¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-10-2018
OgÁzÀ(©)
¥Éưøï oÁuÉ C¥ÀgÁzsÀ ¸ÀA. 134/2018, PÀ®A. 302, 201 L¦¹ :-
ಫಿರ್ಯಾದಿ ಮಾಲನಬಾಯಿ ಗಂಡ
ವಿಠಲ್ ಸಿಂಧೆ ಸಾ: ಎಕಂಬಾ ರವರು ತನ್ನ ಸುನೀತಾ ಇವಳಿಗೆ ಸುಮಾರು 14 ವರ್ಷದ ಹಿಂದೆ ಭಾಲ್ಕಿ
ತಾಲೂಕಿನ ಬಿರಿ(ಬಿ) ಗ್ರಾಮದ ಸುಧಾಕರ ತಂದೆ ನಾಮದೇವ ಸೂರ್ಯವಂಶಿ ಇತನೊಂದಿಗೆ ವಿವಾಹ
ಮಾಡಿಕೊಟ್ಟಿದ್ದು, ಅವರಿಗೆ ಇಬ್ಬರೂ ಗಂಡು ಮಕ್ಕಳಿದ್ದು, ಪ್ರತಿ ವರ್ಷ ಸುಗ್ಗಿಕಾಲಕ್ಕೆ ಸುನೀತಾ
ಹಾಗೂ ಅವಳ ಗಂಡ ಸುಧಾಕರ ಇಬ್ಬರೂ ಎಕಂಬಾ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಬಂದು ಫಿರ್ಯಾದಿಯವರ ಮನೆಯಲ್ಲಿ
ಉಳಿದುಕೊಂಡು ಸುಗ್ಗಿಕಾಲ ಮುಗಿದ ನಂತರ ತಮ್ಮ ಗ್ರಾಮಕ್ಕೆ ಹೋಗುತ್ತಿದ್ದರು, ಅದರಂತೆ ಈ ವರ್ಷ ಕೂಡ
ಸುಮಾರು 4 ತಿಂಗಳಿನಿಂದ ಸುನೀತಾ ಇವಳು
ತನ್ನ ಮಕ್ಕಳೊಂದಿಗೆ ಎಕಂಬಾ ಗ್ರಾಮಕ್ಕೆ ಬಂದು ಉಳಿದುಕೊಂಡಿದ್ದು ಈಗ ಸುಮಾರು 1-1/2 ತಿಂಗಳ ಹಿಂದೆ ಅಳಿಯ
ಸುಧಾಕರ ಇತನು ಎಕಂಬಾ ಗ್ರಾಮಕ್ಕೆ ಬಂದು ಸೊಯಾಬಿನ್ ಬೆಳೆಯ ಸುಗ್ಗಿಯ ಕೂಲಿ ಕೆಲಸ ಮಾಡಿಕೊಂಡಿದ್ದು,
ಈಗ ಸುಮಾರು 3 ದಿವಸದ ಹಿಂದ ಸುಧಾಕರ ಇತನು
ತನ್ನ ಹೆಂಡತಿ ಸುನೀತಾ ಇವಳ ಶೀಲದ ಮೇಲೆ ಸಂಶಯ ಮಾಡಿ ಅವಳೊಂದಿಗೆ ನೀನು ನನಗೆ ಬಿಟ್ಟು 4 ತಿಂಗಳ ಹಿಂದೆ ಎಕಂಬಾ
ಗ್ರಾಮಕ್ಕೆ ಬಂದು ಯಾರೊಂದಿಗೆ ಸಂಬಂಧ ಇಟ್ಟುಕೊಂಡಿರುತ್ತಿ ಎಂದು ಜಗಳ ಮಾಡಿ ತನ್ನ ಮನಸ್ಸಿನ ಮೇಲೆ
ಪರಿಣಾಮ ಮಾಡಿಕೊಂಡು ವಿಷ ಸೇವನೆ ಮಾಡಿದ್ದು ಅವನಿಗೆ ಚಿಕಿತ್ಸೆ ಕುರಿತು ಆಸ್ಪತ್ರೆಗೆ
ಸೇರಿಸಿದ್ದು, ಸುಧಾಕರ ಇತನು ಚಿಕಿತ್ಸೆ ಪಡೆದುಕೊಂಡು ಗುಣಮುಖನಾಗಿ ದಿನಾಂಕ 22-10-2018 ರಂದು ಮನೆಗೆ
ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 23-10-2018 ರಂದು ಸುನೀತಾ ಹಾಗೂ ಅವಳ ಗಂಡ ಸುಧಾಕರ ಇಬ್ಬರೂ
ಒಲೆಗೆ ಹಚ್ಚುವ ಕಟ್ಟಿಗೆ ತರುತ್ತೇವೆಂದು ಹೇಳಿ ಮನೆಯಿಂದ ಹೋಗಿ 2000 ಗಂಟೆಯಾದರು ಸುಧಾಕರ ಹಾಗೂ ಸುನೀತಾ
ಇಬ್ಬರೂ ಮನೆಗೆ ಬಂದಿರುವುದಿಲ್ಲ, ಆಗ ಫಿರ್ಯಾದಿಯು ತಮ್ಮ ಮನೆಯ ಹತ್ತಿರ ಇರುವ ಅಖೀಲ ತಂದೆ
ಶಿವಾಜಿ ಸಿಂಧೆ ಹಾಗೂ ಅವಿನಾಶ ತಂದೆ ಪಂಡರಿ ಸಿಂಧೆ ರವರಿಗೆ ನಮ್ಮ ಅಳಿಯ ಸುಧಾಕರ ಇತನ ಮೊಬೈಲಗೆ
ಕರೆ ಮಾಡಲು ಹೇಳಿದಾಗ ಅವರು ಕಾಲ್ ಮಾಡಿ ಮಾತನಾಡುತ್ತಿದ್ದಾಗ ಸುಧಾಕರ ಇತನು ಕರೆಯಲ್ಲಿ ನಾನು
ಸುನೀತಾ ಇವಳಿಗೆ ಅವಳ ಸೀರೆಯಿಂದ ಕುತ್ತಿಗೆಗೆ ಸುತ್ತಿ ಎಳೇದು ಕೊಲೆ ಮಾಡಿ ಎಕಂಬಾ ಗ್ರಾಮದ
ಮಹಾದೇವ ಮಂದಿರ ಹತ್ತಿರ ಸೀತಾಫಲ್ ಗಿಡದ ಜಾಳಿಯಲ್ಲಿರುವ ಬೇವಿನ ಗಿಡಕ್ಕೆ ಆಕೆಯ ಸಿರೆಯಿಂದ ಎಳೆದು
ಕಟ್ಟಿರುತ್ತೇನೆ ಹೋಗಿ ನೋಡಿರಿ ಎಂದು ತಿಳಿಸಿರುತ್ತಾನೆ, ಆಗ ಫಿರ್ಯಾದಿಯು ತನ್ನ ಗಂಡ ವಿಠಲ್
ಸಿಂಧೆ, ಸೋಪಾನ ತಂದೆ ಧೋಂಡಿಬಾ
ಸಿಂಧೆ, ನಾಗನಾಥ ತಂದೆ ಮಾಧುವರಾವ ಮತ್ತು
ದಿಲೀಪ ತಂದೆ ರಾಮರಾವ ಸಿಂಧೆ ಎಲ್ಲರೂ ಕೂಡಿ ಹುಡುಕಾಡುತ್ತಾ ಹೊದಾಗ ಎಕಂಬಾ ಗ್ರಾಮದ ಧನಾಜಿ ತಂದೆ
ಕಿಶನರಾವ ಬಿರಾದಾರ ರವರ ಹೊಲದ ಕಟ್ಟೆಗೆ ಹತ್ತಿ ಇರುವ ಮಹಾದೇವ ಮಂದಿರ ಹತ್ತಿರ ಗಿಡಿದ ಜಾಳಿಯ
ಕೆಳಗೆ ಸುನೀತಾ ಇವಳ ಮೃತ ದೇಹ ಅಂಗಾತವಾಗಿ ಬಿದ್ದಿದ್ದು ಅವಳ ಕುತ್ತಿಗೆಗೆ ಅವಳ ಸೀರೆಯಿಂದ
ಬೀಗಿದು ಎಳೆದು ಕೊಲೆ ಮಾಡಿದ್ದು ಸುನೀತಾ ಇವಳ ಬಲಭಕಾಳಿಯಲ್ಲಿ ಗುಪ್ತಗಾಯವಾಗಿದ್ದು ಇರುತ್ತದೆ, ಸದರಿ
ಸುಧಾಕರ ಇತನು ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಅವಳ ಸೀರೆಯಿಂದ ಅವಳ ಕುತ್ತಿಗೆಗೆ ಸುತ್ತಿ
ಕಟ್ಟಿ ನೇಣು ಹಾಕಿಕೊಂಡಂತೆ ಬೇವಿನ ಗಿಡಕ್ಕೆ ಸೀರೆಯಿಂದ ಎಳೇದುಕಟ್ಟಿ ಸಾಕ್ಷಿ ನಾಶ ಪಡಿಸಲು
ಪ್ರಯತ್ನಿಸಿ ಓಡಿ ಹೋಗಿರುತ್ತಾನೆ, ಫಿರ್ಯಾದಿಯವರ ಅಳಿಯ ಸುಧಾಕರ ಇತನು ಸುನೀತಾ ಇವಳ ಶೀಲದ ಮೇಲೆ
ಸಂಶಯ ಮಾಡಿ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ
ಸಾರಾಂಶದ ಮೇರೆಗೆ ದಿನಾಂಕ 24-10-2018
ರಂದು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ
ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 125/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ
:-
ದಿನಾಂಕ 23-10-2018 ರಂದು ಫಿರ್ಯಾದಿ ಸುನೀಲ
ತಂದೆ ದೇವರಾ ಇಂಗಳೆ ವಯ: 30 ವರ್ಷ,
ಜಾತಿ: ಎಸ್.ಸಿ
ಮಹಾರ, ಸಾ: ನಾಗಪೂರ (ಎಮ್.ಹೆಚ್), ಸದ್ಯ: ಏರಫೊರ್ಸ
ಎಮ್.ಇ.ಎಸ್, ಬೀದರ ರವರು ಮತ್ತು ಬೀದರ ಎರಫೊರ್ಸದಲ್ಲಿ ಕೆಲಸ ಮಾಡುವ ಶ್ರೀಗಾಂವೆ ಅನೀಲ ತಂದೆ
ವಸಂತ, ವಯ 40 ವರ್ಷ, ಸಾ: ಶ್ರೀಗಾಂವ, ತಾ: ಚಿಕ್ಕೋಡಿ, ಜಿ: ಬೆಳಗಾವಿ, ಸದ್ಯ: ಎರಪೊರ್ಸ ಬೀದರ
ಇಬ್ಬರು ಕೂಡಿ ಏರಪೊರ್ಸದಿಂದ ಬೀದರ ನಗರದ ಕಾಮತ ಹೊಟೆಲಗೆ ತಿಂಡಿ ತಿನ್ನಲು ಬಂದು, ಹೊಟೆಲ ಮುಂದೆ
ವಾಹನ ಪಾರ್ಕಿಂಗ್ ಮಾಡಿ, ಕಾಮತ ಹೊಟೆಲ ಒಳಗಡೆ ರೋಡಿನ ಅಂಚಿನಲ್ಲಿ ಹೋಗುತ್ತಿದ್ದಾಗ, ಮಡಿವಾಳ
ವೃತ್ತದ ಕಡೆಯಿಂದ ಬಸ ನಿಲ್ದಾಣದ ಕಡೆಗೆ ಒಂದು ಆಟೋ ನಂ. ಕೆಎ-38/ಎ-0511 ನೇದ್ದರ ಚಾಲಕನಾದ
ಆರೋಪಿಯು ತನ್ನ ಆಟೋವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಶ್ರೀಗಾಂವೆ
ಅನೀಲ ಈತನಿಗೆ ಡಿಕ್ಕಿ ಮಾಡಿ ತನ್ನ ಆಟೋ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ
ಡಿಕ್ಕಿಯ ಪರಿಣಾಮ ಶ್ರೀಗಾಂವೆ ಅನೀಲ ಈತನ ತಲೆಗೆ ಭಾರಿ ಗುಪ್ತಗಾಯವಾಗಿ ಬಲ ಕಿವಿಯಿಂದ ಮತ್ತು
ಮೂಗಿನಿಂದ ರಕ್ತ ಬಂದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಆಗ ಫಿರ್ಯಾದಿ ಮತ್ತು ಅಲ್ಲಿಂದಲೆ
ಹೋಗುತ್ತಿದ್ದ ಕೆ. ಈಶ್ವರ ತಂದೆ ಧನರಾಜ ಸಾ: ಏರಫೊರ್ಸ ಬೀದರ ಇಬ್ಬರು ಕೂಡಿ ಚಿಕಿತ್ಸೆ ಕುರಿತು
ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು
ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಕಮಲನಗರ
ಪೊಲೀಸ್ ಠಾಣೆ ಅಪರಾಧ ಸಂ. 135/2018, ಕಲಂ. 295 ಐಪಿಸಿ :-
ದಿನಾಂಕ 22-10-2018 ರಂದು
2200 ಗಂಟೆಯಿಂದ ದಿನಾಂಕ 23-10-2018 ರಂದು 0730 ಗಂಟೆಯ ಅವಧಿಯಲ್ಲಿ ಅಣ್ಣಾಭಾವು ಸಾಟೆ ರವರ ಭಾವಚಿತ್ರಕ್ಕೆ ಸಂಡಾಸ
ಹಚ್ಚಿ ಅವಮಾನ ಮಾಡಿರುತ್ತಾರೆಂದು ಫಿರ್ಯಾದಿ ಶಷೆರಾವ ತಂದೆ ಹುಲ್ಲಾಜಿ ಸೂರ್ಯವಂಶಿ ವಯ: 49 ವರ್ಷ,
ಜಾತಿ: ಎಸ್.ಸಿ ಮಾದಿಗ, ಸಾ: ಡೋಣಗಾಂವ (ಎಮ್) ರವರು ನೀಡಿದ ದೂರಿನ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ
ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 126/2018, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ
ಕಾಯ್ದೆ :-
ದಿನಾಂಕ 23-10-2018 ರಂದು ಫಿರ್ಯಾದಿ ಎಂ.ಡಿ.ಸೊಹೇಲ ತಂದೆ ಎಂ.ಡಿ.ಇಬ್ರಾಹಿಂ ವಯ: 18
ವರ್ಷ, ಜಾತಿ: ಮುಸ್ಲಿಂ, ಸಾ: ಚಿದ್ರಿ,
ಬೀದರ ರವರು ಕಮಠಾಣಾ ಗ್ರಾಮಕ್ಕೆ ಖಾಸಗಿ ಕೆಲಸ ಕುರಿತು ಹೋಗಿ
ಕೆಲಸ ಮುಗಿಸಿಕೊಡು ಮರಳಿ ಚಿದ್ರಿಗೆ ತನ್ನ ಮೋಟಾರ ಸೈಕಲ ನಂ. ಕೆಎ-38/ಎಲ್-4780
ನೇದರ
ಮೇಲೆ ಕಮಠಾಣಾ ಬೀದರ ರೋಡ ಮುಖಾಂತರ ಬರುತ್ತಿರುವಾಗ ಚಿದ್ರಿ ಇದ್ಗಾ ಏರಫೋರ್ಸ ಗೇಟ ಹತ್ತಿರ ಬಂದಾಗ
ಎದುರಿನಿಂದ ಅಂದರೆ ಬೀದರ ಚಿದ್ರಿ ರಿಂಗರೋಡ ಕಡೆಯಿಂದ ಆಟೋ ನಂ. ಕೆಎ-38/7615
ನೇದರ
ಚಾಲಕನಾದ ಆರೋಪಿಯು ತನ್ನ ಅಟೋವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ
ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಆಟೋ ಪಲ್ಟಿ ಮಾಡಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ,
ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಹಣೆಗೆ ರಕ್ತಗಾಯ, ಬಲಭುಜಕ್ಕೆ,
ಮೂಗಿಗೆ
ತರಚಿದ ರಕ್ತಗಾಯವಾಗಿರುತ್ತದೆ, ಸದರಿ ಆಟೋದಲ್ಲಿ ಕುಳಿತ್ತಿದ್ದ ವಾಸಿಂಬೇಗಂ ಗಂಡ ಯುಸೇಫ ಬೇಗ ವಯ:
45 ವರ್ಷ,
ಸಾ: ಶಮಶೀರನಗರ ಬೀದರ ಇವರ ಎಡಭೂಜಕ್ಕೆ ಭಾರಿ ಗುಪ್ತಗಾಯ ಮತ್ತು ಎದೆಗೆ
ಗುಪ್ತಗಾಯವಾಗಿರುತ್ತದೆ ಹಾಗೂ ಆಟೋದಲ್ಲಿದ್ದ ಇನ್ನೊಬ್ಬ ಮಹಿಳೆ ನಸರತ ಬೇಗಂ ತಂದೆ ಯುಸೇಫ್ ಬೇಗ
ವಯ: 18 ವರ್ಷ, ಸಾ: ಶಮಶಿರನಗರ ಬೀದರ ರವರ ಹಣೆಗೆ
ರಕ್ತಗಾಯ ಮತ್ತು ಎಡಭುಜಕ್ಕೆ ಗುಪ್ತಗಾಯವಾಗಿರುತ್ತದೆ, ಆಗ ಅಲ್ಲಿಂದಲೆ ಹೋಗುತ್ತಿದ್ದ ಅಫ್ರೋಜ
ತಂದೆ ಮಹ್ಮದಸಾಬ ಮತ್ತು ರಿಯಾಸತ ಅಲಿ ತಂದೆ ಸೌಕತ ಅಲಿ ಇಬ್ಬರೂ ಫಿರ್ಯಾದಿಗೆ ಒಂದು ಖಾಸಗಿ
ವಾಹನದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ
ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ
ಪೊಲೀಸ್ ಠಾಣೆ ಅಪರಾಧ ಸಂ. 127/2018, ಕಲಂ. 379 ಐಪಿಸಿ :-
ದಿನಾಂಕ 23-10-2018
ರಂದು
ಫಿರ್ಯಾದಿ ಜ್ಞಾನದೇವ ಸಿಪಿಸಿ-1162 ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಅರ್ಜಿ
ಹಾಜರು ಪಡಿಸಿದರ ಸಾರಾಂಶವೆನೆಂದರೆ ದಿನಾಂಕ 19-10-2018 ರಂದು ದಸರಾ ಹಬ್ಬದ
ಪ್ರಯುಕ್ತ ನನಗೆ ರೆಕುಳಗಿ ಮೌಂಟದಲ್ಲಿರುವ ಭೌದ್ದ ಮಂದಿರಕ್ಕೆ ಬಂದೊಬಸ್ತ ಕರ್ತವ್ಯಕ್ಕೆ ನೇಮಕ
ಮಾಡಿದ್ದು ಅದರಂತೆ ನಾನು ಬಂದೊಬಸ್ತ ಕರ್ತವ್ಯಕ್ಕೆ ದ್ವಿಚಕ್ರ ವಾಹನ ಸಂ. ಕೆಎ-38/ಎಸ-3403
ನೇದ್ದನ್ನು
ತೆಗೆದುಕೊಂಡು ಹೊಗಿ ಬೌದ್ದ ಮಂದಿರದ ಆವರಣದಲ್ಲಿ ನಿಲ್ಲಿಸಿ ನಾನು ಬಂದೊಬಸ್ತ ಕರ್ತವ್ಯದಲ್ಲಿ
ನಿರತನಾಗಿದ್ದು ಅಂದಾಜು ಸಮಯಕ್ಕೆ 1800 ಗಂಟೆಯ ಸುಮಾರಿಗೆ ನನ್ನ
ಕರ್ತವ್ಯ ಮುಗಿದ ಮೇಲೆ ನಾನು ತೆಗೆದುಕೊಂಡು ಹೊದ ಮೋಟಾರ ಸೈಕಲ ನಿಲ್ಲಿಸಿದ ಜಾಗಕ್ಕೆ ಬಂದು ನೋಡಲು
ನಾನು ನಿಲ್ಲಿಸಿದ ಜಾಗೆಯಲ್ಲಿ ಸದರಿ ಮೋಟಾರ ಸೈಕಿಲ ಕಾಣಲಿಲ್ಲಾ ಮೌಂಟ ಸುತ್ತ ಮುತ್ತಲು
ಹುಡುಕಾಲಾಗಿ ನಾನು ತೆಗದುಕೊಂಡ ಹೊದ ಮೋಟಾರ ಸೈಕಲ ಪತ್ತೆಯಾಗಲಿಲ್ಲಾ, ನಮ್ಮ ಅಣ್ಣ ತೆಗೆದುಕೊಂಡ
ಹೊಗಿರಬಹುದೆಂದು ಅವನಿಗೆ ವಿಚಾರಿಸಲು ಅವನು ನಾನು ತೆಗೆದುಕೊಂಡು ಹೊಗಿರುವುದಿಲ್ಲಾ ಅಂತಾ
ತಿಳಿಸಿದನು, ದಿನಾಂಕ 19-10-2018 ರಂದು 1000 ಗಂಟೆಯಿಂದ 1800
ಗಂಟೆಯ
ಅವಧಿಯಲ್ಲಿ ಹಿರೊ ಎಂ ಪ್ಯಾಶನ ಪ್ರೂ ಸಂ. ಕೆಎ-38/ಎಸ-3403
ಅ.ಕಿ
45,000/- ನೇದ್ದನ್ನು
ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕುಶನೂರ
ಪೊಲೀಸ್ ಠಾಣೆ ಅಪರಾಧ ಸಂ. 164/2018, ಕಲಂ. 498(ಎ), 323, 504 ಜೊತೆ 149 ಐಪಿಸಿ :-
ಫಿರ್ಯಾದಿ
ವರ್ಷಾ
ಗಂಡ ಚಂದ್ರಕಾಂತ ವಯ: 20 ವರ್ಷ, ಜಾತಿ: ಪರೀಟ, ಸಾ: ಹಿಪ್ಪಳಗಾಂವ ರವರ ತಂದೆ-ತಾಯಿಯವರು ಫಿರ್ಯಾದಿಯ ಮದುವೆಯನ್ನು ದಿನಾಂಕ 28-04-2017 ರಂದು ಹೈದ್ರಬಾದದನಲ್ಲಿರುವ ಚಂದ್ರಕಾಂತ ತಂದೆ ಗೋವಿಂದ ಶಿಂದೆ ರವರ ಜೊತೆ ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದಲ್ಲಿ ತಮ್ಮ ಸೋದರತ್ತೆಯಾದ ಶಾಂತಾಬಾಯಿ ಗಂಡ ರಮೇಶ ಇವರ ಮನೆಯಲ್ಲಿ ತಮ್ಮ ಜಾತಿಯ ಸಂಪ್ರದಾಯದ ಪ್ರಕಾರ ಆಗಿರುತ್ತದೆ, ಸದರಿ ಮದುವೆಯಲ್ಲಿ 1,05,000/- ರೂ. ವರದಕ್ಷಿಣೆ ಹಾಗು 1 ತೊಲೆ ಬಂಗಾರ ಜೋತೆಗೆ ಗ್ರಹ ಉಪಯೋಗಿ ವಸ್ತುಗಳನ್ನು ನೀಡಿ ಮದುವೆ ಮಾಡಿರುತ್ತಾರೆ, ಮದುವೆಯಾದ ನಂತರ ಸುಮಾರು 6 ತಿಂಗಳು ಫಿರ್ಯಾದಿಗೆ ಗಂಡ ಹಾಗು ಅತ್ತೆಯಾದ ಮಿರಾಬಾಯಿ ಹಾಗು ಇತರೆ ಸದಸ್ಯರು ಸರಿಯಾಗಿ ನೋಡಿಕೊಂಡಿರುತ್ತಾರೆ, ನಂತರ ಬರಬರುತ್ತಾ ಗಂಡ ಫಿರ್ಯಾದಿಯ ಮೇಲೆ ಸಂಶಯ ಪಡುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ನಿನ್ನ ತವರು ಮನೆಯಿಂದ ಇನ್ನು ವರದಕ್ಷಿಣೆ ಹಾಗು ಒಂದು ಮೋಟಾರ ಸೈಕಲ್ ತೆಗೆದುಕೊಂಡು ಬಾ ಎಂದು ಫಿರ್ಯಾದಿಯ ಕೂದಲು ಹಿಡಿದು ಎಳೆದಾಡಿ ಗೋಡೆಗೆ ತಲೆಯನ್ನು ಬಡಿದಿರುತ್ತಾರೆ, ಜೊತೆಗೆ ಹೊಟ್ಟೆಗೆ ನೆಗೆಣಿಯಾದ ಜ್ಯೋತಿ ಹಾಗು ಮೈದುನ ಉಮಾಕಾಂತ ಇವರು ಕೂಡ ಯಾವಾಗಲೂ ಹೊಡೆಯುತ್ತಾರೆ, ಅದೇ ರೀತಿ ನಾದಣಿಯಾದ ಪ್ರೀತಿ ಗಂಡ ಗೋವಿಂದ ಇವಳು ಕೂಡ ಹೊಡೆಯಲು ಹೇಳುತ್ತಾಳೆ, ಅತ್ತೆ ದಿನಾಲು ನಿನಗೆ ಸರಿಯಾಗಿ ಮನೆ ಕೆಲಸ ಮಾಡಲು ಬರೋಲ್ಲ, ನೀನು ನನ್ನ ಸೊಸೆ ಇಲ್ಲ, ನಿನ್ನ ಮದುವೆ ಬಗ್ಗೆ ಯಾವುದೇ ಸಾಕ್ಷಿ ಇಲ್ಲವೆಂದು ಬೈದು ಯಾವಾಗಲೂ ಮಾನಸಿಕ ಹಿಂಸೆ ನೀಡಿರುತ್ತಾರೆ, ಕಳೆದ 6 ತಿಂಗಳ ಹಿಂದೆ ದಿನಾಂಕ 12-04-2018 ರಂದು ಫಿರ್ಯಾಧಿಯು ಗರ್ಭಿಣಿಯಾಗಿದ್ದಾಗ ಗಂಡ ರಾತ್ರಿ ಫಿರ್ಯಾದಿಗೆ ಹೊಡೆದು ನೂಕಿದ್ದರಿಂದ ಫಿರ್ಯಾದಿಯು ಹೊಟ್ಟೆ ನೋವಿನಿಂದ ಬಳಲಿದ್ದರಿಂದ ಫಿರ್ಯಾದಿಗೆ
ಹೈದ್ರಬಾದನ ಗಾಂಧಿ
ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ಫಿರ್ಯಾದಿಯು ಗಂಡು ಮಗುವಿಗೆ ಜನ್ಮ ನೀಡಿದರೂ ದುರದೃಷ್ಟದಿಂದ ಮಗು ಬದುಕಿ ಉಳಿಯಲಿಲ್ಲ, ನಂತರ ಫಿಯಾದಿಗೆ ಮನೆಯಿಂದ ಹೊರ ಹಾಕಿರುತ್ತಾರೆ, ಅಂದಿನಿಂದ ಫೀರ್ಯಾದಿಯು ನನ್ನ ತವರು ಮನೆಯಲ್ಲಿ ವಾಸವಾಗಿದ್ದು, ಈ ರೀತಿ ಆರೋಪಿತರಾದ ಫಿರ್ಯಾದಿಯ ಗಂಡ, ಅತ್ತೆ, ನಾದನಿ, ಮೈದುನ ಫಿರ್ಯಾದಿಗೆ ಹಿಂಸೆ ನೀಡುತ್ತಿದ್ದಾರೆ ಅಂತ ಫಿರ್ಯಾದಿಯ ತಂದೆ ತಾಯಿಯವರು ಗ್ರಾಮದ ಕೆಲ ಪಂಚರನ್ನು ಕರೆದುಕೊಂಡು ಹೋಗಿ ಸದರಿ ಆರೋಪಿತರು ಫಿರ್ಯಾದಿಗೆ ಮನೆಯಲ್ಲಿ ಬರಗೂಡಲಿಲ್ಲ ಹಾಗು ನೀನು ನನ್ನ ಸೊಸೆ ಇಲ್ಲ ಎಂದು ನಿರಾಕರಿಸಿರುತ್ತಾರೆ ಮತ್ತು ಆಕೆ ನನ್ನ ಮನೆಯಲ್ಲಿ ಬರಬಾರದು ನಾನು ಜೈಲಿಗೆ ಹೋದರು ಸರಿ ನಿನಗೆ ಬರುಗೋಡುವುದಿಲ್ಲ ಅಂತ ಹೇಳಿದಾಗ ಫಿರ್ಯಾದಿಯು ಪೊಲೀಸ ಠಾಣೆಗೆ ಹೋದಾಗ ಪೊಲೀಸರು ಅವರಿಗೆ ಬೆದರಿಸಿದಾಗ ಅವರಿಗೆ ಸಮಜಾಯಿಷಿ ರಾಜಿ ಮಾಡಿಸಿ ವಾಪಸ್ಸು ಕಳುಹಿಸಿರುತ್ತಾರೆ, ನಾನು ಇನ್ನೊಂದು ವಾರದಲ್ಲಿ ಕರೆಯಲು ಬರುತ್ತೇನೆ ಅಲ್ಲಿಯವರೆಗೆ ನೀನು ನಿನ್ನ ತವರು ಮನೆಯಲ್ಲಿ ಇರು ಎಂದು ಹೇಳಿರುತ್ತಾರೆ, ಅದಕ್ಕೆ ಒಪ್ಪಿ ಮರಳಿ ಮನೆಗೆ ಬಂದಿದ್ದು, ಸುಮಾರು 15 ದಿವಸಗಳ ನಂತರ ದಿನಾಂಕ 09-09-2018 ರಂದು ಫಿರ್ಯಾದಿಯ ಮನೆಗೆ ಗಂಡ ಚಂದ್ರಕಾಂತ ತಂದೆ ಗೋವಿಂದ, ಅತ್ತೆಯಾದ ಮೀರಾಬಾಯಿ ಗಂಡ ಗೋವಿಂದ, ಮೈದುನನಾದ ಉಮಾಕಾಂತ ತಂದೆ ಗೋವಿಂದ, ನೆಗೆಣಿಯಾದ ಜ್ಯೋತಿ ಗಂಡ ಉಮಾಕಾಂತ, ನಾದಿನಿಯಾದ ಪ್ರೀತಿ ಗಂಡ ವಿಠಲ ಹಾಗು ನನ್ನ ಸೋದರತ್ತೆಯಾದ ಶಾಂತಬಾಯಿ ಗಂಡ ರಮೇಶ ಇವರೆಲ್ಲರೂ ಬಂದು ಫಿರ್ಯಾದಿಯ ತಂದೆ ತಾಯಿ ಹಾಗು ಫಿರ್ಯಾದಿಗೆ ವಿನಾಃ ಕಾರಣ ಬೈದು ನಿಮ್ಮ ಮಗಳ ನಡತೆ ಸರಿಯಾಗಿಲ್ಲ, ಆಕೆಗೆ ಮನೆ ಕೆಲಸ ಬರುವುದಿಲ್ಲ, ಆಕೆಗೆ ನಾವು ಕರೆದುಕೊಂಡು ಹೋಗುವುದಿಲ್ಲ ಅಂತ ಸರಾಸಗಟಾಗಿ ಹೇಳಿರುತ್ತಾರೆ, ಇದಕ್ಕೆ ಸೋದರತ್ತೆಯಾದ ಶಾಂತಾಬಾಯಿ ಇವರೇ ಕಾರಣ ಆಕೆ ಫಿರ್ಯಾದಿಯ ಮದುವೆಯಾದ ನಂತರ ಫಿರ್ಯಾದಿಯ ಸಂಸಾರ ಸರಿಯಾಗಿ ನಡೆಯಬಾರದೆಂದು ಹೊಟ್ಟೆ ಕಿಚ್ಚಿನಿಂದ ಗಂಡ, ಅತ್ತೆ, ಮೈದುನ ಮತ್ತು ನೆಗೆಣಿಗೆ ಇಲ್ಲಸಲ್ಲದ ಆರೋಪ ಮಾಡುವಂತೆ ಹೇಳಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ
ಸಾರಾಂಶದ ಮೇರೆಗೆ ದಿನಾಂಕ ದಿನಾಂಕ 23-10-2018 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 166/2018, ಕಲಂ. 363 ಐಪಿಸಿ :-
ದಿನಾಂಕ 19-10-2018 ರಂದು ಫಿರ್ಯಾದಿಯು ತನ್ನ ಹೆಂಡತಿಯೊಂದಿಗೆ ಹೊಲಕ್ಕೆ ಹೊಗಿದ್ದು, ಮಗಳು ಮನೆಯಲ್ಲಿದ್ದಳು, ನಂತರ ಫಿರ್ಯಾದಿಯು ಸಾಯಂಕಾಲ ಹೊಲದಿಂದ ಮನೆಗೆ ಬಂದಾಗ ಮನೆಯಲ್ಲಿ ಮಗಳು ಇರಲಿಲ್ಲ, ಅವಳು ಗೆಳತಿಯರ ಮನೆಗೆ ಹೊಗಿರಬಹುದುದೆಂದು ತಿಳಿದು ಸುಮ್ಮನಾಗಿದ್ದು, ಬಹಳ ಹೋತ್ತಾದರು ಅವಳು ಮನೆಗೆ ಬರಲಾರದ ಕಾರಣ ಫಿರ್ಯಾದಿಯು ತಮ್ಮ ಓಣಿಯಲ್ಲಿ ಮತ್ತು ಗ್ರಾಮದಲ್ಲಿ ಹೊಡುಕಾಡಿದರೂ ಸಹ ಮಗಳು ಪತ್ತೆಯಾಗಿಲ್ಲ, ನಂತರ ಮಗಳು ಬಂಧು ಬಳಗದವರ ಮನೆಗೆ ಹೊಗಿರಬಹುದೆಂದು ಎಲ್ಲಾ ಸಂಭದಿಕರಿಗೂ ಕರೆ ಮಾಡಿ ವಿಚಾರಿಸಲು ಮಗಳು ಇರುವಿಕೆಯ ಬಗ್ಗೆ ಸುಳಿವು ಸಿಕ್ಕಿರುವದಿಲ್ಲ, ನಂತರ ಗ್ರಾಮದ ಒಬ್ಬನಿಂದ ತಿಳಿದು ಬಂದಿದ್ದೆನೆಂದರೆ ದಿನಾಂಕ 19-10-2018 ರಂದು 1900 ಗಂಟೆಯ ಸೂಮಾರಿಗೆ ತಮ್ಮೂರ ಶಾಲೆಯ ಹತ್ತಿರದಿಂದ ಆರೋಪಿ ಪರಮೇಶ್ವರ ತಂದೆ ನಾಗನಾಥ ಬಾವುಗೆ ಇವನು ತನ್ನ ಮೋಟರ ಸೈಕಲ ನಂ. ಕೆಎ-38/3491 ನೇದರ ಮೇಲೆ ಕೂಡಿಸಿಕೋಂಡು ಅವಳನ್ನು ಅಪಹರಿಸಿಕೊಂಡು ಹೋಗಿರುತ್ತಾನೆಂದು ತಿಳಿದು ಬಂದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 23-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment