Police Bhavan Kalaburagi

Police Bhavan Kalaburagi

Friday, February 16, 2018

BIDAR DISTRICT DAILY CRIME UPDATE 16-02-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-02-2018

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 14/2018, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ಫಿರ್ಯಾದಿ ಪುಂಡಲಿಕ ತಂದೆ ಬಸವಣಪ್ಪಾ ಭುರಾಪೂರೆ ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ಬೋರಾಳ ರವರು ತನ್ನ ಹೆಂಡತಿ ಶಾಂತಮ್ಮಾ, ಮಗಳು ಸಂಗೀತಾ ಕೂಡಿಕೊಂಡು ಚಾಂಗಲೇರಾ ವೀರಭದ್ರೇಶ್ವರ ಮಂದಿರಕ್ಕೆ ಹೋಗಲು ಮನ್ನಾಏಖೇಳ್ಳಿಯಲ್ಲಿ ನಿಂತ ಆಟೋ ನಂ. ಕೆಎ-32/ಬಿ-7806 ನೇದರಲ್ಲಿ ಕುಳಿತುಕೊಂಡಿದ್ದು ಹಾಗೂ ಅದೇ ಆಟೋದಲ್ಲಿ ಚಿತ್ರಶೇಖರ ತಂದೆ ಕಲ್ಲಪ್ಪಾ ಅವರ ಹೆಂಡತಿ ಪಾರ್ವತಿ ಗಂಡ ಚಿತ್ರಶೇಖರ ದೇಗಲಮಡಿ ರವರು ಕುಳಿತುಕೊಂಡಿದ್ದು, ಫಿರ್ಯಾದಿಯು ಕುಳಿತುಕೊಂಡ ಸದರಿ ಆಟೋ ಚಾಲಕನಾದ ತುಕ್ಕಪ್ಪಾ ತಂದೆ ಬಕ್ಕಪ್ಪಾ ಸಾ: ಚಾಂಗಲೇರಾ ಇತನು ತನ್ನ ಆಟೋವನ್ನು ಮನ್ನಾಎಖೆಳ್ಳಿಯಿಂದ ಚಾಂಗಲೇರಾ ಕಡೆಗೆ ಹೋಗುವಾಗ ಚಿಂಚೋಳಿ- ಬೀದರ ರೋಡಿನ ಮೇಲೆ ವಿಠಲಪೂರ ಸರಕಾರಿ ಶಾಲೆಯ ಹತ್ತಿರ ಚಿಂಚೋಳಿಯಿಂದ ಅಂದರೆ ವಿಠಲಪೂರ ಕಡೆಯಿಂದ ಲಾರಿ ನಂ. ಎಮ್.ಹೆಚ್-43/ ಯು-54 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತದಿಂದ ನಡೆಸಿಕೊಂಡು ಬಂದು ಆಟೋಗೆ ಒಮ್ಮೇಲೆ ಡಿಕ್ಕಿ ಮಾಡಿ ತನ್ನ ಲಾರಿ ಬಿಟ್ಟು ಆರೋಪಿಯು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗಾಲಿಗೆ, ತೊಡೆಗೆ ಗುಪ್ತಗಾಯವಾಗಿರುತ್ತದೆ ಹಾಗೂ ಫಿರ್ಯಾದಿಯ ಹೆಂಡತಿಗೆ ಎದೆಗೆ, ಹಣೆಗೆ, ಗಲ್ಲಕ್ಕೆ, ಬಲಭುಜಕ್ಕೆ,ಎರಡು ತೊಡೆಗೆ, ತಲೆಗೆ ಭಾರಿ ರಕ್ತಗಾಯ, ಮತ್ತು ಗುಪ್ತಗಾಯವಾಗಿರುತ್ತದೆ, ಮಗಳಾದ ಸಂಗೀತಾಳಿಗೆ ಎದೆಗೆ ಗುಪ್ತಗಾಯ, ಹಣೆಗೆ ರಕ್ತಗಾಯ, ಬಲಭುಜಕ್ಕೆ ಗುಪ್ತಗಾಯವಾಗಿರುತ್ತದೆ,  ಆಟೋ ಚಾಲಕನಾದ ತುಕ್ಕಪ್ಪ ಇತನಿಗೆ ಕುತ್ತಿಗೆಗೆ ಭಾರಿ ರಕ್ತಗಾಯ, ಬಲಗಣ್ಣಿನ ಮೇಲೆ, ಗಟಾಯಿಗೆ, ಸೊಂಟಕ್ಕೆ ಭಾರಿ ಗುಪ್ತಗಾಯವಾಗಿರುತ್ತವೆ, ಚಿತ್ರಶೇಖರ ತಂದೆ ಬಕ್ಕಪ್ಪಾ ಇತನ ಬಲಗೈ ಎಡಫಕಳಿಯಲ್ಲಿ ತರಚಿದ ಗಾಯವಾಗಿರುತ್ತವೆ ಮತ್ತು ಪಾರ್ವತಿ ಗಂಡ ಚಿತ್ರಶೇಖರ ಇವಳ ಮುಗಿಗೆ ರಕ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಎಲ್ಲರು ಬೇರೆ ವಾಹನದಲ್ಲಿ ಕುಳಿತುಕೊಂಡು ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ಬಂದು  ಚಿಕಿತ್ಸೆ ಕುರಿತು ದಾಖಲಾಗಿದ್ದು ಇರುತ್ತದೆ, ನಂತರ ಫಿರ್ಯಾದಿ ಮತ್ತು ಹೆಂಡತಿ ಶಾಂತಮ್ಮಾ, ಮಗಳು ಸಂಗೀತಾ ರವರಿಗೆ ಫಿರ್ಯಾದಿಯವರ ಸಂಬಂಧಿ ರಾಜಕುಮಾರ ರರು 108 ಅಂಬುಲೆನ್ಸ್ ದಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ ಹಾಗೂ ಗಾಯಗೊಂಡ ಆಟೋ ಚಾಲಕ ತುಕ್ಕಪ್ಪನಿಗೆ ನರಸಪ್ಪಾ ತಂದೆ ಬೀರಪ್ಪಾ, ವೀರಾರೆಡ್ಡಿ, ಮಂಜುನಾಥ ಚಾಂಗಲೇರಾ ರವರು ಕೂಡಿಕೊಂಡು ಬೀದರ ಅಪೆಕ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತಾರೆಂದು ಕೊಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತಿನಿಖೆ ಕೈಗೊಳ್ಳಲಾಗಿದೆ.

No comments: