Police Bhavan Kalaburagi

Police Bhavan Kalaburagi

Saturday, April 7, 2018

Yadgir District Reported Crimes Updated on 07-04-2018


                                      Yadgir District Reported Crimes
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ ;- 77/2018 ಕಲಂ: 3(1) (ಚಚಿ)(ಚಿ) ಖಅ/ಖಖಿ ಕಂ ಂಛಿಣ 1989 ಮತ್ತು 4 (4) ಕ.ಅ.ಖ ಂಛಿಣ 1955;- ದಿನಾಂಕ: 06/04/2018 ರಂದು 3 ಪಿಎಮ್ ಕ್ಕೆ ಶ್ರೀ ರಾವುತಪ್ಪ ಸಹಾಯಕ ನಿದರ್ೇಶಕರು ಗ್ರೇಡ-1 ಸಮಾಜ ಕಲ್ಯಾಣ ಇಲಾಖೆ ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಒಂದು ದೂರು ಅಜರ್ಿ ಕೊಟ್ಟಿದ್ದರ ಸಾರಾಂಶವೇನಂದರೆ ನಾನು ದಿನಾಂಕ: 06/04/2018 ರಂದು ಕೊಂಕಲ್ ಗ್ರಾಮಕ್ಕೆ ಭೇಟಿ ನೀಡಿ ಸ್ಥಾನಿಕವಾಗಿ ಪರಿಶೀಲಿಸಿದಾಗ ಅಲ್ಲಿ ಪರಿಶಿಷ್ಟ ಜಾತಿ/ಮಾದಿಗ ಜನಾಂಗದ ಸಮುದಾಯದ ಮನೆಗಳ ಹತ್ತಿರ ಇರುವ ಕೈಪಂಪ (ಹ್ಯಾಂಡ ಪಂಪ) ಕೆಟ್ಟು ಹೋಗಿದ್ದ ಪ್ರಯುಕ್ತ ಸದರಿ ಸಮುದಾಯದವರು ದಿನಾಂಕ: 02/04/2018 ರಂದು ಹನುಮಾನ ದೇವಸ್ಥಾನದ ಹತ್ತಿರ ಇರುವ ಕೈಪಂಪಿಗೆ ನೀರಿಗೆ ಹೋದಾಗ ಸವಣರ್ಿಯರು ನೀರು ಎತ್ತಿ ಹಾಕಿರುತ್ತಾರೆಂದು ದಲಿತ ಸಮುದಾಯದ ಜನರು ಹೇಳಿಕೆಯನ್ನು ನೀಡಿರುತ್ತಾರೆ. ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಡಿಯೋ ದೃಶ್ಯಾವಳಿಗಳು ನೋಡಿದಾಗ ದಲಿತ ಸಮುದಾಯದ ಹೆಣ್ಣು ಮಕ್ಕಳಿಗೆ ನೀರು ಎತ್ತಿ ಹಾಕಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಇದೆಲ್ಲ ನೋಡಿದಾಗ ಇಲ್ಲಿ ಅಸ್ಪ್ರಶ್ಯತೆ ಆಚರಣೆ ಮೇಲ್ನೋಟಕ್ಕೆ ಕಂಡುಬರುತ್ತದೆ. ಗ್ರಾಮದಲ್ಲಿಯ ದಲಿತ ವರ್ಗದವರು ಯಾರೂ ದೂರು ಕೊಡಲು ಮುಂದೆ ಬರುತ್ತಿಲ್ಲ. ಆದ್ದರಿಂದ ಸರಕಾರಿ ತಫರ್ೆಯಿಂದ ನಾನು ದೂರು ಸಲ್ಲಿಸುತ್ತಿದ್ದೇನೆ. ತಪಿತಸ್ಥರನ್ನು ಪತ್ತೆ ಮಾಡಿ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಕೋರಲಾಗಿದೆ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 77/2018 ಕಲಂ: 3(1) (ಚಚಿ)(ಚಿ) ಖಅ/ಖಖಿ ಕಂ ಂಛಿಣ 1989 ಮತ್ತು 4 (4) ಕ.ಅ.ಖ ಂಛಿಣ 1955 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ 78/2018 ಕಲಂ: 143, 147, 148, 504, 323, 324, 354, 307, 448, 506 ಸಂ. 149 ಐಪಿಸಿ ಮತ್ತು ಕಲಂ: 3(1) (ಆರ್) (ಎಸ್) (ಡಬ್ಲು)(1) 2(5) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್-1989;- ದಿನಾಂಕ: 06/04/2018 ರಂದು 11 ಪಿಎಮ್ ಕ್ಕೆ ಶ್ರೀ ನಿಂಗಪ್ಪ ತಂದೆ ಮಲ್ಲಪ್ಪ ಕುರುಕುಂದಾ ವ:30, ಜಾ:ಮಾದಿಗ, ಸಾ:ಕಾಡಂಗೇರಾ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಕೊಟ್ಟಿದ್ದೇನಂದರೆ ಇಂದು ದಿನಾಂಕ: 06/04/2018 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ನಮ್ಮ ಹೊಲದಲ್ಲಿ ಹತ್ತಿ ಕಟ್ಟಿಗೆ ಸ್ವಚ್ಚ ಮಾಡಲು ನನ್ನ ಹೆಂಡತಿಯಾದ ಶ್ರೀಮತಿ ಲಕ್ಷ್ಮೀ ಗಂಡ ನಿಂಗಪ್ಪ ಕುರುಕುಂದಿ ಹೊಲಕ್ಕೆ ಕಳುಹಿಸಿರುತ್ತೇನೆ. ನನ್ನ ಹೆಂಡತಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಪಕ್ಕದ ಹೊಲದವರಾದ 1) ಸಾಬಣ್ಣ ತಂದೆ ಸಿದ್ದಪ್ಪ ಹೆಡಗಿಮದ್ರಿ, ವ:26, ಜಾ:ಕಬ್ಬಲಿಗ, ಸಾ:ಕಾಡಂಗೇರಾ ಇವನು ನನ್ನ ಹೆಂಡತಿಗೆ ಒಬ್ಬಳೆ ಇರುವುದನ್ನು ನೋಡಿ ಆಕೆಯ ಸಂಗಡ ಅಸಭ್ಯವಾಗಿ ವತರ್ಿಸುತ್ತಿದ್ದನು. ಅದೇ ಸಮಯದಲ್ಲಿ ನಾನು ಕುಡಿಯಲು ನೀರು ತರಲು ಪೂಜಾರಿ ಬಾವಿಗೆ ಹೋದಾಗ ನನ್ನ ಹೆಂಡತಿ ಕಿರುಚಾಡುವುದನ್ನು ನೋಡಿ ಓಡಿ ಬಂದು ಯಾಕಪ್ಪ ಸಾಬಣ್ಣ ನನ್ನ ಹೆಂಡತಿಗೆ ಹೀಗೆ ಯಾಕೆ ಮಾಡುತ್ತಿಯಾ ಎಂದು ಕೇಳಿದಾಗ ಸಾಬಣ್ಣನು ಲೇ ಭೊಸಡಿ ಸೂಳೆ ಮಗನೆ ಮಾದಿಗ ಸೂಳೆ ಮಗನೆ ನಾನು ನಿನ್ನ ಹೆಂಡತಿಗೆ ಏನು ಬೇಕಾದರೂ ಮಾಡುತ್ತೇನೆ. ನಿನ್ನೌನ ಸೂಳೆ ಮಗನೆ ಎಂದು ಬೈದು ಅಲ್ಲೆ ಹತ್ತಿರದಲ್ಲಿ ಇದ್ದ ಬಡಿಗೆ ತೆಗೆದುಕೊಂಡು ಜೋರಾಗಿ ಬಲ ತೊಡೆಗೆ ಹೊಡೆದು ನನ್ನ ಹೆಂಡತಿಗೆ ಕೈಯಿಂದ ಹೊಡೆದು ನೆಲಕ್ಕೆ ಕೆಡವಿ ಕೈಯಿಂದ ಹೊಡೆದನು. ಅದರಿಂದ ನನ್ನ ಹೆಂಡತಿಗೆ ಕೈ ಬಳೆಗಳು ಒಡೆದು ಕೈಗೆ ರಕ್ತಗಾಯವಾಗಿರುತ್ತದೆ. ನಾವು ಜೀವ ಭಯದಿಂದ ನಮ್ಮ ಮನೆಗೆ ಬಂದಿರುತ್ತೇವೆ. ಆಗ ಸಮಯ 4 ಗಂಟೆಯಾಗಿತ್ತು. ಸಾಬಣ್ಣ ಈತನು ಹೊಲದಲ್ಲಿ ಆದ ಘಟನೆ ತಮ್ಮ ಸಮಾಜಕ್ಕೆ ತಿಳಿಸಿ, ತಮ್ಮ ಸಮಾಜದವರನ್ನು ಗುಂಪು ಕಟ್ಟಿಕೊಂಡು ನಮ್ಮ ಓಣಿಗೆ 2) ಸಿದ್ದಪ್ಪ ತಂದೆ ಸಾಬಣ್ಣ ಹೆಡಗಿಮದ್ರಿ, ವ:50, ಜಾ:ಕಬ್ಬಲಿಗ, 3) ಮಲ್ಲಪ್ಪ ತಂದೆ ಸಿದ್ದಪ್ಪ ಹೆಡಗಿಮದ್ರಿ, ವ:24, 4) ಸಾಬಣ್ಣ ತಂದೆ ಹಣಮಂತ ಹಳಿಕುರಿ, ವ:22, 5) ಚಂದ್ರಪ್ಪ ತಂದೆ ಹಣಮಂತ ಹಳಿಕುರಿ, ವ:23, 6) ಮಹೇಶ ತಂದೆ ಬಸಪ್ಪ ಹುಂಡೆಕಲ್, ವ:21, 7) ರೆಡ್ಡೆಪ್ಪ ತಂದೆ ಬಸಪ್ಪ ಹುಂಡೆಕ, ವ:23, 8) ರಂಗಪ್ಪ ತಂದೆ ಶರಣಪ್ಪ ಹಂಚನಾಳ, ವ:20, 9) ಶಿವಲಿಂಗಪ್ಪ ತಂದೆ ಮಹಾದೇವಪ್ಪ ದೊಡ್ಡಮನಿ, ವ:23, 10) ಹಣಮಂತ ತಂದೆ ಬಸವರಾಜ ಮಸೂಳೆರ, ವ:22, 11) ಶರಣಯ್ಯ ತಂದೆ ಗಂಗಾಧರ ವ:26, ಜಾ:ಬಣಜಿಗ, 12) ಶರಣಪ್ಪ ತಂದೆ ಸಿದ್ದಪ್ಪ ಪೊಲೀಸ್ ಪಾಟಿಲ್, ವ:23, ಜಾ:ಕಬ್ಬಲಿಗರಿದ್ದು ಇವರೆಲ್ಲರೂ ಏಕಾ ಏಕಿ ನಮ್ಮ ಮನೆಗೆ ನುಗ್ಗಿ ಏ ಮಾದಿಗ ಸೂಳೆ ಮಗನೆ ಹೊಲದಲ್ಲಿ ನಾನು ಒಬ್ಬನೆ ಇದ್ದಾಗ ಬೈಯುತ್ತಿಯಾ ಸೂಳೆ ಮಗನೆ ನಾವು ಸಮಾಜದವರೆಲ್ಲರೂ ಬಂದಿವಿ ನಿಮಗೆ ಖಲಾಸ ಮಾಡುತ್ತೇವೆ ಎಂದು ತಮ್ಮ ಕೈಯಲ್ಲಿ ಬಡಿಗೆ ಕೊಡಲಿ, ಕಲ್ಲುಗಳನ್ನು ಹಿಡಿದುಕೊಂಡು ಬಂದರು. ಯಾಕ್ರಿ ಯೆಪ್ಪಾ ನಮ್ಮ ಮನೆಗೆ ಬಂದಿರಿ ಎಂದು ಕೇಳಿದಾಗ ಮಕ್ಕಳೆ ನಿಮಗೆ ಖಲಾಸ ಮಾಡತ್ತಿವಿ ಎಂದು ಬಡಿಗೆ ಕೊಡಲಿ ಕಲ್ಲುಗಳಿಂದ ಶ್ರೀ ಸಿದ್ದಪ್ಪ ತಂದೆ ಮಲ್ಲಪ್ಪನಿಗೆ ಸಾಬಣ್ಣ ಮತ್ತು ಸಿದ್ದಪ್ಪ ಇಬ್ಬರು ಕಲ್ಲಿನಿಂದ ಬಡಿಗೆಯಿಂದ ಹೊಡೆದು ನೆಲಕ್ಕೆ ಕೆಡವಿದರು. ಹಣಮಂತ ತಂದೆ ಮಲ್ಲಪ್ಪನಿಗೆ ಮಲ್ಲಪ್ಪ ತಂದೆ ಸಿದ್ದಪ್ಪ ಹಾಗೂ ಸಾಬಣ್ಣ ಹಣಮಂತ ಹಳಿಕುರಿ ಇವರು ಲೇ ಮಾದಿಗ ಸೂಳೆ ಮಗನೆ ಎಂದು ಬೈದು ಬಡಿಗೆಯಿಂದ ಬೆನ್ನಿಗೆ ಹೊಡೆದರು. ದೊಡ್ಡ ಸಿದ್ದಪ್ಪ, ಭೀಮಪ್ಪ ಇವರಿಗೆ ಚಂದ್ರಪ್ಪ ಮತ್ತು ಮಹೇಶ ಇವರು ಇಬ್ಬರೂ ಕೈಯಿಂದ ಹೊಡೆದು ನೆಲಕ್ಕೆ ಕೆಡವಿ ಹೊಟ್ಟೆಗೆ, ಬೆನ್ನಿಗೆ ಹೊಡೆದರು. ಮತ್ತು ಶರಣಮ್ಮ ಮತ್ತು ಮಲ್ಲಮ್ಮ ಇವರಿಗೆ ರೆಡ್ಡೆಪ್ಪ, ರಂಗಪ್ಪ ಇವರು ಎಲೆ ರಂಡಿ ಮಕ್ಕಳೇ ನಿಮ್ಮನ್ನು ಖಲಾಸ ಮಾಡುತ್ತೇವೆ ಎಂದು ಬೈದರು. ಹಾಗೂ ರೇಣುಕಮ್ಮ ಮತ್ತು ಸಿದ್ದಮ್ಮ ಇವರಿಗೆ ಶಿವಲಿಂಗಪ್ಪ, ಹಣಮಂತ, ಶರಣಯ್ಯ ಇವರು ಕೂದಲು ಹಿಡಿದು ನೆಲಕ್ಕೆ ಕೆಡವಿ ಹೊಡೆದರು. ಹಾಗೂ ಲಕ್ಷ್ಮೀ ಇವರಿಗೆ ಶರಣಪ್ಪ ತಂದೆ ಸಿದ್ದಪ್ಪ ನೆಲಕ್ಕೆ ಕೆಡವಿ ಹೊಡೆದನು. ಈ ಎಲ್ಲಾ ಆರೋಪಿಗಳೂ ನಮ್ಮ ಮನೆಯಲ್ಲಿದ್ದ ಅಡಿಗೆ ಸಾಮಾನುಗಳು ಮತ್ತು ಕೃಷಿ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಮನೆಯಿಂದ ಹೊರಗೆ ಎಸೆದಿರುತ್ತಾರೆ. ಈ ಎಲ್ಲಾ ಆರೋಪಿಗಳು ನಮಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದಿದ್ದರಿಂದ ಸಿದ್ದಪ್ಪ ತಂದೆ ಮಲ್ಲಪ್ಪನಿಗೆ ಭಾರಿ ಒಳಪೆಟ್ಟಾಗಿದ್ದರಿಂದ ಸರಕಾರಿ ದವಾಖಾನೆ ಶಹಾಪೂರದಲ್ಲಿ ಉಪಚಾರ ಪಡೆಯುತ್ತಿದ್ದು, ನಾನು, ನನ್ನ ಹೆಂಡತಿ ಇತರರೆಲ್ಲರೂ ಸರಕಾರಿ ದವಾಖಾನೆ ಶಹಾಪೂರದಲ್ಲಿ ಉಪಚಾರ ಪಡೆಯುತ್ತಿದ್ದು, ಜೀವನ ಮರಣದಿಂದ ನರಳಾಡುತ್ತಿದ್ದೇವೆ. ಎಲ್ಲಾ ಆರೋಪಿಗಳು ನಮಗೆ ಹೊಡೆದು ಹೋಗುತ್ತಿರುವಾಗ ನಮ್ಮ ತಂಟೆಗೆ ಬಂದರೆ ನನ್ನ ನಾಲ್ಕು ಎಕರೆ ಹೊಲ ಹೋದರು ಚಿಂತೆ ಇಲ್ಲ ನಿಮ್ಮ ಎಲ್ಲರನ್ನು ಸುಟ್ಟು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಅದ್ದರಿಂದ ನಮಗೆ ರಕ್ಷಣೆ ಕೊಟ್ಟು ಆರೋಪಿಗಳಿಗೆ ಕಾನೂನಿನ ಪ್ರಕಾರ ಶಿಕ್ಷೆ ಕೊಡಿಸಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 78/2018 ಕಲಂ: 143, 147, 148, 504, 323, 324, 354, 307, 448, 506 ಸಂ. 149 ಐಪಿಸಿ ಮತ್ತು ಕಲಂ: 3(1) (ಆರ್) (ಎಸ್) (ಡಬ್ಲು) (1), 2 (5) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್-1989 ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 

ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ 66/2018 ಕಲಂ 143,147,148,302,201, ಸಂಗಡ 149 ಐಪಿಸಿ;- ದಿನಾಂಕ 06/04/2018 ರಂದು 7:00 ಪಿ ಎಂ ಕ್ಕೆ  ಪಿಯರ್ಾದಿ ಶ್ರೀಮತಿ ಸಿದ್ದಮ್ಮ ಗಂಡ ನಿಂಗಣ್ಣ ಆಲ್ಯಾಳ ವ:25 ವರ್ಷ ಉ:ಕೂಲಿಕೆಲಸ ಸಾ:ಅಂಬಲೂರ ತಾ:ಸಿಂದಗಿ ಜಿ:ವಿಜಯಪೂರ  ಹಾ:ವ: ನಿಂಗಾಪೂರ (ಕಕ್ಕೇರಾ) ತಾ:ಸುರಪೂರ ಜಿ:ಯಾದಗಿರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ತಂದು ಹಾಜರು ಪಡಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನೆಂದರೆ ನಾನು  ದಿನಾಂಕ 10/04/2017 ರಂದು ಸಾಯಂಕಾಲ 6:30 ಗಂಟೆಗೆ ತಮ್ಮ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ  ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಅಜರ್ಿಯನ್ನು ಹಾಜರು ಪಡಿಸಿದ್ದು ಅದರಲ್ಲಿ   ನಾನು ನನ್ನ ಗಂಡ ಕೂಲಿನಾಲಿ ಮಾಡಿಕೊಂಡು ಉಪಜೀವಿಸುತ್ತಿದ್ದು ಇರುತ್ತದೆ ನಮ್ಮ ತಂದೆಗೆ ಇಬ್ಬರು ಹೆಂಡತಿಯರು ಇದ್ದು  ಮೊದಲನೇ ಹೆಂಡತಿ ಶ್ರೀದೇವಿ ಎರಡನೇ ಹೆಂಡತಿ ಪರಮವ್ವ, ಶ್ರೀದೇವಿ ನನ್ನ ತಾಯಿಯಾಗಿದ್ದು ಶ್ರೀದೇವಿ ಹೊಟ್ಟೆಯಿಂದ ನಾವು ಮೂರು ಜನ ಮಕ್ಕಳು ಸೋಮನಾಥ, ನಾನು, ಹಾಗೂ ಗುರಪ್ಪ. ಅಂತಾ ಎರಡನೇ ಹೆಂಡತಿ ಪರಮವ್ವಳಿಗೆ ಮುತ್ತಪ್ಪ(ಹಣಮಂತ) ಹಾಗೂ ಭೀಮಣ್ಣ ಅಂತಾ ಇಬ್ಬರು ಗಂಡುಮಕ್ಕಳಿದ್ದು ಇದ್ದು ನನ್ನ ಅಣ್ಣ ಸೋಮನಾಥನು ಸುಮಾರು 15-20 ವರ್ಷಗಳ ಹಿಂದೆ ಅನಾರೋಗ್ಯದ ಕಾರಣ ಮರಣಹೊಂದಿದ್ದು ಇರುತ್ತದೆ.
      ನನ್ನ ತಾಯಿಯು 9-10 ವರ್ಷಗಳ ಹಿಂದೆ ತೀರಿಕೊಂಡಿದ್ದು ನನ್ನ ತಾಯಿಯು ತೀರಿಕೊಂಡ ನಂತರ ನಾನು ನನ್ನ ತಮ್ಮ ಗುರಪ್ಪನು ಚಿಕ್ಕವರಿದ್ದುದರಿಂದ ನನ್ನ ತಾಯಿಯ ತಂಗಿಯಾದ ನಿಂಗಾಪೂರದ ಪರಮವ್ವರವರು ನಮ್ಮಿಬ್ಬರಿಗೂ ತಮ್ಮ ಮನೆಗೆ ಕರೆದುಕೊಂಡು ಹೊಗಿದ್ದು ನಾವು ಅಲ್ಲಿಯೇ ಇದ್ದೇವು ಹೀಗಿರುವಾಗ ಹೀಗ ಎರಡು ವರ್ಷಗಳ ಹಿಂದೆ ದಿನಾಂಕ 15.03.2015 ರಂದು ನನ್ನ ತಂದೆ ತಮ್ಮಣ್ಣನು ನನಗೆ ಮಾವನಾಗಬೇಕಾದ ಬಸಪ್ಪ ಪೀರಗಾರ ರವರೊಂದಿಗೆ ನನ್ನ ಚಿಗವ್ವನ ಮನೆಗೆ  ನಿಂಗಾಪೂರಕ್ಕೆ ಬಂದು ನನ್ನ ಚಿಗವ್ವನಿಗೆ ನನ್ನ ಮಕ್ಕಳು ದೊಡ್ಡವರಾಗಿದ್ದಾರೆ ಇಲ್ಲಿಯವರೆಗೆ ಜೊಪಾನ ಮಾಡಿದಿ ನಾನು ಸಿದ್ದಮ್ಮ ಮತ್ತು ಗುರಪ್ಪ ರವರನ್ನು ನನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ ಅಂತಾ ಹೇಳಿ ನನಗೆ ಮತ್ತು ತಮ್ಮ ಗುರಪ್ಪನಿಗೆ ಕಕ್ಕೇರಾಕ್ಕೆ ಕರೆದುಕೊಂಡು ಬಂದಿದ್ದು ನಂತರ ಕಕ್ಕೇರಾದಲ್ಲಿ ನನ್ನ ತಮ್ಮನು ನನ್ನ ತಂದೆಯ ಕುರಿಗಳನ್ನು ಮೇಯಿಸುವದು ಮಾಡುತ್ತಿದ್ದು ದಿನಾಂಕ 24.03.2015 ರಂದು ನನ್ನ ತಮ್ಮ ಗುರಪ್ಪನು ಕುರಿಮೇಯಿಸಲು ಹೋದವನು ಮರಳಿ ಮನೆಗೆ ಬರಲಿಲ್ಲ  ನಂತರ ನಾನು ನನ್ನ ತಂದೆ ತಮ್ಮಣ್ಣ, ನನ್ನ ಚಿಗವ್ವ, ಪರಮವ್ವ,  ಹಾಗೂ ಕಾಕನಾದ ದುರಗಪ್ಪ ಮತ್ತು ಇತರರು ನಮ್ಮ ಸಂಬಂದಿಕರ ಊರುಗಳಾದ ಕಾಮನಟಗಿ, ಬುಂಕಲದೊಡ್ಡಿ, ಸಿಂದನೂರ, ವೀಬೂತಿಹಳ್ಳಿ, ಬೆಂಗಳೂರ ಮುಂತಾದ ಕಡೆಗೆ ಹೋಗಿ  ಹುಡುಕಾಡಲಾಗಿ ನನ್ನತಮ್ಮನು ಪತ್ತೆಯಾಗಲಿಲ್ಲ ನನ್ನ ತಮ್ಮನು ಹೋದ ಒಂದು ತಿಂಗಳಲ್ಲಿ ನನ್ನ ತಂದೆಯು ನನಗೆ ಸಂಬಂದ ಹುಡುಕಿ ಸಿಂದಗಿ ತಾಲೂಕಿನ ಅಂಬಲೂರ ಗ್ರಾಮದ ನಿಂಗಪ್ಪ ಆಲ್ಯಾಳ ರವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಮದುವೆಯಾದ ನಂತರ  ನಾನು ಆಗ್ಗಾಗ್ಗೆ ನನ್ನ ತವರೂ ಮನೆಗೆ ಹಾಗೂ ನನ್ನ ಚಿಗವ್ವರ ಊರಾದ ನಿಂಗಾಪೂರಕ್ಕೆ ಬಂದು ಹೋಗುವದು ಮಾಡುತ್ತಿದ್ದು ಬಂದಾಗಲೆಲ್ಲಾ ನನ್ನ ತಂದೆಗೆ ತಮ್ಮ ಗುರಪ್ಪನು ಸಿಕ್ಕಬಗ್ಗೆ ವಿಚಾರಿಸಲಾಗಿ ನಾವು ಹುಡುಕಾಡುತ್ತಿದ್ದೇವೆ ನಿನ್ನ ತಮ್ಮ ಪತ್ತೆಯಾಗಿರುವದಿಲ್ಲ ಅಂತಾ ಹೇಳುತ್ತಿದ್ದನು ನಾನು ಮತ್ತು ನನ್ನ ಗಂಡ ನಿಂಗಣ್ಣ ರವರು ಕೂಡಾ ಬೆಂಗಳೂರ ಪುನಃ ಕಡೆಗೆ ದುಡಿಯಲುಹೋದ ನಮ್ಮೂರ ಮತ್ತು ಕಕ್ಕೇರಾ ನಿಂಗಾಪೂರದ ಜನರಿಗೆ ನನ್ನ ತಮ್ಮ ಗುರಪ್ಪನು ನಿಮಗೇನಾದರೂ ಕಂಡಿದ್ದಾನೇನು ಕಂಡರೆ ನಮಗೆ ತಿಳಿಸಿರಿ ಅಂತಾ ಹೇಳುತ್ತಾ ಬಂದಿದ್ದಲ್ಲದೆ ನಾವುಕೂಡಾ ಅಲ್ಲಲ್ಲಿ ಇಲ್ಲಿಯ ವರೆಗೆ ಹುಡುಕಾಡಿದ್ದು ಆದರೂ ಕೂಡಾ ನನ್ನ ತಮ್ಮ ಗುರಪ್ಪ ತಂದೆ ತಮ್ಮಣ್ಣ ಮೂರೆಡ್ಡಿ ವ:22 ವರ್ಷ ಈತನು ಇಲ್ಲಿಯವರೆಗೂ ಪತ್ತೆಯಾಗಿರುವದಿಲ್ಲ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ್ದು ಇರುತ್ತದೆ. 
        ನಾನು ನನ್ನ ತಮ್ಮನನ್ನು ಹುಡುಕಾಡುವಾಗ ಊರ ಜನರಿಗೆ ನನ್ನ ತಮ್ಮನನ್ನು ಎಲ್ಲಿಯಾದರೂ ನೋಡಿದ್ದಾರಾ ಅಂತಾ ಈಗ ಕೆಲವು ದಿನಗಳ ಹಿಂದೆ ವಿಚಾರಿಸಿದಾಗ ನಮ್ಮೂರ ಭೀಮವ್ವ ತಂದೆ ಮಲ್ಲಪ್ಪ ಕಾಂಗ್ರೇಸ್ , ಪರಮಣ್ಣ ತಂದೆ ನಂದಪ್ಪ ಕುರಿ, ಯಲ್ಲಪ್ಪ ತಂದೆ ಸೋಮಣ್ಣ ಗುಡ್ಡಕಾಯರ, ಬಸಣ್ಣ ತಂದೆ ಪರಮಣ್ಣ ಹಿರೇಮನಿ, ಪರಮಣ್ಣ ತಂದೆ ನಂದಪ್ಪ ಶಾಂತಪೂರ ಹಾಗೂ ಇತರರು ತಿಳಿಸಿದ್ದೆನೆಂದರೆ ಊರಲ್ಲಿ ನಿನ್ನ ತಮ್ಮ ಗುರಪ್ಪನಿಗೆ ನಿಮ್ಮಪ್ಪ ಹಾಗೂ ಅವನ ಸಂಬಂದಿಕರು ಕೂಡಿ ಆಸ್ತಿಯಲ್ಲಿ ಪಾಲು ಕೊಡುವದು ಬರುತ್ತದೆ ಅಂತಾ ಈಗ ಮೂರು ವರ್ಷಗಳ ಹಿಂದೆ ನಿನ್ನ ತಮ್ಮನಿಗೆ ನಿಮ್ಮ ಜನ್ನಮ್ಮನ ತೋಟದ ಹೊಲದಲ್ಲಿ ಶೆರೆ ಕುಡಿಯಿಸಿ ನಿಮ್ಮ ಹೊಲದ ಸಮಿಪದಲ್ಲಿ ಇರುವ ಸರಕಾರಿ ಗುಡ್ಡದ ಹತ್ತಿರ ಎಳೆದುಒಯ್ದು ಕೊಲೆಮಾಡಿದ್ದಾರೆ ಅಂತಾ ಊರ ತುಂಬೆಲ್ಲಾ ಜನರು ಗುಸುಗುಸು ಮಾತಾಡುತ್ತಿದ್ದಾರೆ ಹುಚ್ಚಿ ನೀನೆಕೆ ಹುಡುಕಾಡುತ್ತಿ ನಿನ್ನ ತಮ್ಮ ನಿನಗೆ ಸಿಗುವದಿಲ್ಲ ಅವನು ನಿಮ್ಮಪ್ಪ ಹಾಗೂ ನಿಮ್ಮ ಸಂಬಂದಿಕರಿಂದಲೇ ಕೊಲೆಯಾಗಿದ್ದಾನೆ ಅಂತಾ ತಿಳಿಸಿದ್ದು ಆದರೂ ಕೂಡಾ ನಾನು ಅವರ ಮಾತನ್ನು ನಂಬದೆ ನನ್ನ ತಂದೆ ಹಾಗೂ ನನ್ನ ಸಂಬಂದಿಕರು ಏಕೆ ಕೊಲೆ ಮಾಡುತ್ತಾರೆ ಅಂತಾ ಅಂದುಕೊಂಡು ನನ್ನ ತಮ್ಮನನ್ನು ಹುಡುಕುತ್ತಿದ್ದಾಗ         ನಮ್ಮ ಗ್ರಾಮದ ದೂರದ ಸಂಬಂದಿಕರಾದ ಮಲ್ಲಪ್ಪ ತಂದೆ ಹಣಮಪ್ಪ ಕುರೇರ ಹಾಗೂ ಅವರ ಮಗ ನಂದಪ್ಪ ತಂದೆ ಮಲ್ಲಪ್ಪ ಕುರೇರ  ಮತ್ತು ದುರ್ಗಪ್ಪ ತಂದೆ ಸೋಮಣ್ಣ ಘಂಟಿಯವರಿಗೆ ಇಂದು ದಿನಾಂಕ 06/04/2018 ರಂದು ನನ್ನ ತಮ್ಮನ ಬಗ್ಗೆ ವಿಚಾರಿಸಿದಾಗ ಇವರಿಂದ ತಿಳಿದುಬಂದಿದ್ದೆನೆಂದರೆ ಸಿದ್ದಮ್ಮ ನಿನೇಕೆ ನಿನ್ನ ತಮ್ಮನನ್ನು ಅಲ್ಲಿ ಇಲ್ಲಿ ಹುಡುಕಾಡುತ್ತಿದ್ದಿಯಾ ನಿನ್ನ ತಮ್ಮ ಗುರಪ್ಪನನ್ನು ನಿನ್ನ ತಂದೆ ತಮ್ಮಣ್ಣ ತಂದೆ ಹಣಮಂತ ಮುರೆಡ್ಡಿ,  ಹಣಮಂತ ತಂದೆ ತಮ್ಮಣ್ಣ ಮುರೆಡ್ಡಿ, ಬೀಮಣ್ಣ ತಂದೆ ತಮ್ಮಣ್ಣ ಮುರೆಡ್ಡಿ, ಪರಮವ್ವ ಗಂಡ ತಮ್ಮಣ್ಣ ಮುರೆಡ್ಡಿ, ಬಸಣ್ಣ ತಂದೆ ನಿಂಗಪ್ಪ ಪೀರಗಾರ, ಮಾಳಪ್ಪ ತಂದೆ ಗುಡದಪ್ಪ ಪೀರಗಾರ, ಸಿದ್ದಪ್ಪ ತಂದೆ ಹಣಮಂತ ಮುರೆಡ್ಡಿ , ಚಂದಪ್ಪ ತಂದೆ ಜಗಮಯ್ಯ ಬಿಂಗಿ, ಗೌಡಪ್ಪ ತಂದೆ ಜೆಟ್ಟೆಪ್ಪ ಪೀರಗಾರ, ಗುಬ್ಬವ್ವ ಗಂಡ ಜೆಡೆಪ್ಪ ಮಲಮುತ್ಯಾರ, ಗವಿತ್ರಮ್ಮ ಗಂಡ ನಂದಪ್ಪ ಮುರೆಡ್ಡಿ, ಪರಮಣ್ಣ ತಂದೆ ಹಣಮಂತ ಬೂದಗುಂಪಿ ಮತ್ತು ಶಹಾಪೂರ ತಾಲೂಕಿನ ಶೆಟಗೇರಿಯ ಜೆಸಿಬಿ ಚಾಲಕನಾದ  ನೀಲಪ್ಪ ತಂದೆ ಹಣಮಂತ್ರಾಯ ಬಡಿಗೇರ ಇವರೆಲ್ಲರೂ ಈಗ ಮೂರು ವರ್ಷಗಳ ಹಿಂದೆ ದಿನಾಂಕ 24/03/2015 ರಂದು ನಿಮ್ಮಪ್ಪನ ಜನ್ನಮ್ಮನ ತೋಟದ ಹೊಲದಲ್ಲಿಯ ದಾರಿಯಿಂದ ನಾವು ಮೂರು ಜನರು ನಮ್ಮ ಜಮೀನುಗಳಿಗೆ ಕಾಲುವೆಯಿಂದ ನೀರು ತಿರುವಿಕೊಂಡು ಬರಲು ರಾತ್ರಿ 8:00 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ಹೊಲದಲ್ಲಿಯ ಕುರಿದೊಡ್ಡಿಯ ಹತ್ತಿರ  ಇವರೆಲ್ಲರೂ ಗುಂಪಾಗಿ ಕುಳಿತಿದ್ದು ಅವರ ಪಕ್ಕದಲ್ಲಿ ನಿನ್ನ ತಮ್ಮ ಗುರಪ್ಪ ಈತನು ಇದ್ದು ಅವನಿಗೆ ನಿಮ್ಮಪ್ಪ ಹಾಗೂ ಅವನ ಜೊತೆಗೆ ಇದ್ದ ಮೇಲೆ ನಮೂದಿಸಿದ ಎಲ್ಲರೂ ಕೂಡಿ ನಿನ್ನ ತಮ್ಮ ಗುರಪ್ಪನಿಗೆ ಶೆರೆ ಕುಡಿಸುತ್ತಿದ್ದು ನಿನ್ನ ತಮ್ಮನು ಒಲ್ಲೆ ಅಂದರು ಒತ್ತಾಯ ಪೂರ್ವಕವಾಗಿ ಅವನಿಗೆ ಶೆರೆ ಕುಡಿಸುತ್ತಿದ್ದು ನಾವು ಸ್ವಲ್ಪ ಮುಂದೆ ಹೋಗಿ ಕತ್ತಲಲ್ಲಿ ನಿಂತು ನೋಡಲಾಗಿ ನಿಮ್ಮಪ್ಪ ತಮ್ಮಣ್ಣ ಹಾಗೂ ಆತನ ಜೊತೆಗೆ ಇದ್ದ ಮೇಲೆ ನಮೂದಿಸಿದ ಎಲ್ಲರೂ ಸುಳೆ ಮಗ ಗುರ್ಯಾನಿಗೆ ಶೆರೆ ಕುಡಿಸಿದ್ದೇವೆ ಇವತ್ತೆ ಇವನನ್ನು ಇಲ್ಲಿಂದ ಗುಡ್ಡದ ಕಡೆಗೆ ಒಯ್ದು ಹೊಡೆದು ಖಲಾಸ ಮಾಡಿ ಹೆಣವನ್ನು ಎಲ್ಲಿಯಾದರು ಮುಚ್ಚಿಹಾಕೋಣ ಅಥವಾ ಹೊಳೆಗೆ ಒಯ್ದು ಹೇಣವನ್ನು ಬಿಸಾಕೋಣ ಈ ಸುಳ್ಯಾಮಗನಿಗೆ ಜೀವಂತ ಬಿಟ್ಟರೇ ನನ್ನ ಆಸ್ತಿಯಲ್ಲಿ ಅರ್ಧಪಾಲು ಕೊಡಬೇಕಾಗುತ್ತದೆ ಅಂತ ಅನ್ನುತ್ತಿದ್ದದ್ದನ್ನು ನಾವು ಕೇಳಿಸಿಕೊಂಡಿದ್ದು ನಂತರ 10-15 ನಿಮಿಷ ಬಿಟ್ಟು ನಿನ್ನ ತಮ್ಮ ಗುರಪ್ಪನನ್ನು ಹೊಸ ಮನೆಗೆ ಹೊಗೋಣಾ ಅಂತಾ ಕೈಹಿಡಿದು ಹೊಸಮನೆ ಕಡೆಗೆ ಹೋಗದೆ ಗುಡ್ಡದ ಕಡೆಗೆ ಕರೆದುಕೊಂಡು ಹೋಗಿದ್ದು  ಜೆ.ಸಿ ಬಿ ಚಾಲಕ ನೀಲಪ್ಪ  ತಂದೆ ಹಣಮಂತ್ರಾಯ ಬಡಿಗೇರ ಈತನಿಗೆ ಅವರೆಲ್ಲರೂ ನಾವು ಗುರಪ್ಪನನ್ನು ಮುಂದೆ ಗುಡ್ಡದ ಹತ್ತಿರ ಕರೆದುಕೊಂಡು ಹೋಗಿ ಕೊಲೆ ಮಾಡುತ್ತೇವೆ ನೀನು ಆದಷ್ಟು ಬೇಗ ನಿನ್ನ ಜೆಸಿಬಿಯನ್ನು ತಗೆದುಕೊಂಡು ಬಾ ಅಲ್ಲಿಯೇ ಯಾರು ನೋಡದ ಜಾಗೆಯಲ್ಲಿ ಗುರಪ್ಪನ ಹೆಣವನ್ನು ಮುಚ್ಚಿಹಾಕೋಣಾ ಅಂತಾ ಅಂದು ನೀಲಪ್ಪನಿಗೆ ಕಳುಹಿಸಿ ಅವರೆಲ್ಲರೂ ಗುರಪ್ಪನನ್ನು ಕೈಹಿಡಿದು ಗುಡ್ಡದ ಕಡೆಗೆ ಎಳೆದುಕೊಂಡು ಹೋದರು ನಾವು ಅವರು ಏನು ಮಾಡುತ್ತಾರೆ  ನೋಡಬೇಕು ಅಂತಾ ಅವರನ್ನು ಹಿಂಬಾಲಿಸಿ ಕೊಂಡು ಹೋದಾಗ ನಿನ್ನ ತಂದೆ ತಮ್ಮಣ್ಣನು ನಿನ್ನ ತಮ್ಮ ಗುರಪ್ಪನಿಗೆ ಆಸ್ತಿಯಲ್ಲಿ ಪಾಲುಕೊಡುವದು ಬರುತ್ತದೆ ಅಂತಾ ನಿಮ್ಮ ತಂದೆ ತಮ್ಮಣ್ಣ ತಂದೆ ಹಣಮಂತ ಮುರೆಡ್ಡಿ, ಹಣಮಂತ ತಂದೆ ತಮ್ಮಣ್ಣ ಮುರೆಡ್ಡಿ, ಬೀಮಣ್ಣ ತಂದೆ ತಮ್ಮಣ್ಣ ಮುರೆಡ್ಡಿ, ಪರಮವ್ವ ಗಂಡ ತಮ್ಮಣ್ಣ ಮುರೆಡ್ಡಿ, ಬಸಣ್ಣ ತಂದೆ ನಿಂಗಪ್ಪ ಪೀರಗಾರ, ಮಾಳಪ್ಪ ತಂದೆ ಗುಡದಪ್ಪ ಪೀರಗಾರ, ಸಿದ್ದಪ್ಪ ತಂದೆ ಹಣಮಂತ ಮುರೆಡ್ಡಿ , ಚಂದಪ್ಪ ತಂದೆ ಜಗಮಯ್ಯ ಬಿಂಗಿ, ಗೌಡಪ್ಪ ತಂದೆ ಜೆಟ್ಟೆಪ್ಪ ಪೀರಗಾರ, ಗುಬ್ಬವ್ವ ಗಂಡ ಜೆಡೆಪ್ಪ ಮಲಮುತ್ಯಾರ, ಗವಿತ್ರಮ್ಮ ಗಂಡ ನಂದಪ್ಪ ಮುರೆಡ್ಡಿ, ಪರಮಣ್ಣ ತಂದೆ ಹಣಮಂತ ಬೂದಗುಂಪಿ ರವರೆಲ್ಲರೂ ಕೂಡಿಕೊಂಡು ದಿನಾಂಕ 24/03/2015 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ  ನಿನ್ನ ತಮ್ಮ ಗುರಪ್ಪನಿಗೆ ಸರಕಾರಿ ಗುಡ್ಡದಲ್ಲಿ ಎಳೆದುಕೊಂಡು ಹೋಗಿ ಅಲ್ಲಿಯೇ ಬೀದ್ದಿದ್ದ ಕಲ್ಲುಗಳನ್ನು ನಿನ್ನ ತಮ್ಮ ಗುರಪ್ಪನ  ಮೈಮೆಲೆಲ್ಲಾ ಎತ್ತಿಹಾಕಿ  ಮತ್ತು ಬಡಿಗೆಗಳಿಂದ ಹೊಡೆದು ಕೊಲೆಮಾಡಿದ್ದು ಅಷ್ಟರಲ್ಲಿ ಅಲ್ಲಿಗೆ ನೀಲಪ್ಪನು ಜೆಸಿಬಿಯನ್ನು ತಗೆದುಕೊಂಡು ಬಂದಿದ್ದು ಆ  ಜೆಸಿಬಿಯ ಲೈಟಿನ ಬೆಳಕಿನಲ್ಲಿ ನಾವು ಅವರಿಗೆ ಕಾಣಿಸುತ್ತೇವೆ ಅಂತಾ ಅಂಜಿ ನಮ್ಮ ಹೊಲಗಳಿಗೆ ನೀರು ತಿರುವಿಕೊಂಡು ಬರಲು ಕಾಲುವೆಕಡೆಗೆ ಹೋಗಿದ್ದು ನಂತರ ಗುರಪ್ಪನ ಹೆಣವನ್ನು ಗುಡ್ಡದಲ್ಲಿ ಊತರೋ ಅಥವಾ ಹೊಳೆಗೆ ಒಯ್ದು ಬಿಸಾಕಿದರೋ ಏನು ಮಾಡಿದರೋ ನಾವು ನೋಡಿರುವದಿಲ್ಲ. ಅಂತಾ ತಿಳಿಸಿದ್ದು  ಇರುತ್ತದೆ.
        ದಿನಾಂಕ 24/03/2015 ರಂದು ರಾತ್ರಿ 7:30 ಗಂಟೆಯ ಸುಮಾರಿಗೆ ನನ್ನ ತಂದೆ ತಮ್ಮಣ್ಣನು ನನಗೆ ಮನೆಯಲ್ಲಿಯೇ ಇರು ನಿನ್ನ ತಮ್ಮ ಗುರಪ್ಪನ ಹತ್ತಿರ ಕುರಿದೊಡ್ಡಿಗೆ ಹೋಗಿ ಬುತ್ತಿಕೊಟ್ಟು ಬರುತ್ತೇವೆ ಅಂತಾ ಹೇಳಿ ನನ್ನ ತಂದೆ ತಮ್ಮಣ್ಣ ನಮ್ಮಪ್ಪನ ಎರಡನೆ ಹೆಂಡತಿ ಪರಮವ್ವ ಹಾಗೂ ಅವರ ಮಕ್ಕಳಾದ ಬೀಮಣ್ಣ ತಂದೆ ತಮ್ಮಣ್ಣ , ಹಣಮಂತ ತಂದೆ ತಮ್ಮಣ್ಣ ರವರೆಲ್ಲರೂ ಮನೆಯಿಂದ ಹೋಗಿದ್ದು ಮನೆಯಲ್ಲಿ ನಾನೋಬ್ಬಳೆ ಇದ್ದು ಈ ನಾಲ್ಕು ಜನರು ಆದಿನ  ರಾತ್ರಿ ಮರಳಿ ಮನೆಗೆ ಬಾರದೆ ಮರುದಿನ ಮುಂಜಾನೆ ಮನೆಗೆ ಬಂದರು
        ನನ್ನ ತಂದೆ ತಮ್ಮಣ್ಣ ಹಾಗೂ ಅವನ ಜೊತೆಗೆ ಇದ್ದ ಮೇಲೆ ನಮೂದಿಸಿದ 12 ಜನರು ಕೂಡಿ ನನ್ನ ತಮ್ಮ ಗುರಪ್ಪ 23 ವರ್ಷ ಈತನಿಗೆ ಆಸ್ತಿಯಲ್ಲಿ ಪಾಲುಕೊಡುವದು ಬರುತ್ತದೆ ಅಂತಾ ದಿನಾಂಕ 24/03/2015 ರ ರಾತ್ರಿ ವೇಳೆಯಲ್ಲಿ ಒತ್ತಾಯ ಪೂರ್ವಕವಾಗಿ ಶರೆ ಕುಡಿಯಿಸಿ ಗುಡ್ಡಕ್ಕೆ ಎಳೆದೊಯ್ದು ಕಲ್ಲುಗಳನ್ನು ಎತ್ತಿ ಹಾಕಿ ಬಡಿಗೆಗಳಿಂದ ಹೊಡೆದು ಕೊಲೆ ಮಾಡಿ ಶವವನ್ನು ಸಿಗದಂತೆ ಸಾಕ್ಷ ನಾಶಮಾಡಿದ್ದು ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಲು ತಮ್ಮಲ್ಲಿ ವಿನಂತಿ. ಅಂತಾ ಸಾಂರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 66/2018 ಕಲಂ 143,147,148,302,201, ಸಂಗಡ 149 ಐಪಿಸಿ  ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 145/2018 ಕಲಂ  279,337,338 ಐಪಿಸಿ ಮತ್ತು 187 ಐ.ಎಂ.ವಿ ಕಾಯ್ದೆ;- ದಿನಾಂಕ: 06-04-2018 ರಂದು 2-45 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸರಕಾರಿ ಆಸ್ಪತ್ರೆ ಸುರಪುರದಿಂದ ಆರ್ಟಿಎ ಎಮ್ಎಲ್ಸಿ ಇದೆ ಅಂತಾ ಪೋನ ಮೂಲಕ ಮಾಹಿತಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ 3 ಪಿ.ಎಂ.ಕ್ಕೆ ಬೇಟಿ ಗಾಯಾಳುದಾರನಾದ ಶೇಕ ಮಹ್ಮದ ಈತನ ಹೇಳಿಕೆಯನ್ನು 4 ಪಿ.ಎಂ.ದವರೆಗೆ ಹೇಳಿಕೆ ಪಡೆದುಕೊಂಡು 4-30 ಪಿ.ಎಂ.ಕ್ಕೆ ಠಾಣೆಗೆ ಬಂದಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:06-04-2018 ರಂದು ಬೆಳಿಗ್ಗೆ 10 ಗಂಟೆಗೆ ನಾನು ನನ್ನ ಗೆಳೆಯನಾದ ವಶೀಮ್ ತಂದೆ ಖಾಜಾ ಕಲೀಲ ಅಹೆಮದ ಅರಕೇರಿ ಸಾ:ಮುಲ್ಲಾ ಮೊಹಲ್ಲಾ ಸುರಪುರ ಇಬ್ಬರು ಕೂಡಿಕೊಂಡು ನನ್ನ ಮೊಟಾರ ಸೈಕಲ್ ನಂಬರ ಕೆಎ-33 ಎಲ್-7661 ನೇದ್ದರ ಮೇಲೆ ಖಾಸಗಿ ಕೆಲಸ ಕುರಿತು ಸುರಪುರದಿಂದ ತಿಂಥಣಿ ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಸುರಪೂರಕ್ಕೆ ಬರುವ ಕುರಿತು ಅದೆ ಮೋಟಾರ ಸೈಕಲ್ ತಗೆದುಕೊಂಡು ಸುರಪುರಕ್ಕೆ ಬರುತ್ತಿದ್ದು ಮೊಟಾರ ಸೈಕಲ್ನ್ನು ವಶಿಮ್ ನಡೆಸುತ್ತಿದ್ದು ಮೊಟಾರ ಸೈಕಲ್ ಹಿಂದುಗಡೆ ನಾನು ಕುಳಿತಿದ್ದೆನು. ಅಂದಾಜು 2-30 ಪಿ.ಎಂ.ಸುಮಾರಿಗೆ ತಿಂಥಣಿ -ಸುರಪುರ ಮುಖ್ಯ ರಸ್ತೆಯ ಕವಡಿ ಮಟ್ಟಿ ಕಾಲುವೆ ಹತ್ತಿರ ಸುರಪುರ ಕಡೆಗೆ ಬರುತ್ತಿರುವಾಗ ಎದರುಗಡೆಯಿಂದ ಅಂದರೆ ಸುರಪುರ ಕಡೆಯಿಂದ ಒಂದು ಎರಡು ಟ್ರಾಲಿಯುಳ್ಳ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬಂದವನೆ ಎದುರುಗಡೆಯಿಂದ ನಮ್ಮ ಮೋಟಾರ ಸೈಕಲ್ಗೆ ಡಿಕ್ಕಿ ಪಡಿಸಿದಾಗ ನಾವು ಮೊಟಾರ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು ನನಗೆ ಬಲಗಾಲಿನ ಮಂಡಿ ಕೆಳಗೆ ಮುರಿದಂತಾಗಿ ಭಾರಿ ರಕ್ತಗಾಯ, ಬಲಗೈ ಮುಂಗೈಗೆ ಭಾರಿ ರಕ್ತಗಾಯವಾಗಿದ್ದು, ಮೊಟಾರ ಸೈಕಲ್ ನಡೆಸುತ್ತಿದ್ದ ಶೇಖ ಮಹ್ಮದ ಅಲ್ತಾಪ ಈತನಿಗೆ ಬಲಗಾಲಿನ ಮಂಡಿ ಕೆಳಗಡೆ ಭಾರಿ ರಕ್ತಗಾಯ ಹಿಮ್ಮಡಿಯವರೆಗೆ ಗಾಯವಾಗಿದ್ದು ಬಲಗೈ ಅಂಗೈ ಹತ್ತಿರ ಗಾಯವಾಗಿದ್ದವು ಟ್ಯಾಕ್ಟರ ಚಾಲಕನು ಟ್ಯಾಕ್ಟರನ್ನು ಅಲ್ಲೆ ನಿಲ್ಲಿಸಿ ಕೆಳಗೆ ಇಳಿದು ನಮ್ಮ ಕಡೆ ನೋಡಿ ಓಡಿ ಹೋಗಿದ್ದು ಟ್ಯಾಕ್ಟರ ನೋಡಲು ಒಂದು ಮೇಸ್ಸಿ ಫರಗುಶೇನ್ ಕಂಪನಿಯ ಟ್ಯಾಕ್ಟರ ಇದ್ದು ಸದರಿ ಟ್ಯಾಕ್ಟರಗೆ ನಂಬರ ಇರುವದಿಲ್ಲ ಟ್ಯಾಕ್ಟರ ಇಂಜಿನ ಚೆಸ್ಸಿ ನಂಬರ ಖಎ327-1ಂ02636  ಇಂಜಿನ ನಂಬರ ಒಇಂಅ9025ಅಊ2128014 ನೇದ್ದು ಇದ್ದು ಒಂದು ಟ್ರಾಲಿ ನಂಬರ ಕೆಎ-33 ಟಿ-1076 ಹಾಗೂ ಇನ್ನೊಂದು ಟ್ರಾಲಿ ನಂಬರ ಕೆಎ-33 ಟಿಎ-2856 ನೇದ್ದು ಇರುತ್ತವೆ ನಂತರ ನಾವು 108 ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ನಂತರ ಸುದ್ದಿ ತಿಳಿದು ನಮ್ಮ ಅಣ್ಣನಾದ  ಮಹ್ಮದ ಶಪೀಕ ಹಾಗೂ ವಶಿಮ್ನ ತಂದೆಯಾದ ಖಾಜಾ ಕಲೀಲ ಇವರು ಆಸ್ಪತ್ರೆಗೆ ಬಂದಿದ್ದು ಇರುತ್ತದೆ. ಸದರಿ ಅಪಘಾತ ಮಾಡಿದ ಟ್ಯಾಕ್ಟರ ಚಾಲಕನ ಹೆಸರು ವಿಳಾಸ ಗೊತ್ತಿಲ್ಲ ಅವನನ್ನು ನೋಡಿದರೆ ಗುರುತಿಸುತ್ತೆನೆ ಟ್ಯಾಕ್ಟರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿ ಬರೆಯಿಸಿದ್ದು ನಿಜವಿರುತ್ತದೆ ಅಂತಾ ಹೆಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
 

No comments: