Police Bhavan Kalaburagi

Police Bhavan Kalaburagi

Wednesday, October 31, 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 29-10-2018 ರಂದು ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ. ಹಾಗೂ ಮಟಕಾದಲ್ಲಿ ಗೆದ್ದ ಜನರಿಗೆ ಯಾವುದೆ ಹಣ ಕೊಡದೆ ಮೋಸ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಲ್ಲಿಕಾರ್ಜುನ ಚೌಕದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಮಲ್ಲಿಕಾರ್ಜುನ ಚೌಕದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಹಾಗೂ ಮಟಕಾದಲ್ಲಿ ಹಣ ಗೆದ್ದಂತ ಜನರು ಸದರಿ ವ್ಯಕ್ತಿಗೆ ಹಣ ಕೇಳುತ್ತಿದ್ದರು, ಆಗ ಸದರಿ ವ್ಯಕ್ತಿ ಯಾವ ಹಣ ನೀನು ಬರೆಸಿದ ನಂಬರ ಬಂದಿಲ್ಲ ಎಂದು ಜನರಿಗೆ ಗೆದ್ದಂತ ಹಣ ಕೊಡದೆ ಮೋಸ ಮಾಡುತ್ತಿದ್ದನು. ಆಗ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಇಮಾಮ ತಂದೆ ಅಮೀನಸಾಬ ಶೇಖ್ ಸಾ|| ವಿಕೆಜಿ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2450/-  ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಹಾಗೂ ಕಾರ್ಬನ್ ಕೆ9 ಮೊಬೈಲ ಪೋನ್ ಅಕಿ-100/- ರೂ ದೊರೆತವು  ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಾಗಿಸಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಅಣವೀರ ತಂದೆ ಪ್ರಕಾಶ ಹರಸೂರ ಸಾ:ಚಿಂಚನಸೂರ ತಾ:ಆಳಂದ ಹಾ:ವ:ಮಲ್ಲಿಕಾರ್ಜುನ ಅರಳಗುಂಡಗಿರವರ ಮನೆಯಲ್ಲಿ ಬಾಡಿಗೆ ವಾಸ ಕೈಲಾಸ ನಗರ ಕಲಬುರಗಿರವರು ದಿನಾಂಕ:29/10/2018 ರಂದು 10.30 ಪಿ.ಎಂ ಸುಮಾರಿಗೆ ನಾನು ಹಾಗೂ ನನ್ನ ತಾಯಿ ಶ್ರೀಮತಿ ರಾಜೇಶ್ವರಿ ಇಬ್ಬರೂ ಕೂಡಿಕೊಂಡು ಸಂಜನಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವ ನಮ್ಮ ಅಕ್ಕಳಾದ ಪ್ರಿಯಾಂಕಾ ಇವರಿಗೆ ಊಟ ತೆಗೆದುಕೊಂಡು ಮನೆಗೆ ಕೀಲಿ ಹಾಕಿಕೊಂಡು ಹೋಗಿದ್ದು ದಿನಾಂಕ:30/10/2018 ರಂದು 7.30 ಎ.ಎಂಗೆ ಮರಳಿ ಮನೆಗೆ ಬಂದು ನೋಡಲಾಗಿ ಬಾಗಿಲ ಕೀಲಿ ಮುರಿದಿದ್ದು ಅಲಮಾರಿಯಲ್ಲಿ ಇಟ್ಟಿದ್ದ ಬಂಗಾರದ ಆಭರಣ ಮತ್ತು  ನಗದು ಹಣ ಹೀಗೆ ಒಟ್ಟು 1,80,000/-ರೂ ಕಿಮ್ಮತ್ತಿನ ಬಂಗಾರ ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿ ಗರ್ಭಿಣಿಯಾಗಿಸಿದ ಪ್ರಕರಣ :
ಯಡ್ರಾಮಿ ಠಾಣೆ : ಕುಮಾರಿ ರವರ ತಂದೆ ತಾಯಿಯವರು ಎಲ್ಲಿ ಕೆಸಲ ಸಿಗುತ್ತದೆಯೋ ಆ ಊರಿಗೆ ಹೋಗಿ ಕೆಲಸ ಮಾಡುತ್ತಾರೆ. ದಿ: 19-10-18 ರಂದು ನಾನು ನನ್ನ ತಾಯಿ ತಂದೆಯೊಂದಿಗೆ ಕೆಲಸಕ್ಕಾಗಿ ಕರಡಕ್ಕೆ ಹೋರಟಾಗ ನನಗೆ ರಸ್ತೆಯ ಮಧ್ಯ ವಾಂತಿಯಾಗತೊಡಗಿತ್ತು. ನಾವು ಕರಾಡ ಮುಟ್ಟಿದಾಗ ನಮ್ಮ ತಂದೆ ತಾಯಿಯವರು ಪೆಟ್ರೊಲ ಪಂಪ ಹತ್ತಿರವಿದ್ದ ವೈಧ್ಯರ ಶ್ರೀ ಜಾಧವ ಇವರ ಹತ್ತಿರ ಕರೆದುಕೊಂಡು ಹೋಗಿ ವಾಂತಿ ಆಗುತ್ತಿರುವ ಬಗ್ಗೆ ತಿಳಿಸಿದೇವು. ಅವರು ನನಗೆ ತಪಾಸಣೆ ಮಾಡಿ ಡಾ: ಜಾಧವ ರವರು ಅವರು ನಮಗೆ ವಾಂತಿ ಬಗ್ಗೆ ಔಷಧಿ ಕೊಟ್ಟರು ಕಾರಣ ನಾವು ಝಂಡಾ ಚೌಕ ಕರಾಡ ಎಂಬಲ್ಲಿ ಮುಕ್ಕಾಮ ಮಾಡಿದೇವು. ಆದರೆ ನನಗೆ ವಾಂತಿಯ ಬಗ್ಗೆ ತ್ರಾಸ ನಿಲ್ಲಲಿಲ್ಲ. ಪುನ ಎರಡನೆ ದಿನ ದಿ: 20-10-18 ರಂದು ಡಾ: ಜಾಧವ ಇವರ ಹತ್ತಿರ ಉಪಚಾರ ಕುರಿತು ನನ್ನ ತಂದೆ ತಾಯಿ ಕರೆದುಕೊಂಡು ಹೋದರು. ವೈಧ್ಯರು ನನ್ನ ಮೂತ್ರ ತಪಾಸಣೆ ಮಾಡಿಸುವ ಕುರಿತು ದತ್ತಾ ಲ್ಯಾಬರೇಟರಿ ಎಂಬಲ್ಲಿಗೆ ಕಳುಹಿಸಿದರು ದತ್ತಾ ಲ್ಯಾಬರೇಟರಿಯಲ್ಲಿ ನನ್ನ ಮೂತ್ರ ತಪಾಸಣೆ ಮಾಡಿ ವರದಿ ಕೊಟ್ಟರು . ಅದನ್ನು ನಾವು ಡಾ: ಜಾಧವ ಇವರಿಗೆ ತೋರಿಸಿದೇವು. ಅವರು ನಾನು ಗರ್ಭಿಣಿಯಾದ ಬಗ್ಗೆ ನನ್ನ ತಂದೆ ತಾಯಿಗೆ ಮಾಹಿತಿ ನೀಡಿದರು. ಮತ್ತು ಮುಂದಿನ ಉಪಚಾರ ಕುರಿತು ಕೃಷ್ಣಾ ಆಸ್ಪತ್ರೆ ಕರಾಡ ಎಂಬಲ್ಲಿಗೆ ಹೋಗಲು ಸೂಚಿಸಿದರು. ಇಂದು ದಿ: 23-10-18 ರಂದು ಬೆಳಿಗ್ಗೆ ಕೃಷ್ಣಾ ಆಸ್ಪತ್ರೆ ಮಲ್ಕಾಪೂರ ಕರಾಡ ಎಂಬಲ್ಲಿಗೆ ನನ್ನ ತಂದೆ ತಾಯಿ ಕರೆದುಕೊಂಡು ಬಂದರು. ಅಲ್ಲಿಯ ವೈಧ್ಯರು ನನ್ನ ವರದಿ ನೋಡಿ ಕೃಷ್ಣಾ ಆಸ್ಪತ್ರೆಯವರು ಉಪಚಾರ ಕುರಿತು ಪ್ರಸೂತಿ ವಾರ್ಡ ನಂ:12 ರಲ್ಲಿ ದಾಖಲೆ ಮಾಡಿದರು. ನಾನು ಎರಡು ತಿಂಗಳು ಗರ್ಭಿಣಿ ಎಂದು ತಿಳಿಸಿದರು. ಆ ಬಗ್ಗೆ ನಾನು ಹೇಳುವುದೆನೇಂದರೆ, ನಾನು ವಾಸವಾಗಿರುವ ಅರಳಗುಂಡಗಿ ಗ್ರಾಮದಲ್ಲಿ ನಮ್ಮ ನೆರೆಯ ಮನೆಯ ಸುನೀಲ ತಂ ಮರಳಪ್ಪ ಕಡಿ ಈತನು ವಾಸವಾಗಿರುವನು. ಆತನು ನನಗೆ ಪರಿಚಯದವನಿದ್ದ ಕಾರಣ ಸುಮಾರು 2 ವರ್ಷಗಳಿಂದ ಒಂದಿಲ್ಲ ಒಂದು ಕಾರಣದಿಂದ ನನ್ನ ಸಮೀಪಕ್ಕೆ ಬರತೊಡಗಿದನು. ಮತ್ತು ನನ್ನ ಶರಿರಕ್ಕೆ ತನ್ನ ಅಂಗಗಳನ್ನು ಹಚ್ಚತೊಡಗಿದನು. ನನ್ನ ಶರೀರಕ್ಕೆ ಆತನು ಆಗಾಗ ಬೇಡವಾದ ಅಂಗಗಳಿಗೆ ಸ್ಪರ್ಶ ಮಾಡುತ್ತಿದ್ದನು. ಸಪ್ಟೇಂಬರ 2018 ಎರಡನೆ ವಾರದಲ್ಲಿ ( ನಿಖರವಾದ ದಿನಾಂಕ ಸಮಯ ಗೊತ್ತಿಲ್ಲ ) ನಾನು ನಮ್ಮ ಮನೆಯಲ್ಲಿ ಒಬ್ಬಳೆ ಇದ್ದಾಗ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸುನೀಲ ಮರಳಪ್ಪ ಕಡಿ ಇತನು ನನ್ನ ಮನೆಗೆ ಬಂದು ಬಾಗೀಲನ್ನು ಒಳಗಿನಿಂದ ಕೊಂಡಿ ಹಾಕಿಕೊಂಡು ನಂತರ ಆತನು ನನಗೆ ಹಿಂದಿನಿಂದ ಬಂದು ಹಿಡಿದುಕೊಂಡು ನನಗೆ ಬಲಪೂರ್ವಕ ಮುತ್ತುಕೊಟ್ಟನು. ನಾನು ಅದಕ್ಕೆ ವಿರೋಧ ಮಾಡಿದೇನು ಆದರೆ ಆತನು ನನ್ನ ಸಹಮತ ಇಲ್ಲದೆ ಬಲಪೂರ್ವಕ ನನ್ನೊಂದಿಗೆ ಶರೀರ ಸಂಬಂಧ ಬೆಳಿಸಿದನು. ನಂತರ ಆತನು ನನಗೆ ನೀನು ಯಾರಿಗೂ ಹೇಳಬೇಡ ಇಲ್ಲವಾದರೆ ನಿನ್ನ ಹೆಸರನ್ನು ಗ್ರಾಮಸ್ಥರಲ್ಲಿ ಸಮ್ಮುಖದಲ್ಲಿ ಅಪವಾದ ಮಾಡುತ್ತೇನೆ ಎಂದು ಬೆದರಿಕೆ ಹಾಕಿದನು ಆದ್ದರಿಂದ ನಾನು ನನ್ನ ಮರಿಯಾದಿಗೆ ಅಂಜಿ ಯಾರಿಗೂ ಹೇಳಲಿಲ್ಲ. ತದ ನಂತರ ಎರಡನೆ ಮತ್ತು ಮೂರನೆ ದಿವಸವು ಕೂಡಾ ನಾನು ಮನೆಯಲ್ಲಿ ಒಂಟಿಯಾಗಿದ್ದಾಗ ಆತನು ಇದೆ ಪದ್ದತ್ತಿಯಲ್ಲಿ ನನ್ನ ಜೋತೆಗೆ ಶರೀರ ಸಂಬಂದ ಬೆಳಿಸಿದನು. ಆದರೆ ನಾನು ಅಂಜಿಕೆಯಿಂದಾಗಿ ಯಾರಿಗೂ ಏನು ಹೆಳಲಿಲ್ಲ. ಸಪ್ಟೇಂಬರ 2018 ರ ಎರಡನೆ ವಾರದಲ್ಲಿ ( ನಿಖರ ದಿನಾಂಕ ಸಮಯ ನೆನಪಿಲ್ಲ ) ಮತ್ತು ಅನುಕ್ರಮವಾಗಿ ಮುಂದಿನ ಎರಡನೆ ಮತ್ತು ಮೂರನೆ ದಿವಸವು ಕೂಡಾ ಮಧ್ಯಾಹ್ನ ಸುಮಾರ 1 ಗಂಟೆಗೆ ಅರಳಗುಂಡಗಿ ಗ್ರಾಮ ತಾ:ಜೇವರಗಿ ಜಿ: ಕಲಬುರಗಿ ಕರ್ನಾಟಕ ಎಂಬಲ್ಲಿ ನಮ್ಮ ಮನೆಯಲ್ಲಿ ನಾನು ಒಬ್ಬಂಟಿಯಾಗಿದ್ದಾಗ ಆತನು ನನ್ನ ಮನೆಗೆ ಬಂದು ಒಳಗಿನಿಂದ ಬಾಗಿಲ ಕೊಂಡಿ ಹಾಕಿಕೊಂಡು ನನಗೆ ಹಿಂದಿನಿಂದ ಹಿಡಿದುಕೊಂಡು ನನಗೆ ಮುತ್ತುಕೊಡುತ್ತಾ ಬಲಪೂರ್ವಕವಾಗಿ ನಾನು ವಿರೋಧ ವ್ಯಕ್ತಪಡಿಸಿದರು ಕೂಡಾ ನನ್ನ ಸಮ್ಮತಿ ಇಲ್ಲದೆ ಆತನು ಮೇಲಿಂದ ಮೇಲೆ ನನ್ನ ಜೋತೆಗೆ ಶರೀರ ಸಂಬಂಧ ಬೆಳಿಸಿದನು. ಮತ್ತು ನನಗೆ 8 ವಾರಗಳ ಗರ್ಭೀಣಿಯಾಗುವದಕ್ಕೆ ಆತನೇ ಕಾರಣ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: