Police Bhavan Kalaburagi

Police Bhavan Kalaburagi

Thursday, March 1, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ  ಬಸವರಾಜ ತಂದೆ ಶ್ರೀಮಂತ ಬಬಲೇಶ್ವರ ಸಾ|| ಮಾತೋಳಿ ರವರು ದಿನಾಂಕ 28-02-2018 ರಂದು ಬೆಳಿಗ್ಗೆ ನನ್ನ ತಂದೆಯಾದ ಶ್ರೀಮಂತ ಬಬಲೇಶ್ವರ ರವರು ನಮ್ಮ ಟಿ.ವಿ.ಎಸ್ ಮೋಟರ ಸೈಕಲ ನಂ ಕೆಎ-32 ಯು-8952 ನೇದ್ದರ ಮೇಲೆ ನೀರು ತುಂಬಿಕೊಂಡು ಬರಲು ಕಲಬುರಗಿ - ಅಪಜಲಪೂರ ರೊಡಿಗೆ ಇರುವ ನಿರಿನ ಟ್ಯಾಂಕಿಗೆ ಹೋಗಿದ್ದರುಬೆಳಿಗ್ಗೆ 07:30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಕರೆಪ್ಪ ಪೂಜಾರಿ ರವರು ಪೋನ ಮಾಡಿ ತಿಳಿಸಿದ್ದೆನೆಂದರೆನಿಮ್ಮ ತಂದೆಯವರು ನೀರು ತುಂಬಿಕೊಂಡು ತಮ್ಮ ಟಿ.ವಿ.ಎಸ್ ಮೋಟರ ಸೈಕಲ ಮೇಲೆ ಮನೆಯ ಕಡೆಗೆ ಹೋಗುತ್ತಿದ್ದಾಗಅಫಜಲಪೂರದ ಕಡೆಯಿಂದ ಒಂದು ಅಶೋಕ ಲೈಲೆಂಡ್ ಕಂಪನಿಯ ಗೂಡ್ಸ ವಾಹನದ ಚಾಲಕನುತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅಫಘಾತ ಪಡಿಸಿದ್ದುಅಫಘಾತ ಸಂಭವಿಸಿದ ಕೂಡಲೆ ಗೂಡ್ಸ ವಾಹನ ಸಹ ರೋಡಿನ ಪಕ್ಕದಲ್ಲಿ ಪಲ್ಟಿಯಾಗಿ ಬಿದ್ದಿರುತ್ತದೆ.  ಘಟನೆ ನಡೆದ ಸ್ಥಳದ ಹತ್ತಿರದಲ್ಲಿಯೆ ಇದ್ದ ನಾನು ಮತ್ತು ನಮ್ಮೂರಿನ ದತ್ತಾ ಪಾಟಿಲ ರವರು ನಿಮ್ಮ ತಂದೆಯ ಹತ್ತಿರ ಹೋಗಿ ನೋಡುವಷ್ಟರಲ್ಲಿ ಗೂಡ್ಸ ವಾಹನದ ಚಾಲಕನು ಓಡಿ ಹೋಗಿರುತ್ತಾನೆ.  ಸದರಿ ಘಟನೆಯಲ್ಲಿ ನಿಮ್ಮ ತಂದೆಯ ಎಡಗಡೆಯ ತಲೆಗೆಮುಖಕ್ಕೆ ಭಾರಿ ರಕ್ತಗಾಯಗಳಾಗಿ ಕೈ ಕಾಲುಗಳಿಗೆ ತರಚಿದ ಗಾಯಗಳಾಗಿರುತ್ತವೆ ಅಂತಾ ತಿಳಿಸಿದನುಆಗ ನಾನು ಓಡುತ್ತಾ ಘಟನೆ ಸ್ಥಳಕ್ಕೆ ಬರುವಷ್ಟರಲ್ಲಿ ಯಾರೊ 108 ವಾಹನಕ್ಕೆ ಪೋನ ಮಾಡಿದ್ದರಿಂದ ಸ್ಥಳಕ್ಕೆ ಸದರಿ ವಾಹನ ಬಂದಿದ್ದುನಾನು ಮತ್ತು ನಮ್ಮ ಅಣ್ಣ ತಮ್ಮಕಿಯ ಸಿದ್ದಾರಾಮ ಬಬಲೇಶ್ವರಮತ್ತು ನಮ್ಮ ಚಿಕ್ಕಪ್ಪ ಮಲ್ಲಿಕಾರ್ಜುನ ಬಬಲೇಶ್ವರ ಮತ್ತಿತರರು ಚಿಕಿತ್ಸೆಗಾಗಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆಚಿಕಿತ್ಸೆ ಪಲಕಾರಿ ಆಗದೆ ನನ್ನ ತಂದೆ ಬೆಳಿಗ್ಗೆ 11:45 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾರೆ ದಿನಾಂಕ 28-02-2018 ರಂದು ಬೆಳಿಗ್ಗೆ ಅಶೋಕ ಲೈಲೆಂಡ್ ಗೂಡ್ಸ ವಾಹನ ನಂ ಎಮ್.ಹೆಚ್-12 ಎಮ್.ವಿ- 2997 ನೇದ್ದರ ಚಾಲಕನು ಅಫಜಪೂರದ ಕಡೆಯಿಂದ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ತಂದೆಯ ಟಿ.ವಿ.ಎಸ್ ಮೋಟರ ಸೈಕಲ ನಂ ಕೆಎ-32 ಯು-8952 ನೇದ್ದಕ್ಕೆ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿ ತನ್ನ ವಾಹನವನ್ನು ಪಲ್ಟಿ ಮಾಡಿ ವಾಹನದಿಂದ ಜಿಗಿದು ಓಡಿ ಹೋಗಿರುತ್ತಾನೆಕಾರಣ ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರೂಗಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮುಧೋಳ ಠಾಣೆ : ದಿನಾಂಕ 28-02-2018 ರಂದು ಮಧ್ಯಹ್ನ ಸರಕಾರಿ ಬಸ್ಸ ನಂಬರ ಟಿಎಸ್. ನಂ06ಯುಎ1841 ನೇದ್ದರ ಚಾಲಕನು ತನ್ನ ಬಸ್ಸನ್ನು ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿ ಮುಂದುಗಡೆ ಮೊ/ಸೈ ಮೇಲೆ ಹೊಗುತ್ತಿದ್ದ ಗಾಯಾಳು ಸಾಬಣ್ನಾ ತಂದೆ ಕಾಶಪ್ಪ ಸಾ: ಗುರುಮಠಕಲ ಇತನಿಗೆ ಬುರುಗಪಲ್ಲಿ ಸಿಮಾಂತರದಲ್ಲಿ ಅಪಘಾತ ಪಡಿಸಿ ಗಾಯಗೋಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು  :
ರಾಘವೇಂದ್ರ ನಗರ ಠಾಣೆ : ಶ್ರೀ ಮಂಜುರ ಅಹ್ಮದ ತಂದೆ ಅಬ್ದುಲ ರಸೂಲ ಶೇಖ ಸಾ:ನಾಯ್ಕಲ ತಾ:ಶಹಾಪುರ ಜಿ:ಯಾದಗಿರ ಹಾ:ವ:ರಿಯಾಸತ್ತ ಕಾಲೋನಿ ಪರ್ವೇಜ ಗಾರ್ಡನ ಎಂ.ಎಸ್‌‌.ಕೆ ಮೀಲ್‌ ಕಲಬುರಗಿ ಇವರು ದಿನಾಂಕ:27/02/2018 ರಂದು ಸಾಯಂಕಾಲ ಅಂಗಡಿಯಲ್ಲಿದ್ದಾಗ ಸಿರಿನ್‌ಬಾನು ಮತ್ತು ಬಾಬುಶೇಖ, ಆಸೀಫ, ಸೈಯದಬೇಗಂ ಕೂಡಿಕೊಂಡು ನನ್ನ ಅಂಗಡಿಯ ಮುಂದೆ ಬಂದು ಅವರಲ್ಲಿ ಬಾಬು ಇತನು ನನಗೆ ನಿಮ್ಮ ಅಣ್ಣ ಮಹ್ಮದ ಜಿಲಾಲ ಇತನು ನಮ್ಮಿಂದ ಹಣ ಪಡೆದುಕೊಂಡು ಮರಳಿ ಕೊಡುತ್ತಿಲ್ಲ ನೀನು ಜವಾಬ್ದಾರಿ ತೆಗೆದುಕೊ ಅಂತ ಹೇಳಿದ್ದೆ ಆಗ ನಾನು ಅಂಗಡಿಯಿಂದ ಹೊರಗೆ ಬಂದು ಸದರಿಯವರಿಗೆ ನಾನು ನಮ್ಮ ಅಣ್ಣ ಬೇರೆಯಾಗಿದ್ದು ಅವನ ಹಣದ ಜವಾಬ್ದಾರಿ ನಾನು ಏಕೆ ತೆಗೆದುಕೊಳ್ಳಲಿ ನೀವೆ ಅವನ ಹತ್ತಿರ ಹೋಗಿ ಹಣ ತೆಗೆದುಕೊಂಡು ಬರಿ ಅಂತಾ ಹೇಳಿದ್ದೆ ಆಗ ಸದರಿ ಬಾಬು ಇತನು ನೀನು ನಿಮ್ಮ ಅಣ್ಣನ ಜವಾಬ್ದಾರಿ ತೆಗೆದುಕೊಳ್ಳದೆ ಇದ್ದಲ್ಲಿ ನಿನ್ನ ಮನೆಗೆ ಕೀಲಿ ಹಾಕುತ್ತೇನೆ ಅಂತಾ ಹೇಳಿದ ಆಗ ನಾನು ಸದರಿಯವನಿಗೆ ನೀನು ನನ್ನ ಮನೆಗೆ ಹೇಗೆ ಕೀಲಿ ಹಾಕುತ್ತಿ ನೋಡುತ್ತೇನೆ ಅಂತ ಅಂದಿದ್ದೆ ಆಗ ಬಾಬು ಇತನು ಮಗನೆ ಮನೆ ಖಾಲಿ ಮಾಡು ಇಲ್ಲದಿದ್ದರೆ ನೀನಗೆ ಬಿಡುವದಿಲ್ಲಾ ಅಂತಾ ಬೈಯುತ್ತಿದ್ದ ಆಗ ಆಸೀಫ ಇತನು ನನಗೆ ಹಿಡಿದುಕೊಂಡಿದ್ದು ಬಾಬು ಇತನು ಕೈ ಮುಷ್ಠಿಮಾಡಿ ನನ್ನ ಮೂಗಿನ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಮತ್ತು ನನ್ನ ಹೊಟ್ಟೆಗೆ, ಬಲಗಾಲ ತೊಡೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ಸೀರನಬಾನು ಮತ್ತು ಸೈಯಿದಾ ಬೇಗಂ ಇವರು ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ಸದರಿ ಜಗಳದ ಸಪ್ಪಳ ಕೇಳಿ ಅಲ್ಲೆ ಇದ್ದ ನನ್ನ ಅಳಿಯ ಪರ್ವೇಜ ಮತ್ತು ಬಡಾವಣೆಯ ಅಫರೋಜ ಅಹ್ಮದ, ಜಾವಿದ ಇವರು ಬಂದು ನನಗೆ ಹೊಡೆಯುವದನ್ನು ಬಿಡಿಸಿದ್ದು ಇರುತ್ತದೆ. ನನಗೆ ರಕ್ತಗಾಯವಾಗಿರುವದನ್ನು ನೋಡಿ ನನ್ನ ಅಳಿಯ ಪರ್ವೇಜ ಇತನು ನನಗೆ ಆಟೋದಲ್ಲಿ ಕೂಡಿಸಿಕೊಂಡು ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ ಮಹೇಶ ಕುಮಾರ ತಂದೆ ಶರಣಪ್ಪಾ ಮಾಡೇಂ ಸಾ : ಅಡಕಿ ಗ್ರಾಮ ರವರು ದಿನಾಂಕ;17-02-2018 ರಂದು ರಾತ್ರಿ 07-30 ಗಂಟೆ ಸುಮಾರಿಗೆ ನಾನು ನಮ್ಮೂರ ಶಾಂತಪ್ಪ ಹುಂಡೇಕರ ರವರ ಮನೆಯ ಹತ್ತಿರ ಮುದ್ದಮ್ಮ ಬೇಡರ ಇವರಿಗೆ ಅನೀಲ ಭಾಗ್ಯ ಯೋಜನೆ ಅಡಿಯಲ್ಲಿ ನಿಮಗೆ ಉಚಿತ ಸಿಲಿಂಡರ್ ಕೊಡುವ ಕಾರ್ಯಕ್ರಮ ಇದ್ದು ತಾವುಗಗಳು ಅದನ್ನು ತೆಗೆದುಕೊಳ್ಳಬೇಕು ಅಂತಾ ಹೇಳಿ ಅಲ್ಲೆಯೆ ಕುಳಿತ್ತಿದ್ದಾಗಅದೇ ಸಮಯಕ್ಕೆ ದತ್ತಾತ್ರೇಯ ತಂದೆ ಘಾಳೆಪ್ಪಾ ಇಲ್ಲಾಳ ಸಾ ಅಡಕಿ ರವರು ಅಲ್ಲಿಗೆ ಬಂದು ನನಗೆ ಈ ವಿಷಯವನ್ನು ನನಗೆ ಹೇಳದೆ ಕೇಳದೆ ಯಾಕೆ ಮಾಡುತ್ತಿಯಾ ಅಂತಾ ಅವಾಚ್ಚವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: