Police Bhavan Kalaburagi

Police Bhavan Kalaburagi

Wednesday, February 14, 2018

Yadgir District Reported Crimes Updated on 14-02-2018


                                            Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 28/2018 ಕಲಂ 379 ಐಪಿಸಿ;-ದಿನಾಂಕ.12/12/2018 ರಂದು 3 ಪಿಎಂಕ್ಕೆ ಶ್ರೀ ವೇಂಟೇಶ ಪಿಸಿ-369 ಸಂಚಾರಿ ಠಾಣೆ ಯಾದಗಿರಿ ರವರು ಒಂದು ವರದಿಯನು ತಂದು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಶ್ರೀ ಹರಿಬಾ. ಎ. ಜಮಾದಾರ ಅರಕ್ಷಕ ನಿರೀಕ್ಷಕರು ಸಂಚಾರಿ ಪೊಲೀಸ್ ಠಾಣೆ ಯಾದಗಿರಿ. ಈ ಮೂಲಕ ವರದಿ ನೀಡುವುದೆನೆಂದರೆ ನಾನು ಮತ್ತು ನಮ್ಮ ಸಂಚಾರಿ ಠಾಣೆಯ ಜಗದೀಶ ಹೆಚ್.ಸಿ.144, ಇಂಟಸೆಪ್ಟರ ವಾಹನ ಚಾಲಕ ಶ್ರೀ ಶಿವನಗೌಡ ಎ.ಪಿ.ಸಿ39 ರವರು ಕೂಡಿಕೊಂಡು ಇಂಟರಸೆಪ್ಟರ ವಾಹನದಲ್ಲಿ ನಿನ್ನೆ ದಿನಾಂಕ.11/02/2018 ರಂದು ಶಹಾಪೂರ ನಗರಕ್ಕೆ, ದಿನಾಂಕ.12/02/2018 ರಂದು ಶ್ರೀ ರಾಹುಲ್ ಗಾಂಧಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ರವರು ಆಗಮಿಸುತ್ತಿರುವದರಿಂದ ಸದರಿ ಬಂದೋಬಸ್ತ ರೂಲಕಾಲ ಹಾಗೂ ರಿಯರ್ಸಲ್ ಕುರಿತು ಮಾನ್ಯ ಎಸ್.ಪಿ. ಸಾಹೇಬರ ಆದೇಶದ ಮೇರೆಗೆ ನಮ್ಮ ಸಂಚಾರಿ ಠಾಣೆಯ ಇಂಟರ್ಸೆಪ್ಟರ್ ವಾಹನವನ್ನು ತೆಗೆದುಕೊಂಡು ಶಹಾಪುರಕ್ಕೆ ಹೋಗಿದ್ದು ಇರುತ್ತದೆ. ನಂತರ ರೂಲಕಾಲ ಮತ್ತು ರಿಯರ್ಸಲ ಮುಗಿಸಿಕೊಂಡು ಮರಳಿ ಶಹಾಪುರದಿಂದ ದಿನಾಂಕ 11/02/2018 ರಂದು ರಾತ್ರಿ 11-30 ಪಿಎಂಕ್ಕೆ ಹೋರಟು ಯಾದಗಿರಿಗೆ ದಿನಾಂಕ.12/02/2018 ರಂದು ರಾತ್ರಿ 00-30 ಎಎಂಕ್ಕೆ  ನಾನು ಮತ್ತು ನಮ್ಮ ಸಿಬ್ಬಂದಿಯಾದ ಶ್ರೀ ಜಗದೀಶ ಎಚ್.ಸಿ-144 ಕೂಡಿಕೊಂಡು  ಯಾದಗಿರಿಯ ಹಳೆ ಬಸ್ ನಿಲ್ದಾಣದ ಹತ್ತಿರ ಬರುತ್ತಿರುವಾಗ ನಮ್ಮ ಮುಂದೆ ಒಂದು ಟಿಪ್ಪರ ಹೊರಟಿದ್ದು ಅದರಲ್ಲಿ ಮರಳು ತುಂಬಿದ್ದು ಕಂಡು ಅದಕ್ಕೆ ಬೆನ್ನು ಹತ್ತಿದಾಗ ಸದರಿ ಟಿಪ್ಪರ ಚಾಲಕನು ಮುಂದೆ ಸುಭಾಸ ಚೌಕದಲ್ಲಿ ಟಿಪ್ಪರನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಟಿಪ್ಪರ ಚಾಲಕನಿಗೆ ಕೈ ಮಾಡಿ ನಿಲ್ಲಿಸಿದಾಗ ಟಿಪ್ಪರ ಚಾಲಕನು ನಮ್ಮನ್ನು ನೋಡಿ ಟಿಪ್ಪರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದನು. ಸದರಿ ಟಿಪ್ಪರನ್ನು ನೋಡಲಾಗಿ ಮರಳು ತುಂಬಿದ್ದು ಚಾಲಕನು ಓಡಿ ಹೋಗಿದ್ದರಿಂದ ಟಿಪರದಲ್ಲಿ ಮರಳನ್ನು ಕದ್ದು, ಅನಧಿಕೃತವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿರುವುದು ಕಂಡು ಬಂದಿರುತ್ತದೆ. ಸದರಿ ಟಿಪ್ಪರ ನಂ.ಕೆಎ-51, 9414 ನೇದ್ದು ಇದ್ದು ಟಿಪ್ಪರ್ ಚಾಲಕನು ಓಡಿ ಹೋಗಿದ್ದು ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲ. ಸದರಿ ಟಿಪ್ಪರ್ ಚಾಲಕ ಮತ್ತು ಮಾಲೀಕರು ಕೂಡಿಕೊಂಡು ಅನಧಿಕೃತವಾಗಿ ಮರಳನ್ನು ಕಳ್ಳತನದಿಂದ ಕದ್ದು, ಸಾಗುತ್ತಿದ್ದ ಬಗ್ಗೆ ಖಾತ್ರಿಯಾಯಿತು. ನಂತರ ಸದರಿ ಟಿಪ್ಪರನ್ನು ನಮ್ಮ ಸಿಬ್ಬಂದಿಯಾದ ಜಗಧೀಶ ಹೆಚ್.ಸಿ.144 ರವರ ಸಹಾಯದಿಂದ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ಆವರಣದಲ್ಲಿ ತಂದು ನಿಲ್ಲಿಸಿದ್ದು ಇರುತ್ತದೆ. ಕಾರಣ ಸದರಿ ಟಿಪ್ಪರ ನಂ.ಕೆಎ-51, 9414 ನೇದ್ದರ ಚಾಲಕ ಮತ್ತು ಮಾಲಿಕರು ಕೂಡಿಕೊಂಡು ಅನಧಿಕೃತವಾಗಿ ಮರಳನ್ನು ಕದ್ದು ಸಾಗಿಸುತ್ತಿದ್ದು ಸದರಿಯವರ ಮೇಲೆ ಮುಂದಿನ ಕ್ರಮಕ್ಕಾಗಿ   ವರದಿಯನ್ನು ಕಳುಹಿಸಿಕೊಟ್ಟಿದ್ದು  ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.28/2018 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.                                    
           
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 28/2018 ಕಲಂ: 323, 324, 504, 506 ಸಂ. 34 ಐಪಿಸಿ ;- ದಿನಾಂಕ 11-02-2018 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ಪಿರ್ಯಾಧಿ ಮನೆಯಲ್ಲಿದ್ದಾಗ ಹೊಲ ಸವರ್ೆ ನಂ. 84 ನೆದ್ದು ವಿಸ್ತಿರ್ಣ 32 ಗುಂಟೆ ಜಮೀನಿನಲ್ಲಿ ಆರೋಪಿತರು ಪಿರ್ಯಾದಿಯೊಂದಿಗೆ ಜಗಳ ತೆಗೆದು ಬೋಸಡಿ ಮಗನೆ ಅಂತಾ ಅವಾಚ್ಯವಾಗಿ ಬೈದು ಕಲ್ಲಿನಿಂದ, ಬಡಿಗೆಯಿಂದ ಹೊಡೆಬಡಿ ಮಾಡಿ ಗುಪ್ತಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 22/2018 ಕಲಂ: 504,324 ಸಂ. 34 ಐಪಿಸಿ;- ದಿನಾಂಕ: 12/02/2018 ರಂದು 6-30 ಪಿಎಮ್ ಕ್ಕೆ ಶ್ರೀ ಮೌಲಾಲಿ ತಂದೆ ಹುಸೇನಸಾಬ ಮಲ್ಲೆವಾಲೆ, ವ: 31, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಗುರುಸಣಗಿ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ಗುರುಸಣಗಿ ಸೀಮಾಂತರದಲ್ಲಿ ನಮ್ಮದೊಂದು ಹೊಲ ಇರುತ್ತದೆ. ನಮ್ಮ ಹೊಲಕ್ಕೆ ಹತ್ತಿಕೊಂಡು ನಮ್ಮೂರು ಮರೆಪ್ಪ ನಾಯಕ ಎಂಬುವರ ರವರ ಹೊಲ ಇದ್ದು, ಸದರಿ ಹೊಲದ ಮ್ಯಾರಿಗಳು ಒಂದಕ್ಕೊಂದು ಹತ್ತಿಕೊಂಡು ಇರುತ್ತವೆ. ಆದರೆ ಸದರಿ ಮರೆಪ್ಪ ನಾಯಕನ ಹೊಲವನ್ನು ನಮ್ಮ ಜಾತಿಯ ಸಂಶೇರ ತಂದೆ ಚಂದಾಸಾಬ ಹೊಸಮನಿ ಈತನು ಲೀಜಿಗೆ ಹಾಕಿಕೊಂಡು ಒಕ್ಕಲುತನ ಮಾಡುತ್ತಿದ್ದು, ಈ ಹೊಲಕ್ಕೆ ಸುತ್ತಲು ಗೈ ವೈಯರ ಹಾಕಿ ಅದಕ್ಕೆ ಪ್ರಾಣಿಗಳು ಹೊಲದಲ್ಲಿ ಬರದಂತೆ ತಡೆಯಲು ಸದರಿ ತಂತಿಗೆ ಹಗಲಿನಲ್ಲಿಯೇ ಕರೆಂಟ್ ಹರಿಸುತ್ತಿದ್ದಾನೆ. ಆಗ ನಾನು ನಮ್ಮ ಎತ್ತು ದನಕರುಗಳು ಮತ್ತು ಹುಡುಗರು ಬರುತ್ತಿರುತ್ತಾರೆ. ಹಗಲಿನಲ್ಲಿ ತಂತಿಗೆ ಕರೆಂಟ್ ಹರಿಸಬೇಡ ಎಂದು ಹೇಳಿದರೆ ನಾನು ಕರೆಂಟ್ ಹರಿಸುತ್ತೇನೆ ಅದನ್ನು ಕೇಳುವವನು ನೀನ್ಯಾರು ಎಂದು ನನ್ನೊಂದಿಗೆ ತಕರಾರು ಮಾಡಿದನು. ಹೀಗಿದ್ದು ನಿನ್ನೆ ದಿನಾಂಕ: 11/02/2018 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ನಾನು ನಮ್ಮೂರು ಕುರುಬಂಡಿ ಅಟೋ ಸ್ಟ್ಯಾಂಡ ಹತ್ತಿರ ಇದ್ದಾಗ ಅಲ್ಲಿಗೆ ಬಂದ ನಮ್ಮೂರು 1) ಸಂಶೇರ ತಂದೆ ಚಂದಾಸಾಬ ಹೊಸಮನಿ, 2) ಸಂಶೇರ ತಂದೆ ಜಲಾಲಸಾಬ ಹೊಸಮನಿ ಇಬ್ಬರೂ ಸೇರಿ ಬಂದವರೆ ನನ್ನೊಂದಿಗೆ ಜಗಳ ತೆಗೆದು ಅಬೆ ಮೌಲ್ಯಾ ತು ಹಮಾರೆ ಖೇತ ಮೇ ಕರೆಂಟ್ ನಕೋ ದಾಲ ಬೊಲ್ತಾ ಕ್ಯಾಬೆ ಎಂದು ಜಗಳ ತೆಗೆದವರೆ ಸಂಶೇರ ತಂದೆ ಜಲಾಲಸಾಬ ಹೊಸಮನಿ ಈತನು ಬಂದು ನನಗೆ ಗಟ್ಟಿಯಾಗಿ ಹಿಡಿದುಕೊಂಡಾಗ ಸಂಶೇರ ತಂದೆ ಚಂದಾಸಾಬ ಹೊಸಮನಿ ಈತನು ತನ್ನಲ್ಲಿದ್ದ ಚಾಕು ತೆಗೆದುಕೊಂಡು ನನ್ನ ಎಡಗಡೆ ಗಲ್ಲಕ್ಕೆ ಕಿವಿ ಹತ್ತಿರ ಚುಚ್ಚಿ ರಕ್ತಗಾಯ ಮಾಡಿದನು. ಆಗ ಜಗಳವನ್ನು ಅಲ್ಲಿಯೇ ಇದ್ದ ಮಹಿಬೂಬ ತಂದೆ ಜಲಾಲಸಾಬ ಮಲ್ಲೆವಾಲೆ, ಸಲಿಂ ತಂದೆ ಜಲಾಲಸಾಬ ಬಡೆ ಮಲ್ಲೆವಾಲೆ ಇವರು ಬಂದು ಜಗಳ ಬಿಡಿಸಿಕೊಂಡರು ಇಲ್ಲದಿದ್ದರೆ ನನಗೆ ಇನ್ನು ಹೊಡೆಯುತ್ತಿದ್ದರು. ಅಲ್ಲಿಂದ ನಾನು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ಹೋಗಿ ಸೇರಿಕೆಯಾಗಿ ಉಪಚಾರ ಪಡೆದುಕೊಂಡಿದ್ದು, ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿರುತ್ತಾರೆ. ನಾನು ಉಪಚಾರ ಪಡೆದುಕೊಂಡು ಇಂದು ದಿನಾಂಕ: 12/02/2018 ರಂದು ಪೊಲೀಸ್ ಠಾಣೆಗೆ ಬಂದು ಈ ಹೇಳಿಕೆ ಫಿರ್ಯಾಧಿ ಕೊಡುತ್ತಿದ್ದೇನೆ. ಕಾರಣ ಹೊಲದಲ್ಲಿ ತಂತಿಗೆ ಹಗಲಿನಲ್ಲಿ ಕರೆಂಟ್ ಹಾಕಬೇಡ ಎಂದು ಹೇಳಿದರೆ ಕೇಳದೆ ಅದೇ ವಿಷಯಕ್ಕೆ ಬಂದು ಜಗಳ ತೆಗೆದು ನನಗೆ ಅವಾಚ್ಯ ಬೈದು, ಚಾಕುನಿಂದ ಚುಚ್ಚಿ ರಕ್ತಗಾಯ ಮಾಡಿದ ಮೇಲ್ಕಂಡ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಹೇಳಿ ಗಣಕೀಕರಣ ಮಾಡಿಸಿದ ಹೇಳಿಕೆ ನಿಜವಿರುತ್ತದೆ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 22/2018 ಕಲಂ: 504,324 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 
                                                                    
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 15/2018 ಕಲಂ 279, 338  ಐಪಿಸಿ ಸಂ.187 ಐಎಂವಿ ಆ್ಯಕ್ಟ್;- ದಿನಾಂಕ 13/02/2018 ರಂದು ಸಾಯಂಕಾಲ 7 ಪಿ.ಎಂ. ಸುಮಾರಿಗೆ ಯಾದಗಿರಿ ನಗರದಲ್ಲಿನ ಅಂಬೇಡ್ಕರ್ ಚೌಕ್ ಹತ್ತಿರ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೊರಟಿದ್ದ ಒಬ್ಬ ಅಪರಿಚಿತ ಹೆಂಗಸು ವಯ ಅಂದಾಜು 60 ರಿಂದ 65 ವರ್ಷ ಇವಳಿಗೆ ಯಾವುದೊ ವಾಹನದ ಚಾಲಕನು ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಅಪಘಾತದಲ್ಲಿ ಅಪರಿಚಿತ ಹೆಂಗಸಿಗೆ ತಲೆಗೆ, ಬಲಗಾಲಿಗೆ ಭಾರೀ ರಕ್ತಗಾಯವಾಗಿದ್ದು ಇರುತ್ತದೆ. ಅಪಘಾತ ಪಡಿಸಿದ ವಾಹನ ಚಾಲಕನು ಸ್ಥಳದಿಂದ ತನ್ನ ವಾಹನದೊಂದಿಗೆ ಪರಾರಿಯಾಗಿದ್ದು ಇರುತ್ತದೆ. ಈ ಬಗ್ಗೆ ಸಾರ್ವಜನಿಕರು ಅಪರಿಚಿತ ಹೆಂಗಸಿಗೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಸೇರಿಕೆ ಮಾಡಿದ್ದು ಆಸ್ಪತ್ರೆಯ ಎಮ್.ಎಲ್.ಸಿ ಮಾಹಿತಿ ಮೇರೆಗೆ ಬೇಟಿ ನೀಡಿ ಗಾಯಾಳುವಿಗೆ ವಿಚಾರಿಸಲಾಗಿ ಪ್ರಜ್ಞೆ ಇರುವುದಿಲ್ಲ ಹಾಗೂ ಆಕೆಯ ವಾರಸುದಾರರು ಯಾರು ಇಲ್ಲದ ಕಾರಣ ಸಕರ್ಾರಿ ತಪರ್ೆಯಾಗಿ ಶ್ರಿ ಸುಖದೇವ್ ಪಿ.ಎಸ್.ಐ ರವರು ಫಿಯರ್ಾದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.15/2018 ಕಲಂ 279, 338  ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೆದ್ದರಲ್ಲಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.
 

No comments: