Police Bhavan Kalaburagi

Police Bhavan Kalaburagi

Thursday, July 5, 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸೈಯದ ಮಹೇಬೂಬ ತಂದೆ ಸೈಯದ ಸೈನೋದ್ದಿನ್‌ ಸಾ:ಮನೆ.ನಂ.15ಎ ಎ.ಎಸ್‌‌.ಐ ಲೈನ್‌ ಪೊಲೀಸ್‌ ಹೇಡ್‌‌ ಕ್ವಾಟರ್ಸ್ ಕಲಬುರಗಿ ರವರು  ದಿನಾಂಕ:04/07/2018 ರಂದು ಮನೆಯಲ್ಲಿರುವಾಗ ಬೆಳಗ್ಗಿನ ಜಾವ 5.30 ಗಂಟೆಯ ಸುಮಾರಿಗೆ  ನನ್ನ ಕಾಕನ ಮಗಳಿನ ಮಗಳಾದ ಮಾಸುಮಾ ಇವಳು ತನ್ನ ಮೊಬೈಲ್‌ ದಿಂದ ದೂರವಾಣಿ ಕರೆಮಾಡಿ ತಿಳಿಸಿದ್ದೆನೆಂದರೆ, ಮಾಮಾ ಅಕ್ಬರ್‌‌ ಮಾವನ ಮನೆಗೆ ಬೆಂಕಿ ಹಚ್ಚಿದ್ದಾರೆ ಅಕ್ಬರ್‌ ಮಾಮಾ ಮತ್ತು ಮಾಮೀ ಶಹನಾಜ ಬೇಗಂ ಹಾಗೂ ಅವರ ಇಬ್ಬರೂ ಮಕ್ಕಳಾದ ಸೈಯದ ಯಾಸೀನ್‌ ಹಾಗೂ ಮಗಳಾದ ಸಾನಿಯಾಬೇಗಂ ಇವರೆಲ್ಲರೂ ಸುಟ್ಟಿದ ಗಾಯಗಳಿಂದ ತುಂಬಾ ಬಳಲುತ್ತಿದ್ದಾರೆ ಅಂತಾ ತಿಳಿಸಿದ ಮೇರೆಗೆ ನಾನು ಸರಿ ತಕ್ಷಣವೇ ಅಂಬುಲೇನ್ಸ್ ಗೆ ಕರೆಮಾಡು ನಾನು ಕೂಡಾ ಕರೆಮಾಡಿ ಹೇಳುತ್ತೇನೆ ಅಂತಾ ತಿಳಿಸಿದ್ದೆನು ನಂತರ ನಾನು ತಕ್ಷಣವೆ ಬಟ್ಟೆಯನ್ನು ಹಾಕಿಕೊಂಡು ಎಂ.ಎಸ್‌‌.ಕೆ.ಮೀಲ್‌ ಕಡೆಗೆ ಹೊರಟ್ಟಿದ್ದಾಗ ಮತ್ತೆ ಮಾಸುಮಾ ಇವಳು ಕರೆ ಮಾಡಿ ಮಾಮಾ ನಾವು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಮುಟ್ಟಿದ್ದೇವೆ ಈ ಕಡೆಗೆ ಬನ್ನಿ ಅಂತಾ ತಿಳಿಸಿದ ಮೇರೆಗೆ ನಾನು ಬೆಳಗಿನ ಜಾವ 6.30 ಸುಮಾರಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಧಾವಿಸಿ ಬಂದು ನೋಡಲಾಗಿ ಅಲ್ಲಿ ನನ್ನ ಕಾಕನ ಮಗನಾದ ಸೈಯದ ಅಕ್ಬರ ಮತ್ತು ಆತನ ಹೆಂಡತಿ ಶಹನಾಜ ಬೇಗಂ ಮಕ್ಕಳಾದ ಸೈಯದ ಯಾಸೀನ ಮತ್ತು ಮಗಳಾದ ಸಾನೀಯಾ ಬೇಗಂ ಇವರೆಲ್ಲರೂ ಸುಟ್ಟ ಗಾಯಗಳಿಂದ ಬಳಲುತ್ತಿದ್ದರು ಅವರಿಗೆ 3-4 ವೈದ್ಯಾಧಿಕಾರಿಗಳು ಸೇರಿ ಚಿಕಿತ್ಸೆಯನ್ನು ನೀಡುತ್ತಿದ್ದರು ನಾನು ಮಾನ್ಯ ವೈದ್ಯಾಧಿಕಾರಿಗೆ ಭೇಟಿ ಮಾಡಿದ್ದು ಅವರು ನನಗೆ ಅಡಮೀಟ್‌ ಕಾರ್ಡ ಮಾಡಿ ತರಲು ತಿಳಿಸಿದ್ದು ನಾನು ಅಡಮೀಟ್‌ ಕಾರ್ಡ ಮಾಡಿ ತಂದೆನು. ನಂತರ ನಾನು ಮತ್ತೆ ವೈದ್ಯಾಧಿಕಾರಿಯವರನ್ನು ನನ್ನ ತಮ್ಮನಾದ ಅಕ್ಬರ ಹಾಗೂ ಅವನ ಕುಟುಂಬಸ್ಥರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದ್ದು ಕರ್ತವ್ಯದಲ್ಲಿದ್ದ ವೈದ್ಯರು ನಾಲ್ಕು ಜನರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ 80 ರಿಂದ 90% ಸುಟ್ಟ ಗಾಯಗಳಾಗಿವೆ ನಮ್ಮ ಪ್ರಯತ್ನ ಮಾಡುತ್ತೇವೆ ಅಂತಾ ತಿಳಿಸಿದ ನಂತರ ನಾನು ಹೆಚ್ಚಿನ ಚಿಕಿತ್ಸೆಗಾಗಿ ಈ ಮೇಲೆ ತಿಳಿಸಿದ ನಾಲ್ಕು ಜನರನ್ನು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ನಾನು ನನ್ನ ತಮ್ಮನಾದ ಅಕ್ಬರ ಇತನಿಗೆ ನಡೆದ ಘಟನೆ ಬಗ್ಗೆ ವಿಚಾರಿಸಲಾಗಿ ನನ್ನ ತಮ್ಮನು ತಿಳಿಸಿದ್ದೆನೆಂದರೆ, ರಾತ್ರಿ 3.00 ಘಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ಕಳು ಮನೆಯಲ್ಲಿ ಮಲಗಿದ್ದಾಗ ಮನೆಯ ಮುಖ್ಯ ಬಾಗಿಲಿಗೆ ಮುಸ್ತಫಾ ತಂದೆ ಮಹ್ಮದ ಸಲೀಂ ಅಂತಾ ತಿಳಿಸಿದ ನಂತರ ಮುಸ್ತಫಾ ಯಾರು ಅಂತಾ ನಾನು ವಿಚಾರಿಸಿದಾಗ ತನ್ನ ತಂಗಿ ಹೀನಾ ಕೌಸರ ಇವಳ ಗಂಡ ಅಂತಾ ತಿಳಿಸಿದನು. ಯಾಕೆ ಬೆಂಕಿ ಹಚ್ಚಿದನು ಅಂತಾ ವಿಚಾರಿಸಿದಾಗ ಮುಸ್ತಫಾ ಇತನು ಹೀನಾ ಕೌಸರ ಇವಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರಿಂದ ನಾನು ಅವನಿಗೆ ಯಾವಾಗಲು ಬುದ್ದಿವಾದ ಹೇಳುತ್ತಾ ಬಂದಿದ್ದು ಮತ್ತು ಈ ರೀತಿ ಮುಂದೆ ಮಾಡಬೇಡ ಅಂತಾ ತಿಳುವಳಿಕೆ ನೀಡುತ್ತಾ ಬಂದಿದ್ದರಿಂದ ಮುಸ್ತಫಾ ಇತನು ಸಾಲೇ ಏ ಮರತಾಬಾ ದೇಕ ಲೇ ತು ಅಂತಾ ಹೇಳಿದನು ಕಾರಣ ನನ್ನ ತಮ್ಮನಾದ ಅಕ್ಬರ ಹಾಗೂ ಅವನ ಹೆಂಡತಿ ಯಾದ ಶಹನಾಜಬೇಗಂ ಮಗನಾದ ಸೈಯದ ಯಾಸೀನ ಮತ್ತು ಮಗಳಾದ ಸೈಯ್ಯದಾ ಸಾನಿಯಾ ಇವರೆಲ್ಲರೂ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಇವರೆಲ್ಲರನ್ನೂ ಕೊಲೆ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಮನೆಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಗಾಯ ಪಡಿಸಿಸ್ಸು  ದಿನಾಂಕ:04/07/2018 ರಂದು ಸಾಯಂಕಾಲ 5.45 ಪಿ.ಎಂಕ್ಕೆ ಬಸವೇಶ್ವರ ಆಸ್ಪತ್ರೆಯಿಂದ ಶ್ರೀಮತಿ ಶಹಜಾನ ಬೇಗಂ ಗಂಡ ಸೈಯದ ಅಕ್ಬರ ಇವಳು ಉಪಚಾರ ದಿಂದ ಗುಣಮುಖ ಹೊಂದದೆ ಮೃತ ಪಟ್ಟಿರಿತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಮುಧೋಳ ಠಾಣೆ : ದಿನಾಂಕ 04-07-2018 ರಂದು ಮುಧೋಳ ಠಾಣಾ ವ್ಯಾಪ್ತಿಯಲ್ಲಿ ) ಟ್ರ್ಯಾಕ್ಟರ ಇಂಜಿನ ನಂಬರ RGE2KGA2926 2) ಟ್ರ್ಯಾಕ್ಟರ ಇಂಜಿನ ನಂಬರ 43-1024/ sya02736  ªÀÄvÀÄÛ  3) ಟ್ರ್ಯಾಕ್ಟರ ನಂಬರ ಕೆಎ – 32 ಟಿಎ-6237 ನೇದ್ದರ  ಚಾಲಕ ಮತ್ತು ಮಾಲೀಕರು ಲೇಬರಗಳ ಸಹಾಯದಿಂದ ಮದರಿ ,ಜಿಲ್ಲಾಡಪಲ್ಲಿ ಮತ್ತು ಎಲೆ ರಾಜೋಳ ಗ್ರಾಮದ ಹಳ್ಳದಲ್ಲಿ ಅಕ್ರಮವಾಗಿ ಸರಕಾರಕ್ಕೆ  ರಾಜ್ಯ ಧನವನ್ನು ಬರಿಸದೇ ಮರಳನ್ನು ತುಂಬುತ್ತಿದ್ದಾಗ ಶ್ರೀ ಉಮಾಕಾಂತ ಕಂದಾಯ ನಿರೀಕ್ಷಕರು ಅಡಕಿ ಹೋಬಳಿ ತಾ||ಸೇಡಂ  ಮತ್ತು ಸಿಬ್ಬಂದಿಯವರ  ಸಹಾಯದಿಂದ ದಾಳಿ ಮಾಡಿ ಹಿಡಿದು ಠಾಣೆಗೆ ತಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ದಿನಾಂಕ 04-07-2018 ರಂದು ಮುಧೋಳ ಠಾಣಾ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರಗಳಲ್ಲಿ ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಐ. ಮುಧೋಳ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ 1) ಟ್ರ್ಯಾಕ್ಟರ ನಂಬರ  ಕೆಎ – 33 ಟಿಎ – 5015  2) ಟ್ರ್ಯಾಕ್ಟರ ನಂಬರ  ಕೆಎ – 33 ಟಿಎ – 3637 3) ಟ್ರ್ಯಾಕ್ಟರ ನಂಬರ  ಕೆಎ – 33 ಟಿಎ – 8121 4) ಟ್ರ್ಯಾಕ್ಟರ ಇಂಜಿನ ನಂಬರ S325 IG95877 5)  ಟ್ರ್ಯಾಕ್ಟರ ಇಂಜಿನ ನಂಬರ NGH2KBE0265 5 ಟ್ರ್ಯಾಕ್ಟರಗಳನ್ನು ಜಪ್ತಿಪಡಿಸಿಕೊಂಡು ಮುದೋಳ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

No comments: