Police Bhavan Kalaburagi

Police Bhavan Kalaburagi

Saturday, June 2, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 30/05/2018 ರಂದು ಮೃತ ಶ್ರೀ ಸೇವುನಾಯಕ ಎ.ಎಸ್.ಐ. ಮತ್ತು ತಮ್ಮ ಠಾಣೆಯ ಸಿಬ್ಬಂದಿಯವರೊಂದಿಗೆ ಹರಸೂರ ಗ್ರಾಮಕ್ಕೆ ಆರೋಪಿ ಪತ್ತೆ ಕಾರ್ಯದಲ್ಲಿ ಹೋಗಿ ಮರಳಿ ಕಲುಬರಗಿ ಕಡೆಗೆ ತಮ್ಮ ಸರ್ಕಾರಿ ಮೋಟಾರ ಸೈಕಲ ಕೆಎ 32 ಜಿ 631 ರ ಮೇಲೆ ಕುಳಿತುಕೊಂಡು  ರಾತ್ರಿ 10-30 ಗಂಟೆ ಸುಮಾರಿಗೆ  ಬಿರಾದಾರ ಪೆಟ್ರೋಲ ಪಂಪ  ಇನ್ನೂ ಸ್ವಲ್ಪ ಮುಂದೆ ಇರುವಂತೆ ಹೊರಟಾಗ  ಕಲಬುರಗಿ- ಹುಮನಾಬಾದ ರಾಷ್ಟ್ರೀಯ ಹೆದ್ದಾರಿಯ  ಮೇಲೆ ಟಿಪ್ಪರ ನಂಬರ  ಕೆಎ 32 ಸಿ 5963  ನೇದ್ದರ ಚಾಲಕನು ಕಲಬುರಗಿ ಕಡೆ ಮುಖ ಮಾಡಿ  ಸದರಿ ರೋಡಿಗೆ  ಹೋಗು-ಬರುವ ವಾಹನಗಳ ಸಂಚಾರಕ್ಕೆ ಅಡೆ ತಡೆಯಾಗುವ ರೀತಿಯಲ್ಲಿ ಮತ್ತು ಮಾನವನ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ  ಹಾಗೂ ಯಾವುದೇ ಇಂಡಿಕೇಟರ ಲೈಟ್ ಹಾಕದೇ  ಮತ್ತು ಯಾವುದೇ ಮುನ್ಸೂಚನೇ ನೀಡದೇ ಹಾಗೂ ನಿರ್ಲಕ್ತತನದಿದ ಟಿಪ್ಪರ ನಿಲ್ಲಿಸಿ ಹೋಗಿದ್ದರಿಂದ ನಿಮ್ಮ ತಂದೆಯವರು ಹುಮನಾಬಾದ ರೋಡ ಕಡೆಯಿಂದ ತಮ್ಮ ಮೋಟಾರ ಸೈಕಲ ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ಬಂದವರೇ ಟಿಪ್ಪರದ ಹಿಂಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಅವರ ಹಣೆಗೆ ಭಾರಿ ರಕ್ತಗಾಯವಾಗಿ ಮತ್ತು ಮೂಗಿನಿಂದ ರಕ್ತ ಸೋರಿ ಸ್ಥಳದಲ್ಲಿ ಮೋಟಾರ ಸೈಕಲದೊಂದಿಗೆ ಬಿದ್ದಿರುತ್ತಾರೆ. ಅಷ್ಟರಲ್ಲಿ 108 ಅಂಬುಲೈನ್ಸ ಗಾಡಿ ಬರಲು ನಮ್ಮ ತಂದೆ  ಸೇವುನಾಯಕ ಇವರಿಗೆ ಅಂಬುಲೈನ್ಸ ಗಾಡಿಯಲ್ಲಿ ಹಾಕಿಕೊಂಡು ಉಪಚಾರ ಕುರಿತು ಯುನೈಟೆಡ ಆಸ್ಪತ್ರೆ ಕಲಬುರಗಿ ತೆಗೆದುಕೊಂಡು ಹೋದಾಗ ಅಲ್ಲಿನ ವೈದ್ಯರು ನಮ್ಮ ತಂದೆಯವರಿಗೆ ನೋಡಿ ಅವರು ದಾರಿಯಲ್ಲಿ ತರುವಾಗಲೇ ಮೃತಪಟ್ಟಿರುತ್ತಾರೆ ಎಂದು ತಿಳಿಸಿದರು. ನಂತರ ನಮ್ಮ ತಂದೆಯವರ ಮೃತ ದೇಹವನ್ನು ಯುನೈಟೆಡ ಆಸ್ಪತ್ರೆ ಕಲಬುರಗಿಯಿಂದ ಯಾವುದೋ ಒಂದು ಖಾಸಗಿ ಅಂಬುಲೈನ್ಸದಲ್ಲಿ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ದಿನಂಕ 31/05/2018 ರಂದು ರಾತ್ರಿ 12-00  ಗಂಟೆಗೆ ತಂದಾಗ ಅಲ್ಲಿನ ವೈದ್ಯರು ಕೂಡಾ ನಮ್ಮ ತಂದೆಯವರಿಗೆ ನೋಡಿ ಈಗಾಗಲೇ ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ. ಟಿಪ್ಪರ ಕೆಎ 32 ಸಿ 5963 ಚಾಲಕ  ಮತ್ತು ನಮ್ಮ ತಂದೆ ಸೇವುನಾಯಕ ಇವರಿಬ್ಬರ ತಪ್ಪಿನಿಂದ ಅಪಘಾತ ಸಂಭವಿಸಿದ್ದರಿಂದ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ  ಶ್ರೀ ಸತೀಷ ತಂದೆ ಸೇವುನಾಯಕ ಚವ್ಹಾಣ ಸಾ: ಕೇರೂರ ತಾಂಡಾ ತಾ:ಜಿ: ಕಲಬುರಗಿ ಹಾ:ವ: ಸೇವಾಲಾಲ ನಗರ ಮುಸ್ಲಿಂ ಸಂಘ ರೋಡ ಕಲಬುರಗಿ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 01-06-2018 ರಂದು ಮೃತ ಶಿವಲಿಂಗಪ್ಪಾ ಇವರು ಕಲಬುರಗಿ ಎನ್.ಇ.ಕೆ.ಎಸ್.ಆರ್.ಟಿ.ಸಿ. ಬಸ್ಸ ಘಟಕ 01 ರಲ್ಲಿ ಬಸ್ಸ ತೊಳೆಯುವ  ಸ್ಥಳದಲ್ಲಿ ಬಸ್ಸ ತೊಳೆಯುತ್ತಿರುವಾಗ ಎನ್.ಇ.ಕೆ.ಎಸ್.ಆರ್.ಟಿ.ಸಿ. ಬಸ್ಸ ನಂ ಕೆಎ-32 ಎಫ್-2376 ನೇದ್ದರ ಚಾಲಕನು ತನ್ನ ಬಸ್ಸನ್ನು ಹಿಮ್ಮುಖವಾಗಿ ಚಲಾಯಿಸಿ ಶಿವಲಿಂಗಪ್ಪಾ ಇತನಿಗೆ ಅಪಘಾತ ಮಾಡುತ್ತಾ ಹಿಂದೆ ನಿಂತಿದ್ದ ಇತನು ಗಾಯ ಹೊಂದಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಮಾಹಾದೇವಿ ಗಂಡ ಶಿವಲಿಂಗಪ್ಪಾ ಡಾಂಗೆ ಸಾ : ಜಂಬಗಾ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಶಾಹಾಬಾದ ನಗರ ಠಾಣೆ : ಶ್ರೀ ಪ್ರಭಾಕರ ತಂದೆ ಮರಣ್ಣ ಸಾ:ಹರಳಯ್ಯಾ ನಗರ ಶಹಾಬಾದ ಇವರು ದಿನಾಂಕ 31/05/2018 ರಂದು ಸಾಯಂಕಾಲ ವೇಳೆ ಪಿರ್ಯಾಧಿ ಪ್ರಭಾಕರ ತಾನು ಚಲಾಯಿಸುವ ಮೊ/ಸೈ ನಂ ಕೆ.ಎ. 32 ಎಕ್ಸ 3882 ನೇದ್ದರ ಮೇಲೆ ಸುರೇಶ ಇತನಿಗೆ ಕುಡಿಸಿಕೊಂಡು ಶಹಾಬಾದ ದಿಂದ ಕಲಬುರಗಿ ಹೋಗಿ ಮರಳಿ ಶಹಾಬಾದಕ್ಕೆ ಬರುವಾಗ ದೇವನತೆಗನೂರ ಗ್ರಾಮದ ಹಳ್ಳದ ಬ್ರೀಡ್ಜ ಹತ್ತಿರ ರಸ್ತೆಯಲ್ಲಿ 7-30 ಪಿ.ಎಂ ಕ್ಕೆ ನಡೆದಾಗ ಅದೆ ವೇಳೆಗೆ ಗುಡುಗು ಮಿಂಚು ಆಗಿ ಜೋರಾಗಿ ಮಳೆ ಬರುವಾಗ ರಸ್ತೆಬದಿಯಿಂದ  ಬರುವಾಗ ಹಿಂದಿನಿಂದ ಯಾವುದೋ ಲಾರಿ ಚಾಲಕ ಲಾರಿಯನ್ನು ಅತೀವೆಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ನಮ್ಮಮ ಮೊ/ಸಯ ಸೈ ಡಿಕ್ಕಿ ಪಡಿಸಿದ್ದರಿಂದ ಹಿಂದೆ ಕುಳಿತ ಸುರೇಶ ನಾನು ಕೆಳಗೆ ಬಿದ್ದಾಗ ಮುಖಕ್ಕೆ ಮತ್ತು ಎಡತೋಡೆಯ ಕೆಳಗಿ ಭಾರಿ ಪೆಟ್ಟಾಗಿದ್ದು ಮತ್ತು ಸುರೇಶನಿಗೆ ಎದೆಗೆ ಹೊಟ್ಟೆಗೆ ತರಚಿದ ರಕ್ತಗಾಯವಾಗಿ ಮುಖಕ್ಕೆ ಜಜ್ಜಿ ದಂತಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತ ಪಟ್ಟಿದ್ದು ನಂತರ ಉಪಚಾರ ಕುರಿತು ಕಾಮರೆಡ್ಡಿ ಆಸ್ಪತ್ರೆಗೆ ಸೇರಿಕೆ ಆಗಿದ್ದು ಡಿಕ್ಕಿ ಪಡಿಸಿದ ಲಾರಿ ಚಾಲಕನ ಮೇಲೆ ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಶಾಹಾಬಾದ ನಗರ ಠಾಣೆ : ದಿನಾಂಕ 26/04/2018 ರಂದು ಬೆಳಿಗ್ಗೆ ಕಾಮರೆಡ್ಡಿ ಆಸ್ತರೆ ಕಲಬುರಗಿಯಿಂದ ಆರ್ ಟಿ ಈ ಅಂತಾ ಮಾಹಿತಿ ಬಂದ ಮೇರೆಗೆ ತಿಮ್ಮಣ್ಣ ಹೆಚ್ ಸಿ 211 ರವರು ಆಸ್ಪತ್ರೆಗೆ ಭೇಟಿ ನೀಡಿ ಉಪಚಾರ ಪಡೆಯುತಿದ್ದ ಶ್ರೀ ರಜಾಕ್ ಪಟೇಲ್ ತಂದೆ ಹಜರತ್ ಪಟೇಲ್ ಇವರು ದಿನಾಂಕ 25/04/2018 ರಂದು ಬೆಳಿಗ್ಗೆ ರಜಾಕ್ ಪಟೇಲ್ ಲಾಡ್ಲಾಪೂರಕ್ಕೆ ತಮ್ಮಸಂಬಂದಿಕರ ಮದುವೆ ಕಾರ್ಯಕ್ರಮಕ್ಕ ಟಿ ವಿ ಎಸ್ ಎಕ್ಸ್ ಎಲ್ ಮೊ ಸೈ  ನಂ ಕೆ ಎ 37 ಎಲ್ 6120 ನೇದ್ದರ ಮೇಲೆ ಹೋಗಿ ಮರಳಿ ಸಾಯಂಕಾಲ ವಾಪಸ್ಸು ಊರಿಗೆ ಬರುವಾಗ ಮಾಲಗತ್ತಿ ಕ್ರಾಸ್ ಹತ್ತಿರ ರಸ್ತೆಯಲ್ಲಿ ಅದೇ ವೇಳೆಗೆ ಟ್ರ್ಯಾಕ್ಟರ್ ನಂ ಕೆ  ಎ 29 ಟಿ ಎ 6063 - ಕೆ ಎ 32 ಟಿ ಎ  4875 ರ ನೇದ್ದರ ಚಾಲಕ ಹಿರೋಡೇಶ್ವರ ಗುಡಿ ರಸ್ತೆಯಿಂದ ಮಾಲಗತ್ತಿ ಊರಿನೊಳಗೆ ಹೋಗುವಾಗ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ನಮ್ಮ ತಂದೆಗೆ ಡಿಕ್ಕಿ ಪಡಿಸಿದ್ದರಿಂದ ತಲೆಯ ಹಿಂಭಾಗಕ್ಕೆ ಮತ್ತು ಎಡಗಾಲಿಗೆ ಭಾರಿ ಗಾಯಪೆಟ್ಟಾಗಿ ಮುಖದ ಮೇಲೆ ತರಚಿದಂತಾಗಿ ಬೇವುಶ ಇದ್ದಾಗ ಅಲ್ಲಿಯೇ ಇದ್ದ ಮೆಹೆಬೂಬ ಖಾನಾವಳಿ ಇವರು ನೋಡಿ ವಿಷಯ ತಿಳಿಸಿದ್ದು ಹೋಗಿ ನೋಡಲಾಗಿ ನಿಜವಿದ್ದು ನಮ್ಮ ತಂದೆಗೆ ಡಿಕ್ಕಿಪಡಿಸಿದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಅಕ್ತರ ಪಟೇಲ ತಂದೆ ರಜಾಕ ಪಟೇಲ ಸಾ:ಮುತ್ತಗಾ.  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಧರ್ಮಣ್ಣ ತಂದೆ ಶಿವಪ್ಪ ಖಮ್ಮನ ಸಾ:ಪಟ್ಟಣ ತಾ:ಜಿ:ಕಲಬುರಗಿ ಇವರು ದಿನಾಂಕ:29/05/2018 ರಂದು ಮ್ಮ ಊರಿಗೆ ಹೋಗುವ ಸಲುವಾಗಿ ಕೋಟನೂರ (ಡಿ) ಯಿಂದ ತಿಮ್ಮಾಪೂರಿ ಸರ್ಕಲವರೆಗೆ ಬಸ್ಸಿಗೆ ಬಂದು ಅಲ್ಲಿಂದ ಲಾಲಗಿರಿ ಕ್ರಾಸಗೆ ನಡೆದುಕೊಂಡು ಹೋಗುತ್ತಿರುವಾಗ ಕೋರ್ಟ ಕ್ರಾಸ ಹತ್ತಿರ ನಮ್ಮ ಊರಿನವರಾದ ರಾಕೇಶ ವಗ್ಗೆನವರು ಹಾಗೂ ಹಣಮಂತ ವಗ್ಗೆನವರು ನಿಂತಿದ್ದರು ಅವರು ನನಗೆ ಗುರಾಯಿಸಿ ನೋಡುತ್ತಿದ್ದರು ನಾನು ಅವರಿಗೆ ಹೆದರಿಕೊಂಡು ಬಡಾ-ಬಡಾ ಹೆಜ್ಜೆ ಹಾಕುತ್ತಾ ಲಾಲಗೇರಿ ಕ್ರಾಸಗೆ ಬಂದು ನಮ್ಮ ಊರ ಬಸ್ಸಿಗೆ ಕಾಯುತ್ತಾ ನಿಂತಿರುವಾಗ 3.00 ಪಿ.ಎಂ ಸುಮಾರಿಗೆ ರಾಕೇಶ ಹಾಗೂ ಹಣಮಂತ ಇಬ್ಬರೂ ಮೋಟಾರ ಸೈಕಲ್‌ ಮೇಲೆ ಬಂದು ನನಗೆ ಕೊಲೆ ಮಾಡುವ ಉದ್ದೇಶದಿಂದ ಮೋಟಾರ ಸೈಕಲ ನಡೆಸುತ್ತಿದ್ದ ರಾಕೇಶ ಇತನು ವೇಗವಾಗಿ ಮೋಟಾರ ಸೈಕಲ್‌ ನಡೆಸಿಕೊಂಡು ಬಂದು ನನ್ನ ಬಲಗೈ ಕಡೆಗೆ ಗುದ್ದಿಸಿದ್ದು ಆ ರಭಸಕ್ಕೆ ನಾನು ಕೆಳಗಡೆ ಬಿದ್ದಾಗ ರಾಕೇಶ ಹಾಗೂ ಹಣಮಂತ ಇವರು ಮೋಟಾರ ಸೈಕಲ ತೆಗೆದುಕೊಂಡು  ಆಳಂದ ನಾಕಾ ಕಡೆಗೆ ಹೋದರು ಕೆಳಗೆ ಬಿದ್ದ ನನಗೆ ದಾರಿ ಹೋಕರು ಎಬ್ಬಿಸಿ ರಸ್ತೆ ಪಕ್ಕಕ್ಕೆ ನನಗೆ ಕೂಡಿಸಿ ನೀರು ಕುಡಿಯಲು ಕೊಟ್ಟರು ನಂತರ ನಾನು ಪೋನ್‌ ಮೂಲಕ ನಮ್ಮ ಸಂಬಂಧಿಕರಾದ  ಶಾಂತಪ್ಪಾ ಹಾಗೂ ವಿಠ್ಠಲರವರಿಗೆ ವಿಷಯ ತಿಳಿಸಿದಾಗ ಸದರಿಯವರು ನನ್ನ ಹತ್ತಿರ ಬಂದು ನನಗೆ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಕಾರಣ ನಮ್ಮ ಜನಾಂಗದವರೆ ಆದ ರಾಕೇಶ ಮತ್ತು ಹಣಮಂತ ಇವರುಗಳು ನಮ್ಮೊಂದಿಗೆ ಮೊದಲಿನಿಂದಲೂ ಹಗೆತನ ಸಾಧಿಸುತ್ತಾ ಬಂದಿದ್ದು ನನಗೆ ಕೊಲೆ ಮಾಡುವ ಉದ್ದೇಶದಿಂದ ಮೋಟಾರ ಸೈಕಲ್‌ ಹಾಯಿಸಿ ನನ್ನ ಬಲಗೈಗೆ ಭಾರಿ ಗುಪ್ತಗಾಯ ಹಾಗೂ ಮೈ-ಕೈಗೆ ಗುಪ್ತಗಾಯ ಪಡಿಸಿ ನನ್ನ ಕೊಲೆಗೆ ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: