Police Bhavan Kalaburagi

Police Bhavan Kalaburagi

Tuesday, July 3, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು  :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 28-06-2018 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನನ್ನ ಮಗ ಸಮೀರ ಇತನು ನಮ್ಮ ಮನೆಯಿಂದ ಗಾಜಿಪೂರದಲ್ಲಿರುವ ಆತನ ಅಜ್ಜಿಯ ಮನೆಗೆ ಹೋಗುವ ಕುರಿತು ಮೋಟಾರ ಸೈಕಲ ನಂ ಕೆಎ-32-ಕ್ಯೂ-8167 ನೆದ್ದನ್ನು ಚಲಾಯಿಸಿಕೊಂಡು ಆನಂದ ಹೊಟೇಲ ಕ್ರಾಸ ಕಡೆಯಿಂದ ಗೋವಾ ಹೊಟೇಲ ಕ್ರಾಸ ಕಡೆಗೆ ಹೋಗುವಾಗ ಎನ.ವ್ಹಿ ಕಾಲೇಜ ಕಾಂಪ್ಲೇಕ್ಸನಲ್ಲಿ ಬರುವ ಭಾರತ ಗ್ಯಾಸ ಏಜೇನ್ಸಿ ಎದುರು ರೋಡ ಮೇಲೆ ಹಿಂದಿನಿಂದ ಒಬ್ಬ ಹೊಂಡಾ ಡಿಓ ಮೊಟಾರ ಸೈಕಲ ಸವಾರ ತನ್ನ ಮೋಟಾರ ಸೈಕಲ ಹಿಂದುಗಡೆ ಒಬ್ಬನನ್ನು ಕುಡಿಸಿಕೊಂಡು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸಮೀರ ಇತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಸಮೀರ ಇತನು ಕೆಳಗಡೆ ಬಿದ್ದಾಗ ಒಬ್ಬ ಹಿರೋ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕೆಳಗಡೆ ಬಿದ್ದಿದ್ದ ಸಮೀರ ಇತನ ಮೇಲೆ ಮೋಟಾರ ಸೈಕಲ ಹಾಯಿಸಿಕೊಂಡು ಹೋಗಿ ಅಪಘಾತ ಮಾಡಿ ಸಮೀರ ಇತನಿಗೆ ಭಾರಿಗಾಯಗೊಳಿಸಿ ಇಬ್ಬರೂ ತಮ್ಮ ಮೋಟಾರ ಸೈಕಲದೊಂದಿಗೆ ಓಡಿ ಹೋಗಿದ್ದು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ನನ್ನ ಮಗ ಸಮೀರ ಇತನ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಯಿಂದ ಹೈದ್ರಾಬಾದನ ಓವೆಸಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನನ್ನ ಮಗ ಸಮೀರ ಇತನು ರಸ್ತೆ ಅಪಘಾತದಲ್ಲಿ ಆದ ಭಾರಿ ಗಾಯದ ಉಪಚಾರ ಪಡೆಯುತ್ತಾ ಹೈದ್ರಾಬಾದ ಓವೆಸಿ ಆಸ್ಪತ್ರೆಯಲ್ಲಿ ದಿನಾಂಕ 01-07-2018 ರಂದು ಸಾಯಂಕಾಲ 7-45 ಗಂಟೆ ಸುಮಾರಿಗೆ ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಅಂತಾ  ಶ್ರೀ ಮಹಿಬೂಬ ತಂದೆ ಇಬ್ರಾಹಿಂಖಾನ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ದತ್ತು ತಂದೆ ಮಾಳಪ್ಪ ಬಳೂರ್ಗಿ ಸಾ||ಬಳೂರ್ಗಿ ಹಾ||||ಜಕಾಪೂರ ತಾ||ಅಕ್ಕಲಕೋಟ ರವರು ತಮ್ಮನಾದ ಕರೇಪ್ಪ ಹಾಗು ನಮ್ಮ ಓಣಿಯ ಮಾಳಪ್ಪ ತಂದೆ ಅಮೋಘಿಸಿದ್ದ ಅಗತನಳ್ಳಿ ರವರು  ದಿನಾಂಕ 01/07/2018 ರಂದು ನಮ್ಮ ತಮ್ಮ ಕರೇಪ್ಪ ಈತನು ನಮಗೆ ತಿಳಿಸಿದ್ದೆನೆಂದರೆ ನಾನು ಹಾಗು ಮಾಳಪ್ಪ ಅಗತನಳ್ಳಿ ಇಬ್ಬರು ಮಾಳಪ್ಪನ ಮೋಟಾರ್ ಸೈಕಲ್ ನಂ ಎಮ್ ಹೆಚ್ 13 ಸಿವ್ಹಿ 0504 ನೇದ್ದರ ಮೇಲೆ ಜೆವರ್ಗಿ ತಾಲೂಕಿನ ಹರವಾಳ ಗ್ರಾಮದ ಮಾಳಪ್ಪ ರವರ ಅಕ್ಕನ ಮನೆಗೆ ಹೋಗಿ ಬರುತ್ತೇವೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ ಹೀಗಿದ್ದು, ಇಂದು ದಿನಾಂಕ 01/07/2018 ರಂದು ಬೆಳಿಗ್ಗೆ ನಾನು ನಮ್ಮ ಮನೆಯಲಿದ್ದಾಗ ನಮಗೆ ಪರಿಚಯಸ್ಥರಾದ ಬರಮು ತಂದೆ ರೇವಣಸಿದ್ದ ಒಂಟೆ ರವರು ನನ್ನ ಮೋಬೈಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ  ಈಗ ಸ್ವಲ್ಪ ಸಮಯದ ಹಿಂದೆ ಅಂದರೆ ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಅಫಜಲಪೂರ ಸಮೀಪ ಮಾತೋಶ್ರೀ ಕಾಶಿಬಾಯಿ ವಿದ್ಯಾಮಂದಿರ ಪೂರ್ವ ಕಿರಿಯ ಪ್ರಾಥಮಿಕ ಶಾಲೆ ಹತ್ತಿರ ದುದನಿ ರೋಡಿನ ಮೇಲೀಂದ ನಿಮ್ಮ ತಮ್ಮ ಕರೇಪ್ಪ ತಂದೆ ಮಾಳಪ್ಪ ಬಳುರ್ಗಿ ಹಾಗು ಮಾಳಪ್ಪ ತಂದೆ ಅಮೋಘಿಸಿದ್ದ ಅಗತನಳ್ಳಿ ಇಬ್ಬರು ಮೋಟರ್ ಸೈಕಲ್ ನಂ ಎಮ್ ಹೆಚ್ 13 ಸಿವ್ಹಿ 0504 ನೇದ್ದರ ಮೇಲೆ ಅಫಜಲಪೂರದ ಕಡೆಗೆ ಹೊರಟಿದಾಗ ಅವರ ಮುಂದಿನಿಂದ INNOVA  ವಾಹನ ನಂ ಎಮ್ ಹೆಚ್ 45 ಎಲ್-1414 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆಸಿ ಅಪಘಾತ ಪಡಿಸಿರುತ್ತಾನೆ ನಾನು ಓಡಿ ಹೋಗುವಷ್ಟರಲ್ಲಿ ವಾಹನದ ಚಾಲಕನು ವಾಹನದಿಂದ ಇಳಿದು ಓಡಿ ಹೋಗಿರುತ್ತಾನೆ. .ಸದರಿ ಘಟನೆಯಲ್ಲಿ ಮಾಳಪ್ಪ ಅಗತನಳ್ಳಿ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ನಿಮ್ಮ ತಮ್ಮ ಕರೇಪ್ಪನಿಗೆ ತಲೆಗೆ, ಗದ್ದಕ್ಕೆ, ಎಡಭುಜಕ್ಕೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದರಿಂದ  ಚಿಕಿತ್ಸೆಗಾಗಿ 108 ವಾಹನದಲ್ಲಿ ಕಲಬುರಗಿಗೆ ಕಳುಹಿಸಿಕೊಡಲಾಗಿರುತ್ತದೆ ಅಂತ ತಿಳಿಸಿದನು ವಿಷಯ ಗೊತ್ತಾದ ಕೂಡಲೆ ನಾನು ನಮ್ಮ ಘಟನೆಯ ಸ್ಥಳಕ್ಕೆ ಬಂದು ನೋಡಿದ್ದು ಮಾಳಪ್ಪ ಅಗತನಳ್ಳಿ ಈತನ ಶವ ರೋಡಿನ ಮೇಲೆ ಬಿದ್ದಿದ್ದರಿಂದ ನಾವು ತಗೆದುಕೊಂಡು ಹೋಗಿದ್ದ ವಾಹನದಲ್ಲಿ ಹಾಕಿಕೊಂಡು ಬಂದು  ಅಫಜಲಪೂರ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಹಾಕಿಸಿರುತ್ತೇವೆ.ಸದರಿ ಘಟನೆಯಲ್ಲಿ ಗಾಯ ಹೊಂದಿದ ನಮ್ಮ ತಮ್ಮ ಕರೇಪ್ಪನಿಗೆ ಚಿಕಿತ್ಸೆಗಾಗಿ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ ದಿನಾಂಕ 01/07/2018 ರಂದು ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಅಫಜಲಪೂರ ದುದನಿ ರೋಡಿನ ಮೇಲೆ ಅಫಜಲಪೂರ ಹತ್ತಿರ ಮಾತೋಶ್ರೀ ಕಾಶಿಬಾಯಿ ವಿದ್ಯಾಮಂದಿರ ಪೂರ್ವ ಕಿರಿಯ ಪ್ರಾಥಮಿಕ ಶಾಲೆ ಮುಂದಿನ ರೋಡಿನ  ಮೇಲೆ  ತನ್ನ  INNOVA  ವಾಹನ  ನಂ ಎಮ್ ಹೆಚ್ 45 ಎಲ್-1414  ನೇದ್ದನ್ನು  ಅತಿವೇಗವಾಗಿ  ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಅಪಘಾತ ಪಡಿಸಿ ಓಡಿ ಹೋದ ವಾಹನದ ಚಾಲಕನ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶೀಮತಿ ಜಯಶ್ರೀ ಗಂಡ ಬಾಬುರಾವ ವಾಲಿ ಮು:ಸೊಂತ ಗ್ರಾಮ ತಾ:ಜಿ:ಕಲಬುರಗಿ ಇವರು ದಿನಾಂಕ:01-07-2018 ರಂದು ಮದ್ಯಾಹ್ನ 04-00 ಗಂಟೆಯ ಸೂಮಾರಿಗೆ ನನಗೆ ಮೈಯಲ್ಲಿ ಹುಸ್ಸಾರ ಇಲ್ಲದ ಕಾರಣ ನಾನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ತೋರಿಸಿಕೊಂಡು ಬರುವ ಕುರಿತು ಸೊಂತ ಗ್ರಾಮದ ಬಸವೇಶ್ವರ ವೃತ್ತದ ಹತ್ತೀರ ಇರುವ ತುಕಾರಾಮ ಪೋಲಾ ಇವರ ಪುಸ್ತಕ ಅಂಗಡಿಯ ಮುಂದೆ ಕಮಲಾಪೂರಕ್ಕೆ ಹೋಗುವ ಟೆಂಪುಗಾಗಿ ಕಾಯುತ್ತ ಕುಂತಿದ್ದು. ಅದೇ ವೇಳೆಗೆ ನಮ್ಮೂರ ಚಂದ್ರಕಾಂತ ತಂದೆ ಸಿದ್ರಾಮಪ್ಪ ಬಶೆಟ್ಟಿ ಈತನು ನಾನು ಕುಂತಲ್ಲಿಗೆ ಬಂದು ನೀನು ಪರಿಶಿಷ್ಠ ಜಾತಿಯ ಮಾದಿಗ ಹೆಣ್ಣಾದರು ಕೂಡಾ ನಿನು ನಮ್ಮ ಲಿಂಗಾಯತ ಜನಾಂಗದ ಸಮಾಜಕ್ಕೆ ಹೋಲುವಂತಿದ್ದಿ ನಿನು ನನಗೆ ಮನಸ್ಸು ಕೋಡು ಎಂದು ತನ್ನ ಕೈ ನನ್ನ ಭೂಜದ ಮೇಲೆ ಇಟ್ಟನು. ಅದಕ್ಕೆ ನಾನು ಚಂದ್ರಕಾಂತನಿಗೆ ನೀವು ಏನು ವಿಷಯ ಹೇಳುತಿದ್ದ್ದಿರಿ ಗೌಡರೆ ನನಗೆ ಅರ್ಥವಾಗುತ್ತಿಲ್ಲ ಅಂತಾ ಕೇಳಿದ್ದು. ಏ ಹುಚ್ಚಿ ಇಷ್ಟೆ ವಿಷಯ ಗೋತ್ತಾಗುತ್ತಿಲ್ಲ ನಿನಗ ನೀನು ಶ್ಯಾಣೆ ಇಲ್ಲಾ ನಿನಗೆ ನಾನು 20 ಎಕರೆ ಭೂಮಿ ಕೋಡುತ್ತೇನೆ. ನನ್ನ ಜೋತೆಗೆ ಬಾ ಅಂತಾ ಅಂದನು. ನಂತರ ನನಗೆ ದು:ಖ ಆಗಿ ನಾನು ಅವರಿಗೆ ನೀವು ಈ ರೀತಿ ನನ್ನೊಂದಿಗೆ ಮಾತನಾಡುವುದು ಸರಿಯಲ್ಲಾ ಅಂದಾಗ ಚಂದ್ರಕಾಂತನು ನನಗೆ ಏ ಸೂಳಿ ನಾನು ಹೇಳಿದ್ದನ್ನು ಕೇಳು ಇಷ್ಟೆ ಮಾತು ನಿನಗೆ ಗೊತ್ತಾಗಲ್ಲ ಈ ವಿಷಯವನ್ನು ನಿನ್ನ ಗಂಡ ಹಾಗೂ ನಿನ್ನೆ ಮೈದುನರಿಗೆ ಹೇಳಬೇಡ ಸುಮ್ಮನೆ ರಾತ್ರಿ ನನ್ನ ಮನೆಯ ಕಡೆಗೆ ಬಾ ಒಂದು ವೇಳೆ  ನಿನ್ನ ಗಂಡ ಮೈದುನರಿಗೆ ಹೇಳಿದರೆ ನಿನಗೆ ಕೊಲೆ ಮಾಡುತ್ತೇನೆ ಅಂತಾ ಜೀವ ಬೆದರಿಕೆ ಹಾಕಿದ್ದು. ಆ ವೇಳೆಯಲ್ಲಿ ಘಟನೆಯನ್ನು ನಮ್ಮೂರ ಸುಭಾಷ ತಂದೆ ಸಂಬಣ್ಣ ಇಟಿ, ಚಂದ್ರಕಾಂತ ತಂದೆ ಮಹಾರುದ್ರಪ್ಪ ಕುಂಬಾರ ಹಾಗೂ ಸೂರ್ಯಕಾಂತ ತಂದೆ ಕಾಳಪ್ಪ ವಾಲಿ ಇವರು ನಿಂತು ನೋಡಿದ್ದು ಇರುತ್ತದೆ. ನಂತರ ನನಗೆ ಮನಸ್ಸಿಗೆ ಬೇಜಾರ ಆಗಿದ್ದರಿಂದ ಕಲಬುರಗಿಗೆ ಹೋಗದೆ ಸೊಂತ ಗ್ರಾಮದ ಡಾ:ನರಸಿಂಹ ಇವರ ಖಾಸಗಿ ದವಾಖಾನೆಗೆ ತೊರಿಸಿಕೋಳ್ಳಲು ಹೋಗಿ ಆಸ್ಪತ್ರೆಯ ಒಳಗಡೆ ಕುಂತಾಗ ಸಾಯಂಕಾಲ 05.00 ಗಂಟೆಯ ಸೂಮಾರಿಗೆ ಚಂದ್ರಕಾಂತನ ಮಗನಾದ ರಜನಿಕಾಂತ ಬಶೆಟ್ಟಿ ಈತನು ದವಾಖಾನೆಯ ಮುಂದೆ ಬಂದು ನನಗೆ ಏ ರಂಡೀ ನಮ್ಮ ಅಪ್ಪನಿಗೆ ಬೈದಿದ್ದಿ ಹೋರಗೆ ಬಾ ಬೋಸಡಿ ಮಗಳೆ ನಿನಗೆ ಮೆಟ್ಟಿಲೆ ಹೋಡಿತಿನಿ ಮಾದಿಗ ಜಾತಿಯ ಸೂಳೆ ಮಗಳೆ ಅಂತಾ ಬೈಯುತ್ತಿದ್ದಾಗ ನಾನು ಹೋರಗಡೆ ಅವನಿಗೆ ಬುದ್ದಿ ಹೇಳಲು ಬಂದಾಗ ರಜನಿಕಾಂತ ಈತನು ತನ್ನ ಎಡಕಾಲಿನ ಚಪ್ಪಲಿ ತೆಗೆದು ಅದರಿಂದ ನನ್ನ ತಲೆಯ ಮೇಲೆ 2-3 ಸಾರಿ ರಪರಪನೆ ಹೋಡೆದನು. ನನಗೆ ಹೋಡೆಯುತ್ತಿದ್ದನ್ನು ನೋಡಿ ಡಾ:ನರಸಿಂಹ ಹಾಗೂ ಸುಮಿತ್ರ ಗಂಡ ಶಂಕರ ಪಟವಾದ ಇವರು ಬಂದು ಜಗಳ ಬಿಡಿಸಿ ಕಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

No comments: