Police Bhavan Kalaburagi

Police Bhavan Kalaburagi

Friday, February 2, 2018

KALABURAGI DISTRICT REPORTED CRIMES

ದರೋಡೆಗೆ ಹೊಂಚು ಹಾಕಿ ಕುಳಿತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 31-01-2018 ರಂದು  ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ  ಆಳಂದ ರೋಡಿಗೆ ಇರುವ ಚಿಂಚೋಳ್ಳಿ ಲೇಔಟ ಹಿಂದುಗಡೆ ಇರುವ ಬಯಲು ಪ್ರದೇಶದಲ್ಲಿರುವ ಗೀಡದ ಕೇಳಗೆ ಕೆಲವು ಜನರು ದರೋಡೆ ಮಾಡಲು ಹೊಂಚ್ಚು ಹಾಕಿ ಕೂಳಿತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಚಿಂಚೋಳ್ಳಿ ಲೇಔಟ ಹಿಂದುಗಡೆ ಇರುವ ಬಯಲು ಪ್ರದೇಶದಲ್ಲಿರುವ ಸರಕಾರಿ ಜಾಲಿ ಗೀಡಗಳ ಹತ್ತಿರ ಹೋಗುತ್ತಿದ್ದಂತೆ ಗೀಡದ ಕೇಳಗೆ ಕುಳಿತಿದ್ದ 5 ಜನರು ನಮ್ಮ ಪೊಲೀಸ ಜೀಪನ್ನು ನೋಡಿದ ತಕ್ಷಣ ಓಡಿ ಹೋಗುತ್ತಿದ್ದು ಆಗ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಸದರಿಯವರ ಬೇನ್ನು ಹತ್ತಿ 4 ಜನರಿಗೆ ಹಿಡಿದುಕೊಂಡಿದ್ದು ಅವರಲ್ಲಿ ಒಬ್ಬನು ಓಡಿ ಹೋಗಿದ್ದು. ನಂತರ ನಾನು ಹಿಡಿದುಕೊಂಡವರಿಗೆ ವಿಚಾರಣೆಗೊಳಪಡಿಸಿದಾಗ ಸದರಿಯವರು ತಮ್ಮ ಹೆಸರು 1. ಅಬ್ದುಲ ಖಾದರ ತಂದೆ ಅಬ್ದಲ ಸತ್ತಾರ ಸಾ: ಇಸ್ಲಾಮಾಬಾದ ಕಾಲೋನಿ ಮಿಲತ್ ನಗರ ಕಲಬುರಗಿ ಅಂತ ಹೇಳಿದ್ದು. ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ಮತ್ತು ಒಂದು ಹಾಕಿ ಸ್ಟಿಕ್ ದೊರೆತಿದ್ದು 2. ಅಬ್ದುಲ ಖದೀರ ತಂದೆ ಅಬ್ದಲು ಸತ್ತಾರ ಸಾ: ಇಸ್ಲಾಮಾಬಾದ ಕಾಲೋನಿ ಮಿಲತ್ ನಗರ ಕಲಬುರಗಿ ಇತನ ಹತ್ತಿರ ಒಂದು ಕಂಟ್ರಿ ಮೇಡ ಪಿಸ್ತೂಲ ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ದೊರೆತಿದ್ದು 3. ರವಿಂದ್ರ @ ಅಭಿಮನ್ಯೂ ತಂದೆ ಸಾಹೇಬರಾವ ಕೊಳಿ ಸಾ: ಕರಜಗಿ ತಾ: ಅಫಜಲಪೂರ ಜಿ: ಕಲಬುರಗಿ ಇತನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ಮತ್ತು ಒಂದು ಕಬ್ಬಿಣದ ಚಾಕು ದೊರೆತಿದ್ದು ಮತ್ತು 4. ದತ್ತಪ್ಪ @ ದತ್ತು ತಂದೆ ಸಾಯಿಬಣ್ಣ ತಳವಾರ ಸಾ: ಕರಜಗಿ ತಾ: ಅಫಜಲಪೂರ ಜಿ:ಕಲಬುರಗಿ ಇತನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ಮತ್ತು 500 ಗ್ರಾಂ ಕಾರದ ಪುಡಿ ದೊರೆತಿದ್ದು. ನಂತರ ಸದರಿಯವರಿಗೆ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸದರಿಯವರು ತಿಳಿಸಿದ್ದೆನೆಂದರೆ, ನಿರ್ಜನ ಪ್ರದೇಶದಲ್ಲಿ ಸಂಚರಿಸುವ ಜನರಿಗೆ ಹೆದರಿಸಿ ಅವರಿಂದ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಿತ್ತಿಕೊಳ್ಳು ಸಂಬಂದ ಹೊಂಚ್ಚುಹಾಕಿ ಕುಳಿತಿರುವ ಬಗ್ಗೆ ತಿಳಿಸಿದ್ದು ನಂತರ ಸದರಿಯವರಿಗೆ ಓಡಿ ಹೊದವನ ಹೆಸರು ವಿಳಾಸ ವಿಚಾರಸಲು ಓಡಿ ಹೋದವನ ಹೆಸರು ಈರಪ್ಪ ತಂದೆ ಗಂಗಪ್ಪ ನಾಯಿಕೊಡಿ ಸಾ: ಕರಜಗಿ ತಾ: ಅಫಜಲಪೂರ ಜಿ: ಕಲಬುರಗಿ ಅಂತ ತಿಳಿಸಿದ್ದು ಇರುತ್ತದೆ. ಸದರಿಯವರನ್ನು ವಶಕ್ಕೆ ತೆಗೆದುಕೊಂಡು ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ  : ಶ್ರೀ ಪ್ರಕಾಶ ತಂದೆ ಮಹಾದೇವಪ್ಪಾ ವಟಾರ ಸಾ:ಕೇರಿ ಭೋಸಗಾ ತಾ:ಜಿ:ಕಲಬುರಗಿ ಇವರು ತಮ್ಮ ಗ್ರಾಮದ ರ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ನಮ್ಮ ಗ್ರಾಮ ಸಿಮಾಂತರದಲ್ಲಿ ನಮಗೆ 7 ಎಕರೆ ಹೋಲ ಇದ್ದು ಸದರಿ ಹೊಲವನ್ನು ಈಗ 10-15 ವರ್ಷಗಳಿಂದ ಅನುರಾಧ ಗಂಡ ಶರಣಕುಮಾರ ರಜಪೂತ ಸಾ: ಶಹಾಬಜಾರ ಜಿಡಿಎ ಕಾಲೋನಿ ಕಲಬುರಗಿ ಇವಳು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದು ಇರುತ್ತದೆ. ಸದರಿ ನಮ್ಮ ಹೊಲದ ವಿಷಯವಾಗಿ ನಮ್ಮ ಹಾಗೂ ಅನುರಾಧ ಮಧ್ಯ ತಕರಾರು ಇದ್ದು ಈ ಕುರಿತು ಕೊರ್ಟನಲ್ಲಿ ಕೇಸು ನಡೆದಿದ್ದು ಇರುತ್ತದೆ.ನಾನು ಕಲಬುರಗಿ ನಗರಕ್ಕೆ ಕೂಲಿ ಕೇಲಸಕ್ಕೆ ಬಂದು ಹೋಗುತ್ತಿದ್ದರಿಂದ ನನಗೆ ಶ್ರೀಕಾಂತ ರಡ್ಡಿ ಇತನ ಪರಿಚಯವಾಗಿದ್ದು ನಾನು ಆಗಾಗ ಶ್ರೀಕಾಂತ ರಡ್ಡಿ ಹತ್ತಿರ ಹೋಗಿ ಮಾತನಾಡುತ್ತಾ ಬಂದಿದ್ದು ಇರುತ್ತದೆ. ನಿನ್ನೆ ದಿನಾಂಕ 30.01.2018 ರಂದು ಮಧ್ಯಾನ 2 ಗಂಟೆಯ ಸುಮಾರಿಗೆ ನಾನು ಕಲಬುರಗಿ ನಗರದ ಆಳಂದ ಚೆಕ್ಕ ಪೋಸ್ಟ ಹತ್ತಿರ ಇದ್ದಾಗ ನನಗೆ ಶ್ರ್ರೀಕಾಂತ ರಡ್ಡಿ ಇತನು ಪೋನ ಮಾಡಿ ನಿನ್ನ ಸಂಗಡ ಮಾತನಾಡುವದು ಇದೆ ನಮ್ಮ ಮನೆ ಹತ್ತಿರ ಇರುವ ಗುಮ್ಮಜಕ್ಕೆ ಬಾ ಅಂತ ಹೇಳಿದ್ದು ಅದರಂತೆ ನಾನು ಮಧ್ಯಾನ 2:15 ಗಂಟೆಯ ಸುಮಾರಿಗೆ ಶ್ರೀಕಾಂತ ರಡ್ಡಿ ಮನೆ ಹತ್ತಿರ ಇರುವ  ಗುಮ್ಮಜಕ್ಕೆ ಹೋಗಿದ್ದು ಅಲ್ಲಿ ಶ್ರೀಕಾಂತ ರಡ್ಡಿ ಮತ್ತು ಇನ್ನೂ 10-15 ಜನ ಹುಡುಗರು ಇದ್ದು ಅಲ್ಲಿ ಇದ್ದ ಹುಡುಗರ ಹೆಸರು ನನಗೆ ಗೊತ್ತಿಲ್ಲದಕ್ಕೆ ನಾನು ಶ್ರೀಕಾಂತ ರಡ್ಡಿಗೆ ಯಾಕೆ ನನಗೆ ಕರೆದಿದ್ದಿ ಅಂತ ಅಂದಿದ್ದು ಆಗ ಶ್ರೀಕಾಂತ ರಡ್ಡಿ ಇತನು ಅಲ್ಲೆ ಇದ್ದ ಕಾರಿನಲ್ಲಿ ನನಗೆ ಎತ್ತಿಹಾಕಿದ್ದು ನಂತರ ಶ್ರೀಕಾಂತ ರಡ್ಡಿ  ಮತ್ತು ಇನ್ನೂ 3 ಜನ ಹುಡುಗರು ಕಾರಿನಲ್ಲಿ ಕುಳಿತಿದ್ದು, ನಂತರ ನನಗೆ ಕರೆದುಕೊಂಡು ಆಳಂದ ಕಡೆಗೆ ಹೋಗುವ ರೋಡಿಗೆ ಕರೆದುಕೊಂಡು ಹೋಗಿದ್ದು ಪಟ್ಟಣ ಗ್ರಾಮ ದಾಟಿದ ನಂತರ ಸ್ವಲ್ಪ ಮುಂದೆ ಹೋಗಿ ಜವಳಿ ಇವರ ಕಲ್ಯಾಣ ಮಂಟಪದಲ್ಲಿ ನನಗೆ ಕರೆದುಕೊಂಡು ಹೋಗಿ ನನಗೆ ಕಾರಿನಿಂದ ಇಳಿಸಿದ್ದು ಆಗ ನಾನು ಶ್ರೀಕಾಂತ ರಡ್ಡಿ ಇತನಿಗೆ ನನಗೆ ಇಲ್ಲಿಗೆ ಯಾಕರೆ ಕರೆದುಕೊಂಡು ಬಂದಿದ್ದದಿರಿ ಅಂತ ಅಂದಾಗ ಶ್ರೀಕಾಂತ ರಡ್ಡಿ ಇತನು ಏ ರಂಡಿ ಮಗನೆ ನೀನು ಅನುರಾಧಳೊಂದಿಗೆ ಹೊಲದ ವಿಷಯವಾಗಿ ಜಗಳ ಮಾಡುತ್ತಿ ಹೊಲ್ಯಾ ಸೂಳಿ ಮಗನೆ ನೀನಗೆ ಕೊಲೆ ಮಾಡಲು ಅನುರಾಧ ಇವಳು 20 ಲಕ್ಷ ರೂಪಾಯಿಗೆ ನನಗೆ ಸುಪಾರಿ ಕೊಟ್ಟಿದ್ದಾಳೆ ಸೂಳಿ ಮಗನೆ ನೀನಗೆ ಖಲಾಸ ಮಡಿಯೇ ಬಿಡುತ್ತೇವೆ ಅಂತ ಹೇಳಿ ಶ್ರೀಕಾಂತ ರಡ್ಡಿ ಇತನು ತನ್ನ ಕೈಯಲಿದ್ದ ತಲವಾರ ಹಿಡಿಕೆಯಿಂದ ನನ್ನ ಹೊಟ್ಟೆಗೆ ಹೊಡೆದು ಗುಪ್ತಗಾಯ ಪಡಿಸಿದ್ದು ಆಗ ಅವನ ಸಂಗಡ ಇದ್ದವರು ತಮ್ಮ ಕೈಗಳಿಂದ ಮತ್ತು ಕಾಲಿನಿಂದ ನನ್ನ ಎದೆಗೆ ಹೊಟ್ಟೆಗೆ, ಬೇನ್ನಿಗೆ ದೇಹದ ಎಲ್ಲಾ ಕಡೆಗೆ ಹೊಡೆದು ಗುಪ್ತಗಾಯ ಪಡಿಸಿದ್ದು ಸದರಿಯವರು ನನಗೆ ಮಾತನಾಡು ಅವಕಾಶ ಕೊಡದೆ ಒಂದೆ ಸವನೆ ಹೊಡೆಯುತ್ತಿದ್ದರಿಂದ ನನಗೆ ಪ್ರಜ್ಞೇತಪ್ಪಿದ್ದು ನಾನು ಸತ್ತಿದ್ದೇನೆ ಅಂತ ತಿಳಿದು ಸದರಿಯವರು ನನಗೆ ಹೊಡೆಯುವದನ್ನು ಬಿಟ್ಟಿದ್ದು ಇರುತ್ತದೆ. ಸ್ವಲ್ಪ ಸಮಯದ ನಂತರ ನನಗೆ ಎಚ್ಚರವಾಗಿದ್ದು ಆಗ ನಾನು ಎದ್ದು  ನೋಡಲು ಅಲ್ಲಿ ಯಾರು ಇರಲಿಲ್ಲ ನಂತರ ನಾನು ನಿಧಾನವಾಗಿ ರಸ್ತೆಗೆ ಬಂದು ರಸ್ತೆಯ ಮೇಲೆ ಸಂಚರಿಸುತ್ತಿದ್ದ ಯಾವುದೊ ವಾಹನದಲ್ಲಿ ಕುಳಿತು ಕಲಬುರಗಿಗೆ ಬಂದು ನಂತರ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೇಗೆ ಸೇರಿಕೆಯಾಗಿದ್ದು ಇರುತ್ತದೆ. ಶ್ರೀಕಾಂತ ರಡ್ಡಿ ಇತನು ನನಗೆ ಕೊಲೆ ಮಾಡಲು ಅನುರಾಧಳಿಂದ ಸುಫಾರಿ ಪಡೆದುಕೊಂಡಿದ್ದು ಅದರಂತೆ ಶ್ರೀಕಾಂತ ರಡ್ಡಿ ಇತನು ತನ್ನ ಸಂಗಡ 10-15 ಜನ ಹುಡುಗರನ್ನು ಕರೆದುಕೊಂಡು ನನಗೆ ಕಾರಿನಲ್ಲಿ ಎತ್ತಿಹಾಕಿಕೊಂಡು ಹೋಗಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ನನಗೆ ತಲವಾರ ಹಿಡಿಕೆಯಿಂದ ಮತ್ತು ಕೈಯಿಂದ, ಕಾಲಿನಿಂದ ಹೊಡೆಬಡೆ ಮಾಡಿದವರ ವಿರುಧ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಶರಣಮ್ಮ ಗಂಡ ಮಾಣಿಕ್ಕಪ್ಪ ಹೊಸದೊಡ್ಡಿ ಸಾ||ವ್ಹಿ ಕೆ ಸಲಗರ ಇವರು ಈಗ ಸುಮಾರು 18 ವರ್ಷದ ಹಿಂದೆ ನನ್ನ ಗಂಡನು ಮೃತಪಟ್ಟಿದ್ದು, ನನಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳೇ ಹೆಣ್ಣು ಮಗಳಿದ್ದು ಅವಳು ಮದುವೆ ಮಾಡಿದ್ದು ಇರುತ್ತದೆ. ಗಂಡು ಮಕ್ಕಳಲ್ಲಿ ಹಿರಿಯ ಮಗನಾದ ಆನಂದ ಈತನ ಮದುವೆ ಮಾಡಿರುತೇನೆ. ಕಿರಿಯ ಮಗನಾದ ಆನಂದ ಈತನ ಮದವೆ ಮಾಡಿರುವುದಿಲ್ಲ. ಹಿರಿಯ ಮಗ ಸೊಸೆ ಹಾಗೂ ಇಬ್ಬರು ಗಂಡು ಮಕ್ಕಳು ಮತ್ತು ನಾನು ಎಲ್ಲರೂ ಒಂದೆ ಮನೆಯಲ್ಲಿ ವಾಸವಾಗಿರುತ್ತೇವೆ. ನನ್ನ ಗಂಡನ ಪಾಲಿಗೆ ಪಿತ್ರಾರ್ಜಿತವಾಗಿ 12 ಎಕರೆ ಜಮೀನು ಇದ್ದು ಜಮೀನು ಈಗ ನನ್ನ ಹೆಸರಿನಲ್ಲಿಯೇ ಇರುತ್ತದೆ. ನನ್ನ ಕಿರಿಯ ಮಗನಾದ ಅರವಿಂದನು ಹಿರಿಯ ಮಗ ಆನಂದನಿಕಿಂತ ಹೆಚ್ಚಿಗೆ ವಿದ್ಯಾಭ್ಯಾಸ ಮಾಡಿದ್ದರಿಂದ ನಮ್ಮ ಹೊಲದ ಒಕ್ಕಲುತನ ಎಲ್ಲಾ ಮೇಲುಸ್ತುವಾರಿಯನ್ನು ಅವನೆ ಮಾಡಿಕೊಂಡು ಹೋಗುತ್ತಿದ್ದನು. ನನ್ನ ಹೆಸರಿನಲ್ಲಿ ನಮ್ಮೂರ ಸೀಮಾಂತರದ ಸರ್ವೆ ನಂ 98 ರಲ್ಲಿ 6 ಎಕರೆ ಮತ್ತು ಸರ್ವಿ  ನಂ 99 ರಲ್ಲಿ 6 ಎಕರೆ ಜಮೀನು ಇದ್ದು ಸದರಿ ಜಮೀನನ ಮೇಲೆ ಈಗ ಸುಮಾರು 6-7 ವರ್ಷಗಳ ಹಿಂದೆ ನಮ್ಮೂರಿನ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ 50,000/- ರೂಪಾಯಿ ಬೆಳೆಸಾಲ ತಗೆದುಕೊಂಡಿದ್ದು 2015-16 ಮತ್ತು 2016-17 ಸಾಲಿನಲ್ಲಿ ಅತಿವೃಷ್ಠಿ ಮತ್ತು ಅನಾವೃಷ್ಠಯಿಂದಾಗಿ ಬೆಳೆ ಬೆಳೆಯದೇ ಇರುವುದರಿಂದ ಸದರಿ ಸಾಲವನ್ನು ಕಟ್ಟಿರುವುದಿಲ್ಲ. ಅಲ್ಲದೇ ಆ ಸಂದರ್ಭದಲ್ಲಿ ಕೃಷಿ ಚಟುಚಟಿಕೆಗಾಗಿ ಸಂಬಂಧಿಕರಾದ ರಾಜಕುಮಾರ ತಂದೆ ಶಿವಾನಂದ ಗುಗಳೆ ಇವರ ಹತ್ತಿರ ಕೈಗಡವಾಗಿ 50000/- ರೂಪಾಯಿ ನಾಗಯ್ಯ ತಂದೆ ರೇವಣಸಿದ್ದಯ್ಯ ಜಂಗಿನಮಠ ಇವರ ಹತ್ತಿರ ಕೈಗಡವಾಗಿ 50,000/- ರೂಪಾಯಿ ಮತ್ತು ಮೇಘರಾಜ ತಂದೆ ಶಿವಣ್ಣ ಶಂಕರಶೆಟ್ಟಿ ಇವರ ಹತ್ತಿರ 50000/- ಕೈಗಡವಾಗಿ ಹೀಗೆ ಒಟ್ಟು 1,50,000/- ರೂಪಾಯಿ ಕೈಗಡವಾಗಿ ಸಾಲ ತಗೆದು ಖರ್ಚು ಮಾಡಿದ್ದು ಇರುತ್ತದೆ. ಈ ಸಾಲದ ವಿಷಯದ ಬಗ್ಗೆ ಕಿರಿಯಮಗನಾದ ಅರವಿಂದನು ಹೇಗೆ ಸಾಲ ಮರುಪಾವತಿ ಮಾಡಬೇಕೆಂದು ಚಿಂತಿಸುತ್ತ ಆಗಗ ನನ್ನ ಮುಂದೆ ಹಾಗೂ ನನ್ನ ಹಿರಿಯ ಮಗನ ಮುಂದೆ ಹೇಳಿ ದುಃಖ ಪಟ್ಟಿದ್ದು. ನಾವು ಅವನಿಗೆ ಸಮಾಧಾನ ಹೇಳಿ ಧೈರ್ಯ ತುಂಬಿರುತ್ತೇವೆ. ಈ ವರ್ಷ ಹೊಲದಲ್ಲಿ ತೋಗರಿ ಮತ್ತು ಸೊಯಿಬಿನ್ ಬೆಳೆ ಬಿತ್ತಿ ರಾಶಿಮಾಡಿದ್ದು ನಿರೀಕ್ಷೆಗೆ ತಕ್ಕಂತೆ ಇಳುವರಿ ಬರದೆ ಇರುವುದರಿಂದ ಬ್ಯಾಂಕಿನ ಸಾಲಾ ಹಾಗೂ ಕೈಗಡವಾಗಿ ತಂದಿರುವ ಸಾಲದ ಹಣ ಹೇಗೆ ಕಟ್ಟಬೇಕೆಂದು ಈಗ ಸುಮಾರು ಒಂದು ವಾರದ ಹಿಂದೆ ನನ್ನ ಮಗ ಅರವಿಂದನು ನನ್ನ ಮುಂದೆ ಹೇಳಿ ದುಃಖ ಪಟ್ಟಿದ್ದು, ಅಲ್ಲದೇ ಸಾಲ ತೀರಿಸುವ ವಿಷಯವಾಗಿ ಇತ್ತಿತ್ತಲಾಗಿ ಸುಮಯಕ್ಕೆ ಸರಿಯಾಗಿ ಊಟ, ನಿದ್ರೆ, ಮಾಡದೇ ಚಿಂತೆಮಾಡುತ್ತಿದ್ದನು. ದಿನಾಂಕ:31/01/2018 ಬುಧುವಾರದ ದಿವಸ ರಾತ್ರಿ 9-30 ಗಂಟೆ ಸುಮಾರಿಗೆ ನಾನು ಇಬ್ಬರು ಮಕ್ಕಳು ಹಾಗೂ ಸೊಸೆ ಎಲ್ಲರೂ ಕೂಡಿ ಊಟಮಾಡಿ, ನಾನು ಪಡಸಾಲೆಯಲ್ಲಿ ಮಲಗಿಕೊಂಡಿದ್ದು ಆನಂದನು ತನ್ನ ಹೆಂಡತಿಯೊಂದಿಗೆ ತಮ್ಮ ಮಲಗುವ ಕೊಣೆಯಲ್ಲಿ ಮಲಗಿಕೊಂಡರು. ಅರವಿಂದನು ಟಿ.ವಿ ಕೊಣೆಯಲ್ಲಿ ಟಿ.ವಿ ನೋಡುತ್ತಾ ಮಲಗಿಕೊಂಡಿದನು, ಮರು ದಿವಸ ದಿನಾಂಕ: 01/02/2018 ರಂದು ಗುರುವಾರದ ದಿವಸ ಮುಂಜಾನೆ 7-00 ಗಂಟೆ ಯಾದರು ಸಹ ಅರವಿಂದನು ಎಳದೆ ಇರುವುದರಿಂದ ನಾನು ಅವನು ಮಲಗಿದ ಕೊಣೆಯ ಬಾಗಿಲು ಬಡೆದು ಕೂಗಲಾಗಿ ಓಕೊಡದೆ ಇರುವುದರಿಂದ ಪುಃನ ನಾನು ಮತ್ತು ನನ್ನ ಹಿರಿಯ ಮಗ ಇಬ್ಬರು ಕೂಡಿ ಎಷ್ಟೊತ್ತು ಕಬಾಗಿಲು ತಟ್ಟಿದರು ಸಹ ಬಾಗಿಲು ತೆರೆಯದೆ ಇದ್ದಿದ್ದರಿಂದ ಕೊಣೆಯ ಹಿಂದಿನ ಕಿಟಕಿಯಲ್ಲಿ ಹತ್ತಿರ ಹೋಗಿ ಇಣುಕಿ ನೋಡಲಾಗಿ ನನ್ನ ಮಗ ಅರವಿಂದನು ಕೊಣೆಯ ಮೇಲ್ಚಾವಣಿ ಕಬ್ಬಿಣದ ಕೊಂಡಿಗೆ ಮಪಲಾರದಿಂದ ಕುತ್ತಿಗೆಗೆ ನೇಣುಹಾಕಿಕೊಂಡಿದ್ದು. ನಂತರ ಜೋರಾಗಿ ಬಾಗಿಲು ತಳ್ಳಿ ಬಾಗಿಲು ತೆರೆದು ಒಳಗೆ ಹೋಗಿ ನೋಡಲಾಗಿ ನನ್ನ ಮಗ ಮೃತ ಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: