Police Bhavan Kalaburagi

Police Bhavan Kalaburagi

Monday, February 5, 2018

Yadgir District Reported Crimes Updated on 05-02-2018


                                                Yadgir District Reported Crimes

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 26/2018 ಕಲಂ: 32, 34 ಕೆ.ಎಕ್ಟ;- ದಿನಾಂಕ 04-02-2018 ರಂದು 11-30 ಎ.ಎಮ್ ಕ್ಕೆ ಶ್ರೀ ಅರುಣಕುಮಾರ ಪಿ.ಎಸ್.ಐ (ಕಾಸು) ಯಾದಗಿರಿ ಗ್ರಾಮೀಣ ಠಾಣೆರವರು ಠಾಣೆಗೆ ಹಾಜರಾಗಿ ಮುದ್ದೆಮಾಲು ಜಪ್ತಿ ಪಂಚನಾಮೆ ಸಮೇತ ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 04-02-2018 ರಂದು 9 ಎ.ಎಂ ಕ್ಕೆ ಹೋನಗೇರಾ ಗ್ರಾಮದಲ್ಲಿ ಯಾರೋ ಕಿರಾಣಿ ಅಂಗಡಿಯಲ್ಲಿ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆೆ ಅಂತಾ ಖಚಿತವಾದ ಬಾತ್ಮಿ ಬಂದಿದ್ದರಿಂದ ಅಲ್ಲಿಗೆ ಹೋಗಿ ನಾವು ದಾಳಿ ಮಾಡುವ ಇಬ್ಬರು ಪಂಚರಾದ 1) ಶ್ರೀ ನಿಂಗಪ್ಪಾ ತಂದೆ ಸಾಬಣ್ಣಾ ದೊಡ್ಡ ಸಾಬಣ್ಣನವರ ವಯಾ: 35 ಉ:ಕೂಲಿ ಜಾ: ಹರಿಜನ ಸಾ: ಆಶನಾಳ ತಾ:ಜಿ: ಯಾದಗಿರಿ 2) ಶ್ರೀ ದೇವಪ್ಪಾ ತಂದೆ  ಶಿವಪ್ಪಾ ಸಿದ್ದಿ ವಯಾ:27 ಉ: ಕೂಲಿ ಜಾ: ಹರಿಜನ ಸಾ: ಇಂದಿರಾ ನಗರ ಯಾದಗಿರಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀ ಚಿದಾನಂದ ಪಿ.ಎಸ್.ಐ ಪ್ರೋಬೇಷನರಿ, ಅಬ್ದುಲ್ ಬಾಷಾ ಪಿಸಿ-237 ಹಾಗೂ ಜೀಪ ಚಾಲಕರಾದ ಶ್ರೀ ಜಗನ್ನಾಥರೆಡ್ಡಿ ಪಿಸಿ 114 ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು  ಜೀಪಿನಲ್ಲಿ 9-20 ಎ.ಎಮ್ ಠಾಣೆಯಿಂದ ಬಾತ್ಮಿ ಬಂದ ಕಡೆಗೆ ಹೊರಟು ಹೋನಗೇರಾ ಗ್ರಾಮ ತಲುಪಿ ಗ್ರಾಮದ ವಿಶ್ವನಾಥರೆಡ್ಡಿ ಮಾಲೀಪಾಟೀಲ್ ಇವರ ಮನೆಯ ಸಮೀಪದಲ್ಲಿಯೇ ಮರೆಯಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಮರೆಯಲ್ಲಿ ಅವಿತುಕೊಂಡು ನೋಡಲಾಗಿ  ಒಂದು ಕಿರಾಣಿ ಅಂಗಡಿಯಲ್ಲಿ ಒಬ್ಬನು ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಅಲ್ಲಿಗೇ ಹೋಗಿ ದಾಳಿ ಮಾಡುವಷ್ಟರಲ್ಲಿ ಆ ವ್ತಕ್ತಿಯು ಅಲ್ಲಿಂದ ಓಡಿ ಹೋದನು. ಪೊಲೀಸ್ ಬಾತ್ಮಿದಾರರಿಗೆ ಓಡಿ ಹೊದವನ ಹೆಸರು ವಿಳಾಸ ವಿಚಾರಿಲಾಗಿ ಅವನ ಹೆಸರು ಅಮಾತೆಪ್ಪಾ ತಂದೆ ಹಣಮಂತ ಬಾವುನೋರ ವಯಾ:42 ಜಾ: ಕಬ್ಬಲಿಗ ಉ: ಕಿರಾಣಿ ಅಂಗಡಿ ಸಾ: ಹೋನಗೇರಾ ಅಂತಾ ಗೊತ್ತಾಯಿತು. ಸದರಿಯವನು ಮಧ್ಯ ಮಾರಾಟ ಮಾಡಲು ಸರಕಾರದಿಂದ ಯಾವುದೇ ರೀತಿ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಕಿರಾಣಿ ಅಂಗಡಿ ಚೆಕ್ ಮಾಡಿದಾಗ ಕಿರಾಣಿ ಅಂಗಡಿಯ ಅಂಗಡಿಯಲ್ಲಿ 1) 650 ಎಮ್.ಎಲ್ ದ 10 ಕೆ.ಎಫ್, ಸ್ರ್ಟಾಂಗ್ ಕಂಪನಿಯ ಬಿಯರ ಬಾಟಲಿಗಳಿದ್ದು ಒಂದು ಬಾಟಲಿಯ ಕಿಮ್ಮತ್ತು 125/- ರೂ ರಂತೆ ಒಟ್ಟು 10 ಬಾಟಲಿಗಳ ಕಿಮ್ಮತ್ತು  ರೂ 1250/- ರೂ ಆಗುತ್ತದೆ. ಮತ್ತು 2) 330 ಎಮ್.ಎಲ್ ದ 14 ಕೆ.ಎಫ್, ಸ್ರ್ಟಾಂಗ್ ಕಂಪನಿಯ ಟೀನ್ ಬಿಯರ ಡಬ್ಬಗಳಿದ್ದು ಒಂದು ಡಬ್ಬಿಯ ಕಿಮ್ಮತ್ತು 70/- ರೂ ರಂತೆ ಒಟ್ಟು 14 ಬಾಟಲಿಗಳ ಕಿಮ್ಮತ್ತು  ರೂ 980/- ರೂ ಆಗುತ್ತದೆ. ಹೀಗೆ ಒಟ್ಟು ಎಲ್ಲಾ ಮಧ್ಯದ ಬಾಟಲಿಗಳ ಕಿಮ್ಮತ್ತು 2230/- ರೂಪಾಯಿ ಆಗುತ್ತದೆ. ಈ ಮಧ್ಯದ ಬಾಟಲಿಗಳಲ್ಲಿ ತಲಾ ಒಂದೊಂದು ಬಾಟಲಿಯನ್ನು ಎಫ್.ಎಸ್.ಎಲ್ ಪರೀಕ್ಷೆ ಕುರಿತು ಪ್ರತ್ಯೇಕ ಎರಡು  ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಹೊಲೆದು ಅವುಗಳ ಮೇಲೆ ಪಿ.ಆರ್.ಎಸ್ ಅಂತಾ ಶೀಲ್ ಮಾಡಿ ನಾವು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ    04-02-2018 ರಂದು 10 ಎ.ಎಂ 11 ಎ.ಎಂ ದವರೆಗೆ ಮಾಡಿ ಮುಗಿಸಿ ಮುಂದಿನ ಕ್ರಮಕ್ಕಾಗಿ ಮುದ್ದೆಮಾಲನ್ನು ಜಪ್ತಿಪಂಚನಾಮೆಯನ್ನು ಹಾಜರುಪಡಿಸಿದ್ದುಇರುತ್ತದೆ ಅಂತಾ ಜಪ್ತಿಪಂಚನಾಮೆ ಸರಾಂಶದ ಮೇಲಿಂದ ಠಾಣೆ ಗುನ್ನೆ ನಂ: 26/2018 ಕಲಂ 32, 34 ಕೆ.ಇ ಎಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
           
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 12/2017 ಕಲಂ. 87 ಕೆ.ಪಿ.ಕಾಯ್ದೆ;- ದಿನಾಂಕ: 03/02/2018 ರಂದು 7-30 ಪಿಎಮ್ ಕ್ಕೆ ಪಿ.ಎಸ್.ಐ ವಡಗೇರಾ ಠಾಣೆ ರವರು ಠಾಣೆಗೆ ಹಾಜರಾಗಿ ಇಂದು ದಿನಾಂಕ: 03/02/2018 ರಂದು ಗಡ್ಡೆಸೂಗೂರು ಸೀಮಾಂತರದ ಲಕ್ಷ್ಮೀಪತಿ ರಾಜು ಇವರ ಶೆಡ್ಡಿನ ಮುಂದಿನ ಖುಲ್ಲಾ ಜಾಗದಲ್ಲಿ ಕೆಲವರು  ದುಂಡಾಗಿ ನಿಂತುಕೊಂಡು ಕೊಳಿಪಂದ್ಯ  ಜೂಜಾಟ ಆಡುತ್ತಿದ್ದಾಗ ನಾವು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಹಿಡಿಯಲಾಗಿ ಕೋಳಿ ಪಂದ್ಯ ಜೂಜಾಟ ಆಡುತ್ತಿದ್ದವರ ಪೈಕಿ 4 ಜನ ಸಿಬ್ಬಂದಿಯವರ ಕೈಗೆ ಸಿಕ್ಕಿಬಿದ್ದಿದ್ದು, ಕೊಳಿಪಂದ್ಯ ಆಡಿಸುತ್ತಿದ್ದ ವೆಂಕಟರಾಜು(ಬುಜ್ಜಿ) ಮತ್ತು ನಹಿಂ ಮಲ್ಲೆವಾಲೆ ಗುರುಸುಣಗಿ ಇಬ್ಬರು ಕಾರು ನಂಬರ ಕೆಎ-33 7496 ನೇದ್ದರಲ್ಲಿ ಕಾರು ಚಲಾಯಿಸಿಕೊಂಡು ಓಡಿ ಹೋಗಿದ್ದು ಮತ್ತು ನಮ್ಮನ್ನು ಕಂಡು ಇನ್ನೂ ಸುಮಾರು 20 ರಿಂದ 25 ಜನರು ತಮ್ಮ ತಮ್ಮ ಮೋಟರ್ ಸೈಕಲಗಳನ್ನು ಬಿಟ್ಟು ಸ್ಥಳದಿಂದ ಓಡಿಹೊಗಿದ್ದು ಇರುತ್ತದೆ. ಸದರಿ ಸಿಕ್ಕಿಬಿದ್ದವರಿಗೆ ವಿಚಾರಿಸಲಾಗಿ ತಮ್ಮ ಹೆಸರು 1) ಐ. ಲಕ್ಷ್ಮೀಪತಿ ರಾಜು ತಂದೆ ರಾಮರಾಜು ವ:60, ಜಾ:ರಾಜಲು, ಉ:ಒಕ್ಕಲುತನ ಸಾ:ರಾಜಮುಂಡ್ರಿ ಜಿ:ಗೋದವರಿ ಹಾ:ವ:ಗಡ್ಡೆಸೂಗುರು ಇವನ ಹತ್ತಿರ 1100=00 ರೂ. ನಗದು ಹಣ, 2) ಹಣಮಂತ ತಂದೆ ದೇವಿಂದ್ರಪ್ಪ ಕಲಾಲ, ವ:38, ಜಾ:ಇಳಗೇರ, ಉ:ಒಕ್ಕಲುತನ ಸಾ:ಕಾಡಂಗೇರಾ ಇವನ ಹತ್ತಿರ ನಗದು ಹಣ 830=00 ರೂ., 3) ಸುನೀಲ ತಂದೆ ಲಕ್ಷ್ಮಣ ದೊಡ್ಡಮನಿ, ವ:23, ಜಾ:ಕೊಂಚಕೊರವರು, ಉ:ಕೂಲಿ ಸಾ:ಶಹಾಪೂರ ಇವನ ಹತ್ತಿರ ನಗದು ಹಣ 2190=00 ರೂ. 4) ಯಂಕಪ್ಪ ತಂದೆ ಕನಕಪ್ಪ ಬಡಿಗೇರ ವಯ:47 ಜಾತಿ:ಕಬ್ಬಲಿಗ ಉ:ಬಡಿಗೆತನ ಸಾ: ಸುರಪೂರ ಇವನ ಹತ್ತಿರ ನಗದು ಹಣ 550=00 ರೂ. ದೊರೆತ್ತಿದ್ದು, ಓಡಿ ಹೋದ 20 ರಿಂದ 25 ಜನರ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ನಂತರ ಸ್ಥಳದಲ್ಲಿ ಬಿಟ್ಟು ಹೋಗಿದ್ದ 9 ಹುಂಜಗಳು ಅ:ಕಿ: ಗೊತ್ತಿಲ್ಲ ಮತ್ತು 30 ಮೋಟರ್ ಸೈಕಲಗಳು ಸ್ಥಳದಲ್ಲಿದ್ದು ಮೋಟರ್ ಸೈಕಲಗಳ ಅ.ಕಿ 625000=00 ಮತ್ತು ಆರೋಪಿರಿಂದ ಜಪ್ತಿಪಡಿಸಿಕೊಂಡ ನಗದು ಹಣ 4670=00 ರೂ.ಗಳು ಒಟ್ಟು 629670=00 ರೂ.ಗಳು ಮತ್ತು 9 ಹುಂಜಗಳನ್ನು ವಶಕ್ಕೆ ಪಡೆದುಕೊಂಡು ಜಪ್ತಿ ಪಡಿಸಿಕೊಂಡಿದ್ದು, ಸದರಿ ಸಿಕ್ಕಿರುವ 4 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯೊಂದಿಗೆ ನಿಮಗೆ ಹಾಜರಪಡಿಸುತ್ತಿದ್ದು, ಸದರಿ ಅಪರಾಧವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಕೋರಿಕೊಂಡಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯವು ಅನುಮತಿ ಕೊಟ್ಟ ಪತ್ರವನ್ನು ಇಂದು ದಿನಾಂಕ: 04/02/2018 ರಂದು 11-15 ಎಎಮ್ ಕ್ಕೆ ಕೋರ್ಟ ಹೆಚ್.ಸಿ 57 ರವರು ಹಾಜರಪಡಿಸಿದ ಮೇರೆಗೆ ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 12/2018 ಕಲಂ: 87 ಕೆ.ಪಿ ಎಕ್ಟ್ 1963 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 13/2018 ಕಲಂ: 504,323,354,304(ಂ),201 ಐಪಿಸಿ ;- ದಿನಾಂಕ: 04/02/2018 ರಂದು 3-30 ಪಿಎಮ್ ಕ್ಕೆ ಶ್ರೀಮತಿ ಸತ್ಯಮ್ಮ ಗಂಡ ಕೊಂಡಯ್ಯ ಇಳಗೇರ ಸಾ:ಐಕೂರು ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ದೂರು ಅಜರ್ಿ ಹಾಜರಪಡಿಸಿದ್ದು, ಸದರಿ ದೂರು ಅಜರ್ಿ ಸಾರಾಂಶವೇನಂದರೆ ನಾನು ಈಗ್ಗೆ ಸುಮಾರು ಎರಡು ವರ್ಷಗಳ ಹಿಂದೆ ಅಂದರೆ ದಿನಾಂಕ: 08/02/2016 ರಂದು ನಾವು ವಾಸವಿರುವ ಐಕೂರು ಗ್ರಾಮದಿಂದ ನನ್ನ ತಂದೆ ವೆಂಕಟರಾವ, ನನ್ನ ಮಗಳಾದ ಪರಿಮಳ ಇವರೊಂದಿಗೆ ನಮ್ಮ ಮನೆಯನ್ನು ಬೆಳಗ್ಗೆ 9 ಗಂಟೆಗೆ ಬಿಟ್ಟು ತುಮಕೂರ ವರೆಗೆ ಬಸ್ಸಿನಲ್ಲಿ ಬಂದು ನಂತರ ತುಮಕೂರ ಗ್ರಾಮದಿಂದ ವಡಗೇರಾ ಗ್ರಾಮಕ್ಕೆ ಬಸ್ ನಂ. ಕೆಎ 33 ಎಫ್ 0034 ನೇದ್ದರಲ್ಲಿ ಬಂದು 10-30 ಎಎಮ್ ಸುಮಾರಿಗೆ ವಡಗೇರಾದಲ್ಲಿ ನಮ್ಮ ತಂದೆ ಮತ್ತು ನಾವು ಬಸ್ಸಿನಿಂದ ಇಳಿಯುವಾಗ ಬಸ್ಸಿನ ಕಂಡಕ್ಟರನಾದ ನಾಗಯ್ಯಸ್ವಾಮಿ ಈತನು ನನ್ನ ತಂದೆಗೆ ಬಹಳ ಜನ ಪ್ಯಾಸೆಂಜರ ಹತ್ತುತ್ತಿದ್ದಾರೆ ಬೇಗ ಇಳಿ ಮುದುಕಾ ಅಂತಾ ಅಂದನು. ಆಗ ನಾನು ಸರ್ ಹಂಗ್ಯಾಕೆ ನಮ್ಮ ತಂದೆಗೆ ಬೈಯ್ಯುತ್ತಿರಿ ಅವರಿಗೆ ವಯಸ್ಸಾಗಿದೆ ಸ್ವಲ್ಪ ಮೆಲ್ಲಗೆ ಇಳಿಯುತ್ತಾರೆ ಎಂದು ಹೇಳಿದೆನು. ನನ್ನ ತಂದೆ ಕೂಡಾ ಸ್ವಲ್ಪ ಇರಿ ಸರ್ ಅಂತಾ ಹೇಳಲು ಲೇ ಮುದುಕಾ ಬೇಗ ಇಳಿ ಅಂತಾ ತನ್ನ ಕೈಯಿಂದ ಬಸ್ಸಿನ ಬಾಗಿಲ ಮೂಲಕ ಕೆಳಗೆ ದಬ್ಬಿದನು. ಆಗ ನಾನು ಸರ್ ಯಾಕೆ ಈ ತರ ಮಾಡಿರಿ ಎಂದಾಗ ನನಗೂ ಕೂಡ ನಿಮ್ಮವ್ವನ ಬೋಸಡಿ ಇದು ನಿನ್ನ ಮನೆಯೇನ್ ಬೇಗ ಇಳಿಯಬೇಕು ಅಂತಾ ತನ್ನ ಕೈಯಿಂದ ನನ್ನ ತೆಲೆಗೆ ಒಂದು ಏಟು ಹೊಡೆದನು. ಕೆಳಗೆ ಬಿದ್ದ ನನ್ನ ತಂದೆ ತೆಲೆಗೆ ಪೆಟ್ಟಾಗಿ ಎಚ್ಚರ ತಪ್ಪಿದನು. ನಾನು ನನ್ನ ತಂದೆಗೆ ಏನು ಆಯಿತು ಅಂತಾ ಗಾಬರಿಯಾದಾಗ ಯಾರೋ ಒಬ್ಬರು ಕಂಡಕ್ಟರನ ಕಡೆಯವರು ಅಂಬ್ಯುಲೇನ್ಸ ತರಿಸಿದರು. ನಾನು ಹಾಗೂ ನನ್ನ ಮಗಳು ನನ್ನ ತಂದೆಯನ್ನು ಅಂಬುಲೇನ್ಸನಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ಮದ್ಯಾಹ್ನದ ವೇಳೆಗೆ ಸೇರಿಸಿದೆವು. ಅಲ್ಲಿನ ಡಾಕ್ಟರ ನನ್ನ ತಂದೆಗೆ ಸ್ವಲ್ಪ ನೋಡಿ ಇಲ್ಲಿ ಸರಿಯಾದ ಟ್ರಿಟಮೇಂಟ ಇಲ್ಲ ನೀವು ರಾಯಚೂರಿಗೆ ಕರೆದುಕೊಂಡು ಹೋಗಿರಿ ಅಂತಾ ಹೇಳಿದರು. ಕಂಡಕ್ಟರ ಕಡೆಯವರು ಅಂಬ್ಯುಲೇನ್ಸ ಹೇಳಿ ತರಿಸಿಕೊಟ್ಟರು. ನಾನು ಮತ್ತು ನನ್ನ ಮಗಳು ನನ್ನ ತಂದೆಯವರನ್ನು ರಾಯಚೂರಿಗೆ ರೀಮ್ಸ್ ಆಸ್ಪತ್ರೆಗೆ ಒಯ್ದೆವು. ನಮ್ಮ ಜೊತೆಗೆ ಕಂಡಕ್ಟರ ಕಡೆಯವರು ನಮ್ಮ ಹಿಂದೆಯೇ ಒಂದು ಕಾರಿನಲ್ಲಿ ರಾಯಚೂರಿಗೆ ಬಂದರು. ನಾವು ರೀಮ್ಸ್ ಆಸ್ಪತ್ರೆಗೆ ಸಾಯಂಕಾಲ ನಮ್ಮ ತಂದೆಯನ್ನು ಸೇರಿಸಿದೆವು. ನಂತರ ಅಲ್ಲಿ ನನ್ನ ತಂದೆಗೆ ಟ್ರಿಟಮೇಂಟ ನೀಡಿದರು. ಮರು ದಿನ ಅಂದರೆ ದಿನಾಂಕ: 09/02/2016 ರಂದು ಸಾಯಂಕಾಲ ಕಂಡಕ್ಟರನ ಕಡೆಯವರು ನಿನ್ನ ತಂದೆಗೆ ಪ್ರೈವೆಟ್ ಆಸ್ಪತ್ರೆಯಲ್ಲಿ ಟ್ರಿಟಮೆಂಟ ಮಾಡೋಣ ಇಲ್ಲಿ ಬೇಡ ಅಂತಾ ನನಗೆ ಹೇಳಿದರು. ನಾನು ಆಯಿತು ನನ್ನ ತಂದೆಗೆ ಹುಷಾರ ಆದರೆ ಸಾಕು ಅಂತಾ ಅಂದುಕೊಂಡು ಅಲ್ಲಿಂದ ಡಿಸಚಾರ್ಜ ಮಾಡಿಸಿಕೊಂಡು ಆಸ್ಪತ್ರೆಯಿಂದ ಹೊರಗಡೆ ತಂದು ನೋಡಿದಾಗ ನನ್ನ ತಂದೆ ಜೀವ ಹೋಗಿತ್ತು. ನಾನು ಬಹಳ ಗಾಬರಿಯಾಗಿ ಈಗ ಏನು ಮಾಡುವುದು ಅಂತಾ ತಿಳಿಯಲಾರದೆ ನನ್ನ ಸಂಬಂಧಿಕರಿಗೆ ವಿಷಯ ತಿಳಿಸದೆ ಕಂಡಕ್ಟರ ಕಡೆಯವರ ಮಾತು ಕೇಳಿದೆನು. ಅವರು ಆಯಿತು ಈಗ ಜೀವ ಹೋಗಿದೆ ಏನು ಮಾಡಲು ಆಗುವುದಿಲ್ಲ ಅಂದರು. ನಾನು ಪೊಲೀಸ್ ಕೇಸು ಮಾಡಬೇಕು ಅಂದರು ಕೇಳದೆ ಇರಲಿ ಕೇಸಿನಿಂದ ಏನು ಉಪಯೋಗ ಇಲ್ಲ ಮೊದಲು ನಿನ್ನ ತಂದೆ ಹೆಣವನ್ನು ಊರಿಗೆ ಒಯ್ದು ಊರಿನಲ್ಲಿ ನಿನ್ನ ತಂದೆ ಹೆಣವನ್ನು ಸುಡಿರಿ ಉಳಿದೆದ್ದಲ್ಲಾ ಆಮೇಲೆ ಮಾತಾಡೋಣ ಅಂತಾ ಹೇಳಿ ಒಂದು ಸಣ್ಣ ವಾಹನವನ್ನು ಬಾಡಿಗೆಗೆ ಮುಗಿಸಿ, ಅವರು ಕೂಡ ನಮ್ಮೊಂದಿಗೆ ನಾನು ಈ ಹಿಂದೆ ವಾಸವಿದ್ದ ನನ್ನ ಸಂಬಂಧಿಕರು ಇರುವ ಸಿಂಧನೂರು ತಾಲ್ಲೂಕ ಬಳಗಾನೂರ ಕ್ಯಾಂಪಿಗೆ ತಂದೆವು. ನಂತರ ಅಲ್ಲಿಗೆ ಹೋದಾಗ 9 ಪಿಎಮ್ ಆಗಿರಬಹುದು. ಅಲ್ಲಿ ನಮ್ಮ ಸಂಬಂಧಿಕರು ಸ್ವಲ್ಪವೆ ಜನರು ಇದ್ದರು. ನಾನು ಅವರಿಗೆ ನನ್ನ ತಂದೆಗೆ ಒಮ್ಮಿಂದೊಮ್ಮಲೆ ಬಸ್ಸಿನಿಂದ ಬಿದ್ದು ಈ ರೀತಿ ಪೆಟ್ಟಾಗಿ ಸಾವಾಗಿದೆ ಅಂತಾ ಹೇಳಿದೆನು. ಆಗ ನಮ್ಮ ಸಂಬಂಧಿಕರು ಸಹ ಆಯಿತು ಅಂತಾ ನಮ್ಮ ಚಿಕ್ಕಪ್ಪನ ಹೊಲದಲ್ಲಿ ನನ್ನ ತಂದೆ ಹೆಣವನ್ನು ಸುಟ್ಟಿದ್ದು, ಈ ರೀತಿ ಕಂಡಕ್ಟರನು ನನ್ನ ತಂದೆಯನ್ನು ನಿರ್ಲಕ್ಷತನದಿಂದ ತಳ್ಳಿದಾಗ ಅಲ್ಲಿ ನಮ್ಮ ಊರಿನವರಾದ ಅಜೀಜ ತಂದೆ ರಸೂಲಸಾಬ ದಫೆದಾರ, ಯಂಕಪ್ಪ ತಂದೆ ತಿಮ್ಮಪ್ಪ ಠಾಣಗುಂದಿ, ನಿಂಗಪ್ಪ ತಂದೆ ಚಂದ್ರಯ್ಯ ಕಾವಲಿ, ಭೀಮಪ್ಪ ತಂದೆ ಬುದ್ಧಪ್ಪ ಅಂಬಿಗೇರ ಇವರು ಇದ್ದರು. ಈ ರೀತಿಯಾಗಿ ನನ್ನ ತಂದೆಯನ್ನು ನಿರ್ಲಕ್ಷತನದಿಂದ ಬಸ್ಸಿನಿಂದ ತಳ್ಳಿ ಕೆಳಗೆ ಬಿಳುವಂತೆ ಮಾಡಿ, ನನಗೆ ಕೈಯಿಂದ ಹೊಡೆದು ನಂತರ ನನ್ನ ತಂದೆಯ ಹೆಣವನ್ನು ಸುಡುವಂತೆ ಮಾಡಿದ ಕಂಡಕ್ಟರ ನಾಗಯ್ಯಸ್ವಾಮಿ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ನಾನು ಆ ದಿನ ಗಾಬರಿಯಲ್ಲಿ ಕೇಸು ವೈಗೆರೆ ಮಾಡಿರುವುದಿಲ್ಲ. ಆಸ್ಪತ್ರೆಯಿಂದ ಕೇಸು ತಾನಾಗಿಯೇ ಆಗುತ್ತದೆ ಅಂತಾ ತಿಳಿದುಕೊಂಡಿರುತ್ತೇನೆ. ಆದರೆ ನಂತರ ಅವರಿವರು ಹೇಳಿದ ಮೇಲೆ ನಾನು ಒಂದು ಅಜರ್ಿಯನ್ನು ಪೊಲೀಸ್ ಇಲಾಖೆಗೆ ಈ ಹಿಂದೆ ನೀಡಿದ್ದೆ. ಬಸ್ಸಿನ ಟಿಕೆಟಗಳು ನಮ್ಮ ಬಳಿ ಇರುವುದಿಲ್ಲ. ಕಾರಣ ಕಂಡಕ್ಟರ ನಾಗಯ್ಯಸ್ವಾಮಿ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಜರ್ಿ ಇರುತ್ತದೆ ಅಂತಾ ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 13/2018 ಕಲಂ:504,323,354,304(ಎ)201 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
                                                                    
ಸೈದಾಪುರ ಪೊಲೀಸ್ ಠಾಣೆ ಗುನ್ನೆ ನಂ. 13/2018 ಕಲಂ. 302, 201 ಐಪಿಸಿ;- ದಿನಾಂಕ-03-02-2018 ರಂದು ನನ್ನ ದೊಡ್ಡ ಮಗ ಹುಸೇನಪ್ಪನಿಗೆ ಆರಾಮ ಇಲ್ಲದ ಕಾರಣ ಆತನಿಗೆ ತೋರಿಸಿಕೊಂಡು ಬರಲು ಯಾದಗಿರಿಗೆ ಹೋಗಿ ಅಲ್ಲಿ ತೋರಿಸಿಕೊಂಡು ಸಾಯಂಕಾಲ 6 ಗಂಟೆಗೆ ಊರಿಗೆ ಬಂದು ನನ್ನ ದೊಡ್ಡ ಮಗ ಹುಸೇನಪ್ಪನ ಮನೆಗೆ ಬಂದು ಮಲಗಿಕೊಂಡಿದ್ದು ಇರುತ್ತದೆ ದಿನಾಂಕ-04-02-2018 ರಂದು ನಾನು ಮನೆಯಲ್ಲಿ ಇರುವಾಗ ನನ್ನ ಸಂಬಂದಿ ಮಹೇಶನ ಹೆಂಡತಿ ಮರೇಮ್ಮ ಈಕೆಯು ನನ್ನಲ್ಲಿಗೆ ಬಂದು ನಿನ್ನ ಮಗ ದೇವಪ್ಪನನ್ನು ಪ್ಲಾಸ್ಟಿಕ್ ಬ್ಯಾಗಡಿಯಲ್ಲಿ ಕಟ್ಟಿ ಹೋಗೆದಿದ್ದಾರೆ ಅಂತಾ ತಿಳಿಸಿದಾಗ ನಾನು ಬೆಳಿಗ್ಗೆ 06-30 ಗಂಟೆ ಸುಮಾರಿಗೆ ನನ್ನ ಮಗ ದೇವಪ್ಪನ ಮನೆಯ ಹತ್ತಿರ ಬಂದು ನೋಡಲಾಗಿ ನನ್ನ ಮಗ ದೇವಪ್ಪನನ್ನು ಪ್ಲಾಸ್ಟಿಕ್ ಬ್ಯಾಗಡಿಯಲ್ಲಿ ಕಟ್ಟಿ ಹಾಕಿದ್ದರು ಆತನು ನನ್ನ ಮಗ ದೇವಪ್ಪ ಅಂತಾ ಗುರು ಹಿಡಿದೆನು,
 ನನ್ನ ಮಗ ದೇವಪ್ಪನು ನಮ್ಮೂರಾದ ನಾಗರಬಂಡಿಯಲ್ಲಿ ಯಾರ ಜೋತೆಯು ಕೂಡ ಜಗಳ ಮಾಡಿ ವೈಷಮ್ಯ ಬೆಳಸಿಕೊಂಡಿರುವದಿಲ್ಲ ಊರಿನಲ್ಲಿ ಎಲ್ಲರೊಂದಿಗೆ ಅನೋನ್ಯವಾಗಿದ್ದನು, ದಿನಾಂಕ-03-02-2018 ರಂದು ರಾತ್ರಿ 10 ಗಂಟೆಯಿಂದ ದಿನಾಂಕ-04-02-2018 ರಂದು ಬೆಳಗಿನ ಜಾವ 5 ಗಂಟೆಯ ಅವದಿಯಲ್ಲಿ ನನ್ನ ಮಗ ದೇವಪ್ಪನ ಹೆಂಡತಿ ಯಂಕಮ್ಮ ಈಕೆಯು ನನ್ನ ಮಗ ದೇವಪ್ಪನಿಗೆ ಕೊಲೆ ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡು ಆತನಿಗೆ ಕೊಲೆ ಮಾಡಿರುತ್ತಾಳೊ ಅಥವಾ ಯಾರಿಂದಾದರು ಮಾಡಿಸಿರುತ್ತಾಳೊ ಹೆಗೆ ಅಂತಾ ಗೊತ್ತಿರುವದಿಲ್ಲ ಕೊಲೆ ಮಾಡಿ ಸಾಕ್ಷಿ  ನಾಸಪಡಿಸಲು ನನ್ನ ಮಗ ದೇವಪ್ಪನ ಮನೆಯ ಮುಂದಿನ ಜಾಗದಲ್ಲಿ ಪ್ಲಾಸ್ಟಿಕ್ ಬ್ಯಾಗಡಿಯಲ್ಲಿ ಕಟ್ಟಿ ಹೆಣವನ್ನು ಹಾಕಿರುತ್ತಾರೆ ಕಾರಣ ನನ್ನ ಮಗ ದೇವಪ್ಪನನ್ನು ಕೊಲೆ ಮಾಡಿದವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಬೇಕಂತ ಈ ದೂರು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 36/2018 ಕಲಂ 15(ಎ), 32,(3) ಕನರ್ಾಟಕ ಅಬಕಾರಿ ಕಾಯ್ದೆ;- ದಿನಾಂಕ 04/02/2018 ರಂದು ಸಾಯಂಕಾಲ 18-30 ಗಂಟೆಗೆ ಶ್ರೀ ವೆಂಕಣ್ಣ ಎ.ಎಸ್.ಐ. ಠಾಣೆಗೆ ಬಂದು ಒಂದು ಆರೋಪಿ, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ ದಿನಾಂಕ: 04/02/2018 ರಂದು 15-00 ಪಿ.ಎಂ ಸುಮಾರಿಗೆ  ನಾನು  ಠಾಣೆಯಲ್ಲಿದ್ದಾಗ ಹೋಸ ಬೀಟ್ ನಂ 36 ಎಂ.ಕೊಳ್ಳೂರ ಲಿಂಗನಗೌಡ ಪಿ.ಸಿ. 365,  ಹಂಚಿಕೆಯಾಗಿದ್ದು ಸದರಿ ಯವರಿಗೆ ಮಾಹಿತಿ ಬಂದಿದ್ದೆನೆಂದರೆ, ಶಹಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಂ. ಕೊಳ್ಳೂರ ಗ್ರಾಮದ ಮರ್ಕಲ್ ಕೊಳ್ಳೂರ ಕ್ರಾಸ್ಸ್ ಹತ್ತಿರ ಪಾನಡೆಬ್ಬಿಯ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗೆಯ ಜಾಲಿ ಕಂಟಿಯ ಮರೆಯಲ್ಲಿ ಒಬ್ಬ ವ್ಯಕ್ತಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಡುತ್ತದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಕು. ಜೈಶ್ರೀ ಡಬ್ಲು.ಪಿ.ಎಸ್.ಐ.(ಪ್ರೋ) ಮತ್ತು ಸಿಬ್ಬಂದಿಯವರಾದ ಹೊನ್ನಪ್ಪ ಹೆಚ್.ಸಿ.101, ಬಾಬು ಹೆಚ್.ಸಿ. 162, ಜೀಪ್ ಚಾಲಕ ಅಮಗೊಂಡ ಎ.ಪಿ.ಸಿ 169  ಇವರಿಗೆ ಬಾತ್ಮೀ ವಿಷಯ ತಿಳಿಸಿ ಹೆಚ್.ಸಿ. 162 ರವರಿಗೆ ಪಂಚರನ್ನು ಕರೆದುಕೊಂಡು ಬರಲು ಹೇಳಿ ಕಳುಹಿಸಿದಂತೆ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ 26 ವರ್ಷ ಜಾತಿ ಲಿಂಗಾಯತ ಉಃ ಕೂಲಿ ಕೆಲಸ ಸಾಃ ಹಳಿ ಸಗರ ಶಹಾಪೂರ 2] ಶ್ರೀ ಅಮಲಪ್ಪ ತಂದೆ ಭೀಮಪ್ಪ ಐಕೂರ ವಯ 46 ವರ್ಷ ಜಾತಿ ಪ.ಜಾತಿ ಉಃ ಕೂಲಿ ಕೆಲಸ ಸಾಃ ದೇವಿ ನಗರ ಶಹಾಪೂರ ಇವರನ್ನು 15-10 ಪಿ.ಎಂಕ್ಕೆ ಕರೆದುಕೊಂಡು ಬಂದು ಹಾಜರಪಡಿಸಿದ್ದು, ಸದರಿಯವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿ ಕಾಲಕ್ಕೆ ಪಂಚರಾಗಿ ಪಂಚನಾಮೆಯನ್ನು ಬರೆಯಿಸಿಕೊಡಲು ಕೆಳೀಕೊಂಡ ಮೇರೆಗೆ ಪಂಚರಾಗಲು ಒಪ್ಪಿ ಕೊಂಡಿದ್ದು. ಎಲ್ಲರು ಕೂಡಿ ದಾಳಿ ಕುರಿತು ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 15-20 ಪಿ.ಎಂಕ್ಕೆ ಠಾಣೆಯಿಂದ ಹೊರಟೆವು ಸದರಿ ವಾಹನವನ್ನು ಅಮಗೊಂಡ ಎ.ಪಿ.ಸಿ 169 ಇವರು ಚಲಾಯಿಸುತಿದ್ದರು, ನೇರವಾಗಿ ಹತ್ತಿಗುಡೂರ-ದೇವದುಗರ್ಾ ಮುಕ್ಯ ರಸ್ತೆಯ ಎಂ. ಕೊಳ್ಳೂರ ಗ್ರಾಮದ ಮರ್ಕಲ್ ಕ್ರಾಸ್ ಹತ್ತಿರ 16-00 ಪಿ.ಎಂಕ್ಕೆ ಹೋಗಿ ವಾಹನವನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದುಕೊಂಡು ಅಲ್ಲಿಂದ  ನಡೆದುಕೊಂಡು ಅಲ್ಲಿದ್ದ ಅಂಗಡಿ, ಹೋಟೆಲಗಳ ಕಡೆಗೆ ಹೋಗಿ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ, ಅಲ್ಲಿ  ಒಬ್ಬ ವ್ಯಕ್ತಿ ಮರ್ಕಲ್ ಕ್ರಾಸ್ ಹತ್ತಿರ ಪಾನಡೆಬ್ಬಿಯ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗೆಯ ಜಾಲಿ ಕಂಟಿಯ ಮರೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಟ್ಟಿದ್ದನು ನೋಡಿ ಖಚಿತ ಪಡಿಸಿಕೊಂಡು 16-10 ಪಿ.ಎಂಕ್ಕೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಸದರಿಯವನ ಸುತ್ತುವರೆದು ದಾಳಿ ಮಾಡಿ ಹಿಡಿದಾಗ ಒಬ್ಬ ವ್ಯೆಕ್ತಿ ಸಿಕ್ಕಿದ್ದು ಮತ್ತು ಮದ್ಯ ಕುಡಿಯಲು ಬಂದ ಜನರು ಮದ್ಯದ ಪಾಕೇಟ್ ಗಳನ್ನು ಬಿಟ್ಟು ಓಡಿ ಹೋದರು ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ನಿಂಗಪ್ಪ ತಂದೆ ಹಣಮಂತ್ರಾಯ ಬಿರನಾಳ ವ|| 32 ಜಾ|| ಬೇಡರ ಸಾ|| ಎಂ. ಕೋಳ್ಳುರು ತಾ|| ಶಹಾಪೂರ ಅಂತ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ಎಂ. ಕೋಳ್ಳೂರ ಗ್ರಾಮದ ಮರಕಲ್ಲ ಕ್ರಾಸ ಹತ್ತಿರ ಪಾನಡೆಬ್ಬಿಯ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗೆಯ ಜಾಲಿ ಕಂಟಿಯ ಮರೆಯಲ್ಲಿ ಒಬ್ಬ ವ್ಯಕ್ತಿ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೇಳಿದನು ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 90 ಎಂ.ಎಲ್.ನ ಒಟ್ಟು 21 ಓರಿಜಿನಲ್ ಜಾಯ್ಸ  ಡಿಲಕ್ಸ ವಿಸ್ಕಿ ಮದ್ಯದ ಪಾಕೇಟ್ಗಳು ಇದ್ದು ಒಂದು ಪಾಕೇಟ್ನ ಕಿಮ್ಮತ್ತು 28.13 ರೂ ಅಂತಾ ಇದ್ದು, 21 ಮದ್ಯ ಪಾಕೇಟಗಳ ಕಿಮ್ಮತ್ತು 590.73 ರೂ ಗಳಾಗುತ್ತಿದ್ದು ಮತ್ತು 03  ಪ್ಲಾಸ್ಟಿಕ್ ಖಾಲಿ ಗ್ಲಾಸ್ ಇದ್ದು ಸದರಿ ಗ್ಲಾಸಗಳು ಮದ್ಯ ಕುಡಿಯಲು ಉಪಯೋಗಿಸಿದಂತೆ ಕಂಡು ಬಂದಿದ್ದು ಮತ್ತು 03 ಕುಡಿಯಲು ಉಪಯೋಗಿಸಿದ ಮದ್ಯದ ಖಾಲಿ ಪಾಕೇಟಗಳು ಇದ್ದವು. 21 ಮದ್ಯದ ಪಾಕೇಟಗಳಲ್ಲಿ  ಒಂದು 90 ಎಂ.ಎಲ್ ನ 01 ಓರಿಜಿನಲ್ ಚಾಯ್ಸ  ಡಿಲಕ್ಸ ವಿಸ್ಕಿ ಮದ್ಯದ ಪಾಕೇಟ್ನ್ನು ಪಂಚರ ಸಮಕ್ಷಮದಲ್ಲಿ ಎಪ್.ಎಸ್.ಎಲ್ ಪರೀಕ್ಷೆ  ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರನ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆಯುಳ್ಳ ಚೀಟಿ ಅಂಟಿಸಿ ಇನ್ನೂಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು. ಸದರಿ ಜಪ್ತಿ ಪಂಚನಾಮೆಯನ್ನು 16-10 ಗಂಟೆಯಿಂದ 17-10 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ 17-50 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯ್ಯಾರಿಸಿ ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 18-30 ಗಂಟೆಗೆ  ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 36/2018 ಕಲಂ 15(ಎ) 32 ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 22/2018 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ ;- ದಿನಾಂಕ: 04-02-2018 ರಂದು 11 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಪಿ.ಐ ಸಾಹೇಬರು ಒಬ್ಬ ಆರೋಪಿ ಹಾಗೂ ಒಂದು ಟಿಪ್ಪರನೊಂದಿಗೆ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ  ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ: 04-02-2018 ರಂದು 7-30 ಎ.ಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಕನರ್ಾಳ ಕೃಷ್ಣಾ ನದಿಯ ತೀರದಿಂದ ಯಾರೋ ತಮ್ಮ ಟಿಪ್ಪರ ಲಾರಿಯಲ್ಲ್ಲಿ  ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಶ್ರೀಶೈಲ ನಾಯಕ ತಂದೆ ಮಲ್ಕಣ್ಣ ನಾಯಕ ನಾಯಕ ವಯಾ:36 ವರ್ಷ ಉ:ಗ್ರಾಮಲೇಕ್ಕಿಗರು ಜಾತಿ:ಬೇಡರ ಸಾ:ಬಿಜಾಸಪೂರ 2) ಶ್ರೀ ದುಶಂತ್ ತಂದೆ ಫಕೀರಪ್ಪ ಕಮ್ಮಾರ ವಯಾ:28 ವರ್ಷ ಉ: ಉ:ಗ್ರಾಮಲೇಕ್ಕಿಗರು ಜಾತಿ:ವಿಶ್ವಕರ್ಮ ಸಾ:ಹ್ಯಾರಡ ತಾ:ಹೂವಿನಹಡಗಲಿ ಹಾವ:ಸುರಪೂರ ಇವರನ್ನು ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ನಾನು ಠಾಣೆಯ ಪಿ.ಎಸ್.ಐ ಶ್ರೀ ಶರಣಪ್ಪ ಹವಲ್ದಾರ, ಪ್ರೋಬೆಶನೇರಿ ಪಿ.ಎಸ್.ಐ ರವರಾದ ಶ್ರೀ ಸೋಮಲಿಂಗ ಒಡೆಯವರ, ಮತ್ತು ಸಿಬ್ಬಂದಿಯವರಾದ ಚಂದ್ರಶೇಖರ ಸಿಹೆಚ್ಸಿ-134, ಬೈಲಪ್ಪ ಸಿಪಿಸಿ-160, ಬಸಪ್ಪ ಸಿಪಿಸಿ-393, ಜಗದೀಶ ಸಿಪಿಸಿ-335, ರಮೇಶ ಸಿಪಿಸಿ-375 ರವರು ಎಲ್ಲರೂ ಕೂಡಿ ಸದರಿ ಪಂಚರೊಂದಿಗೆ ಸರಕಾರಿ ಜೀಪ್ ನಂ:ಕೆಎ-33, ಜಿ-0098 ನೇದ್ದರ ವಾಹನದಲ್ಲಿ ಠಾಣೆಯಿಂದ 07.45 ಎ.ಎಮ್ಕ್ಕೆ ಹೊರಟು 08:30 ಎ.ಎಮ್ ಕ್ಕೆ ಲಕ್ಷ್ಮೀಪೂರ ಕ್ರಾಸ ಹತ್ತಿರ ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ಲಕ್ಷ್ಮಿಂಪೂರ ಕಡೆಯಿಂದ ಒಂದು ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುವದನ್ನು ಕಂಡು ಸದರಿ ವಾಹನವನ್ನು ತಡೆದು ನಿಲ್ಲಿಸಿ ಅದರ ಚಾಲಕನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಅಣವೀರ ತಂದೆ ಶಿವಯೋಗಿ ನಾಲವಾರ ವಯಾ:32 ವರ್ಷ ಜಾತಿ:ಲಿಂಗಾಯತ ಉ:ಡ್ರೈವರ ಸಾ:ಅಲ್ಲೂರ ತಾ:ಚಿತ್ತಾಪೂರ ಹಾವ:ಸ್ವಸ್ತಿಕ ನಗರ ಚಿಂದೆ ಲೇಓಟ ಸೇಡಂ ರೋಡ ಗುಲಬಗರ್ಾ ಅಂತಾ ತಿಳಿಸಿದ್ದು, ಮರಳು ತುಂಬಿಕೊಂಡು ಹೋಗುತ್ತಿದ್ದ ಬಗ್ಗೆ ಯಾವುದೆ ದಾಖಲಾತಿ ಇರುವದಿಲ್ಲ ಅಂತಾ ತಿಳಿಸಿದನು. ಸದರಿ ಟಿಪ್ಪರನ್ನು ಪರಿಶೀಲಿಸಿ ನೋಡಲಾಗಿ ಅದರ ನಂಬರ ಕೆಎ-51, 9995 ಇದ್ದು ಸದರಿ ಲಾರಿಯಲ್ಲಿ ಅಂದಾಜು 12 ಘನ ಮೀಟರ ಮರಳು ತುಂಬಿದ್ದು ಇರುತ್ತದೆ.  ಸದರಿ ಟಪ್ಪರ ಚಾಲಕನು ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ  ಅಕ್ರಮ  ಸಾಗಾಣಿಕೆ ಮಾಡುತ್ತಿದ್ದುದು ಇರುತ್ತದೆ. ಲಾರಿಯಲ್ಲಿ 12 ಘನ  ಮೀಟರ ಮರಳು ಇದ್ದು  ಮರಳಿನ ಒಟ್ಟು ಅಂದಾಜು ಬೆಲೆ 9600=00 ರೂ ಆಗುತ್ತದೆ. ಮರಳನ್ನು ಮತ್ತು ವಾಹನವನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ.  ಸದರಿ ಜಪ್ತಿ ಪಂಚನಾಮೆಯನ್ನು 08:30 ಎ.ಎಮ್ ದಿಂದ 09:30 ಎ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ ಕಾರಣ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೇ ಮೇಲ್ಕಂಡ ಲಾರಿಯಲ್ಲಿನ ಒಟ್ಟು 9600=00 ರೂ ಕಿಮ್ಮತ್ತಿನ   ಅಂದಾಜು 12 ಘನ ಮೀಟರ್ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ಮಾಲಿಕನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸದರಿ ಲಾರಿಯನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆ ಅಂತಾ ಕೊಟ್ಟ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.                                                  
  
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 13/2018 ಕಲಂ: 143, 147, 323, 326, 504, 506 ಸಂಗಡ 149 ಐಪಿಸಿ;-ದಿನಾಂಕ 04.02.2018 ರಂದು ಬೆಳಿಗ್ಗೆ ಫಿರ್ಯಾದಿಯ ತಂಗಿ ಲಕ್ಷ್ಮಿಗೆ ಆರೋಪಿತರ ಮನೆಯಿಂದ ಸಣ್ಣ ಬಾಲಕ ಕರೆಯಲು ಬಂದಿದ್ದು ಆಗ ಫಿರ್ಯಾದಿ ಯಾರಾದರೂ ದೊಡ್ಡವರು ಕರೆದುಕೊಂಡು ಹೋಗುವಂತೆ ಹೇಳಿದಕ್ಕೆ ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಗಾಯಾಳು ಮಹಾದೇವಿ ನೀರು ತುಂಬಲು ಹೋಗುತ್ತಿದ್ದಾಗ ಅಕ್ರಮ ಕೂಟ ರಚಿಸಿಕೊಂಡು ಬಂದ ಆರೋಪಿತರ ಫಿರ್ಯಾದಿ ಮತ್ತು ಗಾಯಾಳುಗಳೊಂದಿಗೆ ಜಗಳ ತೆಗೆದು  ಅವಾಚ್ಯವಾಗಿ ಬೈದು, ಕೈಯಿಂದ ಕಟ್ಟಿಗೆಯಿಂದ ಮತ್ತು ಕಲ್ಲಿನಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಸಲ್ಲಿಸಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 13/2018 ಕಲಂ: 143, 147, 323, 326, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. 

No comments: