Police Bhavan Kalaburagi

Police Bhavan Kalaburagi

Sunday, February 11, 2018

Yadgir District Reported Crimes Updated on 11-02-2018


                                          Yadgir District Reported Crimes
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 13/2018 PÀ®A 279 ಐಪಿಸಿ ಸಂಗಡ 192(), 190(2), 196, 3/181 ಐಎಂವಿ ಆಕ್ಟ್:- ದಿನಾಂಕ 10/02/2018  ರಂದು ಸಾಯಂಕಾಲ 4-30 ಪಿ.ಎಂ.ಕ್ಕೆ ಮಾನ್ಯ ಸುಖದೇವ್  ಪಿ.ಎಸ್. ಸಾಹೇಬರು ಸಂಚಾರಿ ಪೊಲೀಸ್ ಠಾಣೆ ಯಾದಗಿರಿರವರು ಠಾಣೆಗೆ ಬಂದು ತಮ್ಮದೊಂದು ಲಿಖಿತ ವರದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಸುಖದೇವ್ ಪಿ.ಎಸ್. ಸಂಚಾರಿ ಪೊಲೀಸ ಠಾಣೆ ಯಾದಗಿರಿ ತಮಗೆ ವರದಿ ಮೂಲಕ ಸೂಚಿಸುವುದೆನೆಂದರೆ ಇಂದು ದಿನಾಂಕ: 10/02/2018 ರಂದು ಸಾಯಂಕಾಲ 4 ಪಿ.ಎಂ.ಸುಮಾರಿಗೆ ನಾನು ಯಾದಗಿರಿ ನಗರದ ಸಂಚಾರಿ ಕರ್ತವ್ಯ ಕುರಿತು ನಾನು ಮತ್ತು ಸಿಬ್ಬಂದಿಯವರೊಂದಿಗೆ ಕೂಡಿಕೊಂಡು ಯಾದಗಿರಿ ನಗರದ ಶಾಸ್ತ್ರಿ ವೃತ್ತದ ಹತ್ತಿರ ಕರ್ತವ್ಯದ ಮೇಲಿರುವಾಗ  ಯಾದಗಿರ ಹಳೆ ಬಸ್ ನಿಲ್ದಾಣದ ಕಡೆಯಿಂದ ಒಂದು ಆಟೋ ಟಂ,ಟಂ ನಂಬರ ಕೆಎ-33, 5348 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬರುತ್ತಿರುವದನ್ನು ಕಂಡು ಸದರಿ ವಾಹನಕ್ಕೆ ಕೈ ಮಾಡಿ ನಿಲ್ಲಿಸಿ ನೋಡಲು ಆಟೋದಲ್ಲಿ ಸುಮಾರು  12 ಜನರು ಇದ್ದು ತನ್ನ ಪರಮಿಟ್ ಉಲ್ಲಂಘನೆ ಮಾಡಿ ಹೆಚ್ಚಿನ ಜನರನ್ನು ಹಾಕಿಕೊಂಡು ಹೊರಟಿದ್ದು, ಆಟೋ ವಾಹನ ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಮಂಜುನಾಥ ತಂದೆ ಮಲ್ಲಿಕಾರ್ಜುನ ಅಂಗಡಿ ವಯ;24 ವರ್ಷ, ಜಾ;ಲಿಂಗಾಯತ್, ;ಆಟೋ ನಂ.ಕೆಎ-33, 5348 ನೇದ್ದರ ಚಾಲಕ, ಸಾ;ತಾತಳಗೇರಿ ತಾ;ಜಿ;ಯಾದಗಿರಿ ಅಂತಾ ತಿಳಿಸಿದ್ದು, ಸದರಿ ಆಟೋದ ದಾಖಲಾತಿಗಳನ್ನು ಹಾಜರುಪಡಿಸಲು ಚಾಲಕನಿಗೆ ಸೂಚಿಸಿದಾಗ ಆಟೋದ ಇನ್ಸುರೆನ್ಸ್, ತನ್ನ ಚಾಲನ ಪ್ರಮಾಣ ಪತ್ರ, ವಾಯು ಮಾಲಿನ್ಯ ಪ್ರಮಾಣ ಪತ್ರ ಹಾಜರುಪಡಿಸಿರುವುದಿಲ್ಲ. ಸದರಿ ವಾಹನವನ್ನು ಚಾಲಕನ ಸಮೇತ ಮುಂದಿನ ಕ್ರಮ ಕುರಿತು ತಮ್ಮ ಮುಂದೆ  ಹಾಜರು ಪಡಿಸಿದ್ದು ಇರುತ್ತದೆಸದರಿ ಆಟೋ ಟಂ,ಟಂ ನಂ.ಕೆಎ-33, 5348  ನೆದ್ದರ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 13/2018 ಕಲಂ 279 ಐಪಿಸಿ ಸಂಗಡ 192(), 190(2), 196, 3/181 ಐಎಂವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
           
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 26/2018 ಕಲಂ 32,34 ಕೆ,ಇ ಯಾಕ್ಟ್;-  ದಿನಾಂಕ-10-02-2018 ರಂದು 09-45 ಪಿ.ಎಮ್ ಕ್ಕೆ ಮಾನ್ಯ ಪಿ,ಎಸ್,ಐ ಸಾಹೇಬರು ಬಳಿಚಕ್ರದ ದೈವ ಕೃಪ ದಾಬದಲ್ಲಿ ಮದ್ಯ ಜಪ್ತಿ ಮಾಡಿಕೊಂಡು ಒಬ್ಬ ಆರೋಪಿತನನ್ನು ಮತ್ತು ಮದ್ಯ ಜಪ್ತಿ ಪಂಚನಾಮೆಯನ್ನು ಮತ್ತು ಮುದ್ದೆ ಮಾಲನ್ನು ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ಠಾಣೆಗೆ ತಂದು ಹಾಜರುಪಡಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ.26/2018 ಕಲಂ 32,34 ಕೆ.ಇ ಯಾಕ್ಟ್  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 32/2018 ಕಲಂ: 279, 304(ಎ) ಐಪಿಸಿ;-ದಿ: 11-02-2018 ರಂದು 00.30 ಗಂಟೆಗೆ ಫಿಯರ್ಾದಿ ಶ್ರೀ. ಅಬ್ದುಲ ಮುಜಾಹೀದ್ ತಂದೆ ಅಬ್ದುಲ ಹಮೀದ ತಾಳಿಕೋಟಿ ಸಾ|| ಕೆಂಭಾವಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಶಂವೇನೆಂದರೆ, ನಮ್ಮ ತಂದೆ ತಾಯಿಗೆ ಒಬ್ಬ ಗಂಡು ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳಿರುತ್ತೇವೆ. ನಾನು ಹಿರಿಯವನಿರುತ್ತೇನೆ. ನಮ್ಮ ತಂದೆಯವರಾದ ಅಬ್ದುಲ ಹಮೀದ ತಂದೆ ಪಕೀರ ಅಹ್ಮದ ತಾಳಿಕೋಟಿ ವಯಾ|| 48 ಇವರು ಕೆಬಿಜೆಎನ್ಎಲ್ ಕೆಂಭಾವಿಯಲ್ಲಿ ಲಿಟರೆಟ್ ಅಸಿಸ್ಟಂಟ್ ಅಂತ ಕೆಲಸ ಮಾಡಿಕೊಂಡು ಇರುತ್ತಿದ್ದನು. ಹೀಗಿದ್ದು ನಿನ್ನೆ ದಿ: 10/02/2018 ರಂದು ರಾತ್ರಿ 7.00 ಗಂಟೆ ಸುಮಾರಿಗೆ ನಮ್ಮ ತಂದೆಯಾದ ಅಬ್ದುಲ ಹಮೀದ ಇವರು ರಾತ್ರಿ ಡ್ಯೂಟಿ ಇದ್ದ ಕಾರಣ ಐಎನ್ಸಿ ಡಿಸ್ಟ್ರಿಬೂಟರ-01 ಗುತ್ತಿ ಬಸವಣ್ಣ ಏತ ನೀರಾವರಿ ಕಡೆಗೆ ಹೋಗಿಬರುತ್ತೇನೆ ಅಂತ ಮನೆಯಲ್ಲಿ ಹೇಳಿ ಹೋದರು. ರಾತ್ರಿ 11.30 ಗಂಟೆ ಸುಮಾರಿಗೆ ನಾನು ನಮ್ಮ ತಾಯಿ ಫವರ್ಿನ್ ಬೇಗಂ ಮನೆಯಲ್ಲಿದ್ದಾಗ ನನಗೆ ಯಾರೋ ಫೋನ್ ಮುಖಾಂತರ ತಿಳಿಸಿದ್ದೇನೆಂದರೆ, ನಿಮ್ಮ ತಂದೆ ಅಬ್ದುಲ ಹಮೀದ ಇವರು ಹೊಂಡಾ ಸ್ಕೂಟಿ ನಂ ಕೆಎ 33 ಯು 8990 ನೇದ್ದರ ಮೇಲೆ ಕೆಂಭಾವಿ ಕಡೆಗೆ ಬರುತ್ತಿರುವಾಗ ಸಂಜೀವನಗರ ಕ್ರಾಸ್ ಹತ್ತಿರ ಸ್ಪಂದನ ಶಾಲೆಯ ಮುಂದಿನ ರಸ್ತೆಯ ಮೇಲೆ ಮೋಟರ ಸೈಕಲ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದು ತಲೆಗೆ ಭಾರಿ ಗಾಯವಾಗಿ ಹೊರಳಾಡುತ್ತಿದ್ದಾನೆೆ ನೀವು ಬರ್ರಿ ಅಂತ ತಿಳಿಸಿದ್ದರಿಂದ ನಾನು, ನಮ್ಮ ತಾಯಿ ಫವರ್ಿನ್ ಬೇಗಂ ಹಾಗೂ ಬಾಜು ಮನೆಯ ಮಕ್ತುಮಪಟೇಲ ತಂದೆ ಬಂದಗಿಪಟೇಲ ಮುರಕನಾಳ ಮೂರು ಜನ ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಂದೆಯವರು ರೋಡಿನ ಪಕ್ಕದಲ್ಲಿ ಕೆಳಗೆ ಬಿದ್ದು ಒದ್ದಾಡುತ್ತಿದ್ದು, ನೋಡಲಾಗಿ ತಲೆಗೆ ಭಾರಿ ರಕ್ತಗಾಯವಾಗಿ, ಮೂಗಿನಿಂದ ರಕ್ತ ಸೋರುತ್ತಿತ್ತು ಆಗ ನಾವೆಲ್ಲರೂ ಸೇರಿ ನಮ್ಮ ತಂದೆಯವರಿಗೆ ಒಂದು ಖಾಸಗಿ ವಾಹನದಲ್ಲಿ ಕೆಂಭಾವಿ ಸರಕಾರಿ ಆಸ್ಪತ್ರೆಗೆ ತರುವಷ್ಟರಲ್ಲಿ ದಾರಿ ಮದ್ಯ ಮಕ್ಕಾ ಕ್ರಾಸ್ ಹತ್ತಿರ ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:32/2018 ಕಲಂ 279, 304 [ಎ] ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

                                                                    
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 16/2018 ಕಲಂ: 279,337 ಐಪಿಸಿ ಸಂ 187 ಐಎಮ್ವಿ ಎಕ್ಟ್ ;- ದಿನಾಂಕ: 09/02/2018 ರಂದು 4-30 ಪಿಎಮ್ ಕ್ಕೆ ಶ್ರೀ ಮಲ್ಲಪ್ಪ ತಂದೆ ಬಸಲಿಂಗಪ್ಪ ಗುರುಸಣಗಿ, ವ:36, ಜಾ:ಹೊಲೆಯ, ಉ:ಕೂಲಿ ಸಾ: ಕಾಡಂಗೇರಾ (ಬಿ) ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಬಂದು ದಿನಾಂಕ: 06/02/2018 ರಂದು ಖಾನಾಪೂರ ಗ್ರಾಮದ ನಮ್ಮ ಪರಿಚಯ ಮತ್ತು ನಮ್ಮ ಹೊಲದ ಬಾಜು ಹೊಲದವರಾದ ಮಲ್ಲಪ್ಪ ತಂದೆ ಹಣಮಂತ ಇವರು ದೇವರು ಮಾಡಿದ್ದು, ನಮಗೆ ಊಟಕ್ಕೆ ಹೇಳಿದ್ದರಿಂದ ನಾನು ಮತ್ತು ನಮ್ಮ ಮಾವನಾದ ಅಮಾತೆಪ್ಪ ತಂದೆ ಮಲ್ಲಪ್ಪ ಇಬ್ಬರೂ ಕೂಡಿ ನನ್ನ ತಮ್ಮನ ಮೋಟರ್ ಸೈಕಲ್ ನಂ. ಕೆಎ 33 ಯು 0638 ನೇದ್ದನ್ನು ತೆಗೆದುಕೊಂಡು ನಮ್ಮ ಮಾವ ಅಮಾತೆಪ್ಪನಿಗೆ ಹಿಂದೆ ಕೂಡಿಸಿಕೊಂಡು ಸಾಯಂಕಾಲ ಖಾನಾಪೂರಕ್ಕೆ ಹೊರಟೇವು. ಖಾನಾಪೂರ-ಕ್ಯಾತ್ನಳ ರೋಡ ದಗರ್ಾದ ಹತ್ತಿರ ರೋಡಿನ ಮೇಲೆ ನಿಧಾನವಾಗಿ ನಮ್ಮ ಸೈಡಿಗೆ ನಾವು ಹೋಗುತ್ತಿದ್ದಾಗ 7-30 ಪಿಎಮ್ ಸುಮಾರಿಗೆ ಎದುರುಗಡೆಯಿಂದ ರಾಘಪ್ಪ ತಂದೆ ಹಣಮಂತ ಲಿಂಗೇರಿ ಸಾ:ಹೊರಟೂರ ತಾ:ಶಹಾಪೂರ ಈತನು ತನ್ನ ಮೋಟರ್ ಸೈಕಲ್ ನಂ. ಕೆಎ 04 ಹೆಚ್.ಬಿ 5661 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಎದುರಿನಿಂದ ಬಂದು ನಮಗೆ ಡಿಕ್ಕಿಪಡಿಸಿದಾಗ ನಾವು ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ಅಪಘಾತದಲ್ಲಿ ನನ್ನ ತೆಲೆ ಹಿಂಭಾಗಕ್ಕೆ ಗುಪ್ತ ಪೆಟ್ಟು, ಬಲಗಡೆ ಕಣ್ಣಿನ ಹುಬ್ಬಿನ ಮೇಲೆ ರಕ್ತಗಾಯ ಮತ್ತು ಮೂಗಿನ ಕೆಳಗಡೆ ಸೊಂಡಿ ಮೇಲೆ ರಕ್ತಗಾಯವಾಗಿದ್ದು ಇರುತ್ತದೆ. ನನ್ನ ಹಿಂದೆ ಕುಳಿತ ನಮ್ಮ ಮಾವ ಅಮಾತೆಪ್ಪನಿಗೆ ಯಾವುದೇ ಗಾಯಗಳಾಗಿರಲಿಲ್ಲ. ಯಾರೋ ದಾರಿ ಮೇಲೆ ಹೋಗುವವರು 108 ಅಂಬುಲೇನ್ಸಗೆ ಫೋನ ಮಾಡಿದ್ದರಿಂದ ಅಂಬ್ಯುಲೇನ್ಸ ಬಂದು ನನಗೆ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ಯಾದಗಿರಿ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಸ್ವಿಕೃತವಾಗಿದ್ದರಿಂದ ವಡಗೇರಾ ಠಾಣೆಯ ಪೊಲೀಸರು ಬಂದು ನನಗೆ ವಿಚಾರಿಸಿದಾಗ ನಾನು ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಕೇಸು ಕೊಡುವುದಿದ್ದರೆ ನಂತರ ಬಂದು ಕೊಡುತ್ತೇನೆ ಈಗ ಸದ್ಯ ಕೊಡುವುದಿಲ್ಲವೆಂದು ತಿಳಿಸಿರುತ್ತೇನೆ. ಕಾರಣ ಈಗ ನಾನು ಯಾದಗಿರಿ ಸರಕಾರಿ ದವಾಖಾನೆಯಲ್ಲಿ ತೋರಿಸಿಕೊಂಡು ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ಈಗ ದೂರು ಕೊಡುತ್ತಿದ್ದೇನೆ. ಕಾರಣ ರಾಘಪ್ಪನು ತನ್ನ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮಗೆ ಡಿಕ್ಕಿಪಡಿಸಿ, ರಕ್ತ ಮತ್ತು ಗುಪ್ತ ಗಾಯಪಡಿಸಿ, ನಿಲ್ಲಿಸದೆ ಹೋಗಿದ್ದು, ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಹೇಳಿ ಗಣಕೀಕರಣ ಮಾಡಿಸಿದ ಹೇಳಿಕೆ ನಿಜವಿರುತ್ತದೆ. ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 16/2018 ಕಲಂ: 279,337 ಐಪಿಸಿ ಸಂ 187 ಐಎಮ್ವಿ ಎಕ್ಟ್ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
 

No comments: