ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 27-07-2018
ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂ. 136/18, ಕಲಂ 302 ಐಪಿಸಿ :-
ಫಿರ್ಯಾದಿ ಮನೋಹರ ತಂದೆ ರಾಮಣ್ಣಾ ಕಾಡವಾದೆ,
ವಯ:
60 ವರ್ಷ, ಜಾತಿ:
ಲಿಂಗಾಯತ,
ಸಾ:
ಸಿಂಧನಕೇರಾ ರವರ
ಮಗನಾದ ಪ್ರಕಾಶ ವಯ:
26 ವರ್ಷ ಇತನು
ಜೂಜಾಟ ಆಡುವ ಸ್ವಭಾವ ಹೊಂದಿದ್ದು, ದಿನನಿತ್ಯದಂತೆ ಫಿರ್ಯಾದಿಯು
ಮನೆಯಲ್ಲಿ ಮಲಗಿಕೊಂಡಾಗ 0130 ಗಂಟೆ ಸುಮಾರಿಗೆ ಗ್ರಾಮದ
ರವಿ ಪಾಟೀಲ ಹಾಗು ಗುರುನಾಥ ಮರಕಲ ರವರು ಮನೆಗೆ ಬಂದು
ಫಿರ್ಯಾದಿ ಮಗ ಪ್ರಕಾಶ ಇತನು ಬಸ ನಿಲ್ದಾಣದ ಹತ್ತಿರ ಮೋಟರ ಸೈಕಲ ಮೇಲಿಂದ ಬಿದ್ದು ಗಾಯಗೊಂಡ ಬಗ್ಗೆ ತಿಳಿಸಿದ ಕೂಡಲೇ ಫಿರ್ಯಾದಿ
ಹಾಗು ಮಕ್ಕಳಾದ ಆಕಾಶ,
ಲಕ್ಷ್ಮಣ,
ಅಣ್ಣ ಶಿವರಾಜ ಹಾಗು ಇತರರು ಹೋಗಿ ನೋಡಿ ವಿಚಾರಿಸಲು ತಿಳಿದು ಬಂದಿದ್ದೆನೆಂದರೆ ದಿನಾಂಕ 26-07-2018
ರಂದು 1800 ಗಂಟೆ ಸುಮಾರಿಗೆ ಪ್ರಕಾಶ
ಇತನು ಮನೆ ಗಿಲಾವಕ್ಕೆಂದು ತಂದಿಟ್ಟಿದ್ದ
1.5 ಲಕ್ಷ ರೂಪಾಯಿ ತೆಗೆದುಕೊಂಡು ಅವನ ಗೆಳೆಯರಾದ ರವಿ ಪಾಟೀಲ, ನಾಗೇಶ ತೇಲಂಗ ಹಾಗು ಗುರುನಾಥ ಮರಕಲ ಹಾಗು ಇತತರೊಂದಿಗೆ ಕೂಡಿಕೊಂಡು ಗ್ರಾಮದ
ಶಿವಾರದಲ್ಲಿರುವ ಹುಮನಾಬಾದ ಪುರಸಭೆ ಕಸರಾಶಿ ಜಾಗೆಯಲ್ಲಿರುವ ಕೊಣೆಯೊಂದರಲ್ಲಿ ಜೂಜಾಟ ಆಡಿ,
ಸರಾಯಿ ಕುಡಿದಿದ್ದು,
ರಾತ್ರಿ
1200 ಗಂಟೆಯಿಂದ
0100 ಗಂಟೆ ಅವಧಿಯಲ್ಲಿ ಯಾವುದೋ ಒಂದು ಕಾರಣಕ್ಕಾಗಿ ಅವರ ಮದ್ಯೆ ಜಗಳವಾಗಿ ಫಿರ್ಯಾದಿ
ಮಗನಿಗೆ
ಆರೋಪಿತರಾದ ರವಿ ಪಾಟೀಲ,
ನಾಗೇಶ ತೇಲಂಗ ಹಾಗು ಗುರುನಾಥ ಮರಕಲ ಹಾಗು ಇತರರು ಪ್ರಕಾಶನಿಗೆ ರಾಡ ಹಾಗು ಕಲ್ಲುಗಳಿಂದ ಹೊಡೆದು ಕೊಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ದಿನಾಂಕ
27-07-2018 ರಂದು ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ
ಪೊಲೀಸ್ ಠಾಣೆ ಅಪರಾಧ
ಸಂ. 182/2018, ಕಲಂ. 457, 380 ಐಪಿಸಿ :-
ದಿನಾಂಕ
25-07-2018 ರಂದು
2300 ಗಂಟೆಯಿಂದ ದಿನಾಂಕ 26-07-2018 ರಂದು
0400 ಗಂಟೆಯ ಮದ್ಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಗೊಪು ತಂದೆ ವೇಣು ಅಡೆ ವಯ: 50
ವರ್ಷ, ಜಾತಿ: ಲಮಾಣಿ, ಸಾ: ಖಾನಾಪೂರ
ರವರು ಮಲಗಿದ ಕೊಣೆಗೆ ಕೊಂಡಿ ಹಾಕಿ ಪಕ್ಕದ ಕೊಣೆಯ ಬಾಗಿಲ ಕೀಲಿ ಮುರಿದು ಅಲಮಾರದಲ್ಲಿಟ್ಟಿದ ನಗದು
ಹಣ 79,000/- ಸಾವಿರ
ರೂ., 5 ತೊಲಿ
ಬಂಗಾರ ಅ.ಕಿ 1
ಲಕ್ಷ ರೂಪಾಯಿ ಮತ್ತು 20 ತೊಲಿ ಬೆಳ್ಳಿ ಅ.ಕಿ 6000/- ಸಾವಿರ
ರೂಪಾಯಿ ಹೀಗೆ ಒಟ್ಟು ಅ.ಕಿ 1,85,000/- ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-07-2018ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment