¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ 16-07-2018
ಮುಡಬಿ
ಪೊಲೀಸ್ ಠಾಣೆ ಅಪರಾಧ ಸಂ. 76/2018, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ
15-07-2018 ರಂದು ಕೌಡಿಯಾಳ (ಆರ್) ಗ್ರಾಮದ ಕೃಷ್ಣಾ ರಡ್ಡಿ ರವರ ಚಹಾದ ಅಂಗಡಿಯ ಮುಂದಿನ ಕಟ್ಟೆಯ
ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಇಸ್ಪಿಟ ಆಡುತ್ತಿದ್ದಾರೆಂದು ಶಿರೋಮಣಿ ಪಿ.ಎಸ್.ಐ
ಮುಡಬಿ ಪೊಲೀಸ್
ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು
ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕೌಡಿಯಾಳ (ಆರ್) ಗ್ರಾಮಕ್ಕೆ ದುಂಡಾಗಿ
ಕುಳಿತು ಇಸ್ಪಿಟ ಆಡುತ್ತಿದ್ದ ಆರೋಪಿತರಾದ 1) ಅಮರ ತಂದೆ ಶ್ರೀಮಂತ ವಾಘ್ಮಾರೆ ವಯ: 28 ವರ್ಷ, ಜಾತಿ:
ಎಸ್.ಸಿ (ಮಾದಿಗ), 2) ಮಹಾದೇವ
ತಂದೆ ಮನೋಹರ ಬಿರಾದಾರ ವಯ: 31 ವರ್ಷ, ಜಾತಿ: ಮರಾಠ, 3) ಅನೀಲ ತಂದೆ ಅಣ್ಣಾರಾವ ಬಿರಾದಾರ ವಯ: 40
ವರ್ಷ, 4) ತುಕಾರಾಮ ತಂದೆ ಪಾಂಡುರಂಗ ಪಾಟೀಲ್ ವಯ: 52 ವರ್ಷ, ಜಾತಿ: ಮರಾಠ, 5) ಬಳಿರಾಮ
ತಂದೆ ಭೀಮಶಾ ಪಂಚಾಳ ವಯ: 24 ವರ್ಷ, ಜಾತಿ: ಬಡಿಗೇರ, 6) ಈರಣ್ಣಾ ತಂದೆ ಚಂದ್ರಶಾ ಪೂಜಾರಿ ವಯ: 48
ವರ್ಷ, ಜಾತಿ: ಕುರುಬ, 7) ಗಣಪತಿ ರಡ್ಡಿ ತಂದೆ ದತ್ತಾ ರಡ್ಡಿ ವಯ: 50 ವರ್ಷ, ಜಾತಿ: ರಡ್ಡಿ,
8) ಕುಪೇಂದ್ರ ತಂದೆ ಎಕನಾಥ ಜಡಗೆ ವಯ: 58 ವರ್ಷ, ಜಾತಿ: ಕುರುಬ ಹಾಗೂ 9) ಹಣಮಂತ ತಂದೆ ಮಾಣಿಕ
ಜಡಗೆ ವಯ: 52 ವರ್ಷ, ಜಾತಿ: ಕುರುಬ, ಎಲ್ಲರೂ ಸಾ: ಕೌಡಿಯಾಳ(ಆರ್) ರವರ ಮೇಲೆ ದಾಳಿ ಮಾಡಿ
ಎಲ್ಲರಿಗೂ ಹಿಡಿದು ಅವರಿಂದ ಒಟ್ಟು ನಗದು ಹಣ 3300/- ರೂಪಾಯಿಗಳು ಮತ್ತು 52 ಇಸ್ಪಿಟ್ ಎಲೆಗಳನ್ನು
ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 95/2018, ಕಲಂ. 279, 304(ಎ)
ಐಪಿಸಿ :-
ಫಿರ್ಯಾದಿ
ರಾಜಾಶ್ರೀ ಗಂಡ ಅನಿಲರೆಡ್ಡಿ ತಿಪ್ಪಾರೆಡ್ಡಿನೋರ್ ವಯ: 32 ವರ್ಷ, ಜಾತಿ: ರೆಡ್ಡಿ, ಸಾ: ಸಿಕೆನಪೂರ, ತಾ & ಜಿಲ್ಲಾ: ಬೀದರ, ಸದ್ಯ: ಹುಮನಾಬಾದ
ರವರ ಗಂಡ ಅನಿಲರೆಡ್ಡಿ ರವರು ಕಳೆದ ಎರಡು ವರ್ಷಗಳಿಂದ ಹುಮನಾಬಾದನ ಭೀಮರಾವ ಪಾಟೀಲ್ ರವರ
ಎ.ಸಿ.ಸಿ. ಸಿಮೆಂಟ್ ಏಜೆನ್ಸಿಯಲ್ಲಿ ಮಾನೆಂಜರ್ ಅಂತ ಕರ್ತವ್ಯ ನಿರ್ವಹಿಸುತ್ತಿದ್ದು, ಹೀಗಿರುವಲ್ಲಿ
ದಿನಾಂಕ 15-07-2018 ರಂದು ಫಿರ್ಯಾದಿಯವರ ಗಂಡ ತಿಳಿಸಿದ್ದೆನೆಂದರೆ
ಹುಡಗಿ ಗ್ರಾಮದಲ್ಲಿ ಸಿಮೆಂಟ್ ಮಾರಾಟದ ಹಣ ಬರುವುದು ಬಾಕಿ ಇದ್ದು ನಾನು ಹುಡಗಿ ಗ್ರಾಮಕ್ಕೆ ಹೋಗಿ
ಹಣ ವಸೂಲಿ ಮಾಡಿಕೊಂಡು ಬರುತ್ತೇನೆ ಅಂತ ಹೇಳಿ ಮೋಟಾರ್ ಸೈಕಲ್ ಸಂ. ಕೆಎ-38/ಯು-2409 ನೇದನ್ನು ಚಲಾಯಿಸಿಕೊಂಡು ಮನೆಯಿಂದ ಹುಡಗಿ
ಗ್ರಾಮಕ್ಕೆ ಹೋಗಿ ಗ್ರಾಮದಲ್ಲಿ ಹಣ ವಸೂಲಿ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಬರುವ ಪ್ರಯುಕ್ತ
ತನ್ನ ಮೋಟಾರ್ ಸೈಕಲನ್ನು ನಿಧಾನವಾಗಿ ಚಲಾಯಿಸಿಕೊಂಡು ಹುಡಗಿ ಗ್ರಾಮದ ಕೆ.ಎಮ್.ಎಫ್ ಹಾಲಿನ ಡೈರಿ
ಹತ್ತಿರ ಬಂದು ನಿಂತ್ತುಕೊಂಡು ಮೋಟಾರ್ ಸೈಕಲ್ ಇಂಡಿಕೇಟರ್ ಹಾಕಿ ರೋಡ ದಾಟುತ್ತಿರುವಾಗ ರಾಷ್ಟ್ರೀಯ
ಹೆದ್ದಾರಿ ನಂ. 65 ಸೊಲ್ಲಾಪುರ - ಹೈದ್ರಾಬಾದ ರೋಡಿನ ಮೇಲೆ
ಹೈದ್ರಾಬಾದ ಕಡೆಯಿಂದ ಬಂದ ಕಾರ್ ಸಂ. ಕೆಎ-36/ಎಮ್-6014 ನೇದರ
ಚಾಲಕನಾದ ಆರೋಪಿ ರಾಜು ತಂದೆ ಶ್ರೀನಿವಾಸ ಕಠಾರೆ ಸಾ: ಹುಮನಾಬಾದ ಇವನು ತನ್ನ ಕಾರನ್ನು ಅತಿವೇಗ
ಮತ್ತು ನಿಷ್ಕಾಳಜಿತನದಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ
ಗಂಡ ಚಲಾಯಿಸುತ್ತಿದ್ದ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾನೆ, ಸದರಿ ಅಪಘಾತದಿಂದ
ಫಿರ್ಯಾದಿಯವರ ಗಂಡನ ತಲೆಗೆ ಭಾರಿ ಗುಪ್ತಗಾಯ, ಕಿವಿಯಿಂದ, ಮೂಗಿನಿಂದ ಮತ್ತು ಬಾಯಿಯಿಂದ ರಕ್ತಸ್ರಾವ
ಆಗಿರುತ್ತದೆ, ಎಡಗಡೆ ಸೊಂಟಕ್ಕೆ ಸಾದಾ ರಕ್ತಗಾಯ ಹಾಗೂ ಹೊಟ್ಟೆಯ ಮೇಲೆ ತರಚಿದ ಗಾಯಗಳು ಆಗಿ
ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment