Police Bhavan Kalaburagi

Police Bhavan Kalaburagi

Tuesday, March 6, 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನರೋಣಾ ಠಾಣೆ  ಠಾಣೆ :ದಿನಾಂಕ: 05/03/2018 ರಂದು ಲಾಡಚಿಂಚೋಳಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ.ಗಜಾನನ.ಕೆ.ನಾಯಕ ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲಾಡಚಿಂಚೋಳಿ  ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ  ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಸರ್ಕಾರಿ ಶಾಲೆಯ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಶಾಂತಪ್ಪ ತಂದೆ ಧರ್ಮಣ್ಣಾ ಪೂಜಾರಿ, ಸಾ:ಲಾಡಚಿಂಚೋಳಿ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1] ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 850/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ಸುಬಾಷ ತಂದೆ ಕೇಸು ಜಾಧವ ಸಾ|| ರಾಂಪೂರ (ಪಿಎ) ತಾಂಡಾ ತಾ|| ಸಿಂದಗಿ ರವರು ದಿನಾಂಕ 01-03-2018 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಸಂಭಂದಿಕನಾದ ಶಂಕರ ತಂದೆ ಮೇಗು ರಾಠೋಡ ಸಾ|| ರಾಂಪೂರ (ಪಿಎ) ತಾಂಡಾ ಇಬ್ಬರು ಕೂಡಿ ಶಂಕರನ ಮೋಟರ ಸೈಕಲ ನಂ ಕೆಎ-28 ಇಡಿ-3487 ನೇದ್ದರ ಮೇಲೆ ನಮ್ಮ ತಾಂಡಾದಿಂದ ಅಕ್ಕಲಕೋಟದ ಶ್ರೀ ಸ್ವಾಮಿ ಸಮರ್ಥ ದೆವರ ಜಾತ್ರೆಗೆ ಹೋಗಿರುತ್ತೇವೆ. ಮೋಟರ ಸೈಕಲ ಶಂಕರನೆ ನಡೆಸುತ್ತಿದ್ದು, ನಾನು ಅವನ ಹಿಂದೆ ಕುಳೀತಿರುತ್ತೇನೆ. ಜಾತ್ರೆ ಮುಗಿಸಿಕೊಂಡು ಮರಳಿ ಮೋಟರ ಸೈಕಲ ಮೇಲೆ ನಮ್ಮ ತಾಂಡಾಕ್ಕೆ ಹೊರಟಿರುತ್ತೇವೆ. ಸಾಯಂಕಾಲ ನಾವು ಅಫಜಲಪೂರ ಕರಜಗಿ ರೋಡಿಗೆ ಇರುವ ಸಿರವಾಳ ಕ್ರಾಸ ಹತ್ತಿರ ರೋಡಿನ ಮೇಲೆ ನಮ್ಮ ಸೈಡಿಗೆ ನಾವು ಬರುತ್ತಿದ್ದಾಗ, ಎದರುಗಡೆಯಿಂದ ಒಬ್ಬ ಮೋಟರ ಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿದನು. ಡಿಕ್ಕಯಿಂದ ನಾನು ಮೋಟರ ಸೈಕಲ ಮೇಲಿಂದ ಹಾರಿ ಕೆಳಗೆ ಬಿದ್ದೆನು. ಮೋಟರ ಸೈಕಲ ನಡೆಸುತ್ತಿದ್ದ ಶಂಕರನು ಮೋಟರ ಸೈಕಲ ಸಮೇತ ಕೆಳಗೆ ಬಿದ್ದನು. ಸದರಿ ಮೋಟರ ಸೈಕಲ ಡಿಕ್ಕಿಯಿಂದ ನನಗೆ ಅಷ್ಟೇನು ಗಾಯಗಳು ಆಗಿರುವುದಿಲ್ಲ. ನಂತರ ಎದ್ದು ಶಂಕರನಿಗೆ ನೋಡಲಾಗಿ ಅವನ ಬಲಗಾಲು ಮೋಳಕಾಲು ಕೆಳಗೆ ಕಾಲು ಮುರಿದಿತ್ತು. ತಲೆಗೆ ಮತ್ತು ಎಡಗಾಲು ತೊಡೆಗೆ ಒಳಪೆಟ್ಟುಗಳಾಗಿ  ಮೈ ಕೈಗೆ ಅಲ್ಲಲ್ಲಿ ತರಚಿದ ರಕ್ತಗಾಯಗಳು ಮತ್ತು ಬಾರಿ ಗುಪ್ತಗಾಯಗಳು ಆಗಿದ್ದವು, ನಮಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ಸವಾರನು ಘಟನೆ ಆದ ತಕ್ಷಣ ಮೋಟರ ಸೈಕಲನ್ನು ಅಲ್ಲೆ ಸ್ಥಳದಲ್ಲೆ ಬಿಟ್ಟು ಓಡಿ ಹೊಗಿರುತ್ತಾನೆ. ಸದರಿ ನಮಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ನಂ ನೊಡಲಾಗಿ ಅದರ ನಂ ಕೆಎ-32 ಇಬಿ-6782 ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ :ಶ್ರೀಮತಿ.ಗಂಗಮ್ಮಾ ಗಂಡ ಗುಂಡಪ್ಪಾ ಶೆಳ್ಳಗಿ ಮು||ಭೂಪಾಲ ತೆಗನೂರ ಇವರು ದಿನಾಂಕ:04-03-2018 ರಂದು ನನ್ನ ತವರು ಮನೆಗೆ ನಮ್ಮ ತಾಯಿಯಾದ ರಾಚಮ್ಮಗೆ ಆರಾಮ ಇಲ್ಲದ ಕಾರಣ ದಣ್ಣೂರ ಗ್ರಾಮಕ್ಕೆ ನನ್ನ ತಂಗಿಯಾದ ಮಹಾನಂದಳ ಮನೆಗೆ ಸಾಯಾಂಕಾಲ ಬಂದು ನನ್ನ ತಾಯಿ ರಾಚಮ್ಮ ನನ್ನ ತಂಗಿ ಮಹಾನಂದಳ ಮನೆಯಲ್ಲೆ ಇದ್ದಳು. ಮೂರು ನಾಲ್ಕು ದಿನದ ಹಿಂದೆ ಅದೇ ಗ್ರಾಮ ದಣ್ಣೂರ ನನ್ನ ಅಕ್ಕಳಾದ ಭೀಮಾಬಾಯಿ ಗಂಡ ಸಿದ್ದರಾಮ ಮನೆಗೆ ಕರೆದುಕೊಂಡು ಹೋಗ್ಯಾಳ ಅಂತಾ ನನ್ನ ತಂಗಿ ಮಹಾನಂದ ಹೇಳಿದಳು. ನಾನು ತಂಗಿ ಮಹಾನಂದಗೆ ಕೇಳಿ ನನ್ನ ತಾಯಿಗೆ ಹಣ್ಣು ಹಂಪಲ ತಗೆದುಕೊಂಡು ಹೋಗಿ ಮಾತಾಡಿದೆ. ನನ್ನ ತಾಯಿಗೆ ಹಣ್ಣು ತಿನಿಸಿ ಮಾತಾಡುತ್ತಿದ್ದಾಗ ನನ್ನ ಅಕ್ಕನ ಮಗನಾದ ಪ್ರಕಾಶ ಮತ್ತು ಸಿದ್ದಾರಾಮ ನನ್ನ ಅಕ್ಕಳಾದ ಭೀಮಾಬಾಯಿ ಬಂದಿದೆ ತಡ ಪ್ರಕಾಶ ಏ ರಂಡಿ ಗಂಗಿ ನೀ ಎಲ್ಲಿಗೆ ಹೋಗುತ್ತಿ ಅಂತಾ ತಡೆದು ನಿಲ್ಲಿಸಿ ನೀ ನಮ್ಮ ಮನೆಗೆ ಏಕೆ ಬಂದಿದಿ ಭೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈ ಹಿಡಿದು ಕಾಪಳಕ್ಕೆ ಹೊಡೆದನು. ಅಸ್ಟರಲ್ಲಿ ನನ್ನ ಅಕ್ಕನ ಗಂಡನಾದ ಸಿದ್ದರಾಮ ಅಕ್ಕ ಭೀಮಾಬಾಯಿ ಕೂಡಿ ಹಾದರಗಿತ್ತಿ ರಂಡಿ ಭೋಸಡಿ ಎಂದು ಬೈಯುತ್ತಿದ್ದರು. ಅಷ್ಟರಲ್ಲೆ ನನ್ನ ತಂಗಿ ಗುಂಡಮ್ಮ ಗಂಡ ಬಸವರಾಜ ಡಿಗ್ಗಿ ಗಂಡ ಹೆಂಡತಿ ಬಂದು ಈ ಬೋಸಡಿ ಗಂಗಿಗೆ ಬಿಡಬೇಡರಿ ನನ್ನ ತಾಯಿಯ ಜಾಗದ ಮೇಲೆ ಮನೆ ಮಹಾನಂದಗ ಮಾಡಿಸ್ಯಾಳ ಗಂಗಿ ರಂಡಿಗಿ ಬಿಡಬ್ಯಾಡ ಏ ಪ್ರಕಾಶ ಗಂಗಿ ಜೀವನೆ ಕಲಸನಾಡು ಅಂದಿದನು ನಾವು ನೋಡುಕೊಳ್ಳುತ್ತೀವಿ ಎಂದಾಗ ಹೊಡಿಬಡಿ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ :ಶ್ರೀ  ಶಂಕರ ಹಂಗರಗಿ ಸಾ||ಗೋಳಾ(ಬಿ) ಇವರು ದಿನಾಂಕ:05-03-2018 ರಂದು ನಮ್ಮ ಮನೆಯ ಮುಂದೆಯೇ ನಮ್ಮ ಅಣ್ಣತಮ್ಮಕಿಯವರಾದ ರವೀಂದ್ರ ತಂದೆ ಬೀರಪ್ಪ ಹಂಗರಗಿ ಇವರ ಮನೆಯ ಇದ್ದು. ಸದರಿಯವರ ಮನೆಯ ಹತ್ತಿರವೇ ನಮ್ಮ ಮನೆಗೆ ಹೋಗಿಬರುವ ದಾರಿ ಇರುತ್ತದೆ. ನಾವು ನಮ್ಮ ಮನೆಗೆ ಹೋಗುವಾ ಕಾಲಕ್ಕೆ ರವೀಂದ್ರ ಹಾಗೂ ಅವರ ಕುಟುಂಬದವರು ನಾವು ಹೋಗಲು ಬರದಂತೆ ರಸ್ತೆಯ ಮೇಲೆ ಕುಳಿತುಕೊಳ್ಳುವುದು ಮತ್ತು ನಮ್ಮನ್ನು ನೋಡಿ ಯ್ಯಾಸಿದಿಗಡಿ ಮಾತನಾಡುವುದು ಮಾಡುತ್ತಿರುತ್ತಾರೆ. ಅದರಂತೆ ಮೊನ್ನೆ ರಾತ್ರಿ ಕೂಡ ರವೀಂದ್ರ ಈತನು ತನ್ನ ಹೆಂಡಿತಿಯಾದ ಮಹಾನಂದಳೊಂದಿಗೆ ಮಾತನಾಡುತ್ತಾ ಸದರಿ ರಸ್ತೆಯ ಮೇಲೆ ಕುಳಿತ್ತಿದ್ದರಿಂದ ನಾನು ನನಗೆ ಹೋಗಿಬರಲು ದಾರಿಬಿಟ್ಟು ಕುಳಿತುಕೊಳ್ಳಿ ಎಂದು ಹೇಳಿ ನಮ್ಮ ಮನೆಗೆ ಹೋಗಿದ್ದು  ದಿನಾಂಕ:04-03-2018 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ ಅಶೋಕ ಮತ್ತು ಶ್ರೀಶೈಲ ರವರುಗಳು ಮಾತನಾಡುತ್ತಾ ನಮ್ಮ ಓಣಿಯಲ್ಲಿರುವ ಸಿದ್ದಾರಾಮ ಸೌಕಾರ ಇವರ ಗಿರಿಣ ಹತ್ತಿರ ನಿಂತಿರುವಾಗ ನಮ್ಮ ಅಣ್ಣತಮ್ಮಕಿಯರಾದ 1)ರವೀಂದ್ರ ತಂದೆ ಬೀರಪ್ಪ ಹಂಗರಗಿ, 2)ಹಣಮಂತ ತಂದೆ ರಾಮಣ್ಣಾ ಹಂಗರಗಿ, 3)ರುಕ್ಮಣ್ಣ ತಂದೆ ಬೀರಪ್ಪ ಹಂಗರಗಿ, 4)ಮಹಾನಂದ ಗಂಡ ರವೀಂದ್ರ ಹಂಗರಗಿ ಮತ್ತು 5)ಜಗದೇವಿ ತಂದೆ ಬೀರಪ್ಪ ಹಂಗರಗಿ ಎಲ್ಲರೂ ಕೂಡಿಕೊಂಡು ಬಂದು ರವೀಂದ್ರ ಹಾಗೂ ರುಕ್ಮಣ್ಣ ಇವರು ನನಗೆ ಏ ಬೋಸಡಿ ಮಗನೆ ನಿನ್ನೆ ರಾತ್ರಿ ನಮಗೆ ಬೈಯ್ಯುತ್ತಾ ನಿಮ್ಮಮನೆಗೆ ಹೋಗುತ್ತಿದ್ದಿಯಾ ಮತ್ತು ನಿಮ್ಮ ಮನೆಗೆ ಹೋಗಲು ರಸ್ತೆ ಕೊಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ರವೀಂದ್ರನು ಅಲ್ಲೆ ಬಿದ್ದಿರುವ ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು ರುಕ್ಮಣ್ಣನು ಸಹ ಕಲ್ಲಿನಿಂದ ಎಡಗಡೆ ರಟ್ಟೆಯ ಭಾಗಗಕ್ಕೆ ಹೊಡೆದಿದ್ದರಿಂದ ತರಚಿದ ಗಾಯವಾಗಿರುತ್ತದೆ. ಆಗ ನನ್ನ ಮಕ್ಕಳಾದ ಶ್ರೀಶೈಲ ಮತ್ತು ಅಶೋಕ ಜಗಳ ಬಿಡಿಸಲು ಬಂದಾಗ ಹಣಮಂತನು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಅಲ್ಲದೇ ರವೀಂದ್ರನು ಅಶೋಕನ ಎಡಗೈ ಮಣಿಕಟ್ಟಿನ ಹತ್ತಿರ ಹಲ್ಲಿನಿಂದ ಕಚ್ಚಿರುತ್ತಾನೆ. ರುಕ್ಮಣ್ಣ ಶ್ರೀಶೈಲನ ಹೊಟ್ಟಯ ಮೇಲ್ಭಾಗಗಕ್ಕೆ ಬಲಗಡೆ ಹಲ್ಲಿನಿಂದ ಕಚ್ಚಿದ್ದು ಅಲ್ಲದೇ ಕಲ್ಲಿನಿಂದ ಅವನ ಎಡಗಾಲ ಹೆಬ್ಬರಳಿಗೆ ಹೊಡೆದು ರಕ್ತಗಾಯ ಪಡಿಸಿದ್ದು ಅಷ್ಟರಲ್ಲಿಯೇ ವಿಷಯ ಗೊತ್ತಾಗಿ ಜಗಳ ಬಿಡಿಸುತ್ತಿರುವಾಗ ಮಹಾನಂದ ಮತ್ತು ಜಗದೇವಿ ಇವರುಗಳು ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಜಗದೇವಿ ಇವಳಿಗೆ ನೆಲಕ್ಕೆ ಕೆಡವಿ ಕೈಯಿಂದ ಹೊಡೆಬಡಿ ಮಾಡಿ ಕಾಲಿನಿಂದ ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ರವೀಂದ್ರ ಹಂಗರಗಿ ಸಾ||ಗೋಳಾ(ಬಿ) ಇವರ ಮನೆಯ ಹಿಂದೆಯೇ ನಮ್ಮ ಅಣ್ಣತಮ್ಮಕಿಯವರಾದ ಶಂಕರ ತಂದೆ ಸಾಯಣ್ಣಾ ಹಂಗರಗಿ ಇವರ ಮನೆಯಿದ್ದು ಅವರ ಮನೆಗೆ ಹೋಗಿಬರಲು ನಮ್ಮ ಜಾಗದಿಂದಲೆ ರಸ್ತೆ ಇರುತ್ತದೆ. ಸದರಿ ಶಂಕರ ಹಾಗೂ ಅವರ ಕುಟುಂಬದವರು ಸದರಿ ರಸ್ತೆಯ ಬದಿಯಿಂದ ಹೋಗಿಬರುವ ಕಾಲಕ್ಕೆ ಯ್ಯಾಸಿದಿಗಡಿ ಮಾತನಾಡುವುದು ಮತ್ತು ಯಾಗಲು ಹಾದಿಯಲ್ಲಿಯೇ ಕುಳಿತಿರಿತ್ತಿರಿ ಎಂದು ನಮ್ಮೊಂದಿಗೆ ತಕರಾರು ಮಾಡುವುದು ಮಾಡುತಾರುತ್ತಾರೆ ಅಲ್ಲದೇ ಮೊನ್ನೆ ರಾತ್ರಿ ಕೂಡ ನನ್ನ ಹೆಂಡತಿಯೊಂದಿಗೆ ಸದರಿ ದಾರಿಯ ವಿಷಯವಾಗಿ ತಕರಾರು ಮಾಡಿರುತ್ತಾನೆ. ದಿನಾಂಕ:04-03-2018 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ನಾನು, ನಮ್ಮ ಚಿಕ್ಕಪ್ಪನಾದ ಹಣಮಂತ ತಂದೆ ರಾಣಪ್ಪ ಹಂಗರಗಿ, ಹಾಗೂ ನಮ್ಮೂರಿನ ತಿಪ್ಪಣ್ಣ ತಂದೆ ಸಿದ್ರಾಮ ಜಮಾದಾರ ಮತ್ತು ಇಬ್ರಾಹಿಂ ತಂದೆ ಮೈಬೂಬಸಾಬ ಕೂಡಿ ರವರುಗಳು ಮಾತನಾಡುತ್ತಾ ನಮ್ಮ ಒಣಿಯಲ್ಲಿರುವ ಸಿದ್ರಾಮ ಸೌಕಾರ ಇವರ ಹಿಟ್ಟಿನ ಗಿರಿಣಿಯ ಹತ್ತಿರ ಮಾತಾಡುತ್ತಾ ಕುಳಿತಿರುವಾಗ ಶಂಕರ ತಂದೆ ಸಾಯಬಣ್ಣಾ ಹಂಗರಗಿ, ಶ್ರೀಶೈಲ ತಂದೆ ಶಂಕರ ಹಂಗರಗಿ, ಅಶೋಕ ತಂದೆ ಶಂಕರ ಹಂಗರಗಿ ಮತ್ತು ಜಗದೇವಿ ಗಂಡ ಶಂಕರ ಹಂಗರಗಿ ರವರುಗಳು ಕೂಡಿಕೊಂಡು ಬಂದು ಶಂಕರನು ನನಗೆ ಏ ಸೂಳೆ ಮನಗೆ ನಿನ್ನ ರಾತ್ರಿ ದಾರಿ ವಿಷಯವಾಗಿ ನನ್ನ ಹೆಂಡತಿಯೊಂದಿಗೆ ತಕರಾರು ಮಾಡಿದಂತೆ ಯಾಕೆ ಎಂದು ಏರುಧ್ವನಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈಯುತ್ತಿರಾವಗ ಅವನ ಮಗನಾದ ಶ್ರೀಶೈಲನು ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಆಗ ಅಲ್ಲಿಯೇ ಇದ್ದ ನನ್ನ ಚಿಕ್ಕಪ್ಪನಾದ ಹಣಮಂತ ತಂದೆ ರಾಮಣ್ಣಾ ಹಂಗರಗಿ ಇವರು ಜಗಳ ಬಿಡಿಸಲು ಬಂದಾಗ ಅಶೋಕನು ಕೊಡಲಿಯ ತುಂಬಿನಿಂದ ನನ್ನ ಎಡಗೈ ಮುಂಗೈಗೆ ಹೊಡೆದ್ದಿದ್ದರಿಂದ ಭಾರಿ ರಕ್ತಗಾಯ ವಾಗಿರುತ್ತದೆ ನಂತರ ಶಂಕರನು ಕಬ್ಬಿಣದ ರಾಡಿನಿಂದ ಹಣಮಂತ ಇವರ ತಲೆಗೆ, ಬೆನ್ನಿಗೆ ಬಲಗಡೆ ಮಗ್ಗಲಿಗೆ ಹೊಡೆದಿದ್ದರಿಂದ ಗಾಯಗಳಗಾರಿತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: