Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 12/2018 ಕಲಂ 323, 341, 355, 504, 506, 114 ಸಂಗಡ 34 ಐಪಿ;- ದಿನಾಂಕ 09-01-2018 ರಂದು 4 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಹಣಮಂತ ತಂದೆ ಮಲ್ಲಯ್ಯಾ ಡೊಂಗೇರ ವಯಾ:55 ಉ: ಒಕ್ಕಲುತನ ಜಾ: ಕಬ್ಬೇರ ಸಾ: ಕೌಳೂರು ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧೀ ಹೇಳಿಕೆ ಸಲ್ಲಿಸಿದ್ದು ಸಾರಾಂಶವೆನೆಂದರೆ ನನಗೆ 6 ಗಂಡು ಜನ ಮಕ್ಕಳಿದ್ದು ಹಿರಿಯವ ಮಲ್ಲಯ್ಯಾ, ಎರಡನೇಯ ಗಂಗಪ್ಪಾ 3 ನೇಯ ಮರಲಿಂಗ, 4 ನೇಯವ ಸಾಬರೆಡ್ಡಿ 5 ನೇಯವ ಬಸಪ್ಪಾ ಮತ್ತು ಕೊನೆಯವ ಶಿವರಾಜ ಅಂತಾ ಒಟ್ಟು 6 ಜನ ಮಕ್ಕಳಿರುತ್ತಾರೆ. ನನ್ನ ಹೆಂಡತಿಯಾದ ಗಂಗಮ್ಮಾ ಹಾಗೂ ನನ್ನ ಮಕ್ಕಳಾದ ಶಿವರಾಜ , ಮಲ್ಲಯ್ಯಾ ಗಂಗಪ್ಪಾ ಹಾಗೂ ಮರಲಿಂಗ ಇವರು ಈಗ ಒಂದು ವರ್ಷದ ಹಿಂದೆ ನಮ್ಮ ಜೊತೆಗೆ ಜಗಳಾ ತೆಗೆದು ಅವರು ನನ್ನಿಂದ ಒಂದು ವರ್ಷದ ಹಿಂದೆನೇ ಬೇರೆಯಾಗಿರುತ್ತಾರೆ. ನನ್ನ ಒಟ್ಟು 33 ಎಕರೇ ಹೊಲದಲ್ಲಿ ಎಲ್ಲರಿಗೂ ಸಮನಾಗಿ ಉಪಭೋಗ ಮಾಡಲಿಕ್ಕೆ ಮಾಡಿಕೊಟ್ಟಿರುತ್ತೆನೆ. ಮತ್ತು ಈ ಮೊದಲೇ ಇನ್ನಿಬ್ಬರೂ ಮಕ್ಕಳಾದ ಸಾಬರೆಡ್ಡಿ ಹಾಗೂ ಬಸಪ್ಪಾ ಇವರು ಕೂಡಾ ತಮ್ಮ ಹೆಂಡತಿಯರೊಂದಿಗೆ ಬೇರೆ ಮಾಡಿಕೊಂಡು ಉಪಜೀವಿಸುತ್ತಾರೆ. ನಾನು ಈಗ 6-7 ತಿಂಗಳುಗಳ ಹಿಂದೆ ಒಂದು ಟ್ರ್ಯಾಕ್ಟರ ಖರೀಧಿ ಮಾಡಿಕೊಂಡಿರುತ್ತೆನೆ. ನಾನು ಕೇವಲ 3 ಎಕರೇ ಹೋಲವನ್ನು ಸಾಗುವಳಿ ಮಾಡಿಕೊಂಡು ಉಪಜೀವಿಸುತ್ತೆನೆ. ನಾವು ಹೋಲ ಸಾಗುವಳಿ ಮಾಡುವ ಸಮಯದಲ್ಲಿ ಸಾಲ ಮಾಡಿಕೊಂಡಿದ್ದು ನಮಗೆ ಮರಳಿ ಸಾಲ ತಿರಿಸಲಾಗದ ಸಂಬಂಧವಾಗಿ ನಮ್ಮ 5 ಎಕರೇ ಹೋಲ ನಮಗೆ ಸಾಲ ಕೊಟ್ಟವರಿಗೆ ಮುದ್ದತ್ತು ರಜಿಸ್ಟ್ರೇಷನ್ ಮಾಡಿಸಿ ಕೊಟ್ಟಿರುತ್ತೆ್ತೆನೆ. ನನ್ನ ಮಕ್ಕಳಿಗೆ ಸಾಲ ತಿರಿಸಲು ಹಣ ಕೇಳಿದಾಗ ಅವರು ನನ್ನ ಜೋತೆ ತಕರಾರು ಮಾಡಿಕೊಳ್ಳುತ್ತಾ ಬಂದಿರುತ್ತಾರೆ. ಈ ವರ್ಷ ನಾನು ನನ್ನ ಹೊಲದಲ್ಲಿ ಹತ್ತಿ ಬೇಳೆದಿರುತ್ತೆನೆ. ನಾನು ಈಗ 8 ದಿವಸಗಳ ಹಿಂದೆ ನಮ್ಮ ಹೊಲದಲ್ಲಿ ಹತ್ತಿ ಬಿಡಿಸಿ ನಮ್ಮ ಹೊಸ ಮನೆಯಲ್ಲಿ ಇಟ್ಟಿದ್ದು ಇನ್ನೂ 10-15 ದಿವಸಗಳಲ್ಲಿ ಮಾರಬೇಕೆಂದು ಇಟ್ಟಿದ್ದೆನು.
ಹೀಗಿದ್ದು ನಿನ್ನೆ ದಿನಾಂಕ 08-01-2018 ರಂದು ಹತ್ತಿಯನ್ನು ನಮ್ಮ ಟ್ರ್ಯಾಕ್ಟರದಲ್ಲಿ ತುಂಬಿ ಮಾರಾಟ ಮಾಡಬೇಕೆಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನಮ್ಮ ಹಳೆ ಮನೆಯಲ್ಲಿದ್ದ ಟ್ರ್ಯಾಕ್ಟರ ಚಾವಿ ತರಬೇಕೆಂದು ನಮ್ಮ ಮನೆಯ ಹತ್ತಿರ ಹೊರಟಾಗ ಅದೇ ವೇಳೆಗೆ ನನ್ನ ಮಕ್ಕಳಾದ ಮಲ್ಲಯ್ಯಾ, ಗಂಗಪ್ಪಾ ಹಾಗೂ ಮರಲಿಂಗ ಹಾಗೂ ನನ್ನ ಹೆಂಡತಿಯಾದ ಗಂಗಮ್ಮಾ 4 ಜನರು ಬಂದವರೇ ನನಗೆ ಮುಂದೆ ಹೋಗದಂತೆ ತಡೆದು ಅಡ್ಡಗಟ್ಟಿ ಎಲ್ಲಿಗೇ ಹೊರಟಿದ್ದಿ ಭೋಸಡಿ ಮಗನೇ ಅಂತಾ ಕೇಳಿದರು. ಆಗ ನಾನು ಅವರಿಗೆ ಹತ್ತಿ ಮಾರಿಕೊಂಡು ಬರಲು ಟ್ರ್ಯಾಕ್ಟರ ಚಾವಿ ಬೇಕಾಗಿದೆ ತರಲು ಹೊರಟಿದ್ದೆನೆ ಅಂತಾ ಅಂದಾಗ ಅವರು ಬೋಸಡಿ ಮಗನೇ ನಮ್ಮ ಹೋಲ ಬೇರೆಯವರಿಗೆ ಸಾಲದಲ್ಲಿ ಹಾಕಿದ್ದಿ ನಮ್ಮ ಹೋಲ ಬಿಡಿಸಿಕೊಟ್ಟರೇ ಸರಿ ಇಲ್ಲದಿದ್ದರೇ ನಿನಗೆ ಒಂದು ಗತಿ ಕಾಣಿಸುತ್ತೆವೆ ಅಂತಾ ಧಮಕಿ ಹಾಕಿದರು. ಆಗ ನಾನು ನನ್ನಷ್ಟಕ್ಕೆ ಟ್ರ್ಯಾಕ್ಟರ ಚಾವಿ ತರಲು ಹೊರಟಾಗ ಅವರಲ್ಲಿ ನನ್ನ ಮಗನಾದ ಮಲ್ಲಪ್ಪನು ಎಲೇ ಭೊಸಡಿ ಮಗನೇ ಅದು ನಮ್ಮ ಟ್ರ್ಯಾಕ್ಟರ ಇದೆ ನಿನಗೇಕೆ ಕೊಡಬೇಕು ಅಂತಾ ಅಂದವನೇ ತನ್ನ ಕಾಲಲ್ಲಿಯ ಚಪ್ಪಲಿ ತೆಗೆದು ನನ್ನ ಕಪಾಳದ ಮೇಲೆ ಹೊಡೆದನು. ಮತ್ತು ಗಂಗಪ್ಪನು ಕೈಯಿಂದ ಕಪಾಳದ ಮೇಲೆ ಹೊಡೆದನು. ಮತ್ತು ಮರಲಿಂಗ ಹಾಗೂ ನನ್ನ ಹೆಂಡತಿಯಾದ ಗಂಗಮ್ಮಾ ಇಬ್ಬರೂ ಚನ್ನಾಗಿ ಹೊಡೆಯಿರಿ ಇತನ ಸೊಕ್ಕು ಜಾಸ್ತಿ ಆಗಿದೆ ಅಂತಾ ನನಗೆ ಹೊಡೆಯಲು ಪ್ರಚೊದನೆ ನೀಡುತ್ತಿದ್ದರು, ಆಗ ಅಲ್ಲಿಯೇ ಇದ್ದ ನನ್ನ ಅಳಿಯನಾದ ಚಂದಪ್ಪಾ ತಂದೆ ಮಲ್ಲಯ್ಯಾ ನಾಗರಬಂಡಿ ಮತ್ತು ಸಿದ್ದಪ್ಪಾ ತಂದೆ ದೇವಿಂದ್ರಪ್ಪಾ ನೈಕಲ್ ಮತ್ತು ಗಂಗಮ್ಮಾ ಗಂಡ ಸಾಬಣ್ಣಾ ಚಪಲೇರ ಇವರು ಬಂದು ಜಗಳಾ ಬಿಡಿಸಿರುತ್ತಾರೆ. ಆದರೂ ಅವರು ಇನ್ನೊಮ್ಮೆ ಸೀಗು ಮಗನೇ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿದರು. ಈ ರಿತಿಯಾಗಿ ನನಗೆ ಕೈಯಿಂದ ಮತ್ತು ಚಪ್ಪಲಿಯಿಂದ ಹೊಡೆಬಡಿ ಮಾಡಿ ಜೀವದ ಭಯ ಹಾಕಿದ 4 ಜನರ ವಿರುದ್ದ ಕಾನೂನು ಪ್ರಕಾರ ಕೈಗೊಳ್ಳಬೇಕು ಅಂತಾ ಹೇಳಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ ಹೇಳಿಕೆ ನಿಜವಿದೆ. ನನ್ನ ಮಕ್ಕಳು ನನಗೆ ಹೊಡೆಬಡಿ ಮಾಡಿದ ಬಗ್ಗೆ ನಾನು ನಮ್ಮ ಊರಲ್ಲಿ ಹಿರಿಯರೊಂದಿಗೆ ವಿಚಾರಣೆ ಮಾಡಿ ತಡವಾಗಿ ತಡವಾಗಿ ಠಾಣೆಗೆ ಬಂದಿದ್ದು ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನಿಡಿದ ಹೇಳಿಕೆ ಫಿರ್ಯಾಧಿ ಸಾರಾಶಂದ ಮೇಲಿಂದಠಾಣೆ ಗುನ್ನೆ ನಂ: 12/2018 ಕಲಂ 323, 341, 355, 504, 506, 114 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು
ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 01/2018 ಕಲಂ 363 ಐ.ಪಿ.ಸಿ ;- ದಿನಾಂಕ : 09.01.2018 ರಂದು ಪಿರ್ಯಾಧಿ ಸುನೀತಾ ಗಂಡ ವಿಕಾಸ ಬಾಸುತಕರ್ ವಯಾ| 40 ಸಾ| ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಂಶವೇನೆಂದರೆ ನನ್ನ ಮಗಳಾದ ಶಿಲ್ಪ ವಯಾ|| 17 ಇವಳನ್ನು ನನ್ನ ಅಕ್ಕಳ ಮನೆ ಯಾದಗಿರಿಗೆ ಸಂಕ್ರಾಂತಿ ಹಬ್ಬದ ನೀಮಿತ್ಯ ದಿನಾಂಕ: 23.12.2017 ರಂದು ಕಳುಹಿಸಿದ್ದೇನು. ನನ್ನ ಅಕ್ಕಳಾದ ಶಾಂತಬಾಯಿ ಈಕೆಯು ದಿನಾಂಕ: 30.12.2017 ರಂದು ಬೆಳಿಗ್ಗೆ ಕೆಲಸಕ್ಕೆ ಅಂತ ಹೋಗಿ ಮರಳಿ ಮನೆಗೆ ಬಂದಿದ್ದಾಗ ಮದ್ಯಾಹ್ನ 3.30 ಗಂಟೆಯಿಂದ 4 ಪಿ.ಎಂದ ಅವಧಿಯಲ್ಲಿ ನನ್ನ ಮಗಳು ಮನೆಯಲ್ಲಿ ಇರದೇ ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಾಡಿದರೂ ನನ್ನ ಮಗಳ ಸುಳಿವು ಸಿಕ್ಕಿರುವುದಿಲ್ಲ ನನ್ನ ಮಗಳನ್ನು ಯಾರೋ ಅಪರಿಚತ ವ್ಯಕ್ತಿಗಳು ಅಪಹರಿಸಿಕೊಂಡು ಹೋಗಿರುತ್ತಾರೆ ಅಂತ ನನಗೆ ಸಂಶಯ ಇರುತ್ತದೆ ಅಂತ ಕೊಟ್ಟ ದೂರಿನ ಮೇಲಿಂದ ಠಾಣೆಯಲ್ಲಿ ಗುನ್ನೆ ನಂ: 01/2018 ಕಲಂ: 363 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಢಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 10/2018.ಕಲಂ 279.338.ಐ.ಪಿ.ಸಿ. 187 ಐ.ಎಂ.ವಿ;- ದಿನಾಂಕ 08/01/2018 ರಂದು ರಾತ್ರಿ 7-30 ಗಂಟೆಗೆ ಬಾಲಂಕು ಆಸ್ಪತ್ರೆ ರಾಯಚೂರ ದಿಂದ ಎಂ.ಎಲ್.ಸಿ. ಇದೆ ಅಂತ ಇ.ಮೇಲ್ ಮೂಲಕ ಮಾಹಿತಿಬಂದ್ದಿದ್ದರಿಂದ ಎಂ.ಎಲ್.ಸಿ. ಕೂರಿತು ಶಿವಶರಣಪ್ಪ ಹೆಚ್.ಸಿ. 125 ರವರಿಗೆ ಬೆಳಿಗ್ಗೆ 6-00 ಎಂ.ಎಲ್.ಸಿ. ಕುರಿತು ಕಳೀಸಿ ಕೊಟ್ಟಿದ್ದು ಸದರಿಯವರು ರಾಯಚೂರಿನ ಬಾಲಂಕು ಆಸ್ಪತ್ರೆಗೆ ಬೆಟಿನಿಡಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ವೆಂಕಟೇಶ ತಂದೆ ಬಸ್ಸಪ್ಪ ವ|| 25 ಸಾ|| ಟೋಣ್ಣೂರ ಇವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ರಾತ್ರಿ 8-30 ಗಂಟೆಗೆ ಬಂದು ಸದರಿ ಹೇಳಿಕೆ ಹಾಜರ ಪಡಿಸಿದ್ದರ ಸಾರಾಂಶ ವೆನೆಂದರೆ ಹೀಗಿದ್ದು ನಮ್ಮ ಮಸುಬು ಹೋಲದಲ್ಲಿ ಹತ್ತಿ ಬಿಡಿಸುವದು ಇದ್ದುದ್ದರಿಂದ ದಿನಾಂಕ 08/01/2018 ರಂದು ನಾನು ಮತ್ತು ನನ್ನ ತಾಯಿಯಾದ ಬೀಮವ್ವ ಗಂಡ ಬಸ್ಸಪ್ಪ, ಮತ್ತು ನನ್ನ ತಂದೆಯಾದ ಬಸ್ಸಪ್ಪ ತಂದೆ ಗೋವಿಂದಪ್ಪ ಎಲ್ಲರು ಕೂಡಿ ನಮ್ಮ ಮನೆಯಿಂದ ಮಸಬು ಹೋಲದಲ್ಲಿ ಹತ್ತಿಬಿಡಿಸಲು ಬೆಳಿಗ್ಗೆ 9-30 ಗಂಟೆಗೆ ಹೋರಟೆವು ಟೋಣ್ಣೂರ -ಕೊಳ್ಳೂರ ಎಂ. ಮುಖ್ಯರಸ್ತೆಯ ಮೇಲೆ ನಡೆದು ಕೊಂಡು ನಾನು ಮುಂದೆ ಹೋಗುತ್ತಿದ್ದೆನು ನನ್ನ ಹಿಂದೆ ನನ್ನ ತಂದೆ ತಾಯಿ ಇಬ್ಬರು ಬರುತ್ತಿದ್ದರು ನಾವು ನರೇಂದ್ರ ರೇಡ್ಡಿ ಇವರ ಹೋಲದ ಹತ್ತಿರ ಹೋಗುತ್ತಿರುವಾಗ ನಮ್ಮೂರ ಕಡೆಯಿಂದ ಒಂದು ಟ್ರ್ಯಾಕ್ಟರ ಇಂಜಿನ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡುಬಂದು ರಸ್ತೆಯ ಎಡಗಡೆ ಸೈಡಿಗೆ ನಡೆದು ಕೊಂಡು ಹೋಗುತ್ತಿದ್ದಾಗ ನನಗೆ ಹಿಂದೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಾನು ರಸ್ತೆಯ ಮೇಲೆ ಬಿದ್ದೆನು. ಅಲ್ಲೆ ನನ್ನ ಹಿಂದೆ ಹೋರಟಿದ್ದ ನನ್ನ ತಂದೆ ತಾಯಿಯವರು ಬಂದು ನನಗೆ ನೋಡಲಾಗಿ ಸದರಿ ಅಪಘಾತದಲ್ಲಿ ನನಗೆ ಬಲಗಾಲು ಮೋಳಕಾಲು ಕೆಳಗೆ ಮುರಿದು ತಿವ್ರವಾದಗಾಯವಾಗಿರುತ್ತದೆ, ಬಲಗಡೆ ಪಕ್ಕೆಗೆ ಗುಪ್ತಗಾಯ ವಾಗಿದ್ದು ಇರುತ್ತದೆ. ಅಲ್ಲೆ ಹೋರಟಿದ್ದ ನಮ್ಮೂರ ಅಯ್ಯಣ್ಣಗೌಡ ತಂದೆ ಗೌಡಪ್ಪಗೌಡ ಮಾಸರೆಡ್ಡಿ ಇವರು ನನಗೆ ಅಫಘಾತ ವಾಗಿದ್ದನ್ನು ನೋಡಿ ಬಂದು ವಿಚಾರಿಸಿದ್ದು. ನನಗೆ ಅಪಘಾತ ಮಾಡಿದ ಟ್ರ್ಯಾಕ್ಟರ ಇಂಜಿನ್ ಅಲ್ಲೆ ನಿಂತಿದ್ದು ಅದರ ನಂಬರ ನೋಡಲಾಗಿ ಕೆಎ-32ಟಿಬಿ-1801 ನ್ನೇದ್ದು ಇರುತ್ತದೆ. ಸದರಿ ಟ್ರ್ಯಾಕ್ಟರ ಚಾಲಕನು ಅಲ್ಲೆ ನಿಂತ್ತಿದ್ದು ಸದರಿಯವನಿಗೆ ವಿಚಾರಿಸಲಾಗಿ ತನ್ನ ಹೆಸರು ರೀಯಾಜ್ ಖಾನ್ ತಂದೆ ಇಂತಿಯಾಜ್ ಖಾನ್ ಸಾ|| ಶಹಾಪೂರ ಅಂತ ತಿಳೀಸಿದನು ಸದರಿ ಚಾಲಕನು ಸ್ವಲ್ಪ ಹೋತ್ತು ನಿಂತ ಹಾಗೆ ಮಾಡಿ ತನ್ನ ಟ್ರ್ಯಾಕ್ಟರ ಇಂಜಿನ್ ಚಲಾಯಿಸಿ ಕೊಂಡು ಮರ್ಕಲ್ ಕೋಳ್ಳೂರ ಕಡೆಗೆ ಹೋದನು. ಸದರಿ ಅಪಘಾತವಾದಾಗ ಸಮಯ ಸುಮಾರು 10-00 ಗಂಟೆಯಾಗಿತ್ತು. ನಂತರ ನನ್ನ ತಂದೆ ಬಸ್ಸಪ್ಪ, ನನ್ನ ತಾಯಿ ಬೀಮವ್ವ ಮತ್ತು ನಮ್ಮೂರ ಅಯ್ಯಣ್ಣ ಗೌಡ ಎಲ್ಲರು ಕೂಡಿ ಅಲ್ಲೆ ಹೋರಟಿದ್ದ ಒಂದು ಆಟೋನಿಲ್ಲಸಿ ಉಪಚಾರಕುರಿತು ಆಸ್ಪತ್ರೆಗೆ ಕರೆದು ಕೊಂಡು ಹೋಗಲು ಕೋಳ್ಳೂರ ಎಂ.ಕ್ಕೆ ಬಂದು. ಅಲ್ಲಿಂದ ಒಂದು ಕಾರಿನಲ್ಲಿ ಹಾಕಿಕೊಂಡು ಬಾಲಂಕು ಆಸ್ಪತ್ರೆ ರಾಯಚೂರಕ್ಕೆ ಕರೆದು ಕೊಂಡು ಬಂದು ಸೆರಿಕೆ ಮಾಡಿದ್ದು ಇರುತ್ತದೆ. ಅಂತ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 10/2018 ಕಲಂ 279. 338. ಐ.ಪಿ.ಸಿ. ಮತ್ತು 187 ಐ.ಎಂ.ವಿ. ಆ್ಯಕ್ಟ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 13/2018 ಕಲಂ: 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್. ಆರ್.ಡಿ ಆಕ್ಟ್ 1957;- ದಿ: 09/01/2018 ರಂದು 7-15 ಎ.ಎಮ್.ಕ್ಕೆ ಶ್ರೀ ಟಿ.ಆರ್ ರಾಘವೇಂದ್ರ, ಪಿ.ಐ ಸಾಹೇಬರು 6 ಮರಳು ತುಂಬಿರುವ ಟಿಪ್ಪರಗಳನ್ನು ಠಾಣೆಗೆ ಒಪ್ಪಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ನಾನು ದಿನಾಂಕ: 08/01/2018 ರಂದು 11-00 ಪಿ.ಎಮ್ ದಿಂದ ದಿನಾಂಕ: 09/01/2018 ರ 5-00 ಎ.ಎಮ್ ವರೆಗೆ ರಾತ್ರಿ ಗಸ್ತು ಮೇಲುಸ್ತುವಾರಿ ಕರ್ತವ್ಯದಲ್ಲಿದ್ದೇನು. ಯಾದಗಿರಿಯಿಂದ ಶ್ರೀ ಶಿವಾನಂದ ಆರ್.ಪಿ.ಐ, ಡಿ.ಎ.ಆರ್ ಘಟಕ ಯಾದಗಿರಿ ರವರು ಅಕ್ರಮ ಮರಳು ಸಾಗಾಣಿಕೆಯನ್ನು ತಡೆಯುವ ಕುರಿತು ಜೀಪ ನಂಬರ ಕೆ.ಎ 33 ಜಿ 227 ನೇದ್ದರಲ್ಲಿ ಸಿಬ್ಬಂದಿಯವರೊಂದಿಗೆ ಬಂದಿದ್ದರು. ನಾನು ಕೂಡ ನಮ್ಮ ಠಾಣೆಯ ಸಕರ್ಾರಿ ಜೀಪನಲ್ಲಿ ಸಿಬ್ಬಂದಿಯವರೊಂದಿಗೆ ರಾತ್ರಿ ಗಸ್ತು ಚೆಕ್ಕಿಂಗ್ ಮೇಲುಸ್ತುವಾರಿ ಮಾಡುತ್ತ 3-30 ಎ.ಎಮ್ ಸುಮಾರಿಗೆ ಕುಂಬಾರಪೇಟ ಕ್ರಾಸ್ ಹತ್ತಿರ ಇದ್ದಾಗ ಬಾತ್ಮಿ ಬಂದಿದ್ದೆನೆಂದರೆ, ಚೌಡೇಶ್ವರಿಹಾಳ ಸಿಮಾಂತರದ ಕೃಷ್ಣಾ ನದಿಯಿಂದ 6 ಟಿಪ್ಪರಗಳಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಮರಳು ಲೋಡ ಮಾಡಿಕೊಂಡು ಹೇಮನೂರ ಮಾರ್ಗವಾಗಿ ಕಲಬುರಗಿ ಕಡೆಗೆ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದಿದ್ದರಿಂದ ನಾನು ಮತ್ತು ಶ್ರೀ ಶಿವಾನಂದ ಆರ್.ಪಿ.ಐ ರವರು ನಮ್ಮ ಎರಡು ಸಕರ್ಾರಿ ಜೀಪಗಳಲ್ಲಿ ಸಿಬ್ಬಂದಿಯವರೊಂದಿಗೆ ಸತ್ಯಂಪೇಟ ಮಾರ್ಗವಾಗಿ ಹೇಮನೂರ ಕಡೆಗೆ ಹೊರಟಿದ್ದಾಗ ಹಾಲಗೇರಾ ಕ್ರಾಸ್ ಹತ್ತಿರ ಎದುರಿನಿಂದ 6 ಟಿಪ್ಪರಗಳು ಬಂದಿದ್ದರಿಂದ ನಾವು ಜೀಪ ಅಡ್ಡಗಟ್ಟಿ ಟಿಪ್ಪರಗಳನ್ನು ನಿಲ್ಲಿಸಿದಾಗ ಸದರಿ ಟಿಪ್ಪರಗಳ ಚಾಲಕರು ತಮ್ಮ ಟಿಪ್ಪರಗಳನ್ನು ರೋಡಿನ ಮೇಲೆ ನಿಲ್ಲಿಸಿ ಓಡಿ ಹೋದರು. ನಾವೆಲ್ಲರೂ ಟಿಪ್ಪರಗಳ ಹತ್ತಿರ ಹೋಗಿ ಒಂದರ ನಂಬರ ನೋಡಿ ಪರಿಶೀಲಿಸಲಾಗಿ 1] ಟಿಪ್ಪರ ನಂಬರ ಕೆ.ಎ 32 ಸಿ 6377 2] ಟಿಪ್ಪರ ನಂಬರ ಕೆ.ಎ 33 ಎ 6178 3] ಟಿಪ್ಪರ ನಂಬರ ಕೆ.ಎ 51 ಬಿ 6723 4] ಟಿಪ್ಪರ ನಂಬರ ಕೆ.ಎ 33 ಎ 4663 5] ಟಿಪ್ಪರ ನಂಬರ ಕೆ.ಎ 33 ಎ 6179 6] ಟಿಪ್ಪರ ನಂಬರ ಕೆ.ಎ 33 ಸಿ 8762 ಇದ್ದು, ಪ್ರತಿ ಟಿಪ್ಪರಗಳಲ್ಲಿ ಅಂದಾಜು 10 ಘನ ಮೀಟರ ನಂತೆ ಒಟ್ಟು 60 ಘನಮೀಟರ ಮರಳು ಇರುತ್ತದೆ. ಸದರಿ ಟಿಪ್ಪರಗಳ ಚಾಲಕರು ಮತ್ತು ಮಾಲಿಕರು ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದುದ್ದರಿಂದ ಟಿಪ್ಪರಗಳನ್ನು ಠಾಣೆಗೆ ತಂದು ಒಪ್ಪಿಸಿದ್ದು, ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ವಗೈರೆ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 13/2018 ಕಲಂ: 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್.ಡಿ ಆಕ್ಟ್ 1957 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 03/2018 ಕಲಂ: 279,304(ಎ) ಐಪಿಸಿ ಸಂ 122 ಐಎಮ್ವಿ ಎಕ್ಟ್ ;- ದಿನಾಂಕ: 10/01/2018 ರಂದು 0030 ಎಎಮ್ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಲ್ಲಿ ಡೆತ್ ಎಮ್.ಎಲ್.ಸಿ ಇರುವುದಾಗಿ ಜಿಲ್ಲಾ ನಿಸ್ತಂತು ಕೋಣೆಯಿಂದ ತಿಳಿಸಿದ ಮೇರೆಗೆ 0100 ಗಂಟೆಗೆ ವಿಚಾರಣೆ ಕುರಿತು ನಮ್ಮ ಠಾಣೆಯ ಶ್ರೀ ಗಂಗಾಧರ ಪಾಟಿಲ್ ಎ.ಎಸ್.ಐ ರವರು ಯಾದಗಿರಿಗೆ ಹೊರಟು 0230 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದಿದ್ದು ಆಸ್ಪತ್ರೆಯಲ್ಲಿ ಮೃತನ ತಾಯಿ ಚನ್ನಮ್ಮ ಬೆಳಗ್ಗೆ ಫಿರ್ಯಾಧಿ ಕೊಡುವುದಾಗಿ ತಿಳಿಸಿ, ಬೆಳಗ್ಗೆ 6 ಗಂಟೆಗೆ ಶ್ರೀಮತಿ ಚನ್ನಮ್ಮ ಗಂಡ ಹಣಮಂತ ನಾಟೇಕಾರ, ವ:55, ಜಾ:ಹೊಲೆಯ (ಎಸ್.ಸಿ), ಉ:ಹೊಲಮನೆ ಕೆಲಸ ಸಾ:ಬೀರನಾಳ ತಾ:ಶಹಾಪೂರ ಇವರು ಹೇಳಿಕೆ ಫಿರ್ಯಾಧಿ ಕೊಟ್ಟಿದ್ಧೇನಂದರೆ ನನಗೆ ಇಬ್ಬರು ಗಂಡು ಮತ್ತು 3 ಜನ ಹೆಣ್ಣು ಮಕ್ಕಳಿರುತ್ತಾರೆ. ನನ್ನ ಗಂಡನು ಸುಮಾರು 3 ವರ್ಷಗಳ ಹಿಂದೆ ತೀರಿಕೊಂಡಿರುತ್ತಾನೆ. ನನ್ನ ಹಿರಿಮಗ ನಾಗಪ್ಪನು ತನ್ನ ಹೆಂಡತಿ ಮಕ್ಕಳೊಂದಿಗೆ ಬೆಂಗಳೂರಕ್ಕೆ ಹೊಟ್ಟೆ ಪಾಡಿಗೆ ದುಡಿಯಲು ಹೋಗಿರುತ್ತಾನೆ. ಕಿರಿ ಮಗ ಹೆಚ್. ಸಾಬಣ್ಣ ವ:21 ವರ್ಷ ಈತನು ನನ್ನ ಹತ್ತಿರ ಊರಲ್ಲಿಯೇ ಇದ್ದು, ಕಂಪ್ಯೂಟರ ವಿದ್ಯಭ್ಯಾಸ ಮಾಡಿಕೊಂಡಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ: 09/01/2018 ರಂದು ಸಾಯಂಕಾಲ ನನ್ನ ಮಗ ಹೆಚ್. ಸಾಬಣ್ಣನು ತನ್ನ ಅಣ್ಣ ನಾಗಪ್ಪನ ಹೆಂಡತಿಯ ತವರೂರಾದ ದೋರನಹಳ್ಳಿಗೆ ಕೆಲಸದ ಪ್ರಯುಕ್ತ ಹೋಗಿ ಬರುತ್ತೇನೆ ಎಂದು ಹೇಳಿ ಮೋಟರ್ ಸೈಕಲ್ ನಂ. ಕೆಎ 33 ಕ್ಯೂ 0557 ನೇದ್ದನ್ನು ತಾನೇ ಚಲಾಯಿಸಿಕೊಂಡು ಹೋದನು. ನಾನು ಮನೆಯಲ್ಲಿದ್ದೆನು. ಸಾಯಂಕಾಲ 7-15 ಗಂಟೆ ಸುಮಾರಿಗೆ ನನ್ನ ಮಗನಾದ ನಾಗಪ್ಪನು ನನಗೆ ಫೋನ ಮಾಡಿ ತಮ್ಮ ಸಾಬಣ್ಣನು ಮೋಟರ್ ಸೈಕಲ್ ಮೇಲೆ ಬರುತ್ತಿದ್ದಾಗ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಪಕ್ಕದಲ್ಲಿ ನಿಂತ ಭತ್ತದ ರಾಶಿ ಮಷಿನಗೆ ಡಿಕ್ಕಿಪಡಿಸಿ, ಪುಟಿದು ರಸ್ತೆ ಮೇಲೆ ಬಿದ್ದು ಭಾರಿ ಗಾಯಗೊಂಡಿರುತ್ತಾನೆ ಎಂದು ಯಾರೋ ದಾರಿ ಮೇಲೆ ಹೋಗುವವರು ಸಾಬಣ್ಣನ ಫೋನನಿಂದ ಅಕ್ಕ ಮರೆಮ್ಮಳ ಫೋನ ನಂಬರಗೆ ಫೋನ ಮಾಡಿ ಹೇಳಿರುತ್ತಾರೆ. ಗಾಯಗೊಂಡ ಸಾಬಣ್ಣನಿಗೆ 108 ದಲ್ಲಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ನೀನು ತಕ್ಷಣ ಯಾದಗಿರಿಗೆ ಹೋಗು ಎಂದು ಹೇಳಿದಾಗ ನಾನು ಈ ವಿಷಯವನ್ನು ನನ್ನ ಮೈದುನ ಶರಣಪ್ಪ ತಂದೆ ಸಾಬಣ್ಣನಿಗೆ ತಿಳಿಸಿ, ನಾನು ಮತ್ತು ಮೈದುನ ಶರಣಪ್ಪ ಇಬ್ಬರೂ ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ನೋಡಿದೆವು. ನನ್ನ ಮಗ ಸಾಬಣ್ಣನಿಗೆ ಬಲಗಡೆ ತೆಲೆ ಹಿಂಬಾಗಕ್ಕೆ ಭಾರಿ ರಕ್ತ ಮತ್ತು ಗುಪ್ತಗಾಯ, ಮೂಗಿನ ಸೊಳ್ಳೆ ಮೇಲೆ ಭಾರಿ ಗುಪ್ತಗಾಯವಾಗಿ ಮೂಗು ಜಜ್ಜಿ ರಕ್ತ ಸ್ರಾವವಾಗಿತ್ತು. ಎಡಗಡೆ ಕಪಾಳಕ್ಕೆ ಹರಿದ ರಕ್ತಗಾಯವಾಗಿತ್ತು. ಬಲಗಡೆ ಎದೆ ಮೇಲೆ ತರಚಿದ ಗಾಯವಾಗಿತ್ತು. ಅಪಘಾತದ ಬಗ್ಗೆ ಆಸ್ಪತ್ರೆಯಲ್ಲಿದ್ದ ಪ್ರತ್ಯಕ್ಷದಶರ್ಿಯಾದ ಮಹ್ಮದ ತಂದೆ ನಬಿ ಹೊಸ್ಸಳಿ ಸಾ:ನಾಯ್ಕಲ ಈತನಿಗೆ ಕೇಳಿದಾಗ ಅವರು ತಿಳಿಸಿದ್ದೇನಂದರೆ ನಾನು ಕೆ.ಬಿ.ಎನ್ ಹತ್ತಿ ಮಿಲ್ಲದಲ್ಲಿ ಕೆಲಸ ಮಾಡಿ ಸಾಯಂಕಾಲ ಮರಳಿ ಊರಿಗೆ ಬರುತ್ತಿದ್ದಾಗ ಸಾಯಂಕಾಲ 7 ಪಿಎಮ್ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ಹತ್ತಿಮಿಲ್ ಸಮೀಪ ಭತ್ತ ರಾಶಿ ಮಾಡುವ ಯಂತ್ರ ನಂ. ಎಪಿ 25 ಕ್ಯೂ 3380 ನೇದ್ದರ ಬೆರಿಂಗ್ ಹೋಗಿದ್ದರಿಂದ ಅದರ ಚಾಲಕ ರಮೇಶ ತಂದೆ ಶಂಕರ ಗುಗಲೋರ ಸಾ: ಮಲ್ಕಾಪೂರ ತಾ:ಜಿ: ನಿಜಾಮಾಬಾದ (ಎಪಿ) ಈತನು ರಸ್ತೆಯ ಎಡಭಾಗದಲ್ಲಿ ಸ್ವಲ್ಪ ಅಪಾಯಕಾರಿ ಎನ್ನುವ ಸ್ಥಿತಿಯಲ್ಲಿ ನಿಲ್ಲಿಸಿಕೊಂಡು ನಿಂತಿದ್ದು, ಸಾಬಣ್ಣನು ತನ್ನ ಮೋಟರ್ ಸೈಕಲ್ ನಂ. ಕೆಎ 33 ಕ್ಯೂ 0557 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಂತ ಭತ್ತದ ರಾಶಿ ಯಂತ್ರಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ, ಪುಟಿದು ರೋಡಿನ ಮೇಲೆ ಬಿದ್ದು, ಬಲಗಡೆ ತೆಲೆ ಹಿಂಬಾಗಕ್ಕೆ ಭಾರಿ ರಕ್ತ ಮತ್ತು ಗುಪ್ತಗಾಯ, ಮೂಗಿನ ಸೊಳ್ಳೆ ಮೇಲೆ ಭಾರಿ ಗುಪ್ತಗಾಯವಾಗಿ ಮೂಗು ಜಜ್ಜಿ ರಕ್ತ ಸ್ರಾವವಾಗಿರುತ್ತದೆ. ಎಡಗಡೆ ಕಪಾಳಕ್ಕೆ ಹರಿದ ರಕ್ತಗಾಯವಾಗಿತ್ತು. ಬಲಗಡೆ ಎದೆ ಮೇಲೆ ತರಚಿದ ಗಾಯವಾಗಿತ್ತು ನಾನು 108 ಅಂಬ್ಯೂಲೇನ್ಸಗೆ ಫೋನ ಮಾಡಿ ತಿಳಿಸಿ, ಸಾಬಣ್ಣನ ಮೊಬೈಲದಲ್ಲಿ ಕೊನೆಯ ಬಾರಿ ಕರೆ ಮಾಡಿರುವ ನಂಬರಗೆ ಅದೇ ಫೋನಿನಿಂದ ಕರೆ ಮಾಡಿದಾಗ ಅವರ ಅಕ್ಕ ಮರೆಮ್ಮ ಮಾತಾಡಿದ್ದು, ಅವರಿಗೆ ಅಪಘಾತದ ವಿಷಯ ತಿಳಿಸಿ, 108 ದಲ್ಲಿ ಯಾದಗಿರಕ್ಕೆ ಒಯ್ಯುವುದಾಗಿ ತಿಳಿಸಿ, 108 ದಲ್ಲಿ ಯಾದಗಿರಿಗೆ ತಂದಿರುವುದಾಗಿ ಹೇಳಿದನು. ವೈದ್ಯಾಧಿಕಾರಿಗಳು ಸಾಬಣ್ಣನಿಗೆ ಭಾರಿ ಗಾಯಗಳಾಗಿದ್ದು, ಕೂಡಲೇ ಬೇರೆ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದಾಗ ಮತ್ತೆ 108 ಅಂಬ್ಯುಲೇನ್ಸದಲ್ಲಿ ನಾನು ಮತ್ತು ಮೈದುನ ಶರಣಪ್ಪ ಇಬ್ಬರೂ ಕೂಡಿ ಹಾಕಿಕೊಂಡು ರಾಯಚೂರಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ರಾತ್ರಿ 10-30 ಪಿಎಮ್ ಸುಮಾರಿಗೆ ಶಕ್ತಿನಗರ ಸಮೀಪ ನನ್ನ ಮಗ ಹೆಚ. ಸಾಬಣ್ಣನು ಮೃತಪಟ್ಟನು. ಮೃತನ ಶವವನ್ನು ಮರಳಿ ಯಾದಗಿರಿ ಸರಕಾರಿ ಆಸ್ಪತ್ರೆ ಶವಗಾರ ಕೋಣೆಗೆ ತಂದು ಹಾಕಿರುತ್ತೇವೆ. ಕಾರಣ ದಿನಾಂಕ: 09/01/2018 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ಮಗ ಹೆಚ್. ಸಾಬಣ್ಣನು ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಪಕ್ಕದಲ್ಲಿ ಅಪಾಯಕಾರಿಯಾಗಿ ನಿಂತ ಭತ್ತದ ರಾಶಿ ಯಂತ್ರಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ, ಪುಟಿದು ಬಿದ್ದು ಭಾರಿ ಗಾಯಗೊಂಡು ಉಪಚಾರಕ್ಕೆ ಒಯ್ಯುವಾಗ ಮೃತಪಟ್ಟಿರುತ್ತಾನೆ. ಭತ್ತದ ರಾಶಿ ಯಂತ್ರದ ಚಾಲಕ ರಮೇಶನು ಭತ್ತದ ರಾಶಿ ಯಂತ್ರವನ್ನು ಅಪಾಯಕಾರಿ ಸ್ಥಿತಿಯಲ್ಲಿ ನಿಲ್ಲಿಸಿರುತಾನೆ. ಈ ಬಗ್ಗೆ ನನ್ನ ಮಗ ಹೆಚ್. ಸಾಬಣ್ಣ ಮತ್ತು ಭತ್ತದ ರಾಶಿ ಯಂತ್ರ ಚಾಲಕ ರಮೇಶ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿಯನ್ನು 7 ಎಎಮ್ ದವರೆಗೆ ಪಡೆದುಕೊಂಡು ಪ್ರಕರಣ ದಾಖಲ ಮಾಡಿಕೊಳ್ಳಲು ನಮ್ಮ ಠಾಣೆಯ ಶ್ರೀ ಮಲ್ಲಿಕಾಜರ್ುನ ಪಿಸಿ 277 ರವರ ಮುಖಾಂತರ ಕಳುಹಿಸಿದ್ದು, 8-30 ಎಎಮ್ ಕ್ಕೆ ಠಾಣೆಗೆ ಬಂದು ಪಿಸಿ 277 ರವರು ಸದರಿ ಹೇಳಿಕೆ ಫಿರ್ಯಾಧಿ ಹಾಜರಪಡಿಸಿದ್ದು, ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 03/2018 ಕಲಂ: 279,304 (ಎ) ಐಪಿಸಿ ಸಂ 122 ಐಎಮ್ವಿ ಎಕ್ಟ್ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

No comments:
Post a Comment