Police Bhavan Kalaburagi

Police Bhavan Kalaburagi

Monday, March 19, 2018

BIDAR DISTRICT DAILY CRIME UPDATE 19-03-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-03-2018

ªÉÄúÀPÀgÀ ¥ÉưøÀ oÁuÉ C¥ÀgÁzsÀ ¸ÀA. 40/2018, PÀ®A. 32, 34 PÉ.E PÁAiÉÄÝ :-
ದಿನಾಂಕ 18-03-2018 ರಂದು ಮೇಹಕರ ಸಾಯಗಾಂವ ರೋಡ ನ್ಯೂ ಶಿವನೇರಿ ಹೋಟೆಲ್ ಹೆಸರಿನ ದಾಭಾದ ಮುಂದೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಪ್ಲಾಸ್ಟಿಕ ಚೀಲದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಸೂರ್ಯಕಾಂತ ಪಿ.ಎಸ್.ಐ ಮೇಹಕರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸಾಯಗಾಂವ ಮೇಹಕರ ರೋಡ ಬಸವನ ವಾಡಿ ಕ್ರಾಸ ಹತ್ತಿರ ಮರೆಯಾಗಿ ನಿಂತು ನೋಡಲು ಬಸವನ ವಾಡಿ ಕ್ರಾಸ ಹತ್ತಿರ ಇರುವ ನ್ಯೂ ಶಿವನೇರಿ ಹೋಟೆಲ್ ಹೆಸರಿನ ದಾಭಾದ ಮುಂದೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಎರಡು ಪ್ಲಾಸ್ಟಿಕ ಚೀಲದಲ್ಲಿ ಸರಾಯಿ ಇಟ್ಟುಕೊಂಡು ಆರೋಪಿ ವೆಂಕಟ ತಂದೆ ಮಾರುತಿರಾವ ಜಾಧವ ವಯ: 38 ವರ್ಷ, ಜಾತಿ: ಮರಾಠಾ, ಸಾ: ಬಸವನ ವಾಡಿ ಇತನು ಸಾರಾಯಿ ಮಾರಾಟ ಮಾಡುತ್ತಿದ್ದು ಅದನ್ನು ಖಚಿತ ಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಪಂಚರ ಸಮಕ್ಷಮ ಅವನಿಗೆ ಪ್ಲಾಸ್ಟಿಕ ಚೀಲಗಳಲ್ಲಿ ಏನಿದೆ? ಅಂತ ಕೇಳಿದಾಗ ಅವನು ಇದರಲ್ಲಿ ಸರಾಯಿ ಬಾಟಲಗಳಿರುತ್ತವೆ ಅಂತ ತಿಳಿಸಿದನು, ನಂತರ ಆತನಿಗೆ ನಿನ್ನ ಹತ್ತಿರ ಈ ಸಾರಾಯಿ ಮಾರಾಟ ಮಾಡಲು  ಅಧಿಕೃತವಾದ ಸರಕಾರದ ಪರವಾನಿಗೆ ಇದೇಯಾ? ಅಂತ ಕೇಳಿದಾಗ ಸದರಿಯವನು ನಮ್ಮ ಬಳಿ ಯಾವದೇ ಸಂಬಂಧಪಟ್ಟ ಪ್ರಾಧಿಕಾರದಿಂದ ಅಥವಾ ಸರಕಾರದಿಂದ ಪಡೆದ ಪರವಾನಿಗೆ ಇರುವದಿಲ್ಲ ನಾನು ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುತ್ತಿರುವದಾಗಿ ತಿಳಿಸಿದನು, ಆಗ ಪಿಎಸ್ಐ ರವರು ಪಂಚರ ಸಮಕ್ಷಮ ಸದರಿ ಪ್ಲಾಸ್ಟಿಕ ಚೀಲಗಳಲ್ಲಿರುವ ಸಾರಾಯಿ ಬಾಟಲು ಚೆಕ ಮಾಡಲು ಅದರಲ್ಲಿ ಒಂದು ಚೀಲದಲ್ಲಿ 90 ಎಮ.ಎಲ್ ಸಾಮರ್ಥ್ಯವುಳ್ಳ ಯು.ಎಸ್. ವಿಸ್ಕಿಯ ಒಟ್ಟು 35 ಬಾಟಲಗಳಿದ್ದವು ಅವುಗಳ ಅ.ಕಿ 980/- ರೂ. ಬೆಲೆಯುಳ್ಳದು ಇರುತ್ತದೆ ಮತ್ತು 180 ಎಮ್.ಎಲ್ ಸಾಮರ್ಥ್ಯವುಳ್ಳ 10 ಮ್ಯಾಕ ಡ್ಯುವೇಲ್ಸ ನಂ. 1 ಸಾರಾಯಿ  ಬಾಟಲಗಳು ಇವುಗಳ ಅ.ಕಿ 1800/- ರೂ. ಬೆಲೆಯುಳ್ಳದ್ದು ಇರುತ್ತದೆ, ಇನ್ನೊಂದು ಪ್ಲಾಸ್ಟಿಕ ಚೀಲದಲ್ಲಿ 650 ಎಮ್.ಎಲ್ ಸಾಮರ್ಥ್ಯವುಳ್ಳ 7 ಬೀಯರ ಬಾಟಲಗಳು ಅ.ಕಿ 875/- ರೂ. ಮತ್ತು 330 ಎಮ್.ಎಲ್ ಸಾಮರ್ಥ್ಯವುಳ್ಳ 8 ಬಾಟಲಗಳು ಅ.ಕಿ 544/- ರೂ. ಬೆಲೆಯುಳ್ಳದ್ದು ಇರುತ್ತದೆ, ನಂತರ ಸದರಿ ಆರೋಪಿತನ ವಶದಲ್ಲಿನ ಪ್ಲಾಸ್ಟಿಕ ಚೀಲ ಸಮೇತ ಎಲ್ಲಾ ಸಾರಾಯಿ ಬಾಟಲಗಳನ್ನು ಮತ್ತು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 35/2018, ಕಲಂ. 279, 338 ಐಪಿಸಿ :-
ದಿನಾಂಕ 18-01-2018 ರಂದು ಫಿರ್ಯಾದಿ ಅಬ್ದುಲ್ ವಹೀದ ತಂದೆ ಮಹ್ಮದ ಯುಸುಫಮಿಯ್ಯ, ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ; ಚಿಕ್ಕಪೇಟ್ ಬೀದರ ರವರ ತಮ್ಮನಾದ ದಾವುದ@ದಾವುದ ಇಬ್ರಾಹಿಂ ತಂದೆ ಮಹ್ಮದ ಯುಸುಫಮಿಯ್ಯ ವಯ: 20 ವರ್ಷ, ಸಾ: ಮಾಮಿಡಗಿ ಈತನು ಮೋಟಾರ ಸೈಕಲ ನಂ. ಕೆಎ-37/ಜೆ-3596 ನೇದ್ದರ ಮೇಲೆ ಬೀದರ ಮೈಲೂರ ಕ್ರಾಸ್ ಕಡೆಯಿಂದ ಹಾರೂರಗೇರಿ ಕಮಾನ ಒಳಗಡೆ ರೋಡಿನ ಮೇಲೆ ಅತೀ ವೇಗ ಹಾಗು ನಿಸ್ಕಾಳಜಿತದಿಂದ ಚಲಾಯಿಸಿಕೊಂಡು ಬಂದು ಹಾರೂರಗೇರಿ ಕಮಾನ ಹತ್ತಿರ ತನ್ನ ಮೋಟಾರ ಸೈಕಲನ ವೇಗ ಹತೋಟಿಯಲ್ಲಿಟ್ಟುಕೊಳ್ಳದೇ ಸ್ಕೀಡ ಮಾಡಿ ಬಿದ್ದಿರುತ್ತಾನೆ, ಇದರಿಂದ ಫಿರ್ಯಾದಿಯ ತಮ್ಮನಿಗೆ ತೆಲೆಗೆ ಭಾರಿ ರಕ್ತ ಗುಪ್ತಗಾಯ ಹಾಗೂ ಬಲಗಾಲ ಹಿಮ್ಮಡಿಯ ಹತ್ತಿರ ತರಚಿದ ರಕ್ತಗಾಯವಾಗಿದ್ದರಿಂದ ಆತನಿಗೆ 108 ಅಂಬುಲೇನ್ಸನಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-03-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: