ಕಳವು
ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ದತ್ತಪ್ಪಾ ತಂದೆ
ಶಿವಣ್ಣಾ ಕಣ್ಣಿ ಸಾ:ಚಿಂಚೋಳಿ (ಬಿ) ತಾ:ಆಳಂದ ಹಾ:ವ:ಕೈಲಾಸ ನಗರ ಈಶ್ವರ ಗುಡಿಯ ಹತ್ತಿರ ಕಲಬುರಗಿ
ರವರು ದಿನಾಂಕ:25/08/2018 ರಂದು ನಮ್ಮ ಅತ್ತೆಯವರಾದ
ಶ್ರೀಮತಿ ಲಕ್ಷ್ಮೀಬಾಯಿ ಹಾಗೂ ನಮ್ಮ ಮಗಳು ಅಂಕಿತಾ ಇವರು ನಮ್ಮ ಮನೆಗೆ 10.30 ಪಿ.ಎಂಕ್ಕೆ ಕೀಲಿ ಹಾಕಿಕೊಂಡು
ಪಕ್ಕದ ರಾಜೇಂದ್ರ ಬಡಗೇರ ಅವರ ಮನೆಯಲ್ಲಿ ಮಲಗಿಕೊಂಡು ಬೆಳಗ್ಗೆ ದಿನಾಂಕ:26/08/2018 ರಂದು 8.00
ಎ.ಎಂಕ್ಕೆ ಮರಳಿ ಮನೆಗೆ ಬಂದು ನೋಡಿದಾಗ ಮನೆಯ ಕೀಲಿ ಮುರಿದಿದ್ದನ್ನು ಕಂಡು ನನಗೆ ಪೋನ ಮಾಡಿ ಹೇಳಿದ್ದು
ನಾನು ನಮ್ಮ ಊರಿನಿಂದ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲ ಕೀಲಿ ಮುರಿದಿದ್ದು ಮನೆಯಲ್ಲಿನ ಟ್ರಂಕ್
ಕೀಲಿ ಕೊಂಡಿ ಮುರಿದು ಅದರಲ್ಲಿದ್ದ ಬಂಗಾರದ ಬೆಳ್ಳೀಯ ಆಭರಣಗಳು ಒಟ್ಟು
2,04,500/-ರೂ ಬೆಲೆ ಬಾಳುವ ಬಂಗಾರ ಬೆಳ್ಳಿ ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಕಾಶಿನಾಥ
ತಂದೆ ಮಾಪಣ್ಣಾ ಗವಾರೆ ಸಾ : ಬ್ಯಾಲಹಳ್ಳಿ (ಕೆ) ತಾ
: ಬಾಲ್ಕಿ ಜಿ : ಬೀದರ ರವರ ಮಗ ಪ್ರಕಾಶ ಈತನು ದಿನಾಂಕ 25/08/2018
ರಂದು ತಮ್ಮೋರಿನ ಬಾಲಾಜಿ ತಂದೆ ಗಂಗಾರಾಮ ಇತನ ಜೋತೆಯಲ್ಲಿ ಸಾಯಬಣ್ಣಾ ಇತನ ಹೇಸರಿನಲ್ಲಿದ್ದ ಟ್ರ್ಯಾಕ್ಟರ ಇಂಜಿನ ನಂ
ಕೆಎ-39-ಟಿ-5346 ಟ್ರ್ಯಾಲಿ ನಂ ಕೆಎ-39-ಟಿ-5347 ನೇದ್ದರಲ್ಲಿ ಓಳಕಲ್ಲು ತುಂಬಿಕೊಂಡು ಬರುವು
ಗೋಸ್ಕರ ತಮ್ಮ ಗ್ರಾಮದಿಂದ ಟ್ರ್ಯಾಕ್ಟರ ಚಲಾಯಿಸಿಕೊಂಡು
ಹೇಬ್ಬಾಳ ಸಿಮಾಂತರದ ಕಲ್ಲು ಬಂಡೆ ಸಿಗುವ ಹಾಳು ಬಿದ್ದ ಜಮೀನಿಗೆ ಬಂದು ಅಲ್ಲಿ ಅರ್ಧಾ ಟ್ರ್ಯಾಲಿ ಓಳಕಲ್ಲು ತುಂಬಿದ್ದ ಟ್ರ್ಯಾಕ್ಟರನ್ನು 3-00 ಪಿ,ಎಂ ದ ಸುಮಾರಿಗೆ ಟ್ರ್ಯಾಕ್ಟರನ್ನು ಚಾಲು ಮಾಡಿ ಹೋಡ್ಡು ಏರಿಸುವಾಗ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ಕಲ್ಲು ಹೆಚ್ಚಾಗಿದ್ದ ಪ್ರಯುಕ್ತ
ಒಮ್ಮಲ್ಲೇ ಟ್ರ್ಯಾಕ್ಟರ ಇಂಜಿನ ಮುಂದಿನ
ಭಾಗ ಟಾಯರೆ ಸಮೇತ ಮೇಲೆದ್ದು ಹಿಂದಿನ ಟ್ರ್ಯಾಲಿಗೆ ಹೋಗಿ ಹತ್ತಿದ್ದರಿಂದ ಮೃತನು ಇಂಜೀನ ಮತ್ತು ಟ್ರ್ಯಾಲಿ ಮದ್ಯ ಸಿಕ್ಕಿಕಾಕೊಂಡು ಟ್ರ್ಯಾಕ್ಟರ ಸ್ಠೇರಿಂಗ
ಮೃತನ ಎದೆ ಹಾಗೂ ಕುತ್ತಿಗೆ ಮೇಲೆ ಜೋರಾಗಿ ಹತ್ತಿಕೊಂಡಿದ್ದರಿಂದ ಉಸಿರುಗಟ್ಟಿ
ಗುಪ್ತಗಾಯವಾಗಿ ಅಲ್ಲೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ
ಶಮಶುನ್ನಿಸಾಬೇಗಂ ಗಂಡ ಅಬ್ದುಲ್ ಖಾದರ ಸಾ:ಮದೀನಾ ಕಾಲೋನಿ ಕಲಬುರಗಿ ರವರು ದಿನಾಂಕ:21/05/2018 ರಂದು ನಾನು ನನ್ನ ಗಂಡ ಅಬ್ದುಲ್ ಖಾದರ ನನ್ನ ಸೊಸೆ ಸಣ್ಣ ಸೊಸೆ ಸೈಯದಾ ಅಹ್ಮದಿ
ಹುಸನಾ ಪೀರಾನಿ ಕೂಡಿಕೊಂಡು ನಮ್ಮ ಮನೆಯಲ್ಲಿ ಇದ್ದು ಅಂದು ಮಧ್ಯಾನ 2.30 ಗಂಟೆಗೆ ನನ್ನ ಸೊಸೆಯಾದ ಸೈಯದಾ ಅಹ್ಮದಿ ಹುಸನಾ ಪೀರಾನಿ ಇವಳ ತಂದೆಯಾದ ಸೈಯದ
ಖಮರುದ್ದಿನ ಖಾದ್ರಿ, ಅವಳ ಚಿಕ್ಕಪ್ಪ ಸೈಯದ ಜಹೀರ ಖಾದ್ರಿ ಅವಳ
ತಾಯಿಯಾದ ಸೈಯದಾ ಸಭೀಯಾಬೇಗಂ ಅವಳ ಚಿಕ್ಕಪ್ಪ ಸೈಯದ ನಜೀರ ಖಾದ್ರಿ ಮತ್ತು ಅವರ ಸಂಬಂಧಿಕರಾದ ಜೀಯಾ,
ಸಾಲೇಹಾ ಹಾಗೂ ಇನ್ನೂ ಕೆಲವು ಜನರು ಕೂಡಿಕೊಂಡು ಟಾಟಾ ಸುಮೊ ಮತ್ತು ಆಟೋ ತೆಗೆದುಕೊಂಡು
ನಮ್ಮ ಮನೆಗೆ ಬಂದಿದ್ದು ಆಗ ನನ್ನ ಗಂಡ ಬೀಗರು ಬಂದಿದ್ದಾರೆ ಅಂತ ತಿಳಿದು ಅವರಿಗೆ ಮನೆಯಲ್ಲಿ
ಕೂಡಲು ಹೇಳಿದ್ದು ಸದರಿಯವರು ಅದನ್ನು ಲೆಕ್ಕಿಸದೆ ನನ್ನ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ
ನನ್ನ ಮಗಳಿಗೆ ಮದುವೆಯಲ್ಲಿ ಹಾಕಿದ ಬಂಗಾರ ನಮಗೆ ಕೊಡಿರಿ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ
ಅವರಲ್ಲಿ ಜಹೀರ ಇತನು ತನ್ನ ಹತ್ತಿರ ಇದ್ದ ಮಾರಕಾಸ್ತ್ರವನ್ನು ನನ್ನ ಗಂಡನಿಗೆ ತೋರಿಸಿ ನಮ್ಮ
ಬಂಗಾರ ನಮಗೆ ಕೊಡಿ ಅಂತಾ ಬೆದರಿಕೆ ಹಾಕಿದ್ದು ಮತ್ತು ನನ್ನ ಗಂಡನ ಎದೆಯ ಮೇಲಿನ ಅಂಗಿ ಹಿಡಿದು
ನನ್ನ ಗಂಡನಿಗೆ ಎಳೆದಾಡಿದ್ದು ಆಗ ಸೈಯದ ಖಮರುದ್ದಿನ ಖದ್ರಿ ಇತನು ಕೈಯಿಂದ ನನ್ನ ಗಂಡನ ಕಪಾಳ
ಮೇಲೆ ಹೊಡೆದು ನನ್ನ ಗಂಡನಿಗೆ ನೇಲಕ್ಕೆ ಕೆಡವಿದನು. ಆಗ ನನ್ನ ಸೊಸೆಯ ಸಂಬಂಧಿಕರೆಲ್ಲರೂ
ಕೂಡಿಕೊಂಡು ಬಂದು ಅವರಲ್ಲಿ ಸೈಯದ ಖಮರುದ್ದಿನ ಖಾದ್ರಿ ಇತನು ನನ್ನ ಕುತ್ತಿಗೆ ಹಿಡಿದು ಬುಡ್ಡಿ
ರಾಂಡ ತೇರೆಕೊ ತೆರೆ ಮರದಕೊ ತೆರೆ ಬಚ್ಚೊಕೊ ಚೋಡತಾನಹಿ ಸಬಕೊ ಖತಮ ಕರಕೇಹಿ ಚೋಡತಾ ಅಂತಾ
ಬೈಯುತ್ತಾ ದಬ್ಬಿಕೊಟ್ಟಿದ್ದು ಆಗ ನಾನು ನೆಲದ ಮೇಲೆ ಬಿದ್ದಾಗ ನನ್ನ ಬಲ ಹಲ್ಲು ಜಖಮ ಆಗಿರುತ್ತದೆ.
ಸದರಿಯವರು ನನಗೆ ನನ್ನ ಗಂಡನಿಗೆ ಹೊಡೆಬಡೆ ಮಾಡುತ್ತಿದ್ದರಿಂದ ನಾನು ಮನೆಯ ಹೊರಗೆ ಬಂದು
ಚಿರಾಡಿದ್ದು ಆಗ ನಮ್ಮ ಬಡಾವಣೆ ಜನರು ನಮ್ಮ ಮನೆಯ ಹತ್ತಿರ ಬಂದಾಗ ನನ್ನ ಸೊಸೆಯ ಸಂಬಂಧಿಕರು ನಮಗೆ
ಹೊಡೆಯುವದನ್ನು ಬಿಟ್ಟು ಮನೆಯಲ್ಲಿದ್ದ ನಮ್ಮ ಸೊಸೆಯನ್ನು ಕರೆದುಕೊಂಡು ಹೋಗಿದ್ದು ಇರುತ್ತದೆ.
ನನ್ನ ಸೊಸೆ ಅವರ ಸಂಗಡ ಹೋಗುವಾಗ ಮನೆಯಲ್ಲಿದ್ದ ನಗದು ಹಣ 30000/-ರೂ
ಮತ್ತು 10 ತೊಲೆ ಬಂಗಾರದ ಆಭರಣಗಳು ತೆಗೆದುಕೊಂಡು ಹೋಗಿದ್ದು
ಇರುತ್ತದೆ. ನನ್ನ ಮಗ ಅಬ್ದುಲ್ ಗಫಾರ ಇತನಿಗೆ ರಾಯಚೂರ ಜಿಲ್ಲೆಯ ಮಾನ್ವಿ ಪಟ್ಟಣದ ಸೈಯದ
ಖಮರುದ್ದಿನ ಖಾದ್ರಿ ಇವಳ ಮಗಳಾದ ಸೈಯದಾ ಅಹ್ಮದಿ ಹುಸನಾ ಪೀರಾನಿ ಇವಳೊಂದಿಗೆ 2017 ನೇ ಸಾಲಿನ ನವ್ಹಂಬರ ತಿಂಗಳಿನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಮಾಡಿದ್ದು ಮದುವೆ
ನಂತರ ಸೊಸೆ ಮಗಾ ಸುಮಾರು ಸಲ ತನ್ನ ತವರು ಮನೆಗೆ ಹೋಗಿ ಬರುವದು ಮಾಡುತ್ತಿದ್ದರು ಒಟ್ಟಾರೆ ಮಗ
ಮತ್ತು ಸೊಸೆ ವೈವಾಹಿಕ ಜೀವನವು ತುಂಬಾ ಸಂತೋಷಕರವಾಗಿತ್ತು ಆದರೂ ಕೂಡಾ ಸದರಿಯವರು ನಮ್ಮ ಮನೆಗೆ
ಬಂದು ನಮ್ಮ ಸಂಗಡ ಜಗಳ ಮಾಡಿ ಹೊಡೆಬಡೆ ಮಾಡಿ ನಮಗೆ ತೊಂದರೆ ಕೊಟ್ಟವರ ವಿರುದ್ದ ಕಾನೂನು ಕ್ರಮ
ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಸ್ವಾಭಾವಿಕ
ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಕುಸುಮಾವತಿ
ಗಂಡ ಚಂದ್ರಕಾಂತ ಬಿರಾದಾರ ಸಾ||ಭೋಸಗಾ ತಾ||ಅಫಜಲಪೂರ ರವರ ಗಂಡನಾದ ಚಂದ್ರಕಾಂತ
ಇವರಿಗೆನಾವು ಇಬ್ಬರು ಹೆಂಡತಿಯರಿದ್ದು 1) ಮಹಾದೇವಿ 2) ನಾನು ಇರುತ್ತೇನೆ ಮಹಾದೇವಿ ರವರಿಗೆ ಮಕ್ಕಳಾಗದ ಕಾರಣ ನನಗೆ ನಾಲ್ಕು ವರ್ಷದ ಹಿಂದೆ ಮದುವೆ
ಮಾಡಿದ್ದು ಈಗ ನಮಗೆ ಎರಡು ವರ್ಷದ ಲಕ್ಷ್ಮಿಕಾಂತ ಅಂತ ಮಗ ಇರುತ್ತಾನೆ ನನ್ನ ಗಂಡನು ದಿನಾಲು ಮದ್ಯಪಾನ
ಸೇವನೆ ಮಾಡುತಿದ್ದನು ನಾನು ಹಾಗು ನಮ್ಮ ಅಕ್ಕಳಾದ ಮಹಾದೇವಿ ಇಬ್ಬರು ನನ್ನ ಗಂಡನಿಗೆ ಈ ರೀತಿ ದಿನಾಲು
ಕುಡಿದರೆ ಸಂಸಾರ ಹಾಳಾಗುತ್ತೆ ಕುಡಿಯ ಬೇಡಿ ಅಂತ ಹೇಳಿದರು ಕೇಳದೆ ಹಾಗೇಯೆ ಮಾಡುತಿದ್ದನು.ನಮ್ಮ ಅಕ್ಕಳಾದ ಮಹಾದೇವಿ ಇವಳು ಈಗ ಕೆಲವು ದಿನಗಳಿಂದ ತನ್ನ ತಂದೆಯವರಿಗೆ ಮಾತನಾಡಿಸಲು ತನ್ನ
ತವರು ಮನೆಗೆ ಹೋಗಿರುತ್ತಾಳೆ. ನನ್ನ ತವರು ಮನೆ ಕೋಗನೂರ ಗ್ರಾಮ ಇದ್ದು ಈಗ
ಕೆಲವು ದಿನಗಳಿಂದ ನಮ್ಮ ತಾಯಿ ನಮ್ಮ ಗ್ರಾಮದಲ್ಲಿಯೇ ಕೂಲಿಕೆಲಸ ಮಾಡಿಕೊಂಡು ಬೇರೆ ಮನೆ ಮಾಡಿ ವಾಸವಾಗಿರುತ್ತಾರೆ
ಈಗ ನಾಲ್ಕು ದಿನಗಳ ಹಿಂದೆ ನಮ್ಮ ತಾಯಿ ಚಂಪಾವತಿ ನಮ್ಮ ಮನೆಗೆ ಬಂದಿದ್ದು ನಾನು ನಮ್ಮ ತಾಯಿ ಇಬ್ಬರು ನನ್ನ ಗಂಡನಿಗೆ
ದಿನಾಂಕ 25/08/2018 ರಂದು 10 00 ಎಎಮ್ ಸುಮಾರಿಗೆ
ನಮ್ಮ ಮನೆಯಲ್ಲಿ ನನ್ನ ಗಂಡನಿಗೆ ಈ ರೀತಿ ಸರಾಯಿ ಕುಡಿಯುವದು ಒಳ್ಳೆಯದಲ್ಲ ಸಂಸಾರ ಕೆಡುತ್ತೆ ಅಂತ
ಬುದ್ದಿ ಮಾತು ಹೇಳಿದಾಗ ನನ್ನ ಗಂಡ ನನಗೆ ಜೀವನ ಸಾಕಾಗಿದೆ ನಾನು ಸರಾಯಿ ಕುಡಿದು ಸಾಯುತ್ತೇನೆ ನೀವು
ನನಗೆ ಏನು ಹೇಳಬೇಡಿ ಅಂತ ಅಂದು ಅಲ್ಲಿಂದ ಹೋದನು. ನಂತರ ರಾತ್ರಿಯಾದರು ನನ್ನ ಗಂಡ ಮನೆಗೆ ಬಾರದ
ಕಾರಣ ನಾನು ನನ್ನ ತಾಯಿಯೊಂದಿಗೆ ನಮ್ಮ ಭೋಸಗಾ ಗ್ರಾಮದ ನಮ್ಮ ತಾಯಿ ಮನೆಗೆ ಹೋಗಿರುತ್ತೇನೆ ನಂತರ ರಾತ್ರಿ
9.30 ಪಿಎಮ್ ಸುಮಾರಿಗೆ ನಮ್ಮ ಅಣ್ಣ ತಮ್ಮಕ್ಕಿಯ ನಮ್ಮ ಮನೆಯ ಬಾಜು ಮನೆಯವರಾದ ದತ್ತು
ತಂದೆ ಸಾಯಿಬಣ್ಣ ಬಿರಾದಾರ ಈತನು ಓಡಿ ಬಂದು ನಮಗೆ ತಿಳಿಸಿದ್ದೆನೆಂದರೆ ನಾನು 8.30 ಪಿಎಮ್ ಸುಮಾರಿಗೆ ಮನೆಯ ಹತ್ತಿರ ಇದ್ದಾಗ ಚಂದ್ರಕಾಂತ ಈತನು ನಾನು ನೇಣು ಹಾಕಿಕೊಂಡು ಸಾಯುತ್ತೇನೆ
ಅಂತ ಅನ್ನುತ್ತಾ ನಿಮ್ಮ ಮನೆಯಲ್ಲಿ ಬಾಗಿಲು ಮುಚ್ಚಿಕೊಂಡಿರುತ್ತಾನೆ ನಂತರ ನಾನು ಬಾಗಿಲು ಬಡಿದು ಕೂಗಿದರು
ಬಾಗಿಲು ತರೆದಿರುವುದಿಲ್ಲ ಅಂತ ತಿಳಿಸಿದ ಬಳಿಕ ನಾನು ನಮ್ಮ ತಾಯಿ ಹಾಗು ಶಂಕರ ತಂದೆ ಬಾಪಣ್ಣ ಬಿರಾದಾರ
ಎಲ್ಲರು ಹೋಗಿ ನಮ್ಮ ಮನೆಯ ಬಾಗಿಲು ಮುರಿದು ನೋಡಲಾಗಿ ನನ್ನ ಗಂಡನು ಹಗ್ಗದಿಂದ ಮನೆಯ ಜಂತಿಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ನನ್ನ
ಗಂಡನಾದ ಚಂದ್ರಕಾಂತ ತಂದೆ ಗುರುದೇವ ಬಿರಾದಾರ ವ||40 ವರ್ಷ ಇವರು ಸರಾಯಿ ಕುಡಿತಕ್ಕೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆ
ಹೊಂದಿ ದಿನಾಂಕ 25/08/2018 ರಂದು 8.30 ಪಿಎಮ್
ದಿಂದ 9.00 ಪಿಎಮ್ ಮದ್ಯದ ಅವದಿಯಲ್ಲಿ ನಮ್ಮ ಮನೆಯಲ್ಲಿ ನೇಣು ಹಾಕಿಕೊಂಡು
ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment