Police Bhavan Kalaburagi

Police Bhavan Kalaburagi

Wednesday, March 14, 2018

Yadgir District Reported Crimes Updated on 14-03-2018

                                            Yadgir District Reported Crimes
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 54/2017 ಕಲಂ 78 (3) ಕೆ.ಪಿ ಕಾಯ್ದೆ;-ದಿನಾಂಕ-13/03/2018 ರಂದು 06-10 ಪಿ.ಎಮ್ ಕ್ಕೆ ಮಾನ್ಯ ಪಿ,ಎಸ್ ಐ, ಸಾಹೇಬರು ಕೂಡ್ಲೂರ ಗ್ರಾಮದಲ್ಲಿ  ಮಟಕಾ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಪ್ರಕಾರ ಅಸಂಜ್ಞನೆಯ ಅಫರಾಧವಾಗುತಿದ್ದರಿಂದ ಮಾನ್ಯ ನ್ಯಾಯಲಯಕ್ಕೆ ಪರವಾನಿಗೆ ಕೋರಿ ಪ್ರಕರಣ ದಾಖಲಿಸಿಕೊಳ್ಳಲು ವಿನಂತಿಸಿಕೊಂಡು ನ್ಯಾಯಾಲಯದ ಆದೇಶದಂತೆ ಜಪ್ತಿ ಪಂಚನಾಮೆಯ ಆಧಾರದ ಮೇಲಿಂದ ಇಂದು ದಿನಾಂಕ-13/03/2018 ರಂದು 06-30 ಪಿ.ಎಮ್ ಕ್ಕೆ ಸೈದಾಪೂರ ಪೊಲೀಸ್ ಠಾಣಾ ಗುನ್ನೆ ನಂ.54/2018 PÀ®A.78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು  
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 49/2018 ಕಲಂ 379 ಐಪಿಸಿ.;-ದಿನಾಂಕ. 13/03/2018 ರಂದು 7-00 ಎಎಂಕ್ಕೆ ಶ್ರೀ ಮಹಾಂತೇಶ ಸಜ್ಜನ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರ ಠಾಣೆಗೆ ಬಂದು ಮುದ್ದೆ ಮಾಲು ಹಾಗೂ ಜ್ಞಾಪನಾ ಪತ್ರವನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಸಾರಾಂಶವೆನೆಂದರೆ, ನಿನ್ನೆ ದಿನಾಂಕ:12/03/2018 ರಂದು ರಾತ್ರಿ 11-00 ಪಿಎಂಕ್ಕೆ ರಾತ್ರಿ ಗಸ್ತು ಚೆಕಿಂಗ ಕರ್ತವ್ಯ ಕುರಿತು ಯಾದಗಿರಿ ನಗರದಲ್ಲಿ ನಾನು ನಮ್ಮ ಜೀಪ ಚಾಲಕ ಜಗಧೀಶ ಪಿಸಿ-388 ರವರು ಕೂಡಿಕೊಂಡು ಠಾಣೆಯ ಸಕರ್ಾರಿ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ರಾತ್ರಿ ಗಸ್ತು ಚೆಕಿಂಗ ಕರ್ತವ್ಯ ಕುರಿತು ನಗರದಲ್ಲಿ ತೀರುಗಾಡಿ  ನಗರದಲ್ಲಿ ರಾತ್ರಿ ಗಸ್ತು ಚೆಕಿಂಗ ಕರ್ತವ್ಯ ಮುಗಿಸಿಕೊಂಡು ಮರಳಿ ಠಾಣೆಗೆ ಇಂದು ಬೆಳಗಿನ ಜಾವ 5-30 ಗಂಟೆಗೆ ಯಾದಗಿರಿ ನಗರದ ಯಾಕುಬ ಬುಕಾರಿ ದಗರ್ಾ ಹತ್ತಿರ ಹೋಗುತ್ತಿರುವಾಗ ನಮ್ಮ ಎದುರುಗಡೆ ಒಂದು ಟ್ರ್ಯಾಕ್ಟರ  ಬರುತ್ತಿದ್ದು ನಮ್ಮ ಜೀಪ ನೋಡಿದವನೇ ಕೂಡಲೇ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಸ್ಥಳದಲ್ಲಿ ನಿಲ್ಲಿಸಿ ಓಡಿ ಹೋದನು, ನಾವು ಟ್ರ್ಯಾಕ್ಟರ ನೋಡಲಾಗಿ ಅದರಲ್ಲಿ  ಮರಳು ತುಂಬಿದ್ದು ಇರುತ್ತದೆ. ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಬಿಟ್ಟು ಓಡಿ ಹೊಗಿದ್ದರಿಂದ ಯಾವುದೇ ಪರವಾನಿಗೆ ಇಲ್ಲದೆ ಟ್ರ್ಯಾಕ್ಟರದಲ್ಲಿ ಅಕ್ರಮವಾಗಿ ಮರಳನ್ನು ಕದ್ದು ಕಳ್ಳತನಿಂದ ಸಾಗಿಸುತ್ತಿದ್ದು ಕಂಡು ಬಂತು, ಟ್ರ್ಯಾಕ್ಟರನ್ನು ಪರಿಸಿಲಿಸಲಾಗಿ ಟ್ರ್ಯಾಕ್ಟರ ಇಂಜಿನ ನಂ. 33-ಟಿ-9857 ಟ್ರಾಲಿ ನಂ.ಕೆಎ. ಕೆಎ.33.ಟಿ.8771 ಇದ್ದು ಸದರಿ ಟ್ರ್ಯಾಕ್ಟರ ಚಾಲಕರು ಮತ್ತು ಮಾಲಿಕರು ಕೂಡಿಕೊಂಡು ಅಕ್ರಮವಾಗಿ ಯಾವುದೇ ಸಕರ್ಾರದ ಪರವಾನಿಗೆ ಇಲ್ಲದೆ ಮರಳನ್ನು ಕದ್ದು ಕಳ್ಳತನದಿಂದ ಸಾಗಿಸುತ್ತಿದ್ದು ಖಾತ್ರಿಯಾಯಿತು. ಸಿಬ್ಬಂದಿಯ ಸಹಾಯದಿಂದ  ಮರಳು ತುಂಬಿದ ಟ್ರ್ಯಾಕ್ಟರನ್ನು ತೆಗದುಕೊಂಡು ಯಾದಗಿರಿ ನಗರ ಠಾಣೆಗೆ 6-30 ಎಎಂಕ್ಕೆ ತಂದು ಟ್ರ್ಯಾಕ್ಟರನ್ನು ಠಾಣೆ ಮುಂದೆ ನಿಲ್ಲಿಸಿ, ಯಾದಗಿರಿ ನಗರ ಠಾಣೆಯ ಎಸ್.ಎಚ್.ಓ ರವರಿಗೆ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಒಪ್ಪಿಸಿ, ಜ್ಞಾಪನಾ ಪತ್ರವನ್ನು ಗಣಕಯಂತ್ರದಲ್ಲಿ ತಯ್ಯಾರಿಸಿ ಠಾಣೆಯಲ್ಲಿ ಪ್ರಿಂಟ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 7-00 ಎಎಂಕ್ಕೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿ ಯಾದಗಿರಿ ನಗರ ಠಾಣೆ ರವರಿಗೆ ಜ್ಞಾಪನಾ ನೀಡಿದ್ದು ಸದರಿ ಟ್ರ್ಯಾಕ್ಟರ ಮಾಲಿಕ ಮತ್ತು ಚಾಲಕರ ಮೇಲೆ ಸೂಕ್ತ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ.ಅಂತಾ ಕೊಟ್ಟ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.49/2018 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 57/2018 ಕಲಂ 143, 147, 323, 354, 504, 506 ಸಂ. 149 ಐಪಿಸಿ;- ದಿನಾಂಕ 12.03.2018 ರಂದು ಸಾಯಂಕಾಲ 7.15 ಪಿಎಂ ಸುಮಾರಿಗೆ ಪಿರ್ಯಾಧಿದಾರರು ತಮ್ಮ ಮನೆ ಮುಂದೆ ಇದ್ದಾಗ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಏಕ್ಕೊದ್ದೇಶದಿಂದ ಜೀಪ ಪಾಳೆಯ ವಿಷಯವಾಗಿ ಪಿರ್ಯಾಧಿಯೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡಿ ಮಾಡಿ ಮಾನಭಂಗಕ್ಕೆ ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 58/2018 ಕಲಂ 143, 147, 341, 323, 324, 354, 504, 506 ಸಂ. 149 ಐಪಿಸಿ;-ದಿನಾಂಕ 12.03.2018 ರಂದು ಸಾಯಂಕಾಲ 7.15 ಪಿಎಂ ಸುಮಾರಿಗೆ ಪಿರ್ಯಾಧಿ ಆರೊಪಿತರ ಮನೆ ಮುಂದಿನಿಂದ ನಡದುಕೊಂಡು ಬರುತ್ತಿದ್ದಾಗ ಆರೋಪಿತರು ಪಿರ್ಯಾಧಿಗೆ ತಡೆದು ನಿಲ್ಲಿಸಿ  ಅಕ್ರಮಕೂಟ ರಚಿಸಿಕೊಂಡು ಏಕ್ಕೊದ್ದೇಶದಿಂದ ಜೀಪ ಪಾಳೆಯ ವಿಷಯವಾಗಿ ಪಿರ್ಯಾಧಿಯೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಕಲ್ಲಿನಿಂದ ಹೊಡೆಬಡಿ ಮಾಡಿ ಮಾನಭಂಗಕ್ಕೆ ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 37/2018 ಕಲಂ, 32, 34 ಕೆ.ಇ ಆ್ಯಕ್ಟ್ ;- ದಿನಾಂಕ: 12/03/2018 ರಂದು 09:40 ಎಎಮ್ ಕ್ಕೆ ಶ್ರೀ ಕೃಷ್ಣ ಸುಬೇದಾರ ಪಿಎಸ್.ಐ ಗೋಗಿ ಪೊಲೀಸ ಠಾಣೆ ರವರು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶವೆನೆಂದರೆ, ನಡಿಹಾಳ ತಾಂಡಾದ ಬಸ್ ನಿಲ್ದಾಣ ಹತ್ತಿರ ರೋಡಿನ ಮೇಲೆ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ 07:30 ಎಎಂ ಕ್ಕೆ ಜೀಪಿನಿಂದ ಇಳಿದು ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿಯು ನಡಿಹಾಳ ತಾಂಡದ ಬಸ್ ನಿಲ್ದಾಣದ ಹತ್ತಿರ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು  ಕೊಂಡು  07-35 ಎಎಮ್ ಕ್ಕೆ ದಾಳಿ ಮಾಡಿ ಅನಧಿಕೃತವಾಗಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ನಾಮದೇವ ತಂದೆ ನಂದು ಚವ್ಹಾಣ ವಯಾ;28 ವರ್ಷ ಉ|| ಗೌಂಡಿ ಜಾ|| ಲಂಬಾಣಿ ಸಾ: ನಡಿಹಾಳ ತಾಂಡಾ ತಾ: ಶಹಾಪೂರ ಅಂತಾ ತಿಳಿಸಿದನು. ಸದರಿಯವನನ್ನು ಪಂಚರ ಸಮಕ್ಷಮ ಪರಿಶಿಲಿಸಲಾಗಿ ಅವನ ಹತ್ತಿರ ಅಂದಾಜು 05 ಲೀಟರ್ ಹಿಡಿಯುವ 1 ಪ್ಲಾಸ್ಟಿಕ್ ಕ್ಯಾನ ಸಿಕಿದ್ದು ಅದರಲ್ಲಿ ಅಂದಾಜು 4.5 ಲೀಟರನಷ್ಟು ಕಳ್ಳಬಟ್ಟಿ ಸರಾಯಿ ಇದ್ದು ಒಂದು ಲೀಟರಿಗೆ 40 ರೂ.ಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು. ಸದರಿ ಕಳ್ಳಬಟ್ಟಿ ಸರಾಯಿಯ ಅ.ಕಿ.180=00 ರೂ. ಆಗುತ್ತದೆ. ಮತ್ತು ಸದರಿಯವನ ಹತ್ತಿರ 100/- ರೂ ನಗದು ಹಣ ದೋರತಿರುತ್ತದೆ. ಜಪ್ತಿಪಡಿಸಿಕೊಂಡ ಆರೋಪಿ ಮತ್ತು ಮುದ್ದೆಮಾಲು ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ: 37/2018 ಕಲಂ, 32 34 ಕೆ.ಇ ಆ್ಯಕ್ಟ್  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 54/2018 ಕಲಂ: 279 337 338 ಐ.ಪಿ.ಸಿ ;- ದಿನಾಂಕ: 13/03/2018 ರಂದು 6-15 ಪಿ.ಎಮ್ ಕ್ಕೆ ಶ್ರೀಮತಿ ದುರ್ಗಮ್ಮ ಗಂಡ ಯಮನಪ್ಪ ಸಂದಿಮನಿ ಸಾಃ ರಾಜನಕೊಳೂರ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 12/03/2018 ರಂದು ನಾನು ಮತ್ತು ನನ್ನ ಚಿಕ್ಕಮ್ಮ 1) ಈರಮ್ಮ ಗಂಡ ರಂಗಪ್ಪ ಐಹೊಳೆ, ಹಾಗು 2) ಬಸಮ್ಮ ತಂದೆ ಹಣಮಂತ್ರಾಯ ಸಂದಿಮನಿ, 3) ಶಾಂತಮ್ಮ ಗಂಡ ದುರ್ಗಪ್ಪ ಐಹೊಳೆ, 4) ರಂಗಪ್ಪ ತಂದೆ ಮಲ್ಲಪ್ಪ ಐಹೊಳೆ ಎಲ್ಲರೂ ನನ್ನ ಚಿಕ್ಕಪ್ಪನ ಮಗನಿಗೆ ಕನ್ಯೆ ನೋಡಲು ಸುರಪೂರ ತಾಲೂಕಿನ ಶೆಳ್ಳಗಿ ಗ್ರಾಮಕ್ಕೆ ಶರಣಬಸವ ತಂದೆ ನರಸಪ್ಪ ಮ್ಯಾಗಿನಮನಿ ಸಾ|| ಚಿಂಚೋಡಿ ಇವರ ಟಂ ಟಂ ಅಟೋರಿಕ್ಷಾ ನಂಬರ ಕೆ.ಎ 36 ಎ 9872 ನೇದ್ದರಲ್ಲಿ ಕುಳಿತುಕೊಂಡು ಹೊರಟಿದ್ದೇವು. ನಾವು ಚಿಂಚೋಡಿಯಿಂದ ತಿಂಥಣಿ ಬ್ರಿಜ್ ಮಾರ್ಗವಾಗಿ ಶೆಳ್ಳಗಿ ಕಡೆಗೆ ಹೊರಟಿದ್ದಾಗ, ಚಾಲನು ತಿಂಥಣಿ ಬ್ರಿಜ್ ದಾಟಿದ ಬಳಿಕ ಸುರಪೂರ ಕಡೆಗೆ ಮುಖ್ಯರಸ್ತೆಯ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಅಟೋರಿಕ್ಷಾ ನಡೆಸುತ್ತಿದ್ದಾಗ, ನಾವು ಆತನಿಗೆ ನಿಧಾನವಾಗಿ ನಡೆಸುವಂತೆ ಹೇಳಿದರೂ ಕೂಡ ಕೇಳದೇ ಅದೇ ವೇಗದಲ್ಲಿ ನಡೆಸಿಕೊಂಡು ಬರುತ್ತ, 4-30 ಪಿ.ಎಮ್ ಸುಮಾರಿಗೆ ಅರಳಹಳ್ಳಿ ಗ್ರಾಮ ದಾಟಿ ಬರುವ ಒಂದು ಸೇತುವೆ ದಾಟಿ ವೇಗದಲ್ಲಿ ಒಮ್ಮೆಲೆ ಎಡಕ್ಕೆ ಅಟೋ ತಿರುಗಿಸಿದ್ದರಿಂದ ಅಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗದಲ್ಲಿ ಪಲ್ಟಿಯಾಗಿ ಬಿದ್ದಿತು. ಇದರಿಂದ ಅಟೋರಿಕ್ಷಾದಲ್ಲಿದ್ದ ನನ್ನ ಎಡಗಣ್ಣಿನ ಹತ್ತಿರ ಮೂಗಿನ ಮೇಲೆ ತರಚಿದ ಗಾಯವಾಗಿರುತ್ತದೆ. ನನ್ನ ಚಿಕ್ಕಮ್ಮ 2) ಈರಮ್ಮಳಿಗೆ ಎಡಗಾಲು ತೊಡೆಯ ಭಾಗದಲ್ಲಿ ಮುರಿದು ಭಾರಿ ರಕ್ತಗಾಯವಾಗಿದ್ದು, ಬಲಗೈ ಹಸ್ತಕ್ಕೆ ತರಚಿದ ಗಾಯವಾಗಿರುತ್ತದೆ. 3) ಶಾಂತಮ್ಮ ಐಹೊಳೆ ಇವಳ ಎಡಹಣೆಯ ಮೇಲೆ ಹಾಗು ಎಡಗೈ ಹಸ್ತಕ್ಕೆ ರಕ್ತಗಾಯವಾಗಿರುತ್ತದೆ. 4) ಬಸಮ್ಮ ಸಂದಿಮನಿ ಇವಳ ಎಡಪಕ್ಕಡಿಗೆ, ಹೊಟ್ಟೆಗೆ ಭಾರಿ ಒಳಪೆಟ್ಟಾಗಿ ತರಚಿದ ಗಾಯಗಳಾಗಿರುತ್ತದೆ. ಹಾಗು ಬಾಯಿ, ಕಪಾಳಕ್ಕೆ, ಹಣೆಗೆ ತರಚಿದ ರಕ್ತಗಾಯಗಳಾಗಿರುತ್ತದೆ. 5) ಅಟೋ ಚಾಲಕನಾದ ಶರಣಬಸವ ಇತನ ಎಡಗಾಲಿನ ಪಾದ, ತೊಡೆ, ಬಲಗಾಲಿನ ಮೊಣಕಾಲು, ತೊಡೆ ಹಾಗು ಎಡಮೊಣಕೈಗೆ ಗಾಯಗಳಾಗಿರುತ್ತದೆ. 6) ಉಮೇಶ ತಂದೆ ಅಂಬ್ರೇಶ ಇತನ ಎಡಗೈ ಹಸ್ತದ ಹತ್ತಿರ ರಕ್ತಗಾಯ, ಸೊಂಟದಲ್ಲಿ ಒಳಪೆಟ್ಟಾಗಿರುವ ಬಗ್ಗೆ ತಿಳಿಸಿರುತ್ತಾನೆ. ಸದರಿ ಅಪಘಾತದಲ್ಲಿ ನನ್ನ ಚಿಕ್ಕಪ್ಪನಾದ ರಂಗಪ್ಪನಿಗೆ ಯಾವುದೇ ಗಾಯಗಳಾಗಿರದ ಕಾರಣ ನಾನು ಮತ್ತು ನನ್ನ ಚಿಕ್ಕಪ್ಪ ಗಾಯಾಳುಗಳಿಗೆ 108 ಅಂಬ್ಯೂಲೇನ್ಸ್ ವಾಹನದಲ್ಲಿ ಕೂಡಿಸಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ, ಇಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಹೋಗುವಂತೆ ಸೂಚಿಸಿದ್ದರಿಂದ ನನ್ನ ಚಿಕ್ಕಪ್ಪನು ನಮಗೆ ಮಸ್ಕಿ ಪಟ್ಟಣದಲ್ಲಿರುವ ಅನ್ನಪೂರ್ಣ ನಸರ್ಿಂಗ್ ಹೋಮ್ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ನಾನು ಇಂದು ಆಸ್ಪತ್ರೆಯಿಂದ ಮರಳಿ ಬಂದಿರುತ್ತೇನೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಅಟೋರಿಕ್ಷಾ ನಡೆಸಿ ಪಲ್ಟಿ ಮಾಡಿ ನಮಗೆ 5 ಜನರಿಗೆ ಸಾದಾ ಹಾಗು ಭಾರಿ ಸ್ವರೂಪದ ರಕ್ತಗಾಯ, ಗುಪ್ತಗಾಯ ಪಡಿಸಿ, ತಾನು ಗಾಯಹೊಂದಿರುವದರಿಂದ ಸದರಿಯವನ ವಿರುದ್ದ ಕಾಯ್ದೇ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 54/2018 ಕಲಂ: 279 337, 338 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 41/2018 ಕಲಂ: 504,324,323,506 ಸಂ 34 ಐಪಿಸಿ;- ದಿನಾಂಕ: 04/03/2018 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ಫಿರ್ಯಾಧಿ ಮತ್ತು ಆತನ ಮಕ್ಕಳು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿತರು ಬಂದು ಈ ಹೊಲದಲ್ಲಿ ಸಾಗುವಳಿ ಮಾಡಬೇಡಿರೆಂದು ಹೇಳಿದರು ಕೇಳದೆ ಸಾಗ ಮಾಡುತ್ತಿದ್ದಿರಿ ಎಂದು ಜಗಳ ತೆಗೆದು ಹಿಡಿಗಲ್ಲಿನಿಂದ, ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾಧಿ ಸಾರಾಂಶದ ಮೇಲಿಂದ ಈ ಮೇಲ್ಕಂಡಂತೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
 

No comments: