ಕಲಂ: 143,147,148,323,324,307,504,506ಸಂ.149 ಐಪಿಸಿ ದಿನಾಂಕ:31-12-2017 12-30 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಹೈಯಾಳಪ್ಪ ತಂದೆ ನಿಂಗಪ್ಪ  ಹೆಬ್ಬಾಳ ವಯಸ್ಸು 27 ಉದ್ಯೋಗಒಕ್ಕಲತನ ಸಾ|| ಕುರಬುರಗಲ್ಲಿ ಸುರಪುರ ಇವರು ಠಾಣೆಗೆ ಬಂದು ಒಂದು ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ದಿನಾಂಕ: 30-12-2017 ರಂದು ಸಮಯ ಬೆಳ್ಳಿಗೆ 10 ಗಂಟೆಗೆ ನಾನು ನಮ್ಮಮನೆಯಲ್ಲಿಇದ್ದಾಗಸಾಯಿಬಣ್ಣತಂದೆ ಹೈಯಾಳಪ್ಪ ಮತ್ತು ಮಲ್ಲಪ್ಪತಂದೆ ಹಯ್ಯಾಳಪ್ಪ, ನಿಂಗಪ್ಪತಂದೆ ಹಯ್ಯಾಳಪ್ಪ, ಹೊನ್ನಪ್ಪತಂದೆ ಹೈಯ್ಯಾಳಪ್ಪಇವರು ನಮ್ಮ ಮನೆಯ ಪಕ್ಕದ ನಮ್ಮಖುಲ್ಲಾಜಾಗದಲ್ಲಿ ಬಂದು ಬುನಾದಿ ತೋಡಲು ಬಂದರು ಆಗ ನಾನು ನಮ್ಮಜಾಗದಲ್ಲಿಯಾಕೆ ಬುನಾದಿ ತೋಡುತ್ತಿರಿಅಂತ ಕೇಳಿದಾಗ ಇದು ನಮ್ಮಜಾಗಇರುತ್ತದೆಎಂದು ಸಾಯಿಬಣ್ಣತಂದೆ ಹೈಯಾಳಪ್ಪ ಹೇಳಿದರು ಆಗ ನಾನು ಇದು ನಿಮ್ಮಜಾಗಅಲ್ಲಾಇದು ನಮ್ಮಜಾಗಎಂದುಅವರು ಮತ್ತು ನಮ್ಮ ನಡುವೆ ಮಾತಿನ ಚಕಮುಕಿ ನಡೆಯಿತು. ಆಗ ಸಾಯಿಬಣ್ಣಇವರು ಆಮೇಲೆ ಬಂದು ನಿಮ್ಮನ್ನು ನೋಡಿಕೊಳ್ಳುತ್ತೆನೆ ಎಂದು ಹೊದರು.ಆಗನಾವುಅದೇದಿನದಂದು 11:00 ಗಂಟೆಗೆ ನಾವು ನಮ್ಮಜಾಗಕ್ಕೆ ಸಂಬಂದಿಸಿದಂತೆ ನಗರಸಭೆಕಾರ್ಯಲಯ ಸುರಪುರಇವರಿಗೆ ನಾನು ಸದರಿಯವರ ವಿರುದ್ದತಕರಾರಅಜರ್ಿ ಸಲ್ಲಿಸಿರುತ್ತೇನೆ. ಮತ್ತುಅದೇದಿನದಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ನಾನು ಮತ್ತುನಮ್ಮತಮ್ಮಂದಿರಾದಭೀಮಣ್ಣತಂದೆ ನಿಂಗಪ್ಪ, ಶಿವರಾಜ ತಂದೆ ಹಯ್ಯಾಳಪ್ಪ, &ನನ್ನ ಅಳೆಯನಾದ ಬಲಭಿಮತಂದೆ ಮಲ್ಲಪ್ಪಇವರಜೊತೆ ನಮ್ಮ ಮನೆಯಲ್ಲಿಇದ್ದಾಗಸಾಯಿಬಣ್ಣತಂದೆ ಹೈಯಾಳಪ್ಪ ಮತ್ತು ಮಲ್ಲಪ್ಪತಂದೆ ಹಯ್ಯಾಳಪ್ಪ, ನಿಂಗಪ್ಪತಂದೆ ಹಯ್ಯಾಳಪ್ಪ, ಹೊನ್ನಪ್ಪತಂದೆ ಹೈಯ್ಯಾಳಪ್ಪಮತ್ತು ಕ್ಷೀರಲಿಂಗಪ್ಪಜಿನ್ನಾಪೂರಗಂಗಮ್ಮಗಂಡ ಹೈಯ್ಯಾಳಪ್ಪ ಮತ್ತು ನಾಗಮ್ಮಗಂಡ ಸಾಬಣ್ಣ, ಗಂಗಮ್ಮಗಂಡಗಂಗಪ್ಪಇವರುಎಲ್ಲರು ಸೇರಿಕೊಂಡುಕೊಡಲಿ ಮತ್ತು ಬಡಗೆಯನ್ನುತೆಗೆದುಕೊಂಡುಏಕಾಏಕಿ ಯಾಗಿ ನಮ್ಮ ಮನೆಯ ಮುಂದೆ ಬಂದು ಲೇ ಸೂಳೆಮಗನೆ ಅಯ್ಯಾ ಈ ನಿಮ್ಮಜಾಗದಲ್ಲಿ ನಾನು ಮನೆ ಕಟ್ಟೆತಿರುತ್ತೇನೆಅಂತ ಬೈಯುತ್ತಬಂದರು ಆಗ ನನ್ನತಮ್ಮನಾದ ಭಿಮಣ್ಣಇವರುಯಾಕೆ ನನ್ನಜಾಗದಲ್ಲಿ ಮನೆ ಕಟ್ಟುತ್ತಿರಿಎಂದುಕೇಳಿದಾಗಲೇಸೂಳೆಮಗನೆ ಇದೆ ಜಾಗದಲ್ಲಿ ಕಟ್ಟುತ್ತೆನೆ ಎಂದು ಅಂದವನೆ ತನ್ನ ಕೈಯಲ್ಲಿ ಇದ್ದಕೊಡಲಿ ಇಂದ ನನ್ನ ತಮ್ಮನಾದ ಭಿಮಣ್ಣ ಇವರಿಗೆ ತಲೆಯ ನೆತ್ತಿಗೆ ಹೊಡೆದನು ಆಗ ನನ್ನ ತಮ್ಮನಿಗೆ ಭಾರಿರಕ್ತಗಾಯವಾಯಿತು ಮತ್ತು ನಾನು ಬಿಡಿಸಲು ಹೊದಾಗ ನನಗೆ ಬಲಗೈಗೆ ಕೊಡಲಿ ಇಂದ ಹೊಡೆದನು ಆಗ ನನಗುಕೊಡ ಭಾರಿರಕ್ತಗಾಯಆಯಿತು ಮತ್ತು ನಿಂಗಪ್ಪಇವರು ನನಗೆ ಕಲ್ಲಿನಿಂದ ಈ ಸೂಳೆಮಗನದು ಬಹಳ ಆಗಿದೆಎಂದು ನಮ್ಮ ಮನೆಯ ಮುಂದೆ ಬಿದ್ದಕಲ್ಲುತೆಗೆದುಕೊಂಡು ನನಗೆ ತಲೆಗೆಹೊಡೆದನು. ನಮ್ಮ ಮಾಮನಿಗೆಯಾಕೆ ಹೊಡೆಯುತ್ತೀರಿಅಂತ ಕೇಳದಾಗ ಮಲ್ಲಪ್ಪಇತನು ಬಡಿಗೆಇಂದ ನನ್ನ ಅಳೆಯನಾದ ಬಲಭೀಮಇವರಿಗೆಸೂಳಿಮಗನೆ ನಿನದು ಬಹಳ ಆಗಿದೆಎಂದುತಲೆಯ ಬಲಬಾಗಕ್ಕೆ ಬಡಿಗೆಇಂದಬಲವಾಗಿ ಹೊಡೆದು ಬಾರಿರಕ್ತಗಾಯ ಪಡಿಸಿದನು. ಮತ್ತು ನನ್ನದೊಡ್ಡಪ್ಪನ ಮಗನಾದ ಶಿವರಾಜ ಇವರು ನಮ್ಮಣ್ಣನಿಗೆಯಾಕೆ ಹೊಡಿತ್ತಿರಿಅಂತ ಕೇಳಿದಾಗ ಕ್ಷೀರಲಿಂಗಪ್ಪಜಿನ್ನಾಪೂರಇವರು ಈ ಶಿವ್ಯಾ ಸುಳೆಮಗನದು ಬಹಳ ಆಗಿದೆ ಇವನ ಖಲಾಸ ಮಾಡಿಬಿಡೋಣಅನ್ನುತ್ತಾ  ನನ್ನದೊಡ್ಡಪ್ಪನ ಮಗನಾದ ಶಿವರಾಜ ತಂದೆ ಹೈಯ್ಯಾಳಪ ಇವರಿಗೆಕ್ಷೀರಲಿಂಗಪ್ಪ ಹಿಡಿದುಕೊಂಡಾಗ ಹೊನ್ನಪ್ಪಇವರುತನ್ನಕೈಯಲ್ಲಿಇದ್ದ ಬಡಿಗೆಇಂದಎಡ ಭುಜಕ್ಕೆ ಬಲವಾಗಿ ಹೊಡೆದನು. ಮತ್ತುಗಂಗಮ್ಮಗಂಡ ಹೈಯ್ಯಾಳಪ್ಪ ಮತ್ತು ನಾಗಮ್ಮಗಂಡ ಸಾಬಣ್ಣ, ಗಂಗಮ್ಮಗಂಡಗಂಗಪ್ಪಇವರುಎಲ್ಲಾರು ಸೇರಿಕೋಂಡು ಈ ಸುಳೆ ಮಕ್ಕಳದು ಬಹಳ ಆಗಿದೆಖಲಾಸ ಮಾಡೆಬಿಡುರಿಈ ಭೋಸಡಿ ಸೋಳೆ ಮಕ್ಕನ್ನುಎಂದುಅವಚ್ಯ ಶಬ್ದಗಳಿಂದ ಬೈದರು. ಆಗ ನಾನು ಮತ್ತು  ಮನೆಯಲ್ಲಿಇದ್ದ ನಮ್ಮಮಕ್ಕಳಮತ್ತು ಮನೆಯ ಹೆಣ್ಣುಮಕ್ಕಳು ಜಗಳವನ್ನು ನೋಡಿಚಿರಾಡುತ್ತಿದ್ದಾಗರಸ್ತೆ ಮೇಲೆ ಹೊಗುತ್ತಿದ್ದ ಹಣಮಂತತಂದೆ ಮಲ್ಲಪ್ಪ, ಬಸಲಿಂಗಪ್ಪತಂದೆ ನಂದಪ್ಪರುಕ್ಮಾಪೂರ&ದ್ಯಾವಪ್ಪಗೌಡ ತಂದೆ ಮಲ್ಲಪ್ಪಗೌಡ ಸಾ|| ಕುರುಬುರಗಲ್ಲಿನಾವುಚಿರಾಡುವುದು ನೋಡಿ ಬಂದು ಜಗಳ ಬಿಡಿಸಿದರು ಇಲ್ಲಾಅಂದರೆ ನಮಗೆ ಸದರಿಯವರು ನಮ್ಮ ಜೀವತೆಗೆದೆಬಿಡುತ್ತಿದ್ದರು ಆಗ ಸದರಿಯವರು ಇಷ್ಟಕ್ಕೆ ನಿಮ್ಮನ್ನು ಬಿಡುವುದಿಲ್ಲಾ ಸೂಳಿಮಕ್ಕಳೆ ನಿಮಗೆ ಖಲಾಸ ಮಾಡೇಯೇತಿರುತ್ತೆವೆಇಷ್ಟಕ್ಕೆ ನಿಮಗೆ ಬಿಡುವುದಿಲ್ಲಾಎಂದುಕೂಗುತ್ತಾ ಹೊದರುತ್ತಾ ಹೊದರು.ಆಗ ನಾವು ಖಾಸಗಿ ವಾಹನದಲ್ಲಿ ಸರಕಾರಿದವಾಖಾನೆಗೆ ಬಂದು ಸೇರಿಕೆಆದೇವು ಆಗ ನಾವು ಪ್ರಥಮಚಿಕೆತ್ಸೆ ಪಡೆದುಕೊಂಡುನನ್ನತಮ್ಮನಾದ ಭಿಮಣ್ಣ ಮತ್ತು ನನ್ನ ಅಳಿಯನಾದ ಬಲಭಿಮ್ಇವರಿಗೆ ಭಾರಿರಕ್ತಗಾಯಆದಕಾರಣ ಹೆಚ್ಚಿನಚಿಕಿತ್ಸೆಗೆ ಕಲಬುಗರ್ಿ ಕಳಿಸಿದೇವು ನನ್ನದೊಡ್ಡಪ್ಪನ ಮಗನಾದ ಶಿವರಾಜ ಇವರಿಗೆ ಭಾರಿಗಾಯಆದಕಾರಣ ಹೆಚ್ಚಿನಚಿಕಿತ್ಸೆಗೆ ಶಹಾಪೂರಗೆ ಕಳುಹಿಸಿದೇವು.ನಮಗೆ ಹಲ್ಲೆಮಾಡಿ ಮತ್ತು ಕೊಲೆ ಮಾಡಲು ಪ್ರಯತ್ನಮಾಡಿ ಭಾರಿರಕ್ತಗಾಯ ಮಾಡಿಜೀವ ಬೆದರಿಕೆ ಹಾಕಿದವರ ಮೇಲೆ  ವಿರುದ್ದ ಸೂಕ್ತ ಕಾನೂನ ಕ್ರಮಕೈಗೊಳ್ಳಲು ವಿನಂತಿ.ನಾವು ಎಲ್ಲರು ಸರಕಾರಿದವಾಖಾನೆ ಸುರಪುರದಲ್ಲಿಸೇರಿಕೆ ಆಗಿ ಪ್ರಥಮಚಿಕಿತ್ಸೆ ಪಡೆದುಕೊಂಡು ಬಂದು ನಾನು ತಡವಾಗಿ ಬಂದು ಮಾನ್ಯರಲ್ಲಿಅಜರ್ಿ ಸಲ್ಲಿಸಿದ್ದು ಇರುತ್ತದೆ.ಈ ಅಜರ್ಿಯನ್ನು ನಾನು ಹೇಳಿಸಿ ಗಣಕೀಕರಣ ಮಾಡಿಸಿ ಓದಿಸಿ ತಿಳಿದುಕೊಂಡು ಈ ಅಜರ್ಿ ಸಲ್ಲಿಸಿದ್ದು ನಿಜ ಇರುತ್ತದೆ

 ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 128/2017 ಕಲಂ 279 ಐಪಿಸಿ;-ದಿನಾಂಕ:31/12/2017 ರಂದು ಬೆಳಿಗ್ಗೆ 11:30 ಗಂಟೆ ಸುಮಾರಿಗೆ ರವಿಕುಮಾರ ತಂದೆ ಹಣಮಂತ ಕುಂಬಾರ ಠಾಣೆಗೆ ಹಾಜರಾಗಿ ಫಿಯರ್ಾದಿ ನೀಡಿದ್ದರ ಸಾರಾಂಶ ಏನೆಂದರೆ  ನಾನು ಮತ್ತು ನಮ್ಮ ಗುರುಗಳಾದ ಶ್ರೀ ಸೋಮೇಶ್ವರ ಸ್ವಾಮೀಜಿಗಳು ಕೂಡಿಕೊಂಡು ಗೋಗಿಯಿಂದ ಕಲಬುಗರ್ಿಗೆ ಹೊರಟಿದ್ದು, ಸಮಯ 10:30 ಗಂಟೆ ಸುಮಾರಿಗೆ ಹುಲಕಲ್(ಕೆ) ಗ್ರಾಮದ ಹತ್ತಿರ ಹೋಗುತ್ತಿರುವಾಗ ಶಹಾಪೂರ ಕಡೆಯಿಂದ ನಮ್ಮ ಹಿಂದೆ ಬರುತ್ತಿದ್ದ ಕಾರ್ ನಂ ಕೆ.ಎ-05 ಎಮ್.ಜೆ-9232 ನೇದ್ದರ ಚಾಲಕ ಅತೀವೇಗ ಹಾಗೂ ಅಲಕ್ಷ್ಯತನದಿಂದ ತನ್ನ ಕಾರನ್ನು ಚಲಾಯಿಸುಕೊಂಡು ಬಂದು ನಮ್ಮ ಕಾರ್ ನಂ.ಕೆಎ-32 ಪಿ-1430 ನೇದ್ದಕ್ಕೆ ಡಿಕ್ಕಿ ಪಡಿಸಿದ್ದು ಇರುತ್ತದೆ. ಕೆಳಗಿಳಿದು ನೋಡಲಾಗಿ ಡಿಕ್ಕಿ ಪಡಿಸಿದ್ದರ ಪರಿಣಾಮ ನಮ್ಮ ಕಾರಿನ ಹಿಂದಿನ ಭಾಗ ನುಜ್ಜು-ಗುಜ್ಜಾಗಿದ್ದು ಇರುತ್ತದೆ. ಕಾರ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಸತೀಶಕುಮಾರ ತಂದೆ ಸಿದ್ರಾಮಪ್ಪ ಗೋಳಾ ವ||45 ಜಾ||ಸಮಗಾರ(ಎಸ್ಸಿ) ಉ||ವ್ಯಾಪಾರ ಸಾ|| ರಾಮನಗರ ಕಲಬುರಗಿ ಅಂತಾ ತಿಳಿಸಿದ್ದು ಇರುತ್ತದೆ. ಕಾರಿನಲ್ಲಿದ್ದ ನಮಗೆ ಯಾವುದೇ ಗಾಯವಗೈರೆ ಆಗಿರುವುದಿಲ್ಲಾ.
ಕಾರಣ ಇಂದು ದಿನಾಂಕ:31/12/2017 ರಂದು ಬೆಳಿಗ್ಗೆ 10:30 ಗಂಟೆ ಸುಮಾರಿಗೆ ನಮ್ಮ ಕಾರಿಗೆ  ಹಿಂದಿನಿಂದ ಡಿಕ್ಕಿಪಡಿಸಿದ ಕಾರ್ ನಂ ಕೆ.ಎ-05 ಎಮ್.ಜೆ-9232 ನೇದ್ದರ ಚಾಲಕನಾದ ಸತೀಶಕುಮಾರ ತಂದೆ ಸಿದ್ರಾಮಪ್ಪ ಗೋಳಾ ವ||45 ಜಾ||ಸಮಗಾರ(ಎಸ್ಸಿ) ಉ||ವ್ಯಾಪಾರ ಸಾ|| ರಾಮನಗರ ಕಲಬುರಗಿ ಈತನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿಕೆ ನೀಡಿದ್ದರ ಸಾರಾಂಶ ಇರುತ್ತದೆ.  

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 493/2017 ಕಲಂ 379 ಐ.ಪಿ.ಸಿ;- ದಿನಾಂಕ 31/12/2017 ರಂದು ಬೇಳಿಗ್ಗೆ 7-00 ಗಂಟೆಗೆ ಶ್ರೀ ಸೋಮಲಿಂಗಪ್ಪ ಎ,ಎಸ್,ಐ, ಶಹಾಪೂರ ಪೊಲೀಸ್ ಠಾಣೆಯ ಇವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ ದಿನಾಂಕ 30/12/2017 ರಂದು ರಾತ್ರಿ 11-00 ಗಂಟೆಗೆ ಮಾನ್ಯ ಪಿ.ಐ ಸಾಹೇಬರ ಆದೇಶದ ಮೇರೆಗೆ, ನಾನು ಎನ್.ಆರ್.ಸಿ. ಕರ್ತವ್ಯ ಮಾಡುತ್ತ ಬೇಳಿಗ್ಗೆ 4-40 ಗಂಟೆಯ ಸುಮಾರಿಗೆ ಶಹಾಪೂರ ನಗರದ ಬಸವೇಶ್ವರ ಚೌಕ ಹತ್ತಿರ ಇದ್ದಾಗ ಲಕ್ಕಪ್ಪ ಪಿ.ಸಿ.198 ರವರು ಬಂದು ಬಾತ್ಮಿ ವಿಷಯ ತಿಳಿಸಿದ್ದೆನೆಂದರೆ ಹೈಯಾಳ (ಬಿ) ಗ್ರಾಮದ ಹತ್ತಿರ ಕೃಷ್ಣಾ ನದಿಯಲ್ಲಿ ಕಳ್ಳತನದಿಂದ ಮರಳನ್ನು ಒಂದು ಟ್ರ್ಯಾಕ್ಟರನಲ್ಲಿ ತುಂಬಿಕೊಂಡು ಶಹಾಪೂರಕ್ಕೆ ತಂದು ಮಾರಾಟ ಮಾಡಲು ಬರುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದಿರುತ್ತದೆ ಅಂತ ತಿಳೀಸಿದ್ದರ ಮೇರೆಗೆ ಹೋಗಿ ದಾಳಿ ಮಾಡಬೆಕೆಂದು ತಿಳೀಸಿ ಮಾನ್ಯ ಪಿ.ಐ. ಸಾಹೇಬರ ಮಾರ್ಗದರ್ಶನದಲ್ಲಿ ನಾನು ಮತ್ತು ಲಕ್ಕಪ್ಪ ಪಿ.ಸಿ. 198 ಇಬ್ಬರು ಮೋಟರ್ ಸೈಕಲ್ ಮೇಲೆ ಬೆಳಿಗ್ಗೆ 4-50 ಗಂಟೆಗೆ ಹೋರಟು ಹತ್ತಿಗುಡೂರ- ಶಹಾಪೂರ ಮುಖ್ಯರಸ್ತೆಯ ವಿಬೂತಿಹಳ್ಳಿ ಹತ್ತಿರದ ತಿಪನಟಿಗಿ ಕ್ರಾಸ ಹತ್ತಿರ 5-10 ಗಂಟೆಗೆ ಹೋಗಿ ರೋಡಿನ ಪಕ್ಕದಲ್ಲಿ ವಾಹನ ಬರುವದನ್ನು ನಿಗಾ ಮಾಡುತ್ತಾ  ನಿಂತಿದ್ದಾಗ 5-20 ಗಂಟೆಯ ಸುಮಾರಿಗೆ ಹತ್ತಿಗುಡೂರ ಗ್ರಾಮದ ಕಡೆಯಿಂದ ಒಂದು ಟ್ಯಾಕ್ಟರ ವಾಹನದಲ್ಲಿ ಮರಳು ಲೋಡ ಮಾಡಿಕೊಂಡು ಬರುತಿದ್ದಾಗ ಸದರಿ ಟ್ಯಾಕ್ಟರ ವಾಹನವನ್ನು ರೋಡಿನ ಪಕ್ಕಕ್ಕೆ ನಿಲ್ಲಿಸಿ ಟ್ರ್ಯಾಕ್ಟರ ಚಾಲಕನಿಗೆ ತನ್ನ ಹೆಸರು ವಿಚಾರಿಸಲಾಗಿ ನಿಂಗಪ್ಪ ತಂದೆ ಸಾಯಬಣ್ಣ ಸಾ|| ಹೈಯಾಳ (ಬಿ) ಅಂತ ತಿಳಿಸಿ ಮರಳನ್ನು ತಮ್ಮ ಟ್ರ್ಯಾಕ್ಟರ ಮಾಲಿಕ ನಿಂಗಣ್ಣ ಬಾಗಲಿ ಇವರು ಹೈಯಾಳ (ಬಿ) ಗ್ರಾಮದ ಕೃಷ್ಣಾ ನದಿಯಲ್ಲಿ ಮರಳನ್ನು ತುಂಬಿಕೊಂಡು ಬಂದು ಶಹಾಪೂರದಲ್ಲಿ ಮಾರಾಟ ಮಾಡಲು ತಿಳಿಸಿದ ಪ್ರಕಾರ ನಾನು ಟ್ರ್ಯಾಕ್ಟರನಲ್ಲಿ ಮರಳನ್ನು ತುಂಬಿಕೊಂಡು ಹೋರಟಿರುವದಾಗಿ ತಿಳೀಸಿದನು ಮರಳು ಸಾಗಾಣಿಕೆ ಪರವಾನಿಗೆ ಪತ್ರ ಹಾಜರು ಪಡಿಸಲು ನಾನು ಹೇಳಿದಾಗ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನಲ್ಲಿ ಮೇಲೆ ಕೆಳಗೆ ನೋಡಿದ ಹಾಗೆ ಮಾಡಿ ಟ್ರ್ಯಾಕ್ಟರ ಬಿಟ್ಟು ಪಕ್ಕದ ಹೋಲದಲ್ಲಿ ಓಡಿಹೋದನು ಬೆನ್ನು ಹತ್ತಿ ಹಿಡಿಯಲು ಪ್ರಯತ್ನಿಸಿದರು ಸಿಕ್ಕಿರುವದಿಲ್ಲಾ ಸದರಿ ಟ್ರ್ಯಾಕ್ಟರನ್ನು ಪರಿಸಿಲಿಸಿ ನೋಡಲಾಗಿ ಸ್ವರಾಜ್ ಕಂಪನಿಯ 735 ಎಕ್ಸ ಟಿ ಬೀಳಿ ಮತ್ತು ನೀಲಿ ಬಣ್ಣದ ಟ್ರ್ಯಾಕ್ಟರ್ ನಂಬರ ಇರುವದಿಲ್ಲಾ ಅದರ ಇಂಜೀನ್ ನಂ 39.1358/ಎಸ್ಯುಹೆಚ್08176 ಅದರ ಚೆಸ್ಸಿ ನಂ ಡಬ್ಲೂವಿಟಿಹೆಚ್28934111721 ಅ:ಕಿ: 100000=00 ರೂ ನ್ನೇದ್ದು ಅದಕ್ಕೆ ಹೊಂದಿ ಕೊಂಡು ನೀಲಿ ಬಣ್ಣ ಟ್ರ್ಯಾಲಿ ಇದ್ದು ನಂಬರ ಇರುವದಿಲ್ಲಾ ಅದರ ಚೆಸ್ಸಿ ನಂ 22/2016 ಅ:ಕಿ: 50000=00 ರೂ ಅದರಲ್ಲಿ 1/2 ಬ್ರಾಸ್ ಮರಳು ಇದ್ದು ಅ:ಕಿ:700=00 ರೂ. ಸದರಿ ಟ್ಯಾಕ್ಟರ ವಾಹನ ಚಾಲಕನು ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಲೋಡ ಮಾಡಿಕೊಂಡು ಮಾರಾಟ ಮಾಡಲು ಸಾಗಾಣಿಕೆ ಮಾಡುತಿದ್ದ ಬಗ್ಗೆ ಖಚಿತವಾಗಿದ್ದರಿಂದ ಸದರಿ ಟ್ರ್ಯಾಕ್ಟರನ್ನು ಬೆರೆ ಚಾಲಕನ ಸಹಾಯದಿಂದ ಠಾಣೆಗೆ ಬೆಳಿಗ್ಗೆ 6-30 ಗಂಟೆಗೆ ತಂದು. ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತಿದ್ದ  ಟ್ಯಾಕ್ಟರ ವಾಹನವನ್ನು  ಹಾಜರು ಪಡಿಸಿ ಬೆಳಿಗ್ಗೆ 7-00 ಗಂಟೆಗೆ ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಕ್ರಮ ಕೈಕೊಳ್ಳುವಂತೆ ಸರಕಾರಿ ತಫರ್ೇ ಫಿರ್ಯಾಧಿದಾರನಾಗಿ ವರದಿ ಸಲ್ಲಿಸಿದ್ದರ ಸಾರಾಶದ ಮೇಲಿಂದ ಠಾಣೆಯ ಗುನ್ನೆ ನಂ 493/2017 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 303/2017 ಕಲಂ: 323.354,355,504,506 ಐಪಿಸಿ;- ದಿನಾಂಕ. 31.12.2017 ರಂದು ರಾತ್ರಿ 08-00 ಗಂಟೆೆಗೆ ಶ್ರೀ ಮೈನೊದ್ದೀನ ತಂದೆ ಶೇಖ್ ಅಹ್ಮದ ಕಟಗಿಮಿಶಿನ ವಯ:57ವರ್ಷ ಜಾ|| ಮುಸ್ಲಿಂ, ಉ|| ವ್ಯಾಪಾರ ಸಾ|| ಪೊಲೀಸ್ ಸ್ಟೇಶನ ರೋಡ ಗುರುಮಠಕಲ ತಾ||ಜಿ||ಯಾದಗಿರಿ ಇವರು ಠಾಣೆಗೆ ಬಂದು ಹಾಜರಾಗಿ ಒಂದು ಬಾಯಿ ಮಾತಿನ ದೂರು ಹೇಳಿಕೆ ನೀಡಿದ್ದು ಸದರಿ ಹೇಳಿಕೆ ಸಾರಾಂಶವೇನೆಂದರೆ, ಮೇಲ್ಕಂಡ ಹೆಸರು ಮತ್ತು ವಿಳಾಸದವನಾದ ನಾನು ವ್ಯಾಪಾರ ಮಾಡಿಕೊಂಡು ಕುಟುಂಬದೊಂದಿಗೆ ಉಪ-ಜೀವಿಸುತ್ತಿರುತ್ತೇನೆ. ನಾವು 4 ಜನ ಅಣ್ಣ-ತಮ್ಮಂದಿರಿದ್ದು ಅದರಲ್ಲಿ 1) ನಾನು ಮೈನೊದ್ದೀನ-57 ವರ್ಷ, 2) ಶೇಖ್ ಮಹಿಬೂಬ-48 ವರ್ಷ, 3) ನೂರೊದ್ದೀನ (ಮೃತ) 4) ಮಹ್ಮದ ಉಮರ -41 ವರ್ಷ, ಹೀಗೆ 4 ಜನ ಅಣ್ಣ- ತಮ್ಮಂದಿರು ಇರುತ್ತೇವೆ. ನಮ್ಮದು ಪರಶಿ ವ್ಯಾಪಾರ ಇದ್ದು ನಿನ್ನೆ  ದಿನಾಂಕ: 30.12.2017 ರಂದು ನಮ್ಮ ಒಂದು ಲೋಡ ಪರಶೀ ತಾಂಡೂರದಿಂದ ಗುರುಮಠಕಲಗೆ ಬಂದಿದ್ದು ರಾತ್ರಿ ವೇಳೆಯಲ್ಲಿ ನಮ್ಮ ಮನೆ ಮುಂದೆ ಖುಲ್ಲಾ ಜಾಗದಲ್ಲಿ ನಾನು ಪರಶಿ ಇಳಿಸಿಕೊಂಡಿದ್ದು ಇರುತ್ತದೆ. ನಂತರ ನಿನ್ನೆ ದಿನಾಂಕ:30.12.2017 ರಂದು ಮಧ್ಯಾನ್ಹ 1-30 ಗಂಟೆಗೆ ನನ್ನ ತಮ್ಮನಾದ ಮಹ್ಮದ ಉಮರ ಈತನು ನಮ್ಮ ಮನೆ ಮುಂದೆ ಪರಶಿ ಲೋಡ್ ಇಳಿಸಿದ್ದನ್ನು ನೋಡಿ ನಂತರ ಅಲ್ಲಿಯೇ ಕಟ್ಟಿಗೆ ದುಖಾನದಲ್ಲಿದ್ದ ನನ್ನ ಮಗ ಗೌಸುದ್ದೀನ ಈತನಿಗೆ ಮತ್ತು  ಮನೆಯಲ್ಲಿದ್ದ ನನಗೆ ಮಹ್ಮದ ಉಮರ ಈತನು ಹೊರಗೆ ಕರೆದು ಏ ಭೋಸಡಿ ಮಕ್ಕಳ್ಯಾ, ನನಗೆ ಜಾಗದಲ್ಲಿ ಪಾಲು ಕೊಡದೇ ಇಲ್ಲಿ ಯಾಕೆ ಪರಶೀ ಹಾಕಿರುತ್ತೀರಿ ಅಂತ ಬಾಯಿಗೆ ಬಂದಂತೆ ಬೈದಾಗ ನಾನು ಆತನಿಗೆ ಇದು ನಮಗೆ ಎಲ್ಲರಿಗೂ ಸೇರಿದ ಜಾಗ ಇದರಲ್ಲಿ ನಿಂದು ನಂದು ಅನ್ನಲು ಏನಿದೆ ಯಾಕೆ ಬೈಯುತ್ತಿರುವಿ ಅಂತ ಕೇಳಿದ್ದಕ್ಕೆ ನನಗೆ ಕೈ ಮುಷ್ಟಿ ಮಾಡಿ ಮುಖಕ್ಕೆ ಗುದ್ದಿದನು, ಅಲ್ಲಿಯೆ ಬಿದ್ದಿದ್ದ ಕಟ್ಟಿಗೆಯಿಂದ ನನ್ನ ಎಡಕಾಲಿನ ತೊಡೆಗೆ ಜೋರಾಗಿ ಹೊಡೆದು ಗುಪ್ತಗಾಯ ಮಾಡಿರುತ್ತಾನೆ. ನನ್ನ ಮೈಮೇಲಿನ ಅಂಗಿ ಹರಿದು ಬಿಸಾಡಿರುತ್ತಾನೆ. ಬಿಡಿಸಲು ಬಂದ ನನ್ನ ಮಗ ಗೌಸುದ್ದೀನ ಈತನಿಗೆ ಹೊಟ್ಟೆಗೆ ಜೋರಾಗಿ ಒದ್ದು ಚಪ್ಪಲಿಯಿಂದ ನನ್ನ ಮಗನ ತಲೆಗೆ ಹೊಡೆದಿರುತ್ತಾನೆ. ನಂತರ ಅದನ್ನು ನೋಡಿ ಬಿಡಿಸಲು ಬಂದ ನನ್ನ ತಮ್ಮನ ಹೆಂಡತಿಯಾದ ಶೈಜಾದಿ ಬೇಗಂ ಗಂಡ ಮಹ್ಮದ ನೂರುದ್ದೀನ ಇವಳಿಗೆ ಕಾಲಿನಿಂದ ಬೆನ್ನಿಗೆ ಒದ್ದಿರುತ್ತಾನೆ. ಅವಳ ಸೀರೆ ಸೇರಗನ್ನು ಕೈಯಿಂದ ಹಿಡಿದು ಜಗ್ಗಿ ಹರಿದು ಅವಮಾನ ಮಾಡಿರುತ್ತಾನೆ. ನಂತರ ನನ್ನ ತಂಗಿ ಚಾಂದ ಸುಲ್ತಾನ ಇವಳು ಬಿಡಿಸಲು ಬಂದರೆ ಅವಳಿಗೆ ರಂಡೀ, ಸೂಳೆ ಅಂತ ಬಾಯಿಗೆ ಬಂದಂತೆ ಬೈದಿರುತ್ತಾನೆ, ಜಗಳ ಬಿಡಿಸಲು ಬಂದರೆ ನಿನಗೆ ಖಲಾಸ ಮಾಡುತ್ತೇನೆ ಅಂತ ಜೀವ ಬೆದರಿಕೆ ಹಾಕಿರುತ್ತಾನೆ. ಅಷ್ಟರಲ್ಲಿ ಅಲ್ಲಿಯೇ ನಮ್ಮ ಸಮಾಜದ ಕೆಲವು ಜನರು ಮತ್ತು ನನ್ನ ತಮ್ಮನ ಮಗ ಸದ್ದಾಂ ತಂದೆ ಮಹ್ಮದ ನೂರುದ್ದೀನ, ನನ್ನ ತಮ್ಮನ ಮಗಳು ಜೀಬಾ ತಂದೆ ನೂರುದ್ದೀನ ಇವರು ಬಂದು ಜಗಳಬಿಡಿಸಿ ಕಳಿಸಿದ್ದು ಇರುತ್ತದೆ. ಸದರಿಯವರು ಜಗಳ ಬಿಡಿಸಿಕೊಂಡು ಕರೆದುಕೊಂಡು ಹೋಗುವಾಗ ಆತನು ನಮಗೆ ಎಲ್ಲರಿಗೂ ಇವರು ಸದ್ಯ ಜಗಳ ಬಿಡಿಸದರು ನೀವೂ ಉಳಿದ್ದೀದ್ದೀರಿ ಇನ್ನೊಂದು ಸಾರಿ ನನ್ನ ಕೈಯಲ್ಲಿ ಸಿಕ್ಕರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿರುತ್ತಾನೆ.ನಂತರ ನಾವು ನಮ್ಮ ತಮ್ಮ ಇರುವ ಕಾರಣ ಸದರಿಯವನ ವಿರುದ್ದ ಕೇಸ ಮಾಡಬಾರದು ಅಂತ ಸುಮ್ಮನೆ ಕುಳಿತರೆ ಆತನೆ ನಮಗಿಂತ ಮೊದಲು ಠಾಣೆಗೆ ಬಂದು ನಮ್ಮ ವಿರುದ್ದ ಕೇಸು ಮಾಡಿರುತ್ತಾನೆ. ನಂತರ ನಾವು ಎಲ್ಲರೂ ಮನೆಯವರು ವಿಚಾರ ಮಾಡಿಕೊಂಡು ತಡವಾಗಿ ಇಂದು ದಿನಾಂಕ: 31.12.2017 ರಂದು ರಾತ್ರಿ 08-00 ಗಂಟೆೆಗೆ ಬಂದು ಸದರಿಯವನ ವಿರುದ್ದ ಹೇಳಿಕೆ ನೀಡಿದ್ದು, ಕೇವಲ ನಮ್ಮ ಜಾಗದಲ್ಲಿ ನಾವು ಪರಶಿ ಹಾಕಿಕೊಂಡರೆ ಅದನ್ನೇ ನೆಪ ಮಾಡಿಕೊಂಡು ನಮ್ಮೊಂದಿಗೆ ಜಗಳ ಮಾಡಿ ಅವಾಚ್ಯವಾಗಿ ಬೈದು, ನನಗೆ ನನ್ನ ಮಗನಿಗೆ ಹೊಡೆಬಡೆ ಮಾಡಿ ಒಳಪೆಟ್ಟು ಮಾಡಿದ, ನನ್ನ ಮಗನ ತಲೆಗೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿದ,.ನನ್ನ ತಮ್ಮನ ಹೆಂಡತಿಗೆ ಕಾಲಿನಿಂದ ಒದ್ದು ಸೀರೆ ಸೆರಗನ್ನು ಹಿಡಿದು ಜಗ್ಗಿ ಹರಿದು ಅವಮಾನ ಮಾಡಿದ, ನನ್ನ ತಂಗಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ಮತ್ತು ನಮಗೆ ಇನ್ನೊಂದು ಸಾರಿ ಸಿಕ್ಕರೆ ನಿಮ್ಮ ಜೀವ ಸಹಿತ ಉಳಿಸುವದಿಲ್ಲ ಅಂತ ಜೀವ ಬೆದರಿಕೆ ಹಾಕಿದ ಸದರಿಯವನ ವಿರುದ್ದ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕು ನಮಗೆ ಯಾವುದೇ ಆಸ್ಪತ್ರೆ ಉಪಚಾರದ ಅವಶ್ಯಕತೆ ಇರುವದಿಲ್ಲ.ಅಂತ ಹೇಳಿ ಗಣಕಯಂತ್ರದಲ್ಲಿ ಟೈಪ ಮಾಡಿದ ಹೇಳಿಕೆ ಇರುತ್ತದೆ. ಸದರಿ ಸಾರಾಂಶದ ಮೇಲಿಂದ ಗುರುಮಠಕಲ ಪೊಲೀಸ್ ಠಾಣೆ ಗುನ್ನೆ ನಂ. 303/2017 ಕಲಂ.323.354,355,504,506 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
 

No comments: