ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 13.04.2018 ರಂದು ಸಾಯಂಕಾಲ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಕೈಲಾಸ ನಗರ ಗದಲೇಗಾವ ಕಲ್ಯಾಣ ಮಂಟಪಕ್ಕೆ ಹೊಗುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದಿದ್ದು ಬಾತ್ಮಿ ಮೇರೆಗೆ ಶ್ರೀ ಎ.ಪೌಲ ಎ.ಎಸ್.ಐ ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಹಾಬಜಾರ ನಾಕಾದಿಂದ ನಡೆದುಕೊಂಡು ಗದಲೇಗಾವ ಕಲ್ಯಾಣ ಮಂಟಪ ಕಡೆಗೆ ಹೋಗುವ ರಸ್ತೆಯ ಹತ್ತಿರ ಹೋಗಿ ಮರೇಯಲ್ಲಿ ನಿಂತುಕೊಂಡು ಕಲ್ಯಾಣ ಮಂಟಪಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ರೇವಣಸಿದ್ದಪ್ಪ ತಂದೆ ಹಣಮಂತ್ರಾವ ಬೇಲೂರ ಸಾ: ಅಪಚಂದ ತಾ: ಆಳಂದ ಜಿ: ಕಲಬುರಗಿ ಹಾ:ವ: ಸುಭಾಶ ನಗರ ಶಹಾಬಜಾರ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1150/- ರೂ 2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 13/04/2018 ರಂದು ಅಫಜಲಪೂರ ಪಟ್ಟಣದ ತಹಸಿಲ ಕಾರ್ಯಾಲಯದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ತಹಸಿ ಕಾರ್ಯಾಲಯದ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ತಹಸಿಲ ಕಾರ್ಯಾಲಯದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅರ್ಜುನ ತಂದೆ ಕಲ್ಲಪ್ಪ ವಾಲಿಕರ ಸಾ||ಸೊನ್ನ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1650/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ಪಡೆದು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 13-04-2018 ರಂದು ಕೆರಕನಹಳ್ಳಿ ಗ್ರಾಮದ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ . ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೆರಕನಹಳ್ಳಿ ಗ್ರಾಮಕ್ಕೆ ಹೋಗಿ, ಗ್ರಾಮದ ಅಗಸಿಯಿಂದ ಸ್ವಲ್ಪ ದೂರ ಮರೆಯಾಗಿ ನಿಂತುಕೊಂಡು ನೋಡಲಾಗಿ, ಸದರಿ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು ಹೋಗಿ ಬರುವ ಜನರಿಗೆ ಸಾರಾಯಿ ಮಾರಾಟ ಮಾಡುತ್ತಿದ್ದನು. ಆಗ ನಾವು ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ನಿಂಗಪ್ಪ ತಂದೆ ಸಿದ್ದಪ್ಪ ಚಿಂಚೋಳಿ ಸಾ||ಕೆರಕನಹಳ್ಳಿ ತಾ|| ಅಫಜಲಪೂರ ಅಂತ ತಿಳಿಸಿದನು. ನಂತರ ಸದರಿಯವನ ವಶದಲ್ಲಿದ್ದ ರಟ್ಟಿನ್ ಬಾಕ್ಸನ್ನು ಚೆಕ್ ಮಾಡಲಾಗಿ, ಸದರಿ ಬಾಕ್ಸದಲ್ಲಿ Original Choice ಕಂಪನಿಯ 90 ML ಅಳತೆಯ ಮದ್ಯ ತುಂಬಿದ 92 ರಟ್ಟಿನ ಪೌಚಗಳು ಅಕಿ- 2576/- ರೂ ಕಿಮ್ಮತ್ತಿನವುಗಳು ಇದ್ದವು. ಹಾಗೂ ಮದ್ಯ ಮಾರಾಟ ಮಾಡಿದ 210/- ರೂ ನಗದು ಹಣ ದೊರೆತವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಹಾಗೂ ಸಾಗಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ 92 Original Choice ಕಂಪನಿಯ 90 ML ಮದ್ಯ ತುಂಬಿದ ರಟ್ಟಿನ ಪೌಚಗಳನ್ನು ಮತ್ತು ನಗದು ಹಣ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
No comments:
Post a Comment