Police Bhavan Kalaburagi

Police Bhavan Kalaburagi

Saturday, May 26, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ನರೋಣಾ ಠಾಣೆ : ಅಂಬಾರಾಯ ತಂದೆ ಜಗನ್ನಾಥ ಚಿಕ್ಕನಾಗಾಯಿ ಸಾ : ಲಾಡಮುಗಳಿ  ರವರು ದಿನಾಂಕ: 24/5/2018 ರಂದು ಸಂಜೆ 6-00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಗ್ರಾಮದ ಶಿವಕುಮಾರ ತಂದೆ ಶಾಂತಪ್ಪ ರೇಕಳಗಿ ಇಬ್ಬರು ನಮ್ಮೂರಿನ ಬಸ್ ನಿಲ್ದಾಣದ ಹತ್ತಿರ ನಿಂತಿರುವಾಗ ನಮ್ಮ ಗ್ರಾಮದ ನಮ್ಮ ಸ್ನೇಹಿತನಾದ ಭೀಮಶ್ಯಾ ತಂದೆ ಶರಣಪ್ಪ ನಾಟೀಕಾರ ಇತನು ತನ್ನ ಮೊಟಾರ್ ಸೈಕಲ್ ನಂ: ಕೆಎ32-ಇಜೆ2028 ನೇದ್ದನ್ನು ತಗೆದುಕೊಂಡು ಬಂದು ತನ್ನ ವೈಯಕ್ತಿಕ ಕೆಲಸಕ್ಕಾಗಿ ವ್ಹಿ.ಕೆ ಸಲಗರ ಗ್ರಾಮಕ್ಕೆ ಹೋಗಿ ಬರೋಣಾ ನಡೆಯರಿ ಎಂದು ನನಗೆ ಮತ್ತು ಶಿವಕುಮಾರನಿಗೆ ತಿಳಿಸಿದ ಮೇರೆಗೆ ನಾವುಗಳು ಒಪ್ಪಿ ನಾವು ಇಬ್ಬರು ಅವನ ಮೋಟಾರ್ ಸೈಕಲನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡೇವು. ಭೀಮಶ್ಯಾ ಈತನು ಮೊಟಾರ್ ಸೈಕಲ್ ಚಲಾಯಿಸುತ್ತಿದ್ದನು ವ್ಹಿ ಕೆ ಸಲಗರ ತಾಂಡಾದ ಹತ್ತಿರದಲ್ಲಿದ್ದಾಗ ಸಂಜೆ 6-30 ಗಂಟೆ ಸುಮಾರಿಗೆ ವ್ಹಿ ಕೆ ಸಲಗರ ಗ್ರಾಮದ ಕಡೆಯಿಂದ ಒಬ್ಬ ಮೊಟಾರ್ ಸೈಕಲ್ ಚಾಲಕನು ತನ್ನ ಅಧಿನದಲ್ಲಿಯ ಮೊಟಾರ್ ಸೈಕಲನ್ನು ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ನಾವು ಮೂರುಜನರು ಕುಳಿತುಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಗೆ ಎದುರಿನಿದ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನಾವು ಮೂರುಜನರು ಮೋಟಾರ್ ಸೈಕಲ್ ಸಮೇತವಾಗಿ ಕೆಳಗೆ ಬಿದ್ದಿರುತ್ತೇವೆಅಲ್ಲದೇ ನಮಗೆ ಅಪಘಾತ ಪಡಿಸಿದ ಮೋಟಾರ್ ಸೈಕಲ ಚಾಲಕ ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯು ಸಹ ಮೊಟಾರ್ ಸೈಕಲ್ ಸಮೇತವಾಗಿ ಕೆಳಗೆ ಬಿದ್ದಿದನು. ನನಗೆ ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ನಾನು ಕುಳಿತಿದ್ದ ಮೊಟಾರ್ ಸೈಕಲ ಚಲಾಯಿಸುತ್ತಿದ್ದ ಭೀಮಶ್ಯಾ ಈತನಿಗೆ ಎಡಗಣ್ಣಿನ ಹುಬ್ಬಿನ ಮೇಲ್ಬಾಗಕ್ಕೆ ಭಾರಿ ರಕ್ತಗಾಯವಾಗಿ ಅಸ್ವಸ್ಥನಾಗಿದ್ದನು. ಶಿವಕುರನಿಗೂ ಸಹ ಅಲ್ಲಲ್ಲಿ ಗಾಯಗಳಾಗಿದ್ದವು. ಅಪಘಾತ ಪಡಿಸಿದ ಮೊಟಾರ್ ಸೈಕಲ ನೋಡಲಾಗಿ ಕೆಎ32-ಎಸ್1456 ಅಂತಾ ಇದ್ದು  ಅದರ ಚಾಲಕನು ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯು ಅಲ್ಲಿಯೇ ಬಿದ್ದಿದ್ದು ಚಾಲಕನ ಹೆಸರು ಮಲ್ಲಿಕಾರ್ಜುನ ತಂದೆ ಗುಂಡಪ್ಪ ಕಲಶೆಟ್ಟಿ ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯ ಹೆಸರು ನವಿನ ತಂದೆ ಅಪ್ಪಯ್ಯ ಸಾಲಿಮಠ ಇಬ್ಬರು ಸಾ||ವ್ಹಿ ಕೆ ಸಲಗರ ಎಂದು ಅವರಿಂದಲೇ ಗೊತ್ತಾಗಿರುತ್ತದೆ. ಅéಷ್ಟರಲ್ಲಿಯೇ ವ್ಹಿ ಕೆ ಸಲಗರ ಗ್ರಾಮದ ಸಂತೋಷ ಚಿತಕೋಟಿ ಎಂಬುವರು ಬಂದು ಕಲಬುರಗಿ ಕಡೆಗೆ ಬರುತ್ತಿದ್ದ ಒಂದು ಕ್ರೂಜರ ಜೀಪಿನಲ್ಲಿ ನಮಗೆ 5ಜನಕ್ಕೆ ಹಾಕಿಕೊಂಡು ಬರುವಾಗ ಮಹಾಗಾಂವ ಕ್ರಾಸ್ ದಾಟಿ ಬರುವಾಗ ಸಂಜೆ 7-45 ಗಂಟೆ ಸುಮಾರಿಗೆ ಭೀಮಶ್ಯಾ ನಾಟೀಕಾರ ಈತನು ಮೃತ ಪಟ್ಟಿರುತ್ತಾನೆ. ನಾನು (ಅಂಬರಾಯ) ಶಿವಕುಮಾರ ಮಲ್ಲಿಕಾರ್ಜುನ ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು ನವಿನನು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದಾನೆ. ಭೀಮಶ್ಯಾ ಇವರ ಶವವು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಿದ್ದು ಇರುತ್ತದೆ. ಈ ಅಪಘಾತ ಪಡಿಸಿದ ಮೊಟಾರ್ ಸೈಕಲ ನಂ ಕೆಎ32-ಎಸ್1456 ನೇದ್ದರ ಚಾಲಕನಾದ ಮಲ್ಲಿಕಾರ್ಜುನ ತಂದೆ ಗುಂಡಪ್ಪ ಕಲಶೆಟ್ಟಿ ಸಾ||ವ್ಹಿ ಕೆ ಸಲಗರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಬಾಬುಮಿಯಾ ತಂದೆ ಮೋದಿನಸಾಬ ಪಟವಾರಿ  ರವರು  ದಿನಾಂಕ:24/15/18 ರಂದು ಬೆಳಿಗ್ಗೆ ತಮ್ಮೂರಿನ ಬಸ್ಸ ನಿಲ್ದಾಣದ ಹತ್ತಿರ ನಿಂತಾಗ ಲಾಲ ಅಹ್ಮದ ತಂದೆ ಬಾಬುಮಿಯಾ ಪಟವಾರಿ 2) ಜರಿನಾ ಗಂಡ ಲಾಲ್ ಅಹ್ಮದ ಪಟವಾರಿ ಸಾ: ಇಬ್ಬರು ಕಣ್ಣೂರ  ತಮ್ಮ ಹೊಲ ಸರ್ವೆೇ ನಂ. 16/5 ನೇದ್ದರ ಜಮಿನಿನಲ್ಲಿ ನೀರು ಬರುವ ವಿಷಯದಲ್ಲಿ ತಕರಾರು ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ದುಖಃಪತಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ನಾಗೇಶ ತಂದೆ ಜಗದೇವಪ್ಪಾ ಸಾರಥಿ ಸಾ: ಹರಸೂರ ತಾ:ಜಿ: ಕಲಬುರಗಿ ರವರು ದಿನಾಂಕ: 24/05/2018 ರಂದು ಬೆಳಿಗ್ಗೆ ನಾನು ಮತ್ತು ನನ್ನ ಹೆಂಡತಿ ಜಗದೇವಿ ಇಬ್ಬರು ನಮ್ಮ ಮನೆಯಲ್ಲಿದ್ದಾಗ 1)ಸಂತೋಷ ತಂದೆ ಜಗದೇವಪ್ಪಾ 2) ಕಾಶಿಬಾಯಿ  ಇಬ್ಬರು ಸಾ: ಹರಸೂರ ತಾ:ಜಿ: ಕಲಬುರಗಿ ರವರು ಕುಡಿಕೊಂಡು  ಖುಲ್ಲಾ ಜಾಗೆ ವಿಷಯದಲ್ಲಿ ಜಗಳ ತೆಗೆದು ಅವಾಚ್ಯವಾಗಿ ಬೈದು ಬಡಿಗೆಯಿಂದ ಕೈಯಿಂದ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: