ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ಮಹಮ್ಮದ ಅಜಗರ ಅಹೇಮದ @ ಬಸೀರ ಅಹೇಮದ ಅದೋನಿ ಸಾ;
ಖಾರಿ ಬೌಡಿ ಮೋಮಿನಪೂರ ಕಲಬುರಗಿ ರವರ ಮಗಳು ಹಾಜರಾ ಇರಾಂ ಇವಳಿಗೆ ದಿನಾಂಕ.15-12-2016ನೇ ಸಾಲೀನಲ್ಲಿ ಮಿಜಬಾನಗರ
ಹೀರಾಪೂರನ ಸೈಯದ ನಿಸಾರ ಅಹೇಮದ ಇವರ ಮಗನಾಧ ಸೈಯದ
ಆಸೀಫ ಇತನೊಂದಿಗೆ ಮದುವೆ ಮಾಡಿದ್ದು ಒಬ್ಬ ಗಂಡು
ಮಗ ಸೈಯದ ಮಹಮ್ಮದ ಜೈನ ವಯ;1 ವರ್ಷದವನಿರುತ್ತಾನೆ.ಮದುವೆ ಸಮಯದಲ್ಲಿ ಬಟ್ಟೆ ಬರೀ,ಶೂಟ ಬೂಟ ಇವಗಳಿಗಾಗಿ 1 ಲಕ್ಷ ರೂಪಾಯಿ ನೀಡಿದ್ದು , 11 ತೊಲೆ
ಬಂಗಾರ, ಒಂದು ಹೀರೋ ಹೊಂಡಾ ಫ್ಯಾಶನ ಮೋಟಾರ ಸೈಕಲ್ ಹಾಗೂ ಫರ್ನಿಚರ ಹಾಗೂ ಹಾಂಡೆ ಬಾಂಡೆ ಇತರ
ಸಾಮಾನುಗಳನ್ನು ವರೋಪಚಾರದಲ್ಲಿ ಕೋಟ್ಟು ಮುಸ್ಲಿಂ ಸಂಪ್ರಾಯದಂತೆ ಮಹಾರಾಜ ಫಕ್ಸನ ನಿಯರ ಬೇಬಿರೋಜ
ಕಾಲೇಜಹತ್ತಿರ ಕಲಬುರಗಿಯಲ್ಲಿ ಮದುವೆ ಮಾಡಿಕೊಟ್ಟಿದ್ದುಇರುತ್ತದೆ.ಮದುವೆಯಾಗಿ 2
ವರ್ಷಗಳಾಗಿದ್ದು. ಹಾಜರಾ ಇರಾಂ ಇವಳ ಮದುವೆಯಾದ 6 ತಿಂಗಳು
ಅವಳ ಗಂಡ ಅತ್ತೆ ಮಾವ , ಮೈದುನ ಎಲ್ಲರೂ
ಚನ್ನಾಗಿ ಇಟ್ಟುಕೊಂಡಿದ್ದು ತದನಂತರ ಮನೆಯಲ್ಲಿ ಕೆಲಸ ಸರಿಯಾಗಿ ಮಾಡುವದಿಲ್ಲಾ ಅಡುಗೆ
ಮಾಡುವದಕ್ಕೆ ಬರುವದಿಲ್ಲಾ ಅಂತಾ ಸಣ್ಣ ಪುಟ್ಟ ಕಾರಣಗಳಿಂದ ಅವಳ ಗಂಡ ಸೈಯದ ಆಸೀಫ, ಅತ್ತೆ ಖಾಜಮೀ
ಬೇಗಂ, ಮೈದುನ ಸೈಯದ ಕಲೀಮ ಅಹೇಮದ ಇವರೆಲ್ಲರೂ
ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮಾನಸಿಕ ಹಾಗೂ ದೈಹಿಕವಾಗಿ ಕಿರಕುಳ ಕೋಡುತ್ತಾ ಬಂದಿದ್ದು
ಈ ವಿಷಯ ಆಗಾಗ ನಮ್ಮ ಮನೆಗೆ ಬಂದಾಗ ಈ ಎಲ್ಲಾ ವಿಷಯ ಹೇಳುತಿದ್ದಳು ಆಗ ನಾನು ಮತ್ತು ನನ್ನ ಹೆಂಡತಿ ಶಹನಾಜ ಬೇಗಂ ಇಬ್ಬರು ಕೂಡಿಕೊಂಡು ಅವರ ಮನೆಗೆ ಹೋಗಿ
ನನ್ನ ಮಗಳು ಇನ್ನೂ ಚಿಕ್ಕವಳಿದ್ದಾಳೆ ಕೆಲಸ ಮಾಡುತ್ತಾಳೆ ಸ್ವಲ್ಪ ಸಂಬಳಸಿಕೊಳ್ಳಿರಿ ಅಂತಾ ಅವಳ ಅತ್ತೆ , ಮಾವ , ಗಂಡನಿಗೆ ನಾವು ಅವರಿಗೆ
ಕೈಜೋಡಿಸಿ ತಿಳಿ ಹೇಳಿ ಬಂದಿರುತ್ತೇವೆ.
ಕಳೆದ 6 ತಿಂಗಳ ಹಿಂದೆ ನನ್ನ ಎರಡನೆ ಮಗ
ನವೀದ ಇತನು ನನ್ನ ಮಗಳು ಹಾಜರಾ ಇರಂ
ಇವಳ ಮನೆಗೆ ಹೋದಾಗ ಅವಳ ಗಂಡ ಸೈಯದ ಆಸೀಪ್ ಇತನು ಕಪಡಾಬಜಾರದಲ್ಲಿರುವ ನಮ್ಮ ಅಂಗಡಿಯನ್ನು ಬೆರೆಯವರಿಗೆ ಏಕೆ ಬಾಡಿಗೆ ಕೊಟ್ಟಿದ್ದರಿಂದ ನಾನು ಆಜಾಗೆಯಲ್ಲಿ
ಮೆಡಿಕಲ್ ಹಾಕುತ್ತೇನೆ ನನಗೆ ಕೋಡಬೇಕು ಮತ್ತು
ಹಾಗರಗಾ ಕ್ರಾಸ ಹತ್ತಿರ ಇರುವ ಪ್ಲಾಟಗಳಲ್ಲಿ
ನಾವು ಹೈನುಗಾರಿಕೆ ಮಾಡುತ್ತೇವೆ ಪ್ಲಾಟಗಳನ್ನು ವರದಕ್ಷಿಣೆ ರೂಪದಲ್ಲಿ ಕೊಡಬೇಕು ಎಂದು ತಕರಾರು ಮಾಡಿ ಹೇಳಿದ ಬಗ್ಗೆ ನನ್ನ ಮಗ ಬಂದು ಹೇಳಿದನು ನಂತರ ನಾವು
ಸುಮ್ಮನಾಗಿದ್ದು ನಂತರ ಕೆಲವು ದಿವಸಗಳ ನಂತರ
ಹಾಜರಾ ಇರಂ ಇವಳಿಗೆ ಅವಳ ಗಂಡ ಸೈಯದ ಆಸೀಪ್ ಮತ್ತು ಅತ್ತೆ ಖಾಜಬೀಬೇಗಂ, ಮೈದುನ ಸೈಯದ ಕಲೀಮ ,ಹಾಗೂ ಮಾವ ಸೈಯದ
ನಿಸಾರ ಅಹೇಮದ , ನಾದನಿ ಕನಿಜ ಬೇಗಂ ಎಲ್ಲರೂ ಕೂಡಿಕೊಂಡು “ರಾಂಡ ತುಮರಾ ಬಾಪ ಅಮೀರ ಹೈ ಮಾರ್ಕೆಟ ಮೇ
ದುಖಾನ ಹೈ ಮೆಡಿಕಲ್ ದಾಲನೆವಾಸ್ತೆ ಹಮಾರಕೂ ದಿಲಾದೇವ ಔರ ಹಾಗರಗಾ ಕ್ರಾಸ ಪಾಸ ರಹೇಸೋ ಪ್ಲಾಟಮೇ ಡೈರಿ ಚಲಾನೆಕೆ ವಾಸ್ತೆ ಪ್ಲಾಟ ದೇನಿಕೆಲಿಯ ದುಮಾರಿ ಮಾ ಬಾಪಸೇ ದಿಲಾದೇನಾ
ನಹಿತೋ ಬಚ್ಚೆಕು ಲೇ ಕೆ ತುಮಾರಿ ಮಾ ಬಾಪಕಾ ಗರಕೂ ಜಾನಾ
“ ಅಂತಾ ಕಿರಕುಳ ಕೊಡುವದು ಮತ್ತು ಹೊಡೆಬಡಿ ಮಾಡಿ ದೈಹಿಕ ಕಿರಕುಳ ಕೋಡುತ್ತಾ ಜೀವ
ಬೆದರಿಕೆ ಹಾಕುತ್ತಿದ್ದಾರೆ ಅಂತಾ ಒಂದು ವಾರದ ಹಿಂದೆ ನನ್ನ ಮಗಳು ನಮ್ಮ ಮನಗೆ ಬಂದಾಗ
ತಿಳಿಸಿರುತ್ತಾರೆ. ನಂತರ ನಾವು ನಿಮ್ಮ ಅತ್ತೆ ಮಾವ ಗಂಡನಿಗೆ ತಿಳಿ ಹೇಳುತ್ತೇವೆ ಅಂತಾ ಹೇಳಿ
ಕಳುಹಿಸಿರುತ್ತೆವೆ. ಹೀಗಿದ್ದು ದಿನಾಂಕ.
9-10-2018 ರಾತ್ರಿ 10-55 ಪಿ.ಎಂ.ಕ್ಕೆ. ನನ್ನ ಮಗ
ವಸೀಮ ಇತನಿಗೆ ನನ್ನ ಅಳಿಯ ಮಹಮ್ಮದ ವಸೀಂ
ಇತನು ಫೋನ ಮಾಡಿ ಅವನಿಗೆ ಮತ್ತು ನನ್ನ ಹಿರಿಯ ಮಗ
ಜಾವೆದ ಅಕ್ತರ ಇಬ್ಬರಿಗೆ ಮನಗೆ ಬಂದು ಹೋಗಿ ಅಂತಾ ಹೇಳಿದನು ಆಗ ಅವರು ಏನಾಗಿದೆ ಅಂತಾ
ಕೇಳಿದ ಸರಿಯಾಗಿ ಹೇಳಲಿಲ್ಲಾ ನಂತರ ನಾನು ಮತ್ತು ನನ್ನ ಹೆಂಡತಿ ಶಹನಾಜ ಬೇಗಂ , ಮಕ್ಕಳಾದ ಜಾವೇದ
ಅಕ್ತರ , ನವೀದ ಅಹೇಮದ ವಸೀಂ ಅಕ್ತರ, ಮಹಮ್ಮದ
ಮುದಸಿರ ನಗರ ಹಾಗೂ ನಮ್ಮ ಸಮ್ಮಂದಿ ಮಹಮ್ಮದ ಸಾಬೀರ ತಂದೆ ಮಹಮ್ಮದ
ಇಸ್ಮಾಯಿಲ್ , ಅಳಿಯ ಶಬ್ಬಿರ ಅಲಿ ಎಲ್ಲರೂ ಕೂಡಿಕೊಂಡು ಮಿಜಬಾನಗರದಲ್ಲಿರುವ
ನನ್ನ ಮಗಳ ಮನೆಗೆ 11-30 ಪಿ.ಎಂ.ಕ್ಕೆ ಹೋಗಿ ನೋಡಲಾಗಿ
ಅವಳ ಬೆಡ್ಡರೂಮಿನಲ್ಲಿ ಛತ್ತಿಗೆ
ಸೀರೆಯಿಂದ ನೇಣು ಹಾಕಿಕೊಂಡು
ನೇತಾಡುತ್ತಿದ್ದು ಮೃತ ಪಟ್ಟಿದ್ದಳು. ನಂತರ ಗೊತ್ತಾಗಿದ್ದು ಏನೆಂದರೆ ನನ್ನ ಮಗಳು ಹಾಜರ ಇರಂ ಇವಳ ಗಂಡ ಸೈಯದ ಆಸೀಫ್ , ಅತ್ತೆ ಖಾಜಮಿ ಬೇಗಂ, ಮಾವ ನಿಸಾರ ಅಹೇಮದ , ಮೈದುನ ಸೈಯದ ಕಲೀಮ ಅಹೇಮದ , ನಾದನಿ
ಕನಿಜಬೇಗಂ ಇವರೆಲ್ಲರೂ ಕೂಡಿಕೊಂಡು ನಮ್ಮ ಮಗಳು
ಹಾಜರಾ ಇರಂ ಇವಳಿಗೆ ವರದಕ್ಷಿಣೆ ರೂಪದಲ್ಲಿ ಮಾರ್ಕೆಟನಲ್ಲಿರುವ
ದುಕಾನ ಕೊಡಬೇಕು ಮತ್ತು ಹಾಗರಗಾ ಕ್ರಾಸ ಹತ್ತಿರ ಇರುವ ಪ್ಲಾಟಗಳನ್ನು ಅವರ ಹೆಸರಿಗೆ
ಮಾಡಿಸಿಕೊಡದಿದ್ದಕ್ಕೆ ನನ್ನ ಮಗಳಿಗೆ ಮಾನಸಿಕ
ಹಾಗೂ ದೈಹಿಕವಾಗಿ ಕಿರಕುಳ ಕೊಟ್ಟು ಹೊಡೆದು ಕೊಲೆ
ಮಾಡಿ ನೇಣು ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ವಿದ್ಯುತ್ ತಂತಿ ತಗುಲಿ ಅಪಘಾತ
ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ರಾಮಣ್ಣ ತಂದೆ ಬಸಣ್ಣ ಅಂದೇವಾಡಿ ಸಾ|| ಹೋಸೂರ ತಾ|| ಅಫಜಲಪೂರ ರವರು ದಿನಾಂಕ 25-08-2018 ರಂದು ನಾನು ಮತ್ತು ಮಲ್ಲಿನಾಥ ಕುಂಬಾರ , ನಾಗಪ್ಪ ತಂದೆ ಗಂಗಪ್ಪ, ಮಲ್ಲಪ್ಪ ತಂದೆ ಸಾತಪ್ಪ ಎಲ್ಲರೂ ಮಣೂರ ಸಬ್ ಸ್ಟೇಷನದಲ್ಲಿ ಕೆಲಸ ಮಾಡುತ್ತಿದ್ದಾಗ ಮದ್ಯಾಹ್ನ 12 ಗಂಟೆ ಸುಮಾರಿಗೆ ನಮ್ಮ ಮೇಲಾಧಿಖಾರಿಗಳಾದ ಅಮೃತರಾವ ಸಿ&ಎಮ್ ಎಇಇ ಕಲಬುರಗಿ ರವರು ನಮ್ಮ ಹತ್ತಿರ ಬಂದು ಕೆಪೆಸೀಟರ್ ಬ್ಯಾಂಕ- 1 ರಿಪೇರಿ ಮಾಡಿದ್ದಿರಾ ಎಂದು ವಿಚಾರಿಸಿದರು. ಆಗ ನಾವು ರಿಪೇರಿ ಮಾಡಿರುವುದಿಲ್ಲ ಎಂದು ತಿಳಿಸಿದಾಗ ಬೇಗ ರಿಪೇರಿ ಮಾಡಿ ಅಂತಾ ತಿಳಿಸಿದ್ದರಿಂದ ನಾವು ಕೆಪೇಸಿಟರ್ ಬ್ಯಾಂಕ-1 ರಲ್ಲಿ ರಿಪೇರಿ ಮಾಡುತ್ತಿದ್ದಾಗ 1:20 ಪಿ ಎಮ್ ಕ್ಕೆ ಕ್ಯಾಪೇಸಿಟರ್ ಬ್ಯಾಂಕ 1 ರ ಮಗ್ಗಲಲ್ಲಿದ್ದ ಎಫ್-2 ಐಪಿ ಫೀಡರ್ ದ ವಿದ್ಯೂತ ಬಸ್ ವಾಯರ್ ನನ್ನ ಕೈಗೆ ತಾಗಿ ಕರೆಂಟ ಶಾಟ್ ಹೊಡೆದು ಕೆಳಗೆ ಬಿದ್ದಿರುತ್ತೇನೆ. ನಂತರ ನನ್ನನ್ನು ಸೋಲ್ಲಾಪೂರದ ಯಶೋದರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ. ಮಾನ್ಯ ಅಮೃತರಾವ ಸಿ& ಎಮ್ ಎಇಇ ರವರು ಜೆಸ್ಕಾಂ ಕಲಬುರಗಿ ರವರು ನಮಗೆ ಕ್ಯಾಪೇಸಿಟರ್ ಬ್ಯಾಂಕ-1 ರ ರಿಪೇರಿ ಮಾಡುವುದಕ್ಕಿಂತ ಮುಂಚೆ ಸದರ ಸುತ್ತ ಮುತ್ತಲಿದ್ದ ವಿದ್ಯೂತ್ ನ್ನು ಬಂದ ಮಾಡಿ ರಿಪೇರಿ ಕೆಲಸಕ್ಕೆ ಹಚ್ಚಿದ್ದರೆ ನನಗೆ ಕರೆಂಟ್ ಶಾಟ್ ಹೊಡೆಯುತ್ತಿರಲಿಲ್ಲ. ನನಗೆ ಕರೆಂಟ್ ಶಾಟ್ ಹೊಡೆಯಲು ಅಮೃತರಾವ ಸಿ& ಎಮ್ ಎಇಇ ಜೆಸ್ಕಾಂ ಕಲಬುರಗಿ ರವರ ನಿರ್ಲಕ್ಷತೆ ಇರುತ್ತದೆ. ಆದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment